Author: admin

ಟೆಹ್ರಾನ್:  ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೂವರನ್ನು ಇರಾನ್  ಗಲ್ಲಿಗೇರಿಸಿದ್ದು, ಇದ್ರಿಸ್ ಅಲಿ, ಆಜಾದ್ ಶೋಜೈ ಮತ್ತು ರಸೂಲ್ ಅಹ್ಮದ್ ರಸೂಲ್  ಗಲ್ಲಿಗೇರಿಸಲಾದವರು ಎಂದು  ಹೇಳಲಾಗಿದೆ. ಈ ಮೂವರು ಶಸ್ತ್ರಾಸ್ತ್ರಗಳನ್ನು ಇರಾನ್‌ ಗೆ ತರಲು ಯತ್ನಿಸಿದ್ದರು. ಈ ಮೂಲಕ ಇಸ್ರೇಲ್‌ ಗೆ ಸಹಕಾರ ಒದಗಿಸಿದ್ದರು ಎಂದು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಮೂವರಿಗೆ ಟರ್ಕಿ ಗಡಿಯ ಸಮೀಪದ ಉರ್ಮಿಯಾದಲ್ಲಿ ಬುಧವಾರ ಮರಣದಂಡನೆ ವಿಧಿಸಲಾಗಿದೆ. ಶಿಕ್ಷೆಗೆ ಗುರಿಯಾದ ಮೂವರು ನೀಲಿ ಜೈಲು ಸಮವಸ್ತ್ರದಲ್ಲಿರುವ ಫೋಟೋಗಳನ್ನು ಇರಾನ್‌ ನ ಕೋರ್ಟ್ ಹಂಚಿಕೊಂಡಿದೆ. ಇನ್ನೂ ಸಂಘರ್ಷದ ಸಮಯದಲ್ಲಿ, ಇಸ್ರೇಲ್ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಕನಿಷ್ಠ 700 ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಇಸ್ರೇಲ್‌ ನ ಗುಪ್ತಚರ ಸಂಸ್ಥೆ ಮೊಸಾದ್ ಜೊತೆ ಸಂಪರ್ಕದಲ್ಲಿದ್ದ ಗೂಢಚಾರಿಯನ್ನು ಸಹ ಗಲ್ಲಿಗೇರಿಸಲಾಗಿದೆ. ಸುಪ್ರೀಂ ಕೋರ್ಟ್ ಸಂಪೂರ್ಣ ವಿಚಾರಣೆ ನಡೆಸಿ ಅಪರಾಧಿಗೆ ಈ ಶಿಕ್ಷೆ ವಿಧಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ನವದೆಹಲಿ: ಹಲವಾರು ವರ್ಷಗಳಿಂದ ಒಂದೇ ದರವನ್ನು ನಿರ್ವಹಿಸುತ್ತಿದ್ದ ಭಾರತೀಯ ರೈಲ್ವೇ ಈಗ ರೈಲು ಟಿಕೆಟ್ ದರವನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ. ಜುಲೈ 1ರಿಂದ ಎಸಿ, ಎಸಿ ರಹಿತ, ಎಕ್ಸ್ಪ್ರೆಸ್ ಹಾಗೂ ದ್ವಿತೀಯ ದರ್ಜೆ ರೈಲುಗಳ ಟಿಕೆಟ್ ದರದಲ್ಲಿ ಏರಿಕೆ ಮಾಡಲು ಇಲಾಖೆ ಮುಂದಾಗಿದೆ. ದರಗಳು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲ ಎಂದು ರೈಲ್ವೇ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಉಪನಗರ ರೈಲು ಹಾಗೂ ಮಾಸಿಕ ಪಾಸ್ಗಳ ದರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಕೂಡ ಅಧಿಕಾರಿ ಮಾಹಿತಿ ನೀಡಿದ್ದಾರೆ. ರೈಲ್ವೇ ವೆಚ್ಚ ನಿರ್ವಹಣೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಂಡಿದ್ದು, ರೈಲ್ವೇ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಎಸಿ ರಹಿತ, ಎಕ್ಸ್ಪ್ರೆಸ್ ರೈಲು ಪ್ರತೀ ಕಿ.ಮೀ.ಗೆ 1 ಪೈಸೆ, ಎಸಿ ರೈಲುಗಳ ಟಿಕೆಟ್ಗೆ ಪ್ರತೀ ಕಿ.ಮೀ.ಗೆ 2 ಪೈಸೆ, 2ನೇ ದರ್ಜೆ ರೈಲು ಟಿಕೆಟ್ನಲ್ಲಿ 500 ಕಿ.ಮೀ.ವರೆಗೆ ಹೆಚ್ಚಳ ಇಲ್ಲ, 500…

Read More

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದೇ ಪದೇ ಹೊಗಳಿದ್ದಕ್ಕಾಗಿ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರನ್ನು ಬುಧವಾರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ  ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ,  ಕೆಲವರಿಗೆ ಮೋದಿಯೇ ಮೊದಲು ಎಂದು ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿಯನ್ನು ನಡೆಸಿದ್ದಾರೆ. ಶಶಿ ತರೂರ್‌ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಭಾಗವಾಗಿರುವುದಕ್ಕೆ ಒಂದೇ ಕಾರಣ, ಅವರ ಇಂಗ್ಲಿಷ್ ತುಂಬಾ ಒಳ್ಳೆಯದಿದೆ. ನನಗೆ ಇಂಗ್ಲಿಷ್ ಓದಲು ಬರುವುದಿಲ್ಲ, ಅವರ ಭಾಷೆ ತುಂಬಾ ಚೆನ್ನಾಗಿದೆ. ಅದಕ್ಕಾಗಿಯೇ ನಾವು ಅವರನ್ನು ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಿದ್ದೇವೆ. ಆದರೆ ನಾನು ಹೇಳಲು ಬಯಸುವುದೇನೆಂದರೆ, ನಾವೆಲ್ಲರೂ, ಇಡೀ ವಿರೋಧ ಪಕ್ಷ ಒಗ್ಗಟ್ಟಿನಿಂದ ನಮ್ಮ ಸೈನ್ಯದೊಂದಿಗೆ ಇದ್ದೇವೆ ಎಂದರು. ಕೇಂದ್ರವು ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ʼಸಂವಿಧಾನ ಹತ್ಯಾ ದಿವಸ್ʼ ನಾಟಕವಾಡುತ್ತಿದೆ. ಸಹಿಷ್ಣುತೆ ಇಲ್ಲದ ಮತ್ತು ಭ್ರಾತೃತ್ವ ಮತ್ತು ಸ್ವಾತಂತ್ರ್ಯವನ್ನು ಸಮೃದ್ಧಗೊಳಿಸಲು ಬಿಡದ ಸರಕಾರಕ್ಕೆ ಇತರರಿಗೆ ಉಪನ್ಯಾಸ ನೀಡುವ ಹಕ್ಕಿಲ್ಲ ಎಂದು…

Read More

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಿಪಟೂರು ವೈಭವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ತಾಯಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಶಿಬಿರಕ್ಕೆ ಚಾಲನೆ ನೀಡಿದ ವೈಭವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಧುಸೂಧನ್,  ಗರ್ಭಿಣಿಯರು ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕು, ಹಸಿರು ತರಕಾರಿ ಮೊಟ್ಟೆ ಮಾಂಸ ಸೇರಿದಂತೆ ಪೌಷ್ಟಿಕ ಆಹಾರ ಹೆಚ್ಚು ಸೇವನೆ ಮಾಡಿದರೆ, ತಾಯಿಯ ಹೊಟ್ಟೆಯಲ್ಲಿ ಆರೋಗ್ಯ ಪೂರ್ಣ ಬ್ರೂಣ ಬೆಳವಣಿಗೆ ಹೊಂದುತ್ತದೆ. ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ. ಆರೋಗ್ಯಪೂರ್ಣ ಮಗುವಿನ ಜನನವಾಗುತ್ತದೆ. ನವಜಾತ ಶಿಶು ಆರೋಗ್ಯವಾಗಿರಲು ತಾಯಿ ಮಾನಸಿಕ ಸ್ಥಿತಿ ಹೊಂದಿರಬೇಕು ಹಾಗೂ ಕೆಲವರು ಮೂಢನಂಬಿಕೆಯಿಂದ ಬಾಣಂತಿಯರು ಪಥ್ಯಾಹಾರಗಳನ್ನ ಸೇವನೆ ಮಾಡುವುದರಿಂದ ಮಗುವಿಗೆ ಪೌಷ್ಠಿಕಾಂಶದ ಕೊರತೆ ಉಂಟಾಗಿ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದರಿಂದ ಹಣ್ಣು ತರಕಾರಿ, ಮೊಟ್ಟೆ ಸೇರಿಂತೆ ಬಾಣಂತಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಸೂತಿ ತಜ್ಞರಾದ ಡಾ.ಕಾರ್ತಿಕ್ ಮಾತನಾಡಿ, ನವಜಾತ ಶಿಶುಗಳಿಗೆ…

Read More

ಶಿವಮೊಗ್ಗ:  ಕುಡಿದು ಆ್ಯಂಬುಲೆನ್ಸ್ ಚಾಲನೆ ಮಾಡಿದ ಚಾಲಕನಿಗೆ ಶಿವಮೊಗ್ಗ ಸಂಚಾರಿ ಪೊಲೀಸರು 13 ಸಾವಿರ ರೂಪಾಯಿ ದಂಎ ವಿಧಿಸಿರುವ ಘಟನೆ ನಡೆದಿದೆ. ಆ್ಯಂಬುಲೆನ್ಸ್ ಚಾಲಕನೊಬ್ಬ ಶಿವಮೊಗ್ಗದ ಐಬಿ ಸರ್ಕಲ್‍ ನಲ್ಲಿ ಅಜಾಗರೋಕತೆಯಿಂದ ಆ್ಯಂಬುಲೆನ್ಸ್ ಚಲಾಯಿಸಿದ್ದ.. ಹೀಗಾಗಿ ಪೊಲೀಸರು ಪರಿಶೀಲನೆ ನಡೆಸಿದಾಗ ಡ್ರೈವರ್ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿತ್ತು. ವಾಹನ ದಾಖಲಾತಿ ಪರಿಶೀಲಿಸಿದಾಗ ಇನ್ಶ್ಯೂರೆನ್ಸ್ ಕೂಡ ಇರಲಿಲ್ಲ. ಈ ಎಲ್ಲ ಲೋಪಗಳನ್ನು ಗಮನಿಸಿ ಶಿವಮೊಗ್ಗ ನ್ಯಾಯಾಲಯ ಚಾಲಕನಿಗೆ 13 ಸಾವಿರ ರೂ. ದಂಡ ವಿಧಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು: ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ  ಹೇಮಾವತಿ ಲಿಂಕ್ ಕೆನಾಲ್ ವಿಚಾರ ಪ್ರಸ್ತಾಪವಾಯಿತು.  ಸಭೆ ಆರಂಭದಲ್ಲೇ ವಿವಾದದ ಹೇಮಾವತಿ ಲಿಂಕ್ ಕೆನಾಲ್ ವಿಚಾರ ಚರ್ಚೆಯಾಯಿತು. ಹೇಮಾವತಿ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ ಬಗ್ಗೆ ಚರ್ಚೆ ನಡೆಯಿತು. ಹೇಮಾವತಿ ವಿಚಾರವನ್ನ ಬಗೆಹರಿಸುವಂತೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಬಿಜೆಪಿ ಶಾಸಕ ಸುರೇಶ್ ಗೌಡ ಒತ್ತಾಯ ಮಾಡಿದರು. ಈ ವೇಳೆ ಉತ್ತರಿಸಿದ ಸಚಿವ ಪರಮೇಶ್ವರ್,  ಬೆಂಗಳೂರಿನಲ್ಲಿ ಜೂನ್ 30ರಂದು ಅಂತಿಮ ನಿರ್ಧಾರದ ಸಭೆಯನ್ನು ನಡೆಸಲಾಗುವುದು. ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ನೀರಾವರಿ ಸಚಿವರು ಸಭೆಯಲ್ಲಿ  ಹೇಮಾವತಿ ಲಿಂಕ್ ಕೆನಾಲ್ ಬಗ್ಗೆ ಮಾತಾಡ್ತಾರೆ.  ರೈತರು, ಸಾರ್ವಜನಿಕರು, ಜನಪ್ರತಿನಿಧಿಗಳು ಭಾಗಿಯಾಗುವಂತೆ  ಪರಮೇಶ್ವರ್ ಸಲಹೆ ನೀಡಿದರು. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗೆ ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದರು.  ಶಾಸಕರು, ಹೋರಾಟಗಾರರು ಸೇರಿ ಎಲ್ಲರೂ 30ರಂದು ಸಭೆಯಲ್ಲಿ ಭಾಗವಹಿಸಿ ಅಂತಾ ಮನವಿ ಮಾಡಿದರು. ಈ ಯೋಜನೆ ಬಗ್ಗೆ ಈಗಾಗಲೇ ಸರ್ಕಾರದಿಂದ ಅನುಮೋದನೆ…

Read More

ತುಮಕೂರು:  ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಎಗ್ಗಿಲ್ಲದೆ ಲಂಚಾವತಾರ ನಡೆಯುತ್ತಿದೆ, ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಲಂಚದ ಕರ್ಮಕಾಂಡ ಕೆಡಿಪಿ ಸಭೆಯಲ್ಲಿ ಬಟಾಬಯಲಾಗಿದೆ. ಜಿಲ್ಲಾಸ್ಪತ್ರೆಯ ಕರ್ಮಕಾಂಡಕ್ಕೆ ಕೆಡಿಪಿ ಸಭೆಯಲ್ಲಿ ಗೃಹ ಸಚಿವ  ಪರಮೇಶ್ವರ್ ಕೆರಳಿ ಕೆಂಡವಾಗಿದ್ದು, ಹೆರಿಗೆ ಮಾಡಿಸೋಕೆ ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ತಗೊಳೋದು ನಂಗೆ ಗೊತ್ತಿಲ್ಲವೇನ್ರೀ.. ಎಂದು ಅಧಿಕಾರಿಗಳಿಗೆ ಜೋರು ಧ್ವನಿಯಲ್ಲಿ ಸಚಿವ ಡಾ.ಜಿ. ಪರಮೇಶ್ವರ್ ಗದರಿದರು. ಬಳಿಕ  ಡಿಎಚ್ ಒ ಚಂದ್ರಶೇಖರ್ ಹಾಗೂ ಡಿಎಸ್ ಅಸ್ಗರ್ ಬೇಗ್ ಅವರಿಗೆ ತೀವ್ರವಾಗಿ ತರಾಟೆಗೆತ್ತಿಕೊಂಡು ಚಳಿ ಬಿಡಿಸಿದರು. ಪರಮೇಶ್ವರ್ ಬೆನ್ನಲ್ಲೇ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಕೂಡ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಹಣ ಪಡೆಯುತ್ತಿರುವುದು ಒಂದಡೆಯಾದರೆ ಉಳಿದ ಕರ್ಮಕಾಂಡ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹೆರಿಗೆಯಲ್ಲಿ ಶಸ್ತ್ರಚಿಕಿತ್ಸೆಯೇ ಹೆಚ್ಚಾಗಿ ನಡೆಯುತ್ತಿದೆ, ತುಮಕೂರು ನಂ-1 ಸ್ಥಾನದಲ್ಲಿದೆ. ಯಾಕೆ ನಾರ್ಮಲ್ ಹೆರಿಗೆ ಮಾಡುತ್ತಿಲ್ಲ, ಎಲ್ಲವನ್ನೂ ಸಿಜರಿಯನ್ನೇ ಮಾಡುತ್ತಿದ್ದೀರಾ? ಖಾಸಗಿ ಆಸ್ಪತ್ರೆಗಳಲ್ಲಿ ಸಿಜರಿಯನ್ ಹೆಚ್ಚಾಗಿದ್ರು ಕಡಿವಾಣ ಯಾಕೆ ಹಾಕ್ತಿಲ್ಲ?  ಖಾಸಗಿ ಆಸ್ಪತ್ರೆಗಳ ದರ್ಬಾರ್ ಗೆ ಕಡಿವಾಣ ಹಾಕುವಲ್ಲಿ ಯಾಕೆ ನಿರ್ಲಕ್ಷ್ಯ ಮಾಡ್ತಿದ್ದೀರಿ ಎಂದು  ಪರಮೇಶ್ವರ್…

Read More

ತುಮಕೂರು: ಫೋಟೋ ಶೂಟ್ ವಿಚಾರಕ್ಕೆ ಪ್ರಿಯಕರನ ಜೊತೆ ಜಗಳದ ಬಳಿಕ ಯುವತಿ ನೇಣಿಗೆ ಶರಣಾಗಿರುವ ಘಟನೆ ತುಮಕೂರು ಗ್ರಾಮಾಂತರದ ಹೊಸಹಳ್ಳಿಯಲ್ಲಿ ನಡೆದಿದೆ. ಚೈತನ್ಯ(22) ನೇಣಿಗೆ ಶರಣಾದ ಯುವತಿಯಾಗಿದ್ದಾಳೆ. ಈಕೆ  ತುಮಕೂರು ಗ್ರಾಮಾಂತರದ ಹೊಸಹಳ್ಳಿ ನಿವಾಸಿಯಾಗಿದ್ದು, ನಿನ್ನೆ ರಾತ್ರಿ 10 ಘಂಟೆ ಸುಮಾರಿಗೆ ತನ್ನ ಪ್ರಿಯಕರನ ಜೊತೆಗೆ ಜಗಳವಾಡಿದ ನಂತರ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ತಾಯಿ ಜೊತೆ ವಾಸವಿದ್ದ ಚೈತನ್ಯ, ತುಮಕೂರಿನ ಎಸ್ ಎಸ್ ಐಟಿ  ಕಾಲೇಜಿನಲ್ಲಿ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತಿದ್ದಳು.  ಜೊತೆಗೆ ಮಾಡಲಿಂಗ್ ನ ಮೇಕಪ್ ಆರ್ಟಿಸ್ಟ್ ಸಹ ಆಗಿದ್ದಳು. ಈ ನಡುವೆ ಪಕ್ಕದ ಊರಿನ ವಿಜಯ್ ಕುಮಾರ್ ಎಂಬಾತನೊಂದಿಗೆ ಚೈತನ್ಯ ಪ್ರೀತಿಯಲ್ಲಿ ಬಿದ್ದಿದ್ದಳು. ವಿಜಯ್ ಕುಮಾರ್ ವೃತ್ತಿಯಲ್ಲಿ ಚಾಲಕನಾಗಿ ದುಡಿಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇವರ ನಡುವೆ ಪ್ರೀತಿಯಿತ್ತು. ಪ್ರೀತಿಯ ವಿಚಾರ ತಿಳಿದು ಯುವತಿ ಮನೆಯವರು ವಾರ್ನ್ ಕೂಡ ಮಾಡಿದ್ದರು ಎನ್ನಲಾಗಿದೆ. ಚೈತನ್ಯ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಸ್ಟ್ರೀಟ್ ಫೋಟೋಗ್ರಫಿ ಮಾಡಿಸಿದ್ದರು. ಬಳಿಕ…

Read More

ಬೀದರ್: ಮಾದಕ ದ್ರವ್ಯ ಸೇವನೆ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ಉಪವಿಭಾಗದ ವತಿಯಿಂದ ನಗರದ ಕರ್ನಾಟಕ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿ ತಾನು ಏನು ಮಾಡುತ್ತಿದ್ದಾನೆ ಎಂಬುವುದರ ಅರಿವು ಕೂಡ ಆತನಿಗೆ ಇರುವುದಿಲ್ಲ. ಇಂತಹ ನಶೆಯಲ್ಲಿ ಇರುವವರು ಕಳ್ಳತನ, ಕೊಲೆ, ದರೋಡೆ, ಲೈಂಗಿಕ ಕಿರುಕುಳದಂಥ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಟ್ಟ ನಶೆಗಳಿಂದ ದೂರ ಸರಿದು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶಿವನಗೌಡ ಪಾಟೀಲ್, ಎಸ್.ಬಿ.ಐ.ನ ಪ್ರಾದೇಶಿಕ ವ್ಯವಸ್ಥಾಪಕ ಜೈಕುಮಾರ್, ಹೆಚ್ಚುವರಿ ಡ್ರಗ್ಸ್ ಕಂಟ್ರೋಲರ್ ಧನಂಜಯ್, ಮನೋರೋಗ ತಜ್ಞ ರಾಘವೇಂದ್ರ ವಾಗ್ನರೆ, ರೈಲ್ವೆ ಪೋಲಿಸ್ ಠಾಣಾಧಿಕಾರಿ ಪಾಷಾ,…

Read More

ದಾವಣಗೆರೆ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ದಾವಣಗೆರೆ ತಾಲೂಕಿನ ಗ್ರಾಮವೊಂದರಲ್ಲಿ ಭಾನುವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವರದಿಗಳ ಪ್ರಕಾರ, ಮನೆ ಮುಂದೆ ಆಟವಾಡುತ್ತಿದ್ದ ಏಳು ವರ್ಷದ ಬಾಲಕಿಯನ್ನು ನೆರೆಹೊರೆಯ 15 ಮತ್ತು 17 ವರ್ಷದ ಅಪ್ರಾಪ್ತ ಬಾಲಕರು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಮಗಳು ಕಾಣಿಸದ ಹಿನ್ನೆಲೆ ತಾಯಿ ಹುಡುಕಿಕೊಂಡು ನೆರೆ ಮನೆಗೆ ಹೋದಾಗ ಕೃತ್ಯ ಬಯಲಿಗೆ ಬಂದಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ನೊಂದ ಬಾಲಕಿ 7 ವರ್ಷ ವಯಸ್ಸಿನವಳಾಗಿದ್ದು, ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಬಾಲಕರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More