ನ್ಯೂಜಿಲೆಂಡ್ ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ರೇಡಿಯೋ ನಿರೂಪಕ ಹರ್ನೆಕ್ ಸಿಂಗ್ ಅವರನ್ನು ಹತ್ಯೆ ಮಾಡಲು ಮೂವರು ಖಲಿಸ್ತಾನ್ ಭಯೋತ್ಪಾದಕರು ಪ್ರಯತ್ನಿಸಿದರು.
ಅವರು ಖಲಿಸ್ತಾನ್ ಸಿದ್ಧಾಂತದ ವಿರುದ್ಧ ಮಾತನಾಡುತ್ತಿದ್ದಾರೆಂದು ಕೋಪಗೊಂಡ ಹಿನ್ನೆಲೆ ಡಿಸೆಂಬರ್ 23ರಂದು ಖಲಿಸ್ತಾನಿ ಉಗ್ರಗಾಮಿಗಳು ಆತನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದರು.
ಈ ಪ್ರಕರಣದಲ್ಲಿ ಕೊಲೆ ಯತ್ನದಲ್ಲಿ ಭಾಗಿಯಾಗಿದ್ದ ಸರ್ವಜೀತ್ ಸಿದ್ದು (27) ಹಾಗೂ ಸಹಚರರಾಗಿದ್ದ ಆಫ್ರೆಂಡ್ ನಿವಾಸಿ ಸುಖಪ್ರೀತ್ ಸಿಂಗ್ (44) ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.


