ಕೊರಟಗೆರೆ: ಕೊರಟಗೆರೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 76 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 1,700 ಮೀ ಉದ್ದದ ತ್ರಿವರ್ಣ ಧ್ವಜವನ್ನು ಸರ್ಕಾರಿ ಬಸ್ ನಿಲ್ದಾಣದಿಂದ, ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೆ ಆಯೋಜಕರು, ಮತ್ತು ಪಟ್ಟಣದ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ವಂದೇ ಮಾತರಂ ಎಂಬ ಘೋಷಣೆಯೊಂದಿಗೆ ಮೆರವಣಿಗೆ ಸಾಗಿ ದೇಶಾಭಿಮಾನ ಮೆರೆದರು.
ಆಯೋಜಕರು ಬಾಲಾಜಿ ದರ್ಶನ್ ಮೆರವಣಿಗೆಯ ವೇಳೆ ಮಾತನಾಡಿ, 76ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೊರಟಗೆರೆ ಇತಿಹಾಸದಲ್ಲೇ ಪ್ರಪ್ರಥಮವಾಗಿ 1700ಮೀ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆಯ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ರಾಷ್ಟ್ರ ಧ್ವಜ ಹಿಡಿದು ಸಾಗುವುದರಿಂದ ಇನ್ನಷ್ಟೂ ಹೆಚ್ಚಿನ ದೇಶಾಭಿಮಾನ ಸಾರ್ವಜನಿಕರಲ್ಲಿ ಬೆಳೆಯಲಿ ಎಂಬ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಬಾಲಾಜಿ ಟೆಕ್ಸ್ ಟೈಲ್ಸ್ ನಿಂದ ಆಯೋಜನೆ ಮಾಡಲಾಗಿದೆ ಎಂದರು.
ವಾಸವಿ ಯುವಜನ ಸಂಘದ ನಿರ್ದೇಶಕ ಬದ್ರಿಪ್ರಸಾದ್ ಮಾತನಾಡಿ, 1,700 ಮೀ ಉದ್ದದ ತ್ರಿವರ್ಣಧ್ವಜ ಮೆರವಣಿಗೆ ನಮ್ಮ ಪಟ್ಟಣದಲ್ಲಿ ಒಂದು ಹಬ್ಬದ ರೀತಿಯಲ್ಲಿ ಕಾಣುತ್ತಿದೆ. 1,000 ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ 1ಕಿ.ಮೀ. ವರೆಗೆ ತ್ರಿವರ್ಣ ಧ್ವಜ ಹಿಡಿದು ಬರುತ್ತಿರುವುದನ್ನು ಕಾಣಲು ನಾವುಗಳು ಭಾಗ್ಯವಂತರು ಎಂದು ಹೆಮ್ಮೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಕಾಳಿದಾಸ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಸಿ.ಡಿ.ಪ್ರಭಾಕರ್ ವಹಿಸಿಕೊಂಡಿದ್ದರು. ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಆಯೋಜಕರಾದ ಬಾಲಾಜಿ ಟೆಕ್ಸ್ ಟೈಲ್ಸ್ ಕುಟುಂಬ ವರ್ಗ, ಕಾಳಿದಾಸ ಫ್ರೌಢಶಾಲೆ, ರವೀಂದ್ರ ಭಾರತಿ ಶಾಲೆ, ಬಾಲಕಿಯರ ಪ್ರೌಢಶಾಲೆ, ಪ್ರಿಯದರ್ಶಿನಿ ಪಿಯು ಕಾಲೇಜಿನ ಶಿಕ್ಷಕರು,ವಿದ್ಯಾರ್ಥಿಗಳು,ವಾಸವಿ ಯುವಜನ ಸಂಘದ ಪಧಾದಿಕಾರಿಗಳು ಈ ಮೆರವಣಿಗೆಯಲ್ಲಿ ಭಾಗಿಯಾಗಿ ನಾಗರೀಕರಲ್ಲಿ ದೇಶದ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ನರಸಿಂಹಮೂರ್ತಿ, ಬಿಇಒ ಸುಧಾಕರ್, ಸಬ್ ಇನ್ಸ್ಪೆಕ್ಟರ್ ನಾಗರಾಜು, ಕಂದಾಯ ಇಲಾಖೆಯ ಸಿಬ್ಬಂದಿಗಳು, ಆರ್ಯವೈಶ್ಯ ಜನಾಂಗದ ಮುಖಂಡರು, ಸಿ.ಡಿ.ಪ್ರಭಾಕರ್,ಮಹಿಳೆಯರು ಶಾಲಾ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz