ಇತ್ತೀಚೆಗೆ ಸಮಾಜಮುಖಿಯಾಗಿರುವ ಚಿತ್ರಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ನಿರ್ದೇಶಕ ಶಿವಕುಮಾರ ಬಿ. ಜೇವರಗಿ ಅವರು ಹೊಸ ಪ್ರಯೋಗವೊಂದಕ್ಕೆ ಕೈಹಾಕಿದ್ದು, ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಿ, ನಟಿಸಿದ್ದು, ಈ ಚಿತ್ರ ನಾಳೆ ತೆರೆಗೆ ಅಪ್ಪಳಿಸಲಿದೆ.
ಕೌಟುಂಬಿಕ ಚಿತ್ರ “ಅತ್ಯುತ್ತಮ” ಮೇ 13ರಂದು ಬಿಡುಗಡೆಯಾಗಲಿದೆ. ಬಿ.ಎಂಎಸ್ ಸಿನಿ ಕ್ರಯೇಷನ್ಸ್ ಅರ್ಪಿಸುವ ಈ ಚಿತ್ರವು ಭಾರತೀಯ ಕೌಟುಂಬಿಕ ಸಂಬಂಧಗಳಲ್ಲಿ ಪರಿವರ್ತನೆ ತರುವಂತಹ ಚಿತ್ರವಾಗಿದೆ. ಇಂತಹವೊಂದು ಚಿತ್ರವನ್ನು ಸುನಿತಾ ಎಸ್.ಜೇವರಗಿ ಅವರು ನಿರ್ಮಾಣ ಮಾಡಿದ್ದು, ಶಿವಕುಮಾರ ಬಿ. ಜೇವರಗಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡಿದ್ದಾರೆ. ನೃತ್ಯ ಮತ್ತು ಸಹ ನಿರ್ದೇಶನವನ್ನು ಎಂ.ಆರ್.ಕಪಿಲ್ ಮಾಡಿದ್ದಾರೆ. ಈ ಚಿತ್ರಕ್ಕೆ ಪುಷ್ಪಲತಾ ಕುಡ್ಲುರು, ವೀಣಾ ಶ್ರೀನಿವಾಸ್ ಸಹ ನಿರ್ಮಾಪಕರಾಗಿದ್ದಾರೆ.
ದಿನೇಶ್ ಕುಮಾರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿ.ನಾರಾಯಣ್ ಛಾಯಾಗ್ರಹಣ ನೀಡಿದ್ದಾರೆ. ಆರ್ ದೊರೈರಾಜ್ ಸಂಕಲ ಮಾಡಿದ್ದಾರೆ. ಎಸ್.ಚಂದ್ರಶೇಖರ್ ಸೌಂಡ್ಸ್ ಎಫೆಕ್ಟ್ ನೀಡಿದ್ದಾರೆ. ನಿರ್ಮಾಣ ಮೇಲ್ವಿಚಾರಣೆಯಲ್ಲಿ ರಮೇಶ್ ಅವರು ನಿಭಾಯಿಸಿದರು. ಪಿಆರ್ ಒ: ಲಿಂಗರಾಜು-ಬಾಬು, ಅನಂತು, ಮೋಹನ್ ಮೊದಲಾದವರು ಈ ಚಿತ್ರತಂಡದಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಖ್ಯಾತ ಕಲಾವಿದರಾದ ಜೈ ಜಗದೀಶ್, ಸುಚೇಂದ್ರ ಪ್ರಸಾದ್, ಎಂ.ಎಸ್.ಉಮೇಶ್ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕುಟುಂಬ ಸಹಿತವಾಗಿ ನೋಡಬಹುದಾದ ಚಿತ್ರ ಇದಾಗಿದ್ದು, ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಪಡೆದುಕೊಂಡಿದೆ. ಒಂದು ಅತ್ಯುತ್ತಮ ಸುಂದರ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಟಿಕೆಟ್ ನ್ನು ಈ ಕೆಳಗೆ ನೀಡಿರುವ ಲಿಂಕ್ ಗೆ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದಾಗಿದೆ.
ಕ್ಲಿಕ್ ಮಾಡಿ: https://in.bookmyshow.com/nelamangala/movies/athyuttama/ET00327543
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5