Subscribe to Updates
Get the latest creative news from FooBar about art, design and business.
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
Author: admin
ಬೆಳಗಾವಿ: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಅಧಿಕಾರಿಗಳ ವರ್ಗಾವಣೆ ಮಿಂಚಿನ ವೇಗದಲ್ಲಿ ನಡೆದಿದ್ದು ಬೆಳಗಾವಿಯ ಕೆಲವು ಇಲಾಖೆಯ ಅಧಿಕಾರಿಗಳನ್ನು ಬುಧವಾರ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿಈ ಅಧಿಕಾರಿಗಳನ್ನು ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದ್ದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ವರ್ಗಾವಣೆ ಆಗಿದ್ದು, ಬೆಳಗಾವಿ ಎಡಿಸಿ ಆಗಿ ಕೆ. ಟಿ. ಶಾಂತಲಾ ನೇಮಕವಾಗಿದ್ದಾರೆ. ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದ ರವೀಂದ್ರ ಕರಲಿಂಗಣ್ಣವರ ಅವರನ್ನು ರಾಯಚೂರು ಎಡಿಸಿಯಾಗಿ ವರ್ಗಾಯಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ರಮೇಶ್ ಜಾರಕಿಹೊಳಿ ಮತ್ತು ನಾನು ಹಲವಾರು ಕಾರ್ಯಕ್ರಮಗಳ ನಿಮಿತ್ಯ ಎರಡು ದಿನಗಳ ಕಾಲ ಜೊತೆಯಾಗಿದ್ದೇವೆ ಆದರೆ ಸಿಡಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೆ ರೀತಿಯ ಮಾತುಕತೆಯಾಗಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವುದರಿಂದ ಯಾವುದೆ ಮಾತುಕತೆಗೆ ಸಮಯ ಸಿಕ್ಕಿಲ್ಲ. ಶಾಸಕ ರಮೇಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ವಿರುದ್ಧ ಹಲವಾರು ಅರೋಪಗಳನ್ನು ಮಾಡಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದಾಗಿ ಹೇಳಿರುವ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುರುವೇಕೆರೆ, ತಾಲೂಕಿನ ಮಾಯಸಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ವತಿಯಿಂದ ಮಾರಕ ರೋಗಗಳನ್ನು ತಡೆಗಟ್ಟುವ ವಿಷಯದ ಪ್ರಬಂಧ ಸ್ಪರ್ಧೆಯನ್ನು ಮಾಯಸಂದ್ರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದು, ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೆ ಮಾರಕ ರೋಗಗಳನ್ನು ತಡೆಗಟ್ಟುವ ಕ್ರಮ ಹೇಗೆ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು, ಇನ್ನು ಈ ಪ್ರಬಂಧ ಸ್ಪರ್ಧೆಯಲ್ಲಿ ಮಾಯಸಂದ್ರ ಹೋಬಳಿ ಮಣೆ ಚಂಡೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನೇತ್ರಾವತಿ ಉತ್ತಮ ಪ್ರಬಂಧ ಲೇಖನ ಬರೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಪಿ ಎನ್ ಜವರೇಗೌಡ ಇದನ್ನು ಆಯೋಜನೆ ಮಾಡಿದ್ದರು, ತೀರ್ಪುಗಾರರಾಗಿ ನಿವೃತ್ತ ಕನ್ನಡ ಪಂಡಿತರಾದ ಟಿ ಎಂ ಬಸವಲಿಂಗಯ್ಯ ಇದ್ದು, ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎನ್ ಆರ್ ಜಯರಾಮ್, ಶ್ರೀಧರ್, ಪ್ರಕಾಶ್, ಗಿರಿಧರ್ ಪಿ, ಹನುಮಂತಯ್ಯ ಸಿ ಎನ್, ನಂಜುಂಡಪ್ಪ, ಲೀಲಾವತಿ, ಮುನಿರಾಜು, ಕರಿಬಸಪ್ಪ, ಇನ್ನಿತರರು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಪ್ರತಿಯೊಬ್ಬರಿಗೂ ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಸರ್ವೇಸಾಮಾನ್ಯ. ಸ್ವಂತ ಸೂರಿದ್ದರೆ ನೆಮ್ಮದಿಯ ಬದುಕು ಸಾಧ್ಯ ಎಂದುಕೊಳ್ಳುವ ಪ್ರತಿಯೊಬ್ಬರು ಸ್ವಂತ ನಿವಾಸಕ್ಕಾಗಿ ಜೀವನ ಪೂರ್ತಿ ಶ್ರಮಪಡುತ್ತಾರೆ. ಇಂತಹ ಬಡ ಕುಟುಂಬಗಳ ಕನಸು ನನಸು ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ “ಆವಾಸ್ ಯೋಜನೆ’ಯನ್ನು ಜಾರಿಗೆ ತಂದಿತ್ತು. ಈ ಭಾರಿಯ ಬಜೆಟ್ ಮಂಡನೆಯಲ್ಲಿ ಸರ್ಕಾರ “ಪ್ರಧಾನಮಂತ್ರಿ ಆವಾಸ್ ಯೋಜನೆ’ಗೆ ನೀಡಲಾಗುವ ಅನುದಾನವನ್ನು ಶೇ.66ರಷ್ಟು ಹೆಚ್ಚಿಸಿದ್ದು, 79,000 ಸಾವಿರ ಕೋಟಿ ರೂ.ಗೆ ಏರಿಸಿದೆ. 2022-23ರ ಆಯವ್ಯಯದಲ್ಲಿ ಈ ಯೋಜನೆಗೆ 48,000 ಸಾವಿರ ಕೋಟಿ ನೀಡಲಾಗಿತ್ತು. ಈ ಯೋಜನೆಯಡಿ ಗುಡ್ಡಗಾಡು ಪ್ರದೇಶದ ಫಲಾನುಭವಿಗಳಿಗೆ 1.30 ಲಕ್ಷ ರೂ. ನೀಡಿದರೆ, ಬಯಲುಸೀಮೆಯವರಿಗೆ 1.20 ಲಕ್ಷ ರೂ. ನೀಡಲಾಗುತ್ತದೆ. ಈ ಯೋಜನೆಗೆ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು ಇನ್ನಿತರರನ್ನು ಪರಿಗಣಿಸಲಾಗುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ತುರುವೇಕೆರೆ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನಮ್ಮ ಜಿಲ್ಲೆಗೆ 6 ನೇ ತಾರೀಖು ನಿಟ್ಟೂರಿನ ಹೆಚ್.ಎ.ಎಲ್. ಘಟಕದ ಉದ್ಘಾಟನೆಗೆ ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಮೋದಿಯವರ ಮಾತುಗಳನ್ನು ಆಲಿಸಿ ಎಂದು ಶಾಸಕ ಮಸಾಲ ಜಯರಾಮ್ ಮನವಿ ಮಾಡಿದರು. ಶಾಸಕರ ತೋಟದಮನೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರ ಮನೆಯ ಮೇಲೆ ಪಕ್ಷದ ಬಾವುಟವನ್ನು ಕಟ್ಟಬೇಕು. ನಮ್ಮ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆ ಮಾಡುವ ಮನೆಮನೆ ಅಭಿಯಾನ ಕಾರ್ಯಕ್ರಮ ಬೇರೆ ತಾಲ್ಲೂಕುಗಳಿಗಿಂತ ಸ್ವಲ್ಪ ನಿದಾನವಾಗಿ ನಡೆದಿದೆ. ಮುಖ್ಯಮಂತ್ರಿಗಳ ಜೊತೆ ಅಭಿಯಾನಕ್ಕೆ ಚಾಲನೆಯನ್ನು ತುಮಕೂರಿನಲ್ಲಿ ನೀಡಿದ್ದೇವೆ. ನಮ್ಮ ತಾಲ್ಲೂಕಿನಲ್ಲಿ ಅಭಿಯಾನದ ವೇಗವನ್ನು ಹೆಚ್ಚಿಸಬೇಕಿದೆ. ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ನಾವು ಸಂಘಟನಾತ್ಮಕವಾಗಿ ಕೆಲಸಮಾಡಿ ಗೆಲುವು ಸಾಧಿಸಿದ್ದೇವೆ. ಸಂಘಟನೆಯ ಬಗ್ಗೆ ಒತ್ತು ಕೊಡಬೇಕಿದೆ ಎಂದು ಕರೆ ನೀಡಿದರು. ಪ್ರಧಾನ ಮಂತ್ರಿ ನರೇದ್ರ ಮೋದಿಯವರು ಕೊಟ್ಟಿರುವಂತಹ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವಂತಹ ಕೆಲಸವನ್ನು ಕಾರ್ಯಕರ್ತರು ಮಾಡಬೇಕು.…
ನವದೆಹಲಿ: ಕಳೆದ ವರ್ಷ ದೆಹಲಿಯ ಜನತೆ 1.75 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಆದಾಯ ತೆರಿಗೆ ಪಾವತಿಸಿದೆ. ಆದರೆ ಕೇಂದ್ರ ಸರ್ಕಾರ ದೆಹಲಿಯ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಕೇವಲ 325 ಕೋಟಿ ರೂಪಾಯಿ ನಿಗದಿ ಪಡಿಸಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳಿಗೆ ಬಜೆಟ್ ಯಾವುದೇ ಪರಿಹಾರ ನೀಡಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯ ಜನ 1.75 ಲಕ್ಷ ಕೋಟಿ ರೂ.ಗೂ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದಾರೆ. ಅದರಲ್ಲಿ ಕೇವಲ 325 ಕೋಟಿ ರೂ. ದೆಹಲಿಯ ಅಭಿವೃದ್ಧಿಗೆ ನೀಡಲಾಗಿದೆ. ಇದು ದೆಹಲಿ ಜನತೆಗೆ ಮಾಡಿದ ಘೋರ ಅನ್ಯಾಯ ಎಂದು ಅವರು ಸರಣಿ ಟ್ವೀಟ್ ಮಾಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ನವದೆಹಲಿ: ಕೇಂದ್ರ ಬಜೆಟ್ 2023ನ್ನು ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಮಂಡಿಸಿದ್ದಾರೆ. ಬಜೆಟ್ ಮಂಡನೆ ಬೆನ್ನಲ್ಲೇ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬಜೆಟ್ ನ್ನು ವ್ಯಂಗ್ಯಮಾಡಿದ್ದು, ಇದು ಬಜೆಟ್ಟಾ? ಇಲ್ಲ ದಿನಸಿ ಅಂಗಡಿಯ ಚೀಟಿಯೇ? ಎಂದು ಪ್ರಶ್ನಿಸಿದ್ದಾರೆ. ಇದೂ ಒಂದು ಬಜೆಟ್!, ಇದು ದಿನಸಿ ಅಂಗಡಿ ಮಾಲಿಕನ ಬಿಲ್ ಥರ ಇದೆ, ಒಂದು ಯೋಗ್ಯ ಬಜೆಟ್ ತನ್ನ ಉದ್ದೇಶಗಳನ್ನು ಬಹಿರಂಗಪಡಿಸಬೇಕು ಎಂದು ಅವರು ಟೀಕಿಸಿದ್ದಾರೆ. ಜಿಡಿಪಿ ಬೆಳವಣಿಗೆ ದರವಾಗಿದ್ದರೆ, ಹೂಡಿಕೆಯ ಮಟ್ಟ ಮತ್ತು ರಿಟರ್ನ್ ದರ, ಆದ್ಯತೆಗಳು, ಆರ್ಥಿಕ ತಂತ್ರಗಾರಿಕೆ ಮತ್ತು ಸಂಪನ್ಮೂಲ ಕ್ರೋಢೀಕರಣವನ್ನು ಬಹಿರಂಗಪಡಿಸಿ ಎಂದು ಅವರು ಟ್ವೀಟ್ ನಲ್ಲಿ ತಮ್ಮದೇ ಸರ್ಕಾರಕ್ಕೆ ಕುಟುಕಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಮಂಡಿಸಿರುವ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ ಲ್ಲಿ ಶಿಕ್ಷಣ ಕ್ಷೇತ್ರ ಕ್ಕೂ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮಹಾಮಾರಿ ಕೊರೊನಾ ನಂತರ ಶಿಕ್ಷಣ ಕ್ಷೇತ್ರ ಚೇತರಿಸಿಕೊಳ್ಳಲು ಬೇಕಾದ ಕೆಲವು ಅಗತ್ಯ ಅಂಶಗಳನ್ನು ಈ ಬಾರಿ ಬಜೆಟ್ ನಲ್ಲಿ ನೀಡಲಾಗಿದೆ ಎಂದು ಅವರು ತಿಳಿಸಿದರು. 2014 ರಿಂದ ಸ್ಥಾಪಿತವಾಗಿರುವ ಅಸ್ತಿತ್ವದಲ್ಲಿರುವ 157 ವೈದ್ಯಕೀಯ ಕಾಲೇಜುಗಳೊಂದಿಗೆ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಇದೇ ವೇಳೆ ಅವರು ಘೋಷಿಸಿದರು. ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಲಾಗುವುದು. ಈ ಗ್ರಂಥಾಲಯಗಳಲ್ಲಿ ಭೌಗೋಳಿಕತೆ, ಭಾಷೆಗಳ ಪ್ರಕಾರಗಳನ್ನು ಆಧರಿಸಿ ಗುಣಮಟ್ಟದ ಪುಸ್ತಕಗಳು ಲಭ್ಯವಿರಲಿವೆ ಎಂದು ಇದೇ ವೇಳೆ ನಿರ್ಮಲಾ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಇಂಡಿಯನ್ ಕೋಸ್ಟ್ ಗಾರ್ಡ್ (ICG) ಒಂದು ಸಾಗರ ಕಾನೂನು ಜಾರಿ ಮತ್ತು ಹುಡುಕಾಟ ಮತ್ತು ಪಾರುಗಾಣಿಕಾ ಸಂಸ್ಥೆಯಾಗಿದ್ದು, ಅದರ ಪಕ್ಕದ ವಲಯ ಮತ್ತು ವಿಶೇಷ ಆರ್ಥಿಕ ವಲಯ ಸೇರಿದಂತೆ ಭಾರತದ ಪ್ರಾದೇಶಿಕ ಜಲಗಳ ಮೇಲೆ ನ್ಯಾಯವ್ಯಾಪ್ತಿಯನ್ನು ಹೊಂದಿದೆ. ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಔಪಚಾರಿಕವಾಗಿ 1 ಫೆಬ್ರವರಿ 1977 ರಂದು ಭಾರತದ ಸಂಸತ್ತಿನ ಕೋಸ್ಟ್ ಗಾರ್ಡ್ ಆಕ್ಟ್, 1978 ರ ಮೂಲಕ ಎರಡು ಕಾರ್ವೆಟ್‌ಗಳು ಮತ್ತು ಐದು ಗಸ್ತು ದೋಣಿಗಳೊಂದಿಗೆ ಸ್ಥಾಪಿಸಲಾಯಿತು. ಹೀಗಾಗಿ, ಪ್ರತಿ ವರ್ಷ, ಭಾರತೀಯ ಕೋಸ್ಟ್ ಗಾರ್ಡ್ ದಿನವನ್ನು ಅದರ ಸಂಸ್ಥಾಪನಾ ದಿನವನ್ನು ಗುರುತಿಸಲು ಫೆಬ್ರವರಿ 1 ರಂದು ಆಚರಿಸಲಾಗುತ್ತದೆ. ICG ಭಾರತೀಯ ಕರಾವಳಿಯನ್ನು ಭದ್ರಪಡಿಸುವಲ್ಲಿ ಮತ್ತು ಭಾರತದ ಕಡಲ ವಲಯಗಳಲ್ಲಿ ನಿಯಮಗಳನ್ನು ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಇದು ಭಾರತದ ಕಡಲ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಮತ್ತು ಅದರ ಪಕ್ಕದ ವಲಯ ಮತ್ತು ವಿಶೇಷ ಆರ್ಥಿಕ ವಲಯ ಸೇರಿದಂತೆ ಭಾರತದ ಪ್ರಾದೇಶಿಕ ನೀರಿನ ಮೇಲೆ ನ್ಯಾಯವ್ಯಾಪ್ತಿಯೊಂದಿಗೆ ಕಡಲ ಕಾನೂನನ್ನು…
ಪಾವಗಡ: ಮಂಗಳವಾರ ಪಟ್ಟಣದ ಗುರುಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳ ಕಚೇರಿ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ವೆಂಕಟರಮಣಪ್ಪ ಮಕ್ಕಳು ಶೈಕ್ಷಣಿಕವಾಗಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಹಂತದಲ್ಲಿ ಹೆಚ್ಚಿನ ಜ್ಞಾನವನ್ನು ತುಂಬಿ ಅವರನ್ನು ಉದಯೋನ್ಮುಖ ವಿದ್ಯಾರ್ಥಿಗಳಾಗಿ ತಯಾರಿಸುವಂತಹ ಜವಾಬ್ದಾರಿ ನಿಮ್ಮದಾಗಿದೆ ಎಂದರು. ದೇಶವನ್ನು ಕಟ್ಟುವುದರಲ್ಲಿ ಮತ್ತು ದೇಶಕ್ಕೆ ಉತ್ತಮ ಸಮಾಜ ನೀಡುವಲ್ಲಿ ನಿಮ್ಮ ಪಾತ್ರ ಗಣನೀಯ ಎಂದು ಇದ ವೇಳೆ ಶಿಕ್ಷಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು,ಇದೆ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಚ್.ವಿ.ವೆಂಕಟೇಶ್ ಮಾತಾಡಿ, ಸಮಾಜಕ್ಕೆ ಶಿಕ್ಷಕರು ಮತ್ತು ವೈದ್ಯರ ವೃತ್ತಿ ಗಣನೀಯವಾದ ವೃತ್ತಿಯಾಗಿದ್ದು, ಶಿಕ್ಷಕರು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಮತ್ತು ಅಧಿಕಾರಿಗಳನ್ನು ತಯಾರಿಸುವಂತಹ ಕಾರ್ಖಾನೆ ಇದ್ದಂತೆ ನಿಮ್ಮ ವೃತ್ತಿ ಎಂದು ಇದೆ ವೇಳೆ ಅವರು ಕೊಂಡಾಡಿದ್ದಾರೆ, ಶಿಕ್ಷಕರಾದ ನೀವು ತಯಾರಿಸುವಂತಹ ಮುತ್ತುಗಳು ಈಗ…