ಬೆಂಗಳೂರಿನಲ್ಲಿ ಪಬ್, ಬಾರ್, ಹುಕ್ಕಾ ಬಾರ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಕೋರಮಂಗಲ, ಇಂದಿರಾನಗರ, HSR ಲೇಔಟ್, ಬಾಣಸವಾಡಿ, ಹೆಣ್ಣೂರು ಸೇರಿ ಹಲವೆಡೆ ದಾಳಿ ವೇಳೆ 20ಕ್ಕೂ ಹೆಚ್ಚು ಅಪ್ರಾಪ್ತರು ಮದ್ಯದ ನಶೆಯಲ್ಲಿ ತೇಲಾಡ್ತಿರೋದು ಕಂಡು ಬಂದಿದೆ.
ಈ ವೇಳೆ ತಾವು ಮಾಜಿ ಸಚಿವ, ಹಾಲಿ ಶಾಸಕರ ಕಡೆಯವರು ಎಂದು ಪೊಲೀಸರ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ಅಪ್ರಾಪ್ತರಿಗೆ ಮದ್ಯ ಸಪ್ಲೈ ಮಾಡಿದ ಆರೋಪದಡಿ ಪಬ್, ಬಾರ್ ಗಳ ಮೇಲೂ ಪೊಲೀಸರು ಕೇಸ್ ದಾಖಲಿಸಿದ್ದಾರೆ.


