Author: admin

ಹೋಟೆಲೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆ ಮೇಲೆ ನಿಗಾ ವಹಿಸದೇ ನಿರ್ಲಕ್ಷ್ಯ ವಹಿಸಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಅಶೋಕನಗರ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಕಾಂತ್ ತೋಟಗಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಠಾಣೆ ವ್ಯಾಪ್ತಿಯ ದಿ ಪೈಡ್ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ದಾಳಿ ಮಾಡಿದ್ದರು. ಮಾನವ ಕಳ್ಳ ಸಾಗಾಣಿಕೆ ಮೂಲಕ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಸಂಗತಿಯನ್ನು ಪತ್ತೆ ಮಾಡಿದ್ದರು. ‘ಹೋಟೆಲ್‌ ನಲ್ಲಿ ಹಲವು ದಿನಗಳಿಂದ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಇದರ ತಡೆಗೆ ಇನ್‌ಸ್ಪೆಕ್ಟರ್ ಗಮನ ಹರಿಸಿರಲಿಲ್ಲ’ ಎಂದು ಸಿಸಿಬಿ ಪೊಲೀಸರು ವರದಿ ನೀಡಿದ್ದರು. ಅದರನ್ವಯ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ, ಪ್ರಾಥಮಿಕ ತನಿಖೆ ನಡೆಸಿ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರಿಗೆ ವರದಿ ಸಲ್ಲಿಸಿದ್ದರು. ವರದಿ ಪರಿಶೀಲಿಸಿದ್ದ ದಯಾನಂದ್‌, ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಿ ಸೋಮವಾರ ಆದೇಶ ಹೊರಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಪುತ್ರ ದರ್ಶನ್ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ವೇದಾಂತ್ ದುಗಾರ್‌ ನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರ್. ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ದರ್ಶನ್ ಮೇಲೆ ಮೇ 9ರಂದು ಹಲ್ಲೆ ನಡೆದಿತ್ತು. ನಂತರ ನಾಪತ್ತೆಯಾಗಿದ್ದ ವೇದಾಂತ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಮಾಹಿತಿ ಆಧರಿಸಿ ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಆರೋಪಿ ವೇದಾಂತ್, ವಿಎಆರ್ ಬಿಲ್ಡರ್ಸ್ ಮಾಲೀಕ ಸಂಜಯ್  ಅವರ ಪುತ್ರ. ಈತ ಹಾಗೂ ದರ್ಶನ್ ಹಲವು ವರ್ಷಗಳ ಸ್ನೇಹಿತರು. ಮದುವೆಯೊಂದಕ್ಕೆ ಇಬ್ಬರೂ ಪ್ರತ್ಯೇಕವಾಗಿ ಹೋಗಿದ್ದರು. ‘ತನ್ನನ್ನು ಹೆಚ್ಚು ಮಾತನಾಡಿಸಲಿಲ್ಲ ಎಂದು ಜಗಳ ತೆಗೆದಿದ್ದ ಆರೋಪಿ ಮದ್ಯದ ಬಾಟಲಿಯಿಂದ ದರ್ಶನ್ ತಲೆಗೆ ಹೊಡೆದಿದ್ದ’ ಎಂದು ತಿಳಿಸಿದ್ದಾರೆ. ವೇದಾಂತ್ ಸಂಬಂಧಿಕರು ನೇಪಾಳದಲ್ಲಿದ್ದಾರೆ. ಕೃತ್ಯದ ಬಳಿಕ ಆತ ನೇಪಾಳಕ್ಕೆ ಹೋಗಿದ್ದ. ಆತ ಬೆಂಗಳೂರಿಗೆ ವಾಪಸು ಬರುತ್ತಿದ್ದಂತೆ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಕರ್ನಾಟಕ ಅಂಚೆ ವೃತ್ತದ  ‘ಡೋರ್ ಸ್ಟೆಪ್ ಬುಕ್ಕಿಂಗ್ ಆಫ್ ಪಾರ್ಸೆಲ್ಸ್  ಮೊಬೈಲ್ ವ್ಯಾನ್ಸ್’ ಸೇವೆ ಬೆಂಗಳೂರಿನ ಎಂ. ಜಿ. ರಸ್ತೆಯಲ್ಲಿರುವ ಮಣಿಪಾಲ್ ಸೆಂಟರ್‌ನಲ್ಲಿ ಸೋಮವಾರ ಆರಂಭಗೊಂಡಿತು. ನಿಗದಿತ ಪ್ರದೇಶದ ಸಾರ್ವಜನಿಕರು ಪಾರ್ಸೆಲ್ ಬುಕ್ಕಿಂಗ್ ಸೇವೆಯನ್ನು ಹೆಚ್ಚಿನ ಶುಲ್ಕ ನೀಡದೇ ಪಡೆಯಬಹುದು. ಮೊಬೈಲ್ ವ್ಯಾನ್ ನಿತ್ಯ ಮಧ್ಯಾಹ್ನ 2. 30ಕ್ಕೆ ಮಣಿಪಾಲ್ ಸೆಂಟರ್‌ಗೆ ಬರಲಿದ್ದು, 3. 30ರವರೆಗೆ ಇರಲಿದೆ. ಬೇಡಿಕೆ ಆಧರಿಸಿ ಬೆಂಗಳೂರಿನ ಇತರೆಡೆಗೆ ಈ ಸೇವೆ ವಿಸ್ತರಿಸುವ ಉದ್ದೇಶವಿದೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಮಾಹಿತಿ ನೀಡಿದರು. ಬೆಂಗಳೂರು ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಪಾರ್ಸೆಲ್ ಬುಕ್ ಮಾಡಲು ಮೊಬೈಲ್ ಸಂಖ್ಯೆ 94808 09797 ಸಂಪರ್ಕಿಸಬಹುದು. ಪ್ರಾಯೋಗಿಕವಾಗಿ 20 ದಿನದ ಹಿಂದೆ ಅಬ್ಬಿಗೆರೆ-ಪೀಣ್ಯದಲ್ಲಿ ಆರಂಭಿಸಿದ್ದೆವು. ಈವರೆಗೆ 1, 124 ಪಾರ್ಸೆಲ್‌ ಗಳು ಬಂದಿವೆ ಎಂದರು.  ‘ಎಂ. ಜಿ. ರಸ್ತೆ ಹೆಚ್ಚು ವಾಣಿಜ್ಯ ಸಂಕೀರ್ಣಗಳಿರುವ ಪ್ರದೇಶವಾಗಿದ್ದು, ಇಲ್ಲಿ ಜನರಿಗೆ ಹೆಚ್ಚು ಅನುಕೂಲಕರ’ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

