ಸರಗೂರು: ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ , ಕ್ರೀಡಾಪಟುಗಳು ಸೋತರೂ ಗೆದ್ದರೂ ಒಂದೇ ಮನಸ್ಥಿತಿಯನ್ನು ಹೊಂದಿರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡಾಪಟುಗಳು ಮನೋರಂಜನೆಗಾಗಿ ಆಡಬೇಕು. ಕ್ರೀಡೆಗಳ ಮೂಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢ ರಾಗಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ದಂದು ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಅರ್ಜುನ ವಾಲಿಬಾಲ್ ಪ್ರೀಮಿಯರ್ ಲೀಗ್ ಸಮಾರೋಪ ಸಮಾರಂಭ ಪಂದ್ಯಾವಳಿಯಲ್ಲಿ ಮಾತನಾಡಿದರು.
ಪಂದ್ಯಾಟದಲ್ಲಿ ಯಾವುದಾದರೂ ಒಂದು ತಂಡ ಗೆಲ್ಲಲೇ ಬೇಕು.ಇನ್ನೊಂದು ತಂಡ ಸೋಲಬೇಕು. ಇಂದಿನ ಪಂದ್ಯಾವಳಿ ಅತ್ಯಂತ ಶಿಸ್ತಿನಿಂದ ನಡೆದಿದೆ ಎಂದು ಅಭಿನಂದಿಸಿದರು.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ತಲೆಮಾರಿನಿಂದ ವಾಲಿಬಾಲ್ ಆಟಗಾರರು ಇದ್ದಾರೆ. ಸರಗೂರಿನಲ್ಲಿ ವಾಲಿಬಾಲ್ ಪ್ರಸಿದ್ಧವಾದ ಆಟ. ಜಾತ್ರಾ ಹಾಗೂ ಜಯಂತಿ ಆಚರಣೆ ಮಾಡುವ ಸಮಯದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಪಂದ್ಯಾವಳಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ದಿನಗಳಲ್ಲಿ ಯುವಕರು ಕ್ಲಬ್ ಮಾಡಿ ಉತ್ತಮ ಸಾಮಾಜಿಕ ಕೆಲಸ ಮಾಡಿಕೊಂಡು ಬರುತ್ತಿದೆ. ತಾಲೂಕಿನಲ್ಲಿ ಪ್ರತಿಯೊಂದು ಜನಾಂಗದವರು ಸೀಮಿತವಾಗಿ ಹಲವು ಪಂದ್ಯಾ ವಳಿ ನಡೆಯುತ್ತದೆ. ಆದರೆ ಎಲ್ಲ ಸಮುದಾಯದಗಳ ಒಂದೆ ವೇದಿಕೆ ಯಲ್ಲಿ ತರುವ ಪ್ರಯತ್ನವಾಗಿ ಈ ಪಂದ್ಯಾವಳಿ ಹೆಚ್ಚಿನ ಮಹತ್ವ ಪಡೆದಿದೆ. ಯುವಕರು ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾರೂ ಒಗ್ಗಾಟಾಗಿ ಕಾರ‌್ಯನಿರ್ವಹಿಸಬೇಕೆಂದು ಹೇಳಿದರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಸೋಗಹಳ್ಳಿ ಡ್ರೀಮ್ ಮೇಕರ್ಸ್ ಟ್ರೋಫಿ ಮತ್ತು ಬಹುಮಾನ ಪಡೆದುಕೊಂಡರು.ಎರಡನೇ ಸ್ಥಾನವನ್ನು ಪಡೆದ ಮಗ್ಗೆ ಅನೀಲ್ ಚಿಕ್ಕಮಾದು ಬಳಗ ಟ್ರೋಫಿ ಮತ್ತು ಬಹುಮಾನ ಪಡೆದಿದ್ದರು. ಮೂರನೇ ಸ್ಥಾನ ಕಬಿನಿ.ನಾಲ್ಕನೇ ತುಂಬಸೋಗೆ ಧ್ರುವ ಬಳಗ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಶ್ರೀನಿವಾಸ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಎಸಿಎಫ್ ಮಧು ದೇವಯ್ಯ,ಕಳಸೂರು ಬಸವರಾಜು,ದೈಹಿಕ ಶಿಕ್ಷಣ ನಿರ್ದೇಶಕ ಎಸ್ ಜೆ ಪುಟ್ಟರಾಜು,ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಮಹೇಶ್ ಎನ್ ಬೇಗೂರು, ಗೌರವಾಧ್ಯಕ್ಷ ಸೋಮೇಶ್ ಕಳಸೂರು, ಉಪಾಧ್ಯಕ್ಷರು ಅನೀಲ್ ಕುಮಾರ್, ಕಾರ್ಯದರ್ಶಿ ರತ್ನಯ್ಯ ಮಗ್ಗೆ, ಖಜಾಂಚಿ ಅಪ್ಪು ಜಕ್ಕಹಳ್ಳಿ, ಲಿಂಗೇನಹಳ್ಳಿ ವಿಷಕಂಠ, ಶಿವಕುಮಾರ್, ಪರಶಿವ, ಬಸವರಾಜು, ನವೀನ್, ಭಾಸ್ಕರ್, ಜ್ಯೋತೀಶ್, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


