Subscribe to Updates
Get the latest creative news from FooBar about art, design and business.
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
Author: admin
ತುರುವೇಕೆರೆ: ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಮಡಿವಾಳರ ಸಂಘ ಇವರ ವತಿಯಿಂದ ಮಡಿವಾಳ ಮಾಚೀದೇವರ ಜಯಂತಿ ಆಚರಿಸಲಾಯಿತು. ತಾಲ್ಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಡಿವಾಳ ಮಾಚೀದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಬದಲ್ಲಿ ಗ್ರೇಡ್ -2 ತಹಶೀಲ್ದಾರ್ ಸುನಿಲ್, ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಚಂದ್ರಪ್ಪ, ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಪ್ರಭು, ಖಜಾಂಚಿ ರೇಣುಕ, ಎಂ.ಆರ್. ತಿಮ್ಮಯ್ಯ (ಕೋಳಿ), ಮಹಿಳಾದ್ಯಕ್ಷೆ ಜಯಂತಮ್ಮ, ಉಪಾಧ್ಯಕ್ಷೆ ಮಮತಾ, ಕುಮಾರಪ್ಪ, ಮೋಹನ್ ಕುಮಾರ್, ತಿಮ್ಮಪ್ಪ, ಸುರೇಶ, ದಯಾನಂದ್, ಜಯರಾಮ್ ತಾಲೂಕು ಕಚೇರಿ ಹಾಗೂ ಎಲ್ಲಾ ಇಲಾಖೆಯ ಸಿಬ್ಬಂದಿ ಇದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಪಾವಗಡ : ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಮರಿದಸನಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ದ.ರಾ.ಬೇಂದ್ರೆ ಅವರ 127ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಮುಖ್ಯ ಶಿಕ್ಷಕರಾದ ರಾಜ್ ಗೋಪಾಲ್ ಅವರು ಮಾತನಾಡಿ, ವಿಧ್ಯಾರ್ಥಿಗಳಿಗೆ ದ.ರಾ. ಬೇಂದ್ರೆ ಅವರ ಜೀವನದ ಬಗ್ಗೆ ಮತ್ತು ಅವರು ಮಾಡಿರುವ ಸಾಧನೆಗಳ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಮಹಾಂತೇಶ್ ಹಿರೇಮಠ್, ರಂಗನಾಥ್, ಯೋಗೀಶ್, ಗೀತೇಶ್, ನಾಗಮಣಿ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ವರದಿ: ನಂದೀಶ್ ನಾಯ್ಕ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುರುವೇಕೆರೆ:ತಾಲ್ಲೂಕಿನ ಮಾಯಸಂದ್ರ ಹೋಬಳಿ ಚಿಕ್ಕಪುರ ಗ್ರಾಮದಲ್ಲಿ ಜೆ.ಡಿ.ಎಸ್. ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜು, ಷಡಕ್ಷರಿ, ನರಸಿಂಹಮೂರ್ತಿ, ವೆಂಕಟೇಶ್ ಎಂ, ಚಂದ್ರಣ್ಣ, ಕುಮಾರ್ ಸಿ.ಎಂ. ವೇದ, ರವಿಕುಮಾರ್, ರಾಜೇಂದ್ರಬಾಬು, ಚಂದ್ರಣ್ಣ, ಜಗದೀಶ್ , ನಾಗರಾಜ್, ರಾಜಪ್ಪ, ಎಲ್ಲಪ್ಪ, ಕಾಂತರಾಜ್, ಕುಮಾರಯ್ಯ ಸದಾಶಿವಯ್ಯ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಬಿ.ಜೆ.ಪಿ. ತೊರೆದು ಮಾಜಿ ಶಾಸಕ ಎಂ. ಟಿ. ಕೃಷ್ಣಪ್ಪನವರ ನೇತೃತ್ವದಲ್ಲಿ ಜೆ.ಡಿ.ಎಸ್. ಪಕ್ಷವನ್ನು ಸೇರ್ಪಡೆಯಾದರು. ಮಾಜಿ ಶಾಸಕ ಕೃಷ್ಣಪ್ಪ ಈ ವೇಳೆ ಮಾತನಾಡಿ, ನಮ್ಮನ್ನು ನಂಬಿ ಪಕ್ಷ ಸೇರ್ಪಡೆಯಾಗುತ್ತಿರುವ ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದು. ನಿಮಗೆ ಆತಂಕ ಬೇಡ ಎಂದರು. ಕೆಲ ಕಿಡಿಗೇಡಿಗಳು ಜೆ.ಡಿ.ಎಸ್. ಪಕ್ಷದ ಕಾರ್ಯಕ್ರಮದ ಪೋಸ್ಟರ್ ಗಳನ್ನು ಹರಿಯುವುದು ಅವರ ಸಂಸ್ಕೃತಿಯನ್ನು ತೋರುತ್ತದೆ. ನಮ್ಮ ಕಾರ್ಯಕರ್ತರು ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ಅವರು ಮಾಡಿದಂಥ ಕೆಲಸವನ್ನು ನೀವು ಮಾಡಬೇಡಿ. ಆ ರೀತಿ ಮಾಡಿದರೆ ನಿಮಗೂ ಅವರಿಗೂ ವ್ಯತ್ಯಾಸ ವಿರುವುದಿಲ್ಲ. ಇನ್ನು 45 ದಿನಗಳಲ್ಲಿ ಅವರ ಬಲ ಗೊತ್ತಾಗುತ್ತದೆ. ತುರುವೇಕೆರೆ ಕ್ಷೇತ್ರದಲ್ಲಿ ವೀರಶೈವರು ಜೆ.ಡಿ.ಎಸ್. ಪಕ್ಷಕ್ಕೆ…
ವಿಮಾನದ ಶೌಚಾಲಯದಲ್ಲಿ ಕುಳಿತು ಸಿಗರೇಟ್ ಸೇದುತ್ತಿದ್ದ ತ್ರಿಶೂರ್ ಮಾಲಾ ಮೂಲದ ಸುಕುಮಾರನ್ (62) ಅವರನ್ನು ನೆಡುಂಬಶ್ಶೇರಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ದುಬೈನಿಂದ ನೆಡುಂಬಸ್ಸೆರಿಗೆ ಸ್ಪೈಸ್‌ಜೆಟ್ ವಿಮಾನದ ಸಮಯದಲ್ಲಿ ಸುಕುಮಾರನ್ ವಾಶ್‌ರೂಮ್‌ಗೆ ಪ್ರವೇಶಿಸಿ ಸಿಗರೇಟ್ ಸೇದಿದರು. ಪೊಲೀಸರಿಗೆ ದೊರೆತ ಮಾಹಿತಿಯ ಪ್ರಕಾರ, ಶೌಚಾಲಯದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ವಿಮಾನ ಸಿಬ್ಬಂದಿಗಳು ಹೊಗೆಯನ್ನು ಪತ್ತೆ ಮಾಡಿದ್ದಾರೆ. ನಂತರ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದ್ದು, ವಿಮಾನ ಲ್ಯಾಂಡ್ ಆದ ಕೂಡಲೇ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸುಕುಮಾರನ್ ಅವರಿಂದ ಸಿಗರೇಟ್ ವಶಪಡಿಸಿಕೊಳ್ಳಲಾಗಿದೆ. ಸುಕುಮಾರನ್ ವಿರುದ್ಧ ಏರ್ ಕ್ರಾಫ್ಟ್ ಕಾಯ್ದೆಯ ಸೆಕ್ಷನ್ 11ಎ, 5ಎ ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118(ಇ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐಎಟಿಎ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಬಿ.ಜಿ.ಈಪನ್ ಮಾತನಾಡಿ, ವಿಮಾನದೊಳಗೆ ಧೂಮಪಾನ ಮಾಡುವುದು ಗಂಭೀರ ಅಪಾಯವನ್ನುಂಟುಮಾಡುತ್ತದೆ ಮತ್ತು ಬೆಂಕಿಗೆ ಕಾರಣವಾಗಬಹುದು. ಆದ್ದರಿಂದ ವಿಮಾನದಲ್ಲಿ ಧೂಮಪಾನ ಮಾಡುವುದು ಎರಡು ವರ್ಷ ಜೈಲು…
ತಿಪಟೂರು: ತಾಲ್ಲೂಕು ನೊಣವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಒಬ್ಬ ಕಿಡಿಗೇಡಿ ಆರೋಪ ಮಾಡಿದ್ದು, ಆತ ದಾಖಲೆ ಸಮೇತ ಅವ್ಯವಹಾರ ಸಾಬೀತುಪಡಿಸಿದರೆ ನಾನು ಈ ಕೂಡಲೇ ರಾಜೀನಾಮೆ ನೀಡುತ್ತೇನೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಸವಾಲೆಸೆದಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಮಾತನಾಡಿದ ಅವರು, 15ನೇ ಹಣಕಾಸು ಯೋಜನೆ ಅಡಿ ಎನ್ ಆರ್ ಇ ಜಿ ಇಂದ 10 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ಮತ್ತು ಉಳಿದ ಹಣದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲು ಜಿಲ್ಲಾ ಪಂಚಾಯಿತಿಗೆ ಅನುಮೋದನೆ ನೀಡಲಾಗಿದ್ದು, ಆದರೆ ಇನ್ನು ಪ್ರಾರಂಭವೇ ಆಗಿರದ ಶಾಲಾ ಕಾಂಪೌಂಡ್ ಕಾಮಗಾರಿ ಕಳಪೆ ಎಂದು ನೊಣವಿನಕೆರೆ ಗ್ರಾಮದ ಕಿಡಿಗೋಡಿ ಒಬ್ಬ ಆರೋಪ ಮಾಡಿರೋದು ಸತ್ಯಕ್ಕೆ ದೂರವಾದುದು ಎಂದು ಅವರು ಸ್ಪಷ್ಟಪಡಿಸಿದರು. ಗ್ರಾಮ ಪಂಚಾಯತಿಗೆ ಸೇರಿದ ಗ್ರಾಮಗಳಿಗೆ ಕುಡಿಯುವ ನೀರು ಸಮಸ್ಯೆಯಾಗದಂತೆ ಸರಬರಾಜು ಮಾಡಲಾಗುತ್ತಿದ್ದರೂ, ಇದು ಅಕ್ರಮ ಎಂದು ಆರೋಪ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ವಸಂತಮ್ಮ,…
ಕೆ.ಆರ್.ಪೇಟೆ: ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಕ್ರೇಜಿ ಕ್ರಿಕೆಟರ್ಸ್ ಬಾಯ್ಸ್ ಇವರ ವತಿಯಿಂದ ಜನವರಿ 28ರಿಂದ ಜನವರಿ 30ರವರೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ತಾಲ್ಲೂಕಿನ ಅಕ್ಕಿಹೆಬ್ಬಾಳ್ ನ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟದಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ್ದ ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು. ಪಂದ್ಯಾಟ ವಿಜೇತರಿಗೆ ಮೊದಲನೇ ಬಹುಮಾನವಾಗಿ ಟ್ರೋಪಿ ಮತ್ತು 20 ಸಾವಿರ ನಗದು, ಎರಡನೇ ಬಹುಮಾನ ಟ್ರೋಪಿ 15 ಸಾವಿರ ನಗದು, ಮೂರನೇ ಬಹುಮಾನ ಟ್ರೋಪಿ 10 ಸಾವಿರ ನೀಡಲಾಯಿತು. ಈ ಸಂದರ್ಭದಲ್ಲಿ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದ್ಯಸರು ಮತ್ತು ಗ್ರಾಮಸ್ಥರು, ಗ್ರಾಮದ ಮುಖಂಡರು ವಿಶೇಷ ಆಹ್ವಾನಿತರು ಪ್ರೋತ್ಸಾಹ ನೀಡಿದರು. ವರದಿ: ಮಂಜು ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನ ಹೋರಿ ಹಬ್ಬಗಳಲ್ಲಿ ‘ಮೈಸೂರು ಹುಲಿ’ ಎಂಬ ಬಿರುದು ಪಡೆದುಕೊಂಡಿದ್ದ ಪಿ.ಪಿ.ಹೋರಿ ಎಂಬ ಎತ್ತು ಸಾರ್ವಜನಿಕರಿಗೆ ಬಹಳ ಅಚ್ಚುಮೆಚ್ಚಾಗಿದ್ದು, ಆದರೆ ದುರದೃಷ್ಟವಶಾತ್ ಈ ಹೋರಿ ಇದೀಗ ಅನಾರೋಗ್ಯದಿಂದ ಸಾವನ್ನಪ್ಪಿದೆ. ಕೆಲವು ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದ ಹೋರಿಯನ್ನು ಉಳಿಸಿಕೊಳ್ಳಲು ಮಾಲಿಕರು ಸಾಕಷ್ಟು ಆರೈಕೆ ಮಾಡಿದ್ದರು ಆದರೆ, ಚಿಕಿತ್ಸೆ ಫಲಿಸದೆ ಎತ್ತು ಸಾವನ್ನಪ್ಪಿದೆ. ಹೋರಿ ಹಬ್ಬಗಳಲ್ಲಿ ಮೈಸೂರು ಹುಲಿ ಬಿರುದು ಪಡೆದು ಬಹುಮಾನ ಗೆದ್ದಿದ್ದ ಪಿ.ಪಿ.ಹೋರಿಯಾ ಇನ್ನಿಲ್ಲ ಎನ್ನುವ ಸುದ್ದಿ ಕೇಳುತ್ತಿದ್ದಂತೆಯೇ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಂತಾಪ ಸೂಚಿಸಿದರು. ಪಿ.ಪಿ.ಹೋರಿಯಾ ಎತ್ತುವನ್ನು ರಾಣೆಬೆನ್ನೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಬಳಿಕ ಗೌರವ ಪೂರ್ವಕವಾಗಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ವರದಿ: ಮಂಜು, ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಖಗೋಳಶಾಸ್ತ್ರಜ್ಞರಿಗೆ ಒಳ್ಳೆಯ ಸುದ್ದಿ. ಇಂದು ನೀವು 50,000 ವರ್ಷಗಳಿಗೊಮ್ಮೆ ಆಕಾಶದ ವಿದ್ಯಮಾನವನ್ನು ವೀಕ್ಷಿಸಬಹುದು. ಹಸಿರು ಧೂಮಕೇತು C/2022 E3 (ZTF) ಇಂದು ಭೂಮಿಗೆ ತನ್ನ ಸಮೀಪವನ್ನು ತಲುಪಲಿದೆ. ಜನವರಿ 30 ರಿಂದ ಭೂಮಿಯ ಜೊತೆಯಲ್ಲಿ ಚಲಿಸುತ್ತಿರುವ ಈ ಹಸಿರು ಧೂಮಕೇತು ಇಂದು ರಾತ್ರಿ 7.30 ರಿಂದ ಉತ್ತಮವಾಗಿ ಗೋಚರಿಸುತ್ತದೆ. ಧೂಮಕೇತು C/2022 E3 (ZTF) ಈ ಸಮಯದಲ್ಲಿ ಭೂಮಿಯಿಂದ ಕೇವಲ 42 ದಶಲಕ್ಷ ಕಿ.ಮೀ. ಈ ಹಸಿರು ಧೂಮಕೇತು ನಿಯಾಂಡರ್ತಲ್ ಅವಧಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿತು. ನೋಡುವುದು ಹೇಗೆ? ಕೆಲವೊಮ್ಮೆ ಈ ಧೂಮಕೇತುವನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಬೈನಾಕ್ಯುಲರ್‌ಗಳ ಸಹಾಯದಿಂದ, ನೀವು ಖಾಲಿ ಪ್ರದೇಶದಲ್ಲಿ ನಿಂತರೆ ಈ ಆಕಾಶ ವಿದ್ಯಮಾನವನ್ನು ಕಾಣಬಹುದು. ಆಕಾಶ ಶುಭ್ರವಾಗಿದ್ದರೆ ರಾತ್ರಿ 9.30ರ ನಂತರ ಈ ವಿಚಿತ್ರ ದೃಶ್ಯವನ್ನು ಸ್ಪಷ್ಟವಾಗಿ ನೋಡಬಹುದು. ಪಶ್ಚಿಮ ಬಂಗಾಳ, ಒಡಿಶಾ, ಲಡಾಖ್, ಈಶಾನ್ಯ ಪ್ರದೇಶ ಸೇರಿದಂತೆ ಭಾರತದ ಹಲವು ಭಾಗಗಳಿಂದ ಈ ಧೂಮಕೇತುವನ್ನು ಕಾಣಬಹುದು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಮೂರು ವರ್ಷದ ಪುಟ್ಟ ಮಗುವಿನ ಮೇಲೆ ಆಕೆಯ ತಾಯಿಯ ಗೆಳೆಯ 26 ವರ್ಷದ ಯುವಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮಗುವಿನ ತಾಯಿ ಆರೋಪಿಯೊಂದಿಗೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದಳು. ಯುವತಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವರು ಕೆಲಸಕ್ಕೆ ಹೋಗುತ್ತಿದ್ದಾಗ ಆರೋಪಿಗಳು ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಮಂಗಳವಾರ ರಾತ್ರಿ 26 ವರ್ಷದ ಯುವಕನೊಬ್ಬ ಗಾಂಜಾ ಕುಡಿದು ಅಂಬೆಗಾಲಿಡುವ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದಿದ್ದಾನೆ. ಕೆಲಸ ಮುಗಿಸಿ ಮನೆಗೆ ಬಂದಾಗ ಮಹಿಳೆಗೆ ಘಟನೆ ತಿಳಿಯಿತು. ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಗಾಂಜಾ ಕುಡಿದಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಮತದಾರರಿಗೆ ಆಮಿಷ ಒಡ್ಡುವ ರಾಜಕಾರಣಿಗಳ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಕೆ.ಆರ್.ಎಸ್ ಪಕ್ಷ ಆಗ್ರಹಿಸಿದೆ. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣರೆಡ್ಡಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ. ಈ ವೇಳೆ ಗಂಡಸರಿಗೆ ಲಿಕ್ಕರ್,ಹೆಂಗಸರಿಗೆ ಕುಕ್ಕರ್, ಹಣದಂತಹ ಆಮಿಷಗಳು ಬರಲಿವೆ. ಇಂತಹ ಆಮಿಷಗಳನ್ನ ಒಡ್ಡುವ ಅಭ್ಯರ್ಥಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂದು ಮನವಿ ಮಾಡಿದರು.ಇದೇ ವೇಳೆ ಸಮಾಜದ ವ್ಯವಸ್ಥೆ ಬಗ್ಗೆ ರವಿ ಕೃಷ್ಣರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy