Author: admin

ಮಧುಗಿರಿ: ಮಿನಿ ಬಸ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಜಡೇಗೊಂಡಹನ ಬಳಿ ನಡೆದಿದೆ. ತಗ್ಗಿಹಳ್ಳಿ ಮೂಲದ ಸಂಜೀವಯ್ಯ ಎಂಬವರು ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ ಮಿನಿ ಬಸ್ ನ ಕ್ಲಿನರ್ ಗೆ ಗಾಯವಾಗಿದೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದ ಪರಿಣಾಮ ಬಸ್ ನಜ್ಜುಗುಜ್ಜಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ… ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರಿಂದ ನಿವೇಶನ ಹೆಸರಿನಲ್ಲಿ 118. 50 ಲಕ್ಷ ಮುಂಗಡ ಹಣ ಪಡೆದು ವಂಚಿಸಲಾಗಿದ್ದು, ಈ ಬಗ್ಗೆ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ‘ಕೆಂಗೇರಿ ಉಪನಗರ ಅರುಣಾಚಲ ಬಡಾವಣೆಯ ನಿವಾಸಿ ಎಚ್. ಆನಂದ್ ಉರುಫ್ ಮಾಸ್ಟರ್ ಆನಂದ್ (39) ವಂಚನೆ ಬಗ್ಗೆ ದೂರು ನೀಡಿದ್ದಾರೆ. ಚಂದ್ರಾಲೇಔಟ್‌ನ ಇನ್‌ಕಮ್ ಟ್ಯಾಕ್ಸ್ ಬಡಾವಣೆಯಲ್ಲಿರುವ ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯ ಮಾಲೀಕ ಎಸ್. ಸುಧೀರ್, ಆಪ್ತ ಸಹಾಯಕಿ ಮನಿಕಾ ಕೆ. ಎಂ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. 2020ರ ಸೆಪ್ಟೆಂಬರ್ 23ರಿಂದ 2021ರ ಅಕ್ಟೋಬರ್ 7ರ ಅವಧಿಯಲ್ಲಾದ ವಂಚನೆ ಇದಾಗಿದೆ. ಹಣ ವರ್ಗಾವಣೆ ದಾಖಲೆ, ಖರೀದಿ ಕರಾರು ಪತ್ರ ಹಾಗೂ ಇತರೆ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ದೂರಿನ ವಿವರ: ‘ಕೊಮ್ಮಘಟ್ಟದ ರಾಮಸಂದ್ರ ಗ್ರಾಮಕ್ಕೆ 2020ರ ಜುಲೈನಲ್ಲಿ ಚಿತ್ರೀಕರಣಕ್ಕೆಂದು ಹೋದಾಗ, ನಿವೇಶನಗಳನ್ನು ನೋಡಿದ್ದೆ. ಅಲ್ಲಿಯ ಕಚೇರಿಯಲ್ಲಿ ಮನಿಕಾ ಕೆ. ಎಂ…

Read More

ಆಧುನಿಕ ಜೀವನ ವಿಘಟಿತವಾಗಿ ಸಣ್ಣ ಕಥೆಗಳಾಗಿವೆ. ಈ ವೇಳೆ ಜೀವನವನ್ನು ಸಮಗ್ರವಾಗಿ ನೋಡಲು ಕಾದಂಬರಿ ಮೊರೆ ಹೋಗಲಾಗುತ್ತಿದೆ ಎಂದು ಕಾದಂಬರಿಕಾರ ಶ್ರೀಧರ ಬಳಗಾರ ತಿಳಿಸಿದರು. ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿ ಬಿಡುಗಡೆಮಾಡಿ ಅವರು ಮಾತನಾಡಿದರು. ಲೌಕಿಕ ಜಗತ್ತಿನಲ್ಲಿ ಕಾಲ್ಪನಿಕವಾದಂತಹ ಅವಕಾಶಗಳನ್ನು ನೀಡುತ್ತಿರುವುದು ಕಾದಂಬರಿ. ಯಾವುದನ್ನು ಕಾರ್ಪೋರೇಟ್ ಜಗತ್ತು ಅಂತ ಕರೆಯುತ್ತೆವೆಯೋ, ಅದು ನಮ್ಮ ಅಂತಃಕರಣದ ಮಾಹಿತಿ ನಾಶ ಮಾಡುತ್ತದೆ. ಅಂತಃಕರಣದ ಮನುಷ್ಯತ್ವ ಹುಡುಕುವ ಪ್ರಯತ್ನವನ್ನು ಕಾದಂಬರಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಕಾದಂಬರಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ’ ಎಂದು ಹೇಳಿದರು. ಕಿರುತೆರೆ ನಟಿ ರಂಜನಿ ರಾಘವನ್, ‘ಅತ್ತುತ್ತಮ ಕಾದಂಬರಿಯ ಓದು ಹೊಸ ಜೀವನ ಬದುಕಿ ಬಂದಂತೆ ಅನಿಸುತ್ತದೆ. ಕಾದಂಬರಿ ಅಥವಾ ಕತೆಯನ್ನು ನಾವು ಹೀಗೆಯೇ ಬರೆಯಬೇಕು ಅಂದುಕೊಂಡರೆ ಬರೆಯುತ್ತಾ ಹೋದಂತೆ ಅದರ ಸ್ವರೂಪವೇ ಬದಲಾಗುತ್ತದೆ’ ಎಂದರು. ಕೃತಿಯ ಬಗ್ಗೆ ಮಾತನಾಡಿದ ವಿಮರ್ಶಕಿ ಎಂ. ಎಸ್. ಆಶಾದೇವಿ, ‘ಕೃತಿಗೆ ಕಾಲದ ನೆಲೆ ಹಾಗೂ ಕಾಲದ…

Read More

ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಶನಿವಾರ 58, 14, 524 ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಪ್ರಯಾಣ ಬೆಳೆಸಿದ್ದಾರೆ. ಶನಿವಾರ ಬಹುತೇಕ ಎಲ್ಲಾ ಸರ್ಕಾರಿ ಬಸ್‌ಗಳು ಅದರಲ್ಲೂ ಧರ್ಮಸ್ಥಳ, ಚಾಂಮುಂಡೇಶ್ವರಿ ದೇವಾಲಯ ಸೇರಿ ರಾಜ್ಯದ ಪ್ರಸಿದ್ಧ ದೇವಾಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಶನಿವಾರ ಬೆಳಗ್ಗೆಯಿಂದ ಮಧ್ಯ ರಾತ್ರಿವರೆಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಬರೋಬ್ಬರಿ 58, 14, 524 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಮಹಿಳೆಯರ ಉಚಿತ ಟಿಕೆಟ್ ಮೌಲ್ಯ ಒಟ್ಟು 13. 41 ಕೋಟಿ ರೂ. ಆಗಿದೆ. ಶನಿವಾರ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 17, 29, 314, ಬಿಎಂಟಿಸಿಯಲ್ಲಿ 18, 95, 144 ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ನಲ್ಲಿ 14, 01, 910 ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ 7, 88, 156 ಮಹಿಳಾ ಪ್ರಯಾಣಿಕರು…

Read More

ಬೆಂಗಳೂರಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ಸರಗಳ್ಳತನ ಮಾಡಲು ಯತ್ನಿಸಲಾಗಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಮಹಿಳೆ ಪಾರಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರದಲ್ಲಿ ನಡೆದಿದೆ. ಕಳೆದ ಜೂನ್ 25 ರ 7. 30 ರ ಸುಮಾರಿಗೆ ಘಟನೆ ನಡೆದಿದ್ದು, ರಸ್ತೆಯಲ್ಲಿ ನಡೆದುಕೊಂಡು ಬರ್ತಿದ್ದ ಸ್ವಪ್ನ ಎಂಬ ಮಹಿಳೆಯ, ಸರ ಕಸಿದು ಪರಾರಿಯಾಗಲು ಯತ್ನಿಸಲಾಗಿದೆ. ಆದರೆ ಸರಗಳ್ಳತನ ಯತ್ನ ವಿಫಲವಾಗಿದ್ದು, ತಕ್ಷಣ ಚೀರಿಕೊಂಡ ಮಹಿಳೆಯಿಂದ ಸರಗಳ್ಳ ಓಡಿ ಹೋಗಿದ್ದಾನೆ. ಎದುರಿನಿಂದ ಬರ್ತಿದ್ದ ಸ್ವಪ್ನ ತಾಯಿ ಮತ್ತು ಸಹೋದರು ಸರಗಳ್ಳನನ್ನ ಹಿಡಿಯಲು ಯತ್ನಿಸಿದರು. ಆದರೆ ಮಾರಕಾಸ್ತ್ರ ತೋರಿಸಿ ಆರೋಪಿ ಪರಾರಿ ಆಗಿದ್ದಾನೆ. ಈ ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

