Author: admin

ಮಧುಗಿರಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ಮುಖ್ಯ ದ್ವಾರದ ಸಮೀಪದಲ್ಲಿ ದೊಡ್ಡ ಗಾತ್ರದ ಮರದ ಕೊಂಬೆ ಅರ್ಧಕ್ಕೆ ಮುರಿದು ನೇತಾಡುತ್ತಿದ್ದರೂ ಸಹ, ಕೊಂಬೆಯನ್ನು ತೆರವುಗೊಳಿಸದೆ ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಿರ್ಲಕ್ಷ್ಯವಹಿಸಿರುವ ಘಟನೆ ನಡೆದಿದೆ. ಕಳೆದ ಭಾನುವಾರದಂದು ದೊಡ್ಡ ಗಾತ್ರದ ಮರದ ಕೊಂಬೆ ಮುರಿದಿದ್ದು, ಜೋತಾಡುವ ಸ್ಥಿತಿಯಲ್ಲಿದೆ. ಆದರೆ ಸೋಮವಾರದವರೆಗೂ ಈ ಮರದ ಕೊಂಬೆಯನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ. ಇದು ತಾಲೂಕು ಮಟ್ಟದ ಆಸ್ಪತ್ರೆಯಾಗಿದ್ದು, ನಿತ್ಯ ಸಾರ್ವಜನಿಕರು ಈ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ. ಅಲ್ಲದೇ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗಕ್ಕೆ ಇದೇ ದಾರಿಯಲ್ಲಿ ತೆರಳ ಬೇಕಿದೆ. ಮರದ ಕೊಂಬೆ ಜೋತಾಡುತ್ತಿರುವುದರಿಂದಾಗಿ ಆಂಬುಲೆನ್ಸ್ ಸಂಚಾರಕ್ಕೂ ಸಹ ಅಡೆತಡೆಯಾಗುತ್ತಿದೆ. ಜೋತಾಡುತ್ತಿರುವ ಮರದ ಕೊಂಬೆಯ ಕೆಳಗೆ ಜನರು ಹೋಗಲು ಭಯಪಡುತ್ತಿದ್ದು, ಎಲ್ಲ ಸಾರ್ವಜನಿಕರ ಮೇಲೆ ಬೀಳಲಿದೆಯೋ ಎನ್ನುವ ಆತಂಕದ ಮಾತುಗಳು ಕೇಳಿ ಬಂದಿವೆ. ಸಾಧ್ಯವಾದಷ್ಟು ಬೇಗನೇ ಮರದ ಕೊಂಬೆ ತೆರವುಗೊಳಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.…

Read More

ಹಾಸನ: ಕೆಂಪೇಗೌಡ ಜಯಂತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸರ್ಕಾರ ಆಚರಣೆ ಮಾಡುತ್ತಿದೆ. ಹಾಸನದಲ್ಲಿ ಈ ವರ್ಷ ರಾಜ್ಯಮಟ್ಟದ ಕೆಂಪೇಗೌಡ ಜಯಂತಿ ನಡೆಯುತ್ತಿದ್ದು, ಇದು 514 ನೇ ಜಯಂತಿಯಾಗಿದೆ. ಕೆಂಪೇಗೌಡರು 1510 ರಲ್ಲಿ ಜನಿಸಿದ್ದು, ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದ ನಗರ ಆಗಬೇಕಾದರೆ ಕೆಂಪೇಗೌಡರು ಕಾರಣ. ಕೆಂಪೇಗೌಡರು ದೂರ ದೃಷ್ಟಿಯುಳ್ಳ ನಾಡ ಪ್ರಭು ಆಗಿದ್ದರು ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪೆರಿಫೆರಲ್ ವರ್ತುಲ ರಸ್ತೆ (ಪಿಆ‌ಆರ್) ಯೋಜನೆಯಡಿ ಸ್ವಾಧೀನ ಪಡೆಯುವ ಭೂಮಿಗೂ 2013ರ ಕೇಂದ್ರ ಸರ್ಕಾರದ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕು. ಇಲ್ಲದಿದ್ದರೆ, ಯೋಜನೆಯನ್ನೇ ಕೈಬಿಡಬೇಕು ಎಂದು ಪಿಆರ್‌ಆ‌ ರೈತ ಹಾಗೂ ನಿವೇಶನದಾರರ ಸಂಘ ಸೋಮವಾರ ಆಗ್ರಹಿಸಿದೆ. ‘ಬೆಂಗಳೂರಿನ ಉತ್ತರ ಭಾಗದಲ್ಲಿರುವ 65 ಕಿ. ಮೀ. ವರ್ತುಲ ರಸ್ತೆ ಅಭಿವೃದ್ಧಿಗೆ ಬಿಡಿಎ 2005ರಲ್ಲಿ ಬಿಡಿಎ ಯೋಜನೆ ರೂಪಿಸಿದ್ದು, 1, 810 ಎಕರೆ ಭೂಮಿ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಈವರೆಗೆ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಈ ಕುರಿತು ಬಿಡಿಎ ಮತ್ತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ರೈತರಿಗೆ ಪರಿಹಾರ ಕುರಿತಂತೆ ತೀರ್ಮಾನ ಕೈಗೊಂಡಿಲ್ಲ’ ಎಂದು ಸಂಘದ ಅಧ್ಯಕ್ಷ ಮಾವಳಿಪುರ ಬಿ. ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಸದ್ಯ ಇಲ್ಲಿ ಎಕರೆ ಜಮೀನಿಗೆ ಮಾರುಕಟ್ಟೆಯಲ್ಲಿ 110 ಕೋಟಿಯಿಂದ 714 ಕೋಟಿವರೆಗೆ ಬೆಲೆ ಇದೆ. ಯೋಜನೆಗೆ ಜಮೀನು ನೀಡಲು ಸಿದ್ಧರಿದ್ದೇವೆ. 2013ರ ಕಾಯ್ದೆಯಡಿ ಬೆಲೆ ನಿಗದಿಪಡಿಸಿ ಪರಿಹಾರ ನೀಡಬೇಕು ಅಥವಾ ಯೋಜನೆ ಕೈಬಿಟ್ಟು,…

Read More

ನಗರ ಪೊಲೀಸರು, ಸೋಮವಾರ 7 21 ಕೋಟಿ ಮೌಲ್ಯದ 2, 117 ಕೆ.ಜಿ ಡ್ರಗ್ಸ್ ನಾಶಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್  ಕಮಿಷನರ್  ಬಿ.ದಯಾನಂದ್, ‘ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದ 2, 053 ಕೆ. ಜಿ ಗಾಂಜಾ, 9 ಕೆ. ಜಿ ಹಶೀಷ್, 12 ಕೆ. ಜಿ ಅಫೀಮು, 9 ಕೆ. ಜಿ ಚರಸ್, 568 ಗ್ರಾಂ ಕೊಕೇನ್, 13 ಗ್ರಾಂ ಹೆರಾಯಿನ್, 5 ಕೆ. ಜಿ ಎಂಡಿಎಂಎ ಅನ್ನು ಕೋರ್ಟ್ ಆದೇಶ ಪಡೆದು ನಾಶಪಡಿಸಲಾಗಿದೆ’ ಎಂದರು. ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ 2022ರ ಜನವರಿಯಿಂದ 2023ರ ಜೂನ್‌ ವರೆಗೆ 6, 191 ಪ್ರಕರಣ ದಾಖಲಾಗಿದೆ. ಈ ಸಂಬಂಧ 7, 723 ಭಾರತೀಯರು, 159 ವಿದೇಶಿಯರನ್ನು ಬಂಧಿಸಿದ್ದು, 7 117 ಕೋಟಿ ಮೌಲ್ಯದ 6, 261 ಕೆ. ಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ‘ಡ್ರಗ್ಸ್ ಸಾಗಣೆ ಹಾಗೂ ರಾಷ್ಟ್ರೀಯ…

Read More

ತುಮಕೂರು: ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಬಡ ಮಹಿಳೆಯೊಬ್ಬರಿಗೆ ಸ್ವತಃ ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಎಂಬ ಮಹಿಳೆಯ ಕೀಲು ಮುರಿದುಹೋಗಿತ್ತು. ಶಸ್ತ್ರಚಿಕಿತ್ಸೆ ಮಾಡಲು 4-5 ಲಕ್ಷ ರೂ ಖರ್ಚಾಗುತಿತ್ತು. ಶಾಸಕರ ಬಳಿ ಬಂದು ನೋವು ತೋಡಿಕೊಂಡಿದ್ದರು. ಮಹಿಳೆಯನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಉಚಿತವಾಗಿ ಸ್ವತಃ ತಾವೇ ಆಪರೇಷನ್ ಮಾಡುವ ಮೂಲಕ ಮಾನವೀಯತೆ ತೋರಿದ್ದಾರೆ. ಕಳೆದ 10 ವರ್ಷದ ಹಿಂದೆ ಯಶಸ್ವಿನಿ ಯೋಜನೆಯಲ್ಲಿ ಕೀಲು ಆಪರೇಷನ್ ಮಾಡಿಸಿಕೊಂಡಿದ್ದ ಆಶಾ ಅವರಿಗೆ ಪುನಃ ಡಿಸ್ ಲೊಕೆಟ್ ಆಗಿತ್ತು. ಸರ್ಕಾರದ ಉಚಿತ ಯೋಜನೆಯಲ್ಲಿ ಒಂದೇ ಕಾಯಿಲೆಗೆ ಎರಡು ಬಾರಿ ಸರ್ಜರಿಗೆ ಅವಕಾಶ ಇರಲಿಲ್ಲ. ಸ್ವತಃ ರೋಗಿಗಳೇ ಹಣ ಸಂದಾಯ ಮಾಡಿ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು. ಇದನ್ನರಿತು ಈ ರೀತಿಯ ಕೀಲು ಮೂಳೆ ಸಮಸ್ಯೆ ಇದ್ದ ಮಹಿಳೆಯ ಉಚಿತ ಶಸ್ತ್ರಚಿಕಿತ್ಸೆಗೆ ಮುಂದಾಗಿರುವ ಶಾಸಕ ಡಾ.ರಂಗನಾಥ್, ಮೂಲತಃ ಆರ್ಥೋಪೆಡಿಕ್ ವೈದ್ಯರಾಗಿದ್ದಾರೆ. ಶಾಸಕರ ಸೇವೆಗೆ  ಶ್ಲಾಘನೆ ವ್ಯಕ್ತವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ…

Read More

‘ಮಕ್ಕಳಿಗೆ ಜ್ಞಾನಾರ್ಜನೆ ಮುಖ್ಯ. ಜ್ಞಾನ ಪಡೆಯಬೇಕಾದರೆ ಶಿಕ್ಷಣ ಮುಖ್ಯ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು. ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ 10 ಸಾವಿರ ಮಕ್ಕಳಿಗೆ 1. 5 ಲಕ್ಷ ನೋಟ್‌ ಬುಕ್ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು. ದೇಶ, ಭಾಷೆ ಮತ್ತು ಸಂಸ್ಕೃತಿ, ಸಂಪ್ರದಾಯ ಮರೆಯಬಾರದು ಮಕ್ಕಳು. ‘ಮಕ್ಕಳಿಗೆ ಜ್ಞಾನಾರ್ಜನೆ ಮುಖ್ಯ. ಜ್ಞಾನ ಪಡೆಯಬೇಕಾದರೆ ಶಿಕ್ಷಣ ಮುಖ್ಯ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ‘ರಾಷ್ಟ್ರಭಕ್ತಿ, ದೇಶಪ್ರೇಮ ಬೆಳೆಸಿಕೊಳ್ಳಬೇಕು’ ಎಂದರು. ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಶಿಕ್ಷಣಕ್ಕೆ ಪ್ರೋತ್ಸಾಹ, ಸಹಕಾರ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ರಕ್ಷಾ ಫೌಂಡೇಷನ್ ದಿಟ್ಟ ಹೆಜ್ಜೆ ಇಟ್ಟಿದೆ’ ಎಂದರು. ಶಾಸಕ ಬಿ. ವೈ. ವಿಜಯೇಂದ್ರ ಮಾತನಾಡಿ, ‘ನೊಂದವರ ಮತ್ತು ಬಡವರ ಸೇವೆ ಮಾಡುವುದು ಮುಖ್ಯ’ ಎಂದರು. ಜಯದೇವ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಮಾತನಾಡಿ, ‘ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು.…

Read More

ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಜಯದೇವ ಹೃದ್ರೋಗ ಆಸ್ಪತ್ರೆ, ಯುವ ಉದ್ಯಮಿ ನಿತೀನ್ ಕಾಮತ್ ಹಾಗೂ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಬಿ. ಎಲ್  ಶಂಕರ್ ಅವರ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಚರ್ಚೆ ಮಾಡಿ ಮೂವರು ಸಾಧಕರ ಆಯ್ಕೆ ಮಾಡಿದೆ. ಈ ಪ್ರಶಸ್ತಿ ಜೊತೆಗೆ 5 ಲಕ್ಷ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಡಾ. ಮಂಜುನಾಥ್ ಅವರಿಂದ ಕಸಗುಡಿಸುವ ಕೆಲಸಗಾರರವರೆಗೂ ಎಲ್ಲರೂ ಸೇವೆ ಸಲ್ಲಿಸಿದ್ದು, ಹೀಗಾಗಿ ಈ ಸಂಸ್ಥೆಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. 1600 ಬೆಡ್ ಸೌಲಭ್ಯ ಹೊಂದಿರುವ ಆಸ್ಪತ್ರೆಯು ಬಹಳ ಕಡಿಮೆ ದರದಲ್ಲಿ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಇನ್ನು ಕಿರಿಯ ವಯಸ್ಸಿನಲ್ಲೇ  ಜೇರೋಧ ಎಂಬ ನವೋದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದಿರುವ ನಿತಿನ್ ಕಾಮತ್ ಅವರು ಈ…

Read More

2024 ರ ಲೋಕಸಭಾ ಚುನಾವಣೆಗೆ ಇನ್ನು 11 ತಿಂಗಳು ಬಾಕಿಯಿದ್ದು, ಈಗಿನಿಂದಲೇ ಸಕಲ ತಯಾರಿಗಳು ನಡೆಯುತ್ತಿದೆ. ಇತ್ತ ರಾಜ್ಯದಲ್ಲಿ 28 ಕ್ಷೇತ್ರಗಳಿದ್ದು, ಅದರಲ್ಲಿ 25 ಮಂದಿ ಬಿಜೆಪಿಯ ಸಂಸದರುಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆದ್ರೆ ಇದೆಲ್ಲದರ ಮಧ್ಯೆ ಸದ್ಯ, ಡಿ.ವಿ. ಸದಾನಂದಗೌಡ ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಸುಮಾರು ಅರ್ಧ ಡಜನ್ ಅಭ್ಯರ್ಥಿಗಳು ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಕೇಳಿ ಬಂದಿದೆ. ಹಾಗಾದ್ರೆ, ಯಾವೆಲ್ಲಾ ನಾಯಕರುಗಳು ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದನ್ನು ನೋಡುವುದಾದ್ರೆ, ಡಿ. ವಿ. ಸದಾನಂದಗೌಡರನ್ನು ಹೊರತುಪಡಿಸಿ, ಸಂಸದರಾದ ಶೋಭಾ ಕರಂದ್ಲಾಜೆ, ಸುಮಲತಾ ಅಂಬರೀಶ್, ಮಾಜಿ ಸಚಿವ ಡಾ. ಕೆ ಸುಧಾಕರ್, ಸಿ. ಟಿ. ರವಿ, ಈಗ ಸಾರ್ವತ್ರಿಕ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿರುವ ತಮ್ಮೇಶ್ ಗೌಡ ಹಾಗೂ ಟಿಕೆಟ್ ವಂಚಿತ ಮುನೀಂದ್ರ ಕುಮಾರ್ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಇಂಡಿಯನ್ ಮನಿ ಡಾಟ್ ಕಾಮ್ ಕಂಪನಿ ಹಾಗೂ ಫ್ರೀಡಂ ಆ್ಯಪ್ ಆಡಳಿತ ಮಂಡಳಿ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಗಳ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಅದರ ತೆರವಿಗೆ ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ‘ಅರೆಕಾಲಿಕ ಕೆಲಸದ ಆಮಿಷ ಹಾಗೂ ಕೋರ್ಸ್ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸಲಾಗಿದೆ’ ಎಂದು ಸಂತ್ರಸ್ತರು ದೂರು ನೀಡಿದ್ದರು. ಅದನ್ನು ಆಧರಿಸಿ 6 ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದ ಬನಶಂಕರಿ ಠಾಣೆ ಪೊಲೀಸರು, ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿ. ಎಸ್. ಸುಧೀರ್ ಹಾಗೂ ಮಾನವ ಸಂಪನ್ಮೂಲ ವಿಭಾಗದ ರಘು ಅವರನ್ನು ಬಂಧಿಸಿದ್ದರು. ಸುಧೀರ್ ಹಾಗೂ ಇತರರಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಈ ಮಧ್ಯೆಯೇ, ಆರೋಪಿಗಳು ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ತಡೆಯಾಜ್ಞೆ ತೆರವಿವು ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಶೀಲ ಶಂಕಿಸಿ ಪತ್ನಿಯ ತೊಡೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪದಡಿ ರೌಡಿ ದಯಾನಂದ್‌ ನನ್ನು ಬಂಧಿಸುವಲ್ಲಿ ಆಡುಗೋಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆಲಸಕ್ಕೆ ಹೋಗುತ್ತಿದ್ದ ಪತ್ನಿ, ಸಹೋದ್ಯೋಗಿ ಜೊತೆ ಹೆಚ್ಚು ಮಾತನಾಡುತ್ತಿದ್ದರು. ಜೈಲಿನಿಂದ ಬರುತ್ತಿದ್ದಂತೆ ಪತ್ನಿ ಮೊಬೈಲ್ ಪರಿಶೀಲಿಸಿದ್ದ ಆರೋಪಿ, ಸಹೋದ್ಯೋಗಿ ಬಗ್ಗೆ ವಿಚಾರಿಸಿದ್ದ. ಸಲುಗೆ ಇಟ್ಟುಕೊಂಡಿರುವುದಾಗಿ ಅನುಮಾನಪಟ್ಟು ಪತ್ನಿಗೆ ಹೊಡೆದಿದ್ದ. ಪತ್ನಿಯ ಹೇಳಿಕೆ ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವರದಿ : ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More