Subscribe to Updates
Get the latest creative news from FooBar about art, design and business.
- ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ
- ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ: ನಗನಗದು ದೋಚಿ ಪರಾರಿ
- ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ
- ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ
- ಹುಲಿ ಕಾಣಿಸಿಕೊಂಡರೂ ಕೂಂಬಿಂಗ್ ಕಾರ್ಯಾಚರಣೆ ಇಲ್ಲ: ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ
- ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
- ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
- ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Author: admin
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡದೇ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಇಂದು (ಜೂ. 20) ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಿದೆ. ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದ್ದು, ಇದರಲ್ಲಿ ಜನಪ್ರತಿನಿಧಿಗಳು, ಸಾವಿರಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜಿಲ್ಲಾ ಮಟ್ಟದ ಹೋರಾಟದ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ವಹಿಸಲಾಗಿದೆ. ಬಿಜೆಪಿಯಿಂದಲೂ ಪ್ರತಿಭಟನೆ: ಇತ್ತ ಜು. 1ರಿಂದ ಅಕ್ಕಿ ನೀಡದಿದ್ದರೆ ಜನತೆ ಸುಮ್ಮನಿರುವುದಿಲ್ಲ ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ಗ್ಯಾರಂಟಿ ಯೋಜನೆಯಡಿ ಬಡವರಿಗೆ 10 ಕೆ. ಜಿ. ಅಕ್ಕಿ ವಿತರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ಗೆ ಪ್ರತಿಯಾಗಿ ಬಿಜೆಪಿ ಸಹ ಇಂದು(ಮಂಗಳವಾರ) ಪ್ರತಿಭಟನೆಗೆ ಮುಂದಾಗಿದೆ. ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಒಟ್ಟು ಮೂರು…
ಬೆಳಗಾವಿ: ದೇಶದ ವಿವಿಧ ಜಿಲ್ಲೆಗಳಲ್ಲಿ ವಂದೇ ಮಾತರಂ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಆದರೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ರಾಜ್ಯದಲ್ಲಿ ತನ್ನದೆ ಕೊಡುಗೆ ನೀಡುತ್ತಿರುವ ಬೆಳಗಾವಿ ಜಿಲ್ಲೆಗೆ, ಮಾತ್ರ ಈ ವಂದೇ ಮಾತರಂ ನಿಲುಕದ ನಕ್ಷತ್ರವಾಗಿದ್ದು ಇದಕ್ಕೆ ಕಾರಣವೇನು ಎಂದು ಬೆಳಗಾವಿ ಸಂಸದೆ ಮಂಗಳ ಅಂಗಡಿ , ಚಿಕ್ಕೋಡಿ ಸಂಸದರಾದ ಅಣ್ಣ ಸಾಹೇಬ್ ಜೊಲ್ಲೆ, ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ವಿವರಣೆ ಕೊಡಬೇಕಿದೆ. ಬೆಳಗಾವಿ ಜಿಲ್ಲೆಯಿಂದ ಹೆಚ್ಚುಮತ ಪಡೆಡು ಗೆದ್ದು ಸಂಸತ್ ಸೇರಿದವರ ಹತ್ತಿರ ಬೆಳಗಾವಿ ಜಿಲ್ಲೆಗೆ ವಂದೇ ಭಾರತ್ ರೈಲ್ವೆ ಸೇವೆ ಯಾಕೆ ಇಲ್ಲ ? ಎಂಬ ಉತ್ತರವಿಲ್ಲ. ಬೆಳಗಾವಿ ಹಾಗೂ ಉತ್ತರ ಕರ್ನಾಟಕಕ್ಕೆ ಸೀಮಿತವಾಗಿರುವ ಯೋಜನೆಗಳು ಒಂದೊಂದಾಗಿ ಬೇರೆಯವರ ಪಾಲಾಗುತ್ತಿವೆ. ಬೆಳಗಾವಿ ಜನತೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಂಸದರುಗಳಿಂದ ಅನ್ಯಾಯವಾಗುತ್ತಲೇ ಇದೆ ಇದನ್ನು ಉತ್ತರ ಕರ್ನಾಟಕದ ಜನರು ಮೌನವಾಗಿ ನೋವನ್ನು ಅನುಭವಿಸುತ್ತಲೇ ಇದ್ದಾರೆ. ಉತ್ತರ ಕರ್ನಾಟಕದಲ್ಲಿ ಸೌಲಭ್ಯಗಳನ್ನು, ಯೋಜನೆಗಳನ್ನು ಜಾರಿಮಾಡದೇ ಅಭಿವೃದ್ಧಿ ಪಠಣ ಮಾಡುತ್ತಿರುವ ರಾಜಕಾರಣಿಗಳು ಅದೇಗೆ ಅಭಿವೃದ್ಧಿ…
ಬೆಂಗಳೂರು: ನಮ್ಮ ಸರ್ಕಾರ ಬಡವರಿಗೆ ಅಕ್ಕಿ ಕೊಡುವ ಕೆಲಸ ಮಾಡೇ ಮಾಡುತ್ತೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿಗೆ ಸ್ವಲ್ಪನಾದ್ರೂ ಮಾನ ಮರ್ಯಾದೆ ಇದ್ಯಾ. ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಕೊಡಲ್ಲ ಅಂತಾ ಹೇಳುತ್ತಿದ್ದಾರೆ. ಖಾಸಗಿಯವರಿಗೆ ಬೇಕಾದರೆ ಅಕ್ಕಿ ಪೂರೈಕೆ ಮಾಡುತ್ತಾರೆ. ಇದು ದ್ವೇಷದ ರಾಜಕೀಯ, ಬಿಜೆಪಿಯವರು ಬಡವರ ವಿರೋಧಿ. ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೇಂದ್ರ ಸರ್ಕಾರ ಈಗಾಗಲೇ ಐದು ಕೆ.ಜಿ.ಯನ್ನು ಉಚಿತವಾಗಿ ನೀಡುತ್ತಿದೆ. ಇನ್ನೂ ಐದು ಕೆ.ಜಿ. ಅಕ್ಕಿಗೆ ನಾವು ಹಣ ಕೊಡುತ್ತೇವೆ, ಕೊಡಿ ಎಂದು ಕೇಳುತ್ತಿದ್ದೇವೆ. ಆದರೆ ಅದಕ್ಕೆ ಸಮರ್ಪಕವಾದ ಉತ್ತರ ದೊರೆಯುತ್ತಿಲ್ಲ ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಇನ್ನುಳಿದ ಐದು ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಕೊಡಿ ಎಂದು ಕೇಳುತ್ತಿಲ್ಲ, ಆಹಾರ ನಿಗಮದವರು ಏಳು ಲಕ್ಷ ಟನ್ ನಮ್ಮ ಬಳಿ ಅಕ್ಕಿ ಇದೆ ಎಂದು ಪತ್ರ ಬರೆದಿದ್ದರು. ಹೀಗಾಗಿ ನಾವು ಅದನ್ನು ಕೊಡುವಂತೆ ಕೇಳಿದ್ದೇವೆ, ಆದರೆ ಪುನಃ ಆ ಪತ್ರಕ್ಕೆ ಉತ್ತರ ನೀಡದೆ ಅಕ್ಕಿ ಉಳಿದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಮುಂಗಾರು ನಿರೀಕ್ಷಿತ ಸಮಯಕ್ಕೆ ಆರಂಭವಾಗದ ಹಿನ್ನೆಲೆಯಲ್ಲಿ ಹಾಗೂ ಹೇಮಾವತಿ ನಾಲೆಗಳಲ್ಲಿ ಕಳೆದ ಬಾರಿ ಅಪಾರ ಪ್ರಮಾಣದಲ್ಲಿ ಮಳೆಯ ಆದ ಹಿನ್ನೆಲೆಯಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಅದರ ದುರಸ್ತಿ ಕಾರ್ಯ ಕೂಡ ನಡೆಯುತ್ತಿದೆ. ಈ ಕಾರಣಗಳಿಂದಾಗಿ ಹೇಮಾವತಿ ನದಿ ನೀರನ್ನು ಹೇಮಾವತಿ ಜಲಾಶಯದಿಂದ ತುಮಕೂರು…
ಕರ್ನಾಟಕದಲ್ಲಿ ಕೆಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಹವಾಮಾನ ಇಲಾಖೆ ವರದಿ ಪ್ರಕಾರ ಮುಂಗಾರು ಚುರುಕು ಆಗುತ್ತೆ ಎಂದು ಬೆಳಗಾವಿ ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನಿಡಿದ್ದಾರೆ. ಮುಂದಿನ 7 ದಿನ ರಾಜ್ಯದಲ್ಲಿ ಮಳೆ ಆಗುತ್ತೆ ಅಂತಾ ವರದಿಯಲ್ಲಿದೆ. ನೀರಿನ ಸಮಸ್ಯೆ ಬಗೆಹರಿಸಲು ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತೆ. ಬೆಳಗಾವಿ ಜಿಲ್ಲೆಯ ರಕ್ಕಸಕೊಪ್ಪ ಜಲಾಶಯ ಸಹ ಖಾಲಿ ಆಗಿದೆ. ಜಲಾಶಯ ಮಟ್ಟ ಕುಸಿದಿದ್ರೂ ಟ್ಯಾಂಕರ್ ಗಳಿಂದ ನೀರು ಪೂರೈಕೆ ಮಾಡಲಾಗುತ್ತೆ. ಮಳೆಯಾಗದಿದ್ರೆ ಸರ್ಕಾರ ಮೋಡ ಬಿತ್ತನೆಗೆ ಚಿಂತನೆ ಮಾಡುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡಲಿದೆ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಹೀಗಾಗಿ ಸಿದ್ದರಾಮಯ್ಯ ತಮ್ಮ ಚೇಲಾ ಪಡೆ ಮೂಲಕ ತಾವು ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರೆ. ಸಚಿವರಾದ ಮಹದೇವಪ್ಪ, ಎಂ.ಬಿ.ಪಾಟೀಲ್ ಮೂಲಕ ಹೇಳಿಸಿದ್ದಾರೆ. ಸಿದ್ದರಾಮಯ್ಯಗೆ ಪೂರ್ಣಾವಧಿ ಸಿಎಂ ಅಂತಾ ಹೇಳುವ ಧೈರ್ಯವಿಲ್ಲ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯರನ್ನು ಸಿಎಂ ಮಾಡಿದೆ. ಆದರೆ ಸಿದ್ದರಾಮಯ್ಯಗೆ ಉದಾರತನದ ಮನಸ್ಸು ಇಲ್ಲ ಧೈರ್ಯವಿದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ನಾನೆ ಅಂತ ಹೇಳಲಿ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿಧಾನಸೌಧದಲ್ಲಿ ಶರ್ಟ್ ಎಳೆದಿದ್ದಾರೆ. ಮತ್ತೊಮ್ಮೆ 5 ವರ್ಷ ಸಿಎಂ ಅಂದರೇ ನಿಮ್ಮ ಕೊರಳ ಪಟ್ಟಿ ಹಿಡಿಯುತ್ತಾರೆ. ಸಿದ್ದರಾಮಯ್ಯ ಅವರಿಗೆ ತಾವೇ ಪೂರ್ಣವಧಿ ಸಿಎಂ ಅಂತ ನೇರವಾಗಿ ಹೇಳುವ ಧೈರ್ಯವಿಲ್ಲ ಅವರಿಗೆ ಪುಕ್ಕಲತನ. ಚುನಾವಣೆ ಗೆಲ್ಲಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ. ಸಂಸದ ಪ್ರತಾಪ್ ಸಿಂಹ ಚಿಲ್ಲರೆ ರಾಜಕಾರಣ…
ತುಮಕೂರು: ಗುಬ್ಬಿ ತಾಲೂಕು ಪಂಚಾಯಿತಿ ಸಭೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ ಪಿಡಿಒಗಳಿಗೆ ಅನುದಾನ ಬಳಕೆ ಕುರಿತಂತೆ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಅಯ್ಯೋ ನನ್ಮಗನೇ ಓದೋರಿಗೆ ಕೊಡಲೈ ಪಿಡಿಒಗಳ ಸಭೆಯಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಡಿಒಗಳಿಗೆ ಏಕವಚನದಲ್ಲೇ ತಾಕೀತು ಮಾಡಿದ ಎಸ್.ಆರ್.ಶ್ರೀನಿವಾಸ್ ಗುಬ್ಬಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದಿದ್ದ ಪಿಡಿಒಗಳ ಸಭೆಯಲ್ಲಿ ತಾಲೂಕಾ ಪಂಚಾಯತ್ ಇಒ ಸೇರಿದಂತೆ 25ಕ್ಕೂ ಹೆಚ್ಚು ಪಿಡಿಒಗಳು ಸಭೆಯಲ್ಲಿದ್ದರು. ಸಭೆಯುದ್ದಕ್ಕೂ ಏಕವಚನದಲ್ಲೇ ಮಾತನಾಡಿದ ಶಾಸಕ ಶ್ರೀನಿವಾಸ್, ಅನುದಾನ ಬಳಕೆ ಕುರಿತಂತೆ ಪಿಡಿಒಗಳಿಗೆ ತಾಕೀತು ಮಾಡುವ ವೇಳೆ ಪ್ರಥಮ ಪ್ರಶಸ್ತಿಯಾಗಿ ವ್ಯಾಸಂಗ ಮಾಡುವ ಮಕ್ಕಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಮುಂದಾಗಬೇಕು ನಂತರ ಅಂಗವಿಕಲರಿಗೆ ಆನಂತರ ವಿಧವೆಯರಿಗೆ ಅನುದಾನ ಕೊಡುವ ಕುರಿತಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ರಾಜ್ಯ ಸರ್ಕಾರ 5 ಗ್ಯಾರಂಟಿ ಪೂರೈಸಲು ಸಂಕಷ್ಟಕ್ಕೆ ಸಿಲುಕಿದೆ. ಈಗ 6ನೇ ಗ್ಯಾರಂಟಿ ಬಗ್ಗೆ ಚರ್ಚೆ ಶುರುವಾಗಿದೆ ಎಂದು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಡಿಕೆ ಶಿವಕುಮಾರ್ ಮುಂದಿನ ಸಿಎಂ ವಿಚಾರವಾಗಿ ಸಚಿವರ ನಡುವೆ ಚರ್ಚೆ ಶುರುವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ನೋವು ಅರ್ಥ ಮಾಡಿಕೊಳ್ಳಬೇಕು. ಡಿಕೆ ಸಿಎಂ ಸ್ಥಾನಕ್ಕೆ ಹೋರಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಕೇಂದ್ರದ ವಿರುದ್ಧ ಕಾಂಗ್ರೆಸ್ನವರು ಪ್ರತಿಭಟನೆ ಮಾಡಿದ್ದಾರೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಹರಿಹಾಯ್ದಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕುಮಾರ್ ಟಾಕಳೆ ಒಬ್ಬ ಹೆಣ್ಣುಬಾಕ, ಸೆಕ್ಸ್ ಟ್ರೇಡರ್ ಇದ್ದಾನೆ. ನನ್ನ ಖಾಸಗಿ ವೀಡಿಯೋಗಳನ್ನು ವೆಬ್‍ಸೈಟ್ ಗೆ ಮಾರಾಟ ಮಾಡಿದ್ದಾನೆ. ಪೊಲೀಸರ ತನಿಖೆಯಲ್ಲಿ ಮೊಬೈಲ್ ಕಳೆದು ಹೋಗಿದೆ ಅಂತಾ ಏಕೆ ಸುಳ್ಳು ಹೇಳುತ್ತಿದ್ದಾನೆ. ಆತನ ಮೊಬೈಲ್ ನಲ್ಲಿ ಬೇರೆ ಹೆಣ್ಣುಮಕ್ಕಳ ವಿಡಿಯೋಗಳು ಸಹ ಇರಬಹದು ಎಂದು ಆರೋಪಿಸಿದರು. ಟಾಕಳೆ ಮನೆಯೇ ಅಕ್ರಮ ಚಟುವಟಿಕೆ ನಡೆಸುವ ತಾಣವಾಗಿದೆ. ಆತನ ಪತ್ನಿ ಹೇಗೆ ನನಗೆ ಮನೆಯಲ್ಲಿ ಒಂದು ವಾರ ಇರಲು ಅವಕಾಶ ಕೊಟ್ಟಳು? ಇದು ಬಿಗ್ ಮಾಫಿಯಾ ಇದೆ. ಒಬ್ಬ ನವ್ಯಶ್ರೀ ಸತ್ಯಾಸತ್ಯತೆ ಬಯಲಿಗೆಳೆದಿರಬಹುದು. ಸರ್ಕಾರಿ ಅಧಿಕಾರಿಯಾಗಿ ಸರ್ಕಾರಿ ಬಂಗಲೆ ದುರುಪಯೋಗ ಪಡಿಸಿಕೊಂಡಿದ್ದಾನೆ. ಈತನ ಕಾಮಕೃತ್ಯಕ್ಕೆ ಎಷ್ಟೋ ಹೆಣ್ಣು ಮಕ್ಕಳು ಬಲಿಯಾಗಿರಬಹುದು ಎಂದು ಪ್ರಶ್ನಿಸಿದ್ದಾರೆ. ಇಂತಹ ಗೋಮುಖ ವ್ಯಾಘ್ರನ ಜೊತೆ ಆತನ ಸಹೋದರರು ಸೇರಿದ್ದಾರೆ. ಯಾವ್ಯಾವ ವೆಬ್‍ಸೈಟ್ ಗೆ ಯಾವ್ಯಾವ ಹೆಣ್ಣುಮಕ್ಕಳ ಖಾಸಗಿ…
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು BPS ಭಾರತೀಯ ಪರಿವರ್ತನ ಸಂಘದ ವತಿಯಿಂದ ನಿಡಗಲ್ಲು ಹೋಬಳಿ, ಸಿ.ಕೆ.ಪುರ ಗ್ರಾಮ ಪಂಚಾಯಿತಿಯ ಹರಿಹರಪುರ ಗ್ರಾಮದ ಎಸ್ಸಿ, ಎಸ್ಟಿ, ಒಬಿಸಿ ಎಲ್ಲಾ ಸಮುದಾಯದ ಬಡವರಿಗೆ ಸರ್ಕಾರದ ಭದ್ರತಾ ಯೋಜನೆಯ ಪಿಂಚಣಿಗಳಾದ ಸಂಧ್ಯಾ ಸುರಕ್ಷಾ ಯೋಜನೆ, ರಾಷ್ಟ್ರೀಯ ವೃದ್ಧಾಪ್ಯ ವೇತನ, ಅಂಗವಿಕಲ ಯೋಜನೆ, ವಿಧವಾ ವೇತನ, ಮನಸ್ವಿನಿ ಯೋಜನೆಗಳನ್ನು 14 ಜನರಿಗೆ ಅವರ ಮನೆ ಬಾಗಿಲಿಗೆ ಹೋಗಿ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡು ಉಚಿತವಾಗಿ ಪಿಂಚಣಿಗಳನ್ನು ಮಾಡಿಸಿ ಇವರುಗಳಿಗೆ ಆದೇಶ ಪತ್ರಗಳನ್ನು ಕೊಡಲಾಯಿತು. ಈ ಸಂದರ್ಭದಲ್ಲಿ ಬಿಪಿಎಸ್ ತುಮಕೂರು ಜಿಲ್ಲಾ ಮುಖಂಡರಾದ ಚಿಕ್ಕತಿಮ್ಮನಹಟ್ಟಿ ಗ್ರಾಮದ ಹೆಚ್.ಕೆಂಚರಾಯ ಮಾತನಾಡಿ, ಭಾರತೀಯ ಪರಿವರ್ತನ ಸಂಘವನ್ನು ಪಾವಗಡದಲ್ಲಿ ಬಿಪಿಎಸ್ ರಾಜ್ಯಾಧ್ಯಕ್ಷರು ಹೈಕೋರ್ಟ್ ವಕೀಲರು ಆದ ಪ್ರೊ.ಹರಿರಾಮ್ ರವರ ಸಮ್ಮುಖದಲ್ಲಿ ಬುದ್ಧ ಬಸವ ಮಹಾತ್ಮ ಜ್ಯೋತಿ ಬಾಪುಲೆ ಮಾತೆ ಸಾವಿತ್ರಿ ಬಾಪುಲೆ ಶಾಹೂ ಮಹಾರಾಜ್, ನಾಲ್ವಡಿ ಕೃಷ್ಣರಾಜ, ಟಿಪ್ಪು ಸುಲ್ತಾನ್ ಕುವೆಂಪು ರವರ ತತ್ವ ಸಿದ್ಧಾಂತಗಳ ಪ್ರಾರಂಭ ಮಾಡಿ, ಎಚ್.ಡಿ.ಈರಣ್ಣನವರನ್ನು ತಾಲೂಕು ಸಂಯೋಜಕರಾಗಿ ಆಯ್ಕೆಯಾಗಿ…