Author: admin

ಕಾಂಗ್ರೆಸ್ ನವರಿಗೆ ಕರ್ನಾಟಕದಲ್ಲಿ ಹತ್ತು ಸಾವಿರ ಕೋಟಿ ರೂ ಲೂಟಿ ಮಾಡುವ ಎಟಿಎಂ ಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ. ಬಂಟ್ವಾಳದಲ್ಲಿ ನಡೆದ ಬಿಜೆಪಿ ಶಾಸಕ ರಾಜೇಶ್ ನಾಯಕ್ ಗ್ರಾಮವಿಕಾಸ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಕರ್ನಾಟಕದ ಮೇಲೇ ಕಣ್ಣು. ಲೋಕಸಭಾ ಚುನಾವಣೆಗೆ ಇಲ್ಲಿನ ಹಣ ಬೇಕು, ಅದಕ್ಕಾಗಿ ಏನಾದರೂ ಸುಳ್ಳು ಹೇಳಿ ಕರ್ನಾಟಕ ಗೆಲ್ಲಬೇಕು. ಆ ಮೂಲಕ ಲೋಕಸಭಾ ಚುನಾವಣೆ ಗೆಲ್ಲುವುದು ಕಾಂಗ್ರೆಸ್ ಯೋಜನೆ ಎಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಭಾರತದಲ್ಲೇ ಬಿಜೆಪಿಗೆ ಅತೀ ಪ್ರಮುಖ ಜಾಗ. ಬಂಟ್ವಾಳ ಒಂದು ವಿಚಿತ್ರ ಕ್ಷೇತ್ರ‌, ಇಲ್ಲಿಗೆ ಎರಡು ಇತಿಹಾಸ ಇದೆ.‌ ಮೊದಲ ಇತಿಹಾಸದಲ್ಲಿ ಬಂಟ್ವಾಳವನ್ನು ಕೋಮುಗಲಭೆ ಅಧಿಕ ಇರೋ ಜಾಗ ಅಂತಾರೆ. ಒಂದು ಕೊಲೆಗೆ 48 ಗಂಟೆಯಲ್ಲಿ ರಿವೆಂಜ್ ಮರ್ಡರ್ ಆಗುತ್ತೆ.‌ ಪೊಲೀಸರು ಬರ್ತಾರೆ, ಪೊಲಿಟಿಷಿಯನ್ ಬಂದು ಭಾಷಣ ಮಾಡಿ ಮತ್ತೆ ತುಪ್ಪ ಸುರೀತಾರೆ. ಇದರ ಮಧ್ಯೆ ಆಟೋ ಚಾಲಕರು, ವ್ಯಾಪಾರಿಗಳು ಸೇರಿ ಹಲವರು ಕೋಮು…

Read More

ವಯಸ್ಸಿನ ಭೇದವಿಲ್ಲದೆ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ವಿದ್ಯಾರ್ಥಿನಿ ವೃಂದಾ ತ್ರಿಪಾಠಿ(16) ಶಾಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. 11ನೇ ತರಗತಿಯಲ್ಲಿ ಓದುತ್ತಿದ್ದ ವೃಂದಾ ತರಗತಿಯಲ್ಲೇ ಕುಸಿದು ಬಿದ್ದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಆಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ವಿಪರೀತ ಚಳಿಯಿಂದಾಗಿ ವೃಂದಾ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಡೂಮ್ಸ್ ಡೇ, ಮಾನವೀಯತೆಯ ಸ್ವಯಂ ವಿನಾಶದ ಮೊದಲು ಹೆಚ್ಚು ಸಮಯ ಉಳಿದಿಲ್ಲ ಎಂದು ಸೂಚಿಸುವ ಮಾನವರೂಪದ ಗಡಿಯಾರ. ಈ ಹಿಂದೆ 100 ಸೆಕೆಂಡುಗಳು ವಿನಾಶ ಮತ್ತು ಕತ್ತಲೆ ಎಂದು ಸೂಚಿಸಿದ ಗಡಿಯಾರವು, ಮಾನವರು ಮತ್ತೊಮ್ಮೆ ವಿನಾಶಕ್ಕೆ ಹತ್ತಿರವಾಗಿದ್ದಾರೆಂದು ಸೂಚಿಸಿತು, ಕೇವಲ 90 ಸೆಕೆಂಡುಗಳು ಉಳಿದಿವೆ. ಡೂಮ್ಸ್‌ಡೇ, ಸಾಂಕೇತಿಕ ಗಡಿಯಾರ, ಉಕ್ರೇನ್‌ನ ರಷ್ಯಾದ ಆಕ್ರಮಣದ ಸಂದರ್ಭದಲ್ಲಿ ಮಾನವೀಯತೆಯು ಸರ್ವನಾಶಕ್ಕೆ ಹತ್ತಿರದಲ್ಲಿದೆ ಎಂದು ಸೂಚಿಸುತ್ತದೆ. ಡೂಮ್ಸ್ ಡೇ ಗಡಿಯಾರ ಎಂದರೇನು? ಡೂಮ್ಸ್ ಡೇ ಎಂಬುದು ಒಂದು ಗಡಿಯಾರವಾಗಿದ್ದು, ಕೆಲವು ಮಾನದಂಡಗಳ ಮೂಲಕ ಮಾನವೀಯತೆಯು ಸ್ವಯಂ-ನಾಶಕ್ಕೆ ಎಷ್ಟು ಹತ್ತಿರದಲ್ಲಿದೆ ಎಂಬುದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ರಷ್ಯಾ-ಉಕ್ರೇನ್ ಯುದ್ಧ, ಪರಮಾಣು ಬೆದರಿಕೆಗಳು, ಸಾಂಕ್ರಾಮಿಕ ರೋಗಗಳು, ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು ಮುಂತಾದ ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸಲು ಬುಲೆಟಿನ್ ಆಫ್ ದಿ ಅಟಾಮಿಕ್ ಸೈಂಟಿಸ್ಟ್ಸ್ ಗಡಿಯಾರವನ್ನು ಪ್ರತಿ ಸೈಕಲ್‌ಗೆ 90 ಸೆಕೆಂಡುಗಳಿಗೆ ನವೀಕರಿಸಲಾಗಿದೆ. 1945 ರಲ್ಲಿ, ಆಲ್ಬರ್ಟ್ ಐನ್ಸ್ಟೈನ್ ಪರಮಾಣು ವಿಜ್ಞಾನಿಗಳ ಬುಲೆಟಿನ್ ಅನ್ನು ಸ್ಥಾಪಿಸಿದರು. ಇದರ ಅಡಿಯಲ್ಲಿ, ಡೂಮ್ಸ್…

Read More

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಗೃಹ ಸಚಿವರಿಗೆ ಪತ್ರ ರವಾನಿಸಿದ್ದಾರೆ. ರಾಹುಲ್ ಗಾಂಧಿಗೆ ಸೂಕ್ತ ಭದ್ರತೆ ನೀಡುವಂತೆ ಖರ್ಗೆ ಪತ್ರದಲ್ಲಿ ಕೋರಿದ್ದಾರೆ. ಭದ್ರತಾ ಲೋಪದಿಂದ ನಿನ್ನೆ ಪ್ರವಾಸ ರದ್ದಾಗಿರುವ ಹಿನ್ನೆಲೆಯಲ್ಲಿ ಈ ಪತ್ರ ಕಳುಹಿಸಲಾಗಿದೆ. ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ವಿವಿಧ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.ಭದ್ರತಾ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಭಾರತ್ ಜೋಡೋ ಯಾತ್ರೆ ಇಂದು ಪುನರಾರಂಭವಾಗಲಿದೆ. ಜೋಡೋ ಯಾತ್ರೆಯು ಅವಂತಿಪೋರಾದ ಚುರ್ಸೂ ಗ್ರಾಮದಿಂದ ಬೆಳಗ್ಗೆ 9 ಗಂಟೆಗೆ ಪುನರಾರಂಭಗೊಳ್ಳಲಿದೆ. ಭದ್ರತಾ ಲೋಪದ ಕಾರಣ ನೀಡಿ ನಿನ್ನೆ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು.ಭದ್ರತಾ ಲೋಪವಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿರಾಕರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿಕೊಳ್ಳುವುದನ್ನು ಮುಂಚಿತವಾಗಿ ತಿಳಿಸಲಾಗಿಲ್ಲ ಮತ್ತು ಯಾತ್ರೆಯನ್ನು ನಿಲ್ಲಿಸುವ ಮೊದಲು ಚರ್ಚಿಸಲಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇಂದು ಮಧ್ಯಾಹ್ನದ ನಂತರ ಯಾವುದೇ ಪ್ರಯಾಣ ಇರುವುದಿಲ್ಲ. ಇಂದು ಮಧ್ಯಾಹ್ನ ಪಂಡರ ಚೌಕ್‌ನಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ ಎಂದು ಕಾಂಗ್ರೆಸ್…

Read More

ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಮೇಲೆ ಸಿಸಿಬಿ ದಾಳಿ ನಡೆಸಿ 6800 ನಕಲಿ ಅಂಕಪಟ್ಟಿಗಳನ್ನ ವಶಕ್ಕೆ ಪಡೆದಿದೆ. ಮಾಹಿತಿ ಆಧರಿಸಿ ದಾಳಿ ನಡೆಸಿ ಸಿಸಿಬಿ ಪೊಲೀಸರು ಓರ್ವನನ್ನ ಬಂಧಿಸಿ 15 ವಿವಿಗಳು, ಬೋರ್ಡ್ ಗಳ ನಕಲಿ ಅಂಕಪಟ್ಟಿಯನ್ನ ವಶಕ್ಕೆ ಪಡೆದಿದ್ದಾರೆ. ವಿಕಾಸ್ ಎಂಬಾತ ಬಂಧಿತ ಆರೋಪಿ. ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ದಂಧೆ ಬಯಲಾಗಿದ್ದು 6800 ನಕಲಿ ಅಂಕಪಟ್ಟಿಗಳು ತಯಾರಿಸಲು ಬಳಸಲಾಗುತ್ತಿದ್ದ ಟೆಕ್ನಿಕಲ್ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.ಬೆಂಗಳೂರು ವಿವಿ, ಕುವೆಂಪು ವಿವಿ, ಅಣ್ಣಾಮಲೈ ವಿವಿ, ಜನಾರ್ದನ ರೈ ವಿವಿ, ಸಿಂಗಾನಿಯಾ ವಿವಿ, ಮಂಗಳೂರು ವಿವಿ ಸೇರಿ ಹಲವು ವಿವಿಗಳ ನಕಲಿ ಅಂಕಪಟ್ಟಿಗಳು ಪತ್ತೆಯಾಗಿದೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿಪಟೂರು: ಕೆ.ಬಿ.ಕ್ರಾಸ್ ನಲ್ಲಿ ಜನವರಿ 29ರಂದು ಎರಡನೇ ‘ನಮ್ಮ ಆರೋಗ್ಯ ಕೇಂದ್ರ’ ಪ್ರಾರಂಭ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ ತಿಳಿಸಿದರು. ಹೆಣ್ಣು ಮಕ್ಕಳ ಶಿಕ್ಷಣ, ಆರ್ಥಿಕ ಸ್ಥಿತಿಗತಿ ಮತ್ತು ಪ್ರಮುಖವಾಗಿ ಹೆಣ್ಣು ಮಕ್ಕಳ ಆರೋಗ್ಯ ದೃಷ್ಟಿಯಿಂದ ಮತ್ತು ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರೊಂದಿಗೆ ಹೇಳಿಕೊಂಡು ಸುಲಭವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಈ ಆರೋಗ್ಯ ಕೇಂದ್ರವನ್ನು ಗ್ರಾಮೀಣ ಭಾಗದ ಕೆ.ಬಿ. ಕ್ರಾಸ್ ನಲ್ಲಿ ತೆರೆಯಲಿದ್ದು, ಇಲ್ಲಿನ ಸುತ್ತಮುತ್ತ ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಸಿ.ಬಿ.ಶಶಿಧರ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಗೋಡೆಕೆರೆ ಶ್ರೀ ಮೃತ್ಯುಂಜಯ ದೇಶಿಯ ಕೇಂದ್ರಸ್ವಾಮೀಜಿ ಚಾಲನೆ ನೀಡಲಿದ್ದು, ಡಾ. ಹೇಮಾ ದಿವಾಕರ್, ಡಾ.ಎಲ್.ದ್ವಾರಕನಾಥ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ತಿಪಟೂರು : ಭಾರತದ ನಾರಿಶಕ್ತಿಯು ಇಂದಿನ ಆಧುನಿಕ ಜಗತ್ತಿನ ಸ್ವಾವಲಂಬಿ, ಪ್ರಗತಿ ಹಾಗೂ ಭರವಸೆಯ ಸಂಕೇತವಾಗಿ ಜಗತ್ತಿಗೆ ಮಾದರಿಯಾಗಿದೆ ಎಂದು ಗುರುಕುಲನಂದಾಶ್ರಮದ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ತಿಪಟೂರು ತಾಲ್ಲೂಕಿನ ಗುರುಕುಲ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಿಭಾಗದಿಂದ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷೆ Dr.T.R.ವಿಜಯಕುಮಾರಿ ಮಾತನಾಡಿ ಕೇವಲ ಅಡುಗೆ ಮನೆಗೆ ಸೀಮಿತಿಗೊಂಡಿದ್ದ ಹೆಣ್ಣುಮಕ್ಕಳ ಪರಿಸ್ಥಿತಿ ಇಂದು ಸುಧಾರಿಸಿ ಯಾರೂ ಊಹಿಸಲಾಗದ ಹಂತಕ್ಕೆ ಪುರುಷರಿಗೆ ಸವಾಲೆಸೆಯುವ ರೀತಿಯಲ್ಲಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವುದು ಅನುಕರಣೀಯ ಎಂದರು. ಕುಮಾರ್ ಆಸ್ಪತೆಯ ಡಾ.ಶ್ರೀಧರ್ ಮಾತನಾಡಿ ಹಿಂದಿನ ಕಾಲದಲ್ಲಿ ಕೇವಲ ಹೊಲ ಗದ್ದೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಹೆಣ್ಣು ಮಗಳು ಬದಲಾದಂತೆ ಇಂದು ಅಂತರಾಷ್ಟ್ರೀಯ ಕಂಪನಿಗಳು, ಸಾಫ್ಟ್ ವೇರ್ ಕಂಪನಿಗಳು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ತಮ್ಮ ಕಬಂಧಬಾಹುಗಳನ್ನು ಚಾಚಿ ತಮ್ಮದಾಗಿಸಿಕೊಂಡಿದ್ದಾರೆ. ಎಂದರು ಮಹಿಳಾ…

Read More

ತುರುವೇಕೆರೆ: ದ್ವಿಚಕ್ರ ವಾಹನಗಳೆರಡು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಘಟನೆ  ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಲೋಕಮ್ಮನಹಳ್ಳಿ ಗೇಟ್ ಬಳಿ ನಡೆದಿದೆ. ಅಪಘಾತದ ಪರಿಣಾಮ ಎರಡೂ ದ್ವಿಚಕ್ರ ವಾಹನಗಳ ಸವಾರರಿಗೂ  ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಸಾರ್ವಜನಿಕರ ಸಹಾಯದಿಂದ112 ಪೊಲೀಸ್ ವಾಹನದ ಸಿಬ್ಬಂದಿ ತುರುವೇಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ  ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯ ಸಂಶೋಧನಾ ಕೇಂದ್ರಕ್ಕೆ ಕಳಿಸಿದ್ದಾರೆ. ಚಿಕ್ಕನಾಯಕನಹಳ್ಳಿ ಕಲ್ಪನಾ ಓಂ ವಿಜಯ್ (42) , ಚಂದನ್  ವಿಜಯ್ (18), ಇನ್ನೊಂದು ದ್ವಿಚಕ್ರವಾಹನ ಸವಾರ ತುರುವೇಕೆರೆ ತಾಲೂಕಿನ ದಂಡಿನ  ಶಿವರ ಹೋಬಳಿಯ ಚಂದ್ರಶೇಖರ ಬಿನ್ ರಂಗಪ್ಪ ಅಪಘಾತದಲ್ಲಿ ಗಾಯಗೊಂಡವರು ಎಂದು ಗುರುತಿಸಲಾಗಿದೆ. ತುರುವೇಕೆರೆ  ಠಾಣೆಯ ಪೊಲೀಸರು  ಘಟನೆ ಸಂಬಂಧಪ್ರಕರಣದ ದಾಖಲಿಸಿಕೊಂಡು  ಮುಂದಿನ ತನಿಖೆ  ಕೈಗೊಳ್ಳಲಿದ್ದಾರೆ. ವರದಿ: ಸುರೇಶ್ ಬಾಬು ಎಂ, ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ತುಮಕೂರು: ಅಲೆಮಾರಿ ಕುಟುಂಬಗಳಿಗೆ ನಿವೇಶನಗಳಿಗಾಗಿ ಮಂಜೂರು ಮಾಡಲಾದ ಭೂಮಿಯ ಅಭಿವೃದ್ಧಿ ವೇಳೆ ಬೆಲೆ ಬಾಳುವ ಅಲಂಕಾರಿಕ ಶಿಲೆ, ಗ್ರಾನೈಟ್ ಕಲ್ಲು ದೊರಕಿದ್ದು, ಆದರೆ ಈ ಬಗ್ಗೆ PRED ಇಲಾಖೆಯವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಈ ವಿಚಾರ ತಿಳಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಕಲ್ಯಾಣಪುರ ಗ್ರಾಮದ ಸರ್ವೆ ನಂಬರ್ 83 ರಲ್ಲಿ ನಾಗವಲ್ಲಿ ಗ್ರಾಮದ ಅಲೆಮಾರಿ ಕುಟುಂಬಗಳಿಗೆ ನಿವೇಶನಗಳಿಗಾಗಿ ಎರಡು ಎಕರೆ ಭೂಮಿಯನ್ನು ಈ ಹಿಂದೆ  ಜಿಲ್ಲಾಡಳಿತ ಮಂಜೂರು ಮಾಡಿತ್ತು. ಅದರಂತೆ ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ದಿ ನಿಗಮ ಮತ್ತು ಅಲೆಮಾರಿ ಕೋಶಗಳ ಸಹಯೋಗ ಈ ಭೂಮಿಯನ್ನು ಅಭಿವೃದ್ದಿಪಡಿಸಿ ನಿವೇಶನ ಹಂಚಿಕೆ ಮಾಡಲು ಹಣವೂ ಸಹ ಬಿಡುಗಡೆ ಮಾಡಲಾಗಿತ್ತು. ಈ ಮಧ್ಯೆ ಈ ಭೂಮಿ ಅಭಿವೃದ್ದಿ ಕಾರ್ಯ ಮಾಡುವ ವೇಳೆ ಈ ಭೂಮಿಯಲ್ಲಿ ಅಪಾರ ಪ್ರಮಾಣದ ಬೆಲೆ ಬಾಳುವ ಬೃಹದಾಕಾರದ ಅಲಂಕಾರಿಕ ಶಿಲೆ, ಗ್ರಾನೈಟ್ ಕಲ್ಲು ದೊರಕಿದೆ.…

Read More

ಪಾವಗಡ: ಉತ್ತರ ಪಿನಾಕಿನಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಪಾವಗಡ ತಾಲೂಕಿನ ನಾಗಲಮಡಿಕೆಯಲ್ಲಿ ನಡೆದಿದೆ. ನಾರಾಯಣ(29) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ನಾಗಲಮಡಿಕೆಯ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಇದ್ದ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.  ಡ್ಯಾಂ ಸಮೀಪದಲ್ಲಿ  ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು, ಇದರ ಮಧ್ಯೆ ನೀರಿನಲ್ಲಿ ಈ ಯುವಕ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ನಡೆಸಿ, ಯುವಕನ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಮೃತ ಯುವಕ ನಾರಾಯಣ ವಿವಾಹಿತನಾಗಿದ್ದು, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ವರದಿ: ಮಲ್ಲಿಕಾರ್ಜುನ್, ನಾಗಲಮಡಿಕೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More