Author: admin

ಪತ್ನಿಯನ್ನು ಹತ್ಯೆಗೈದು, ಬಳಿಕ ಆಸ್ಪತ್ರೆಗೆ ಕರೆ ತಂದು ಆಕೆ ಮಾತನಾಡುತ್ತಿಲ್ಲ ಎಂದು ಕಥೆ ಕಟ್ಟಿದ್ದ ಪತಿಯನ್ನು ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಶರತ್ ಎಂದು ಗುರುತಿಸಲಾಗಿದೆ. ಪ್ರಿಯಾ (19) ಕೊಲೆಯಾದ ಮಹಿಳೆ. ಕಳೆದ ಜೂನ್ 1ರಂದು ಯಶವಂತಪುರದ ಖಾಸಗಿ ಆಸ್ಪತ್ರೆಗೆ ಪತ್ನಿಯ ಶವದೊಂದಿಗೆ ಬಂದಿದ್ದ ಆರೋಪಿ ಶರತ್ ತನ್ನ ಪತ್ನಿ ಮಾತನಾಡುತ್ತಿಲ್ಲ ಎಂದು ಆಸ್ಪತ್ರೆಯಲ್ಲಿ ಗೋಳಾಡಿದ್ದ. ಈ ಬಗ್ಗೆ ವೈದ್ಯರು ಪರಿಶೀಲನೆ ನಡೆಸಿದಾಗ ಆಕೆ ಸಾವನ್ನಪ್ಪಿರುವುದು ಗೊತ್ತಾಗಿತ್ತು. ಪತ್ನಿ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ ಬಳಿಕವೂ ಆರೋಪಿ ಜೋರಾಗಿ ಅತ್ತು ಗೋಳಾಡಿದ್ದ. ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ಅನುಮಾನಾಸ್ಪದ ಸಾವು ಎಂದು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಬಳಿಕ ಮೃತ ಪ್ರಿಯಾಳ ತಾಯಿ ನೀಡಿದ ದೂರಿನನ್ವಯ ಯಶವಂತಪುರ ಠಾಣಾ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆಗೆ ಮುಂದಾಗಿದ್ದರು. ಆರೋಪಿ ಶರತ್ ಗೆ ಪ್ರಿಯಾ ಎರಡನೇ ಹೆಂಡತಿ. ಮದುವೆಯಾಗಿ ಮೊದಲ ಹೆಂಡತಿ ಇದ್ದರೂ ಶರತ್ ಎರಡನೇ ಮದುವೆಯಾಗಿದ್ದ. ಅಲ್ಲದೆ ಆರೋಪಿ ಶರತ್…

Read More

ಆಂಟೋನಿ ಬೇಗೂರು ಆರ್ಥಿಕತೆ, ಕೃಷಿ, ಶಿಕ್ಷಣ ವಲಯದಲ್ಲಿ ಅನೇಕ ಸುಧಾರಣೆಗಳ ಮೂಲಕ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದ ದಕ್ಷ ಆಡಳಿತಗಾರ, ‘ರಾಜರ್ಷಿ’ ಬಿರುದಾಂಕಿತ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನದ ಸ್ಮರಣೆಗಳು. ಜಲ, ಜಲ ವಿದ್ಯುತ್, ಶಿಕ್ಷಣ, ಆರೋಗ್ಯ, ಉದ್ಯೋಗ, ಕಲೆ-ಸಂಸ್ಕೃತಿ, ಭಾಷೆ ಸೇರಿದಂತೆ ನಾಡಿನ ಸಮಗ್ರ  ಅಭಿವೃದ್ಧಿಗೆ  ಹಲವು ಕೊಡುಗೆಗಳನ್ನು ನೀಡಿದ ಸಮರ್ಥ ಆಡಳಿತಗಾರ ರಾಜರ್ಷಿ #ನಾಲ್ವಡಿಕೃಷ್ಣರಾಜಒಡೆಯರ್ ಅವರ ಜನ್ಮದಿನದಂದು ಆ  ಮಹಾನ್ ಚೇತನಕ್ಕೆ ಗೌರವದ ನಮನಗಳು. ಅವರ ಅಧಿಕಾರಾವಧಿಯನ್ನು ಡಿವಿಜಿಯವರು ‘ಸುವರ್ಣ ಯುಗ’ವೆಂದು ವರ್ಣಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ ರಾಷ್ಟ್ರವೇ ಹೆಮ್ಮೆ ಪಡುವ ಅನನ್ಯ ಸಾಧಕ ಅವರು. ಹೆಮ್ಮೆಯ ಕನ್ನಡಿಗ ಒಂದು ಗತವೈಭವವನ್ನೇ ಕಂಡ ಕರ್ನಾಟಕ ಅಂದಿನ ಮೈಸೂರು ರಾಜ್ಯ.. ಕನ್ನಡ ನಾಡು ಕಂಡ ಹೆಮ್ಮೆಯ ನಾಯಕರು ಜಲದಾತ, ವಿದ್ಯಾದಾತ,ಅನ್ನದಾತ,ಉದ್ಯೋಗದಾತ, ಅಭಿವೃದ್ಧಿಯ ಪಿತಾಮಹ.. ಸರ್ವಜನಾಂಗದ ಒಳಿತಿಗಾಗಿ ದುಡಿದ ಮೈಸೂರು ಮಹಾರಾಜರು ಮಾನ್ಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವ್ರಿಗೆ ಹುಟ್ಟುಹಬ್ಬದ ಶುಭಾಶಯಗಳು.. ಒಬ್ಬ ಮನುಷ್ಯ ಜೀವನದಲ್ಲಿ ಇಷ್ಟೊಂದು ವಿಕ್ರಮಗಳನ್ನು…

Read More

ಮಧುಗಿರಿ: ಕರಡಿ ದಾಳಿಗೆ ಒಳಗಾಗಿ ಗಾಯಗೊಂಡು ಪ್ರಗ್ನೆ ತಪ್ಪಿದ ದ್ವಿಚಕ್ರ ವಾಹನ ಸವಾರರನ್ನು ಕುರಿಗಾಹಿಗಳು ರಕ್ಷಿಸಿ ಆಸ್ಪತ್ರೆಗೆ ಸೇರಿಸಿರುವ ಘಟನೆ ನಡೆದಿದೆ. ತಾಲೂಕಿನ ಮಿಡಗೇಶಿ ಹೋಬಳಿಯ ಹನುಮಂತಪುರದ ವಾಸಿ ಈರಣ್ಣ ( ಕೃಷ್ಣ)38 ಮಿಡಗೇಶಿಯಿಂದ ಲಕ್ಲಿಹಟ್ಟಿಗೆ ಹನುಮಂತಪುರ ಮಾರ್ಗವಾಗಿ ಶುಕ್ರವಾರ ಸಂಜೆ ಸುಮಾರು 6:30ರ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಈರಣ್ಣ ಬೆಟ್ಟದ ಹತ್ತಿರ ಎರಡು ಕರಡಿಗಳು ಪ್ರತ್ಯಕ್ಷವಾಗಿದ್ದವು. ಇದರಲ್ಲಿ ದೊಡ್ಡ ಕರಡಿ ದಾಳಿ ಮಾಡಿದ್ದು, ಈ ವೇಳೆ ಗಾಬರಿಗೊಂಡ ದ್ವಿಚಕ್ರ ವಾಹನ ಸವಾರ ವಾಹನದಿಂದ ನೆಲಕ್ಕೆ ಬಿದ್ದಿದ್ದು, ಪರಿಣಾಮವಾಗಿ ತಲೆಗೆ ಹಾಗೂ ಕೈಗೆ ಪೆಟ್ಟಾಗಿದೆ. ಇದೇ ವೇಳೆ ಸ್ಥಳದಲ್ಲಿ ಕುರಿಗಾಹಿಗಳ ಸಹಾಯದಿಂದ ಮಿಡಿಗೇಶಿ ಪ್ರಾಥಮಿಕ ಆಸ್ಪತ್ರೆಗೆ ಅವರು ದಾಖಲಾಗಿದ್ದು, ಪ್ರಥಮ ಚಿಕಿತ್ಸೆ ಪಡೆದು ಮನೆ ತೆರಳಿದ್ದರು.  ಶನಿವಾರ ಸಂಜೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ತಪಾಸಣೆ ನಡೆಸಿದ ವೈದ್ಯರು  ಹೆಚ್ಚುವರಿ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ವಿಷಯ…

Read More

ಗುಬ್ಬಿ: ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಲ್ಲೂಕಿನ ದೊಡ್ಡಗುಣಿ  ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಮೇಲುಸೇತುವೆಯ ಮೇಲ್ಭಾಗ ಭಾನುವಾರ ಮುಂಜಾನೆ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆ.ಬಿ.ಕ್ರಾಸ್ ಕಡೆಯಿಂದ ಬರುತ್ತಿದ್ದ ಕಾರು ಗುಬ್ಬಿ ಕಡೆಯಿಂದ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.ಗಾಯಾಳುವನ್ನು ತುರುವೇಕೆರೆ ತಾಲ್ಲೂಕು ಹರಿದಾಸನಹಳ್ಳಿ ಚೇತನ್ 28 ವರ್ಷ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಶನಿವಾರ ತಡರಾತ್ರಿ ಗುಬ್ಬಿ ಪಟ್ಟಣದಲ್ಲಿ ನೆಡೆದ ಮತ್ತೊಂದು ಅಪಘಾತದಲ್ಲಿ  ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಕಾರು ಸಂಪೂರ್ಣ ಜಕಂ ಗೊಂಡಿದೆ. ಬಸ್ಸು ಮತ್ತು ಕಾರಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಗುಬ್ಬಿ ಪೊಲೀಸ್ ಎಸ್ ಐ ಮುತ್ತುರಾಜ್ ಎರಡೂ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ…

Read More

ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಕನಪುರ್ ಪಟ್ಟಣದ ಶಿವ ಸ್ಮಾರಕ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರುಗಳ ಚಿಂತನ ಮಂಥನ ಸಭೆಯಲ್ಲಿ ಪಕ್ಷ ಸಂಘಟನೆ ಕರೆ ನೀಡಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,  ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು ಆದರೆ ನಮಗೆ ಹಲವಾರು ವಿಷಯಗಳನ್ನು ಕಲಿಸಿಕೊಟ್ಟಿದೆ. ಇದನ್ನು ಪಾಠವಾಗಿ ಸ್ವೀಕರಿಸಿ ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಿ ಮುಂದೆ ನಡೆಯಲಿರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಚುನಾಯಿಸಿಗೊಳಿಸಲು ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ರಾಜ್ಯದಲ್ಲಿ ಸಂಪೂರ್ಣ ಬಹುಮತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಇರುವುದರಿಂದ ಈ ಕ್ಷೇತ್ರದ ಅಭಿವೃದ್ಧಿಗೋಸ್ಕರ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ಇದೇ ಸಂದರ್ಭದಲ್ಲಿ ಸಭೆಯಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಅಶೋಕ್ ಅಂಗಡಿ ಮಹಾಂತೇಶ್ ರಾಹುತ್ ಮಧು ಕವಳೆೇಕರ್ ಲಕ್ಷ್ಮಣ್…

Read More

288 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಒಡಿಶಾ ರೈಲು ದುರಂತಕ್ಕೆ ಕಾರಣವಾದ ಕಾರಣಗಳನ್ನು ಕಂಡುಹಿಡಿಯಲು ತನಿಖೆ ಪ್ರಾರಂಭವಾಗಿದೆ. ಸಿಗ್ನಲ್ ದೋಷವು ಅಪಘಾತಕ್ಕೆ ಕಾರಣವಾಗಿದೆಯೇ ಎಂಬ ಬಗ್ಗೆ ತನಿಖೆ ಈಗ ಕೇಂದ್ರೀಕೃತವಾಗಿದೆ. ಒಡಿಶಾದ ಬಾಲಸೋರ್‌ ನಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಉನ್ನತ ಮಟ್ಟದ ರೈಲ್ವೇ ತನಿಖಾ ತಂಡ ಉಳಿದುಕೊಂಡಿದೆ. ನಿನ್ನೆ ಬಾಲಸೋರ್‌ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುವುದು ಮತ್ತು ಅಪಘಾತಕ್ಕೆ ಕಾರಣರಾದವರನ್ನು ಬಿಡುವುದಿಲ್ಲ ಎಂದು ಹೇಳಿದ್ದರು. ಒಡಿಶಾ ರೈಲು ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ ಅಪಘಾತದಲ್ಲಿ ಸುಮಾರು ಸಾವಿರ ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ನಿನ್ನೆ ತಡರಾತ್ರಿ ಬಾಲಸೋರ್ ಮುರಿದು ಬಿದ್ದ ಬೋಗಿಗಳನ್ನು ಸ್ಥಳಾಂತರಿಸುವ ವೇಳೆ ಮತ್ತೆ ಮೃತದೇಹಗಳು ಪತ್ತೆಯಾದ ದಾರುಣ ದೃಶ್ಯಕ್ಕೆ ಸಾಕ್ಷಿಯಾಯಿತು. ಸ್ಥಳದಲ್ಲಿ ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳು ಯುದ್ಧದ ಆಧಾರದ ಮೇಲೆ ಪ್ರಗತಿಯಲ್ಲಿವೆ. ಅಪಘಾತದ ನಂತರ ಅಸ್ತವ್ಯಸ್ತಗೊಂಡಿದ್ದ ರೈಲು ಸಂಚಾರವನ್ನು ಪುನಃಸ್ಥಾಪಿಸಲು…

Read More

ತುಮಕೂರು: ನಗರದಲ್ಲಿ ದಲಿತ ಜನಾಂದೋಲನ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಅವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸಲಾಯಿತು. ಟೌನ್ ಹಾಲ್ ಮಹಾನಗರ ಪಾಲಿಕೆ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಗುಂಚಿ ವೃತ್ತದವರೆಗೂ ಹೆಜ್ಜೆ ಹಾಕಿದ ವಿವಿಧ ಜಾನಪದ ಕಲಾತಂಡಗಳಿಗೆ ಚಾಲನೆ ನೀಡಿ ಮಾತನಾಡಿದ ತುಮಕೂರು ನಗರ ಕಾಂಗ್ರೆಸ್  ಮುಖಂಡ ಇಕ್ಬಾಲ್ ಅಹಮದ್,  ದೇಶದಲ್ಲಿ ಬಡವರು ಶೋಷಿತರು ಸಮಾನವಾಗಿ ಬದುಕಬೇಕಾದರೆ ಸಮಾನವಾದ ಜೀವನ ನಡೆಸಬೇಕಾದರೆ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳು ಮತ್ತು ನೀತಿ ವಾಕ್ಯಗಳನ್ನು ಪಾಲನೆ ಮಾಡಿ  ಸಂವಿಧಾನದ ಅಡಿಯಲ್ಲಿ ಐಕ್ಯತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದರು. ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ  ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಆಯೋಜನೆ ಮಾಡಿದ್ದ ಕಾರಣದಿಂದಾಗಿ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲು ಆಗಲಿಲ್ಲ,  ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ತತ್ವದರ್ಶನಗಳನ್ನ ಜಗತ್ತಿಗೆ ಸಾರಲು ದಲಿತ ಜನಾಂದೋಲನ ಸಮಿತಿಯ…

Read More

ತಿಪಟೂರು: ನಗರದ ರಾಜಕಾಲುವೆ ನೀರಿಗೆ ಮಳೆನೀರು ಸೇರಿಕೊಂಡು ಕೋಡಿ ಸರ್ಕಲ್ ಬಳಿ ಮ್ಯಾನ್ ಹೋಲ್ ತೆರೆದು ಚರಂಡಿಯ ನೀರು ಹೇಮಾವತಿ ನಾಲೆಗೆ ಸೇರುವುದನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನಿಯೋಗ ನಗರಸಭೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ಎಸ್.ಎನ್.ಸ್ವಾಮಿ, ಬಿ. ಲೋಕೇಶ್, ರಂಗಧಾಮಯ್ಯ, ಗೋಪಿನಾಥ್ ಬೊಮ್ಮನಹಳ್ಳಿ ಹಾಗೂ ಇನ್ನಿತರರಿದ್ದ  ನಿಯೋಗವು ಮನವಿ  ಸಲ್ಲಿಸಿತು. ಕಲುಷಿತ ನೀರು  ಹೇಮಾವತಿ ನಾಲೆಯ ಮೂಲಕ ಈಚನೂರು ಕೆರೆ ಸೇರುತ್ತದೆ. ಇದರಿಂದ ನಗರಕ್ಕೆ ಕಲುಷಿತ ನೀರು ಸರಬರಾಜು ಆಗುವ ಅಪಾಯವಿದೆ. ಆದರಿಂದ ಹಲವಾರು ರೋಗಗಳು, ಅದರಲ್ಲೂ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಮತ್ತೊಂದೆಡೆ, ಯುಜಿಡಿಯ ಸಂಸ್ಕರಣಗೊಂಡ ನೀರು ಹೂವಿನ ಕಟ್ಟೆ ತುಂಬುತ್ತಿದ್ದು ಅದರಿಂದ ಕೃಷಿ ಕೆಲಸಗಳಿಗೆ ನೀರು ಉಪಯೋಗವಾಗುತ್ತಿದೆ. ಆದರೆ ಅಲ್ಲಿ ವಾಸನೆ ಬರುತ್ತಿದ್ದು, ನೀರು ಸಂಪೂರ್ಣವಾಗಿ ಶುದ್ಧೀಕರಣ ವಾಗಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಅಂತರ್ಜಲಕ್ಕೇ ಕಲುಷಿತ ನೀರು ಸೇರಿಕೊಂಡು ರೋಗಗಳ ವಿತರಣಾ ಕೆಂದ್ರಗಳಾಗುತ್ತವೆ ಎಂದು ಮನವಿ ಪತ್ರದಲ್ಲಿ…

Read More

ತುಮಕೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರಪ್ರಥಮವಾಗಿ ಪ್ರಜಾಪ್ರಭುತ್ವದಲ್ಲಿ ಕಂಡು ಕೇಳರಿಯದಂತಹ, ಕುತೂಹಲವಾದಂತಹ ಕಾರ್ಯಕ್ರಮ ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜ ಹೇಳಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,  ಮುಂದೆ ಕಾದು ನೋಡೋಣ ಯಾವ ರೀತಿಯ ಪರಿಣಾಮವಾಗುತ್ತೆ ಅಂತ ಎಂದು ಹೇಳಿದರು. ಈ ರಾಜ್ಯದ ಬಂಡವಾಳ 54 ಸಾವಿರ ಕೋಟಿ ಬೇಕಾಗುತ್ತದೆ ಎಂದು ಹೇಳುತ್ತಾರೆ. ಆದರೆ ಹಣ ಹೊಂದಿಸಲು ಯಾರ ತಲೆ ಬೋಳಿಸುತ್ತಾರೆ ಅನ್ನೋದಯ ಮುಖ್ಯ ಎಂದರು. ಈ ನಡುವೆ ಜನರಿಗೆ ಗ್ಯಾರೆಂಟಿ ಕೊಡುತ್ತೇನೆ ಅಂತಾ ಹೇಳಿದ್ದು ಒಳ್ಳೆಯದೆ. ಜನರು ಕೆಲಸ ಮಾಡದೇ ಸುಖವಾಗಿರುವಂತೆ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು. ಸುಖವಾಗಿರಿ, ಚೆನ್ನಾಗಿರಿ, ಒಳ್ಳೆ ಡ್ರೆಸ್ ಹಾಕೊಳಿ, ಕೋಟ್ ಹಾಕೋಳಿ ಎಂದಿದ್ದಾರೆ. 3 ಸಾವಿರ ತೆಗೆದುಕೊಂಡು ನಿರುದ್ಯೋಗಿಯಾಗಿ, ಶಾಶ್ವತವಾಗಿ ನಿರುದ್ಯೋಗಿಯಾಗಿ ಎಂದು ಮುಖ್ಯ ಮಂತ್ರಿಗಳು ಘೋಷಣೆ ಮಾಡಿದ್ದಾರೆ ಎಂದರು. ನಿರುದ್ಯೋಗಿಗಳಿಗೆ ಅಪ್ರೆಂಟಿಸ್ ಟ್ರೈನಿಂಗ್ ಕೊಟ್ಟು ಸ್ವಯಂ ಉದ್ಯೋಗ ಮಾಡುವಂತೆ ಉತ್ತೇಜನ ಕೊಡಬೇಕಿತ್ತು ಎಂದು ಹೇಳಿದರು. ಇನ್ನು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ…

Read More

ತುಮಕೂರು: ನಾವು ಐದು ವರ್ಷದವರೆಗೂ ಘೋಷಣೆ ಮಾಡಲಾಗಿರುವಂತಹ ಈ ಐದು  ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು. ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಚುನಾವಣೆ ವೇಳೆ ಗ್ಯಾರಂಟಿ ಭರವಸೆ ಕೊಟ್ಟಿದ್ರು. ಕೊಟ್ಟ ಭರವಸೆಯಂತೆ ನಮ್ಮ ಗ್ಯಾರಂಟಿಗಳಿಗೆ ನಿನ್ನೆ ಅನುಷ್ಠಾನಕ್ಕೆ ತೀರ್ಮಾನ ಆಗಿದೆ ಎಂದರು. ಅದರ ಪ್ರೋಸಿಜರ್ ಬಗ್ಗೆ ನಿನ್ನೆ ಚರ್ಚೆ ಆಗಿದೆ. ಅನುಷ್ಠಾನ ಮಾಡೋದಕ್ಕೆ ಆರಂಭ ಮಾಡುತ್ತೇವೆ ಸಂಪನ್ಮೂಲಗಳ ಕ್ತೋಡೀಕರಣ ಪ್ರಶ್ನೆ ಎಲ್ಲರೂ ಎತ್ತಿದ್ರು ಎಂದರು. ವಿರೋಧ ಪಕ್ಷದವರು ಇದನ್ನು ಒಂದು ಅಸ್ತ್ರವಾಗಿ ಪ್ರಯೋಗ ಮಾಡಿದ್ರು. ಹಣಕಾಸು ವ್ಯಯ ಆಗದೇ, ಜನರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಗ್ಯಾರಂಟಿ ಜಾರಿ ಮಾಡುತ್ತೇವೆ. ಅನಾವಶ್ಯಕವಾದ ಯೋಜನೆ, ಕಾರ್ಯಕ್ರಮ ಇದ್ದರೆ ಅದನ್ನು ಸ್ಥಗಿತ ಮಾಡುತ್ತೇವೆ ಎಂದರು. ಎಲ್ಲಾ ಯೋಜನೆಗಳ ಡಿಪಿಆರ್ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಭಿವೃದ್ಧಿ ಕುಂಟಿತವಾಗದ ರೀತಿಯಲ್ಲಿ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದರು. ನಿಗಮ ಮಂಡಳಿ ಅನಗತ್ಯ ಇದ್ದರೆ ಅದನ್ನು…

Read More