Author: admin

ಕಾರವಾರ:  ಜಿಲ್ಲೆಯಲ್ಲಿ ಘಟಿಸುವ ಪ್ರತಿಯೊಂದು ಜನನ ಮತ್ತು ಮರಣ ಘಟನೆಗಳನ್ನು 21 ದಿನಗಳ ಒಳಗೆ ಕಡ್ಡಾಯವಾಗಿ ಶೇ.100 ರಷ್ಟು ನೋಂದಣಿ ಮಾಡಲು ಕ್ರಮವಹಿಸುವಂತೆ ಜಿಲ್ಲೆಯ ಎಲ್ಲಾ ಜನನ ಮರಣ ನೋಂದಣಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚನೆ ನೀಡಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ಜನನ ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಗ್ರಾಮ ಪಂಚಾಯತ್ ಗಳು ಮತ್ತು ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಭವಿವಿಸುವ ಪ್ರತಿಯಿಂದು ಜನನ ಮತ್ತು ಮರಣ ಘಟನೆಗಳನ್ನು 21 ದಿನಗಳ ಒಳಗೆ ಕಡ್ಡಾಯ ನೋಂದಣಿ ಮಾಡಬೇಕಿದ್ದು, ಈ ಬಗ್ಗೆ ಪ್ರತೀ ತಿಂಗಳು ತಹಶೀಲ್ದಾರ್ಗಳ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ, ಪರಿಶೀಲನೆ ನಡೆಸುವಂತೆ ತಿಳಿಸಿದ ಅವರು, ಜನನ ಮರಣ ನೋಂದಣಿ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಹಾಗೂ ಸ್ವಚ್ಛ ವಾಹಿನಿ ವಾಹನಗಳ ಮೂಲಕ ಪ್ರತಿದಿನ ಈ ಬಗ್ಗೆ ಪ್ರಚಾರ ಮಾಡುವಂತೆ ಮತ್ತು…

Read More

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರವಾಗಿರುವ ಬೆನ್ನಲ್ಲೇ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ. ಶಿವರಾತ್ರಿ ನಿಮಿತ್ತ ಕಾಶಿಗೆ ಭೇಟಿ ನೀಡಿ ಮರಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ಜಾಗತಿಕ ವಿದ್ಯಮಾನಗಳ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಭವಿಷ್ಯ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, “ನಾನು ಈ ಹಿಂದೆಯೇ ಹೇಳಿದ್ದೆ, ಸಂಕ್ರಾಂತಿ ಮುಗಿಯಲಿ ಎಂದು. ಈಗ ಬಜೆಟ್ ಮುಗಿಯಲಿದೆ, ಮುಂದೆ ಯುಗಾದಿ ಬರಲಿದೆ. ಯುಗಾದಿ ಕಳೆದ ನಂತರ ಅವರಾಗಿಯೇ (ಸಿದ್ದರಾಮಯ್ಯ) ಬಿಟ್ಟುಕೊಟ್ಟರೆ ಬದಲಾವಣೆ ಸಾಧ್ಯತೆ ಇದೆ,” ಎಂದು ಮಾರ್ಮಿಕವಾಗಿ ನುಡಿದರು. ನಾಯಕತ್ವದ ಬಗ್ಗೆ: ಡಿ.ಕೆ. ಶಿವಕುಮಾರ್ ಮತ್ತು ಡಾ. ಜಿ. ಪರಮೇಶ್ವರ್ ಇಬ್ಬರೂ ನಮ್ಮವರೇ, ಎಲ್ಲವೂ ಆಗಬೇಕು ಎಂದು ಹೇಳುವ ಮೂಲಕ ನಾಯಕತ್ವದ ಬದಲಾವಣೆಯ ಬಗ್ಗೆ ಕುತೂಹಲ ಮೂಡಿಸಿದರು. ಆದರೆ, ಸಿದ್ದರಾಮಯ್ಯನವರನ್ನು ಯಾರೂ ಒತ್ತಾಯಪೂರ್ವಕವಾಗಿ ಇಳಿಸಲು ಸಾಧ್ಯವಿಲ್ಲ, ಅವರು ಇಚ್ಛೆಪಟ್ಟರೆ…

Read More

ಕುಣಿಗಲ್: ಗ್ರಾಮೀಣ ಭಾಗದ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ರೈತರನ್ನು ಮದುವೆಯಾಗುವ ಯುವತಿಯರಿಗೆ ವಿಶೇಷ ಆರ್ಥಿಕ ಪ್ರೋತ್ಸಾಹ ಧನ ಘೋಷಿಸುವಂತೆ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಮುಂಬರುವ 2026–27ರ ರಾಜ್ಯ ಬಜೆಟ್‌ ನಲ್ಲಿ ಈ ಯೋಜನೆಯನ್ನು ಸೇರಿಸುವಂತೆ ಮನವಿ ಮಾಡಿದ್ದಾರೆ. ವಧುಗಳ ಕೊರತೆ: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವತಿಯರು ರೈತರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ನಗರ ಪ್ರದೇಶದ ಉದ್ಯೋಗಸ್ಥರನ್ನು ಮದುವೆಯಾಗಲು ಬಯಸುತ್ತಿರುವುದರಿಂದ ಕೃಷಿ ನಂಬಿದ ಯುವಕರಿಗೆ ಮದುವೆಯಾಗುವುದು ಕಷ್ಟವಾಗುತ್ತಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನೆರವು: “ಯುವತಿಯರು ರೈತರನ್ನು ಮದುವೆಯಾಗಿ ಹಳ್ಳಿಗಳಿಗೆ ಬರಲು ಸಿದ್ಧರಿಲ್ಲ ಎಂಬುದು ಕಹಿ ವಾಸ್ತವ. ಹೀಗಾಗಿ ಕೃಷಿ ಕುಟುಂಬಗಳ ಜೀವನ ಸುಧಾರಿಸಲು ಮತ್ತು ರೈತ ಯುವಕರ ಬೆಂಬಲಕ್ಕೆ ನಿಲ್ಲಲು ಸರ್ಕಾರ ಮುಂದಾಗಬೇಕು. ರೈತರನ್ನು ಮದುವೆಯಾಗುವ ಸೊಸೆಯಂದಿರಿಗೆ ಪ್ರೋತ್ಸಾಹ ಧನ ನೀಡಬೇಕು” ಎಂದು ರಂಗನಾಥ್ ಪ್ರತಿಪಾದಿಸಿದ್ದಾರೆ. ಬಜೆಟ್‌ನಲ್ಲಿ…

Read More

ಕೊರಟಗೆರೆ: ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 18 ರಿಂದ ಆರಂಭವಾಗುವ ಹಿನ್ನಲೆಯಲ್ಲಿ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕುಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿದರು. ಕೊರಟಗೆರೆ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಬರೆಯುವಂತೆ ಆತ್ಮಸ್ಥೈರ್ಯವನ್ನು ತುಂಬಿ, ಪೂರ್ವ ಸಿದ್ಧತ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಗತಿಯನ್ನು ತೆಗೆದುಕೊಂಡು ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಕ್ರಮವಹಿಸಲು ಸಂಬಂಧಪಟ್ಟ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಕೊರಟಗೆರೆ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳು ಆಹಾರದ ಗುಣಮಟ್ಟ ಮತ್ತು ವಸತಿ ನಿಲಯದ ಪರಿಸರವನ್ನು ವೀಕ್ಷಿಸಿದರು. ವಸತಿ ನಿಲಯವನ್ನು ಉತ್ತಮವಾಗಿ ನಿರ್ವಹಿಸಿರುವುದು ಕಂಡು ಬಂದಿದ್ದು ವಸತಿ ನಿಲಯದ ಮೇಲ್ವಿಚಾರಕರನ್ನು ಅಭಿನಂದಿಸಿ ಇನ್ನು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾರ್ಗದರ್ಶನ ನೀಡಿದರು. ಕೊರಟಗೆರೆ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಒಳಾಂಗಣ ಶಟಲ್ ಬ್ಯಾಡ್ಮಿಂಟನ್…

Read More

ಕೊರಟಗೆರೆ: ಲಂಬಾಣಿ ಸಮುದಾಯಕ್ಕೆ ಶ್ರೀ ಸಂತ ಸೇವಾಲಾಲ್ ಮಹಾರಾಜ್ ರವರು ನೀಡಿದ ಕೊಡುಗೆ ಅಪಾರವಾಗಿದೆ ಅವರು ಪ್ರತಿಯೊಬ್ಬರಿಗೂ ಆರಾಧ್ಯ ದೈವರಾಗಿದ್ದಾರೆ ಅವರ ಆದರ್ಶ ತತ್ವ ನಾವೆಲ್ಲರೂ ಪಾಲಿಸಬೇಕು ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು. ಅವರು ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಸೇವಾಲಾಲ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಲಂಬಾಣಿ ಸಮುದಾಯದ ಜನರು ಕಾಡು, ಬೆಟ್ಟ ಗುಡ್ಡಗಳಲ್ಲಿ ಸಿಗುವ ಸೌದೆಗಳನ್ನು ಕಡಿದು ಅದನ್ನ ಮಾರಿ ಜೀವನ ಸಾಗಿಸುತ್ತಿದ್ದವರು. ಆದರೆ ಈಗ ಕಾಲ ಬದಲಾದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಎಲ್ ಪಿ ಜಿ ಸಿಲಿಂಡರ್ ಉಜ್ವಲ ಯೋಜನೆಯಿಂದ ಶೇಕಡಾ 99 ರಷ್ಟು ಕುಟುಂಬಗಳು ಇದರ ಉಪಯೋಗ ಪಡೆದುಕೊಳ್ಳುತ್ತಿವೆ. ಬೆಟ್ಟ ಗುಡ್ಡಗಳ ಮೇಲೆ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಬದುಕುತ್ತಿದ್ದ ಬಂಜಾರ ಸಮುದಾಯಕ್ಕೆ ಸರ್ಕಾರ ಕಂದಾಯ ಗ್ರಾಮಗಳಾಗಿ ಮಾಡಿ ಎಲ್ಲಾ ರೀತಿಯ ದಾಖಲೆಗಳನ್ನು ನೀಡುತ್ತಿದೆ. ಕೊರಟಗೆರೆ ತಾಲ್ಲೂಕಿನಲ್ಲಿರುವ ಎಲ್ಲಾ ತಾಂಡ, ಹಟ್ಟಿ ಮಜರೆ ಗ್ರಾಮಗಳನ್ನು…

Read More

ತುಮಕೂರು: ಕಂಪನಿಯೊಂದರ ಲೆಟರ್ ಹೆಡ್, ಮೊಹರು, ಸಹಿ ನಕಲು ಮಾಡಿ ಸುಳ್ಳು ಅನುಭವ ಪ್ರಮಾಣ ಪತ್ರ ಪಡೆದ ಆರೋಪದ ಮೇರೆಗೆ ಬೆಂಗಳೂರಿನ ಅಶ್ವಿನ್ ಅಶ್ವತ್ಥರಾಮ ಸೇರಿದಂತೆ 6 ಜನರ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಪನಿಯ ಜೊತೆ ಯಾವುದೇ ಸಂಬಂಧವಿಲ್ಲದಿದ್ದರೂ ಸುಳ್ಳು ಉದ್ಯೋಗ, ಅನುಭವ ಪ್ರಮಾಣ ಪತ್ರ ತಯಾರಿಸಿದ್ದಾರೆ. ಕಂಪನಿಯ ಅಧಿಕೃತ ಗುರುತುಗಳನ್ನು ನಕಲು ಮಾಡಿದ್ದಾರೆ. ಬೇರೆ ಕಂಪನಿಯಲ್ಲಿ ಕೆಲಸ ಪಡೆಯುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆಂದು ಸನ್ ಬಯೋ ಫ್ಯೂಯಲ್ ಪ್ರೈ.ಲಿ., ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಭದ್ರಾರಾಧ್ಯ ಎಂಬುವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬೆಂಗಳೂರಿನ ಅಶ್ವಿನ್ ಅಶ್ವತ್ಥರಾಮ, ಗೋವಿಂದಪ್ಪ, ಶ್ರೀರಾಮ ಚಂದ್ರ, ಜಯಶ್ರೀ ಅಶ್ವತ್ಥರಾಮ, ಟಿ.ಎಸ್. ಜಗದೀಶ್, ಶ್ರೀನಿವಾಸ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಸನ್ ಬಯೋ ಫ್ಯೂಯಲ್ ಸಂಸ್ಥೆಯಲ್ಲಿ ಅಶ್ವಿನ್ ಅಶ್ವತ್ಥರಾಮ 1 ವರ್ಷ 6 ತಿಂಗಳು ಕೆಲಸ ಮಾಡಿದ್ದಾಳೆಂಬಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಬೇರೆ ಕಂಪನಿಯಲ್ಲಿ ಕೆಲಸ ಪಡೆಯುವ, ಉನ್ನತ…

Read More

ತುಮಕೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರಂತೆ ಜಿಲ್ಲೆಯ ವಿವಿಧೆಡೆ ಖಾಲಿ ಇರುವ ಕರ್ನಾಟಕ ಒನ್ ಕೇಂದ್ರಗಳಿಗೆ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತಿಪಟೂರು ಹಾಗೂ ತುಮಕೂರು ಕರ್ನಾಟಕ ಒನ್ ಕೇಂದ್ರಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಜಾಲತಾಣ https://www.karnatakaone.gov.in/Public/FranchiseeTerms  ಮೂಲಕ ಮಾರ್ಚ್ 2 ರೊಳಗಾಗಿ ಸಲ್ಲಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಕೊರಟಗೆರೆ: ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅನನ್ಯ. ಆದರೆ ಅನೇಕ ಕಡೆಗಳಲ್ಲಿ ಇಂದಿಗೂ ಅವರನ್ನು ಕೀಳರಿಮೆಯಿಂದ ನೋಡುವ ಪ್ರವೃತ್ತಿ ಇದೆ. ಈ ಮನೋಭಾವನೆ ಬದಲಾಗಬೇಕಿದೆ ಎಂಬ ಮಾತಿಗೆ ಪೂರಕವಾಗಿ, ಕೊರಟಗೆರೆ ತಾಲ್ಲೂಕಿನ ಬೊಮ್ಮಲದೇವೀಪುರ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ. ಈ ಪಂಚಾಯಿತಿ ವ್ಯಾಪ್ತಿಯ 19 ಗ್ರಾಮಗಳಲ್ಲಿ ವಾರಕ್ಕೆ ಎರಡು ದಿನ ಶಿಸ್ತುಬದ್ಧವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಇಲ್ಲಿನ ವಿಶೇಷವೆಂದರೆ, ಪಂಚಾಯಿತಿಯ ವಾಹನ ಚಾಲಕಿ ಆಶಾ, ಕಾರ್ಮಿಕರಾದ ಜಯಮ್ಮ ಮತ್ತು ನಾಗಮ್ಮ ಅವರ ಶ್ರದ್ಧೆ. ಪಂಚಾಯಿತಿ ನೀಡಿರುವ ಸ್ವಚ್ಛತಾ ವಾಹನದ ಮೂಲಕ ಪ್ರತಿ ಮನೆಬಾಗಿಲಿಗೆ ತೆರಳುವ ಇವರು, ‘ಕಸದ ಗಾಡಿ ಬಂದಿದೆ, ದಯವಿಟ್ಟು ಕಸ ನೀಡಿ’ ಎಂದು ಆತ್ಮೀಯವಾಗಿ ಕೂಗಿ ಕರೆಯುತ್ತಾರೆ. ಇವರ ಈ ನಯವಾದ ನಡವಳಿಕೆ ಮತ್ತು ಸೌಜನ್ಯದ ಮಾತುಗಳು ಗ್ರಾಮಸ್ಥರ ಮನಗೆದ್ದಿವೆ. ಕೇವಲ ಕಸ ವಿಲೇವಾರಿ ಮಾಡುವುದಷ್ಟೇ ಅಲ್ಲದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿಯೂ ಇವರು ಯಶಸ್ವಿಯಾಗಿದ್ದಾರೆ. ಇವರ…

Read More

ತುಮಕೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಮಟ್ಟದ ಪತ್ರಕರ್ತರು ತಮ್ಮ ವೃತ್ತಿ ನಿರತ ಚಟುವಟಿಕೆಗಳ ಸಂಬಂಧ ತಮ್ಮ ಜಿಲ್ಲಾದ್ಯಂತ ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳುಗಳ ವೇತನಪತ್ರ (ಲೈನೇಜ್/ಸಂಭಾವನೆ/ಕಮಿಷನ್ ಪಡೆದಿರುವ ದಾಖಲೆ) ಗಳನ್ನು ಅಥವಾ ವೇತನ ಜಮಾ ಆಗಿರುವ ಮಾಹಿತಿ ಇರುವಂತಹ ಬ್ಯಾಂಕ್ ಸ್ಟೇಟ್‌ ಮೆಂಟ್ ಲಗತ್ತಿಸಿ ಸೇವಾಸಿಂಧು ಪೋರ್ಟಲ್ (https://sevasindhu.karnataka.gov.in) ಮೂಲಕ ಆನ್‌ ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆನ್ ಲೈನ್‌ ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುತ್ತದೆ. ರಾಜ್ಯದ ಎಲ್ಲ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ ಸೇವಾಸಿಂಧು ಪೋರ್ಟಲ್ ಮೂಲಕ…

Read More

ತುಮಕೂರು: ಕ್ಯಾತ್ಸಂದ್ರ ಮೈದಾನ ರಸ್ತೆಯಲ್ಲಿ ಬುಧವಾರ ಬೆಳಂಬೆಳಿಗ್ಗೆಯೇ ವೃದ್ಧೆ ಪಾರ್ವತಮ್ಮ ಅವರ ಚಿನ್ನದ ಸರವನ್ನು ಕಳ್ಳ ಕಿತ್ತೊಯ್ದ ಘಟನೆ ನಡೆದಿದೆ. ಬೆಳಗ್ಗೆ 6.30ರ ಸಮಯದಲ್ಲಿ ಆಗತಾನೇ ಅಂಗಡಿ ತೆರೆಯುತ್ತಿದ್ದ ವೃದ್ಧೆ ಪಾರ್ವತಮ್ಮ ಅವರ ಬಳಿ ಬಂದ ಅಪರಿಚಿತ ಗುಟ್ಕಾ ಖರೀದಿಸುವ ನೆಪದಲ್ಲಿ ವೃದ್ಧೆ ಗಮನ ಬೇರೆಡೆ ಸೆಳೆದು ಅವರ ಕುತ್ತಿಗೆಯಲ್ಲಿದ್ದ ಸರ ಕೀಳಲು ಯತ್ನಿಸಿದ್ದಾನೆ. ಈ ವೇಳೆ ಕೂಗಾಡಿದರೂ ಬಿಡದ ಕಳ್ಳ ಅವರನ್ನು ನೆಲಕ್ಕೆ ಬೀಳಿಸಿ ಅರ್ಧ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More