Subscribe to Updates
Get the latest creative news from FooBar about art, design and business.
- ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ
- ತುಮಕೂರು | ನವೆಂಬರ್ 18ರಂದು ನಗರದಲ್ಲಿ ಸಹಕಾರ ಸಪ್ತಾಹ
- ತುಮಕೂರು | ನ.30ರಂದು ರಾಪಿಡ್ ಚೆಸ್ ಟೂರ್ನಮೆಂಟ್
- ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್
- ಆಗ್ನೆಯ ಪದವೀಧರರ ಮತದಾರರರ ನೋಂದಣಿ: ನ.25ರಿಂದ ಡಿ.10ರವರೆಗೆ ಮುಂದೂಡಿಕೆ
- ಮಹಿಳೆಯ ಸಾವಿನ ಬಗ್ಗೆ ಅನುಮಾನ: ಪುತ್ರನಿಂದ ದೂರು
- ವಿವಿಧ ಬ್ಯಾಂಕ್ ಗಳ ನಿಷ್ಕ್ರಿಯ ಖಾತೆಗಳಲ್ಲಿದೆ 110.45 ಕೋಟಿ ಹಣ!
- ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ಅರಣ್ಯ ಇಲಾಖೆ ನಿದ್ರಾವಸ್ಥೆಗೆ ಜಾರಿದೆ: ಅಧಿಕಾರಿಗಳಿಗೆ ಉಪಲೋಕಾಯುಕ್ತರಿಂದ ತರಾಟೆ
Author: admin
ಭಾರತ ಐಕ್ಯತಾ ಯಾತ್ರೆ 3,000 ಕಿ.ಮೀ ದೂರವನ್ನು ಕ್ರಮಿಸಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆ 3,000 ಕಿ.ಮೀ ದೂರವನ್ನು ಕ್ರಮಿಸಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಐತಿಹಾಸಿಕ ಪಯಣದಲ್ಲಿ ನಮ್ಮ ಜೊತೆಯಾದ ಸಮಸ್ತ ಭಾರತೀಯರಿಗೆ ಕಾಂಗ್ರೆಸ್ ಪಕ್ಷ ಆಭಾರಿಯಾಗಿದೆ ಎಂದಿದ್ದಾರೆ. ಭಾರತ ಐಕ್ಯತಾ ಯಾತ್ರೆಯ ಆರಂಭದ ದಿನಗಳಲ್ಲಿ ಬಿಜೆಪಿಯವರು ನಡೆಸಿದ ವ್ಯವಸ್ಥಿತ ಅಪಪ್ರಚಾರ, ತೇಜೋವಧೆ, ಅವಮಾನ ಇವುಗಳನ್ನೇ ಯಾತ್ರೆಯ ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತಿಸಿಕೊಂಡ ರಾಹುಲ್ ಗಾಂಧಿ ಅವರ ಸಂಯಮ, ಬದ್ಧತೆ ಮತ್ತು ಇಚ್ಛಾಶಕ್ತಿಗೆ ನನ್ನದೊಂದು ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಈ ಯಾತ್ರೆಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ, ನೊಂದವರಿಗೆ ಭರವಸೆಯಾಗಿ, ಅನ್ನದಾತನಿಗೆ ಹೆಗಲಾಗಿ, ಯುವಕರಿಗೆ ಆಶಾಕಿರಣವಾಗಿ, ಎಲ್ಲರೊಳಗೊಬ್ಬರಾಗಿ ಹೆಜ್ಜೆಹಾಕಿದ್ದು ಅವರ ನೈಜ ವ್ಯಕ್ತಿತ್ವವನ್ನು ಜಗದೆದುರು ಅನಾವರಣಗೊಳಿಸಿದೆ ಎಂದಿದ್ದಾರೆ. ಒಡೆದಿರುವ ಮನೆ…
ತಿಪಟೂರು: ಹಿಂದುಳಿದ ಸಮುದಾಯಗಳು ಶಿಕ್ಷಣ, ಸಂಘಟನೆ, ಹೋರಾಟ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ, ಸಂಘಟನೆ ಇಲ್ಲದೆ, ಶಕ್ತಿ ಇಲ್ಲ ಎಂದು ದಾಬಸಪೇಟೆ ಹೆಗ್ಗುಂದದ ಶ್ರೀ ಹೊನಕಲ್ಲು ಮಲ್ಲೇಶ್ವರ ಪೀಠಾಧ್ಯಕ್ಷರಾದ ಡಾ.ಬಸವ ರಮಾನಂದ ಸ್ವಾಮೀಜಿ ಹೇಳಿದರು. ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದ ಶ್ರೀಗಳು, ಸಂಘಟನೆ ಎಂಬುದು ಜೇನುಗೂಡಿನಂತೆ ಇರಬೇಕು, ಶಿಕ್ಷಣದಲ್ಲಿ ಪ್ರಜ್ಞಾವಂತರಾದರೆ ಅಭಿವೃದ್ಧಿ ಹೊಂದಲು ಸಾಧ್ಯ, ಆತ್ಮಶಕ್ತಿ ಕುಗ್ಗಿಸಿಕೊಳ್ಳದೆ ಹೋರಾಟ ಮಾಡುವ ಮನೋಭಾವ ನಮ್ಮಲ್ಲಿ ಬರಬೇಕು, ಚುನಾವಣೆ ಸಂದರ್ಭದಲ್ಲಿ ನಾವು ಹಾಕುವ ಮತಕ್ಕೆ ಶಕ್ತಿ ಬಹಳಷ್ಟು ಇದೆ, ನಮ್ಮ ಸಮಸ್ಯೆ ಕೇಳುವ ಯೋಗ್ಯರಿಗೆ ಮತ ಹಾಕಬೇಕು, ಯಾವುದೇ ಮೂಲಭೂತ ಸಮಸ್ಯೆ ಇದ್ದರೂ ಕೂಡ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಪ್ರಶ್ನಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು. ಕಲ್ಪತರು ನಾಡಿನಲ್ಲಿ ಕೆ.ಟಿ.ಶಾಂತಕುಮಾರ್ ಅವರು ಜನ ನಾಯಕರಾಗಿ ಜನ ಸೇವೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ, ಈ ತಾಲೂಕಿನ ಮನೆ…
ತಿಪಟೂರು: ಲಾರಿಯ ಟೈರ್ ಬ್ಲಾಸ್ಟ್ ಆಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಿಪಟೂರು ತಾಲೂಕಿನ ಕೆ.ಬಿ. ಕ್ರಾಸ್ ಬಳಿಯಲ್ಲಿ ನಡೆದಿದ್ದು, ಲಾರಿಯ ಟಯರ್ ಚೆಕ್ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಲಾರಿ ಚಾಲಕ ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ವೆಂಕಟೇಶ್(43) ಮೃತಪಟ್ಟ ಚಾಲಕ ಎಂದು ಗುರುತಿಸಲಾಗಿದೆ. ಲಾರಿ ಚಾಲನೆಯ ವೇಳೆ ಟೈರ್ ನಲ್ಲಿ ಸಮಸ್ಯೆ ಇರುವ ಬಗ್ಗೆ ಅನುಮಾನಗೊಂಡ ಚಾಲಕ ಕೆ.ಬಿ.ಕ್ರಾಸ್ ಬಳಿ ಲಾರಿ ನಿಲ್ಲಿಸಿ, ಟೈರ್ ಬಳಿ ಚೆಕ್ ಮಾಡಲು ಹೋಗಿದ್ದು, ಇದೇ ವೇಳೆಗೆ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಲಾರಿ ಟೈರ್ ಬ್ಲಾಸ್ಟ್ ಆದ ತೀವ್ರತೆಗೆ ಚಾಲಕ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಿಪಟೂರು: ಶ್ರೀ ಗುರು ಸಿದ್ದರಾಮೇಶ್ವರರ 850ನೇ ಜಯಂತಿ ಮಹೋತ್ಸವವನ್ನು ಜನವರಿ 14 ಮತ್ತು 15ರಂದು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು, ಈ ಮಹೋತ್ಸವಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದರು. ಸಿದ್ಧರಾಮೇಶ್ವರ ಪಾಲಿಟೆಕ್ನಿಕಲ್ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜನವರಿ 14ರಂದು ಬೆಳಿಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಮೈಸೂರು ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಹಾಗೂ ಗೋಡೆಕೆರೆ ಮೃತ್ಯುಂಜಯ ದೇಸಿ ಕೇಂದ್ರ ಸ್ವಾಮೀಜಿ ಹಾಗೂ ಕುಪೂರ್ ತಮಡಿಯಲ್ಲಿ ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಸ್.ಮಧುಸುಧನ್ ಮಾತನಾಡಿ, ಕೆರಗೋಡಿ ರಂಗಾಪುರ ಗುರು ಪರದೇಶಿ ಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಎರಡು ದಿನ ಶ್ರೀ ಗುರು ಸಿದ್ದರಾಮೇಶ್ವರ 850ನೇ ಜಯಂತಿ ಅದ್ದೂರಿಯಾಗಿ ಆಚರಿಸಲಾಗುವುದು,…
ಮಧುಗಿರಿ : ಪ್ರಸಾರ ಮಾಧ್ಯಮದಿಂದ ಮನುಷ್ಯರಲ್ಲಿನ ಸಂಸ್ಕಾರಕ್ಕೆ ದಕ್ಕೆ ಬರುತ್ತಿದೆ ಎಂದು ಸರ್ವಧರ್ಮ ಸಮನ್ವಯ ಗುರುಪೀಠದ ಪೀಠಾಧ್ಯಕ್ಷ ಶ್ರೀ ಶ್ರೀ ಸುಗುಣಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ನಿಟ್ಟರ ಹಳ್ಳಿಯ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ನಿಜಶರಣ ಕಮ್ಮಾರ ಕಲ್ಲಯ್ಯನವರ ಸಂಸ್ಕರಣೆಯ ಮೂರನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಹಿರಿಯ ಚೇತನರಿಗೆ ಕುಶಲಕರ್ಮಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಜ್ಞಾನದ ಕೊರತೆ, ಧಾರ್ಮಿಕ ವ್ಯವಸ್ಥೆಯ ಕೊರತೆ ಇರುವುದರಿಂದ ಸಂಸ್ಕಾರ ಮರೆಯಾಗುತ್ತಿದೆ ಎಂದರು. ಊರಿಗೆ ಒಬ್ಬ ಕಮ್ಮಾರ ಅವಶ್ಯಕ. ಕಮ್ಮಾರ ಇಲ್ಲದ ಮನೆ ಜೇಡ ಹತ್ತಿದ ಮನೆಯ ತರಹ. ಹುಟ್ಟು ಸಾವು ಎಲ್ಲದ್ದಕ್ಕೂ ಕಮ್ಮಾರ ಅವಶ್ಯಕ. ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ಕ್ಷೇತ್ರಗಳಲ್ಲಿ ಕಮ್ಮಾರರ ಅವಶ್ಯ ಕತೆ ಇದೆ. ಆದರೆ ಸರ್ಕಾರದಲ್ಲಿ ಕಮ್ಮಾರರಿಗೆ ಯಾವುದೇ ವ್ಯವಸ್ಥೆ ಇಲ್ಲವಾಗಿದೆ. ಇದಕ್ಕೆ ಮುಖ್ಯ ಕಾರಣ ಹೋರಾಟದ ದೌರ್ಬಲ್ಯ ಎಂದ ಅವರು ಮುಂದಿನ ದಿನಗಳಲ್ಲಿ ಮನೆ ಮನೆಗಳಲ್ಲಿ ಹೋರಾಟಗಾರರು ಹುಟ್ಟಿಕೊಳ್ಳಬೇಕು ಕಮ್ಮಾರರು ಆಧುನಿಕ…
ಹೆಚ್.ಡಿ.ಕೋಟೆ: ನಿಗದಿತ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ತಾಲ್ಲೂಕಿನ ಮಾದಪುರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹೆಚ್.ಡಿ.ಕೋಟೆ ಹಾಗೂ ಮೈಸೂರಿಗೆ ಮುಖ್ಯರಸ್ತೆಯಲ್ಲಿರುವ ಮಾದಪುರ ಗ್ರಾಮ ಒಂದು ಕೇಂದ್ರಸ್ಥಾನವಾಗಿದೆ. ಮಾದಪುರ ಗ್ರಾಮಕ್ಕೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಬಂದು ಅಲ್ಲಿಂದ ಮೈಸೂರು ಮತ್ತು ಹೆಚ್.ಡಿ.ಕೋಟೆಗೆ ವ್ಯಾಸಂಗ ಮಾಡಲು ವಿದ್ಯಾರ್ಥಿಗಳು ತೆರಳುತ್ತಾರೆ. ಆದರೆ, ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಕೆ ಎಸ್ ಆರ್ ಟಿ ಸಿ ಸರಿಯಾದ ಸಾರಿಗೆಯ ವ್ಯವಸ್ಥೆ ಕಲ್ಪಿಸುತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸರ್ಕಾರ ಮತ್ತು ಶಾಸಕರ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಯಕೃತ್ತು ದೇಹದ ಅತಿದೊಡ್ಡ ಮತ್ತು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ನಮ್ಮ ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಕೃತ್ತು ನಮ್ಮ ದೇಹದ ರಾಸಾಯನಿಕ ಪ್ರಯೋಗಾಲಯ ಎಂದು ಕರೆಯಲ್ಪಡುವ ಒಂದು ಅಂಗವಾಗಿದೆ. ಯಕೃತ್ತು ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿದೆ. ಯಕೃತ್ತು ದೇಹದ ಇತರ ಅಂಗಗಳು ಕಾರ್ಯನಿರ್ವಹಿಸುತ್ತಿರುವಾಗ ಸರಿಯಾಗಿ ಕಾರ್ಯನಿರ್ವಹಿಸುವ ಒಂದು ಅಂಗವಾಗಿದೆ. ನಮ್ಮ ದೇಹವು ವಿಶ್ರಾಂತಿಯಲ್ಲಿದ್ದಾಗಲೂ ಯಕೃತ್ತು ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಯಾವುದೇ ಅಂಗವು ಹೊಂದಿರದ ವೈಶಿಷ್ಟ್ಯವೆಂದರೆ ಸ್ವತಃ ಪುನರುತ್ಪಾದಿಸುವ ಸಾಮರ್ಥ್ಯ.ಹಾನಿಗೊಳಗಾದ ಪ್ರದೇಶವನ್ನು ತೆಗೆದುಹಾಕಿದರೂ, ಯಕೃತ್ತು ಮತ್ತೆ ಬೆಳೆಯುತ್ತದೆ. ಅದಕ್ಕಾಗಿಯೇ ಲಿವರ್ ದಾನ ಮಾಡುವಾಗ ದಾನಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಅದನ್ನು ಆರೋಗ್ಯಕರವಾಗಿ ಇಡುವುದು ಮುಖ್ಯ. ನಾವು ಸಾಮಾನ್ಯವಾಗಿ ಸೇವಿಸುವ ಆಹಾರಗಳ ಹೊರತಾಗಿ, ಪ್ರತಿದಿನ ಕೆಲವು ಹಣ್ಣುಗಳನ್ನು ತಿನ್ನುವುದು ಯಕೃತ್ತಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಣ್ಣುಗಳು ನಿಮಗೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಲಿವರ್ ಆರೋಗ್ಯಕ್ಕಾಗಿ ಯಾವ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಬೇಕು ಎಂದು ನೋಡೋಣ. 1.ಬೆರ್ರಿ: ಬೆರ್ರಿಗಳಲ್ಲಿ ಉತ್ಕರ್ಷಣ…
ತಮಿಳುನಾಡು :ಪಲ್ಲಡಂ ಸಮೀಪದ ಗಣಪತಿಪಾಳ್ಯಂ ಪಂಚಾಯಿತಿ ಮಲಯಂಪಾಳ್ಯದಲ್ಲಿ ವಾಸವಿದ್ದ ಮರುದಾಚಲಂ ಅವರ ಪುತ್ರ ಶಿವಾನಂದಂ ಅವರು ಸಲೂನ್ ನಡೆಸುತ್ತಿದ್ದರು. ಶಿವಾನಂದ ಅವರ ತಾಯಿ ಕಂದಮ್ಮಾಳ್ ಅವರು ಕೆಲವು ತಿಂಗಳ ಹಿಂದೆ ನಿಧನರಾದರು. ತಾಯಿಯ ಸಾವಿನ ದುಃಖದಿಂದ ಶಿವಾನಂದ ಅವರು ನರಳಾಡುತ್ತಿದ್ದರು ಎನ್ನಲಾಗಿದೆ. ನಿನ್ನೆ ಶಿವಾನಂದಂ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮೇಲ್ಛಾವಣಿಯ ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊರಗೆ ಹೋಗಿದ್ದ ತಂದೆ ಮನೆಗೆ ಹಿಂತಿರುಗಿ ನೋಡಿದಾಗ ಮಗ ನೇಣು ಬಿಗಿದುಕೊಂಡಿರುವುದು ಕಂಡು ಬೆಚ್ಚಿಬಿದ್ದಿದ್ದಾನೆ. ಈ ಬಗ್ಗೆ ಪಲ್ಲಡಂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮರುದಾಚಲಂ ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮೇಲಕ್ಕೆತ್ತಿ ಪಲ್ಲಡಂ ಸರಕಾರಿ ಆಸ್ಪತ್ರೆಗೆ ರವಾನಿಸಿ ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಪಶ್ಚಿಮ ಬಂಗಾಳದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದಿದ್ದಾರೆ. ಹೊಸ ವರ್ಷಾಚರಣೆಯಂದು ದೇಶವನ್ನೇ ಬೆಚ್ಚಿ ಬೀಳಿಸುವ ಘಟನೆ ಜಲ್ಪೈಗುರಿಯಲ್ಲಿ ನಡೆದಿದೆ. ಇದಾದ ಬಳಿಕ ಸಿಟ್ಟಿಗೆದ್ದ ಸ್ಥಳೀಯರು ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯವರು ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ತಂದೆ ನೀಡಿರುವ ದೂರಿನ ಪ್ರಕಾರ ಆರೋಪಿಗಳ ಪೈಕಿ ಒಬ್ಬರೇ ಸ್ವತಃ ಕರೆ ಮಾಡಿ ಮಗಳ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಮನೆಯವರು ಬಂದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಮೃತಬಾಲಕಿಗೆ ಯುವಕರು ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಬಗ್ಗೆ ಬಾಲಕಿಯ ತಂದೆ ಆರೋಪಿಸಿದ್ದಾರೆ.ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯರು ಜಮಾಯಿಸಿ ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ಹತೋಟಿಗೆ ತರಲಾಯಿತು. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ಹೊಸ ವರ್ಷದಲ್ಲಿ ಅಪರಾಧಗಳನ್ನು ತಡೆಯಲು ಪೊಲೀಸರು ಪ್ರಾಣಿಬಲಿ ಮಾಡಿರುವ ಘಟನೆ ತಮಿಳುನಾಡಿನ ದಿಂಡಿಗಲ್ ನ ವಡಮಧುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ವೇದಸಂದೂರು ತಾಲೂಕಿನ ಅಯ್ಯಲೂರಿನ ವಂದಿ ಕರುಪ್ಪನಸಾಮಿ ದೇವಸ್ಥಾನದಲ್ಲಿ ಪ್ರಾಣಿ ಬಲಿ ನಡೆಯಿತು. ವೇದಸಂದೂರು ಉಪಾಧೀಕ್ಷಕಿ ದುರ್ಗಾದೇವಿ, ವಡಮಧುರ ಠಾಣೆ ಇನ್ಸ್ ಪೆಕ್ಟರ್ ಜ್ಯೋತಿ ಮುರುಗನ್ ನೇತೃತ್ವದಲ್ಲಿ ಪ್ರಾಣಿ ಬಲಿ ನಡೆಯಿತು. ಮೇಕೆ ಬಲಿ ನೀಡಿ ಪೊಂಗಲ್ ಅರ್ಪಿಸಿ ಪೊಲೀಸ್ ತಂಡ ವಾಪಸಾದರು. ದೇವಸ್ಥಾನದಲ್ಲಿ ನಡೆದ ಸಂತೆಯಲ್ಲಿ ಬಲಿ ನೀಡಿದ ಮೇಕೆಗಳನ್ನು ಹುರಿದು ಬಡಿಸಲಾಯಿತು. ಹೊಸ ವರ್ಷದಲ್ಲಿ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧವನ್ನು ಕಡಿಮೆ ಮಾಡಲು ಪ್ರಾಣಿ ಬಲಿ ದೇವರಿಗೆ ಅರ್ಪಿಸುವ ಭಾಗವಾಗಿತ್ತು. ತಮಿಳುನಾಡಿನ ವಿವಿಧ ದೇವಾಲಯಗಳಲ್ಲಿ ಪೂಜೆಯ ಅಂಗವಾಗಿ ಪ್ರಾಣಿ ಬಲಿಗಳನ್ನು ನಡೆಸಲಾಗುತ್ತದೆ. 1960ರಲ್ಲಿ ಕೇಂದ್ರ ಸರ್ಕಾರ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ ದೇಶದ ದೇವಸ್ಥಾನಗಳಲ್ಲಿ ಪ್ರಾಣಿಬಲಿ ನಿಷೇಧಿಸಿತ್ತು. ಈ ಆದೇಶದ ಹೊರತಾಗಿಯೂ, ತಮಿಳುನಾಡಿನಲ್ಲಿ ಕಾನೂನು ಪರಿಪಾಲಕರಿಂದಲೇ ಪ್ರಾಣಿಬಲಿ ನಡೆದಿರುವುದು ವಿಪರ್ಯಾಸ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…