16 ನೇ ವಿಧಾನಸಭೆಗೆ ಈಗ ಮೊದಲ ಬಾರಿಗೆ ಆಯ್ಕೆಯಾಗಿರುವ ನೂತನ ಶಾಸಕರಿಗೆ ಇಂದಿನಿಂದ ಮೂರು ದಿನಗಳ ಕಾಲ ತರಬೇತಿ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಹೊರವಲಯದ ನೆಲಮಂಗಲದ ಸಮೀಪವಿರುವ ಮಹದೇವಪುರದ ಧರ್ಮಸ್ಥಳ ಮಂಜುನಾಥೇಶ್ವರ ಆಡಳಿತ ಮಂಡಳಿಯ ಕ್ಷೇಮವನದಲ್ಲಿ ತರಬೇತಿ ಶಿಬಿರ ನಡೆಯಲಿದ್ದು, ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಒಟ್ಟು 70 ಮಂದಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದು, ಅವರಿಗೆ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು? ವಿಚಾರ ಮಂಡನೆ ಮಾಡುವುದು ಹೇಗೆ? ಎಂಬ ವಿಚಾರಗಳನ್ನು ಶಿಬಿರದಲ್ಲಿ ತಿಳಿಸಿಕೊಡಲಿದ್ದಾರೆ. ಇನ್ನು ಇಂದು ಮೊದಲ ದಿನವಾಗಿರುವ ಕಾರಣ ಬೆಳಿಗ್ಗೆಯಿಂದಲೇ ಶಾಸಕರುಗಳು ಕ್ಷೇಮವನದತ್ತ ಆಗಮಿಸಿದ್ದು, ಬೆಳ್ಳಂಬೆಳಿಗ್ಗೆ ಯೋಗ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಗಿದೆ. ಮಧ್ಯಾಹ್ನ 12 ಘಂಟೆಗೆ ಸಿಎಂ ಸಿದ್ಧರಾಮಯ್ಯ ಅಧಿಕೃತವಾಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 30 ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ, ಯಾದಗಿರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕಿನ, ಕುಣಿಗಲ್ ಬೈಪಾಸ್ ರಸ್ತೆಯ, ಮಹದೇವಪುರದಲ್ಲಿರುವ ಎಸ್ ಡಿಎಂ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್-ಕ್ಷೇಮವನದಲ್ಲಿ 16 ನೇ ವಿಧಾನಸಭೆಯ ನೂತನ ಸದಸ್ಯರುಗಳಿಗೆ ಇಂದಿನಿಂದ ಮೂರು ದಿನಗಳವರೆಗೆ (2023ರ ಜೂನ್ 26 ರಿಂದ 28 ರವರೆಗೆ) ಏರ್ಪಡಿಸಲಾದ ತರಬೇತಿ ಶಿಬಿರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ.ಎಸ್.ಹೊರಟ್ಟಿ, ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಷರೀದ್, ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರಕುಮಾರ್ ಸೇರಿದಂತೆ ನೂತನ ಶಾಸಕರುಗಳು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಹುಬ್ಬಳ್ಳಿ: ರಾಜ್ಯದ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚುನಾವಣೆಗೂ ಮುನ್ನ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದರು. ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಗ್ಯಾರಂಟಿ ಜಾರಿಯಾಗಿಲ್ಲ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಮೊದಲನೇ ಕ್ಯಾಬಿನೆಟ್ನಲ್ಲಿ ಯುವಕರಿಗೆ ಮೋಸ ಮಾಡಿದ್ದಾರೆ. ರಾಜ್ಯದ ಒಬ್ಬ ಯವಕನಿಗೂ ಹಣ ಕೊಟ್ಟಿಲ್ಲ. ರಾಜ್ಯ ಸರ್ಕಾರ ಮನೆ ಯಜಮಾನಿ ಖಾತೆಗೆ ಇನ್ನೂ ಹಣ ಹಾಕಿಲ್ಲ. ಅಕ್ಕಿ ವಿತರಣೆ ಮಾಡಲು ಕೇಂದ್ರ ಪೂರೈಕೆ ಮಾಡುತ್ತಿಲ್ಲ ಅಂತಾರೆ. ಗ್ಯಾರಂಟಿ ಹೇಳಿ ಬಡಜನರಿಗೆ ಟೋಪಿ ಹಾಕಿ ಸರ್ಕಾರ ನಡೆಸುತ್ತಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಏಕಾಏಕಿ ಮೂರು ಚಿರತೆಗಳು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ರಂಗನಕೆರೆ ಬಳಿಯ ರಂಗನಗುಡ್ಡದಲ್ಲಿ ನಡೆದಿದೆ. ಚಿರತೆಗಳು ಪ್ರತ್ಯಕ್ಷ ಹಿನ್ನೆಲೆ, ಭಯಭೀತರಾಗಿರುವ ಸ್ಥಳಿಯರು ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಚಿರತೆಗಳ ಭೀತಿಯಿಂದ ಜಾನುವಾರುಗಳನ್ನು ಮೇಯಿಸಲು ಹೋಗಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಈ ಮೂರು ಚಿರತೆಗಳು 5 ಜಾನುವಾರುಗಳನ್ನು ಕೊಂದು ಹಾಕಿವೆ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಅದರಲ್ಲೂ ಚಿಕ್ಕನಾಯಕನಹಳ್ಳಿ ತಾಲೂಕಿನ ಭಾಗದಲ್ಲಿ ಚಿರತೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಳೆದ ಎರಡು ವರ್ಷಗಳಿಂದ ಚಿರತೆಗಳ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ. ರಾತ್ರಿ ವೇಳೆ ದನದ ಕೊಟ್ಟಿಗೆಗಳಿಗೆ ನುಗ್ಗುವ ಚಿರತೆಗಳು ಜಾನುವಾರುಗಳು ಹಾಗೂ ಕುರಿ ಮೇಕೆಗಳನ್ನು ತಿಂದು ಹಾಕುತ್ತಿವೆ. ಚಿರತೆಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ರೈತರು ಅನೇಕ ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಅರಣ್ಯ ಇಲಾಖೆಯ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನು ಮುಂದಾದರೂ ಚಿರತೆಗಳನ್ನು ಸೆರೆಹಿಡಿದು ದೂರದ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ರೈತರು ಮನವಿ…

Read More