ರಾಜ್ಯದಲ್ಲಿ ಅಬಕಾರಿ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಹೊಸ ಸಿಎಲ್7(ಹೋಟೆಲ್ ಮತ್ತು ವಸತಿ ಗೃಹ) ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲಾಗುತ್ತಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಸಿಎಲ್ 7 ಮದ್ಯದಂಗಡಿಗಳು ಬೆಂಗಳೂರಿನಲ್ಲಿದ್ದು, ಮೊದಲ ಸ್ಥಾನದಲ್ಲಿದೆ. ಹಾಸನ 2ನೇ ಸ್ಥಾನದಲ್ಲಿದೆ.
2020-21ರಲ್ಲಿ 1, 572 ಸಿಎಲ್7 ಮದ್ಯದಂಗಡಿಗಳಿತ್ತು, ಆದರೆ, 2022-23ರಲ್ಲಿ ಇವುಗಳ ಸಂಖ್ಯೆ 2, 382ಕ್ಕೇರಿದೆ. ಪ್ರಸಕ್ತ ಸಾಲಿನಲ್ಲಿ ಹೊಸ ಸಿಎಲ್/ ಪರವಾನಗಿ ಕೋರಿ ಸಾವಿರಾರು ಅರ್ಜಿಗಳು ಇಲಾಖೆ ಸಲ್ಲಿಕೆಯಾಗಿವೆ.


