Subscribe to Updates
Get the latest creative news from FooBar about art, design and business.
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
Author: admin
ಬೆಳಗಾವಿ: ಚುನಾವಣೆ ಬರುತ್ತಿದ್ದಂತೆಯೇ ಎಲ್ಲಪಕ್ಷಗಳು ತಮ್ಮದೇಯಾದ ಪ್ರಚಾರ ತಂತ್ರ ಹೆಣೆಯುವುದು ಸಾಮಾನ್ಯ. ಅದರಲ್ಲೂ ಬೆಳಗಾವಿ ರಾಜಕೀಯ ತಂತ್ರಗಾರಿಕೆ ರಾಷ್ಟ್ರಮಟ್ಟದಲ್ಲೂ ಪ್ರಸಿದ್ದ, ರಾಜ್ಯದ ರಾಜಕೀಯ ನಿರ್ಧಾರವಾಗುವುದೇ ಇಲ್ಲಿಂದ ಎಂದರು ತಪ್ಪಾಗಲಾರದು. ಈ ನಿಟ್ಟಿನಲ್ಲಿಯೇ ಎಲ್ಲ ಪಕ್ಷಗಳು ಕುಂದಾನಗರಿಯಲ್ಲಿ ಹೈಅಲರ್ಟ್ ಆಗಿದ್ದು ಭಾರತೀಯ ಜನತಾ ಪಕ್ಷದ ಕೈಗಾರಿಕಾ ಪ್ರಕೋಸ್ಟ ಸಂಚಾಲಕರಾದ ನಾಗರಾಜ್ ಶ್ರೀಕಾಂತ್ ಪಾಟೀಲ್ ಒಂದು ವಿನೋತನ ಹೊಸ ವರ್ಷದ ಮಿನಿ ಪಂಚಾಂಗ ತಯಾರಿಸುವುದರ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾಹಿತಿ ನೀಡುವ ಕಿರು ಹೊತ್ತಿಗೆಯನ್ನು ತಯಾರಿಸಿದ್ದಾರೆ. ಈ ಕಿರು ಹೊತ್ತಿಗೆ ವಿಶೇಷವೆಂದರೆ ಭಾರತೀಯ ಜನತಾ ಪಕ್ಷದ ಘೋಷಣೆಗಳು ಸರಕಾರಗಳ ಜನಪರ ಯೋಜನೆಗಳನ್ನು ಮಾಹಿತಿ ನೀಡಲಾಗಿದೆ. ಬಿಜೆಪಿ ಮಿನಿ ಪಂಚಾಂಗ ವನ್ನುಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ಬಿಡುಗಡೆಗೊಳಿಸಿದ್ದು ಈ ಸಂದರ್ಭದಲ್ಲಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ್ ಬೆನಿಕೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾದ ಸಂಜಯ್ ಪಾಟೀಲ್, ಭಾರತೀಯ…
ತಿಪಟೂರು: ಹೆಣ್ಣುಮಕ್ಕಳು ಆರೋಗ್ಯದಿಂದ ಇದ್ದರೆ ಆ ಮನೆಯ ಆರೋಗ್ಯವಂತವಾಗಿರುತ್ತದೆ. ಅದೇ ರೀತಿ ಆ ಗ್ರಾಮ ಊರು ಆರೋಗ್ಯದಿಂದ ಕೂಡಿರುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಬಿ.ಶಶಿಧರ್ ಹೇಳಿದರು. ತಿಪಟೂರು ತಾಲೂಕು ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ನಮ್ಮ ಆರೋಗ್ಯ ಕೇಂದ್ರ ಉದ್ಘಾಟನೆ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಕೆ.ಬಿ.