ತುಮಕೂರು: ಭಾರತೀಯ ಜನತಾ ಪಾರ್ಟಿ ಮಧುಗಿರಿ ಮಂಡಲ ವತಿಯಿಂದ’ ಮಂಡಲ ಅಧ್ಯಕ್ಷರಾದ ಹನುಮಂತರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಆಗಸ್ಟ್ 14 ವಿಭಜನೆಯ ಕರಾಳ ಸ್ಮರಣಾ ದಿನ’ ವನ್ನ ಮಧುಗಿರಿ ನಗರದ ಸರ್ಕಲ್ ನಲ್ಲಿ ಕಪ್ಪು ಪಟ್ಟಿ ಧರಿಸಿ ಮೌನವಾಗಿ ಸ್ಮರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಭಾಷಣವನ್ನು ಬಿಜೆಪಿಯ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಸರು ಮಾತನಾಡಿ, ದ್ವೇಷ, ಹಿಂಸಾಚಾರದಿಂದ ದೇಶದ ಲಕ್ಷಾಂತರ ಸಹೋದರ, ಸಹೋದರಿಯರು ನಿರಾಶ್ರಿತರಾಗಿ, ಜೀವ ಕಳೆದುಕೊಂಡ ನೋವು ಎಂದಿಗೂ ಮಾಸದು. ನಮ್ಮ ಜನರ ಹೋರಾಟ, ತ್ಯಾಗದ ಸ್ಮರಣೆಯ ದಿನವಾದ ದೇಶ ವಿಭಜನೆಯ ದಿನವನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಜಿ ಅವರು ಆಗಸ್ಟ್ 14, 2021 ರಲ್ಲಿ ದೇಶ ವಿಭಜನೆ ಕರಾಳ ದಿನವೆಂದು ಘೋಷಿಸಿದ್ದಾರೆ, ಪಾಕಿಸ್ತಾನವನ್ನು ಆಗಸ್ಟ್ 14, 1947 ರಂದು ಪ್ರತ್ಯೇಕ ರಾಷ್ಟ್ರ ಎಂದು ಘೋಷಿಸಲಾಯಿತು. ಭಾರತವನ್ನು ಆಗಸ್ಟ್ 15, 1947 ರಂದು ಪ್ರತ್ಯೇಕ ರಾಷ್ಟ್ರ ಎಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಅನೇಕ ಜನ ವಲಸೆ ಬಂದರು ಪಾಕಿಸ್ತಾನದಿಂದಲೂ ಭಾರತಕ್ಕೆ ಅನೇಕ ಜನ ವಲಸೆ ಬಂದರು ಆದರೆ ಪಾಕ್ ನಲ್ಲಿದ್ದ ರಾಜಕೀಯ ನಾಯಕರ ಕುತಂತ್ರಕ್ಕೆ ಪಾಕಿಸ್ತಾನದಲ್ಲಿ ಹಿಂಸಾಚಾರ ನಡೆದು ಅನೇಕರು ಪ್ರಾಣಗಳನ್ನು ಕಳೆದುಕೊಂಡರು. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾದ ನಾವುಗಳು ಹಾಗೂ ನಾಗರೀಕ ಜನರುಗಳು ವಿಭಜನೆಯ ಕರಾಳ ದಿನಗಳನ್ನು ಸ್ಮರಿಸುತ್ತಾ ಜನರ ಧೈರ್ಯಕ್ಕೆ ಗೌರವ ಅರ್ಪಿಸುವ ಈ ಕರಾಳ ದಿನಕ್ಕೆ ತುತ್ತಾನ ಅನೇಕರನ್ನು ಸ್ಮರಿಸಬೇಕಾಗಿದೆ,, ಈ ಸಂದರ್ಭದಲ್ಲಿ 15 ಮಿಲಿಯನ್ ಅಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದರು, ಅನೇಕ ಜನರು ಹೊಸನಗರ ಬೇರೆ ಸ್ಥಳಗಳಿಗೆ ಪಲಾಯಣ ಮಾಡಬೇಕಾಗಿತ್ತು, ಎಂದು ತಿಳಿಸಿದರು.
ಈ ಸಂದರ್ಭದಲ್ಲಿ,ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಿಪತಿ, ದೇವರಾಜು, ಮಂಜುನಾಥ್, ಜಿಲ್ಲಾ ಕಾರ್ಯದರ್ಶಿಗಳಾದ ಲತಾ ಪ್ರದೀಪ್, ಕಲ್ಪನಾ ಗೋವಿಂದರಾಜ್, ಮಾಜಿ ಅಧ್ಯಕ್ಷರುಗಳಾದ, ಪಾಂಡುರಂಗ ರೆಡ್ಡಿ, ನಾಗೇಂದ್ರಪ್ಪ, ಮುಖಂಡರುಗಳಾದ ರಾಜಣ್ಣ, ಬಸ್ತಪ್ಪ, ಕೃಷ್ಣಮೂರ್ತಿ, ತಿಮ್ಮಣ್ಣ, ಕೃಷ್ಣ ಬಂಗಾರಿ, ಶ್ರೀನಿವಾಸ ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC