Subscribe to Updates
Get the latest creative news from FooBar about art, design and business.
- ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ
- ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ: ನಗನಗದು ದೋಚಿ ಪರಾರಿ
- ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ
- ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ
- ಹುಲಿ ಕಾಣಿಸಿಕೊಂಡರೂ ಕೂಂಬಿಂಗ್ ಕಾರ್ಯಾಚರಣೆ ಇಲ್ಲ: ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ
- ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
- ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
- ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Author: admin
ವಾರ್ಡ್ ವಿಂಗಡಣೆಗೆ ಮತ್ತೆ ಸಮಿತಿ ನೇಮಿಸಿ ಡಿಕೆಶಿ ಮೆಗಾ ಪ್ಲಾನ್ ಮಾಡಿದ್ದಾರೆ. ಬಿಜೆಪಿ ಮಣಿಸಲು ಜಾತಿ ಆಧಾರದಲ್ಲಿ ವಾರ್ಡ್ ವಿಂಗಡಣೆಗೆ ಕಸರತ್ತು ನಡೆಸಿದ್ದಾರೆ. ಬಿಜೆಪಿ ಮುಸ್ಲಿಂ ಮತ ಚದುರಿ ತನಗೆ ಅನುಕೂಲವಾಗುವಂತೆ ವಾರ್ಡ್ ವಿಂಗಡಣೆ ಮಾಡಿಕೊಂಡಿತ್ತು. ಆದರೆ ಕಾಂಗ್ರೆಸ್ ತನ್ನ ಹಿಡಿತದಲ್ಲಿರೋ ವಾರ್ಡ್ ಉಳಿಸಿಕೊಳ್ಳಲು ಹೊಸ ಗಡಿ ಗುರುತಿಗೆ ನಿರ್ಧಾರ ಮಾಡಿದೆ. ಮುಸ್ಲಿಂ ಮತಗಳೇ ಮೇನ್ ಟಾರ್ಗೆಟ್ ಆಗಿದ್ದು, ಜೊತೆಗೆ ಬೂತ್ ವಾರು ಮತಗಳ ಲೆಕ್ಕಾಚಾರದಲ್ಲೂ ಹೊಸ ವಾರ್ಡ್ ಗಡಿ ಸಿದ್ದವಾಗಲಿದೆ. ಪಾಲಿಕೆ ಚುನಾವಣೆ ಗೆಲ್ಲಲು ಅಂತಿಮ ಅಸ್ತ್ರ ಪ್ರಯೋಗಿಸಿದ ಡಿಕೆ ಶಿವಕುಮಾರ್, ಹೊಸ ಬಿಬಿಎಂಪಿ ಆ್ಯಕ್ಟ್ 2020 ಆಧಾರದಲ್ಲೇ ಗಡಿ ವಿಂಗಡಣೆ ಮಾಡಲು ಹೊರಟಿದ್ದಾರೆ. ಹೊಸ ಆ್ಯಕ್ಟ್ ಪ್ರಕಾರ ವಾರ್ಡ್ ಹೆಚ್ಚಳಕ್ಕೂ ಅವಕಾಶ ಇದೆ. ಬಿಜೆಪಿ ಸರ್ಕಾರ 243 ವಾರ್ಡ್ ರೂಪಿಸಿತ್ತು. ಈಗ 2011ರ ಜನಗಣತಿ ಆಧಾರದಲ್ಲಿ ಮರು ವಿಂಗಡಣೆ ನಡೆಯಲಿದೆ. ಬಿಜೆಪಿ ಮಣಿಸಲು ಜಾತಿ ಆಧಾರದಲ್ಲಿ ವಾರ್ಡ್ ವಿಂಗಡಣೆಗೆ ಕಸರತ್ತು ನಡೆಸಿದ್ದಾರೆ. ಬಿಜೆಪಿ ಮುಸ್ಲಿಂ ಮತ ಚದುರಿ ತನಗೆ…
ಬೆಂಗಳೂರು ಮಹಿಳೆಯರೆ ಎಚ್ಚರವಾಗಿರಿ. ಲೇಡಿಸ್ ಪಿಜಿಗಳನ್ನೇ ಹುಡುಕಿ ಹೋಗುವ ಈ ಕಾಮುಕ ಕದ್ದು ಮುಚ್ಚಿ ಸ್ನಾನ ಮಾಡುವ ವಿಡಿಯೋ ರೆಕಾರ್ಡ್ ಮಾಡುತ್ತಾನೆ. ಯುವತಿಯರ ಸ್ನಾನದ ವಿಡಿಯೋ ತೆಗಿಯುತಿದ್ದಂತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕನಾಗಿದ್ದು, ಮಹದೇವಪುರ ಹೂಡಿಯಲ್ಲಿರುವ ಪಿಜಿನಲ್ಲಿ ವಾಸವಾಗಿದ್ದ ಅಶೋಕ್, ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ. ಅಶೋಕ್ ವಾಸ ಮಾಡ್ತಿದ್ದ ಪಿಜಿ ಮುಂಭಾಗದಲ್ಲೇ ಇದ್ದ, ಲೇಡಿಸ್ ಪಿಜಿಯಲ್ಲಿನ ಸ್ನಾನದ ರೂಂ ಅನ್ನೇ ನೋಡುತ್ತಾ ಕುಳಿತಿದ್ದ ಅಶೋಕ್, ಯುವತಿಯರು ಸ್ನಾನ ಮಾಡಲು ಬರ್ತಿದ್ದಂತೆ ಅಲರ್ಟ್ ಆಗುತ್ತಿದ್ದ. ಸ್ನಾನ ಮಾಡ್ತಿದ್ದ ವಿಡಿಯೋ ವೆಂಟಿಲೇಷನ್ ಮೂಲಕ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದನು. ಕಳೆದ ಜೂನ್ 21ರಂದು ಸಿಕ್ಕಿಬಿದ್ದ ಆರೋಪಿ ಅಶೋಕ್, ವೆಂಟಿಲೇಷನ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿಕೊಳ್ತಿದ್ದ. ಆರೋಪಿಯನ್ನು ಹಿಡಿದ ಸ್ಥಳೀಯರು ಮಹದೇವಪುರ ಪೊಲೀಸರಿಗೆ ಒಪ್ಪಿಸಿದರು. ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ, ಅಶೋಕ್ ಮೊಬೈಲ್ ನಲ್ಲಿ 7 ಯುವತಿಯರ ಸ್ನಾನದ ವಿಡಿಯೋ ಪತ್ತೆಯಾಗಿದೆ. ನಮ್ಮತುಮಕೂರು.ಕಾಂನ…
ಬೆಂಗಳೂರು: ಕಳೆದ ಒಂದೂವರೆ ತಿಂಗಳಿನಿಂದ ನಿರುದ್ಯೋಗಿಯಾಗಿ ಕುಳಿತಿದ್ದೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು. ವಿಧಾನಸಭೆ ಚುನಾವಣೆ ಸೋತ ಬಳಿಕ ಮಾಜಿ ಸಚಿವ ವಿ ಸೋಮಣ್ಣ ಅವರು ಇದೇ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದರು. ಚುನಾವಣೆ ಸೋಲಿನ ಬಳಿಕ ಮೊದಲ ಬಾರಿ ಕಚೇರಿಗೆ ಬಂದಿದ್ದೇನೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ನಂಬಿದವನು ನಾನು. ಗೋವಿಂದರಾಜ ನಗರದಲ್ಲಿ 480 ಕೋಟಿ ರೂ.ಗೂ ಹೆಚ್ಚಿನ ಕೆಲಸ ಮಾಡಿರುವೆ. ಆಸ್ಪತ್ರೆ, ಶಾಲೆ, ಕಾಲೇಜು ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮನೆಯಲ್ಲಿ ಆರಾಮಾಗಿ ಮಲಗಿದ್ದರೂ ಗೆಲ್ಲುತ್ತಿದ್ದೆ. ಆದರೆ ಪಕ್ಷ ನೀಡಿದ ಟಾಸ್ಕ್ ಪೂರೈಸಲು ಕ್ಷೇತ್ರ ಬಿಟ್ಟು ಹೋದೆ. ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಎರಡರಲ್ಲೂ ಸೋತು ಈಗ ನಿರುದ್ಯೋಗಿ ಆಗಿ ಮನೆಯಲ್ಲಿ ಕುಳಿತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು. ನಾನೇನು ರಾಜಕೀಯ ಸನ್ಯಾಸಿ ಅಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಾಗುವ…
ಬಿಬಿಎಂಪಿ ಶಾಲೆ ಗುಣಮಟ್ಟ ಹೆಚ್ಚಳಕ್ಕೆ ತಜ್ಞರ ಮೊರೆ ಹೋಗಲಾಗಿದೆ. ಕೊರೋನಾ ಬಳಿಕ ಶಾಲೆ-ಕಾಲೇಜುಗಳಿಗೆ ಮಕ್ಕಳ ದಾಖಲಾತಿ ಹೆಚ್ಚಳ ಮಾಡಬೇಕಾಗಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಿದ ಪಾಲಿಕೆ, ಹತ್ತನೇ ತರಗತಿ ಹಾಗೂ ಪಿಯುಸಿ ಫಲಿತಾಂಶ ಹೆಚ್ಚಳಕ್ಕಾಗಿ ಸಲಹೆಗಾರರನ್ನು ನೇಮಿಸಿಕೊಳ್ಳಲು ಸಂದರ್ಶನ ನಡೆಸುತ್ತಿದೆ. ಕೊರೋನಾ ಬಳಿಕ ದಾಖಲಾತಿ ಪ್ರಮಾಣ 17 ಸಾವಿರದಿಂದ 23 ಸಾವಿರಕ್ಕೆ ಏರಿಕೆ ಆಗಿದೆ. ಬಿಬಿಎಂಪಿ ಶಾಲಾ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮಾಡುವುದು ಅನಿವಾರ್ಯವಾಗಿದ್ದು, 25 ಸಾವಿರ ವಿದ್ಯಾರ್ಥಿಗಳ ದಾಖಲು ಗುರಿಯನ್ನು ಪಾಲಿಕೆ ಹೊಂದಿದೆ. ಬಿಬಿಎಂಪಿ ಶಾಲಾ ಕಾಲೇಜಿನ ದಾಖಲಾತಿ ವಿವರ: ಹಂತ – ವಿದ್ಯಾರ್ಥಿಗಳ ಸಂಖ್ಯೆ ಶಿಶು ವಿಹಾರ: 3,751 ಪ್ರಾಥಮಿಕ ಶಾಲೆ: 3,744 ಪ್ರೌಢ ಶಾಲೆ: …
ರಾಜ್ಯ ಬಿಜೆಪಿಯಲ್ಲಿ ಹೊಸ ಬಿಕ್ಕಟ್ಟು ಶುರುವಾಗಿದೆ. ಇದರಿಂದ ಹೈಕಮಾಂಡ್ ವರಿಷ್ಠರಿಗೂ ಶುರುವಾಗುತ್ತಾ ಮತ್ತೊಂದು ತಲೆನೋವು ಎಂಬ ಅನುಮಾನ ಹುಟ್ಟಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಈಗ ದಲಿತ ಸಮುದಾಯದ ನಾಯಕರ ಕಣ್ಣು ಬಿದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಾನು ಕೂಡ ಆಕಾಂಕ್ಷಿ ಎಂದು ಹೆಸರು ತೇಲಿ ಬಿಟ್ಟ ರಮೇಶ್ ಜಿಗಜಿಣಗಿ, ಲಿಂಗಾಯತ, ಒಕ್ಕಲಿಗ ಸಮುದಾಯದ ಜೊತೆ, ಈಗ ದಲಿತ ಸಮುದಾಯದಿಂದಲೂ ಲಾಭಿ ಹೆಚ್ಚಿದೆ. ವಿ. ಸೋಮಣ್ಣ ಬಹಿರಂಗ ಹೇಳಿಕೆ ಬಳಿಕ ರಮೇಶ್ ಜಿಗಜಿಣಗಿಯಿಂದ ಅಧ್ಯಕ್ಷ ಸ್ಥಾನದ ಬಗ್ಗೆ ಒಲವು ತೋರಿದ್ದಾರೆ. ಡಜನ್ ಗಟ್ಟಲೇ ನಾಯಕರ ಲಾಭಿ ನಡುವೆ ರಮೇಶ್ ಜಿಗಜಿಣಗಿ ಹೊಸ ಹೆಸರು ಸೇರ್ಪಡೆಯಾಗಿದೆ. ನಾನು ಕೂಡ ಹಿರಿಯ ನಾಯಕ, ರಾಜ್ಯಾಧ್ಯಕ್ಷ ಹುದ್ದೆಗೆ ನನ್ನನ್ನೂ ಪರಿಗಣಿಸಬೇಕು ಎಂದಿದ್ದಾರೆ. ಇತ್ತ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿಯಿಂದಲೂ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಹೆಚ್ಚಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆಯೇ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಬಿರುಸುಗೊಂಡಿದೆ. ಈ ಬಾರಿ ನಾಟಿ ಮತ್ತು ಬಾಗಲಕೋಟೆ ಜಿಲ್ಲೆಯ ಅಮೀನಗಡ ತಳಿಯ ಕುರಿಗಳಿಗೆ ಬೇಡಿಕೆ ಹೆಚ್ಚಿದೆ. ಹಬ್ಬಕ್ಕೆ ಇನ್ನೂ ಮೂರು ದಿನ ಬಾಕಿ ಇರುವಂತೆ ವ್ಯಾಪಾರ ಜೋರಾಗಿದೆ. ನಾನಾ ಜಿಲ್ಲೆಗಳಿಂದ ವಿವಿಧ ತಳಿಗಳ ಕುರಿ ಹಾಗೂ ಮೇಕೆಗಳ ದಂಡುಗಳೊಂದಿಗೆ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ. ಜೂ. 29ಕ್ಕೆ ಹಬ್ಬವಿದ್ದು, ಗ್ರಾಹಕರು ಈಗಲೇ ಕುರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಬಂಡೂರು, ಕಿರಿಗಾವು, ಮೌಳಿ, ಶಿರೋಹಿ, ತಮಿಳುನಾಡು ಕುರಿ, ಬಾಗಲಕೋಟೆ, ಅಮೀನಗಡ, ಗೆಣಸಿ, ಶಿರಾ, ತುಮಕೂರು, ಚಿತ್ರದುರ್ಗ ಮರಿ ಸೇರಿದಂತೆ ವಿವಿಧ ತಳಿಗಳು ಇಲ್ಲಿವೆ. ಬಂಡೂರು ಕುರಿಗಳು ಕನಿಷ್ಠ 15ಸಾವಿರದಿಂದ ಗರಿಷ್ಠ 90ಸಾವಿರದವರೆಗೆ ಮಾರಾಟವಾದರೆ, ಅಮೀನಗಡ ತಳಿಯ ಟಗರಿಗೆ ಕನಿಷ್ಠ ಕೆ 20 ಸಾವಿರದಿಂದ ಗರಿಷ್ಠ 7 1. 20ಲಕ್ಷದವರೆಗೂ ಬಿಕರಿಯಾಗುತ್ತಿವೆ’ ಎಂದು ವ್ಯಾಪಾರಿ ಚಿಕ್ಕಣ್ಣ ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಅಮೀನಗಡದಿಂದ 60 ಟಗರು ತಂದಿದ್ದೇನೆ. 20 ಟಗರು ಮಾರಾಟವಾಗಿವೆ.…
ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಪರಸ್ ನೇಪಾಳಿ ಉರುಫ್ ಡೇವಿಡ್ (18) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಸ್ನೇಹಿತರೇ ಕೃತ್ಯ ಎಸಗಿರುವುದು ಗೊತ್ತಾಗಿದೆ. ಮೂಲತಃ ನೇಪಾಳದ ಪರಸ್ ಹೋಟೆಲೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಹರಳೂರು ಬಳಿ ಸ್ನೇಹಿತರ ಜೊತೆ ವಾಸವಿದ್ದರು. ಇತ್ತೀಚೆಗೆ ಪರಸ್, ಬೇರೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಸ್ನೇಹಿತರ ಜೊತೆ ಬಾರ್ ನಲ್ಲಿ ಮದ್ಯ ಕುಡಿದು ಕೊಠಡಿಗೆ ವಾಪಸು ಬರುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು. ಶನಿವಾರ ರಾತ್ರಿ ಪರಸ್ ಹಾಗೂ ಸ್ನೇಹಿತರು ಬಾರ್ ನಲ್ಲಿ ಮದ್ಯದ ಪಾರ್ಟಿ ಮಾಡಿದ್ದರು. ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿತ್ತು. ಸ್ನೇಹಿತರನ್ನು ಅವಾಚ್ಯವಾಗಿ ನಿಂದಿಸಿದ್ದ ಪರಸ್, ಬಾರ್ ನಿಂದ ಹೊರಟು ಕೊಠಡಿಗೆ ಬಂದಿದ್ದರು’ ಎಂದು ಪೊಲೀಸರು ಹೇಳಿದರು. ‘ಹಿಂಬಾಲಿಸಿಕೊಂಡು ಬಂದಿದ್ದ ಸ್ನೇಹಿತರು ಪುನಃ ಜಗಳ ತೆಗೆದಿದ್ದರು. ಆಗ ಚಾಕುವಿನಿಂದ ಇರಿದಿದ್ದು, ರಕ್ತಸ್ರಾವದಿಂದ ಪರಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ನೇಹಿತರೇ ಕೃತ್ಯ ಎಸಗಿರುವುದು ಗೊತ್ತಾಗಿದ್ದು, ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ರಾಜಕಾಲುವೆಗಳ ದುರಸ್ತಿಗಾಗಿ 2019ರ ಏಪ್ರಿಲ್ ನಿಂದ 2021ರ ಮಾರ್ಚ್ ವರೆಗಿನ ಅವಧಿಯಲ್ಲಿ ವೆಚ್ಚ ಮಾಡಿರುವ ಒಟ್ಟು 7490 ಕೋಟಿ ಮೊತ್ತದ ಕುರಿತು ಲೆಕ್ಕಪರಿಶೋಧಕರು ಗಂಭೀರ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪ್ರತಿ ವರ್ಷ ಬಿಬಿಎಂಪಿಯ ವಿವಿಧ ವಿಭಾಗಗಳ ಆಡಿಟ್ ಕೈಗೊಳ್ಳುತ್ತದೆ ಹಲವು ಕಾಮಗಾರಿಗಳನ್ನು ಕೈಗೊಂಡಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಮತ್ತು ಡಬಲ್ ಬಿಲ್ಲಿಂಗ್ ಗೆ ಅವಕಾಶ ಕಲ್ಪಿಸಿರುವ ಕುರಿತ ಲೋಪಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರ್‌ಟಿಐ ಅಡಿಯಲ್ಲಿ ಪಡೆದಿರುವ ಮಾಹಿತಿಯಲ್ಲಿ ಈ ವಿಷಯಗಳು ಗೊತ್ತಾಗಿವೆ. ಈ ಅವಧಿಯಲ್ಲಿ ಕೈಗೊಂಡಿರುವ 91 ಕಾಮಗಾರಿಗಳಲ್ಲಿ ವ್ಯತ್ಯಾಸಗಳನ್ನು ಲೆಕ್ಕಪರಿಶೋಧಕರು ಪತ್ತೆ ಮಾಡಿದ್ದು, 1287 ಕೋಟಿ ಮೊತ್ತ ವೆಚ್ಚ ಕುರಿತು ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಪಾವತಿಸಿರುವ 114.19 ಕೋಟಿ ವಸೂಲಿ ಮಾಡುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ. 2018-19ರ ಅವಧಿಯ ಲೆಕ್ಕಪರಿಶೋಧನಾ ವರದಿಯಲ್ಲೂ 1202 ಕೋಟಿ ಮೊತ್ತದ 41 ಕಾಮಗಾರಿಗಳಲ್ಲಿನ ವ್ಯತ್ಯಾಸಗಳನ್ನು ಪತ್ತೆ ಮಾಡಲಾಗಿತ್ತು. ಹೀಗಾಗಿ, 76.65 ಕೋಟಿ ವಸೂಲಿ ಮಾಡಲು ಸೂಚಿಸಲಾಗಿತ್ತು. ಬೊಮ್ಮನಹಳ್ಳಿ,…
ತುಮಕೂರು: ನನಗೆ ಮುಖ್ಯಮಂತ್ರಿ ಆಗೋ ಅಭಿಲಾಷೆ ಇಲ್ಲ. ಆದ್ರೆ ನಮ್ಮ ಸಮಾಜದಿಂದ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಅನ್ನೋದು ನಮ್ಮ ಆಸೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ವಾಲ್ಮೀಕಿ ಸಮುದಾಯದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ನಾಯಕ ಸಮುದಾಯದವರು ಕೆಲವರು ಬಂದಿಲ್ಲ ಅಂದ್ರೆ ಅವರು ನಮ್ಮ ಸಮಾಜದ ಪರವಾಗಿಲ್ಲ ಅಂತಲ್ಲ. ಅವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಇದ್ದಾರೆ ಎಂದರು. ಪೂಜ್ಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಸಮುದಾಯದ ಬೇಡಿಕೆಗಳನ್ನು ತಿಳಿಸಿದ್ದಾರೆ. ಆ ಅನಿಸಿಕೆಗಳನ್ನ ಈಡೇರಿಸುವ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಮುಖ್ಯಮಂತ್ರಿಯವರನ್ನ ಭೇಟಿ ಮಾಡಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡ್ತೀವಿ ಅನ್ನೋ ಭರವಸೆಯಿದೆ. 2008ರ ವಿಧೇಯಕದಿಂದ ಹೆಚ್ಚಿನ ಶಾಸಕರು ಆಯ್ಕೆಯಾಗಲು ಸಾಧ್ಯವಾಗಿದೆ ಎಂದರು. 1998ರಲ್ಲಿ ನಾನು ಒಳ್ಳೆ ರೀತಿಯಲ್ಲೋ, ಕೆಟ್ಟ ರೀತಿಯಲ್ಲೋ ವಿಧಾನ ಪರಿಷತ್ ಸದಸ್ಯನಾದೆ. ನಮ್ಮ ಜಿಲ್ಲೆಯಲ್ಲಿರುವ ಅಸಹಾಯಕ ಸಮುದಾಯಗಳು ನನಗೆ ಈ ಸ್ಥಾನಮಾನ ನೀಡಿದ್ದಾರೆ.…
ಉಡುಪಿ: ಪತಿ ಪತ್ನಿಯ ನಡುವೆ ಕ್ಷುಲ್ಲಕ ವಿಚಾರಕ್ಕೆ ಆರಂಭಗೊಂಡ ಜಗಳ ದುರಂತವಾಗಿ ಅಂತ್ಯಕಂಡಿರುವ ಘಟನೆ ಕಾರ್ಕಳ ತಾಲೂಕು ನಲ್ಲೂರು ಎಂಬಲ್ಲಿ ನಡೆದಿದೆ. ಬೆಳಗ್ಗೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದರು. ಯಶೋಧಾರನ್ನು ರಕ್ಷಿಸಲು ನೀರಿಗೆ ಹಾರಿದ ಪತಿ ಇಮ್ಯಾನುಲ್ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಇದೀಗ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA