Author: admin

ನಟಿ ಅನ್ನಾ ಬೆನ್  ಯುಎಇ ಗೋಲ್ಡನ್ ವೀಸಾ ಸಿಕ್ಕಿದೆ. ಅನ್ನಾ ಬೆನ್ ಅವರು ತಮ್ಮ ಯುಎಇ ಗೋಲ್ಡನ್ ವೀಸಾವನ್ನು ಸಿಇಒ ಇಕ್ಬಾಲ್ ಮಾರ್ಕೋನಿ ಅವರಿಂದ ದುಬೈನಲ್ಲಿ ಪ್ರಮುಖ ಸರ್ಕಾರಿ ಸೇವಾ ಪೂರೈಕೆದಾರರಾದ ECCH ಡಿಜಿಟಲ್‌ನ ಪ್ರಧಾನ ಕಛೇರಿಯಲ್ಲಿ ಪಡೆದರು. ಕುಂಬಳಂಗಿ ನೈಟ್ಸ್  ಚಿತ್ರದ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸಿದ ನಟಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನ್ನಾ ಬೆನ್  ನಟಿ ಅನ್ನಾ ಬೆನ್ ಮಲಯಾಳಂ ಚಿತ್ರರಂಗದ ಖ್ಯಾತ ಚಿತ್ರಕಥೆಗಾರ ಬೆನ್ನಿ ಪಿ ನಾಯರಂಬಲಂ ಅವರ ಮಗಳು, ಅನ್ನಾ ಬೆನ್ ಅವರ ಇತ್ತೀಚಿನ ಚಿತ್ರ ಅರ್ಜುನ್ ಅಶೋಕನ್ ಅಭಿನಯದ ತ್ರಿಶಂಕು. ಈ ಹಿಂದೆ, ಮಲಯಾಳಂ ಸೇರಿದಂತೆ ಅನೇಕ ಚಲನಚಿತ್ರ ತಾರೆಯರಿಗೆ ದುಬೈನಲ್ಲಿ ECCH ಡಿಜಿಟಲ್ ಮೂಲಕ ಯುಎಇ ಗೋಲ್ಡನ್ ವೀಸಾ ನೀಡಲಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನಗರದ ಆಸ್ಪತ್ರೆಗಳಲ್ಲಿ ಕೋವಿಡ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಹಲವು ತಿಂಗಳ ಬಳಿಕ ಇಲ್ಲಿನ ಎಲ್ಲಾ ಆಸ್ಪತ್ರೆಗಳು ಕೋವಿಡ್ ಮುಕ್ತವಾಗಿವೆ. ಆಸ್ಪತ್ರೆಗಳಲ್ಲಿನ ಅಷ್ಟೂ ಹಾಸಿಗೆಗಳನ್ನು ಈಗ ಕೋವಿಡೇತರ ಚಿಕಿತ್ಸೆಗಳಿಗೆ ಬಳಸಿಕೊಳ್ಳಲಾಗಿದೆ. ಕೊರೊನಾ ಸೋಂಕಿತರ ಆಸ್ಪತ್ರೆ ದಾಖಲಾತಿ ಕಳೆದ ವಾರ ಒಂದಂಕಿಗೆ ಇಳಿಕೆಯಾಗಿತ್ತು. ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲರೂ ಗುಣಮುಖರಾಗಿದ್ದಾರೆ. ಹೊಸದಾಗಿ ಸೋಂಕಿತರಾದವರೂ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಈ ವರ್ಷ ಇದೇ ಮೊದಲ ಬಾರಿ ನಗರದ ಆಸ್ಪತ್ರೆಗಳಲ್ಲಕೋವಿಡ್ ದಾಖಲಾತಿ ಶೂನ್ಯಕ್ಕೆ ಇಳಿದಿದೆ. ಕೆಲ ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ‘ಕೋವಿಡ್‌ಗೆ ಸಂಬಂಧಿಸಿದ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಗೊಂಡಿದೆ’ ಎಂದು ಘೋಷಿಸಿತ್ತು. ಬಳಿಕ ಆಸ್ಪತ್ರೆ ಚಿಕಿತ್ಸೆ ಅಗತ್ಯ ಇರುವವರನ್ನು ಮಾತ್ರ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿತ್ತು. ಇದರಿಂದಾಗಿ ಆಸ್ಪತ್ರೆ ದಾಖಲಾತಿ ಇಳಿಮುಖ ಮಾಡಿತ್ತು. ಹೊಸ ಪ್ರಕರಣಗಳೂ ಇಳಿಕೆಯಾಗಿ, ಸಕ್ರಿಯ ಪ್ರಕರಣಗಳ ಸಂಖ್ಯೆ 50ರ ಆಸುಪಾಸಿನಲ್ಲಿದೆ. 2022ರ ಡಿಸೆಂಬರ್‌ನಲ್ಲಿ ಇಲ್ಲಿನ ಆಸ್ಪತ್ರೆಗಳು ಕೋವಿಡ್ ಮುಕ್ತವಾಗಿದ್ದವು. ಬಳಿಕ ಮತ್ತೆ ದಾಖಲಾತಿ ಎರಡಂಕಿ ತಲುಪಿತ್ತು.…

Read More

ಭಾರತ ಸರ್ಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಶಿವಮೊಗ್ಗ, ಸಹ್ಯಾದ್ರಿ ವಿಜ್ಞಾನ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಶಿವಮೊಗ್ಗ ಹಾಗೂ ಜಾಗೃತಿ ಯುವಕ ಸಂಘ, ಶಿವಮೊಗ್ಗ ಇವರು ಸಂಯುಕ್ತಾಶ್ರಯದಲ್ಲಿ ದಿನಾಂಕ 02.06.2023 ರಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪಾಥ್‌ವೇಸ್ ಸಭಾಂಗಣದಲ್ಲಿ “ಮಳೆನೀರು ಸಂರಕ್ಷಣೆ ಮತ್ತು ಜಿಲ್ಲಾ ಮಟ್ಟದ ರಸಪ್ರಶ್ನೆ ಮತ್ತು ಚಿತ್ರಕಲಾ ಸ್ಪರ್ಧಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಚನ್ನಬಸಪ್ಪರವರು ನೆರವೇರಿಸಿ ಮಾತನಾಡಿ, ಈಗಿನ ಯುವಕ, ಯುವತಿಯರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿಸಬೇಕು ಎಂದ ಅವರು ನೀರಿನ ಮಹತ್ವದ ಬಗ್ಗೆ, ಮಳೆ ನೀರಿನ ಕೊಯ್ತುನಿಂದ ಆಗುವ ಪ್ರಯೋಜನೆ, ಪರಿಸರ ಸಂರಕ್ಷಣೆ ಕುರಿತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ರಾಜೇಶ್ವರಿ.ಎನ್.ಮಾತನಾತಿ ಮಳೆ ನೀರನ್ನು ಹೇಗೆ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಶಿವಮೊಗ್ಗ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಮಲ್ಲಪ್ಪ, ಕೆ. ತೊದಲಬಾಗಿಯವರು ಜಾತಿ,…

Read More

ಮಂಗಳೂರು ನಗರದ ಸೋಮೇಶ್ವರ ಬೀಚ್ ನಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಒಬ್ಬ ಅಪ್ರಾಪ್ತ ಸೇರಿ ಐವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. ಉಳ್ಳಾಲ ಠಾಣೆಗೆ ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ನೈತಿಕ ಪೊಲೀಸ್ ಗಿರಿ ನಡೆಸಿದವರ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನ ರಚಿಸಿದ್ದೆವು. ಈಗಾಗಲೇ ಉಳ್ಳಾಲ ಬಸ್ತಿಪಡ್ಪು ನಿವಾಸಿ ಯತೀಶ್, ತಲಪಾಡಿಯ ಸಚಿನ್, ತಲಪಾಡಿ ನಿವಾಸಿಗಳಾದ ಸುಹೇನ್ ,ಅಖಿಲ್ ಮತ್ತು ಓರ್ವ ಅಪ್ರಾಪ್ತನನ್ನ ಬಂಧಿಸಲಾಗಿದೆ. ಇದೇ ವೇಳೆ ಠಾಣೆಗೆ ಹಿಂದೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಸತೀಶ್ ಕುಂಪಲ ಅವರು ಅಮಾಯಕರನ್ನ ಬಂಧಿಸದಂತೆ ಕಮಿಷನರ್ ಅವರಲ್ಲಿ ಮನವಿ ಮಾಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರಕ್ಕೆ ಗುರುವಾರ ಸಂಜೆ ವೇಳೆ ಕೇರಳ ಮೂಲದ ಆರು ಮಂದಿ ವಿಹಾರಕ್ಕೆಂದು ಬಂದಿದ್ದರು.ಇವರಲ್ಲಿ ಮೂವರು ಯುವತಿಯರ ಜತೆ ಇದ್ದ ಯುವಕರು ಮುಸ್ಲಿಂ…

Read More

ಬೆಂಗಳೂರು ಮೆಟ್ರೋದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ: ಎಸ್‌ಎಸ್ಎಲ್‌ಸಿ ಆಗಿದ್ದರೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳು ಇನ್ನೂ ಹೆಚ್ಚಿನ ದಿನಗಳವರೆಗೆ ಅರ್ಜಿ ಹಾಕಬಹುದು. ಒಟ್ಟು 96 ಸ್ಟೇಷನ್ ಕಂಟ್ರೋಲರ್/ ಟೈನ್ ಆಪರೇಟರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸಂಸ್ಥೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಹುದ್ದೆ ಸ್ಟೇಷನ್ ಕಂಟ್ರೋಲರ್/ ಟೈನ್ ಆಪರೇಟರ್ ಒಟ್ಟು ಹುದ್ದೆ 96 ವಿದ್ಯಾರ್ಹತೆ 10ನೇ ತರಗತಿ, ಡಿಪ್ಲೊಮಾ ವೇತನಮಾಸಿಕ * 35,000-82,660 ಉದ್ಯೋಗದ ಸ್ಥಳ ಬೆಂಗಳೂರು ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 7, 2023 ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಸೈಕೋಮೆಟ್ರಿಕ್ ಟೆಸ್ಟ್ ಸಿಲ್ಕ್ ಟೆಸ್ಟ್ ಸಂದರ್ಶನ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ಜನರಲ್ ಮ್ಯಾನೇಜರ್ (HR) ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್…

Read More

ಒಡಿಶಾದಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 233 ಕ್ಕೆ ತಲುಪಿದೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಐದು ರಕ್ಷಣಾ ತಂಡಗಳನ್ನು ಬಾಲಸೂರ್‌ ಗೆ ಕಳುಹಿಸಿದ್ದಾರೆ. ದುರಂತದ ನಂತರ, ಒಡಿಶಾ ಸರ್ಕಾರ ಅಧಿಕೃತ ಶೋಕಾಚರಣೆಯ ದಿನವನ್ನು ಘೋಷಿಸಿತು. ರೈಲ್ವೆ ಸಚಿವ ಅಶ್ವನಿ ವೈಷ್ಣಂ ಮತ್ತು ತಮಿಳುನಾಡು ಸಾರಿಗೆ ಸಚಿವ ಎಸ್ ಎಸ್ ಶಿವಶಂಕರ್ ಇಂದು ಒಡಿಶಾಗೆ ಆಗಮಿಸಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಡಿಶಾ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ 2 ರೈಲು ಅಪಘಾತಗಳು ಹಲವಾರು ಜನರ ಸಾವಿಗೆ ಕಾರಣವಾಗಿವೆ. ಒಟ್ಟು ಮೂರು ರೈಲುಗಳು ಅಪಘಾತಕ್ಕೀಡಾಗಿವೆ. ಶಾಲಿಮಾರ್‌ನಿಂದ ಚೆನ್ನೈಗೆ ಹೋಗುತ್ತಿದ್ದ ಕೋಲ್ಕತ್ತಾ-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಮೊದಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಕೋರಮಂಡಲ್ ಎಕ್ಸ್‌ಪ್ರೆಸ್‌ನ 15 ಬೋಗಿಗಳು ಹಳಿತಪ್ಪಿವೆ. ಹಳಿ ತಪ್ಪಿದ ಬೋಗಿಗಳಿಗೆ ಸಮೀಪದ ಹಳಿಯಲ್ಲಿದ್ದ ಹೌರಾ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದಾಗ…

Read More

ತುಮಕೂರು: ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಚಾಲಕ ಮೃತಪಟ್ಟ ದಾರುಣ ಘಟನೆ ತುಮಕೂರಿನ ಹೊರವಲಯದ ಗೂಳೂರಿನಲ್ಲಿ  ಶುಕ್ರವಾರ ಬೆಳಗ್ಗೆ ನಡೆದಿದೆ. ಹೆಬ್ಬೂರು ಹೋಬಳಿಯ ಕಾಳಿಂಗಯ್ಯನ ಪಾಳ್ಯದ ಯೋಗೀಶ್(34) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದ್ದು, ಇವರು ತುಮಕೂರಿನ ವಿಪ್ರೋ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಾರ್ನಿಂಗ್ ಶಿಫ್ಟ್ ನಲ್ಲಿ ಕೆಲಸ ಮಾಡಲು ಯೋಗೀಶ್ ಅವರು ಎಂದಿನಂತೆಯೇ ಹೊರಟಿದ್ದರು. ಈ ವೇಳೆ ಗೂಳೂರಿನಲ್ಲಿ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ  ತುಮಕೂರು ಗ್ರಾಮಾಂತರ ಠಾಣಾ ಪಿಎಸ್ ಐ ಪ್ರಸನ್ನ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರು:  ಕಾಂಗ್ರೆಸ್‌ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ 5 ಗ್ಯಾರಂಟಿ ಯೋಜನೆಗಳನ್ನು ಸಹ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಜಾರಿಗೊಳಿಸಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾರಿತ್ರಿಕ ಘೋಷಣೆ ಮಾಡಿದರು. ಅವರು ಇಂದು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತ್ತು ಅದಕ್ಕೂ ಮುಂಚಿತವಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ನಾನು ಮತ್ತು ಪಕ್ಷದ ಅಧ್ಯಕ್ಷರು ರುಜು ಮಾಡಿದ ಗ್ಯಾರಂಟಿ ಕಾರ್ಡುಗಳನ್ನು ಕನ್ನಡ ನಾಡಿನ ಪ್ರತಿ ಮನೆಗೂ ತಲುಪಿಸಿದ್ದೆವು. ಅದರಂತೆಯೇ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಿದ್ದಲ್ಲದೆ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ಯೋಜನೆಗಳ ಅನುಷ್ಠಾನ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಯಾವುದೇ ಜಾತಿ-ಧರ್ಮ-ಲಿಂಗ-ಭಾಷೆಯ ಬೇಲಿ ಇಲ್ಲದೆ ಸಮಸ್ತ ಕನ್ನಡಿಗರಿಗೆ ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ಸರ್ಕಾರ ಘೋಷಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ…

Read More

ತಮಿಳುನಾಡು ಸಾರಿಗೆ ಇಲಾಖೆಯು ಸಮವಸ್ತ್ರ ಧರಿಸಿರುವ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಒದಗಿಸಲಿದೆ. ಸಾರಿಗೆ ಇಲಾಖೆ ನೀಡುವ ಪಾಸ್‌ನೊಂದಿಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣವೂ ಸಿಗಲಿದೆ. ದಿನಕ್ಕೆ ಎರಡು ಉಚಿತ ಸವಾರಿಗಳನ್ನು ಅನುಮತಿಸಿ. 2016ರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.ಸಮವಸ್ತ್ರ ಅಥವಾ ಪಾಸ್ ಹೊಂದಿರುವ ಮಕ್ಕಳಿಗೆ ಉಚಿತ ಪ್ರಯಾಣ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂಡಕ್ಟರ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ಕೋವಿಡ್‌ನಿಂದಾಗಿ ಕಳೆದ ವರ್ಷಗಳಲ್ಲಿ ಉಚಿತ ಪಾಸ್‌ಗಳನ್ನು ನೀಡುವುದನ್ನು ನಿಲ್ಲಿಸಲಾಗಿತ್ತು. ಸ್ಮಾರ್ಟ್ ಕಾರ್ಡ್ ವಿತರಣೆ ಪೂರ್ಣಗೊಳ್ಳದ ಕಾರಣ ಸಮವಸ್ತ್ರದ ಗುಣಮಟ್ಟವನ್ನು ಸೇರಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧ್ಯಪ್ರದೇಶ: ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿದ್ದರು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ದಾಮೋಹ್‌ನಲ್ಲಿರುವ ಖಾಸಗಿ ಶಾಲೆಯೊಂದು ಇದೀಗ ವಿವಾದಕ್ಕೀಡಾಗಿದೆ. ಒಂದಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಅವರ ಪೋಸ್ಟರ್ನ್ನು ಶಾಲೆಯ ಗೋಡೆಯ ಮೇಲೆ ಅಂಟಿಸಬೇಕಿತ್ತು. ಆ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೂ ಬಲವಂತವಾಗಿ ಹಿಜಾಬ್ ಹಾಕಿಸಲಾಗಿತ್ತು ಎನ್ನಲಾಗಿದೆ. ಮಧ್ಯಪ್ರದೇಶದ ಶಿಕ್ಷಣ ಸಚಿವ ನರೋತ್ತಮ್ ಸಿಂಗ್ ಮಾತನಾಡಿ, ಈ ಕುರಿತು ಬಾಲಕಿಯ ಕುಟುಂಬದವರು ಯಾವುದೇ ದೂರು ನೀಡಿಲ್ಲ, ಆದರೆ ತನಿಖೆ ನಡೆಸುವಂತೆ ಎಸ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಗಂಗಾ-ಜಮುನಾ ಕಾನ್ವೆಂಟ್ ಶಾಲೆಯನ್ನು ಮುಸ್ಲಿಂ ಸಂಘಟನೆ ನಡೆಸುತ್ತಿದೆ. ವಾಸ್ತವವಾಗಿ ಈ ಸ್ಕಾರ್ಫ್ ಶಾಲೆಯ ಸಮವಸ್ತ್ರದ ಒಂದು ಭಾಗವಾಗಿದೆ. ಶಾಲೆಯ ಎಲ್ಲಾ ಮಕ್ಕಳು ಧರಿಸಬಹುದು, ಆದರೆ ಯಾರ ಮೇಲೂ ಒತ್ತಡವಿಲ್ಲ. ಶಾಲಾ ಸಮವಸ್ತ್ರದಲ್ಲಿ ಸ್ಕಾರ್ಫ್ ಇದೆ ಎಂದು ಶಾಲೆಯ ನಿರ್ದೇಶಕ ಮುಸ್ತಾಕ್ ಖಾನ್ ಅವರು ಹೇಳಿದ್ದಾರೆ. ಆದರೆ ಅದನ್ನು ಧರಿಸಲು ಯಾರೂ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂ ಸಂಘಟನೆಯ ದೂರಿನ…

Read More