ಶಶಿಧರ್ ಮಾತನಾಡಿದರು. ಗೋಡೆಕೆರೆ ಸುಕ್ಷೇತ್ರದ ಶ್ರೀ ಮೃತ್ಯುಂಜಯ ದೇಶಿಯ ಕೇಂದ್ರ ಸ್ವಾಮೀಜಿಯವರು ಮಾತನಾಡಿ, ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಜನಸೇವೆ ಮಾಡುತ್ತಿರುವ ಶಶಿಧರ ಸೇವೆ ಇದೇ ರೀತಿ ಮುಂದುವರೆದುಕೊಂಡು ಹೋದರೆ ಜನಪ್ರತಿನಿಧಿಯನ್ನಾಗಿ ಆಯ್ಕೆ ಮಾಡುವ ಅವಶ್ಯಕತೆ ಇದೆ. ಯಾವುದೇ ಕಾರ್ಯ ಮಾಡಬೇಕಾದರೆ ರಾಜಕೀಯ ಉದ್ದೇಶ ಇಟ್ಟುಕೊಂಡು ಮಾಡದೆ ತನ್ನ ಸ್ವಂತ ಹಣದಿಂದ ನಮ್ಮ ಆರೋಗ್ಯ ಎರಡನೇ ಕೇಂದ್ರವನ್ನು ಕೆ.ಬಿ.ಕ್ರಾಸ್ ನಲ್ಲಿ ಮಾಡಿರುವುದು ಸಂತೋಷದ ವಿಚಾರ ಎಂದು ಶ್ರೀಗಳು ತಿಳಿಸಿದರು. ಇದೇ ಅಲ್ಲದೆ ತಿಪಟೂರಿನಲ್ಲಿ ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡುವ ಹಾಗೂ ಕೌಶಲ್ಯ ತರಬೇತಿ ನೀಡಿ ಅವರಿಗೆ ಉದ್ಯೋಗ ಸಿಗಲು ಹಲವಾರು ತರಬೇತಿಗಳನ್ನು ಹಮ್ಮಿಕೊಳ್ಳುತ್ತೇನೆ ಹಾಗೂ…
ನವದೆಹಲಿ: ಲಡಾಖ್ ನಲ್ಲಿ ಸುಮಾರು 2000 ಚದರ ಕಿ.ಮೀ. ಭಾರತದ ಭೂಮಿ ಚೀನಾ ವಶದಲ್ಲಿದೆ ಎಂದು ರಾಹುಲ್ ಗಾಂಧಿ ಮತ್ತೆ ಆರೋಪ ಮಾಡಿದ್ದು, ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಅಪಾಯಕಾರಿ ಎಂದಿದ್ದಾರೆ. ಚೀನೀಯರು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಅಪಾಯಕಾರಿ. ಇನ್ನೂ ಹೆಚ್ಚು ಆಕ್ರಮಣಕಾರಿ ಯೋಜನೆಗಳನ್ನು ರೂಪಿಸಲು ಚೀನಿಯರನ್ನು ಪ್ರೇರೇಪಿಸುತ್ತದೆ ಎಂದು ಎಚ್ಚರಿಕೆ ನೀಡಿದರು. ಚೀನಿಯರೊಂದಿಗೆ ವ್ಯವಹರಿಸುವ ಮಾರ್ಗವೆಂದರೆ ಅವರೊಂದಿಗೆ ದೃಢವಾಗಿ ವ್ಯವಹರಿಸುವುದು ಮತ್ತು ಅವರು ನಮ್ಮ ನೆಲವನ್ನು ಕಬಳಿಸಿರುವುದನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ರಾಹುಲ್ ಗಾಂಧಿ ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಬಿಜೆಪಿಯೊಂದಿಗೆ ಮರುಮೈತ್ರಿಯ ಸಾಧ್ಯತೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಳ್ಳಿಹಾಕಿದ್ದಾರೆ. ತಮ್ಮ ಹಿಂದಿನ ಮಿತ್ರರೊಂದಿಗೆ ‘ಕೈಜೋಡಿಸುವ ಬದಲು ಸಾಯುವುದೇ ಲೇಸು’ ಎಂದು ಪ್ರತಿಪಾದಿಸಿದ್ದಾರೆ. ತಮ್ಮೊಂದಿಗೆ ಮೈತ್ರಿಯಲ್ಲಿದ್ದಾಗ ಬಿಜೆಪಿಯ ಹಿಂದುತ್ವ ಸಿದ್ಧಾಂತದ ಬಗ್ಗೆ ಯಾವಾಗಲೂ ವಿರುದ್ಧವಾಗಿರುವ ಮುಸ್ಲಿಮರು ಸೇರಿದಂತೆ ತಮ್ಮೆಲ್ಲಾ ಬೆಂಬಲಿಗರ ಮತಗಳನ್ನು ಅದು ಪಡೆಯುತ್ತಿತ್ತು ಎಂದು ಜೆಡಿಯು ನಾಯಕ ನೆನಪಿಸಿಕೊಂಡರು. ಮುಂದಿನ ವರ್ಷ ರಾಜ್ಯದ 40 ಲೋಕಸಭಾ ಸ್ಥಾನಗಳ ಪೈಕಿ 36 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ ಎಂದು ವ್ಯಂಗ್ಯವಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಪಾವಗಡ: ತಾಲ್ಲೂಕಿನ ವೈ.ಎನ್ .ಹೊಸಕೋಟೆ ಹೋಬಳಿಯ ಮರಿದಾಸನಹಳ್ಳಿ ಕ್ಲಸ್ಟರ್ ನ ಕಲಿಕಾ ಹಬ್ಬವನ್ನು ಸೋಮವಾರದಂದು ಮರಿದಾಸನಹಳ್ಳಿ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು . ಇದೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಂಜನೇಯಲು ಕೆ. ಅವರು ಕಲಿಕಾ ಹಬ್ಬದಲ್ಲಿ ಬರುವ ಪ್ರಮುಖ ನಾಲ್ಕು ಮೂಲಗಳು ಮಾಡು ಆಡು, ಕಾಗದ ಕತ್ತರಿ ಬಣ್ಣ ,ಊರು ತಿಳಿಯೋಣ ಹಾಗೂ ಹಾಡು ಆಡು ಇದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಶಾಲೆಯ SDMC ಅಧ್ಯಕ್ಷರಾದ ಆಂಜನೇಯಲು , SDMC ಸದಸ್ಯ ಪರಮೇಶ್ , ಮರಿದಾಸನಹಳ್ಳಿ ಕ್ಲಸ್ಟರ್ CRP ನಾಗೇಂದ್ರ ನಾಯ್ಕ , ಉತ್ತಮ ಶಿಕ್ಷಣ ಪುರಸ್ಕೃತರು ಹಾಗೂ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ರಾಜಗೋಪಾಲ್, ಕ್ಲಸ್ಟರ್ ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವರದಿ: ನಂದೀಶ್ ನಾಯ್ಕ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ಸಾಕಷ್ಟು ಜನರಿಗೆ ಹಣ್ಣು ಇಷ್ಟ ಆದ್ರೆ, ಯಾವ ಹಣ್ಣಿನಲ್ಲಿ ಏನನ್ನು ತಿನ್ನಬೇಕು? ಏನನ್ನು ಎಸೆಯ ಬೇಕು ಅನ್ನೋದು ತಿಳಿದಿರೋದಿಲ್ಲ. ಕೆಲವೊಂದು ಹಣ್ಣಿನ ಬೀಜವನ್ನು ಕೂಡ ಕೆಲವರು ಸೇವಿಸುತ್ತಾರೆ. ಆದರೆ ಅದರಿಂದ ಕೆಲವೊಂದು ದುಷ್ಪರಿಣಾಮಗಳು ಉಂಟಾಗೋದು ಸಹಜ. ಆ್ಯಪಲ್ ಅಂದ್ರೆ, ಯಾರಿಗೆ ಇಷ್ಟವಿಲ್ಲ ಹೇಳಿ, ಎಲ್ಲರಿಗೂ ಪ್ರಿಯವಾದದ್ದು ಮತ್ತು ಆರೋಗ್ಯಕ್ಕೂ ಅದು ಬಹಳ ಉತ್ತಮ. ದಿನದಲ್ಲಿ ಒಂದು ಆ್ಯಪಲ್ ಸೇವನೆ ಮಾಡೋದ್ರಿಂದ ಡಾಕ್ಟರ್ ನಿಂದ ದೂರವಿರಿ ಅನ್ನೋ ಮಾತುಗಳನ್ನೂ ನೀವು ಕೇಳಿದ್ದೀರಿ. ಆದ್ರೆ, ಆ್ಯಪಲ್ ನ ಬೀಜವನ್ನು ತಿನ್ನುವುದು ಅಷ್ಟು ಉತ್ತಮವಲ್ಲ. ಆ್ಯಪಲ್ ನ ಬೀಜ ಸೇವನೆ ಮಾಡೋದ್ರಿಂದ ನಮಗೆ ತಲೆ ನೋವು, ವಾಂತಿ, ಬಲಹೀನತೆ, ತಲೆ ಸುತ್ತು ಇತ್ಯಾದಿ ಲಕ್ಷಣಗಳು ಉಂಟಾಗಬಹುದು. ಮಕ್ಕಳಂತೂ ಆ್ಯಪಲ್ ನ ಬೀಜವನ್ನು ಸೇವಿಸಲೇ ಬಾರದು. ಆ್ಯಪಲ್ ನ ಒಂದೆರಡು ಬೀಜ ಸೇವನೆ ಮಾಡಿದ್ರೆ ಅಷ್ಟೊಂದು ಪರಿಣಾಮಕಾರಿಯಲ್ಲ, ಆದ್ರೆ, ಸಾಕಷ್ಟು ಸಂಖ್ಯೆಯಲ್ಲಿ ಆ್ಯಪಲ್ ಬೀಜವನ್ನು ತಿಂದರೆ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಹಾಗಾಗಿ ಆ್ಯಪಲ್ ಸೇವನೆ ವೇಳೆ ಬೀಜವನ್ನು…
ಇಸ್ಲಾಮಾಬಾದ್ : ಪಾಕಿಸ್ತಾನದ ಪೇಶಾವರದ ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು ಸ್ಫೋಟದಲ್ಲಿ 17 ಮಂದಿ ಸಾವನ್ನಪ್ಪಿದ್ದು ಸುಮಾರು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. ವಾಯುವ್ಯ ನಗರದ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ಮಸೀದಿಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ ಎಂದು ಪೊಲೀಸ್ ಅಧಿಕಾರಿ ಸಿಕಂದರ್ ಖಾನ್ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ಫೋಟದ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಸಿಡಿ ಪ್ರಕರಣಕ್ಕೆ ಡಿ.ಕೆ ಶಿವಕುಮಾರ ಸೂತ್ರಧಾರಿಯಾಗಿದ್ದು ಇದು ಇಬ್ಬರ ನಡುವಿನ ವೈಯಕ್ತಿಕ ಯುದ್ಧವಾಗಿದೆ ಕೂಡಲೆ ಡಿಕೇಶಿ ಸೇರಿದಂತೆ ನರೇಶ, ಶ್ರವಣ, ಪರಶಿವಮೂರ್ತಿ, ಮಂಡ್ಯ ಮೂಲದ ಇಬ್ಬರನ್ನು ಹಾಗೂ ಸಿಡಿ ಲೇಡಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಬೇಕೆಂದು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಆಗ್ರಹಿಸಿದರು. ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕಾರಣದಲ್ಲಿ ಆತ ಇಂತಹ ಷಡ್ಯಂತ್ರ ಮಾಡಬಾರದಿತ್ತು. ನೂರಾರು ದಾಖಲೆಗಳು ನಮ್ಮ ಬಳಿ ಆತನ ವಿರುದ್ಧ ಇವೆ. ನಾನು ಸೂಕ್ತ ಪ್ರಾಧಿಕಾರದ ಮುಂದೆ ಡಿಕೆಶಿ ವಿರುದ್ಧ ದಾಖಲಾತಿಗಳನ್ನು ಬಿಡುಗಡೆ ಮಾಡಿಯೇ ಮಾಡುತ್ತೇನೆ ಎಙದು ರಮೇಶ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಯುವತಿಯೊಬ್ಬಳನ್ನು ಮುಂದಿಟ್ಟುಕೊಂಡು ಡಿ. ಕೆ. ಶಿವಕುಮಾರ ಅವರು ನನ್ನ ತೇಜೋವಧೆ ಮಾಡಿದ್ದಾರೆ. ನಾನು ಮಾಡದ ಕೃತ್ಯವನ್ನು ಕಾನೂನಿನ ಕಾರಣಕ್ಕಾಗಿ ನಾನು ಒಪ್ಪಿಕೊಂಡಿದ್ದೆನಷ್ಟೇ. ನನ್ನ ಸಿಡಿ ಸಿದ್ಧಪಡಿಸಲು ಡಿ.ಕೆ.ಶಿವಕುಮಾರ ಸೂತ್ರಧಾರ. ನಾಲ್ವತ್ತು ಕೋಟಿ ರೂ. ಖರ್ಚು ಮಾಡಿ ನನಗೆ ಸಿಡಿಯಲ್ಲಿ ಸಿಲುಕಿಸಿದ್ದಾನೆ. ಅವನ ರಾಜಕೀಯ ಜೀವನ ಮುಗಿಸುವವರೆಗೂ ನಾನು ಸುಮ್ಮನೆ…
