Subscribe to Updates
Get the latest creative news from FooBar about art, design and business.
- ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ
- ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ: ನಗನಗದು ದೋಚಿ ಪರಾರಿ
- ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ
- ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ
- ಹುಲಿ ಕಾಣಿಸಿಕೊಂಡರೂ ಕೂಂಬಿಂಗ್ ಕಾರ್ಯಾಚರಣೆ ಇಲ್ಲ: ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ
- ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
- ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
- ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Author: admin
ರಾಜ್ಯದಲ್ಲಿ ‘ಶಕ್ತಿ’ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಒತ್ತಾಯಿಸಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದು ಶ್ಲಾಘನೀಯ. ಜತೆಗೆ, ಪ್ರಯಾಣಿಕರು ಸಾರಿಗೆ ಸಿಬ್ಬಂದಿ ಮೇಲೆ ನಡೆಸುತ್ತಿರುವ ಹಲ್ಲೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಬೇಕು’ ಎಂದು ಒತ್ತಾಯಿಸಿದೆ. ಈಗಾಗಲೇ ಕ್ಷುಲಕ ಕಾರಣಗಳಿಗೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ಮೇಲೆ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ, ಕೂಡಲೇ ಬಂಧಿಸಬೇಕು. ಹಲ್ಲೆ ಮಾಡಿದ ವ್ಯಕ್ತಿಗಳ ಭಾವಚಿತ್ರವನ್ನು ಮಾಧ್ಯಮಗಳಲ್ಲಿ ಪ್ರಕಟಿಸಬೇಕು. ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುವ ಸಾರಿಗೆ ಸಿಬ್ಬಂದಿ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಬೇಕು’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೂ ಆದಾಯ ಹೆಚ್ಚುತ್ತಿದೆ.…
ನಗರದ ಮಹಿಳೆಯರಲ್ಲಿ ಸುರಕ್ಷತೆ ಭಾವನೆ ಗಟ್ಟಿಗೊಳಿಸಲು ಹಾಗೂ ಅಪರಾಧ ನಡೆದಾಗ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಜನಸಂದಣಿ ಪ್ರದೇಶ ಹಾಗೂ ಬಸ್ ಗಳಲ್ಲಿ ತೆರಳಿ ಜಾಗೃತಿ ಮೂಡಿಸಿದ್ದ ಪೊಲೀಸರು ಇದೀಗ ಮಹಿಳೆಯರ ಸುರಕ್ಷತೆ ಬಗ್ಗೆ ಪಾರ್ಕ್ ಗಳಿಗೆ ಹೋಗಿ ಅರಿವು ಮೂಡಿಸುತ್ತಿರುವ ನಗರ ಪೊಲೀಸರು ಪಾರ್ಕ್ ಗಳಿಗೆ ಹೋಗಿ ಅರಿವು ಮೂಡಿಸುತ್ತಿದ್ದಾರೆ. ಅಪಾಯ ಸಂದರ್ಭಗಳಲ್ಲಿ ಪೊಲೀಸರಿಗೆ ಸಂಪರ್ಕಿಸುವ ಸಹಾಯವಾಣಿ 112ಗೆ ಕರೆ, ಸೇಫ್ಟಿ ಐಲ್ಯಾಂಡ್ ಬಳಕೆ, ಸಾಮಾಜಿಕ ಜಾಲತಾಣ ಹೇಗೆ ಬಳಸಬೇಕು ಎಂಬುದರ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ತೆರಳಿ ಜಾಗೃತಿ ಮೂಡಿಸಿದ್ದರು. ಇದೀಗ ಬೆಳಗ್ಗೆ ಹಾಗೂ ಸಂಜೆ ವೇಳೆ ತೆರಳಿ ಪಾರ್ಕ್ ಗಳಿಗೆ ಹೋಗುವ ಮಹಿಳೆಯರಿಗೆ ಅಪರಾಧ ನಿಯಂತ್ರಣ ಬಗ್ಗೆ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಪೊಲೀಸರು ಅರಿವು ಮೂಡಿಸಿದರು. ಸರಗಳ್ಳತನ, ಬ್ಯಾಂಕಿಂಗ್ ವಂಚನೆ ಸೇರಿದಂತೆ ಮಹಿಳೆಯರ ಮೇಲಾಗುವ ಅಪರಾಧನ ಪ್ರಕರಣಗಳು ಹಾಗೂ ಕರ್ನಾಟಕ ಪೊಲೀಸ್ ಆ್ಯಪ್, ಪೊಲೀಸ್ ಕಂಟ್ರೋಲ್…
ಪ್ರಯಾಣಿಕನ ಬ್ಯಾಗ್‌ನಲ್ಲಿದ್ದ 5 ಲಕ್ಷ ರೂ. ಹಣವನ್ನು ಕದ್ದು ಹೋಗುತ್ತಿದ್ದ ಆರೋಪಿಯನ್ನ ಕೆ. ಎಸ್. ಆರ್. ಟಿ. ಸಿ ಚಾಲಕ ಮತ್ತು ನಿರ್ವಾಹಕ ಚೇಸ್ ಮಾಡಿ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಬಹುಮಾನ ನೀಡಿ, ಸನ್ಮಾನಿಸಿದ್ದಾರೆ. ಜೂನ್ 14 ರಂದು ಪಾಂಡಿಚೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್‌ಟಿಸಿ ಬಸ್ಸಿಗೆ ಮೆಜೆಸ್ಟಿಕ್ ಹೋಗಬೇಕೆಂದು ಇಬ್ಬರು ಹತ್ತಿದ್ದಾರೆ. ಆದ್ರೆ, ಎಲೆಕ್ಟ್ರಾನಿಕ್ ಸಿಟಿ ಮದ್ಯದಲ್ಲೇ ಬಸ್ ನಿಲ್ಲಿಸುವಂತೆ ಹೇಳಿದ್ದಾರೆ. ಅದಾಗಲೇ ನಿರ್ವಾಹಕರಿಗೆ ಅವರ ಮೇಲೆ ಅನುಮಾನ ಮೂಡಿದೆ. ಅಲ್ಲಿ ಪ್ರಯಾಣಿಕರೊಬ್ಬರು ಇಳಿದು ಹೋಗುತ್ತಿದ್ದಂತೆ ಬ್ಯಾಗ್ ಪರಿಶೀಲಿಸಿದ್ದು, ನಿರ್ವಾಹಕರಿಗೆ ಐದು ಲಕ್ಷ ಕಾಣಿಸಲಿಲ್ಲ ಎಂದಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರು ಆರೋಪಿಗಳು ಓಡಲು ಪ್ರಾರಂಭಿಸಿದ್ದಾರೆ. ಕೂಡಲೇ ನಿರ್ವಾಹಕ ಚೆಸ್ ಮಾಡಿ ಇಬ್ಬರಲ್ಲಿ ಓರ್ವನನ್ನ ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಶಹಾ ಅಲ್ಲಾಂ ನಿಂದ ಐದು ಲಕ್ಷ ಹಣ ವಶಕ್ಕೆ ಪಡೆದ ಪೊಲೀಸರು: ಇನ್ನು ಓಡಿ ಹೋಗಿದ್ದ ಕಳ್ಳನನ್ನ ಚೇಸ್ ಮಾಡಿದ ಬಸ್ ಚಾಲಕ ಸೋಮಪ್ಪ…
ಕೇದಾರನಾಥದಲ್ಲಿ ನಾಡದ್ರೋಹಿ ಘೋಷಣೆ ಕೂಗಿ ಎಂಇಎಸ್ ಪುಂಡರು ಉದ್ಧಟತನ ಮೆರೆದಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಯುವಕರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಕೇದಾರನಾಥ ಪ್ರವಾಸ ಕೈಗೊಂಡಿದ್ದ ಐವರು ಯುವಕರು ಭಗವಾಧ್ವಜ ಹಿಡಿದು ಘೋಷಣೆ ಕೂಗಿರುವ ವಿಡಿಯೋ ಎಂಇಎಸ್ ಯುವ ಘಟಕದ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾದ ಜಲ ಜೀವನ್ ಮಿಷನ್ ಗೆ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಕರ್ನಾಟಕ ರಾಜ್ಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ‘ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಅನುಷ್ಠಾನ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಾದ್ಯಂತ ನಡೆಯುತ್ತಿದೆ. ಸರ್ಕಾರಗಳ ಹಣದೊಂದಿಗೆ ಜನರಿಂದಲೂ ಪ್ರತಿ ಗ್ರಾಮದಲ್ಲಿ ಸಮುದಾಯವಂತಿಗೆಯ ಮೂಲಕ ಹಣ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ‘ಹರ್ ಘರ್ ಜಲ್’ ಎಂದು ಹೇಳುತ್ತಾ ಪ್ರತಿಯೊಂದು ನಳಕ್ಕೂ ಮೀಟರ್ ಅಳವಡಿಸಲಾಗುತ್ತದೆ. ಇದರಿಂದ ನೀರಿಗೆ ದುಬಾರಿ ಬಿಲ್ ತೆರಬೇಕಾಗುತ್ತದೆ. ಕನಿಷ್ಠ ಮೂಲಭೂತ ಅವಶ್ಯಕತೆಯಾದ ನೀರಿಗೂ ಮೀಟರ್ ಅಳವಡಿಸಿ, ಹಣ ದೋಚುವ ಹುನ್ನಾರವನ್ನು ಸರ್ಕಾರ ಮರೆಮಾಚುತ್ತಿವೆ’ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ಉಮಾ ಆರೋಪಿಸಿದ್ದಾರೆ. ಈಗಾಗಲೇ ಖಾಸಗೀಕರಣ ನೀತಿಗಳಿಂದ ತತ್ತರಿಸುವ ಜನತೆ, ಶಿಕ್ಷಣ, ಆರೋಗ್ಯ, ಅಡುಗೆ ಅನಿಲ ಹಾಗೂ ಇತರ ಕನಿಷ್ಠ ಅವಶ್ಯಕತೆಗಳಿಗೆ ದುಬಾರಿ ಶುಲ್ಕ ಪಾವತಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಣ ವಸೂಲಿಗೆ ದಾರಿ…
ಜಾತಿ ಆದಾಯ ಪ್ರಮಾಣಪತ್ರ ಪಡೆಯಲು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೂ ಕಂದಾಯ ಇಲಾಖೆಯ ಅಧಿಕಾರಿಗಳು ತಿರಸ್ಕರಿಸುತ್ತಿದ್ದಾರೆ ಎಂದು ಗೂರ್ಖಾಸ್ ವೆಲ್‌ಫೇರ್ ಅಸೋಸಿಯೇಷನ್ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಆರ್. ಜೋಗಮಲ್, ‘ರಾಜ್ಯದಲ್ಲಿ ಸುಮಾರು 30-40 ಸಾವಿರ ಜನಸಂಖ್ಯೆ ಹೊಂದಿರುವ ಗೂರ್ಖಾ ಸಮುದಾಯ ಪ್ರವರ್ಗ-1 ಪಟ್ಟಿಯಲ್ಲಿ ಇದೆ. ಅಧಿಕಾರಿಗಳು ಜಾತಿ ಪ್ರಮಾಣ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದರು. ‘ಈ ಸಮುದಾಯವು ಬಡತನ, ಅನಕ್ಷರತೆ ಜತೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಆದರೆ, ಇದುವರೆಗೂ ನಮಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುತ್ತಿಲ್ಲ. ಚುನಾವಣಾ ಗುರುತಿನ ಚೀಟಿ, ಆಧಾರ್, ವಾಸಸ್ಥಳ ದೃಢೀಕರಣ ಸೇರಿ ಎಲ್ಲಾ ದಾಖಲೆಗಳನ್ನು ನೀಡಿದರೂ ಸಹ ನಮ್ಮ ಸಂವಿಧಾನಬದ್ಧ ಮನವಿಗಳನ್ನು ತಿರಸ್ಕರಿಸುತ್ತಿದ್ದಾರೆ’ ಎಂದು ದೂರಿದರು. ಅಸೋಷಿಯೇಷನ್ ಕಾರ್ಯದರ್ಶಿ ಸೀತಾರಾಮ್, ಖಜಾಂಚಿ ಮಹದೇವ್ ಸಿಂಗ್,…
ಮಹಾಭಾರತ ಕಥೆಯನ್ನಾಧರಿಸಿದ ಗುಂಡು ಸೀತಾರಾಮ್ ಅವರ ರಚನೆಯ ‘ವೀರ ಬರ್ಬರೀಕ’ ಯಕ್ಷಗಾನ ಪ್ರದರ್ಶನವು ಜೂನ್ 29ರಂದು ಸಂಜೆ 5. 30ಕ್ಕೆ ಗುಬ್ಬಲಾಳದ ಶನೈಶ್ವರ ದೇವಾಲಯದ ಜನರಂಜಿನಿ ಸಭಾಂಗಣದಲ್ಲಿ ಪ್ರದರ್ಶನವಾಗಲಿದೆ. ಈ ಯಕ್ಷಗಾನವನ್ನು ಭರತ್ ಪರ್ಕಳ ಅವರು ನಿರ್ದೇಶಿಸಿದ್ದು, ಕಲಾ ಕದಂಬ ಆರ್ಟ್ ಸೆಂಟರ್ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಹೆಬ್ಬಾರ್, ಮದ್ದಳೆಯಲ್ಲಿ ಸಂಪತ್ ಆಚಾರ್, ಚಂಡೆಯಲ್ಲಿ ಶ್ರೀನಿವಾಸ್ ಪ್ರಭು ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಪೂಜಾ ಆಚಾರ್ಯ, ಅದಿತಿ ಉರಾಳ್, ನಿತ್ಯಾ ಗೌಡ, ನಿಶ್ಚಿತ, ಚೈತ್ರ, ವರ್ಣ ಯು. ಶೆಟ್ಟಿ, ಅನ್ವಿತ ಸೋಮಯಾಜಿ, ಅನೀಶ್ ಸೋಮಯಾಜಿ, ಸ್ವರ್ಣ ಯು. ಶೆಟ್ಟಿ, ಚಿರಾಗ್ ಗೌಡ, ಮನೋಜ್, ಪರ್ಣಿಕ ನಾವಡ, ಧೃತಿ ಅಭಿನಯಿಸಲಿದ್ದಾರೆ. ಸಂಯೋಜನೆ, ನಿರ್ವಹಣೆಯಲ್ಲಿ ರಾಧಾಕೃಷ್ಣ ಉರಾಳ, ವಿಶ್ವನಾಥ ಉರಾಳ, ಮುರಳೀಧರ ನಾವಡ, ಸತ್ಯನಾರಾಯಣ ಬಿ. ಇದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ವಿದ್ಯಾರ್ಥಿಗಳ ಮೇಲೆ ಶಾಲೆಗಳು ಕಠಿಣವಾದ ಶಿಸ್ತು ಕ್ರಮ ಜರುಗಿಸುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರಣ ಇಂತಹ ನೀತಿಯನ್ನು ಮರು ಪರಿಶೀಲಿಸಬೇಕು’ ಎಂದು ಹೈಕೋರ್ಟ್ ಶಾಲೆಗಳಿಗೆ ಸಲಹೆ ನೀಡಿದೆ. ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಕೊಡಗಿನ ಶಾಲಾ ಸಿಬ್ಬಂದಿ ಗೌರಮ್ಮ, ದತ್ತ ಕರುಂಬಯ್ಯ ಮತ್ತು ಚೇತನಾ ಬೋಪಣ್ಣ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಇದು ಐಪಿಸಿ ಕಲಂ 107 ಮತ್ತು ಕಲಂ 305ರ ಅಡಿಯಲ್ಲೂ ಒಳಗೊಳ್ಳುತ್ತದೆ. ಹಾಗಾಗಿ, ವಿದ್ಯಾರ್ಥಿ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ತಲುಪಲು ಶಾಲೆಯ ಸಿಬ್ಬಂದಿ ಪ್ರಚೋದನೆ ನೀಡಿದ್ದಾರೆಯೊ ಇಲ್ಲವೇ ಎಂಬುದು ವಿಚಾರಣೆಯಲ್ಲಿ ಸಾಬೀತಾಗಲಿ’ ಎಂದು ನ್ಯಾಯಪೀಠ ಹೇಳಿದೆ. ‘ಬಾಲಕ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 15 ನಿಮಿಷಗಳವರೆಗೆ ಶಾಲೆಯ ಜತೆ ಸಂಪರ್ಕದಲ್ಲಿದ್ದ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಸತ್ಯಾಂಶವಿದೆ ಎನಿಸುತ್ತಿದೆ. ಶಾಲೆ ತನ್ನ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ವಿದ್ಯಾರ್ಥಿಯ ಮೇಲೆ…
ವಿದೇಶಿ ಪ್ರಜೆಯೊಬ್ಬರು ಕಳೆದುಕೊಂಡ ವಸ್ತುಗಳು ಸೇಫ್ಟಿ ಐಲ್ಯಾಂಡ್ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಪತ್ತೆಯಾದ ಘಟನೆ ಸೋಮವಾರ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಲ್ಡಿವ್ ಮೂಲದ ಫೋಟೋಗ್ರಾಫರ್ ಕಳೆದುಕೊಂಡಿದ್ದ ಲ್ಯಾಪ್‌ಟಾಪ್, ಮಾಲೀವ್ ಕರೆನ್ಸಿ ಮತ್ತಿತರ ವಸ್ತುಗಳಿದ್ದ ಬ್ಯಾಗನ್ನ ಪತ್ತೆ ಹಚ್ಚಿ ಹಸ್ತಾಂತರಿಸುವಲ್ಲಿ ಅಶೋಕನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಸೌತ್ ಏಷ್ಯನ್ ಫುಟ್‌ಬಾಲ್ ಫೆಡರೇಶನ್ ಚಾಂಪಿಯನ್ ಶಿಪ್ ಗಾಗಿ ಮಾಲ್ಡಿವ್ ತಂಡ ಬೆಂಗಳೂರಿಗೆ ಬಂದಿದೆ. ತಂಡದೊಂದಿಗೆ ಬಂದಿದ್ದ ಫೋಟೋಗ್ರಾಫರ್ ಹಸನ್ ಸಿಮಾಹ್ ನಿನ್ನೆ ಸಂಜೆ ತಮ್ಮ ಸ್ನೇಹಿತರೊಂದಿಗೆ ಆಟೋದಲ್ಲಿ ಎಂ. ಜಿ. ರಸ್ತೆಯ ಗರುಡಾ ಮಾಲ್ ಗೆ ತೆರಳಿದ್ದರು. ಆಟೋದಿಂದ ಇಳಿಯುವಾಗ ತಮ್ಮ ಲ್ಯಾಪ್‌ಟಾಪ್, ಪಾಸ್‌ಪೋರ್ಟ್, ಕ್ಯಾಮೆರಾ, ಮಾಲೀವ್ ಕರೆನ್ಸಿಯಿದ್ದ ಬ್ಯಾಗನ್ನ ಮರೆತು ಇಳಿದಿದ್ದರು. ಏನು ಮಾಡಬೇಕೆಂದು ಅರಿಯದೇ ಕಂಗಾಲಾಗಿದ್ದ ಹಸನ್ ಗೆ ಸ್ಥಳಿಯರು ಅಲ್ಲೇ ಇದ್ದ ಸೇಫ್ಟಿ ಐಲ್ಯಾಂಡ್ ಸಹಾಯ ಪಡೆಯುವಂತೆ ಸೂಚಿಸಿದ್ದರು. ಅದರಂತೆ ಸೇಫ್ಟಿ ಐಲ್ಯಾಂಡ್ ಮೂಲಕ ಹಸನ್ ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಯನ್ನ ಸಂಪರ್ಕಿಸಿದ್ದರು. ಅಗತ್ಯ ಮಾಹಿತಿಗಳನ್ನ ಪಡೆದ ನಿಯಂತ್ರಣ…
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ನಮ್ಮ ನಾಯಕರಾದ ಯಡಿಯೂರಪ್ಪನವರು ಹಾಕಿದ ಕಣ್ಣೀರಿನಲ್ಲಿ ಇಡೀ ಬಿಜೆಪಿ ಕೊಚ್ಚಿಕೊಂಡು ಹೋಯಿತು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪರ ಸರ್ಕಾರಕ್ಕೆ ಎರಡು ವರ್ಷ ತುಂಬಿದಾಗ ಸಂಭ್ರಮೋತ್ಸವ ಮಾಡುವುದನ್ನು ಬಿಟ್ಟು ಅಂದೇ ಯಡಿಯೂರಪ್ಪರ ಕೈಯಲ್ಲಿ ಮುಖ್ಯಮಂತ್ರಿ ಸ್ಥಾನ ರಾಜೀನಾಮೆ ಕೊಡಿಸಿದ್ದು, ಅಂದು ಯಡಿಯೂರಪ್ಪ ಹಾಕಿದ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ ಎಂದಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರೆಂಟಿಗಳ ಮೇಲೆ ಗ್ಯಾರೆಂಟಿಗಳನ್ನು ಘೋಷಿಸುತ್ತಿದ್ರೆ, ಇತ್ತ ನಮ್ಮ ಬಿಜೆಪಿ ಪಕ್ಷ ಅರ್ಧ ಲೀಟರ್ ಹಾಲು ಕೊಡುತ್ತೇವೆ ಎಂದಿತ್ತು. ನಾವು ಅಂದೇ ಹೇಳಿದ್ದೆವು. ಬಹಳ ಪ್ರಬಲವಾದ ಘೋಷಣೆಗಳನ್ನು ಮಾಡಿ. ಅದನ್ನು ಯಾರೂ ಕೂಡ ಕೇಳಲೇ ಇಲ್ಲ. ಇತ್ತ ಪ್ರಣಾಳಿಕಾ ಸಮಿತಿಗೆ ಡಾ. ಕೆ. ಸುಧಾಕರ್ ಅವರನ್ನು ಅಧ್ಯಕ್ಷ ಮಾಡಿದ್ದು, ವಲಸಿಗರಿಂದಲೇ ನಾವು ಹಾಳಾಗಿದ್ದು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸುಧಾಕರ್…