Author: admin

ಮಹಿಳೆ ಸ್ನಾನ ಮಾಡುತ್ತಿದ್ದವೇಳೆ ಕೊಠಡಿಯ ಕಿಟಕಿಯಲ್ಲಿ ಇಣುಕಿ ನೋಡಿದ್ದ ಆರೋಪದಡಿ ನಿತಿನ್‌ನನ್ನು (23) ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಮುನ್ನೇಕೊಳಲು ಮಂಜುನಾಥ್‌ನಗರದ ನಿವಾಸಿ ನಿತಿನ್, ಫಾರ್ಮಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಹಿಳೆ ಹಾಗೂ ಅವರ ಪತಿ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ಮಹಿಳೆ ವಾಸವಿರುವ ಮನೆಯ ಪಕ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ನಿತಿನ್ ನೆಲೆಸಿದ್ದ ಮಹಿಳೆ ಶನಿವಾರ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಆರೋಪಿ, ಗೋಡೆ ಪಕ್ಕದಲ್ಲಿ ನಿಂತು ಕಿಟಕಿ ಮೂಲಕ, ಮಹಿಳೆ ಸ್ನಾನ ಮಾಡುತ್ತಿರುವುದನ್ನು ನೋಡುತ್ತಿದ್ದ. ಆರೋಪಿಯನ್ನು ನೋಡಿದ್ದ ಸ್ಥಳೀಯರೊಬ್ಬರು ಹಿಡಿಯಲು ಹೋಗಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವಕನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದಿದ್ದರು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ನಿತಿನ್‌ನನ್ನು ವಶಕ್ಕೆ ಪಡೆದರು.ಠಾಣೆಗೆ ಕರೆತಂದು ವಿಚಾರಿಸಿದಾಗ ತಪ್ರೊಪ್ಪಿಕೊಂಡ’ ಎಂದು ಪೊಲೀಸರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮುಂಗಾರು ಮಳೆಯ ಸೂಚನೆಯೇ ಇಲ್ಲದ ಕಾರಣ ಜೂನ್ 13ರಂದು ಕೆಆರ್‌ಎಸ್ ಜಲಾಶಯ ಬಳಿಯ ಕಾವೇರಿ ಮಾತೆಯ ಪ್ರತಿಮೆ ಮುಂದೆ ವರುಣನಿಗಾಗಿ ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಕಾವೇರಿ ಒಡಲು ಭರ್ತಿಗಾಗಿ ಕಾವೇರಿ ನೀರಾವರಿ ನಿಗಮ ವಿಶೇಷ ಪೂಜೆಯ ಮೊರೆ ಹೋಗಿದೆ. ಮಂಗಳವಾರ ಬೆಳಗ್ಗೆ ಪ್ರಸಿದ್ಧ ವೈದಿಕ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯ ಭರ್ತಿಗೆ 12 ಮಂದಿ ವೈದಿಕ ತಂಡದಿಂದ ವಿಶೇಷ ಪೂಜೆ ನಡೆಯಲಿದೆ. ವರುಣನಿಗಾಗಿ ಹೋಮ-ಹವನ, ಗಂಗಾಪೂಜೆ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಈ ಬಾರಿ ಆರಂಭದಲ್ಲೇ ಮಳೆ ಕೈಕೊಟ್ಟಿದ್ದು, 5 ವರ್ಷದ ಬಳಿಕ ಅತಿ ಕಡಿಮೆ ನೀರಿನ ಮಟ್ಟವನ್ನು ಕೆಆರ್‌ಎಸ್ ಜಲಾಶಯ ತಲುಪಿದೆ. ಇದರಿಂದ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರಿಗೆ ಅಭಾವ ಶುರುವಾಗುವ ಸಾಧ್ಯತೆಯಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

‘ನಾನೊಬ್ಬ ಐಪಿಎಸ್ ಅಧಿಕಾರಿ ಬೆಂಗಳೂರು ಸಿಸಿಬಿ ಕಚೇರಿಯಲ್ಲಿ ಎಸಿಪಿ ಆಗಿ ಕೆಲಸ ಮಾಡುತ್ತಿದ್ದೇನೆ’ ಎಂಬುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ವಿಶುಕುಮಾರ್ ಅಲಿಯಾಸ್ ಅರ್ಜುನ್‌ ನನ್ನು ಕಾಟನ್‌ ಪೇಟೆ ಪೊಲೀಸರು ಬಂಧಿಸಿದ್ದಾರೆ. ‘ಮಂಡ್ಯದ ಅರ್ಜುನ್, ರಿಯಲ್ ಎಸ್ಟೇಟ್ ಏಜೆಂಟ್‌  ಆಗಿದ್ದ. ಕೆಲ ವರ್ಷಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಗಿರಿನಗರದಲ್ಲಿ ನೆಲೆಸಿದ್ದ. ಈತನ ಕೃತ್ಯದ ವಿರುದ್ಧ ಮಲ್ಲೇಶ್ವರ ನಿವಾಸಿ ಎಸ್. ರಾಘವೇಂದ್ರ ಜೂನ್ 9ರಂದು ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ದೂರುದಾರ ರಾಘವೇಂದ್ರ, ಫೈನಾನ್ಸ್ ಕಂಪನಿ ನಡೆಸುತ್ತಿದ್ದಾರೆ. 2022ರಲ್ಲಿ ಪರಿಚಯಸ್ಥರ ಮೂಲಕ ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ಅರ್ಜುನ್, ‘ನಾನೊಬ್ಬ ಐಪಿಎಸ್ ಅಧಿಕಾರಿ. ಸದ್ಯ ಸಿಸಿಬಿ ಎಸಿಪಿ  ಆಗಿದ್ದೇನೆ’ ಎಂದಿದ್ದ. ಪೊಲೀಸರಿಗೆ ಸಂಬಂಧಪಟ್ಟ ಫೋಟೊಗಳನ್ನು ದೂರುದಾರರಿಗೆ ಆಗಾಗ ಕಳುಹಿಸುತ್ತಿದ್ದ. ಫೋಟೊ ನೋಡಿದ್ದ ದೂರುದಾರ, ಆರೋಪಿಯ ಮಾತು ನಂಬಿದ್ದರು. ‘ಮದುವೆಯಾಗುತ್ತಿರುವುದಾಗಿ ಹೇಳಿದ್ದ ಆರೋಪಿ, 125 ಲಕ್ಷ ಸಾಲ ಕೇಳಿದ್ದ. ಮೂರು ತಿಂಗಳು ಬಿಟ್ಟು…

Read More

ಕೊರಟಗೆರೆ: ಮಾನವ ಜೀವನ ಉನ್ನತಿಗೆ ಗೊತ್ತು ಗುರಿಗಳಿರಬೇಕು. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ವ್ಯರ್ಥವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ತಾಲೂಕಿನ ಸಿದ್ಧರಬೆಟ್ಟ ಕ್ಷೇತ್ರದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಶ್ರೀ ಜಗದ್ಗುರು ರೇಣುಕ-ಬಸವ ಜಯಂತಿ, ಸಾಮೂಹಿಕ ವಿವಾಹ, ವೀರಭದ್ರ ಶ್ರೀಗಳವರ ಪಟ್ಟಾಧಿಕಾರದ 17ನೇ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಭಾರತೀಯ ಸಂಸ್ಕøತಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಶಾಂತಿ ಸುಖದಾಯಕ ಬದುಕಿಗೆ ಧರ್ಮದ ಅರಿವು ಆಚರಣೆ ಅಗತ್ಯವಾಗಿದೆ. ಬದುಕು ಭಗವಂತ ಕೊಟ್ಟ ಕೊಡುಗೆಯಲ್ಲಿ ಮನುಷ್ಯ ಕಲಿಯುವ ಪಾಠಗಳಿವೆ. ಅನುಭವಿಸುವ ವಿಚಾರ ಧಾರೆಗಳಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಶ್ರೀ ಬಸವೇಶ್ವರರು ವೀರಶೈವ ಧರ್ಮ ಸಂಸ್ಕøತಿಯ ಸಂವರ್ಧನೆಗಾಗಿ ಶ್ರಮಿಸಿದ ಮಹಾಚೇತನ. ಅವರು ತೋರಿದ ದಾರಿಯಲ್ಲಿ ನಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಗೃಹಸ್ಥಾಶ್ರಮ ಅತ್ಯಂತ ಪವಿತ್ರವಾದುದು. ಸತಿ ಪತಿಗಳು ಪರಸ್ಪರ ಅರಿವು ಸಾಮರಸ್ಯದಿಂದ ಬಾಳಿದರೆ ಜೀವನ ಉಜ್ವಲಗೊಳ್ಳುತ್ತದೆ. ಸಾಮೂಹಿಕ…

Read More

‘ಸಾಂಸ್ಕೃತಿಕ ಟ್ರಸ್ಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಬಲ ತುಂಬುವ ಕೆಲಸ ಮಾಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದರು. ಇಲ್ಲಿ ಶನಿವಾರ ವಿವಿಧ ಟ್ರಸ್ಟ್‌ ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ‘ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 24 ಟ್ರಸ್ಟ್‌ ಗಳಿಗೆ ಕಾರ್ಯ ಚಟುವಟಿಕೆ ಅನುಸಾರ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದ ಅವರು, ‘ಜಿಲ್ಲಾ ಪ್ರವಾಸದ ವೇಳೆ ಟ್ರಸ್ಟ್‌ಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಹೇಳಿದರು. ಬೆಟಗೇರಿ ಕೃಷ್ಣಶರ್ಮರ ಮನೆಯನ್ನು ಸ್ಮಾರಕವಾಗಿಸುವುದರ ಬಗ್ಗೆ ಇಲಾಖೆಯ ಅಧಿಕಾರಿಗಳು ವಿವರಿಸಿದರು. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ ಸಚಿವರು, ಈ ಬಗ್ಗೆ ವಿವರಗಳನ್ನು ತರಿಸಿಕೊಳ್ಳುತ್ತೇನೆ ಎಂದು ಹೇಳಿದರು. ಕಲಾವಿದೆ ಬಿ.ಜಯಶ್ರೀ ಅವರು ಗುಬ್ಬಿವೀರಣ್ಣರಂಗ ಮಂದಿರಕ್ಕೆ ಅನುದಾನ ಹೆಚ್ಚಿಸುವಂತೆ ಮನವಿ ಮಾಡಿದರು. ‘ಗಳಗನಾಥ ಮತ್ತು ರಾಜ ಪುರೋಹಿತ ಟ್ರಸ್ಟ್‌ ಗಳ ಕಟ್ಟಡ ನಿರ್ಮಾಣಕ್ಕೆ 12 ಕೋಟಿ ಅನುದಾನ ಒದಗಿಸುವ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಹೇಳಿದರು. ಅನುದಾನ ಹೆಚ್ಚಳದ ಬಗ್ಗೆ…

Read More

ದೇಶದಲ್ಲಿ ಧರ್ಮ ಯಾರ ಸ್ವತ್ತು ಅಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸ್ವತ್ತು ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಅನೇಕ ಜನ ನಾವು ಅದರ ಸಂರಕ್ಷಕರು ಎಂದು ಹೇಳಿಕೊಂಡು ತಿರುಗುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ನಡೆದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಮಾತನಾಡಿದ ಅವರು, ಆದರೆ ಭಾರತದಲ್ಲಿನ ಧಾರ್ಮಿಕ ಐಶ್ವರ್ಯ ಧಾರೆ ಎಲ್ಲರಿಗೂ ಸೇರಿರುವಂತಹದು ಎಂದು ಹೇಳಿದರು. ಸ್ವಾತಂತ್ರ್ಯ ಬಂದ ನಂತರ ಸಂವಿಧಾನದಲ್ಲಿ ಅವರವರ ಧರ್ಮವನ್ನು ಪಾಲಿಸಿಕೊಂಡು ಹೋಗಬಹುದು ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಹಾಗಾಗಿ ಧರ್ಮ ಎಂಬುದು ಎಲ್ಲರಿಗೂ ಸೇರಬೇಕು ಎಂಬಂತಹ ವಿಚಾರಧಾರೆಯ ಮೇಲೆ ನಂಬಿಕೆಯನ್ನು ಇಟ್ಟಿದ್ದೇನೆ ಎಂದು ಹೇಳಿದರು. ಇಂತಹ ವಿಚಾರಧಾರೆಯ ದೃಷ್ಟಿಯಲ್ಲಿ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಠದ ಸ್ವಾಮೀಜಿಗಳು ಸಾಗುತ್ತಿದ್ದಾರೆ. ಧಾರ್ಮಿಕ ಮೌಲ್ಯಗಳನ್ನು ಸಾವಿರಾರು ಜನರಿಗೆ ತಲುಪಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಅದೇ ರೀತಿ ಅವರ ಶಿಷ್ಯರು ಒಂದಕ್ಕೂ ಕೂಡ ಇದೇ ರೀತಿಯಲ್ಲಿ ಸಾಗುವಂತೆ ಸೂಚನೆಯನ್ನು ಕೊಟ್ಟಿದ್ದಾರೆ ಎಂದು ಹೇಳಿದರು. ಪ್ರಸ್ತುತ ಕಾಲಘಟ್ಟದಲ್ಲಿ…

Read More

ರಾಜ್ಯದ ಜನರಿಗೆ ಉಚಿತ ಗ್ಯಾರಂಟಿಗಳಲ್ಲಿ ಒಂದಾಗಿರುವ ಉಚಿತ 200 ಯೂನಿಟ್ ಕರೆಂಟ್ ನೀಡುವ ಭರವಸೆಯನ್ನು ಕಾಂಗ್ರೆಸ್ ಈಗಾಗಲೇ ಜಾರಿ ಮಾಡಿದೆ. ಆದರೆ ಈ ಬಾರಿಯ ವಿದುತ್ಯಗಳು ಕಳೆದ ಬಾರಿಗಿಂತ ಹೆಚ್ಚಾಗಿ ಬಂದದ್ದನ್ನು ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಜನರ ಗೊಂದಲಗಳನ್ನು ಬಗೆ ಹರಿಸಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಮೇ 12ರಂದು KERC ಪ್ರತಿ ಯೂನಿಟ್‌ ಗೆ 70 ಪೈಸೆ ಏರಿಕೆ ಮಾಡಿದೆ. ಈ ಹಿನ್ನೆಲೆ ಬಿಲ್‌ ನಲ್ಲಿ ಪರಿಷ್ಕೃತ ವಿದ್ಯುತ್ ಶುಲ್ಕವನ್ನು ನಮೂದಿಸಿದೆ. ಜೂನ್ ತಿಂಗಳಲ್ಲಿ ನೀಡುವ ಮೇ ತಿಂಗಳ ವಿದ್ಯುತ್ ಬಳಕೆಯ ವಿದ್ಯುತ್ ಬಿಲ್‌ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆ KERC ಆದೇಶದ ಪ್ರಕಾರ 2 ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಮೊದಲ 100 ಯೂನಿಟ್‌ ಗೆ ಪ್ರತಿ ಯೂನಿಟ್ ದರ 4.75 ರೂ.ವಿಧಿಸಲಾಗಿದೆ. 100 ಯೂನಿಟ್ ಮೀರಿದರೆ 2ನೇ ಶ್ರೇಣಿ ದರ ಪ್ರತಿ ಯೂನಿಟ್‌ ಗೆ…

Read More

ರಾಜಾಜಿನಗರದ (Rajajinagar) ನಿವಾಸಿ ಮತ್ತು ಸ್ಟೋರ್ ಮ್ಯಾನೇಜರ್ ಆಗಿದ್ದ ಫರ್ದೀನ್ ಖಾನ್ (23) ಅವರ ಮೆದುಳು ನಿಷ್ಕಯಗೊಂಡಿದ್ದು, ಅಂಗಾಂಗಳನ್ನು ದಾನ ಮಾಡುವ ಮೂಲಕ ಫರ್ದೀನ್ ಅವರ ಕುಟುಂಬ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಫರ್ದೀನ್ ಖಾನ್ ಅವರು ಇತ್ತೀಚೆಗೆ ತುಮಕೂರಿನ ಸಿರಾದಿಂದ ಬೆಂಗಳೂರಿಗೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಪರಿಣಾಮ ಅವರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಚಿಂತಾಜನಕವಾಗುತ್ತಿದ್ದಂತೆ ಜೂನ್ 5 ರಂದು ಬೆಳಗಿನ ಜಾವ 1.30 ರ ಹೊತ್ತಿಗೆ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಕೆಲವು ಗಂಟೆಗಳ ನಂತರ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದರು. ವಿಷಯ ತಿಳಿದು ದುಃಖದಲ್ಲಿದ್ದ ಕುಟುಂಬ ಏಕೈಕ ಪುತ್ರ ಫರ್ದೀನ್ ಅವರ ಅಂಗಾಂಗಳನ್ನು ದಾನ ಮಾಡಿದೆ. ಈ ಮೂಲಕ ಆರು ಜನರಿಗೆ ಮರು ಜನ್ಮನೀಡಿತು. ಯಶವಂತಪುರದ ಸ್ಪರ್ಶ ಆಸ್ಪತ್ರೆಯಲ್ಲಿ ಫರ್ದೀನ್ ಅವರ ಬಲ ಮೂತ್ರಪಿಂಡ ಮತ್ತು ಯಕೃತ್ತನ್ನು ಯಶಸ್ವಿಯಾಗಿ ರೋಗಿಗಳಿಗೆ ಕಸಿ ಮಾಡಲಾಗಿದ್ದು, ಅವರ ಹೃದಯವನ್ನು…

Read More

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪುಣೆಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಸಾಗರ್ ಬರ್ವೆ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕಳೆದ ದಿನ ಶರದ್ ಪವಾರ್ ಗೆ ಫೇಸ್ ಬುಕ್ ನಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಆರೋಪಿ ಸಾಗರ್ ಬರ್ವೆ ಪುಣೆಯ ಖಾಸಗಿ ಸಂಸ್ಥೆಯೊಂದರ ಡೇಟಾ ಫೀಡಿಂಗ್ ಮತ್ತು ಅನಾಲಿಟಿಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಪುಣೆಯಿಂದ ಬಂಧನಕ್ಕೊಳಗಾಗಿದ್ದ ಬಾರ್ವೆಯನ್ನು ಅಪರಾಧ ವಿಭಾಗದ ಪೊಲೀಸರು ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಮಂಗಳವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ನರೇಂದ್ರ ದಾಭೋಲ್ಕರ್ ಅವರ ಭವಿಷ್ಯವನ್ನು ಶರದ್ ಪವಾರ್ ಪೂರೈಸಲಿದ್ದಾರೆ ಎಂಬ ಸಂದೇಶವಿತ್ತು. ಇದಕ್ಕೂ ಮುನ್ನ ಪವಾರ್ ಪುತ್ರಿ ಹಾಗೂ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ನೇತೃತ್ವದಲ್ಲಿ ಎನ್‌ಸಿಪಿ ಕಾರ್ಯಕರ್ತರು ಮುಂಬೈ ಪೊಲೀಸ್ ಮುಖ್ಯಸ್ಥರನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಸುಪ್ರಿಯಾ ಸುಳೆ ಅವರು ಸ್ಕ್ರೀನ್‌ಶಾಟ್‌ಗಳನ್ನು ಪೊಲೀಸರಿಗೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು…

Read More

ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಪರಿಸರ ದಿನದ ಥೀಮ್ “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು” ಪ್ಲಾಸ್ಟಿಕ್ ಕಡಿಮೆ ಬಳಕೆ ಮಾಡುವಂತೆ ಉತ್ತೇಜಿಸುವ ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇ 20 ರಿಂದ ಜೂನ್ 5 ರವರೆಗೆ ಆರ್. ಆರ್.ಆರ್ ಡ್ರೈವ್ ಅನ್ನು ನಡೆಸಿತು. ಈ ವೇಳೆ ಒಟ್ಟು 533 ಕೆಜಿ ಪ್ಲಾಸ್ಟಿಕ್, 3, 273 ಪುಸ್ತಕಗಳು,1, 910 ಕೆಜಿ ಬಟ್ಟೆ, ಮತ್ತು ನಗರದ 49 ಕೇಂದ್ರಗಳಿಂದ 468 ಜೋಡಿ ಪಾದರಕ್ಷೆಗಳನ್ನು ಸಂಗ್ರಹಿಸಲಾಗಿದೆ. ಹಸಿರು ದಳ, ಅನುಭೂತಿ ವೆರ್ ಫೌಂಡೇಶನ್, ಸಮರ್ಥನಂ ಸೇರಿದಂತೆ ಏಳು ಸಂಪನ್ಮೂಲ ಸಂಸ್ಥೆಗಳ ಸಹಯೋಗದಲ್ಲಿ ಚಾಲನೆ ನೀಡಲಾಯಿತು. ಉತ್ತಮ ಸ್ಥಿತಿಯಲ್ಲಿರುವ ವಸ್ತುಗಳನ್ನು ಮರುಬಳಕೆ ಅಥವಾ ಮಾರಾಟ ಮಾಡಿದರೆ, ಇತರವುಗಳನ್ನು ಮರುಬಳಕೆಗಾಗಿ ಕಳುಹಿಸಲಾಗಿದೆ ಎಂದು ಹಸಿರು ದಳದ ಡಿಡಬ್ಲ್ಯೂಸಿಸಿ ವ್ಯವಸ್ಥಾಪಕ ಮತ್ತು ಸಂಯೋಜಕ ಚಿನ್ನಯ್ಯ ತಿಳಿಸಿದರು. ಚೆನ್ನಾಗಿರುವ ಪುಸ್ತಕಗಳನ್ನು ಬನಶಂಕರಿಯಲ್ಲಿರುವ ಹಸಿರು ದಳದ ಸಂಸ್ಥೆ…

Read More