Author: admin

ಕೊರಟಗೆರೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ರವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ  ಡಾ.ಜಿ.ಪರಮೇಶ್ವರ ರವರ  ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ  ಮಠಾಧೀಶರುಗಳು, ಸಾರ್ವಜನಿಕರು ಬೃಹತ್ ಪ್ರತಿಭಟನಾ ರ‍್ಯಾಲಿ ಪಟ್ಟಣದಲ್ಲಿ ನಡೆಸಿದರು. ಕರ್ನಾಟಕ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗುತ್ತಿದ್ದಂತೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಡಾ.ಜಿ.ಪರಮೇಶ್ವರ ರವರ ಅಭಿಮಾನಿಗಳು ಬೃಹತ್ ಮೆರವಣಿಗೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಕೊರಟಗೆರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಪ್ರಧಾನ ರಸ್ತೆ ಮೂಲಕ ಮುಖ್ಯ ಬಸ್‌ ಸ್ಟ್ಯಾಂಡ್ ವೃತ್ತದವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಯುವಕರು ಬೈಕ್ ರ‍್ಯಾಲಿಯೊಂದಿಗೆ ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ರರೇ ಆಗಬೇಕು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ಮೊದಲ ಆದ್ಯತೆ ಡಾ.ಜಿ.ಪರಮೇಶ್ವರ್ ರವರಿಗೆ ನೀಡಬೇಕೆಂದು ಘೋಷಣೆ ಕೂಗಿದರು, ಮೆರವಣಿಗೆಯಲ್ಲಿ ಮಹಿಳೆಯರು ಬಹುದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಡಾ.ಜಿ.ಪರಮೇಶ್ವರರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೇ ಬೇಕು, ಕಾಂಗ್ರೆಸ್ ಪಕ್ಷಕ್ಕಾಗಿ ಅವರು ಸಾಕಷ್ಟು ದುಡಿದಿದ್ದಾರೆ, ತ್ಯಾಗ ಮಾಡಿದ್ದಾರೆ, ಸಜ್ಜನ ರಾಜಕಾರಣಿಯಾದ ಅವರನ್ನು ದಲಿತ…

Read More

ಸರಗೂರು: ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ, ಇಲ್ಲಿನ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಜಿಎಂಟಿ ಸಂಯೋಜಕ ಲಯನ್ಸ್ ಜಯಕುಮಾರ್ ತಿಳಿಸಿದರು. ಪಟ್ಟಣದ ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಇತ್ತೀಚೆಗೆ ನಡೆದ 36ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಸೌರಭ 36 ರ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಸಂಸ್ಥೆಯ ರೀತಿ ಹಲವು ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಶಾಲೆಯು ಕೇವಲ ಶೈಕ್ಷಣಿಕ ಸೇವೆಯನ್ನು ಅಷ್ಟೇ ಅಲ್ಲದೆ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರಲ್ಲದೇ, ನಾನೂ ಸಹ ಶಾಲೆಯ ನೂತನ ಕಟ್ಟಡಕ್ಕೆ 50 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತೇನೆ  ಎಂದು ಭರವಸೆ ನೀಡಿದರು. ಲಯನ್ಸ್ ಅಕಾಡೆಮಿ ಶಾಲೆಯ ಕಾರ್ಯದರ್ಶಿ ಲಯನ್ ಎಸ್.ಎಸ್.ಪ್ರಭುಸ್ವಾಮಿ ಪ್ರಾಸ್ತವಿಕ ನುಡಿ ನುಡಿದು, ನಮ್ಮ ಶಾಲೆಯು ತಾಲೂಕಿನಲ್ಲಿಯೇ ಉತ್ತಮ ಆಂಗ್ಲ ಮಾಧ್ಯಮದ ಪ್ರಥಮ ಶಾಲೆಯಾಗಿ ಜನ್ಮ ತಾಳಿತು. ಕಳೆದ 36 ವರ್ಷಗಳಿಂದ ನಮ್ಮ ಲಯನ್ಸ್…

Read More

ತುಮಕೂರು:  ಬಸ್ಸಿಗಾಗಿ ಕಾಯುತ್ತಿದ್ದ ದಂಪತಿಯನ್ನು ಡ್ರಾಪ್ ನೀಡುವ ನೆಪದಲ್ಲಿ ಕರೆದೊಯ್ದು ಮಹಿಳೆಯ ಕಿವಿಯಲ್ಲಿದ್ದ ಓಲೆ ಹಾಗೂ ಸರವನ್ನು ದೋಚಿರುವ ಘಟನೆ ಪಾವಗಡ ತಾಲ್ಲೂಕಿನ ಕೆ.ರಾಂಪುರ-ನೀಲಮ್ಮನಹಳ್ಳಿ ಗೇಟ್ ಬಳಿ ನಡೆದಿದೆ. ಘಟನೆಯ ವಿವರ: ದೊಡ್ಡಹಳ್ಳಿ ಗ್ರಾಮದ ಗುಂಡಮ್ಮ ಹಾಗೂ ಆಕೆಯ ಪತಿ ಅಮರನಾರಾಯಣ ತಮ್ಮ ಸ್ವಗ್ರಾಮಕ್ಕೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದರು. ಇದನ್ನು ಕಂಡ ಅಪರಿಚಿತ ವ್ಯಕ್ತಿಗಳು ಎರಡು ಬೈಕ್‌ ಗಳಲ್ಲಿ ಬಂದು ಆಕೆಯ ಪತಿ ಅಮರನಾರಾಯಣ ಅವರನ್ನ ಒಂದು ಬೈಕ್‌ ನಲ್ಲಿ ಮತ್ತೊಂದರಲ್ಲಿ ಗುಂಡಮ್ಮ ಅವರನ್ನು ಕುಳ್ಳರಿಸಿಕೊಂಡು ಕರೆದೊಯ್ದಿದ್ದಾರೆ. ಗುಂಡಮ್ಮ ಹತ್ತಿಸಿಕೊಂಡಿದ್ದ ಬೈಕ್ ಸವಾರ ಹಿಂದೆ ಬರುತ್ತಿದ್ದು, ಮಾರ್ಗಮಧ್ಯೆ ನೀಲಮ್ಮನಹಳ್ಳಿ ಕೆ.ರಾಂಪುರದ ಮಧ್ಯದ ಕಾಲುದಾರಿಗೆ ವಾಹನವನ್ನು ತಿರುಗಿಸಿದಾಗ ಗುಂಡಮ್ಮ ಅವರು ಏಕೆ ಹೀಗೆ ಬೈಕನ್ನು ತಿರುಗಿಸುತ್ತಿದ್ದೀಯಾ, ನಿಲ್ಲಿಸುವಂತೆ ಗೋಗರೆದರೂ ಆತ ಬೈಕನ್ನು ನಿಲ್ಲಿಸದೆ ಇದ್ದಾಗ ಗುಂಡಮ್ಮ ಅವರು ಬೈಕ್ ಸವಾರನ ಹಿಡಿದು ಎಳೆದಾಡಿ ನಿಲ್ಲಿಸುವಂತೆ ಕೇಳಿದರು. ಈ ವೇಳೆ ಕಳ್ಳ ಬೈಕ್‌ ನ್ನು ನಿಲ್ಲಿಸದೆ ಗುಂಡಮ್ಮ ಅವರ ಕಿವಿಯಲ್ಲಿದ್ದ ಓಲೆಗಳು ರಕ್ತ ಬರುವ…

Read More

“ನಾವು ಏಕೆ ಹೀಗೆ?” ಎಂದು ಯೋಚಿಸುತ್ತಾ ಹೋದರೆ ಬಹುಶ: ಉತ್ತರ ಸಿಗುವುದು ಕಷ್ಟ ಎನಿಸಬಹುದು. ಮನುಷ್ಯ ಪ್ರಾಣಿ ಪ್ರಪಂಚದಲ್ಲೇ ಅತ್ಯಂತ ವಿಕಾಸ ಹೊಂದಿ ಮಿಕ್ಕಲ್ಲಾ ಪ್ರಾಣಿಗಳಿಗಿಂತ ಅತ್ಯಂತ ಮುಂದುವರೆದ ಬುದ್ಧಿವಂತ ಪ್ರಾಣಿ ಪ್ರಭೇದ. ನಾವು ಒಂದು ಪ್ರಾಣಿ ಎಂಬ ಅರಿವು ನಮಗೆ ತಿಳಿದಿದ್ದರೂ ಕೂಡ ನಮ್ಮನ್ನು ನಾವು “ಮನುಷ್ಯ” ಎಂಬ ಅನ್ವರ್ಥ ಪದ ಅರ್ಥೈಸಿ ಅಥವಾ ಕೊಟ್ಟು ಹಾಗೆಯೇ ಕರೆದುಕೊಳ್ಳುತ್ತೇವೆ. ಮನುಷ್ಯ ಎಂದು ಕರೆದುಕೊಳ್ಳುವ ಮೂಲಕ ಪ್ರಾಣಿಗಳನ್ನು “ಪ್ರಾಣಿ” ಎಂಬ ಪ್ರತ್ಯೇಕ ಸ್ಥಿತಿಯಲ್ಲಿ ನೋಡುವ ಮನಸಿಗರಾಗುತ್ತೇವೆ. ಇದಕ್ಕೆ ಕಾರಣ ಏನಿರಬಹುದು? ಈ ವಿಚಾರವನ್ನು ಅತ್ಯಂತ ವಿಶೇಷವಾಗಿ ಯೋಚಿಸುವ ಅಗತ್ಯ ಇಲ್ಲವೆಂದು ಅಂದುಕೊಳ್ಳುತ್ತಾ; ಇದಕ್ಕೇಕೆ ಇಷ್ಟೊಂದು ಮಹತ್ವ ಕೊಡಬೇಕು? ಎಂದು ಕೂಡ ಭಾವಿಸಬಹುದು, ಏಕೆಂದರೆ ಎಲ್ಲಾ ಪ್ರಾಣಿಗಳನ್ನು ತನ್ನ ಹತೋಟಿಗೆ ಇಟ್ಟುಕೊಳ್ಳಬಲ್ಲ ಜಾಣ್ಮೆ ಮನುಷ್ಯನಲ್ಲಿದೆ ಎಂಬುದಾಗಿಯೇ? ಹುಲಿ, ಸಿಂಹದಂತಹ ಎಂತಹ ಕ್ರೂರ ಮೃಗಗಳಾಗಲೀ, ಆನೆಯಂತ ಶಕ್ತಿಶಾಲಿ ಪ್ರಾಣಿಯಾಗಲೀ ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾನೆ ಎಂಬುದಾಗಿಯೇ? ಇದಕ್ಕೆ ಉತ್ತರ ಇದ್ದರೂ ಇರಬಹುದು ಆದರೆ ವೈರಸ್, ಬ್ಯಾಕ್ಟೀರಿಯದಂತಹ…

Read More

ತಿಪಟೂರು: ರಾಜ್ಯಮಟ್ಟದ ಹೊನಲು ಬೆಳಕಿನ ಕೋಕೋ ಪಂದ್ಯಾವಳಿ ಡಿಸೆಂಬರ್ 18ರಿಂದ ಡಿಸೆಂಬರ್ 21ರವರೆಗೆ ತುಮಕೂರು ಜಿಲ್ಲೆಯ ತಿಪಟೂರು ಕಲ್ಪತರು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಭಾರತೀಯ ಕೋಕೋ ಫೆಡರೇಶನ್ ಉಪಾಧ್ಯಕ್ಷ ಲೋಕೇಶ್ವರ್ ತಿಳಿಸಿದರು. ಈ ಸಂಬಂಧ ನಡೆಸಿದ ಸಭೆಯಲ್ಇ ಮಾತನಾಡಿದ ಅವರು,  83 ಪುರುಷರು ಹಾಗೂ 47 ಮಹಿಳಾ ತಂಡಗಳು ಸೇರಿ ದಾಖಲೆಯ 130 ತಂಡಗಳು ಭಾಗವಹಿಸಲಿವೆ. ಈ  ಪಂದ್ಯಾವಳಿಗಾಗಿ ನಾಲ್ಕು ಅಂಕಣಗಳನ್ನು ಸಿದ್ಧಪಡಿಸಲಾಗಿದೆ, ಒಂದು ಅಂಕಣ ಸಂಪೂರ್ಣ ಸಿಂಥೆಟಿಕ್ ಮ್ಯಾಟ್ ಬಳಸಿ ಸಿದ್ದಗೊಳಿಸಲಾಗುತ್ತಿದೆ ಹಾಗೂ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನುಭವವಿರುವ ತಿಪಟೂರು ಸ್ಪೋರ್ಟ್ಸ್ ಕ್ಲಬ್ ಪಂದ್ಯಾವಳಿಗಳನ್ನು ನಡೆಸಲು ಸಂಪೂರ್ಣ ತಯಾರಾಗಿದೆ ಎಂದರು. ಗೆದ್ದ ತಂಡಗಳಿಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ಗಳನ್ನು ಕೋಕೋ ಸಂಸ್ಥೆ ನೀಡುತ್ತದೆ. ಬಹುಮಾನವನ್ನು ತಿಪಟೂರು ಸ್ಪೋರ್ಟ್ಸ್ ಕ್ಲಬ್ ನೀಡುತ್ತಿದೆ ಎಂದು ತಿಳಿಸಿದರು. ಈ ಸಭೆಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಸೊಪ್ಪು ಗಣೇಶ್, ಮಾಜಿ ಸದಸ್ಯ ಭಾರತಿ ಮತ್ತು ರೇಣು ಹಲವಾರು ಕಾರ್ಯಕರ್ತರು ಇದ್ದರು ವರದಿ: ಆನಂದ್, ತಿಪಟೂರು…

Read More

ಬೆಂಗಳೂರು:  ರಾಜ್ಯದಲ್ಲಿ 518 ಸ್ಥಳಗಳಲ್ಲಿ ಆಯೋಜಿಸಲಾದ ಪಥಸಂಚಲನದಲ್ಲಿ ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ,  ಆದರೆ ಕಾಂಗ್ರೆಸ್ ನಾಯಕರು ದ್ವೇಷ ರಾಜಕಾರಣ ಮಾಡುತ್ತಿರುವುದು ಖೇದಕರ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ರಾಜ್ಯದಲ್ಲಿ, 2025ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ 518 ಸ್ಥಳಗಳಲ್ಲಿ ಆಯೋಜಿಸಲಾದ ಪಥಸಂಚಲನದಲ್ಲಿ ಒಂದು ಕಡೆಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎನ್ನುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೀಡಿದ ವರದಿಯನ್ನು ಉಲ್ಲೇಖಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸೋಮಣ್ಣ ಪ್ರತಿಕ್ರಿಯೆ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ದೇಶಭಕ್ತರ ಸಮೂಹ. ದೇಶಸೇವೆಯನ್ನೇ ಧ್ಯೇಯವಾಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಸಂಘದ ವಿರುದ್ಧ ಕಾಂಗ್ರೆಸ್ ನಾಯಕರು ದ್ವೇಷ ರಾಜಕಾರಣ ಮಾಡುತ್ತಿರುವುದು ಖೇದಕರ,  ರಾಜ್ಯದಲ್ಲಿ, 2025ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ 518 ಸ್ಥಳಗಳಲ್ಲಿ ಆಯೋಜಿಸಲಾದ ಪಥಸಂಚಲನದಲ್ಲಿ ಒಂದು ಕಡೆಯೂ ಯಾವುದೇ ಅಹಿತಕರ ಘಟನೆ ನಡೆಯದಿರುವುದನ್ನು ಸ್ವತಃ ರಾಜ್ಯದ ಗೃಹ ಸಚಿವರೇ ಉಲ್ಲೇಖಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. RSS ವಿರುದ್ಧ ಸದಾ ವಿಷಕಾರುವ, ಪಥಸಂಚಲನದಿಂದ…

Read More

ತುಮಕೂರು: ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವನ್ನಪ್ಪಿವೆ. ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 90 ಶಿಶುಗಳು ಉಸಿರು ಚೆಲ್ಲಿವೆ ಎಂದು ವರದಿ ತಿಳಿಸಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಯಿ ಹಾಗೂ ಶಿಶು ಮರಣ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಸಿ.ಆರ್.ಮೋಹನ್ ಈ ಕುರಿತು ಮಾಹಿತಿ ಹಂಚಿಕೊಂಡರು. ಪ್ರಸಕ್ತ ವರ್ಷದಲ್ಲಿ ಗುಬ್ಬಿ, ಮಧುಗಿರಿ, ಶಿರಾ, ತಿಪಟೂರು ತಾಲ್ಲೂಕುಗಳಲ್ಲಿ ತಲಾ 1, ತುಮಕೂರಿನಲ್ಲಿ 2 ಸೇರಿ 6 ತಾಯಂದಿರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 12, ಗುಬ್ಬಿ, ಮಧುಗಿರಿಯಲ್ಲಿ ತಲಾ 7, ಕೊರಟಗೆರೆ 5, ಕುಣಿಗಲ್ 8, ಪಾವಗಡ 10, ಶಿರಾ 13, ತಿಪಟೂರು 15, ತುರುವೇಕೆರೆ 9 ಹಾಗೂ ತುಮಕೂರಿನ 90 ಸೇರಿದಂತೆ ಒಟ್ಟು 176 ಶಿಶುಗಳು ಮರಣ ಹೊಂದಿವೆ ಎಂದು ಅವರು ತಿಳಿಸಿದ್ದಾರೆ. 2024ರ ಏಪ್ರಿಲ್‌ನಿಂದ 2025ರ ಮಾರ್ಚ್ ವರೆಗೆ ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರು ತಾಲ್ಲೂಕಿನಲ್ಲಿ ತಲಾ 2,…

Read More

ಪಾವಗಡ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಧುಗಿರಿ ಇವರ ವತಿಯಿಂದ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಂಗಳವಾರ  ಏರ್ಪಡಿಸಿದ ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾವಗಡ ಪಟ್ಟಣದ ಹೆಸರಾಂತ ಜ್ಞಾನ ಭೋದಿನಿ ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾದ ಏಕೇಶ್ ಎಸ್. ಮತ್ತು ಈಶ್ವರ್ ರವರು ವಿಜ್ಞಾನ ಶಿಕ್ಷಕರಾದ ಗುಣತೇಜ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅಡೆತಡೆಗಳನ್ನು ತಡೆಯುವ ರೋಬೋಟಿಕ್ ಕಾರ್ (OBSTACLE AVOIDING ROBOTIC CAR)ನ್ನು ಪ್ರದರ್ಶಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಇವರಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆ: ಮಧುಗಿರಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( DIET) ಮಧುಗಿರಿ ರವರ ವತಿಯಿಂದ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯ 10 ನೇ ತರಗತಿಯ  ವಿದ್ಯಾರ್ಥಿ ಹೃತಿಕ್ ಹೆಚ್. ವೈಯಕ್ತಿಕ ವಿಭಾಗದಲ್ಲಿ  ಪ್ರಥಮ…

Read More

ತುಮಕೂರು: ಜಿಲ್ಲೆಯಲ್ಲಿ ಬಹುತೇಕ ಉರ್ದು ಶಾಲೆಗಳು ಇನ್ನೂ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ 5–6 ವರ್ಷಗಳಿಂದ ಇವುಗಳ ಬಾಡಿಗೆಯೇ ಪಾವತಿಸಿಲ್ಲ ಎಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಲ್ಲಿ ಪಿಎಂ 15 ಅಂಶಗಳ ಕಾರ್ಯಕ್ರಮ ಸಮಿತಿ ಸದಸ್ಯ ರೆಹಮಾನ್ ಈ ಕುರಿತು ಪ್ರಸ್ತಾಪಿಸಿದರು. ‘ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ನೂರಾರು ಶಾಲೆಗಳಿಗೆ ಸ್ವಂತ ಕಟ್ಟಡ ಇಲ್ಲ. ಎಲ್ಲಿಯೂ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಶೌಚಾಲಯದ ವ್ಯವಸ್ಥೆಯೂ ಇಲ್ಲ. ಮಾಲೀಕರನ್ನು ಕೇಳಿದರೆ ಬಾಡಿಗೆ ಕೊಟ್ಟಿಲ್ಲ ಎನ್ನುತ್ತಿದ್ದಾರೆ. 6 ವರ್ಷದಿಂದ ಬಾಡಿಗೆ ಹಣ ಪಾವತಿ ಮಾಡಿಲ್ಲ’ ಎಂದು ಸಭೆಯ ಗಮನಕ್ಕೆ ತಂದರು. ‘ಜಿಲ್ಲೆಯಲ್ಲಿ ಎಷ್ಟು ಉರ್ದು ಶಾಲೆಗಳಿವೆ? ಎಷ್ಟು ಸ್ವಂತ ಕಟ್ಟಡಗಳಿವೆ? ಎಷ್ಟಕ್ಕೆ ಬಾಡಿಗೆ ನೀಡಲಾಗುತ್ತಿದೆ?’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಬ್ಬಿರ್ ಅಹ್ಮದ್‌ ಅವರನ್ನು ಪ್ರಶ್ನಿಸಿದರು. ಅಧಿಕಾರಿ ಯಾವುದಕ್ಕೂ ಉತ್ತರಿಸಲಿಲ್ಲ. ಮುಂದಿನ ಸಭೆಗೆ ಅಗತ್ಯ…

Read More

ಗುಬ್ಬಿ: 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಪಡಿತರ ತರಲು ತೊಂದರೆಯಾಗುತ್ತಿದ್ದ ಕಾರಣ ಸರ್ಕಾರ ಮನೆಬಾಗಿಲಿಗೆ ಪಡಿತರ ವಿತರಿಸುವ ಅನ್ನ ಸುವಿಧಾ ಯೋಜನೆ ಜಾರಿಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್‌ ತಿಳಿಸಿದರು. ಸೋಮವಾರ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿಯಲ್ಲಿ ಆಹಾರ ಅದಾಲತ್‌ ಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಆರಂಭಿಸಿರುವ ಈ ಯೋಜನೆಯಡಿ 75 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಮಾತ್ರ ಇರುವ ಕುಟುಂಬಗಳಿಗೆ ಸಮೀಪದ ನ್ಯಾಯಬೆಲೆ ಅಂಗಡಿಯವರು ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುತ್ತಾರೆ. ಇದರಿಂದ ಪಡಿತರವನ್ನು ಪಡೆಯಲು ಅಲೆದಾಡುವುದು ತಪ್ಪುತ್ತದೆ ಎಂದು ಹೇಳಿದರು. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಅನುಕೂಲವಾಗುವ ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕಿ ಸೌಮ್ಯಾ ಮಾತನಾಡಿ, 75 ವರ್ಷ ಮೇಲ್ಪಟ್ಟ ಹಿರಿಯ…

Read More