‘ಹಿರಿಯರಿಗೆ ಸಮಂಜಸ, ಸುರಕ್ಷತೆಯಿಂದ ಕೂಡಿದ ಮತ್ತು ಮನಸ್ಸಿಗೆ ಶಾಂತಿ ನೀಡುವ ವಾತಾವರಣ ತುಂಬಾ ಮುಖ್ಯ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಹೇಳಿದರು. ನವ ನಿರ್ಮಾಣ್- ವಿಎನ್ಎನ್ ಪ್ರಬುದ್ಧಲಾಯ ಮತ್ತು ಆಯುರ್ಧಾಮ ಭಾನುವಾರ ಆಯೋಜಿಸಿದ್ದ ವಿಎಲ್‌ನ್ ಪ್ರಬುದ್ಧಾಲಯದ 15ನೇ ವಾರ್ಷಿಕೋತ್ಸವ, ವಿಎನ್ಎನ್ ನಿರ್ಮಾಣ್ ಹಿರಿಯ ನಾಗರಿಕರ ಅಜೀವ-ಸಾಧನಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಹೊರಗಿನ ಯಾವುದೇ ಜಂಜಾಟಗಳಿಗೆ ತಲೆಕೆಡಿಸಿಕೊಳ್ಳದೇ ಹಿರಿಯರು ನೆಮ್ಮದಿಯಿಂದ ಸುರಕ್ಷತೆಯಿಂದ ಜೀವಿಸಲು ಪ್ರಬುದ್ಧಾಲಯವು ಹಿರಿಯ ಜೀವಿಗಳಿಗೆ ಆಶ್ರಯ ಕಲ್ಪಿಸಿದೆ ಎಂದು ಹೇಳಿದರು. ಚಿತ್ರನಟ ಶ್ರೀನಾಥ್, ‘ಪ್ರಬುದ್ಧಾಲಯದಂತಹ ಹಿರಿಯರ ಮನೆ, ವೃದ್ಧರಿಗೆ ಸ್ವಂತ ಮನೆಯ ಅನುಭವ ನೀಡುತ್ತಿದೆ. ಹಿರಿಯರ ಜೀವನದ ಸಂಧ್ಯಾ ಕಾಲಕ್ಕೆ ಆಶಾದಾಯಕವಾಗಿದ್ದು, ಸಮಾಜಕ್ಕೆ ಉತ್ತಮ ಮಾದರಿಯಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ಜೀವನದಲ್ಲಿ ಉತ್ತಮ ಸಾಧನೆ ಮಾಡಿದ ಸಿ. ತಾರಾರಂಗನ್, ಬಿ. ವಿ. ತಿಮ್ಮಪ್ಪ, ರಾಧಾ ಶ್ರೀನಾಥ್, ಪ್ರನಖ್ ಕುಮಾರ್ ಬಸು ಮತ್ತು ರುಕ್ಕಿಣಿ ಶೇಷಾದ್ರಿ ಅವರಿಗೆ ವಿ. ಎಲ್. ಎನ್. ನಿರ್ಮಾಣ್ ಹಿರಿಯ ನಾಕರಿಕರ…

Read More

ಬೆಸ್ಕಾಂನವರು ಮನೆಗೆ ತೆರಳಿ ಗೃಹಜ್ಯೋತಿ ನೋಂದಣಿ ಮಾಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು. ರಾಮನಗರ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ಅಧಿಕಾರಿಗಳು ಪ್ರಚಾರ ಮಾಡಿ ನೋಂದಣಿ ಮಾಡಿಸಬೇಕು. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ, ಬಿಜೆಪಿ ಸರ್ಕಾರ. ಬಿಜೆಪಿಯವರು ತಿಂದು ನಮ್ಮ ಮೂತಿಗೆ ಒರಿಸುವ ಯತ್ನ ಮಾಡಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನಮ್ಮತುಮಕೂರು ವಿಶೇಷ ವರದಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳಲ್ಲಿ ದಿಢೀರನೆ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದವು ಪೋಷಕರಲ್ಲಿ ಆತಂಕ ಮನೆ ಮಾಡಿದೆ. ತುಮಕೂರು ಜಿಲ್ಲೆ ತುರುವೇಕೆರೆ ಹಾಗೂ ಕೊರಟಗೆರೆಯಲ್ಲಿ ಗ್ರಾಮದಲ್ಲಿ ಶಾಲಾ ಮಕ್ಕಳಲ್ಲಿ ಚರ್ಮದ ಫಂಗಸ್ ಕಂಡುಬಂದಿದ್ದು ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಕೊರಟಗೆರೆ ತಾಲ್ಲೂಕಿನ ಯಲಚೇಗೆರೆ, ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿಯಲ್ಲಿ ಘಟನೆ ನಡೆದಿದೆ. ಕುಣಿಕೇನಹಳ್ಳಿಯ ಗ್ರಾಮದ 21 ಮಕ್ಕಳಲ್ಲಿ  ಕಪ್ಪು ಚುಕ್ಕೆಗಳು ಕಾಣಿಸಿಕೊಂಡಿವೆ. ಯಲಚೇನಹಳ್ಳಿ ಗ್ರಾಮದ 5 ಮಕ್ಕಳಲ್ಲಿ  ಮಚ್ಚೆಗಳು ಗೋಚರಿಸಿದ್ದು ಮಕ್ಕಳ ಅಂಗಾಲು – ಅಂಗೈಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡಿವೆ. ಕಳೆದ ಶನಿವಾರದಿಂದ ಕಪ್ಪು ಚುಕ್ಕಿಗಳು ಕಾಣಿಸಿಕೊಂಡಿದ್ದು ಶಾಲೆಯಿಂದ ಮನೆಗೆ ಮಕ್ಕಳು ವಾಪಸ್ ಬಂದ ಬಳಿಕ ಕಾಣಿಸಿಕೊಂಡಿವೆ. ಶಾಲೆಯ ಶಿಕ್ಷಕನಿಗೂ ಕಾಣಸಿಕೊಂಡ ಮಚ್ಚೆಗಳು ಇದ್ದು, ಮಕ್ಕಳ ಪಾದದಲ್ಲಿ ಕಾಣಿಸಿಕೊಂಡ ಕಪ್ಪು ಚುಕ್ಕೆಯಿಂದ  ಪೋಷಕರು ಆತಂಕಗೊಂಡಿದ್ದಾರೆ. ಶಾಲೆಗೆ ಭೇಟಿ ಕೊಟ್ಟ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ವೈದ್ಯರ ತಂಡವು,  ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಕುರಿತಂತೆ…

Read More

ವಂದೇ ಭಾರತ್ ರೈಲಿಗೆ ಚಾಲನೆ ನೀಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಆಮದು ಮಾಡಿಕೊಳ್ಳುವ ಕಾಲ ಇತ್ತು. ಇವತ್ತು ನಮ್ಮ ದೇಶ ಹೆಚ್ಚು ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿ ಅಕ್ಕಿ ಎಂದು ಮಾತನಾಡುತ್ತಾರೆ. ನಾವು ಕಾಂಗ್ರೆಸ್ನವರಿಗೆ ಉತ್ತರ ಕೊಡಬೇಕಾಗಿದೆ. ಕಳೆದ 3 ವರ್ಷಗಳಿಂದ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ. ಅಕ್ಕಿ ಬಗ್ಗೆ ಕಾಂಗ್ರೆಸ್ ನಾಯಕರನ್ನು ಕೇಳಿ ಎಂದರು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಕ್ಕಿ ಖರೀದಿಸಿ ಕೊಡುತ್ತಿದ್ದಾರೆ. ಅಕ್ಕಿ ವಿತರಣೆ ಮುಂದೆ ಹಾಕಿದರೆ ಹಣ ಉಳಿಸಬಹುದೆಂಬ ಲೆಕ್ಕಾಚಾರದಲ್ಲಿ ಕೈ ನಾಯಕರಿದ್ದಾರೆ. 2 ತಿಂಗಳು ಮುಂದೆ ಹಾಕಿದರೆ 2 ಸಾವಿರ ಕೋಟಿ ಹಣ ಉಳಿಸಬಹುದು. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಕಲಬುರಗಿ: ಕಾಂಗ್ರೆಸ್ ನೇತೃತ್ವ ಸರ್ಕಾರದ ಶಕ್ತಿ ಅಡಿ ರಾಜ್ಯದಲ್ಲಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಬಸ್ ಗಳು ರಶ್ ಆಗಿವೆ. ಇದರಿಂದ ಸೀಟ್ಗಾಗಿ ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಹಾಗೆ ನಿರ್ವಾಹಕ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ಸೇರಿದಂತೆ ದಿನನಿತ್ಯದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹೀಗೆ ಸರ್ಕಾರಿ ಬಸ್ ನಲ್ಲಿ ತಳ್ಳಾಟ-ನೂಕಾಟದಿಂದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದ ಬಳಿ ನಡೆದಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಜೇವರ್ಗಿ ಬಸ್ ಭರ್ತಿಯಾಗಿತ್ತು. ವಸ್ತಾರಿ ಗ್ರಾಮದ ಪ್ರಥಮ ಪಿಯು ವಿದ್ಯಾರ್ಥಿನಿ ಶರಣಮ್ಮ ಇದೇ ಬಸ್ ನಲ್ಲಿ ವಸ್ತಾರಿಯಿಂದ ಜೇವರ್ಗಿಗೆ ಕಾಲೇಜಿಗೆ ಹೊರಟಿದ್ದಳು. ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ತಳ್ಳಾಟ-ನೂಕಾಟ ಸಂಭವಿಸಿದೆ. ಇದರಿಂದ ಮಧ್ಯೆದಲ್ಲಿ ಸಿಲುಕಿದ್ದ ವಿದ್ಯಾರ್ಥಿನಿ ಶರಣಮ್ಮ ಅಸ್ವಸ್ಥಳಾಗಿದ್ದಾಳೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಹುಬ್ಬಳ್ಳಿ: ಈಗಾಗಲೇ ರಾಜ್ಯಕ್ಕೆ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ ಕೊಡುತ್ತಿದೆ. ನಮ್ಮ ಅಕ್ಕಿ ಬಿಟ್ಟು 10 ಕೆ.ಜಿ. ಅಕ್ಕಿ ಕೊಡುವ ಬಗ್ಗೆ ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪದೇ ಪದೇ 10 ಕೆ.ಜಿ. ಅಕ್ಕಿಗೆ ಅಡ್ಡಗಾಲು ಹಾಕುತ್ತಿದ್ದೇವೆ ಅಂತಾರೆ. ರಾಜ್ಯ ಸರ್ಕಾರ ಮೇ 2ರಂದು ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ 5 ಕೆ.ಜಿ. ಕೊಡುತ್ತಿದೆ, ನಾವು 5 ಕೆ.ಜಿ. ಕೊಡುತ್ತೇವೆ ಅಂತ ಹೇಳಲಿ. ನಿಮಗೆ ಅಕ್ಕಿ ಬೇಕಾದರೆ ಕೇಂದ್ರ ಸರ್ಕಾರದ ಬಳಿ ಕೇಳಬೇಕು. ನೈಸರ್ಗಿಕ ವಿಕೋಪ ಬಂದಾಗ ನಮಗೆ ಅಕ್ಕಿ ಸ್ಟಾಕ್ ಅವಶ್ಯಕವಿದೆ. ಕಾಂಗ್ರೆಸ್ ಮೊದಲು ಸುಳ್ಳು ಹೇಳೋದು ಬಂದ್ ಮಾಡಬೇಕು ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe…

Read More

ಬೆಂಗಳೂರು: ನೀವು ಮೊದಲ ಬಾರಿ ಶಾಸಕರಲ್ಲ, ಪರ್ಮನೆಂಟ್ ಶಾಸಕರಾಗಿರಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಶಾಸಕರ ತರಬೇತಿ ಶಿಬಿರದಲ್ಲಿ ಸಲಹೆ ನೀಡಿದ ಖಾದರ್, ವಿಧಾನಸಭೆ ಒಳಗೆ ಆತ್ಮವಿಶ್ವಾಸದಿಂದ ಇರಲು ಈ ಶಿಬಿರ ಅನುಕೂಲ. ಈ ಶಿಬಿರದಲ್ಲಿ ಆರೋಗ್ಯದ ಬಗ್ಗೆಯೂ ಶಾಸಕರಿಗೆ ತರಬೇತಿ ನೀಡಲಾಗುತ್ತೆ ಎಂದರು. ರಾಜಕೀಯ ಒಂದು ಸರ್ಕಸ್ ಕಂಪನಿ ಇದ್ದ ಹಾಗೆ. ಈ ಸರ್ಕಸ್ ಕಂಪನಿಯಲ್ಲಿ ಹುಲಿ, ಸಿಂಹ, ಕೋತಿ, ಆನೆ ಎಲ್ಲವೂ ಇರುತ್ತೆ. ರಾಜಕೀಯದಲ್ಲೂ ಹಾಗೆ ಎಲ್ಲರೂ ಸಿಂಹ ಆಗಲು ಸಾಧ್ಯವಿಲ್ಲ. ಸರ್ಕಸ್ನಲ್ಲಿ ರಿಂಗ್ ಮಾಸ್ಟರ್ ಹಿಂದೆ ಎಲ್ಲಾ ಪ್ರಾಣಿಗಳು ಹೋಗುತ್ತವೆ. ಹಾಗೆ ನೀವು ರಾಜಕೀಯದಲ್ಲಿ ರಿಂಗ್ ಮಾಸ್ಟರ್ ಆಗಬೇಕು ಎಂದರು. ಶಾಸಕರು ಕ್ಷೇತ್ರದ ಜನರಲ್ಲಿ ಸಮಾನತೆ, ಸೌಹಾರ್ದತೆ ಮೂಡಿಸಬೇಕು ಎಂದು ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಶಾಸಕರಿಗೆ ಮಾರ್ಗದರ್ಶನ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h…

Read More