Author: admin

ತುಮಕೂರು: ಪರಮೇಶ್ವರ್ ರಾಜ್ಯದ ಸಿಎಂ ಆಗಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ ಅಂತ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ಹೆಗ್ಗೆರೆಯಲ್ಲಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವರು,  ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನೊಬ್ಬನ ಆಸೆಯಲ್ಲ, ತುಮಕೂರು ಜಿಲ್ಲೆಯ ಮಹಾಜನತೆಯ ಆಸೆ ಕೂಡ ಇದೆ ಎಂದರು. ಇದೇ ವೇಳೆ ಮಧ್ಯೆ ಮಾತನಾಡಿದ ಶಾಸಕ ಸುರೇಶ್ ಗೌಡ, ಡಿಕೆಶಿ ಕೂಡ ರೇಸ್ ನಲ್ಲಿದ್ದಾರೆ ಅನ್ನೋದನ್ನು ನೆನಪು ಮಾಡಿದರು. ಅದಕ್ಕೆ ಉತ್ತರಿಸಿದ ಸೋಮಣ್ಣ, ಅದು ಸೆಕೆಂಡ್ರಿ… ಶಿವಕುಮಾರ್ ಏನಾಗ ಬೇಕು ಅನ್ನೋದು ಹಣೆಬರಹ, ಏನಾಗುತ್ತೆ ಅನ್ನೋದು ದೊಡ್ಡದು ಎಂದರಲ್ಲದೇ, ನಡವಳಿಕೆ ಇನ್ನೂ ದೊಡ್ಡದು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಸರಗೂರು:  ಕುಡಿಯುವ ನೀರಿಗಾಗಿ ಖಾಸಗಿ ಜಮೀನಿಗೆ ಅಲೆದಾಡುತ್ತಾ ಎರಡು ತಿಂಗಳಿಂದ ಪರದಾಡುತ್ತಿದ್ದೇವೆ. ಈಗ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದಾರೆ. ಅದು ಕುಡಿಯಲು ಯೋಗ್ಯವಿಲ್ಲದ ನೀರು, ಮನುಷ್ಯರಿಗೂ ಪ್ರಾಣಿಗಳಿಗೂ ವ್ಯತ್ಯಾಸ ಇಲ್ಲವೇ ಎಂಬುದನ್ನು ಜಯಲಕ್ಷೀಪುರ ಗ್ರಾಮಸ್ಥರು ಜೆಜೆಎಂ ಅಧಿಕಾರಿಗಳು ಹಾಗೂ ಗುತ್ತಿಗೆದಾರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ತಾಲೂಕಿನ ಎಂ.ಸಿ. ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಲಕ್ಷೀಪುರ ಗ್ರಾಮಸ್ಥರ ನೊಂದ ಮಾತುಗಳು. ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಗ್ರಾಮಸ್ಥರು ಕಲುಷಿತ ನೀರನ್ನೇ ಬಳಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಸುಮಾರು 60  ಕುಟುಂಬಗಳ ಹೆಚ್ಚು ವಾಸ ಮಾಡುತ್ತಿವೆ. ಬೋವಿ ಜನಾಂಗದ  ಸಮುದಾಯದವರೂ ಇಲ್ಲಿ ನೆಲೆಸಿದ್ದಾರೆ. ಹೆಚ್ಚಿನವರು ಕೂಲಿ ಕಾರ್ಮಿಕರಾಗಿದ್ದಾರೆ. ‘ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋದರೆ, ಬರುವುದು ಸಂಜೆ. ಬೆಳಿಗ್ಗೆ ಮತ್ತು ಸಂಜೆ ಕುಡಿಯುವ ನೀರನ್ನು ಸಂಗ್ರಹಿಸುವುದೇ ಸಮಸ್ಯೆಯಾಗಿದ್ದು, ಅಕ್ಕ ಪಕ್ಕದ ಹೊಲಗದ್ದೆಗಳಲ್ಲಿ ಕೃಷಿ ನೀರು ಹಾಯಿಸುವವರನ್ನು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯರು ನೋವು ತೋಡಿಕೊಂಡರು. ಗ್ರಾಮದ ಮುಖಂಡ ವೆಂಕಟರಾಮು…

Read More

ಪಾವಗಡ: ತಾಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಪ್ರತಿಭಾ ಪುರಸ್ಕಾರ, ಶಿಕ್ಷಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಎಸ್.ಕೆ.ವೆಂಕಟ ರೆಡ್ಡಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಂ.ಈರಪ್ಪ ರೆಡ್ಡಿ ವಹಿಸಿದ್ದರು. ಒಟ್ಟು 19 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 1.40 ಲಕ್ಷ, 13 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 34 ಸಾವಿರ ಹಾಗೂ 10 ಜನ ಉತ್ತಮ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯದರ್ಶಿ ಡಾ.ಡಿ.ಪರಮೇಶ ನಾಯ್ಕ್ ಮಾತನಾಡಿ, ಕಳೆದ 23 ವರ್ಷ ಗಳಿಂದ ಸುಮಾರು 700 ವಿದ್ಯಾರ್ಥಿಗಳಿಗೆ 50 ಲಕ್ಷ ರೂ. ಗಳನ್ನು ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ನೀಡಲಾಗಿದೆ ಹಾಗೂ ಸುಮಾರು 200 ಶಿಕ್ಷಕರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದರು. ಡಾ.ಗೋವಿಂದಪ್ಪ,  ಸಾಂಬಾಸದ ಶಿವ ರೆಡ್ಡಿ, ಕೆಬಿವಿ ಪತಿ, ಎಂ.ಜೆ.ಚಿತ್ತಯ್ಯ, ಚನ್ನಕೇಶವ ರೆಡ್ಡಿ, ಡಾ.ಲಕ್ಷ್ಮೀ ಪತಿ, ಡಾ. ವೆಂಕಟೇಶಲು, ಎಲ್ಲಾದ್ರಿ, ಉಮಾಕಾಂತ್, ಮುಕ್ತ ಪ್ರಸಾದ್, ನಾಗರಾಜ್, ವಿದ್ಯಾಸಾಗರ  ಭಾಗವಹಿಸಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಸರಗೂರು:  ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣದ ಪ್ರಾಮುಖ್ಯತೆಯನ್ನು ಸಮುದಾಯಕ್ಕೆ ತಿಳಿಸುವ ಸಲುವಾಗಿ ಹಾಗೂ ಆರಂಭಿಕ ಬಾಲ್ಯ ಶಿಕ್ಷಣದ ಗುಣಮಟ್ಟವನ್ನು ಬಲಪಡಿಸಲು ಸಮುದಾಯದ ಪಾತ್ರ ಬಹುಮುಖ್ಯವಾದದ್ದು ಎಂದು ಶಾಸಕರ ಪತ್ನಿ ಸೌಮ್ಯ ಚಿಕ್ಕಮಾದು  ತಿಳಿಸಿದರು. ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಪುರ ಗ್ರಾಮದಲ್ಲಿ ಶುಕ್ರವಾರದಂದು ಮಕ್ಕಳ ಜಾಗೃತಿ ಸಂಸ್ಥೆ, ಹಾಗೂ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,  ಸಂಯುಕ್ತ ಆಶ್ರಯದಲ್ಲಿ ಬಡಗಲಪುರ ವೃತದ ಅಂಗನವಾಡಿ ಹಬ್ಬ ಕಾರ್ಯಕ್ರಮವನ್ನು ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದು ಗಣ್ಯರು ಕಾರ್ಯಕ್ರಮವನ್ನು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಾಸಕರು ಬೆಳಗಾವಿ ಚಳಿಗಾಲದ ಅಧಿವೇಶನ ಇರುವುದರಿಂದ ಅವರು(ಶಾಸಕರು) ಬಾರದ ಕಾರಣ ಕಾರ್ಯಕ್ರಮ ನಿರೂಪಿಸಿ ನನ್ನನ್ನು ಸ್ವಾಗತಿಸಿದಕ್ಕೆ ಇಲಾಖೆಗೆ ಧನ್ಯವಾದಗಳು ತಿಳಿಸಿದರು. ತಾಲೂಕಿನ ಅಂಗನವಾಡಿಗಳ ವೃತ್ತದಲ್ಲಿ ಸರ್ಕಾರದ ಪ್ರಕಾರ ಮಾಡಿಕೊಂಡು ಬರುತ್ತಿದ್ದು, ಶಾಸಕರು ಈ ಭಾಗದಲ್ಲಿ ಕಾಡಂಚಿನ ಭಾಗಕ್ಕೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇನ್ನೂ ಹಂತ ಹಂತವಾಗಿ ಕೆಲಸ ಕಾರ್ಯಗಳು ಮಾಡಿಕೊಂಡು ಬರುತ್ತಿದ್ದಾರೆ ಎಂದು…

Read More

ಬೀದರ್: ಔರಾದ ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಕಳಪೆ ಮಟ್ಟದಿಂದ ಆಗಲು, ಯೋಜನೆಯ ದಿಕ್ಕು ತಪ್ಪಲು ಸ್ಥಳೀಯ ಶಾಸಕ ಪ್ರಭು ಚವ್ಹಾಣ್ ಅವರೇ ನೇರ ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಸುಧಾಕರ್ ಕೊಳ್ಳುರ ಆರೋಪಿಸಿದ್ದಾರೆ . ಪತ್ರಿಕೆ ಹೇಳಿಕೆ ನೀಡಿರುವ ಅವರು, ಜೆಜೆಎಂ ಕಾಮಗಾರಿಯ ಕೆಲಸ ಮಾಡಿದ  ಗುತ್ತಿಗೆದಾರರೆಲ್ಲ ಶಾಸಕರ ಆಪ್ತರೇ ಆಗಿದ್ದಾರೆ, ಅದರಲ್ಲಿ ಬಹುತೇಕ ಗುತ್ತಿಗೆದಾರರು ಶಾಸಕರ ಕಾರ್ಯಕರ್ತರೇ ಆಗಿದ್ದಾರೆ. ಕಾಮಗಾರಿ ಪ್ರಾರಂಭಿಸುವ ಸಂದರ್ಭದಲ್ಲಿ ಪೂಜೆ ನೆರವೇರಿಸಿದ್ದು ಕೂಡ ಶಾಸಕರೇ, ನಂತರ ಕಾಮಗಾರಿ ಸರಿಯಾಗಿ ನಡಿತಾ ಇದೆಯೋ ಇಲ್ಲವೋ ಅನ್ನೋದನ್ನ ವೀಕ್ಷಿಸಿದ್ದು ಕೂಡ ಶಾಸಕರೆ ! ಇದೀಗ ಕಾಮಗಾರಿ ಸರಿಯಾಗಿ ಆಗಿಲ್ಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ಮಾಡಿಲ್ಲ ಕಳಪೆ ಮಟ್ಟದಿಂದ ಆಗಿದೆ ಎಂದು ಆರೋಪ ಮಾಡುತ್ತಿರುವುದು ಶಾಸಕರೇ. ಹಾಗಾದರೆ ಶಾಸಕರು ಕಾಮಗಾರಿ ವೀಕ್ಷಿಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ. ಶಾಸಕರು ಕೂಡ ಈ ಕಾಮಗಾರಿ ವಿಫಲಗೊಳ್ಳಲು ನೇರ ಕಾರಣರಾಗಿದ್ದಾರೆ, ಈ ಭ್ರಷ್ಟಾಚಾರದಲ್ಲಿ ಶಾಸಕರ ಪ್ರಭು ಚೌಹಾಣ್ ಅವರ ಪಾತ್ರವು…

Read More

ಬೆಳಗಾವಿ: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತುತ 5,436 ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಆರ್‌ ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಸಂತೋಷ್ ಲಾಡ್ ಎಂಎಲ್‌ ಸಿ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದರು. ರಾಜ್ಯದ ಕನಿಷ್ಠ ವೇತನ ಅಧಿಸೂಚನೆಯ ಪ್ರಕಾರ ಗ್ರಾಮ ಪಂಚಾಯಿತಿ ಗ್ರಂಥಾಲಯ ಸಿಬ್ಬಂದಿಗೆ ವೇತನ ನೀಡದಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಲವಾರು ದೂರುಗಳು ಬಂದಿವೆ. ಎರಡು ದುಃಖಕರ ಪ್ರಕರಣಗಳು ವರದಿಯಾಗಿವೆ, ನೆಲಮಂಗಲ ತಾಲ್ಲೂಕಿನ ಕಲಾಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರಾಗಿದ್ದ ರಾಮಚಂದ್ರಪ್ಪ ಅವರನ್ನು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಸೇವೆಯಿಂದ ತೆಗೆದುಹಾಕಲಾಯಿತು, ಅವರು ಅಕ್ಟೋಬರ್ 28 ರಂದು ನಿಧನರಾದರು. ಇನ್ನೊಂದು ಪ್ರಕರಣದಲ್ಲಿ ಸೇಡಂ ತಾಲ್ಲೂಕಿನ ಮಲ್ಖೇಡ್ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯವತಿ ಅಗ್ನಿಮಠ ಅಕ್ಟೋಬರ್ 13 ರಂದು ನಿಧನರಾದರು ಎಂದು ಮಾಹಿತಿ ನೀಡಿದರು. ಪಂಚಾಯತ್ ಮಟ್ಟದಲ್ಲಿ ವಿಳಂಬದಿಂದಾಗಿ…

Read More

ತುರುವೇಕೆರೆ: ಬೆಂಬಲ ಬೆಲೆಯಡಿ ರಾಗಿ ಮಾರಾಟ ಮಾಡಲು ತಾಲ್ಲೂಕಿನ ಎಂಟು ಸಾವಿರಕ್ಕೂ ಹೆಚ್ಚು ರೈತರು ಈಗಾಗಲೇ ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ರಾಗಿ ಖರೀದಿ ಕೇಂದ್ರದ ವ್ಯವಸ್ಥಾಪಕಿ ಚೇತನ ತಿಳಿಸಿದ್ದಾರೆ. ಡಿಸೆಂಬರ್ 15ರಂದು ರಾಗಿ ನೋಂದಣಿಗೆ ಕೊನೆ ದಿನ. ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಕ್ಟೋಬರ್ 23ರಿಂದ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ಎಂಟು ಸಾವಿರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಒಟ್ಟು 1.93 ಲಕ್ಷ ಕ್ವಿಂಟಾಲ್ ರಾಗಿ ಮಾರಾಟ ಮಾಡಲು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದಿದ್ದಾರೆ. ಪ್ರತಿ ಕ್ವಿಂಟಲ್ ರಾಗಿಗೆ  ರೂ.4,886 ರೈತರಿಗೆ ದೊರೆಯಲಿದೆ. ಜನವರಿ ಮೊದಲ ವಾರ ಅಥವಾ ಎರಡನೇ ವಾರದಿಂದ ರಾಗಿ ಖರೀದಿ ಮಾಡುವ ಸಾಧ್ಯತೆ ಇದೆ ಎನ್ನುತ್ತಾರೆ ಖರೀದಿ ಕೇಂದ್ರದ ಅಧಿಕಾರಿಗಳು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ನಗರದ ವಿವಿಧೆಡೆ ಗಾಂಜಾ, ಮಾದಕ ವಸ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಂಗಸಂದ್ರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬೆಂಗಳೂರಿನ ಶೇಖ್‌ ಸಾಹಿಲ್‌ ಅಕ್ಟರ್ (24), ಫಾರೂಖ್ ಹುಸೇನ್ (45), ನಗರದ ವಸೀಂ (27), ರೋಷನ್‌ ಸಮೀರ್ (29), ನಯಿಮ್ (38), ಮೈಸೂರಿನ ಶೋಯೆಬ್ (22) ಎಂಬುವರನ್ನು ತಿಲಕ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 711 ಲಕ್ಷ ಮೌಲ್ಯದ 8 ಕೆ.ಜಿ ಗಾಂಜಾ ಸೊಪ್ಪು, 178 ಸಾವಿರ ಬೆಲೆಯ 12 ಗ್ರಾಂ ಎಂಡಿಎಂಎ ಮಾದಕ ವಸ್ತು, 714 ಲಕ್ಷದ 2 ಕಾರು ಜಪ್ತಿ ಮಾಡಿದ್ದಾರೆ. ‘ಮಹಾರಾಷ್ಟ್ರ, ಒಡಿಶಾ, ಛತ್ತೀಸಗಡ ರಾಜ್ಯಗಳಿಂದ ಗಾಂಜಾ, ಮಾದಕ ವಸ್ತು ತರುತ್ತಿದ್ದರು. ನಗರದ ವಿವಿಧೆಡೆ, ಹೊರವಲಯದ ಶಾಲಾ– ಕಾಲೇಜು ಸಮೀಪ ಮಾರಾಟ ಮಾಡುತ್ತಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಗುರುವಾರ ತಿಳಿಸಿದರು. ತಿಲಕ್‌ ಪಾರ್ಕ್‌ ಠಾಣೆ ಇನ್‌ ಸ್ಪೆಕ್ಟರ್ ಜಿ.ಪುರುಷೋತ್ತಮ, ಸಬ್ ಇನ್‌ಸ್ಪೆಕ್ಟರ್‌ ಗಳಾದ ಸಂಜಯ್‌ ಕುಮಾರ್ ಕಾಂಬ್ಳೆ, ಪದ್ಮಾವತಿ,…

Read More

ತಿಪಟೂರು: ತಾಲ್ಲೂಕಿನ ಹಾಲುಗೌಡನಕಟ್ಟೆ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.1 ಲಕ್ಷ ಮೊತ್ತದ ಡಿಡಿ ಮಂಜೂರುಗೊಳಿಸಿದ್ದಾರೆ ಎಂದು  ತಾಲ್ಲೂಕಿನ ಯೋಜನಾಧಿಕಾರಿ ಉದಯ್ ಕೆ. ತಿಳಿಸಿದರು. ಇದೇ ವೇಳೆ  ಗ್ರಾಮಸ್ಥರಿಗೆ ಚೆಕ್ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಆನಂದ್ ಕುಮಾರ್,ಚಂದ್ರಯ್ಯ, ಗುಡಿಗೌಡರಾದ ಲೋಕೇಶ್ ಕಮಿಟಿ ಅಧ್ಯಕ್ಷರಾದ ಮಹಲಿಂಗಪ್ಪ, ಸದಸ್ಯರಾದ ಚಿಕ್ಕಣ್ಣ ಯೋಜನೆಯ ತಾಲ್ಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಮೇಲ್ವಿಚಾರಕಿ ರಮ್ಯಾ, ಸೇವಾಪ್ರತಿನಿಧಿ ಮಂಜುಳ ಹಾಗೂ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೆಂಗಳೂರು:  ಕರ್ನಾಟಕದಲ್ಲಿ ಚಳಿಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬೆಳಗಿನ ಜಾವ ತಾಪಮಾನ ತೀವ್ರವಾಗಿ ಇಳಿಕೆಯಾಗಿದ್ದು, ಚಳಿ ಜನರನ್ನು ಗಢಗಢ ನಡುಗಿಸುವಂತಾಗಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಈ ಸ್ಥಿತಿ ಇಂದು ಕೂಡ ಮುಂದುವರಿಯುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಭಾಗಗಳಲ್ಲಿಯೂ ಸಹ ಶೀತಗಾಳಿ ಬೀಸುವ ಸಾಧ್ಯತೆ ಇದೆ. ಚಳಿಗಾಲ ಮುಂದುವರೆದಂತೆ ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಹಲವಾರು ಜಿಲ್ಲೆಗಳಾದ ಬೀದರ್, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ತೀವ್ರ ಶೀತಗಾಳಿ ಬೀಸಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಕೊಪ್ಪಳ, ಬಳ್ಳಾರಿ, ವಿಜಯನಗರ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ ಮತ್ತು ಕೋಲಾರದಂತಹ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಶೀತಗಾಳಿ ಬೀಸಲಿದೆ. ಮುಂದಿನ 5 ದಿನಗಳವರೆಗೆ ರಾಜ್ಯದಲ್ಲಿ ಶೀತ ವಾತಾವರ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ 12.9°…

Read More