ತಿಪಟೂರು: ಶಿಕ್ಷಕವೃತ್ತಿಯನ್ನು ಪಡೆಯಲು ನೂರಾರು ಜನ್ಮದ ಪುಣ್ಯಬೇಕು, ಅಂತಹ ಶಿಕ್ಷಣ ವೃತ್ತಿ ದೊರೆತಿರುವ ನೀವು ಆತ್ಮಸಾಕ್ಷಿಯಿಂದ ದೃಢನಿಶ್ಚಯದಿಂದ ದೇಶವನ್ನು ಕಟ್ಟಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕರೆನೀಡಿದರು.
ನಗರದ ಜೆ.ಬಿ.ಜೆ.ಸಿ. ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ ಮತ್ತು ಅಕ್ಷರಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಶಿಕ್ಷಣ ಎನ್ನುವುದು ವ್ಯಾಪಾರಿ ಸರಕಾಗಿರುವುದು ವಿಪರ್ಯಾಸವಾಗಿದೆ ಎಂದರು.
ನಮ್ಮ ಸರ್ಕಾರಿ ಶಾಲೆಗಳಲ್ಲಿ ಉತ್ತಮವಾದ ವಿದ್ಯಾರ್ಹತೆಯನ್ನು ಹೊಂದಿರುವ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಆದರೆ, ಸ್ವಲ್ಪ ಕೀಳಿರಿಯೆಯಲ್ಲಿರುವಂತೆ ಕಾಣುತ್ತಿದೆ. ಇದನ್ನು ಹೋಗಲಾಡಿಸಲು ನಮ್ಮ ಮಕ್ಕಳನ್ನು ಸಹ ತಮ್ಮ ಶಾಲೆಯಲ್ಲಿ ಓದಿಸಿ ಜನರ ಮತ್ತು ಊರಿನ ಗುರುವಾಗಬೇಕು ಎಂದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz