nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025
    Facebook Twitter Instagram
    ಟ್ರೆಂಡಿಂಗ್
    • ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.
    • ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!
    • ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು
    • ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
    • ಜುಲೈ 1:  ರಾಷ್ಟ್ರೀಯ ಪತ್ರಿಕಾ ದಿನ: ಪತ್ರಿಕಾ ದಿನಾಚರಣೆಯ ಶುಭಾಶಯಗಳು
    • ಮನೆ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ!
    • ಬಿಗ್ ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ನಿರೂಪಣೆ ಫಿಕ್ಸ್!
    • ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಂಚ ಕಲ್ಯಾಣೋತ್ಸವದ ಸಂಭ್ರಮದಲ್ಲಿ ಅತಿಶಯ ಕ್ಷೇತ್ರ ಜೈನರ ಗುತ್ತಿ
    ತುಮಕೂರು November 21, 2024

    ಪಂಚ ಕಲ್ಯಾಣೋತ್ಸವದ ಸಂಭ್ರಮದಲ್ಲಿ ಅತಿಶಯ ಕ್ಷೇತ್ರ ಜೈನರ ಗುತ್ತಿ

    By adminNovember 21, 2024No Comments5 Mins Read
    jainara gutti

    ಪುರಾತನ ಜೈನ ಧಾರ್ಮಿಕ ಕ್ಷೇತ್ರ ಅನೇಕ ರಾಜರುಗಳು, ಪಾಳೆಗಾರರು ಆಳ್ವಿಕೆ ಬೀಡು ಹಲವು ಜಿನ ಬಿಂಬಗಳನ್ನು ತನ್ನ ಒಡಲುನಲ್ಲಿಇಟ್ಟುಕೊಂಡ ಪುರಾತನ ಕ್ಷೇತ್ರ ” ಜೈನರ ಗುತ್ತಿ” .ಇದು ಅಡಗೂರಿಗೆ ಸಮೀಪದಲ್ಲಿರುವುದರಿಂದ ಇದನ್ನು ಅಡಗೂರು ಜೈನರ ಗುತ್ತಿ ಎಂದು ಸಹ ಕರೆಯುತ್ತಾರೆ.

    ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಗೆ ಸೇರಿದ ಪುರಾತನ ಜೈನ ಕ್ಷೇತ್ರ ಜೈನರ ಗುತ್ತಿಗೆ ಈಗ ಪಂಚಕಲ್ಯಾಣಗಳ ಸಡಗರ ಸಂಭ್ರಮ.
    ಇಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರ ಹಾಗೂ ಮಾತೆ ಪದ್ಮಾವತಿ ಇದ್ದು ಇತ್ತೀಚಿಗೆ ಸುಮಾರು 54 ಅಡಿಗಳ ಎತ್ತರದ ಮುನಿಸೂರತ ತೀರ್ಥಂಕರ ಮೂರ್ತಿ ಹಾಗೂ 9 ಅಡಿಗಳ ಶೀತಲನಾಥ ತೀರ್ಥಂಕರ ಪದ್ಮಾಸನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
    ಜೈನರ ಗುತ್ತಿಯ ಶ್ರೀ ಪಾರ್ಶ್ವನಾಥ ಬಸದಿಯ ಸಂಕೀರ್ಣವಾಗಿದ್ದು, ಗರ್ಭಗುಡಿ ಮಾತ್ರ ಇದ್ದು ಪೂರ್ವಭಿಮುಖವಾಗಿದೆ. ಪ್ರದಕ್ಷಿಣ ಪಥವಿದ್ದು ಬಸದಿಯ ಎರಡು ಬದಿ ಗಳ ಮೇಲ್ಭಾಗದಲ್ಲಿ 24 ಕೂಟಗಳನ್ನು ರಚಿಸಿ ಪದ್ಮಾಸನ ಮೂರ್ತಿಯ 24 ತೀರ್ಥಂಕರರ ಬಿಂಬಗಳಿವೆ.


    Provided by

    ಗರ್ಭಗುಡಿಯ ಶ್ರೀ ಪಾರ್ಶ್ವನಾಥ ತೀರ್ಥಂಕರ ಸ್ತಂಭಾಸನ ಬಂಗಿಯಲ್ಲಿದ್ದು 3 ಅಡಿಗಳ ಎತ್ತರವಿದೆ. ಶ್ರೀ ಪಾರ್ಶ್ವನಾಥ ಮೂರ್ತಿ ಮಲ್ಲಪುರ ಬಳಿಯ ಜಮೀನಿನಲ್ಲಿ ದೊರೆತಿದ್ದು, ಈ ಗುತ್ತಿ ಮುಂದೆ ಜೈನರ ಗುತ್ತಿಯಾಗಿದೆ. ಬಸದಿಯ ಮುಂದೆ 10 ಅಡಿಗಳ ಎತ್ತರದ ಮಾನಸ್ತಂಭವಿದೆ.

    ಬಸದಿಯ ಬಲಭಾಗದಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಬಿಂಬವಿದ್ದು, ಎಡಗಡೆ ಮಾತೆ ಪದ್ಮಾವತಿ ಮೂರ್ತಿ ಇದೆ. ಬಸದಿ ಎದುರು 54 ಅಡಿಗಳ ಎತ್ತರದ ಪ್ರತಿಮೆ ನಿಲ್ಲಿಸಲಾಗಿದೆ ಇದು ಭಾರತದಲ್ಲಿ ಪ್ರಥಮ ಎಂಬು ವಂತೆ 23 ಅಡಿಗಳ ಎತ್ತರದ ಆಮೆ ಅದರ ಮೇಲೆ ಕಮಲಪೀಠ ಸಹಿತ 31 ಅಡಿಗಳ ಬೃಹತ್ ಮೂರ್ತಿಯಾಗಿದ್ದು ಒಟ್ಟು 54 ಅಡಿಗಳ ಎತ್ತರವಿದೆ.

    ಇಲ್ಲಿ ಹಿಂದೆ ಜೀವದಯಾಷ್ಟನೆ ದಿವಸ ಪೂಜೆ ನಡೆಯುತ್ತಿತ್ತು, ದೇವಿಹಳ್ಳಿ , ಅಡಗೂರು ಇನ್ನಿತರ ಭಾಗಗಳಿಂದ ಶ್ರಾವಕರು ಆಗಮಿಸುತ್ತಿದ್ದರು.
    ಶ್ರೀ ಕ್ಷೇತ್ರ ಪುರಾತನ ಕಾಲದಿಂದಲೂ ಜೈನ ಧಾರ್ಮಿಕ ಕ್ಷೇತ್ರವಾಗಿತ್ತು ಅನೇಕ ರಾಜರು, ಪಾಳೆಗಾರರು ಆಳ್ವಿಕೆಗೆ ಒಳಪಟ್ಟಿದ್ದು ಇಲ್ಲಿ ಹಲವಾರು ಜಿನಬಿಂಬಗಳು ದೊರೆತಿದ್ದು ಇದು ಪುರಾತನ ಕ್ಷೇತ್ರ ಎಂಬುದಕ್ಕೆ ಸಾಕ್ಷಿಯಾಗಿವೆ ,ಈ ಸಂಬಂಧ ಕ್ರಿಸ್ತ.ಶಕ 1838 ರ ದೇವ ಚಂದ್ರನ ರಾಜಾವಳಿ ಕಥಾಸಾರದಿಂದ ತಿಳಿಯಬಹುದು.

     

    ಒಮ್ಮೆ ವೀರ ಬಲ್ಲಾಳರಾಯ ದ್ವಾರಸಮುದ್ರ ವನ್ನು ರಾಜಧಾನಿಯಾಗಿ ಮಾಡಿಕೊಂಡು ಪರಾಕ್ರಮದಿಂದ ರಾಜ್ಯವಾಳುತ್ತಿದ್ದ ,ಇವನ ಶೌರ್ಯಕ್ಕೆ ಮೆಚ್ಚಿದ ದೆಹಲಿಯ ಬಾದುಷಹ ದೊರೆಯು ಈತನನ್ನ ಸ್ವಾಗತಿಸಲು ದೂತರ ಮೂಲಕ ಸಂದೇಶ ಕಳಿಸಿದ ಇದನ್ನು ವೀರ ಬಲ್ಲಾಳರಾಯ ತಿರಸ್ಕರಿಸಿದರಿಂದ ಕೋಪಗೊಂಡ ಬಾದಶಾಹಿಯು ವೀರ ಬಲ್ಲಾಳನನ್ನು ಶಿರಶ್ಚೇಧನ ಮಾಡಿ ಶೂಲಕ್ಕೇರಿಸುವಂತೆ ಆಜ್ಞಾಪಿಸಿದ ಆದರೆ ಬಾದಶಾಹಿಯ ಮಂತ್ರಿಗಳು ವೀರ ಬಲ್ಲಾಳ ರಾಯಣ್ಣ ನನ್ನ ಕೊಲ್ಲಲು ಮನಸ್ಸಿಲ್ಲದೆ ರಾಜನಲ್ಲಿ ಬೇಡ ಎಂದು ವಿನಂತಿಸಿದರು. ಬಾದಶಾಹಿಯು ಮಗಳಾದ ವರನಂದಿಯ ವಿನಂತಿಯ ಮೇರೆಗೆ ವೀರ ಬಲ್ಲಾಳ ರಾಯನ ಹಸ್ತದ ಬೆರಳನ್ನು ಕತ್ತರಿಸಲು ಆಜ್ಞೆಯಿತ್ತನು.

    ದ್ರಾವಿಡ ದೇಶದ ವೈಷ್ಣವ ಬ್ರಾಹ್ಮಣನ ಮಗ ರಾಮಾನುಜಾಚಾರ್ಯ ಎಂಬುವರು ಪುರಾಣ ಸೇರಿದಂತೆ ವಿವಿಧ ವಿಷಯಗಳ ಪರಿಣಿತರಾಗಿದ್ದರು. ವೀರ ವೈಷ್ಣವದ ಅನೇಕ ಗ್ರಂಥಗಳನ್ನು ರಚಿಸಿ ಒಮ್ಮೆ ಸ್ಯಾದ್ವದ ವಾದಿಗಳು, ವಾದದಲ್ಲಿ ರಾಮಾನುಜಾಚಾರ್ಯರನ್ನು ಸೋಲಿಸಿದರು. ಇದರಿಂದ ನೊಂದ ರಾಮಾನುಜಾಚಾರ್ಯರು ಬೇಸರದಿಂದ ಇರುವುದನ್ನ ಗಮನಿಸಿದ ಪುತ್ರಿಯ ರಾದ ಭಂಗಾರೆ ಮತ್ತು ಸಿಂಗಾರೆ ತಂದೆಯನ್ನು ಸಂತೈಸಿ ಜೈನರೆಲ್ಲರನ್ನು ವೈಷ್ಣವರನ್ನಾಗಿ ಮಾಡಲು ಸಂಕಲ್ಪಿಸಿದರು.

    ಭರತಶಾಸ್ತ್ರ ಪ್ರವೀಣೆಯರಾದ ಈಕೆಯರು ಹೊಯ್ಸಳ ದೇಶದಲ್ಲಿ ಬೀಡು ಬಿಟ್ಟು ತನ್ನ ಸೌಂದರ್ಯ, ರೂಪ, ಲಾವಣ್ಯಗಳನ್ನ ತೋರಿಸುತ್ತಿದ್ದಾರೆ ಇದರಿಂದ ಅಚ್ಚರಿಗೊಂಡ ವೀರ ಬಲ್ಲಾಳರಾಯ ಸಿಂಗಾರೆ ಹಾಗೂ ಬಂಗಾರೆಯೊಂದಿಗೆ ವಿನೋದದಲ್ಲಿದ್ದ ಈ ನಡುವೆ ಉಪವಾಸ ಪಾರಣಿ ನಿಮಿತ್ತ ಮುನಿಗಳು ಚಂದ್ರಗುತ್ತಿಗೆ ಬರುತ್ತಿರಲು, ಬಂಗಾರೆ ಹಾಗೂ ಸಿಂಗಾರೆ ಮುನಿಗಳನ್ನು ಕುರಿತು ಇವರು ಯಾರೆಂದು ವೀರ ಬಲ್ಲಾಳ ರಾಯಣ್ಣನು ಪ್ರಶ್ನಿಸಲು ಅವರು ನಮ್ಮ ಗುರುಗಳೆಂದು ತಾತ್ಸಾರದಿಂದ ಹೇಳಿದ್ದ, ಇವರು ನಿಮ್ಮ ಗುರುವಾದರೆ ನೀವೇ ನಿಮ್ಮ ಕೈಯಿಂದ ಆಹಾರ ದಾನ ಮಾಡುವಂತೆ ತಿಳಿಸಿದರಂತೆ, ಅವರು ನಿಮ್ಮ ಆಹಾರ ಸೇವಿಸಿದರೆ ನಾವು ಜೈನ ಧರ್ಮ ಸ್ವೀಕರಿಸುವುದಾಗಿ ತಿಳಿಸಿದರಂತೆ, ಇಲ್ಲದಿದ್ದರೆ ನೀವು ವೈಷ್ಣವ ಧರ್ಮ ಸ್ವೀಕರಿಸುವಂತೆ ಸವಾಲ್ ಎಸೆದರಂತೆ.
    ವೀರ ಬಲ್ಲಾಳರಾಯ ಮುನಿಗಳ ಪ್ರದಕ್ಷಣೆ ಮಾಡಿ ಆಹಾರದಾನಕ್ಕೆ ಮುಂದಾದಾಗ, ಈ ನಡುವೆ ವೀರ ಬಲ್ಲಾಳ ರಾಯನಿಗೆ ಊನವಾದ್ದರಿಂದ ಮುನಿಗಳು ಆಹಾರ ತಿರಸ್ಕರಿಸಿ ಅರಣ್ಯಕ್ಕೆ ಹಿಂದಿರುಗಿದರು. ಇದರಿಂದ ಕೋಪಗೊಂಡ ವೀರ ಬಲ್ಲಾಳರಾಯ ಜೈನಧರ್ಮ ಹಾಳಾಗುತ್ತಿದೆ ಎಂದು ಮುನಿಗಳಿಗೆ ಹೇಳಿದರು.

    ಮುನಿಗಳು ಆಹಾರದ ವಿಧಿಯಿಂದ ಚ್ಯುತನಾಗಿ ವೃತಭಂಗದಿಂದ ದುರ್ಗತಿಗೆ ಹೋಗಲಾರೆ ಎಂದು ಮುನಿಗಳು ತಿಳಿಸಿದಾಗ ಮತ್ತಷ್ಟು ಕ್ರೋಧಗೊಂಡ ವೀರ ಬಲ್ಲಾಳರಾಯ, ಜೈನ ಧರ್ಮ ಬಿಟ್ಟು ವೈಷ್ಣವ ಧರ್ಮ ಸ್ವೀಕರಿಸಿದ್ದರಿಂದ ಸಿಂಗಾರೆ –ಬಂಗಾರೆ ನಮ್ಮ ಶಪಥ ಈಡೇರಿತು ಎಂದು ಸಂತಸಗೊಂಡರು.

    ನಂತರ ದಿನಗಳಲ್ಲಿ ಬಲ್ಲಾಳ ರಾಯ, ರಾಮಾನುಜಾಚಾರ್ಯ ರಿಂದ ತತ್ವ ಉಪದೇಶ ಪಡೆದು ವೀರ ವೈಷ್ಣವ ನಾದನಂತೆ ನೂರಾರು ಜೈನ ಬಸದಿಗಳಲ್ಲಿ ವಿಷ್ಣು ದೇವರನ್ನ ಸ್ಥಾಪಿಸಿದ, ತೊಂಡನೂರು ಸ್ಥಳದಲ್ಲಿದ್ದ 780 ಬಸದಿಗಳನ್ನು ನಾಶಪಡಿಸಿದ. ಮೈಸೂರು ಜಿಲ್ಲೆಯ “ಹೆಡತಲೆ “. ಗ್ರಾಮದಲ್ಲಿ 16 ಬಸದಿಗಳನ್ನು ಧ್ವಂಸ ಮಾಡಿದ, ಈ ಜಾಗದಲ್ಲಿ ಪಂಚ ಪರಮೇಸ್ಟಿಗಳನ್ನು ಪ್ರತಿಷ್ಠಾಪಿಸಲು ಉದ್ದೇಶವಿತ್ತು, ಆದರೆ ಅದೇ ಜಾಗದಲ್ಲಿ ಪಂಚ ನಾರಾಯಣಗಳನ್ನು ಪ್ರತಿಷ್ಠಾಪಿಸಿದ.

    ಈ ನಡುವೆ ಬಲ್ಲಾಳ ರಾಯಣ್ಣಗೆ ವಿಷ್ಣುವರ್ಧನ ಎಂಬ ಮತ್ತೊಂದು ಹೆಸರಿತ್ತು. ಈ ನಡುವೆ ಅಡಗೂರು ಸಮೀಪದ ರಾಗಿಗುಡ್ಡದ ಬಳಿ ಭೂಮಿಯ ಪಕ್ಷಿಗಳು ,ಗೋವು ಮಹಿಶಾದಿಗಳನ್ನ ತನ್ನೊಡಲಿಗೆ ಸೆಳೆಯುತ್ತಿತ್ತು ಇದು ವಿಷ್ಣುವರ್ಧನ ಚಿಂತಕ್ರಾಂತನಾಗಿ ಈ ಆಪತ್ತು ಜಿನಮುನಿಗಳೆಲ್ಲದೆ ಈ ಆಪತ್ತು ನಿವಾರಣೆಯಾಗುವುದಿಲ್ಲ ಎಂದು ಯೋಚಿಸಿದ.

     

    ಈ ನಡುವೆ ಹನಸೋಗೆ ಮಠದಲ್ಲಿದ್ದ ಜೈನ ಯೋಗೀಶ್ವರ ಚಂದ್ರ ಕೀರ್ತಿ ಮುನಿಗಳಿಗೆ ಭೇಟಿ ಮಾಡಿ ನಾನು ಜೈನ ಬಸದಿಗಳನ್ನ ನಾಶ ಮಾಡಿದ್ದರಿಂದ ಅಲ್ಲದೇ ಶ್ರಾವಕ –ಶ್ರಾವಕಿಯರನ್ನ ಮತಾಂತರಗೊಳಿಸಿದ್ದರಿಂದ ಈ ಕರ್ಮದ ಫಲವಾಗಿ ರಾಜ್ಯ ವಿನಾಶದಲ್ಲಿದೆ, ತಾವು ಜೀವ ರಕ್ಷಕರಾಗಿ ಪರಿಸ್ಥಿತಿ ಕಾಪಾಡಬೇಕೆಂದರು. ಸಮಸ್ತ ಜಲಚರ ಪ್ರಾಣಿಗಳನ್ನು ಉಳಿಯುವಂತೆ ಮಾಡಿ ಎಂದು ಭಿನ್ನವಿಸಿಕೊಂಡಾಗ, ಜೈನಮುನಿ ಚಂದ್ರಕೀರ್ತಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಘಂಟೆ ದರ್ಪಣಗಳಿಂದ ಕೂಡಿದ ನಾಲ್ಕು ಮಂಟಪಗಳನ್ನು ನಿರ್ಮಿಸಿ ಮಹಾ ಹೋಮ, ಕಲಿಕುಂಡ ಮೃತ್ಯುಂಜಯ ಮಂತ್ರರಾಧನೆ ಸಿದ್ದಚಕ್ರ ಕ್ರಮ, ಮಹಾಶಾಂತಿ ಚಂದ್ರ ಆರಾಧನೆ ನೆರವೇರಿಸಿ ಜನರಿಗೆ ಯಾವುದೇ ಸಂಕಟ ಉಪ ದ್ರವಗಳಾಗದಂತೆ ಮಾಡಿ ಮಾನವ ದೈವ ಜೀವಿಗಳನ್ನು ನಿರ್ಭಯದಿಂದ ಇರುವಂತೆ, ಸಂತೋಷ ದಿಂದಿರುವಂತೆ ಮಾಡಿದರು. ಸಕಲ ಸಂಪತ್ತು ಅವರಿಗೆ ದೊರೆಯುವಂತೆ ಮಹಾಯಜ್ಞ ಮಾಡಿಸಿ 108 ಬೂದಗುಂಬಳಕಾಯಿ ಮಂತ್ರಿಸಿ ಒಂದೊಂದು ಕುಂಬಳಕಾಯಿಯನ್ನು ಭೂಮಿ ಸೀಳಿ ಹಳ್ಳವಾಗಿದ್ದ ಜಾಗಕ್ಕೆ ಉದುರಿಸಿದ್ದರು. ಕಂದಕ ಮುಚ್ಚುತ್ತಾ ಬಂತು ಆದರೆ ಒಂದು ಕುಂಬಳಕಾಯಿ ಉಳಿಯುತ್ತ ನಂತರ ಇದರ ಇತರ ಮತದವರು ತಮ್ಮಸ್ವಹಿಚ್ಛೆಯಿಂದ ಕಂದಕ ಮುಚ್ಚಲು ತಿಳಿಸಿದರು.

    ಅದು ಫಲ ನೀಡದ ಕಾರಣ ಉಳಿದ ಒಂದು ಕುಂಬಳಕಾಯಿ ಹಳ್ಳಕ್ಕೆ ನೂಕಿದಾಗ ಕಂದಕವು ಸಮತಟ್ಟಾಯಿತು. ಸಮತಟ್ಟಾದ ಜಾಗದಲ್ಲಿ ಜಿನ ಪ್ರತಿಮೆ ಸ್ಥಾಪಿಸಿ, ಆರಾಧನೆ ,ಅನ್ನದಾನ ಇನ್ನಿತರ ಕಾರ್ಯಗಳನ್ನು ವೀರ ಬಲ್ಲಾಳ ರಾಯಣ್ಣ ಮಾಡಿಸಿದ ಆಗ ಬಲ್ಲಾಳರಾಯ, ಮುನಿಗಳಿಗೆ ಚಾರು ಕೀರ್ತಿ ಜೀವ ರಕ್ಷಾ ಫಲಕಗಳನ್ನು ನೀಡಿ ಗೌರವಿಸಿ ಶಿಷ್ಯನಾದ ಈ ಘಟನೆ ನಡೆದ ಐತಿಹಾಸಿಕ ತಾಣವೇ ಜೈನರ ಗುತ್ತಿ.

    ಅಡಗೂರು ಮತ್ತು ಸುತ್ತಮುತ್ತಲಿನ ಶ್ರಾವಕರು ವರ್ಷಕ್ಕೊಮ್ಮೆ ಜೀವ ದಯಾಶ್ಟಮಿ ದಿನದ ಈ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜಾ ವಿಧಿ ವಿಧಾನಗಳನ್ನ ಮಾಡಿಕೊಂಡು ಶ್ರೀ ಕ್ಷೇತ್ರವನ್ನು ರಕ್ಷಿಸಿಕೊಂಡು ಬಂದಿದ್ದಾರೆ . ಇಲ್ಲಿಗೆ ಸಮೀಪದ ಮಲ್ಲಾಪುರದಲ್ಲಿ ದೊರೆತ ಶಿಲ್ಪ ಶ್ರೀ ಪಾರ್ಶ್ವನಾಥ ಶಿಥಿಲವಾದ ಮೂರ್ತಿ ತಂದು ಒಂದು ಚಿಕ್ಕ ಮಂಟಪ ನಿರ್ಮಿಸಿ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರಕ್ಕೆ ಅನಿರೀಕ್ಷಿತ ಆಗಮನದಿಂದ ಶ್ರೀ ವೀರಸಾಗರ ಮುನಿ ಮಹಾರಾಜರ ಪಾದ ಸ್ಪರ್ಶದಿಂದ ಅವರ ಮಾರ್ಗದರ್ಶನ ,ಆಶೀರ್ವಾದದಿಂದ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ ,ಅಲ್ಲದೆ ಶಿಥಿಲಗೊಂಡ ಶ್ರೀ ಪಾರ್ಶ್ವನಾಥ ಮೂರ್ತಿಗೆ ವಜ್ರ ಲೇಪನ ಮಾಡಿಸಿ ಪಂಚಕಲ್ಯಾಣಗಳೊಂದಿಗೆ ಮೂರ್ತಿ ಪ್ರತಿಷ್ಠಾಪಿಸಿದ ನಂತರ ಕಾರ್ಯಕ್ರಮ ವೇಗದಿಂದ ಸಾಗುತ್ತಿವೆ.

    ಶ್ರೀ ವೀರಸಾಗರ ಮುನಿ ಮಹಾರಾಜರು 2021ರ ಮಾರ್ಚಿನಲ್ಲಿ ಆದಿನಾಥರ ಮೋಕ್ಷ ಕಲ್ಯಾಣದ ದಿನ ಭೂಮಿ ಶೋಧಿಸಿ ಮುನಿಸುರತ, ಆದಿನಾಥ , ಪಾರ್ಶ್ವನಾಥ ,ಆದಿನಾಥರ ಚತುರ್ಮುಖ ಮೂರ್ತಿಗಳನ್ನು ಹಾಗೂ ಪಂಚಲೋಹದ ಪದ್ಮಾವತಿ ಮೂರ್ತಿಗಳು ದೊರೆತಿವೆ.

    2021ರ ಆಗಸ್ಟ್ ನಲ್ಲಿ ಶ್ರೀ ಪಾರ್ಶ್ವನಾಥರ ಮೋಕ್ಷ ಕಲ್ಯಾಣ (ಮುಕುಟ ಸಪ್ತಮಿ ) ದಿವಸ ಜೈನರ ಗುತ್ತಿಯಲ್ಲಿ, ಅದೇ ಜಾಗದಲ್ಲಿ 3 ಅಡಿ ಎತ್ತರದ ಶ್ರೀಪಾರ್ಶ್ವನಾಥ ಮೂರ್ತಿ, ಭಗವಾನರ 7 ಎಡೆಗಳ ಮೂರ್ತಿ, ಪಾದ ಪೀಠದಲ್ಲಿ ಸಪ್ತ ಲಾಂಛನ ದೊರೆತಿದ್ದು ಶ್ರೀ ವೀರ ಸಾಗರ ಮುನಿ ಮಹಾರಾಜರ ಅನುಭವದಿಂದ ಇನ್ನೂ ಹಲವು ಜಿನಮೂರ್ತಿಗಳು ಭೂಗರ್ಭದಲ್ಲಿರುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ, ಅಲ್ಲದೆ ಸಮೀಪದ ಅನ್ಯ ಧರ್ಮೀಯನ. ಜಮೀನಿನಲ್ಲಿ ಜಿನಮೂರ್ತಿ ಇರುವ ಬಗ್ಗೆ ಮಹಾರಾಜರಿಗೆ ತಿಳಿಸಿದಾಗ ಅದನ್ನು ಬೇಗನೆ ತೆಗೆಯಲು ತಿಳಿಸಿದ್ದಾರೆ.

    ಅಲ್ಲದೆ ಶ್ರೀ ಕ್ಷೇತ್ರದಲ್ಲಿ ಮುನಿಸೂರತ ತೀರ್ಥಂಕರರ ಖಡ್ಗಸನ ಮೂರ್ತಿ ಶ್ರೀ ಕ್ಷೇತ್ರದಲ್ಲಿ ಸ್ಥಾಪಿಸಲಾಗಿದೆ .ಮೂರ್ತಿ ಉತ್ತರ ಅಭಿಮುಖವಾಗಿದೆ. ಅಲ್ಲದೆ ಪದ್ಮಾಸನದ ಶಿಥಿಲನಾಥ ಮೂರ್ತಿ ಸ್ಥಾಪಿಸಲಾಗಿದೆ.

    ಈ ಐತಿಹಾಸಿಕ ತಾಣ ಜೈನರ ಗುತ್ತಿ ರಾಜಧಾನಿ ಬೆಂಗಳೂರಿನಿಂದ 200 ಕಿಲೋ ಮೀಟರ್, ಜಿಲ್ಲಾ ಕೇಂದ್ರ ಹಾಸನದಿಂದ 25 km, ತಾಲೂಕು ಕೇಂದ್ರ ಬೇಲೂರಿನಿಂದ 25 ಕಿಲೋಮೀಟರ್, ಹೋಬಳಿ ಕೇಂದ್ರ ಮಲ್ಲಾಪುರದಿಂದ 3 ಕಿಲೋಮೀಟರ್, ಹಗರೇಯಿಂದ 6 ಕಿ.ಮೀ, ಅಡಗೂರಿನಿಂದ 4 ಕಿಲೋಮೀಟರ್, ಕ್ಯಾತನ ಕೆರೆ ಗೇಟ್ ನಿಂದ 2 ಕಿಲೋಮೀಟರ್ , ಹಳೇಬೀಡಿನಿಂದ 10 ಕಿಲೋಮೀಟರ್ ದೂರವಿದೆ.
    ಹಾಸನ ಜಿಲ್ಲೆ ಬೇಲೂರು ತಾಲೂಕಿನ, ಮಾದಿಹಳ್ಳಿ ಹೋಬಳಿ, ಜೈನರ ಗುತ್ತಿಯಲ್ಲಿ 24 ಅಡಿಗಳ ಪದ್ಮಾಸನ ಮೂರ್ತಿಯ ಶಿಥಿಲನಾಥ ತೀರ್ಥಂಕರರ ಹಾಗೂ 31 ಅಡಿಯ ಕಾಯೋತ್ಸರ್ಗ ಬಂಗಿಯ ಮುನಿಸುರತ ತೀರ್ಥಂಕರರ ಬೃಹತ್ ಪಂಚ ಕಲ್ಯಾಣ ಮಹೋತ್ಸವ 2024ರ ನವೆಂಬರ್ 29 ರಿಂದ ಡಿಸೆಂಬರ್ 4ರವರೆಗೆ ಶ್ರೀಮುನಿ ಶ್ರೀ ವೀರ ಸಾಗರ ಮಹಾರಾಜರ ಮಾರ್ಗದರ್ಶನದಲ್ಲಿ ಅತಿಶಯ ಕ್ಷೇತ್ರ ಭಗವಾನ್ ಶ್ರೀ ಶೀತಲನಾಥ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕುಣಿಗಲ್ ಬ್ರಹ್ಮದೇವಯ್ಯ ತಿಳಿಸಿದ್ದಾರೆ .ಮಾಧ್ಯಮ ಸಲಹಾಗಾರರ ಸಂಚಾಲಕರಾಗಿ ಎಸ್.ಎನ್ .ಅಶೋಕ್ ಕುಮಾರ್,ಕಾರ್ಯದರ್ಶಿಯಾಗಿ, ನೇಮಿರಾಜ ಅರಿಗ ಕಾರ್ಯನಿರ್ವಹಿಸಲಿದ್ದಾರೆ.

    ವರದಿ: ಜೆ.ರಂಗನಾಥ, ತುಮಕೂರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

    July 1, 2025

    DIGITAL ARREST ಬಗ್ಗೆ ಎಚ್ಚರವಿರಲಿ!

    June 30, 2025
    Our Picks

    ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು

    June 30, 2025

    ಇಸ್ರೇಲ್ ಪರ ಬೇಹುಗಾರಿಕೆ: ಮೂವರನ್ನು ಗಲ್ಲಿಗೇರಿಸಿದ ಇರಾನ್

    June 25, 2025

    ಕೆಲವರಿಗೆ ಮೋದಿಯೇ ಮೊದಲು: ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ

    June 25, 2025

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ತುಮಕೂರು :  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ…

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025

    ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

    July 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.