Subscribe to Updates
Get the latest creative news from FooBar about art, design and business.
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
Author: admin
ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆ ಸಮಿತಿಗೆ ಡಿಸಿಎಂ ಜಿ. ಪರಮೇಶ್ವರ್ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ನಲ್ಲಿ ಭಾರಿ ಬಂಡಾಯಕ್ಕೆ ಕಾರಣವಾಗುತ್ತಿದೆ. ಡಿ.ಕೆ ಶಿವಕುಮಾರ್ ನಡೆಗೆ ಬೇಸತ್ತು ರಾಜಿನಾಮೆ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಚುನಾವಣೆ ಕಾವು ಹೆಚ್ಚಿರುವಾಗಲೆ ಪರಮೇಶ್ವರ್ ರಾಜಿನಾಮೆ ವಿರೋಧ ಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಲಿದ್ದು ಕಾಂಗ್ರೆಸ್ ದಲ್ಲಿ ಬೀತಿ ಶುರುವಾಗಿದೆ. ತಮ್ಮೊಡನೆ ಚರ್ಚೆ ನಡೆಸದೆ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸದ ವೇಳೆ ತಾವೇ ತೀರ್ಮಾನ ಮಾಡಿ ಉಚಿತ ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂಬ ಬೇಸರದಿಂದ ರಾಜಿನಾಮೆ ನೀಡುತ್ತಿರುವುದಾಗಿ ತಮ್ಮ ಆಪ್ತರ ಬಳಿ ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರನ್ನು ಸಮಾಧಾನಪಡಿಸಲು ಉಸ್ತುವಾರಿ ರಣದೀಪ್ ಸುರ್ಜೇವಾಲಾ ಧಾವಿಸಿದ್ದಾರೆ ಎನ್ನಲಾಗಿದ್ದು. ಪ್ರಜಾಧ್ವನಿ ಕಾರ್ಯಕ್ರಮದ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆಯಲಿದ್ದು,ನಾಳಿನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸುರ್ಜೇವಾಲ, ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಅಮೂಲ್ನ ಬೆಲೆ ಏರಿಸುವುದರ ಮೂಲಕ ಬಳಕೆದಾರರಿಗೆ ಮತ್ತೆ ಶಾಕ್ ನೀಡಿದೆ. ನಿರಂತರ ಎರಡು ತಿಂಗಳಿನಿಂದ ಬೆಲೆ ಏರಿಕೆಯಾಗುತ್ತಿದ್ದು ಅಮೂಲ್ ತಾಜಾ ಹಾಲು ಬೆಲೆ ಒಂದು ಲೀಟರ್ಗೆ 54 ರೂ ಗೆ ಹೆಚ್ಚಾಗಿದೆ. ಹಸು ಹಾಲಿನ ಬೆಲೆ 56 ರೂ, ಎಮ್ಮೆ ಹಾಲಿನ ಬೆಲೆ 70 ರೂಪಾಯಿಗೆ ಹೆಚ್ಚಾಗಿದೆ. ಇನ್ನು ಅಮೂಲ್ ಗೋಲ್ಡ್ ಹಾಲು ಒಂದು ಲೀಟರ್ಗೆ 66 ರೂ ಆಗಿದೆ ಹಾಲಿನ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಯ ವೆಚ್ಚ ಹೆಚ್ಚಾಗಿದೆ. ಇದರಿಂದ ಗ್ರಾಹಕರಿಗೆ ಹಾಲಿನ ಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದು ಅಮೂಲ್ ತನ್ನ ಬೆಲೆ ಏರಿಕೆ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದು ಅಮೂಲ್ ತಾಜಾ ಒಂದು ಲೀಟರ್: 54 ರೂ, ಅಮೂಲ್ ಗೋಲ್ಡ್ ಒಂದು ಲೀಟರ್: 66 ರೂ, ಅಮೂಲ್ ಹಸು ಹಾಲು ಒಂದು ಲೀಟರ್: 56 ರೂ ಹಾಗೂ ಅಮೂಲ್ ಎಮ್ಮೆ ಹಾಲು: 70 ರೂ ಸಧ್ಯದ ದರವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ಹಂದಿಕುಟೆ ಅಗ್ರಹಾರ ಕೆರೆಯಲ್ಲಿ ಮುಳುಗುತ್ತಿದ್ದ ಹೆಣ್ಣುಮಕ್ಕಳನ್ನು ರಕ್ಷಿಸಿ ಜೀವ ಉಳಿಸಿದ್ದ ಶಿರಾ ಕೆ.ಎಸ್.ಆರ್.ಟಿ.ಸಿ ನೌಕರ ಮಂಜುನಾಥ್ ಅವರನ್ನು ಶಿರಾ ತಹಶೀಲ್ದಾರ್ ಮಮತಾ ಎಂ. ಅವರು ಸನ್ಮಾನಿಸಿ ಗೌರವಿಸಿದರು. ಹಂದಿಕುಂಟೆ ಅಗ್ರಹಾರ ಕೆರೆ ಬಳಿಗೆ ತಾಯಿಯೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದರು. ಇದೇ ವೇಳೆ ಈ ರಸ್ತೆಯಲ್ಲಿ ಬಸ್ ಚಲಾಯಿಸಿಕೊಂಡು ಬರುತ್ತಿದ್ದ ಸರ್ಕಾರಿ ಬಸ್ ಚಾಲಕ ಮಂಜುನಾಥ್ ಅವರು ಬಸ್ ನಿಲ್ಲಿಸಿ, ತಮ್ಮ ಪ್ರಾಣದ ಹಂಗು ತೊರೆದು ಕೆರೆಗೆ ಹಾರಿ ಇಬ್ಬರು ಬಾಲಕಿಯರನ್ನೂ ರಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಮತಾ ಎಂ. ಅವರು ಸನ್ಮಾನಿಸಿದ್ದಾರೆ. ಇದೇ ವೇಳೆ ಬರಗೂರು ಶಾಲೆಯ ವಿದ್ಯಾರ್ಥಿ ಆರ್.ಸಿ. ಗೌಡ ಕಛೇರಿಯಲ್ಲಿ ಸನ್ಮಾನಿಸಿ ವೈಯಕ್ತಿಕವಾಗಿ 5000/- ರೂಗಳನ್ನು ಬಹುಮಾನವಾಗಿ ನೀಡಿದರು. ವರದಿ: ಮಾರನಹಳ್ಳಿ ಗಣೇಶ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ನವದೆಹಲಿ: ಸಿಡಿ ಪ್ರಕರಣಕ್ಕೊಂದು ಅಂತ್ಯ ಹಾಡಲು ನಿರ್ಧರಿಸಿರುವ ರಮೇಶ್ ಜಾರಕಿಹೊಳಿ ನಿನ್ನೆ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಅವರ ಜೊತೆ ಮಾತನಾಡಿರುವ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದ್ದುಇನ್ನು ಎರಡು ದಿನ ನವದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿತ್ ಶಾ ಭೇಟಿ ವೇಳೆ ರಮೇಶ್ ಜಾರಕಿಹೊಳಿ ಅವರಿಗೆ ರಾಜ್ಯ ನಾಯಕರು ಸಾಥ್ ನೀಡಿದ್ದಾರೆ. ಸುಮಾರು 20 ನಿಮಿಷ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ನೀಡುತ್ತೇನೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಜಾತ್ಯಾತೀತ ಜನತಾದಳದ ವೇದಿಕೆ ಮೇಲೆ ಸರ್ವ ಧರ್ಮ ಗುರುಗಳ ಉಪಸ್ಥಿತಿಯಲ್ಲಿ ನಾಸಿರ್ ಭಗವಾನ್ ಅವರ 66ನೇ ಹುಟ್ಟುಹಬ್ಬ ವನ್ನು ಅಪಾರ ಜನ ಸಮೂಹ ಮಧ್ಯೆ ಆಚರಣೆ ಮಾಡಲಾಯಿತು. ಜೆ ಡಿ ಎಸ್ ರಾಜ್ಯಾಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಕೆ ಮಾತನಾಡಿದ ನಾಸೀರ್ ಭಗವಾನ್ ಖಾನಾಪುರ್ ಕ್ಷೇತ್ರದ ಜನತೆಯನ್ನು ಜಾತಿ ಧರ್ಮ ಮತಗಳಿಂದ ನೋಡದೆ ನಿಸ್ವಾರ್ಥ ಸೇವೆ ಮಾಡುತ್ತಾ ಇದ್ದಾರೆ. ಈ ಬಾರಿ ನೀವು ನಾಸಿರ್ ಭಗವಾನಗೆ ಆಶೀರ್ವಾದ ಮಾಡಿ ನಿಮ್ಮ ಸ್ವಸಹಾಯ ಸಂಘಗಳ ಸಾಲಮನ್ನ ಮಾಡಿ ರೈತರ ಗಳಿಗೆ ಪ್ರತಿ ಎಕ್ಕರೆಗೆ ರೂ.10,000 ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಸೌಲತ್ತುಗಳನ್ನು ಸರ್ಕಾರ ರಚನೆ ಆದ ನಂತರ ನೀಡಲಿದ್ದೇವೆ ಇನ್ನು ಅನೇಕ ಹಲವಾರು ಯೋಜನೆಗಳನ್ನು ಜನರಿಗೆ ನೀಡಲಿದ್ದೇವೆ . ನಾಸಿರ್ ಭಾಗವಾನ್ ಮಾತನಾಡುತ್ತಾ ಈ ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ ನಾನು ಅವರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಇದೇ ವೇಳೆ ತನ್ನ ತಾಯಿಯನ್ನು ನೆನೆದು ಭಾವುಕರಾದ ನಾಸಿರ್ ಭಗವಾನ್ ನನ್ನ ತಾಯಿ ತರಕಾರಿ…
ಕೇಂದ್ರ ಬಜೆಟ್ ಬಗ್ಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದು, 120 ಲಕ್ಷ ಕೋಟಿ ರೂ. ಸಾಲ ಮಾಡಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದು ಕಿಡಿಕಾರಿದ್ದಾರೆ. ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಈ ಬಾರಿಯ ಕೇಂದ್ರ ಬಜೆಟ್ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಕ್ಕೆ 155 ಲಕ್ಷ ಕೋಟಿ ಸಾಲವಿದ್ದು, ವರ್ಷಾಂತ್ಯಕ್ಕೆ 18ಲಕ್ಷ ಕೋಟಿ ಹೊಸ ಸಾಲ ಪಡೆಯುವುದಾಗಿ ಹೇಳಿದ್ದಾರೆ. ಈ ಮೂಲಕ ದೇಶದ ಸಾಲ ವರ್ಷಾಂತ್ಯಕ್ಕೆ 173 ಲಕ್ಷ ಕೋಟಿಗೆ ಏರಿಕೆಯಾಗಲಿದೆ. 1947ರಿಂದ 2014ರವರೆಗೆ ದೇಶದ ಮೇಲೆ ಇದ್ದ ಸಾಲ 53 ಲಕ್ಷ ಕೋಟಿ. ಆದರೆ ಕಳೆದ ಎಂಟು ವರ್ಷಗಳ ಅವಧಿಯಲ್ಲಿ 120 ಲಕ್ಷ ಕೋಟಿ ಸಾಲ ಮಾಡಿರುವುದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ದೇಶ ಪ್ರತಿವರ್ಷ 10.81 ಲಕ್ಷ ಕೋಟಿ ಬಡ್ಡಿ ಕಟ್ಟಬೇಕಿದೆ.ಅಂದರೆ 100 ರೂಪಾಯಿಯಲ್ಲಿ 42 ರೂಪಾಯಿ ಬಡ್ಡಿಗೆ ಹೋಗಲಿದೆ. ಈ ರೀತಿ ಮಾಡಿದ ಕೀರ್ತಿ ಬಿಜೆಪಿಗೆ…
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕಿಸಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಕಾಂಗ್ರೆಸ್ ಬಸ್ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದಲ್ಲಿ ನಿಂತೋಗಿದೆ ಎಂದು ಲೇವಡಿ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತಾಡಿದ ಹೆಚ್.ಡಿ ರೇವಣ್ಣ, ಕಾಂಗ್ರೆಸ್ ಪಕ್ಷ ನಿರ್ನಾಮಗೊಂಡಿರುವ ಪಕ್ಷ. ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಎ ಟೀಮ್ ಬಿ ಟೀಮ್ ಅಂತ ಕರೆಯುತ್ತಾರೆ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಹೆಚ್ ಡಿ ದೇವೇಗೌಡರು ಸೋಲೋದಕ್ಕೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು. ಹಾಸನದಲ್ಲಿ ಮುಸ್ಲಿಂ ಮತದಾರರು ವೋಟ್ ನೀಡದೆ ಹೋಗಿದ್ದಕ್ಕೆ ಬಿಜೆಪಿ ಅಭ್ಯರ್ಥಿ ವಿಧಾನ ಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ಎಂಥ ಪಕ್ಷ ಅಂತ ಜನರಿಗೆ ಗೊತ್ತಾಗಿದೆ ಎಂದು ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಸರಗೂರು: ಮುಂಬರುವ ಜಿಲ್ಲಾ ಪಂಚಾಯತಿ ಟಿಕೆಟ್ ಆಕಾಂಕ್ಷಿ ಯುವ ಮುಖಂಡ ಹಂಚೀಪುರ ಸುರೇಶ್ ತಮ್ಮ 40 ನೇ ವರ್ಷದ ಜನ್ಮದಿನವನ್ನು ಕಾರ್ಯಕರ್ತರು ಹಾಗೂ ಕುಟುಂಬಸ್ಥರ ಜೊತೆಗೆ ಆಚರಿಸಿಕೊಂಡರು. ಸರಗೂರು ತಾಲ್ಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ವೇಳೆಯಲ್ಲಿ ಟೀ ಸೋಮೇಶ್ ಸ್ನೇಹ ಬಳಗ ಹಾಗೂ ಅಭಿಮಾನಿಗಳು ವತಿಯಿಂದ ಹಮ್ಮಿಕೊಳ್ಳಲಾದ ಸರಳ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ದೇವಸ್ಥಾನಕ್ಕೆ ಹೋಗಿ ಹಂಚೀಪುರ ಸುರೇಶ್ ಹೆಸರಿನಲ್ಲಿ ದೇವರಿಗೆ ವಿಶೇಷ ಪೂಜೆ ನೆರೆವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್, ಸ್ನೇಹಿತರಿಗೂ ಮತ್ತು ಅಭಿಮಾನಿಗಳಿಗೂ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಗೋಪಾಲ್, ಸಿದ್ದರಾಜು, ಮಹೇಶ್, ಶಿವರಾಜು, ಸುಂದರ್, ಜಯಕುಮಾರ್, ಶ್ರೀನಿವಾಸ, ಯಜಮಾನರು ವೆಂಕಟೇಶ್, ಹೆಜ್ಜೂರಪ್ರಸಾದ್, ಚೆನ್ನಪ್ಪ, ಬೇಕರಿ ಗಿರೀಶ್, ಸುರೇಶ್ ಪತ್ನಿ ಸುಮಿತ್ರಾ ಮತ್ತು ಮಗಳು ಸುಕೃತಾ ಭಾಗಿಯಾಗಿದ್ದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ಡಾ.ಜಿ.ಪರಮೇಶ್ವರ್ ತಮ್ಮ ನಡೆ ಬಗ್ಗೆ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪರಮೇಶ್ವರ್ ಕಾಂಗ್ರೆಸ್ ಪಕ್ಷದ ಆಸ್ತಿ ಸುದೀರ್ಘವಾಗಿ ಪಕ್ಷ ಕಟ್ಟಿದ್ದಾರೆ ಎಂದಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಬೆಂಗಳೂರು ವಿಚಾರವಾಗಿ ಪರಮೇಶ್ವರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. ಬೆಂಗಳೂರುಟ್ರಾಫಿಕ್ ವಿಚಾರವಾಗಿ ಸುರ್ಜೇವಾಲ ಭೇಟಿಯಾಗಿದ್ದಾರೆ. ಸಿಂಗಾಪುರಕ್ಕೆ ಒಂದು ತಂಡವನ್ನ ಕಳಿಸುವ ನಿರ್ಧಾರ ಮಾಡಿದ್ದೇವೆ. ಪರಮೇಶ್ವರ್ ನೇತೃತ್ವದಲ್ಲಿ ತಂಡ ಸಿಂಗಾಪುರಕ್ಕೆ ಹೋಗಲಿದೆ. ಅದರ ಬಗ್ಗೆ ಸುರ್ಜೇವಾಲ ಪರಮೇಶ್ವರ್ ಚರ್ಚೆ ಮಾಡಿದ್ದಾರೆ ಎಂದರು. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿದೆ. ಬಿಜೆಪಿ ಸರ್ಕಾರಕ್ಕೆ ಇನ್ನು 50 ದಿನ ಮಾತ್ರ ನಾನು ಈಗಾಗಲೇ 2ಬಾರಿ ಸರ್ವೇ ಮಾಡಿಸಿದ್ದೇನೆ ಎಂದರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ತೆಲುಗಿನ ಖ್ಯಾತ ನಿರ್ದೇಶಕ, ನಟ ಕೆ. ವಿಶ್ವನಾಥ್ ಅವರು ಹೈದರಾಬಾದ್ನಲ್ಲಿ ನಿಧನ ಹೊಂದಿದ್ದು ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಖ್ಯಾತ ನಿರ್ದೇಶಕ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ವಿಶ್ವನಾಥ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ವಿಶ್ವನಾಥ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ . ಅವರ ನಿಧನ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ. ವಿಶ್ವನಾಥ್ ಭಾರತೀಯ ಚಿತ್ರರಂಗದಲ್ಲಿ ಅಜರಾಮರು. ಕೆ. ವಿಶ್ವನಾಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ತೆಲುಗಿನಲ್ಲಿ ‘ಸ್ವಾತಿ ಮುತ್ಯಂ’, ‘ಶಂಕರಾಭರಣಂ, ‘ಸಾಗರ ಸಂಗಮಮ್’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ವಿಶ್ವನಾಥ್ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy