Subscribe to Updates
Get the latest creative news from FooBar about art, design and business.
- ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
- ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
- ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
- ಮಧುಗಿರಿ | ನ.29ರಂದು ಒಳಮೀಸಲಾತಿ ಜಾಗೃತಿ ಶಿಬಿರ
- ಒಂದೇ ರಾತ್ರಿ 3 ಅಂಗಡಿಗಳಿಗೆ ನುಗ್ಗಿದ ಕಳ್ಳರು: ಶೀಟ್ ಕತ್ತರಿಸಿ, ನಗ ನಾಣ್ಯ ದೋಚಿ ಪರಾರಿ
- ಔರಾದ: ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಇಬ್ಬರು ವಿದ್ಯಾರ್ಥಿನಿಯರು ವಿಭಾಗಮಟ್ಟಕ್ಕೆ ಆಯ್ಕೆ
- ಕೊಳ್ಳುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
- ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವಂತೆ ಸಿದ್ದರಬೆಟ್ಟ ಶ್ರೀಗಳಿಂದ ಒತ್ತಾಯ
Author: admin
ಪರಿಸರ ದಿನಾಚಣೆಗೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ವಲಯ ಅರಣ್ಯಾಧಿಕಾರಿಗಳಾದ ದೇವರಾಜ್ ಅವರ ಮಾಗ್ರದರ್ಶನದಲ್ಲಿ ಮತ್ತು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಕನಕಪುರ ಘಟಕದ ಸಹೋಯೋಗದಲ್ಲಿ ಕನಕಪುರ ತಾಲ್ಲೂಕಿನ ಮುಗ್ಗುರು ವನ್ಯಜೀವಿ ವಲಯದ ಉಯ್ಯಂಬಳ್ಳಿ ದೊಡ್ಡಿ ಕಾಡಂಚಿನ ಪ್ರದೇಶ ಸುತ್ತ ಮುತ್ತ ಸುಮಾರು 300 ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಜೊತೆಗೆ ಸ್ಥಳೀಯ ಗ್ರಾಮಸ್ಥರಿಗೆ ಪರಿಸರದ ಬಗ್ಗೆ ತಿಳುವಳಿಕೆ ನೀಡಿ ಅರಣ್ಯ ಸಂರಕ್ಷಣೆಯ ಮಹತ್ವ ಮಾನವ ಮತ್ತು ವನ್ಯಜೀವಿ ಸಂಘರ್ಷದ ಬಗ್ಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಸ್ಥಳೀಯ ಸುಮಾರು 50 ಜನ ರೈತರು ಬಾಗವಹಿಸಿ ಗಿಡಗಳನ್ನು ನೇಡುವ ಮೂಲಕ ಅರ್ಥ ಪೂರ್ಣ ಪರಿಸರ ದಿನಾಚರಣೆ ಮಾಡಿದಲ್ಲದೆ ನಾವು ನೆಟ್ಟಿರುವ ಗಿಡಗಳನ್ನು ಸುರಕ್ಷಿತವಾಗಿ ಬೆಳೆಸಿ ಫಲ ಕೊಡುವ ತನಕ ಜೋಪಾನವಾಗಿ ಬೆಳೆಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಗಸ್ತು ಅರಣ್ಯ ಪಾಲಕ ಶ್ರೀಕಾಂತ್ ಚಿವಟೆ ಮಾತನಾಡಿ ಅರಣ್ಯ ನಾಶದಿಂದ ಪರಿಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಇದೆ ರೀತಿ…
ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು, ಚಂದ್ರಶೇಖರಪುರ ಹೋಬಳಿ, ಮಾವಿನಹಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿಯಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಸಿಗಳನ್ನು ನೆಡುವುದರ ಮೂಲಕ “ವಿಶ್ವ ಪರಿಸರ ದಿನಾಚರಣೆ” ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪರಿಸರ ಪ್ರಜ್ಞೆಯನ್ನು ನೀಡುವುದರ ಜೊತೆಗೆ ಪರಿಸರ ಪ್ರಜ್ಞೆಯ ಅರಿವು ಮೂಡಿಸುವ ಘೋಷಣಾ ವಾಕ್ಯವನ್ನು ಕೂಗಿಸಲಾಯಿತು. ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಮುರುಗಿ ಶಿಲ್ಪಾ ರವರು ಯಶಸ್ವಿಯಾಗಿ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ವರದಿ: ಯತೀಶ್ ಕುಮಾರ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಆಟೋ ಚಾಲಕನೋರ್ವ ಚಾಕ್ಲೆಟ್ ಕೊಡುತ್ತೇನೆಂದು ನಂಬಿಸಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ(ಪೋಕ್ಸೋ) ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ರೂ 75 ಸಾವಿರ ರೂಪಾಯಿ ದಂಡ ವಿಧಿಸಿದೆ. ಕುಣಿಗಲ್ ತಾಲ್ಲೂಕು ಹತ್ರಿದುರ್ಗ ಹೋಬಳಿಯ ಗುಳ್ಳಳ್ಳಿಪುರ ಗ್ರಾಮದ ವ್ಯಾಪ್ತಿಗೆ ಸೇರಿದ ಠಾಣೆಯಲ್ಲಿ ನೊಂದ ಬಾಲಕಿಯ ಅಜ್ಜಿ ದೂರು ನೀಡಿದ್ದು, ದಿನಾಂಕ 28/07/2022ರಂದು ರಾತ್ರಿ ನೊಂದ ಬಾಲಕಿ ರಾತ್ರಿ ಮಲಗಿದ್ದಾಗ ಬೆಚ್ಚಿಬಿದ್ದು ಕೂಗಿದ್ದು, ಈ ವೇಳೆ ಬಾಲಕಿಯನ್ನು ಅಜ್ಜಿ ಸಂತೈಸಿಸಿ ಏನಾಯ್ತು ಎಂದು ವಿಚಾರಿಸಿದ್ದಾರೆ. 9ನೇ ವರ್ಷ ವಯಸ್ಸಿನ ಬಾಲಕಿ 4ನೇ ತರಗತಿಯಲ್ಲಿ ಓದುತ್ತಿದ್ದು, ಆಕೆ ಊರಿನ ತಾತನ ಜೊತೆಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡು ಬರಲು ಶಾಲೆಯಿಂದ ಹೋಗಿದ್ದಳು. ವಾಪಸ್ ಬರಬೇಕಾದ್ರೆ ತಾತ ತನ್ನ ಮನೆಯ ಬಳಿ ಆಟೋದಿಂದ ಇಳಿದಿದ್ದಾರೆ. ಬಳಿಕ ನೊಂದ ಬಾಲಕಿ ಶಾಲೆಗೆ ತೆರಳಲು ಮುಂದಾದಾಗ ಅದೇ ಊರಿನ…
ತುಮಕೂರು: ಬಾಡಿಗೆ ಇದೆ ಎಂದು ಹೇಳಿ ಸ್ನೇಹಿತರ ಜೊತೆಗೆ ತೆರಳಿದ್ದ ಆಟೋ ಚಾಲಕ ಶವವಾಗಿ ಪತ್ತೆಯಾದ ಘಟನೆ ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಧುಗಿರಿ ಪಟ್ಟಣದ ಶ್ರೀಧರ್ ಮೂರ್ತಿ (45) ಮೃತ ದುರ್ದೈವಿ. ಪಟ್ಟಣದ ಅಗ್ನಿಶಾಮಕ ಠಾಣೆ ಬಳಿ ವಾಸವಿದ್ದ ಶ್ರೀಧರ್ ಮೂರ್ತಿ, ಸ್ನೇಹಿತ ವೆಂಕಟೇಶ್ ಜೊತೆ ಬಾಡಿಗೆ ಇದೆ ಎಂದು ಮನೆಯಿಂದ ಹೋಗಿದ್ದ. ಬಳಿಕ ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಗಾಬರಿಯಾಗಿದ್ದ ಕುಟುಂಬಸ್ಥರು, ವೆಂಕಟೇಶ್ ಗೆ ಕರೆ ಮಾಡಿ ಕೇಳಿದಾಗ ಯಾರೋ ಮೂವರ ಜೊತೆ ಕಾರಿನಲ್ಲಿ ತೆರಳಿದ್ದಾಗಿ ತಿಳಿಸಿದ್ದರು. ಆದರೆ, ಬೆಳಗ್ಗೆ ಮಧುಗಿರಿ– ಗೌರಿಬಿದನೂರು ಬೈಪಾಸ್ ರಸ್ತೆಯಲ್ಲಿರುವ ಇಟ್ಟಿಗೆ ಫ್ಯಾಕ್ಟರಿ ಬಳಿ ಶ್ರೀಧರ್ ಮೂರ್ತಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾರೆ. ಶ್ರೀಧರ್ ಮೂರ್ತಿ ಸಾವಿನ ಬಗ್ಗೆ ಸ್ನೇಹಿತ ವೆಂಕಟೇಶ್ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ಕರೆದುಕೊಂಡು ಹೋದ ಅಪರಿಚಿತರನ್ನ ಪತ್ತೆ ಹಚ್ಚಿ ನ್ಯಾಯ ಓದಗಿಸಬೇಕೆಂದು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು…
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮರಿ ಮೊಮ್ಮಗರಾದ ರಾಜರತ್ನ ಅಂಬೇಡ್ಕರ್ ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಬೌದ್ಧ ಮಹಾಸಭಾ ಕಾರ್ಯದರ್ಶಿಗಳು, ಫಿಲೋಫಿಪ್ ಆಫ್ ಭೌದ್ಧಿಸ್ಟ್ ವಿವಿಧ ಸಾಮಾಜಿಕ ಸಂಘಟನೆಗಳ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಯುವಜನತೆಯ ಒಂದು ವಿಚಾರ ಸಂಕೀರ್ಣ ದಲ್ಲಿ ಭಾಗವಹಿಸಲು ಬಂದಿದ್ದ ರಾಜರತ್ನ ಅಂಬೇಡ್ಕರ್ ಅವರಿಂದ ನಗರದ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು. ಆದರೆ ಈಗಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗುತ್ತಿದೆ ಹಣಕಾಸಿನ ವ್ಯವಸ್ಥೆಯಿಂದ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಾ ಇದ್ದಾರೆ ಶಿಕ್ಷಣ ಸಂಸ್ಥೆಗಳು ಮೇಲ್ವರ್ಗದ ಸಮುದಾಯಗಳ ಹತ್ತಿರ ಇರುವುದರಿಂದ ಕೆಲವರಿಗೆ ಸಮುದಾಯಗಳಿಗೆ ಶಿಕ್ಷಣ ಪಡೆದುಕೊಳ್ಳಲು ಸಮಸ್ಯೆ ಎದುರಾಗುತ್ತಾ ಇದೆ ಆದ್ದರಿಂದ ನಮ್ಮ ಸಂಸ್ಥೆಯಾದ ಭಾರತೀಯ ಬೌದ್ಧ ಮಹಾಸಭಾ ದಿ ವರ್ಲ್ಡ್ ಫಿಲಾಸ ಆಪ್ ಬುದ್ಧಿಸ್ಟ್ ವತಿಯಿಂದ ನಾಗಪುರದಲ್ಲಿ ವರ್ಲ್ಡ್ ಯೂನಿವರ್ಸಿಟಿಯನ್ನು ಸ್ಥಾಪನೆ ಮಾಡಲಾಗುವುದು ಈಗಾಗಲೇ 70 ಯೂನಿವರ್ಸಿಟಿಗಳ…
ತುಮಕೂರು: ಬಾಡಿಗೆ ಇದೆ ಎಂದು ಹೇಳಿ ಸ್ನೇಹಿತರ ಜೊತೆಗೆ ತೆರಳಿದ್ದ ಆಟೋ ಚಾಲಕ ಶವವಾಗಿ ಪತ್ತೆಯಾದ ಘಟನೆ ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಧುಗಿರಿ ಪಟ್ಟಣದ ಶ್ರೀಧರ್ ಮೂರ್ತಿ (45) ಮೃತ ದುರ್ದೈವಿ. ಪಟ್ಟಣದ ಅಗ್ನಿಶಾಮಕ ಠಾಣೆ ಬಳಿ ವಾಸವಿದ್ದ ಶ್ರೀಧರ್ ಮೂರ್ತಿ, ಸ್ನೇಹಿತ ವೆಂಕಟೇಶ್ ಜೊತೆ ಬಾಡಿಗೆ ಇದೆ ಎಂದು ಮನೆಯಿಂದ ಹೋಗಿದ್ದ. ಬಳಿಕ ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಗಾಬರಿಯಾಗಿದ್ದ ಕುಟುಂಬಸ್ಥರು, ವೆಂಕಟೇಶ್ ಗೆ ಕರೆ ಮಾಡಿ ಕೇಳಿದಾಗ ಯಾರೋ ಮೂವರ ಜೊತೆ ಕಾರಿನಲ್ಲಿ ತೆರಳಿದ್ದಾಗಿ ತಿಳಿಸಿದ್ದರು. ಆದರೆ, ಬೆಳಗ್ಗೆ ಮಧುಗಿರಿ– ಗೌರಿಬಿದನೂರು ಬೈಪಾಸ್ ರಸ್ತೆಯಲ್ಲಿರುವ ಇಟ್ಟಿಗೆ ಫ್ಯಾಕ್ಟರಿ ಬಳಿ ಶ್ರೀಧರ್ ಮೂರ್ತಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾರೆ. ಶ್ರೀಧರ್ ಮೂರ್ತಿ ಸಾವಿನ ಬಗ್ಗೆ ಸ್ನೇಹಿತ ವೆಂಕಟೇಶ್ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ಕರೆದುಕೊಂಡು ಹೋದ ಅಪರಿಚಿತರನ್ನ ಪತ್ತೆ ಹಚ್ಚಿ ನ್ಯಾಯ ಓದಗಿಸಬೇಕೆಂದು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು…
ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕಿ ಕಿರುಕುಳಕ್ಕೆ ಒಳಗಾದ ನಂತರವೂ ಪ್ರಕರಣ ದಾಖಲಿಸಲು ವಿಳಂಬ ಮಾಡಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯುಪಿ ಜಲೌನ್ ನ ಅಕೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ತಿಂಗಳ ಹಿಂದೆ ಅಕೋಡಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಲಾಗಿತ್ತು. ಘಟನೆಯ ಬಗ್ಗೆ ಮಗಳು ಪೋಷಕರಿಗೆ ತಿಳಿಸಿದ್ದು, ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಿ ಎರಡು ತಿಂಗಳು ಕಳೆದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಇದರಿಂದ ಕೋಪಗೊಂಡ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಲೌನ್ ಎಎಸ್ಪಿ ಅಸೀಮ್ ಚೌಧರಿ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. 24 ಗಂಟೆಯೊಳಗೆ ವರದಿ ಸಲ್ಲಿಸಬೇಕು. ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರೆಂದು ಕಂಡುಬಂದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಸೀಮ್ ಚೌಧರಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…
ಭದ್ರಾವತಿ: ಬಹಳಷ್ಟು ನಿರೀಕ್ಷೆ ಇಟ್ಟು ಜನರು ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಜನರ ಮನಸ್ಸಿನಲ್ಲಿ ಮಂದಹಾಸ ತರುವಂತೆ ಕೆಲಸ ಮಾಡಿ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಭದ್ರಾವತಿಯಲ್ಲಿ ಭಾನುವಾರ ಶಿವಮೊಗ್ಗ ಜಿಲ್ಲೆಯ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇಲಾಖೆಗೆ, ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಕ್ಕೆ ಹೆಸರು ಬರುವ ರೀತಿಯಲ್ಲಿ ನಾವು, ನೀವೆಲ್ಲ ಸೇರಿ ಕೆಲಸ ಮಾಡಬೇಕಿದೆ. ಇಡೀ ರಾಜ್ಯದ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಕೆಲಸ ಮಾಡಬೇಕಾಗಿದೆ. ಇಲಾಖೆಯಲ್ಲಿ ಎಲ್ಲೆಲ್ಲಿ ನ್ಯೂನತೆಗಳಿವೆ ಅದನ್ನು ಸರಿ ಮಾಡಬೇಕಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ಪೂರೈಸಬೇಕಿದೆ. ಹಾಗಾಗಿ ಎಲ್ಲರೂ ಅತ್ಯಂತ ದಕ್ಷತೆಯಿಂದ, ಸರಕಾರದ ಉದ್ದೇಶದಂತೆ, ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು. ಸರಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು…
ಬೆಳಗಾವಿ: ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಇದನ್ನು ನೋಡಿದ ಬಿಜೆಪಿಗೆ ಆತಂಕ ಶುರುವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಸರ್ಕಾರ ಜಾರಿಗೆ ತಂದ ಘೋಷಣೆಗಳನ್ನು ಜನರು ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತಿದ್ದಾರೆ. ಈ ವಿಷಯನ್ನು ಮರೆ ಮಾಚಲು ಬಿಜೆಪಿಯವರು ಬೇರೆ ಅಸ್ತ್ರ ಹೂಡುತ್ತಿದ್ದಾರೆ. ಇವರ ಬಯಕೆ ಎಂದು ಈಡೇರದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಗಲಾಟೆ ಮಾಡಿಸುವುದೇ ಬಿಜೆಪಿ ಕೆಲಸ: ಅಭಿವೃದ್ದಿ ಬಗ್ಗೆ ಬಿಜೆಪಿಯವರಿಗೆ ಏನು ಗೊತ್ತಿಲ್ಲ. ಮುಖ್ಯವಾಗಿ ಬಿಜೆಪಿಯವರಿಗೆ ಗೊತ್ತಿರುವುದು ಕೋಮು ಗಲಭೆ ಹಾಗೂ ಗಲಾಟೆ ಮಾಡಿಸುವುದು ಇವರ ನಿತ್ಯ ಕಾಯಕವಾಗಿದೆ. ಸೋತು ಸುಣ್ಣವಾಗಿರುವ ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಆದ್ದರಿಂದ ಇಂತಹ ಇಲ್ಲ ಸಲ್ಲದ ಹೇಳಿಕೆಗಳನ್ನು ಮೇಲೆತ್ತಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು. ವಿಮಾನ ಸಂಪರ್ಕ ಕಡಿತಗೊಳಿಸಿದ ಕಮಲ:ಬೆಳಗಾವಿಗೆ ಬರಬೇಕಿದ್ದ ಯೋಜನೆಗಳು ಹುಬ್ಬಳ್ಳಿ ಧಾರವಾಡಕ್ಕೆ ಹೋಗುತ್ತಿವೆ ಎನ್ನುವ…
ಪುಣೆಯ ದೇವಸ್ಥಾನಗಳು ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ ಮಾದರಿಯಾಗುತ್ತಿವೆ. ಶ್ರೀ ಸದ್ಗುರು ಶಂಕರ ಮಹಾರಾಜ್, ಶ್ರೀ ಮೋರಯಾ ಗೋಸಾವಿ ಸಂಜೀವನ ಸಮಾಧಿ ದೇವಸ್ಥಾನದಂತಹ ದೇವಾಲಯಗಳು ತಮ್ಮ ರಕ್ತದಾನ ಶಿಬಿರಗಳಲ್ಲಿ ಸಂಗ್ರಹಿಸಿದ ರಕ್ತದಿಂದ ನೂರಾರು ಜೀವಗಳನ್ನು ಉಳಿಸುವ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರುತ್ತಿವೆ. ಟೈಮ್ಸ್ ಈ ಮಾಹಿತಿಯನ್ನು ವರದಿ ಮಾಡಿದೆ. ಕರೋನಾದಿಂದಾಗಿ ರಕ್ತದಾನ ಮಾಡಲು ಕಷ್ಟವಾದಾಗ 2019 ರ ಜೂನ್ ನಲ್ಲಿ ದಂಗವಾಡಿಯ ಶಂಕರ ಮಹಾರಾಜ್ ದೇವಸ್ಥಾನ ಟ್ರಸ್ಟ್ ಮೊದಲ ರಕ್ತದಾನ ಶಿಬಿರವನ್ನು ಪ್ರಾರಂಭಿಸಿತು. ನಂತರ ಈ ಕಲ್ಪನೆಯು ಜನಪ್ರಿಯವಾಗಲು ಪ್ರಾರಂಭಿಸಿತು. ಎರಡು ತಿಂಗಳ ಹಿಂದೆ ಚಿಂಚವಾಡದ ಶ್ರೀ ಮೋರಯಾ ಗೋಸಾವಿಯ ಸಂಜೀವನ ಸಮಾಧಿ ದೇವಸ್ಥಾನದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರಗಳಲ್ಲಿ ಸಂಗ್ರಹಿಸಿದ ರಕ್ತವನ್ನು ಸಸೂನ್ ಆಸ್ಪತ್ರೆ, ಔಂಧ್ ಜಿಲ್ಲಾ ಆಸ್ಪತ್ರೆ, ಸಹ್ಯಾದ್ರಿ ಆಸ್ಪತ್ರೆ, ಕೆಇಎಂ ಆಸ್ಪತ್ರೆ, ರೂಬಿ ಹಾಲ್ ಕ್ಲಿನಿಕ್, ಭಾರತಿ ಆಸ್ಪತ್ರೆ ಮುಂತಾದ ಪ್ರಮುಖ ಆಸ್ಪತ್ರೆಗಳಿಗೆ ನೀಡಲಾಗುತ್ತದೆ. ಮುಂದಿನ ತಿಂಗಳು ಅಷ್ಟವಿನಾಯಕ ದೇವಸ್ಥಾನಗಳಲ್ಲಿ ಒಂದಾದ ರಂಜನಗಾಂವ್ ನ ಮಹಾಗಣಪತಿ ದೇವಸ್ಥಾನ ಟ್ರಸ್ಟ್…