ಕೊಪ್ಪಳ: 2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ 1 ಲಕ್ಷ ರೂ ಸಾಲ ಮನ್ನಾ ಮಾಡುವೆ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು. ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ರೈತರು ಮತ್ತು ಮಹಿಳೆಯರು ಕಷ್ಟದಲ್ಲಿದ್ದು ಪ್ರತಿದಿನ ತಮ್ಮ ಅಳಲನ್ನು ತೋಡಿಕೋಳ್ಳುತ್ತಿದ್ದಾರೆ. ವಾಸಿಸಲು ಮನೆ ಇಲ್ಲವೆಂದು ಹೇಳುತ್ತಿದ್ದಾರೆ. ಕೋವಿಡ್ ವೇಳೆ ಮೃತ ಕುಟುಂಬಕ್ಕೆ ಇನ್ನೂ ಪರಿಹಾರ ಬಂದಿಲ್ಲಾ ಎನ್ನುತ್ತಾರೆ. ಅವರ ಕಷ್ಟಕ್ಕೆ ನಾನು ಸ್ಪಂದನೆ ಮಾಡುತ್ತಿದ್ದೇನೆ ಫಸಲ್ ಬಿಮಾ ಯೋಜನೆ ಹೆಸರಲ್ಲಿ ವಿಮಾ ಕಂಪನಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ. ಈ ಹಿಂದೆ ರೈತರ ಆತ್ಮಹತ್ಯೆ ಹೆಚ್ಚಾದವು. ಅವರ ನೋವು ಅರಿತು ರೈತರ ಸಾಲ ಮನ್ನಾ ಮಾಡುವೆ ಎಂದು ಹೇಳಿದ್ದೆ. ನನಗೆ ಪೂರ್ಣ ಬಹುಮತ ಬರಲಿಲ್ಲ. ಆದರೂ ರೈತರ ಸಾಲ ಮನ್ನಾ ಮಾಡಿದೆ ಎಂದು ಹೇಳಿದರು. ಕಾಂಗ್ರೆಸ್ ನನಗೆ ಒತ್ತಡ ಹಾಕಿದ್ರು, ನಿಮ್ಮ ಕಾರ್ಯಕ್ರಮಕ್ಕೆ ಹಣ ಹೊಂದಿಸಿ ಕೊಡುವೆ…
ಶ್ರೀನಗರ: ರಾಷ್ಟ್ರದಲ್ಲಿ ಭದ್ರತಾ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಿಜೆಪಿ ಹೇಳುತ್ತಿದ್ದು ಇದು ನಿಜವಾಗಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮುವಿನಿಂದ ಲಾಲ್ ಚೌಕಗೆ ನಡೆದುಕೊಂಡು ಬರಲಿ ನೋಡೋಣ ಎಂದು ರಾಹುಲ್ ಗಾಂಧಿ ಸವಾಲ್ ಹಾಕಿದ್ದಾರೆ. ಕಾಂಗ್ರೆಸ್ ಭಾರತ ಜೋಡೊ ಯಾತ್ರೆಯು ಕೊನೆಯ ಹಂತ ತಲುಪಿದ್ದು ಕನ್ಯಾಕುಮಾರಿಯಿಂದ ಲಾಲ್ ಚೌಕ್ ತಲುಪಿದ ರಾಹುಲ್ ಗಾಂಧಿ ಅವರು ಮಾತನಾಡಿ ದೇಶದಲ್ಲಿ ಭದ್ರತೆ ಪರಿಣಾಮಕಾರಿಯಾಗಿ ಇಲ್ಲ ಎಂದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಮಿತ್ ಶಾ ದೇಶದಲ್ಲಿ ಎಲ್ಲವು ಚೆನ್ನಾಗಿದೆ ಎಂದು ಹೆಳುತ್ತಾರೆ ಹಾಗಿದ್ದರೆ ಲಾಲ್ ಚೌಕವರೆಗೂ ಅವರು ನಡೆದು ತೋರಿಸಲಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ಸಾಮಾನ್ಯ ಘಟನೆಯಾಗಿದೆ ಎಂದಿದ್ದಾರೆ.ಇತ್ತೀಚೆಗೆ ಭದ್ರತಾ ಲೋಪದಿಂದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಪೊಲೀಸರು ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ತಿಳಿಸಿದರೆ, ಬಿಜೆಪಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರದು ಆಧಾರರಹಿತ ಹೇಳಿಕೆ ಎಂದು ಆರೋಪಿಸಿ ಗೇಲಿ…