Author: admin

ಮೂರು ದಿನಗಳ ಹಿಂದೆ ಕೆ. ಆರ್. ಪುರ-ಬೈಯಪ್ಪನಹಳ್ಳಿ ನಡುವೆ ಮೆಟ್ರೊ ಪ್ರಾಯೋಗಿಕ ಸಂಚಾರ ಆರಂಭಿಸಿದ್ದ ಬಿಎಂಆರ್‌ಸಿಎಲ್ ಇದೀಗ ಶನಿವಾರ ಕೆಂಗೇರಿ-ಚಲ್ಲಘಟ್ಟ ನಡುವೆ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದೆ. ಬೆಳಿಗ್ಗೆ 11. 27ರಿಂದ ಸಂಜೆ 4. 15ರ ವರೆಗೆ ಹಲವು ಬಾರಿ ಮೆಟ್ರೊ ರೈಲು ಸಂಚರಿಸಿತು. ಮೆಟ್ರೊ ರೈಲಿನಲ್ಲಿ ಬಿಎಂಆರ್‌ಸಿಎಲ್ ತಾಂತ್ರಿಕ ತಂಡವು ಸಂಚರಿಸಿ ಪರಿಶೀಲಿಸಿತು. ನೇರಳೆ ಮಾರ್ಗದಲ್ಲಿನ ವಿಸ್ತರಿತ ಕಾಮಗಾರಿ ಇದಾಗಿದ್ದು, ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವೆ 2. 5 ಕಿಲೋಮೀಟರ್ ಹಾಗೂ ಕೆಂಗೇರಿ-ಚಲ್ಲಘಟ್ಟದ ನಡುವೆ 1.9 ಕಿ. ಮೀ ಕಾಮಗಾರಿ ಬಾಕಿ ಉಳಿದಿತ್ತು. ಎರಡೂ ಕಡೆಗಳಲ್ಲಿ ಕಾಮಗಾರಿ ಮುಗಿದಿದೆ. ಕೆಲವು ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಿ, ಎಲ್ಲ ತಾಂತ್ರಿಕ ತೊಂದರೆಗಳು ಬಗೆಹರಿದ ಬಳಿಕ ಆಗಸ್ಟ್ ಅಂತ್ಯದ ಒಳಗೆ ವಾಣಿಜ್ಯ ಸಂಚಾರ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಶಾಸಕ ಪ್ರದೀಪ್ ಈಶ್ವರ್ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಖಾಕಿ ಶರ್ಟ್ ಧರಿಸಿ ಆಟೋ ಚಲಾಯಿಸುತ್ತಾ ಕಾರ್ಯಕ್ರಮಕ್ಕೆ ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಚಿಕ್ಕಬಳ್ಳಾಪುರದ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಟೋ ಚಾಲಕರಿಗೆ 5,000 ರೂ. ಸಹಾಯ ಧನ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದು ಶಾಸಕ ಪ್ರದೀಪ್ ಈಶ್ವರ್ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಟೋ ಚಾಲಕರ ಕಷ್ಟ ನನಗೆ ಗೊತ್ತಿದೆ. ನಾನು ಕೂಡ ಕಷ್ಟ ಪಟ್ಟಿದ್ದೀನಿ. ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಮೂಟೆ ಹೊತ್ತಿದ್ದೀನಿ. 50 ರೂ. ಸಿಗುತ್ತೆ ಅಂತ ಹಿಂದೆ ಆಟೋ ಓಡಿಸಿದ್ದೀನಿ ಎಂದು ನೆನಪಿಸಿಕೊಂಡರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಶಿವಮೊಗ್ಗದಲ್ಲಿ ಟಿವಿ, ಸ್ಟೇಬಲೈಸರ್‌ ಮಾರಾಟ ಮಾಡಿದ್ದು ಅದರ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಕಬ್ಬಿಣದ ಚೇರ್‌ ನಿಂದ ಹಲ್ಲೆ (Assault) ನಡೆಸಿದ ಆರೋಪ ಕೇಳಿ ಬಂದಿದೆ. ನ್ಯೂ ಮಂಡ್ಲಿ ಗಂಧರ್ವ ನಗರದ ಚಾಲಕ ರವಿಕುಮಾರ್‌ ಮೇಲೆ ಹಲ್ಲೆಯಾಗಿದೆ. ತೌಸು ಎಂಬಾತನಿಗೆ ರವಿಕುಮಾರ್‌ ಟಿವಿ ಮತ್ತು ಸ್ಟೇಬಲೈಸರ್‌ ಮಾರಾಟ ಮಾಡಿದ್ದರು. 4 ಸಾವಿರ ರೂ. ಕೊಡಬೇಕಿದ್ದ ತೌಸು 1 ಸಾವಿರ ರೂ. ಮಾತ್ರ ನೀಡಿದ್ದ. 10 ದಿನ ಕಳೆದರು ಬಾಕಿ 3 ಸಾವಿರ ರೂ. ಹಣ ಕೊಟ್ಟಿರಲಿಲ್ಲ. ಜು.28ರಂದು ತೌಸು ಓ.ಟಿ.ರಸ್ತೆಯ ಬಾರ್‌ ನಲ್ಲಿದ್ದಾಗ ರವಿಕುಮಾರ್‌ ಹಣ ಕೇಳಿದ್ದಾರೆ. ಆಗ ತೌಸು ಅವಾಚ್ಯವಾಗಿ ನಿಂದಿಸಿದ್ದು, ಆತನ ಜೊತೆಗಿದ್ದವನು ಕಬ್ಬಿಣದ ಚೇರ್‌ ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU ಯೂಟ್ಯೂಬ್…

Read More

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಸಂಬಂಧಿಸಿದಂತೆ ಲಿಖಿತ ಸಾರಾಂಶವುಳ್ಳ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದೆ. ಸಿಡಿ ಪ್ರಕರಣದ ತನಿಖೆಗೆ ಎಸ್‌ ಐ ಟಿ ರಚನೆಯ ಸಿಂಧುತ್ವ ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಎಫ್‌ ಐ ಆರ್ ರದ್ದುಪಡಿಸುವಂತೆ ಕೋರಿ ಪ್ರಕರಣದ ಸಂಸ್ಥೆ ಹಾಗೂ ಆರೋಪಿಗಳಾದ ಎಸ್ ಶ್ರವಣ್ ಕುಮಾರ್ ಹಾಗೂ ಬಿ ಎಂ ನರೇಶ್ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಲಿಖಿತ ಸಾರಾಂಶ ಸಲ್ಲಿಸುವಂತೆ ನಿರ್ದೇಶನ: ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಲಿಖಿತ ಸಾರಾಂಶ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ತರಕಾರಿ ಬೆಲೆ ಗಗನಕ್ಕೇರಿದೆ. ಟೊಮೆಟೋ ದರ 100ರೂ ಗಡಿದಾಟಿದೆ. ಹೀಗಿರುವಾಗ, ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ. 3 ಹೆಚ್ಚಳ ಮಾಡಲಾಗಿದೆ. ಅಗಸ್ಟ್ 1 ಅಂದರೆ ನಾಳೆಯಿಂದಲೇ ನೂತನ ದರ ಜಾರಿಗೆ ಬರಲಿದೆ. ಯಾವ ಹಾಲಿನ ದರ ಬೆಲೆ ಎಷ್ಟೆಷ್ಟು ಹೆಚ್ಚಳ ಎನ್ನುವುದನ್ನು ನೋಡುವುದಾದ್ರೆ ಅದರ ಮಾಹಿತಿ ಇಲ್ಲಿದೆ. 1. ನಂದಿನಿ( ಟೋನ್ಸ್ ಹಾಲು) ಅರ್ಧ ಲೀಟರ್‌ ಗೆ 23 ಹಾಗೂ ಒಂದು ಲೀಟರ್‌ ಗೆ 43 ರೂ. ಆಗಲಿದೆ. 2. ನಂದಿನಿ (ಡಬಲ್ ಟೋನ್ಸ್ ಹಾಲು) ಅರ್ಧ ಲೀಟರ್‌ ಗೆ 22 ಹಾಗೂ ಒಂದು ಲೀಟರ್‌ ಗೆ 41 ರೂಪಾಯಿ ಆಗಲಿದೆ. 3. ನಂದಿನಿ ಶುಭಂ ಅರ್ಧ ಲೀಟರ್‌ ಗೆ 25 ಹಾಗೂ ಒಂದು ಲೀಟರ್‌ ಗೆ 48 ರೂ. ಆಗಲಿದೆ. 4. ನಂದಿನಿ ಸ್ಪೆಷಲ್ ಅರ್ಧ ಲೀಟರ್‌ ಗೆ…

Read More

ಹೆಚ್.ಡಿ.ಕೋಟೆ: ಹಸುಗಳನ್ನು ಕಳ್ಳತನ ಮಾಡಿದ ವ್ಯಕ್ತಿಗಳನ್ನು ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ. ಹೆಚ್.ಡಿ.ಕೋಟೆ ತಾಲ್ಲೂಕಿನ ರಾಜೇಗೌಡನಹುಂಡಿ ಗ್ರಾಮದ ಕುಮಾರಿ ಕೋಂ ಲೇಟ್ ಶೇಖರ್ ರವರು ಜೂ.16 ರಂದು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಹಾಜರಾಗಿ ರಾತ್ರಿ ಸಮಯದಲ್ಲಿ ತಮ್ಮ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದ 1 ಲಕ್ಷ ರೂ. ಮೌಲ್ಯದ 2 ಹಸು, 1 ಕರು, 2 ಟಗರುಗಳನ್ನು ಯಾರೋ ಕಳ್ಳತನ ಮಾಡಿರುತ್ತಾರೆಂದು ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಎಚ್.ಡಿ.ಕೋಟೆ ಪೊಲೀಸರು ಮೊಕದ್ದಮೆ ಸಂಖ್ಯೆ-200/2023 ಕಲಂ-457, 380 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕ್ರಮ ಕೈಗೊಂಡು ಮಾಲು ಪತ್ತೆಗೆ ನಾಲ್ಕು ಜನ ಪೊಲೀಸರ ತಂಡ ರಚನೆ ಮಾಡಿದ್ದರು. ಜು.28 ರಂದು ಪ್ರಕರಣದಲ್ಲಿ ಕೇರಳ ಮೂಲದ ಇಬ್ಬರು ವ್ಯಕ್ತಿಯನ್ನು ಹಾಗೂ ಪೊನ್ನಂಪೇಟೆ ಮೂಲದ ಒಬ್ಬ ವ್ಯಕ್ತಿಯನ್ನು ಹುಣಸೂರು ಪಟ್ಟಣದ ಬಳಿ ಪತ್ತೆ ಮಾಡಿ ವಶಕ್ಕೆ ಪಡೆದು, ನಂತರ ಸದರಿ ಅರೋಪಿಗಳ ವಶದಲ್ಲಿದ್ದ ಸುಮಾರು 2,00,000 ರೂ…

Read More

ಉಡುಪಿಯ ಖಾಸಗಿ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ಖಾಸಗಿ ವೀಡಿಯೋ ಚಿತ್ರೀಕರಣದ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲು ಉಡುಪಿ ಜಿಲ್ಲಾ ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ನಡೆದ ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ಭುಗಿಲೆದ್ದಾರೂ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಸಹಿತ ಕಾಂಗ್ರೆಸ್ ಮುಖಂಡರು ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಾ ಹಠಾತ್ ಮಣಿಪುರ ಘಟನೆಯ ವಿಚಾರವನ್ನು ಮುನ್ನೆಲೆಗೆ ತರುವ ಮೂಲಕ ಉಡುಪಿಯ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ. ಉಡುಪಿಯ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ. ರಾಜ್ಯ ಗೃಹ ಸಚಿವರು ಸದ್ರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದರೂ, ತಮ್ಮದೇ ಕ್ಷೇತ್ರದ ಸಂತ್ರಸ್ತೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವ ಗೊಡವೆಗೆ ಹೋಗದ ಸೊರಕೆ ಸಹಿತ ಜಿಲ್ಲೆಯ ಕಾಂಗ್ರೆಸ್…

Read More

ಬೆಳಗಾವಿ: ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದು, ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿಯಿಂದ ಮನೆಗಳ ಹಾನಿ, ಜಾನುವಾರು ಸಾವು ದೊಡ್ಡ ಪ್ರಮಾಣದಲ್ಲಿ ಆಗಿದೆ. ಸುಮಾರು 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ, ಉಳಿದ ಜಿಲ್ಲೆಗಳಲ್ಲಿ ಬರದ ಛಾಯೆ ಇದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಗಮನಿಸುತ್ತಿಲ್ಲ ಮುಖ್ಯಮಂತ್ರಿಗಳು ವಿಡಿಯೋ ಸಂವಾದ ಮಾಡುವುದು ಬಿಟ್ಟರೆ ಯಾವುದೇ ಪರಿಹಾರ ಕಾರ್ಯ ನಡೆದಿಲ್ಲ ಎಂದು ಆರೋಪಿಸಿದರು. ಮನೆ ಕಳೆದುಕೊಂಡವರಿಗೆ ತಕ್ಷಣವೇ 10 ಸಾವಿರ ಪರಿಹಾರ ಕೊಡಬೇಕು, ಅದನ್ನು ಇದುವರೆಗೂ ನೀಡಿಲ್ಲ. ಬೆಳೆ ನಾಶ ಆಗಿರುವುದಕ್ಕೆ ಪ್ರಾಥಮಿಕ ಸಮೀಕ್ಷೆ ಕೂಡ ಆಗಿಲ್ಲ. ದೊಡ್ಡ ಪ್ರಮಾಣದಲ್ಲಿ ಪ್ರಾಣಹಾನಿ ಆಗಿದೆ, ಸರ್ಕಾರ ಇದನ್ನು ಗಮನಿಸುತ್ತಿಲ್ಲ. ಯಾವ ಸಚಿವರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಬರಪೀಡಿತ ಪ್ರದೇಶಗಳಿಗೆ ಬೇರೆ ಬೆಳೆ ಬೆಳೆಯಲು ಬೀಜ ಗೊಬ್ಬರ ಕೊಡುವ…

Read More

ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಗೀತಾ (33) ಅವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಪತಿ ಶಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ‘ಸ್ಥಳೀಯ ಶಿವಾನಂದನಗರದ ನಿವಾಸಿ ಗೀತಾ ಅವರನ್ನು ಬುಧವಾರ ತಡರಾತ್ರಿ ಕೊಲೆ ಮಾಡಲಾಗಿದೆ. ಕೃತ್ಯದ ನಂತರ ಗೀತಾ ತಾಯಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ’ ಎಂಬುದಾಗಿ ತಿಳಿಸಿದ್ದ. ನಂತರ, ಆತ ಠಾಣೆಗೆ ಬಂದು ಶರಣಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.’ಗೀತಾ ಕೊಲೆ ಬಗ್ಗೆ ಸಂಬಂಧಿಕರು ದೂರು ನೀಡಿದ್ದಾರೆ. ಶಂಕರ್‌ನನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ತಿಳಿಸಿವೆ. ಪರ ಪುರುಷನ ಜೊತೆ ಸಲುಗೆ: ‘ಸ್ಥಳೀಯ ನಿವಾಸಿ ಶಂಕರ್ ಹಾಗೂ ಹೊಸೂರಿನ ಗೀತಾ, ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ದಂಪತಿ ನಡುವೆ ಜಗಳ ಶುರುವಾಗಿತ್ತು. ಇದರ ನಡುವೆಯೇ ಪರ ಪುರುಷನ ಜೊತೆ ಗೀತಾ ಸಲುಗೆ ಇಟ್ಟುಕೊಂಡಿದ್ದರೆಂಬ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ಪತ್ನಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದ ಶಂಕರ್,…

Read More

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ ಟಿ ರವಿ ಅವರನ್ನು ಬಿಡುಗಡೆ ಮಾಡಲಾಗಿದೆ. ಆ ಮೂಲಕ ಸಿ ಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ? ಎಂಬ ಅನುಮಾನ ಬಲವಾಗಿದೆ. ಸಿ ಟಿ ರವಿ ಅವರನ್ನು 2020 ರಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಇದೀಗ ಹೈಕಮಾಂಡ್ ಇಂದು ರಿಲೀಸ್ ಮಾಡಿರುವ ಪದಾಧಿಕಾರಗಳ ಪಟ್ಟಿಯಲ್ಲಿ ಸಿ ಟಿ ರವಿ ಅವರನ್ನು ಕೈಬಿಡಲಾಗಿದೆ. ಬಿಜೆಪಿಯಲ್ಲಿ ಎರಡು ಹುದ್ದೆ ಅಲಂಕರಿಸುವ ಹಾಗಿಲ್ಲ ಎಂಬ ಕಾನೂನಿದೆ. ಹಾಗಾಗಿಯೇ 2020ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಅಂದಿನ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ ಸಿ ಟಿ ರವಿ ರಾಜೀನಾಮೆ ನೀಡಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಳೆ ಇವರಿಗೆ ಗೋವಾ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳ ಉಸ್ತುವಾರಿಯನ್ನೂ ನೀಡಲಾಗಿತ್ತು. ಜೊತೆಗೆ ಪುದುಚೇರಿ ಮತ್ತು ಲಕ್ಷದ್ವೀಪಗಳ ಸಂಘಟನಾ ಜವಾಬ್ದಾರಿ ಕೂಡ ವಹಿಸಲಾಗಿತ್ತು. ಇನ್ನು ಗೋವಾ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದಿತ್ತು. ಆಗ ಕೈ ಶಾಸಕರನ್ನು ಸೆಳೆಯುವಲ್ಲಿ ಸಿ ಟಿ…

Read More