Subscribe to Updates
Get the latest creative news from FooBar about art, design and business.
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
- ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ
- ತುಮಕೂರು | ನವೆಂಬರ್ 18ರಂದು ನಗರದಲ್ಲಿ ಸಹಕಾರ ಸಪ್ತಾಹ
- ತುಮಕೂರು | ನ.30ರಂದು ರಾಪಿಡ್ ಚೆಸ್ ಟೂರ್ನಮೆಂಟ್
- ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್
- ಆಗ್ನೆಯ ಪದವೀಧರರ ಮತದಾರರರ ನೋಂದಣಿ: ನ.25ರಿಂದ ಡಿ.10ರವರೆಗೆ ಮುಂದೂಡಿಕೆ
Author: admin
ಬೆಂಗಳೂರಿನಲ್ಲಿ ರಾಜ್ಯದ ಪ್ರಥಮ ವನ್ಯಜೀವಿ ವಿಧಿ ವಿಜ್ಞಾನಗಳ ಪ್ರಯೋಗಾಲಯ ಸ್ಥಾಪನೆಯಾಗಲಿದ್ದು, ಇದಕ್ಕೆ ರಾಜ್ಯ ಸರ್ಕಾರ 12.7 ಕೋಟಿ ಅನುದಾನ ನೀಡಲು ಒಪ್ಪಿದೆ. ಮಾರ್ಚ್‌ನಿಂದ ಈ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ. ವನ್ಯಜೀವಿಗಳ ಮೇಲಿನ ಅಪರಾಧಗಳ ಬಗ್ಗೆ ತನಿಖೆ ನಡೆಸಲು, ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಈ ಪ್ರಯೋಗಾಲಯ ನೆರವಾಗಲಿದೆ.ಈವರೆಗೆ ಸ್ಯಾಂಪಲ್‌ಗಳನ್ನು ಡೆಹ್ರಾಡೂನ್ ಅಥವಾ ಹೈದರಾಬಾದ್‌ನಲ್ಲಿದ್ದ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿತ್ತು. ಕಳೆದ ಒಂದು ದಶಕದಿಂದ ಪ್ರಯೋಗಾಲಯ ಸ್ಥಾಪನೆಯ ಪ್ರಸ್ತಾವನೆ ಚರ್ಚೆಯಲ್ಲಿದ್ದು, ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಒಪ್ಪಿಗೆ ನೀಡಿದೆ. ವನ್ಯಜೀವಿಗಳ ಮೇಲಿನ ಅಪರಾಧಗಳ ಬಗ್ಗೆ ತನಿಖೆ ನಡೆಸಲು ಈ ಪ್ರಯೋಗಾಲಯ ನೆರವಾಗಲಿದೆ. ಇದರಿಂದ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ನೆರವಾಗಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಳಿಗಾಲದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಉದುರುವುದರಲ್ಲಿ ಆಶ್ಚರ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಆದಾಗ್ಯೂ, ಅತಿಯಾದ ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡದಿದ್ದರೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಕೂದಲಿನ ನಿರ್ಜಲೀಕರಣ ಮತ್ತು ನೆತ್ತಿಯ ಶುಷ್ಕತೆ ಚಳಿಗಾಲದಲ್ಲಿ ಕೂದಲು ಉದುರುವಿಕೆಗೆ ಮುಖ್ಯ ಕಾರಣಗಳಾಗಿವೆ. ಕೂದಲು ಉದುರುವುದನ್ನು ಕಡಿಮೆ ಮಾಡಲು ಈ ಹಂತಗಳನ್ನು ಅನುಸರಿಸಿ. ಚಳಿಗಾಲದಲ್ಲಿ, ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು, ವಾರಕ್ಕೆ ಎರಡು ಬಾರಿ ಎಣ್ಣೆಯಿಂದ ಸ್ನಾನ ಮಾಡುವ ಅಭ್ಯಾಸವನ್ನು ಮಾಡಿ. ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ. ಶೀತ ಋತುವಿನಲ್ಲಿ ಶಾಂಪೂ ಮತ್ತು ಕಂಡಿಷನರ್ ಅನ್ನು ಆಯ್ಕೆಮಾಡುವಾಗ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ನಿಮ್ಮ ಕೂದಲನ್ನು ಒಣಗಿಸುವ ಶ್ಯಾಂಪೂಗಳನ್ನು ತಪ್ಪಿಸಿ. ಅಂತಹ ಉತ್ಪನ್ನಗಳನ್ನು ಕೂದಲಿಗೆ ಚಳಿಗಾಲಕ್ಕೆ ಸೂಕ್ತವೆಂದು ಖಚಿತಪಡಿಸಿಕೊಂಡ ನಂತರವೇ ಬಳಸಿ.ನಿಮ್ಮ ಕೂದಲು ಒಣಗುವ ಮೊದಲು ಹೊರಗೆ ಹೋಗಬೇಡಿ.ನಿಮ್ಮ ಕೂದಲು ಸಂಪೂರ್ಣವಾಗಿ ಒಣಗಿದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಂತರ ಹೊರಬನ್ನಿ. ಪ್ರತಿದಿನ ತಲೆಗೆ ಸ್ನಾನ ಮಾಡಬೇಡಿ.ಅತಿಯಾಗಿ ತಲೆಗೆ ಸ್ನಾನ ಮಾಡುವುದರಿಂದ ಕೂದಲಿನ…
250ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದ ರಾಮನಗರದ ಪೊಲೀಸ್ ಶ್ವಾನ ‘ರಾಮ್’ ನಿಧನಹೊಂದಿದೆ. 2017ರಲ್ಲಿ ಜಿಲ್ಲಾ ಪೊಲೀಸ್ ಘಟಕಕ್ಕೆ ಸೇರ್ಪಡೆಗೊಂಡಿದ್ದ ಹೆಮ್ಮೆಯ ಶ್ವಾನ, 6 ವರ್ಷ ಸೇವೆ ಸಲ್ಲಿಸಿ ಹೃದಯಾಘಾತದಿಂದ ಮೃತಪಟ್ಟಿದೆ. 30 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಶಂಸೆಗೆ ಪಾತ್ರವಾಗಿತ್ತು. ಚನ್ನಪಟ್ಟಣದ ಡಿಎಆರ್ ಕವಾಯತು ಮೈದಾನದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ‘ರಾಮ್’ ನಿಧನಕ್ಕೆ ಪೊಲೀಸ್ ಅಧಿಕಾರಿಗಳು ಕಂಬನಿ ಮಿಡಿದರು. ರಾಮನಗರ ಜಿಲ್ಲೆಯ ಪೊಲೀಸ್ ಘಟಕದಲ್ಲಿ ಸುಮಾರು 6 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾ ಶ್ವಾನ ರಾಮ್ 250 ಕ್ಕೂ ಹೆಚ್ವು ಪ್ರಕರಣಗಳಲ್ಲಿ ಭಾಗಿಯಾಗಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ನಿರತವಾಗಿತ್ತು. ಈ ಪೈಕಿ ಪೊಲೀಸರ ಕೈಯಿಂದಲೂ ಪತ್ತೆಹಚ್ಚಲಾಗದ 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರಾಮ್ ಶ್ವಾನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿತ್ತು. ಇದರಿಂದಾಗಿಯೇ ಜಿಲ್ಲಾ ಪೊಲೀಸ್ ಘಟಕದಲ್ಲಿ ಅತ್ಯಂತ ಪ್ರೀತಿ ಪಾತ್ರವಾಗಿತ್ತು. ಎಲ್ಲರ ಸ್ನೇಹವನ್ನು ಬಯಸದಿದ್ದರೂ, ಒಮ್ಮೆ ಪೊಲೀಸರನ್ನು ಹಚ್ಚಿಕೊಂಡರೆ ಅವರಿಗೆ ತುಂಬಾ ಆತ್ಮೀಯತೆಯಿಂದ ಇರುತ್ತಿತ್ತು. ಆದರೆ, ಇಂದು…
ಭಾರತ ಇಂದು ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಯನ್ನು ಗುರಿಯಾಗಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಮೊಣಕಾಲು ಗಾಯಗೊಂಡಿದ್ದ ಸಂಜು ಸ್ಯಾಮ್ಸನ್ ಇಂದು ಆಡುವುದಿಲ್ಲ. ಸಂಜು ಬದಲಿಗೆ ವಿದರ್ಭ ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡಿದೆ.ಸಂಜು ಬದಲಿಗೆ ರಿತುರಾಜ್ ಗಾಯಕ್ವಾಡ್ ಅಥವಾ ರಾಹುಲ್ ತ್ರಿಪಾಠಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.ಸಂಜು ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಈ ಘಟನೆ ನಡೆದಿದೆ. ಹೆಚ್ಚಿನ ಪರೀಕ್ಷೆಗಳಿಗಾಗಿ ಬಿಸಿಸಿಐ ವೈದ್ಯಕೀಯ ತಂಡ ಮುಂಬೈನಲ್ಲಿ ಅವರೊಂದಿಗಿದೆ. ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಎರಡನೇ ಟ್ವೆಂಟಿ-20 ಇಂದು ಪುಣೆಯಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಸರಣಿಯಲ್ಲಿ ಭರವಸೆ ಜೀವಂತವಾಗಿರಿಸಲು ಶ್ರೀಲಂಕಾಗೆ ಗೆಲುವು ಅತ್ಯಗತ್ಯ. ಎಲ್ಲಾ ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಸರಣಿ ನಿರ್ಣಾಯಕವಾಗಿದೆ. ಶ್ರೀಲಂಕಾ ತಂಡದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇಲ್ಲ. MCA ಸ್ಟೇಡಿಯಂನಲ್ಲಿ ಆಡಿದ ಮೂವತ್ನಾಲ್ಕು ಟ್ವೆಂಟಿ-20 ಗಳಲ್ಲಿ,…
ಮಹಾರಾಷ್ಟ್ರದಲ್ಲಿ ಸೆಲ್ಫಿ ಕ್ರೇಜ್ ಒಬ್ಬರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ವರಂದ ಘಾಟ್ ರಸ್ತೆಯಲ್ಲಿ ಮಂಗಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಅಬ್ದುಲ್ ಶೇಖ್ ಎಂಬ ವ್ಯಕ್ತಿ 500 ಅಡಿ ಕಮರಿಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಅವರ ಮೃತದೇಹ ಪತ್ತೆಯಾಗಿದೆ. ಕಾರಿನಲ್ಲಿ ಕೊಂಕಣಕ್ಕೆ ತೆರಳುತ್ತಿದ್ದ ಅಬ್ದುಲ್, ವರಂದಾ ಘಾಟ್ ರಸ್ತೆಯ ವಾಕ್ ಜೈ ದೇವಸ್ಥಾನದ ಬಳಿ ನಿಲ್ಲಿಸಿ, ಮಂಗಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದರು.ಆಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಉತ್ತರ ಪ್ರದೇಶದಲ್ಲಿ ನಜ್ರಾನಾ ಎಂಬ ಮಹಿಳೆ ಹೊಟ್ಟೆ ನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಮತ್ತು ಸಿಬ್ಬಂದಿ ಮಹಿಳೆಯ ಹೆರಿಗೆಗೆ ಸಹಕರಿಸಿದರು. ಆದರೆ ಆಪರೇಷನ್ ವೇಳೆ ಟವೆಲ್ ಮರೆತು ಹೊಟ್ಟೆಗೆ ಹೊಲಿಗೆ ಹಾಕಿದ್ದಾರೆ. ಇದರಿಂದ ನಜ್ರಾನಾಗೆ ಹೊಟ್ಟೆನೋವು ಉಂಟಾಗಿದೆ. ತೀವ್ರ ಹೊಟ್ಟೆನೋವಿನ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ್ದು, ವಿಪರೀತ ಚಳಿಯಿಂದಾಗಿ ಎಂದು ಹೇಳಿದ್ದಾರೆ. ಆದರೆ ಹೊಟ್ಟೆ ನೋವು ಕಡಿಮೆಯಾಗದ ಕಾರಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು, ಮತ್ತೊಮ್ಮೆ ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ ಟವೆಲ್ ಹೊರತೆಗೆದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನೆರೆಯ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ದೇಶದಾದ್ಯಂತ ಕಠಿಣ ಕ್ರಮಗಳಿಗೆ ಕಾರಣವಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ಘೋಷಿಸಲಾದ ಇಂಧನ ಉಳಿತಾಯ ಕ್ರಮಗಳಿಂದಾಗಿ ಮಾರುಕಟ್ಟೆಗಳು ರಾತ್ರಿ 8.30 ಕ್ಕೆ ಮತ್ತು ಉತ್ಸವ ಸಭಾಂಗಣಗಳನ್ನು ಬೆಳಿಗ್ಗೆ 10 ಗಂಟೆಗೆ ಮುಚ್ಚಲಾಗುವುದು ಎಂದು ಪಾಕಿಸ್ತಾನದ ಸಚಿವ ಖವಾಜಾ ಆಸಿಫ್ ಘೋಷಿಸಿದ್ದಾರೆ. ಅಲ್ಲದೆ, ಫೆಬ್ರವರಿಯಿಂದ ಬಲ್ಬ್‌ಗಳ ಉತ್ಪಾದನೆ ಮತ್ತು ಜುಲೈನಿಂದ ಗುಣಮಟ್ಟವಿಲ್ಲದ ಫ್ಯಾನ್‌ಗಳ ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎಂದು ತಿಳಿದುಬಂದಿದೆ. ಸರಕಾರಿ ಕಚೇರಿಗಳಲ್ಲಿ ಶೇ.30ರಷ್ಟು ವಿದ್ಯುತ್ ಉಳಿತಾಯಕ್ಕೆ ಕ್ರಮಕೈಗೊಳ್ಳಲಾಗುತ್ತಿದ್ದು, ಇಂಧನ ಉಳಿತಾಯ ಯೋಜನೆಗಳನ್ನು ಕೂಡಲೇ ಜಾರಿಗೊಳಿಸಲಾಗುವುದು ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಅಮೆಜಾನ್ ಈಗಾಗಲೇ ತನ್ನ ಕೆಲವು ಉದ್ಯೋಗಿಗಳನ್ನು ವಜಾಗೊಳಿಸಿದೆ. ಮತ್ತೊಮ್ಮೆ, ಅಮೆಜಾನ್ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ವೆಚ್ಚ ಕಡಿತ ಕ್ರಮಗಳ ಭಾಗವಾಗಿ, ಏಕಕಾಲದಲ್ಲಿ 18,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಆದಾಗ್ಯೂ, ಜನವರಿ 18 ರಂದು ಯಾರನ್ನು ವಜಾಗೊಳಿಸಲಾಗುವುದು ಎಂಬುದನ್ನು ಪ್ರಕಟಿಸುವುದಾಗಿ ಅಮೆಜಾನ್ ಮುಖ್ಯ ಕಾರ್ಯನಿರ್ವಾಹಕ ಆಂಡಿ ಜೇಸಿ ಹೇಳಿದ್ದಾರೆ. ಅಮೆಜಾನ್ ಪ್ರಸ್ತುತ 3 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಇತ್ತೀಚಿನ ನಿರ್ಧಾರದಿಂದ ಶೇಕಡಾ 6 ರಷ್ಟು ಉದ್ಯೋಗ ನಷ್ಟವಾಗುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಇಡೀ ವಿಶ್ವದಲ್ಲೇ ಬೆಂಗಳೂರು ಮಹಾನಗರ ಅತ್ಯಂತ ದುಬಾರಿ ನಾಯಿಗಳಿರುವ ನಗರವಂತೆ! ಇದು ನಿಮಗೆ ತಿಳಿದಿತ್ತೇ?! ಕಡಬೊಮ್ ಕೆನ್ನೆಲ್ಸ್ ಎಂಬ ಹೆಸರಿನ ಸಂಸ್ಥೆಯೊಂದರ ಮಾಲೀಕರು ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಸತೀಶ್ ಅವರು ಅತ್ಯಂತ ದುಬಾರಿ ನಾಯಿಗಳನ್ನು ಖರೀದಿಸುವಲ್ಲಿ ನಿಪುಣರು. ಇವರು ಇತ್ತೀಚೆಗೆ ಖರೀದಿಸಿರುವ ನಾಯಿಯ ಬೆಲೆ ಬರೋಬ್ಬರಿ ರೂ.೨೦ ಕೋಟಿಗಳಂತೆ. ಈ ನಾಯಿ ಕಾಕೇಸಿಯನ್ ಷೆಪರ್ಡ್ ಜಾತಿಗೆ ಸೇರಿದ್ದು, ಬಹುಪಾಲು ರಷ್ಯಾ, ಟರ್ಕಿ, ಅಮೇನಿಯಾ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಮಾತ್ರ ಲಭಿಸುತ್ತದೆ. ಆದರೆ ಭಾರತದಲ್ಲಿ ಈ ಜಾತಿಯ ನಾಯಿ ಬಹಳ ಅಪರೂಪ. ಈ ಜಾತಿಯ ನಾಯಿಗಳು, ಬಹಳ ಧೈರ್ಯ, ವಿಶ್ವಾಸ, ಭಯರಹಿತ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳಂತೆ. ಇವು ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿರುತ್ತವೆ ಮತ್ತು ೧೦-೧೨ ವರ್ಷ ಜೀವಿಸುತ್ತವಂತೆ. ಅಮೇರಿಕನ್ ಕೆನ್ನೆಲ್ ಕ್ಲಬ್ ನ ಪ್ರಕಾರ, ಈ ಕಾಕೇಸಿಯನ್ ಷೆಪರ್ಡ್ಸ್ ಜಾತಿಯ ನಾಯಿಗಳನ್ನು ಭೂಮಿ ಒತ್ತುವರಿಯನ್ನು ತಡೆಗಟ್ಟಲು, ಹಸು ಹಾಗೂ ಇತರೆ ಸಾಕುಪ್ರಾಣಿಗಳಂತಹ ಜಾನುವಾರುಗಳನ್ನು ನರಿ,…
ಬೆಳಗಾವಿ: ಯಲ್ಲಮ್ಮನ ಗುಡ್ಡಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನ ಮರಕ್ಕೆ ಡಿಕ್ಕಿಯಾಗಿ 6 ಜನ ಸಾವನ್ನಪ್ಪಿದ್ದ ಭೀಕರ ಘಟನೆ ರಾಮದುರ್ಗ ತಾಲ್ಲೂಕಿನ ಚಿಂಚನೂರು ಗ್ರಾಮದ ವಿಠ್ಠಲ ದೇವಸ್ಥಾನದ ಹತ್ತಿರ ನಡೆದಿದೆ. ಗೂಡ್ಸ್ ವಾಹನ ಆಲದ ಮರಕ್ಕೆ ಗುದ್ದಿದ್ದರಿಂದ ಸ್ಥಳದಲ್ಲಿ ಐವರು ಮತ್ತು ಆಸ್ಪತ್ರೆಯಲ್ಲೊಬ್ಬರು ಅಸುನೀಗಿದ್ದಾರೆ.ಮೃತರನ್ನು ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ನಿವಾಸಿಗಳಾದ ಹನಮವ್ವ (25), ದೀಪಾ (32), ಸವಿತಾ(17), ಸುಪ್ರಿತಾ(11), ಮಾರುತಿ (42), ಇಂದರವ್ವಾ (24) ಎಂದು ಗುರುತಿಸಲಾಗಿದೆ. ಇವರು ಮಧ್ಯ ರಾತ್ರಿ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಯಾತ್ರಾರ್ಥಿ ಗಳ ವಾಹನ ಅಪಘಾತವಾಗಿ 6 ಜನ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಭೇಟಿ ನೀಡಿದ್ದಾರೆ. ಪ್ರಕರಣ ಕಟಕೋಳ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy