Subscribe to Updates
Get the latest creative news from FooBar about art, design and business.
- ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
- ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
- ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
- ಮಧುಗಿರಿ | ನ.29ರಂದು ಒಳಮೀಸಲಾತಿ ಜಾಗೃತಿ ಶಿಬಿರ
- ಒಂದೇ ರಾತ್ರಿ 3 ಅಂಗಡಿಗಳಿಗೆ ನುಗ್ಗಿದ ಕಳ್ಳರು: ಶೀಟ್ ಕತ್ತರಿಸಿ, ನಗ ನಾಣ್ಯ ದೋಚಿ ಪರಾರಿ
- ಔರಾದ: ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಇಬ್ಬರು ವಿದ್ಯಾರ್ಥಿನಿಯರು ವಿಭಾಗಮಟ್ಟಕ್ಕೆ ಆಯ್ಕೆ
- ಕೊಳ್ಳುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
- ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವಂತೆ ಸಿದ್ದರಬೆಟ್ಟ ಶ್ರೀಗಳಿಂದ ಒತ್ತಾಯ
Author: admin
ರದ್ದುಗೊಳಿಸಿದ್ದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಶುಕ್ರವಾರ ಮತ್ತೆ ವಿಸ್ತರಿಸಿದೆ.ಹಾಗಾಗಿ, ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್‌ಗೆ ಹೈಕೋರ್ಟ್‌ನಿಂದ ಮತ್ತೆ ರಿಲೀಫ್ ಸಿಕ್ಕಂತಾಗಿದೆ. ಚೇತನ್ ಕುಮಾರ್ ಸಲ್ಲಿಸಿದ್ದ ಅರ್ಜಿ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸರಕಾರ ಒಸಿಐ ರದ್ದು ಮಾಡಿ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ್ದಲ್ಲದೆ, ಚೇತನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. 2022ರ ಜೂ.8ರಂದು ನೋಟಿಸ್ ಜಾರಿ: ಅರ್ಜಿದಾರರ ಪರ ವಕೀಲರು, ‘ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಅರ್ಜಿದಾರರು ಪಾಲಿಸುತ್ತಿದ್ದಾರೆ. ಹಾಗಾಗಿ, ಹಿಂದೆ ನೀಡಿರುವ ತಡೆಯಾಜ್ಞೆಯನ್ನು ವಿಸ್ತರಿಸಬೇಕು ಎಂದು ಕೋರಿದರು.2018ರಲ್ಲಿ ಚೇತನ್‌ಗೆ ಓವರ್‌ಸ್ ಸಿಟಿಜನ್ ಆಫ್ ಇಂಡಿಯಾ (ಒಸಿಐ) ಕಾರ್ಡ್ ನೀಡಧಿಲಾಗಿತ್ತು. ಆದರೆ, ಅವರ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಮತ್ತು ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಚೇತನ್‌ಗೆ 2022ರ ಜೂ. 8ರಂದು ನೋಟಿಸ್ ನೀಡಿ ಉತ್ತರ…
ಬೆಂಗಳೂರು:ಜೂನ್ 03: ಕರ್ನಾಟಕ ವಕೀಲರ ಮಂಡಳಿ ಅಧ್ಯಕ್ಷ ಎಚ್.ಎಲ್.ವಿಶಾಲ ರಘು ಹಾಗೂ ಸದಸ್ಯರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು. ರಾಜಸ್ಥಾನದಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾಯ್ದೆಯ ಪ್ರತಿಯನ್ನು ತರಿಸಿಕೊಂಡು ಅಧ್ಯಯನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ವಕೀಲರ ಸಂಘಕ್ಕೆ ಶಾಶ್ವತವಾದ ಸ್ಥಳವಿಲ್ಲವಾಗಿದ್ದು, ಪ್ರಸ್ತುತ ಪ್ರೆಸ್ ಕ್ಲಬ್ ಬಳಿ ಇರುವ ಸ್ಥಳದಲ್ಲಿಯೇ ಶಾಶ್ವತವಾಗಿ ಸ್ಥಳಾವಕಾಶ ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆಂದು ರೂಪಿಸಲಾದ ಮುಖ್ಯಮಂತ್ರಿಗಳ 1ಲಕ್ಷ ಬೆಂಗಳೂರು ವಸತಿ ಯೋಜನೆ ಗೊಂದಲದ ಗೂಡಾಗಿದ್ದು, ನಿತ್ಯ ಹತ್ತಾರು ಮಂದಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತಕಚೇರಿಗೆ ಭೇಟಿ ನೀಡಿ ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಮುಖ್ಯಮಂತ್ರಿಗಳ 1 ಲಕ್ಷ ಬೆಂಗ ಳೂರು ವಸತಿ ಯೋಜನೆಯು ಅನುಷ್ಠಾನಗೊಂಡಿದ್ದು, ಆರಂಭದಲ್ಲಿ ಜನ ಸಾಮಾನ್ಯರಿಗೆ ಸ್ಪಂದಿಸಿ ಹಲವು ಪ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಕಳೆದ 4 ತಿಂಗಳುಗಳಿಂದ ಈ ಯೋಜನೆಯು ಜನ ಸಾಮಾನ್ಯರಿಗೆ ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. 2022ರ ಡಿಸೆಂಬರ್‌ನಲ್ಲಿ ಯೋಜನೆಯಡಿ ಪ್ಲಾ ಬೇಕಾಗಿರುವವರು ಅರ್ಜಿ ಸಲ್ಲಿಸಿ ಎಂದು ನಿಗಮ ಸೂಚಿಸಿತ್ತು. ಅದರಂತೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು.ಇದೀಗ 2 ಬಿಎಚ್‌ಕೆ ಫ್ಲಾಟ್ ಬೇಕಾದ ಎಲ್ಲರೂ ತಾವು ಈ ಹಿಂದೆ ಸಲ್ಲಿಸಿರುವ ಅರ್ಜಿ ರದ್ದುಪಡಿಸಿ ಹೊಸ ಅರ್ಜಿ ಸಲ್ಲಿಸಬೇಕು.1 ಬಿಎಚ್‌ಕೆಗೆ ಅರ್ಜಿ ಸಲ್ಲಿಸಿರುವ ಕೆಲ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ನಿಗಮದ ಅಧಿಕಾರಿಗಳು ಸೂಚಿಸಿದ್ದಾರೆ. ಇದೀಗ 700ಕ್ಕೂ ಅಧಿಕ ಫಲಾನುಭವಿಗಳು ರಾಜೀವ್ ಗಾಂಧಿ…
ಕುಸ್ತಿಪಟುಗಳನ್ನು ಬೆಂಬಲಿಸಿ 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಸದಸ್ಯರು ನೀಡಿರುವ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಂಡದ ಸದಸ್ಯ ಹಾಗೂ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ. ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು ಎಂದಿರುವ ರೋಜರ್ ಬಿನ್ನಿ, ಸದ್ಯ ಕುಸ್ತಿಪಟುಗಳ ಪ್ರತಿಭಟನೆಯ ಸನ್ನಿವೇಶದ ಕುರಿತು ಹೇಳಿಕೆ ನೀಡಿದ್ದಾರೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂದು ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ವರದಿಗಳಿಗೆ ವಿರುದ್ಧವಾಗಿ, ಕುಸ್ತಿಪಟುಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಸಮರ್ಥ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ನಾನು ನಂಬುತ್ತೇನೆ. ಮಾಜಿ ಕ್ರಿಕೆಟಿಗನಾಗಿ, ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ನಾನು ಬಯಸುತ್ತೇನೆ. ರೋಜರ್ ಬಿನ್ನಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನಿನ್ನೆ, 1983 ರ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನಾ ಕುಸ್ತಿಪಟುಗಳನ್ನು…
ತುಮಕೂರು: ನಗರದಿಂದ ಮೈದಾಳ, ಮಾದಗೊಂಡನಹಳ್ಳಿ ಮಾರ್ಗವಾಗಿ ಊರ್ಡಿಗೆರೆಯವರೆಗೂ ಸಂಚರಿಸುವ ಗ್ರಾಮೀಣ ಸಾರಿಗೆ ಬಸ್ ಸರಿಯಾದ ಸಮಯಕ್ಕೆ ಸಂಚರಿಸುತ್ತಿಲ್ಲ, ಈ ಬಗ್ಗೆ ಕ್ರಮವಹಿಸುವಂತೆ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಹೈಕೋರ್ಟ್ ವಕೀಲರಾದ ರಮೇಶ್ ನಾಯಕ್ ಎಲ್. ಮನವಿ ಮಾಡಿದ್ದಾರೆ. ಈ ಮಾರ್ಗದಲ್ಲಿ ಹಲವಾರು ದಶಕಗಳಿಂದ ಐದು ಟ್ರಿಪ್ ಬಸ್ ವ್ಯವಸ್ಥೆ ಇದ್ದು, ಬೆಳಗ್ಗೆ 8:15, 10 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆ, ಸಂಜೆ 5 ಗಂಟೆ ಹಾಗೂ ರಾತ್ರಿ 8 ಗಂಟೆಯ ಬಸ್ ಗಳು ಸರಿಯಾದ ಸಮಯಕ್ಕೆ ಸಂಚರಿಸುತ್ತಿಲ್ಲ. ಇದರಿಂದಾಗಿ ಈ ಮಾರ್ಗದ ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಬಡ ಜನರಿಗೆ ತೊಂದರೆಯಾಗುತ್ತಿದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 7 ಗಂಟೆ, 8:15 ಗಂಟೆ, 10 ಗಂಟೆ, ಮಧ್ಯಾಹ್ನ 2 ಗಂಟೆ, ಸಂಜೆ 5 ಗಂಟೆ, ರಾತ್ರಿ 7 ಗಂಟೆ ಪ್ರತಿ ದಿನ ಈ ಸಮಯದಲ್ಲಿ ತುಮಕೂರಿನಿಂದ ಹೊರಟು ಮೈದಾಳ ಮಾರ್ಗವಾಗಿ ಊರ್ಡಿಗೆರೆಯಿಂದ…
ಸಿಂಗಾಪುರದ ಮಾರಿಯಮ್ಮನ ದೇವಸ್ಥಾನದಲ್ಲಿ ದೇವಾಲಯದ ಆಭರಣಗಳನ್ನು ಗಿರವಿ ಇಟ್ಟ ಭಾರತೀಯ ಪ್ರಧಾನ ಅರ್ಚಕನಿಗೆ ಆರು ವರ್ಷಗಳ ಜೈಲು ಶಿಕ್ಷೆ ಮುಖ್ಯ ಕಾರ್ಮಿ ಕಂದಸಾಮಿ ಸೇನಾಪತಿ ಎರಡು ಮಿಲಿಯನ್ ಸಿಂಗಾಪುರ್ ಡಾಲರ್ ಮೌಲ್ಯದ ಆಭರಣಗಳನ್ನು (ಸುಮಾರು 12 ಕೋಟಿ ರೂ.) ಗಿರವಿ ಇಟ್ಟರು. ಜನರಲ್ ವಿರುದ್ಧ ನಂಬಿಕೆ ದ್ರೋಹ ಮತ್ತು ಜವಾಬ್ದಾರಿ ದುರುಪಯೋಗದ ಆರೋಪಗಳನ್ನು ಹೊರಿಸಲಾಗಿದೆ. ಇದಲ್ಲದೇ ಇತರ ಆರು ಆರೋಪಗಳನ್ನೂ ವಿಚಾರಣೆ ವೇಳೆ ಪರಿಗಣಿಸಲಾಗಿತ್ತು. 2016 ರಿಂದ 2020 ರವರೆಗೆ, ಸೇನಾಪತಿ ಅನೇಕ ಬಾರಿ ತಿರುವಾಭರಣವನ್ನು ಗಿರವಿ ಇಟ್ಟಿದ್ದರು. ಆದರೆ ಲೆಕ್ಕ ಪರಿಶೋಧನೆಯ ವೇಳೆ ಸಾಲ ಮಾಡಿ ಆಭರಣಗಳನ್ನು ವಾಪಸ್ ತೆಗೆದುಕೊಂಡು ದೇವಸ್ಥಾನಕ್ಕೆ ತರುವುದು ವಾಡಿಕೆ. 2016ರಲ್ಲೇ 66 ಪವನ್ ಚಿನ್ನಾಭರಣಗಳನ್ನು 172 ಬಾರಿ ಗಿರವಿ ಇಟ್ಟಿದ್ದರು. 2016 ರಿಂದ 2020 ರವರೆಗೆ ಸೇನಾಪತಿ 14 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆ. ಮಾರ್ಚ್ 2020 ರಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆಡಿಟ್ ವಿಳಂಬವಾಯಿತು, ನಂತರ ಜೂನ್‌ನಲ್ಲಿ ಆಡಿಟ್ ನಡೆಸಲು ನಿರ್ಧರಿಸಲಾಯಿತು,…
ಅಮೆರಿಕದ ಹೂಡಿಕೆ ಸಂಸ್ಥೆ ಮಾರ್ಗನ್ ಸ್ಟಾನ್ಲಿ ವರದಿಯ ಪ್ರಕಾರ, ಭಾರತವು 2014 ರಿಂದ ವೇಗವಾಗಿ ಬೆಳೆಯುತ್ತಿದೆ. ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ, ಭಾರತವು ವಿಶ್ವ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದೆ ಮತ್ತು ಮುಂಬರುವ ವರ್ಷಗಳಲ್ಲಿ ಏಷ್ಯಾ ಮತ್ತು ಪ್ರಪಂಚದ ಬೆಳವಣಿಗೆಯಲ್ಲಿ ಪ್ರಮುಖ ಅಂಶವಾಗಲಿದೆ. ಮುಂದಿನ ದಶಕದಲ್ಲಿ ಭಾರತದ ಬೆಳವಣಿಗೆಯು 2007-11ರಲ್ಲಿ ಚೀನಾದ ಬೆಳವಣಿಗೆಯಂತೆಯೇ ಇರುತ್ತದೆ. ಜಿಡಿಪಿ ಮತ್ತು ಉತ್ಪಾದನಾ ವಲಯದ ಬೆಳವಣಿಗೆ ಭಾರತಕ್ಕೆ ಧನಾತ್ಮಕವಾಗಿರುತ್ತದೆ,’’ ಎಂದು ವರದಿ ಹೇಳಿದೆ. 2013ರಲ್ಲಿದ್ದ ಭಾರತಕ್ಕಿಂತ ಇಂದು ಭಾರತ ಭಿನ್ನವಾಗಿದೆ ಎಂದು ‘ಭಾರತವು ಒಂದು ದಶಕದಲ್ಲಿ ಹೇಗೆ ಪರಿವರ್ತನೆಯಾಯಿತು’ ಎಂಬ ಶೀರ್ಷಿಕೆಯ ವರದಿ ಹೇಳುತ್ತದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಆಗಿರುವ 10 ಪ್ರಮುಖ ಬದಲಾವಣೆಗಳನ್ನೂ ವರದಿ ಒಳಗೊಂಡಿದೆ. ಕಾರ್ಪೊರೇಟ್ ತೆರಿಗೆಯಲ್ಲಿ ಸಮಾನತೆಯನ್ನು ತಂದರು. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೂಡಿಕೆ ವೇಗಗೊಂಡಿದೆ. ಹತ್ತಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ತೆರಿಗೆಗಳನ್ನು ಒಳಗೊಳ್ಳುವ ಮೂಲಕ ಏಕೀಕೃತ ತೆರಿಗೆ ವ್ಯವಸ್ಥೆಯನ್ನು ಜಿಎಸ್‌ಟಿ ಅಡಿಯಲ್ಲಿ…
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಡಿಶಾ ರೈಲು ದುರಂತಕ್ಕೆ ಶೋಕಾಚರಣೆಯ ದಿನವನ್ನು ಘೋಷಿಸಿದ್ದಾರೆ. ಬಹನಾಗಾದಲ್ಲಿ ಸಂಭವಿಸಿದ ರೈಲು ಅಪಘಾತದ ಹಿನ್ನೆಲೆಯಲ್ಲಿ ಜೂನ್ 3 ರಂದು ರಾಜ್ಯಾದ್ಯಂತ ಶೋಕಾಚರಣೆಯನ್ನು ಘೋಷಿಸಲಾಗಿದೆ ಎಂದು ಒಡಿಶಾ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್ ಮಾಡಿದೆ. ಅಲ್ಲದೆ, ಅಪಘಾತ ಸಂತ್ರಸ್ತರಿಗಾಗಿ ನಿನ್ನೆ ರಾತ್ರಿ 500 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಮಾಹಿತಿ ನೀಡಿದ್ದಾರೆ. ಪ್ರಸ್ತುತ 900 ಯೂನಿಟ್ ರಕ್ತ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು. ಅಪಘಾತದಲ್ಲಿ ಗಾಯಗೊಂಡವರಿಗೆ ರಕ್ತದಾನ ಮಾಡಿದ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ರಕ್ತದಾನ ಮಾಡಲು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ. ಒಡಿಶಾದಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 233 ಕ್ಕೆ ತಲುಪಿದೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಐದು ರಕ್ಷಣಾ ತಂಡಗಳನ್ನು ಬಾಲಸೂರ್‌ಗೆ…
ಕಳೆದ ತಿಂಗಳು 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ದೇಶದ ನೂತನ ಸಂಸತ್ ಭವನದಲ್ಲಿ ಹಾಸಿದ ಕಾರ್ಪೆಟ್ ಗಳನ್ನು ತಯಾರಿಸಲು ನ್ಯೂಜಿಲೆಂಡ್ ನಿಂದ 20000 ಕೆಜಿ ಉಣ್ಣೆಯ ನೂಲನ್ನು ಆಮದು ಮಾಡಿಕೊಳ್ಳಲಾಗಿತ್ತು. ಯೋಜನೆಯ ಹಿಂದೆ ಕೆಲಸ ಮಾಡಿದ ಒಬಿಟಿ ಕಾರ್ಪೆಟ್ಸ್‌ನ ಉನ್ನತ ಅಧಿಕಾರಿಗಳು ಈ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. ಒಬಿಟಿ ಕಾರ್ಪೆಟ್ಸ್‌ನ ಉತ್ಪಾದನಾ ಮುಖ್ಯಸ್ಥ ಸುಧೀರ್ ರೈ ಮಾತನಾಡಿ, ನ್ಯೂಜಿಲೆಂಡ್‌ನ ಉತ್ತರ ಮತ್ತು ದಕ್ಷಿಣದಿಂದ ಸಂಗ್ರಹಿಸಲಾದ ಅತ್ಯುತ್ತಮ ಉಣ್ಣೆಯನ್ನು ಕಾರ್ಪೆಟ್ ಗಳನ್ನು ತಯಾರಿಸಲು ಬಳಸಲಾಗುತ್ತದೆ. ಉತ್ತಮ ಹೊಳಪು ಮತ್ತು ದೀರ್ಘಕಾಲ ಬಾಳಿಕೆ ಗುಣಮಟ್ಟದ ಉಣ್ಣೆಯ ನೂಲುಗಳನ್ನು ನ್ಯೂಜಿಲೆಂಡ್‌ನಿಂದ ತರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಬಿಕಾನೇರ್ ನಲ್ಲಿರುವ ನೂಲುವ ಗಿರಣಿಯಲ್ಲಿ ಅವರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಪ್ರತಿಯೊಂದು ಎಳೆಯನ್ನು ತಯಾರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ರಾಜ್ಯಸಭೆ ಮತ್ತು ಲೋಕಸಭೆಯ ಕಾರ್ಪೆಟ್‌ಗಳ ಮೇಲೆ ವಿಭಿನ್ನ ವಿನ್ಯಾಸಗಳನ್ನು ನೀಡಲಾಗಿದೆ. ಲೋಕಸಭೆಯಲ್ಲಿ ಹಾಸಿದ ಕಾರ್ಪೆಟ್ ಮೇಲೆ ನವಿಲು ಮಾದರಿಯಲ್ಲಿ 38 ಬಣ್ಣಗಳನ್ನು ಬಳಸಲಾಗಿದೆ. ರಾಜ್ಯಸಭೆಯ ರತ್ನಗಂಬಳಿಗಳ ಮೇಲೆ ಕಮಲದ…
ಮಂಗಳೂರು: ಫಲಿತಾಂಶ ಬಂದ 24 ಗಂಟೆ ಒಳಗಡೆ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡೋದಾಗಿ ಹೇಳಿ ಇದೀಗ ತಡವಾಗಿ ಆದರೂ ಘೋಷಣೆ ಮಾಡಿರೋದನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಗ್ಯಾರಂಟಿ ಈಡೇರಿಸಲು ಕಾಂಗ್ರೆಸ್ ಸರ್ಕಾರ ಹಣದ ಕ್ರೋಢೀಕರಣ ಹೇಗೆ ಮಾಡುತ್ತೆ? ಈ ಗ್ಯಾರಂಟಿ ಎಷ್ಟು ವರ್ಷ ಇರುತ್ತೆ? ಎನ್ನುವುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ. ನಿರುದ್ಯೋಗ ಭತ್ಯೆಗೆ ಮೊದಲು ಮಾನದಂಡ ಹೇಳದೆ ಈಗ ಮಾನದಂಡ ಹಾಕಿದ್ದಾರೆ. ಹಿಂದಿನ ಪಿಂಚಣಿ ಯೋಜನೆಗಳ ಗತಿ ಏನು? ರಾಜ್ಯದ ಬೊಕ್ಕಸದ ಹಣದ ಗತಿ ಏನು? ಯಾರಿಗೂ ಹೊರೆ ಆಗದಂತೆ ಹೇಗೆ ನಿಯಂತ್ರಿಸುತ್ತಾರೆ? ನಮ್ಮದು ಶ್ರೀಲಂಕಾ, ಪಾಕಿಸ್ತಾನದಂತೆ ಆರ್ಥಿಕ ಸ್ಥಿತಿ ಕುಸಿಯಬಾರದು. ಅವರು ಆದಷ್ಟು ಬೇಗ ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದಿದ್ದಾರೆ. ಇದೊಂದು ಚುನಾವಣಾ ಗಿಮಿಕ್ ಆಗಬಾರದು. ಜನರಿಗೆ ಹೊರೆಯಾಗದಂತೆ ಜಾರಿಯಾಗಲಿ. ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಜನರು ಏನು ಮಾಡಬೇಕು…