Author: admin

ಬೆಳಗಾವಿ : ಮೋಟರ್ ರಿವೈಂಡಿಂಗ್ ಪಂಪಸೆಟ್ ರಿಪೇರಿ ಮತ್ತು ಸರ್ವೀಸಿಂಗ್ 30 ದಿನಗಳ ತರಬೇತಿಯನ್ನು 2023 ಜನವರಿ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. `ತರಬೇತುದಾರರಿಗೆ ಇರಬೇಕಾದ ಅರ್ಹತೆಗಳು : 18 ರಿಂದ 45 ವಯಸ್ಸಿನವರಾಗಿರಬೇಕು, ಗಾಮೀಣ ಪ್ರದೇಶದವರಾಗಿದ್ದು, BPL ಕಾರ್ಡ್ ಹೊಂದಿರಬೇಕು. BPL, ಕಾರ್ಡ್ ಆಧಾರ ಕಾರ್ಡ್ ,ಬ್ಯಾಂಕ್ ಪಾಸ್ ಬುಕ್, 4 ಭಾವಚಿತ್ರಗಳು ಸಲ್ಲಿಸಬೇಕು. ತರಬೇತಿಯಲ್ಲಿ ಊಟ, ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಜನವರಿ 4, 2023, ಆಗಿದ್ದು, ಸಂಸ್ಥೆಯ ಅರ್ಜಿ ನಮೂನೆ ಭರ್ತಿ ಮಾಡಿ ನೇರವಾಗಿ ಕಾರ್ಯಾಲಯಕ್ಕೆ, ಪೋಸ್ಟ್ ಮುಖಾಂತರ ಅಥವಾ ಗೂಗಲ್ ಪಾರ್ಮ https://docs.google.com/forms/d/e/1FAIpQLSdZEI9npV5dVuQbdqFXUGc6yt__7daI02YrhyvRSLywjlFfKA/viewform?vc=0&c=0&w=1&flr=0 ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‍ಸೆಟಿ), ಪ್ಲಾಟ ನಂ. ಸಿ ಎ -03 (ಪಾರ್ಟ) ಕಣಬರ್ಗಿ ಇಂಡಸ್ತ್ರಿಯಲ್ ಎರಿಯಾ, ಆಟೋ ನಗರ. ಬೆಳಗಾವಿ –…

Read More

ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದೇಶ್ವರ ಶ್ರೀಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರಕ್ಕೆ ಆಗಮಿಸಿ ಜ್ಞಾನ ಯೋಗಾಶ್ರಮದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ನಂತರ ಮಾತನಾಡಿದ ಅವರು, ಕಳೆದೊಂದು ವಾರದಿಂದ ಪ್ರತಿದಿನ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೇನೆ. ಅವರ ಆರೋಗ್ಯದ ಮೇಲೆ ಕಾಳಜಿ ವಹಿಸಲು ಸೂಚಿಸಿದ್ದೇನೆ ಎಂದರು. ಪ್ರಧಾನಿ ಮೋದಿ ಅವರು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರೊಂದಿಗೆ ಮಾತನಾಡಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಧಾನಿ ಹಾರೈಸಿದ್ದಾರೆ ಎಂದು ತಿಳಿಸಿದರು. ಮುಂದುವರೆದು ಮಾತನಾಡಿ, ಶ್ರೀಗಳ ಬದುಕೇ ನಮಗೆ ಮಾದರಿ. ಅವರ ಮಾತು, ನಡೆ, ನುಡಿ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಪುಣ್ಯಭೂಮಿ ವಿಜಯಪುರವನ್ನು ಅವರ ಕರ್ಮಭೂಮಿ ಮಾಡಿಕೊಂಡಿದ್ದು ನಮ್ಮ ಪುಣ್ಯ ಎಂದು ಬಣ್ಣಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಯುವತಿಯೋರ್ವಳಿಗೆ ಕಿಡಿಗೇಡಿಗಳು ಕಿರುಕುಳ ನೀಡಿದ್ದು,  ಈ ವೇಳೆ ಯುವತಿಯ ಗೆಳೆಯ ಹಾಗೂ ಕಿಡಿಗೇಡಿಗಳ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ. ಚರ್ಚ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಿಯಕರನೊಂದಿಗೆ ಬಂದಿದ್ದ ಯುವತಿಯೊಬ್ಬಳಿಗೆ ಕಿಡಿಕೇಡಿಗಳು ಕಿರುಕುಳ ನೀಡಿದ್ದಾರೆ. ಈ ವೇಳೆ ಆಕೆಯ ಗೆಳೆಯ ದುಷ್ಕರ್ಮಿಗಳೊಂದಿಗೆ ಜಗಳಕ್ಕಿಳಿದಿದ್ದು, ಕೈಕೈ ಮಿಲಾಯಿಸಿದ್ದಾರೆ. ಆದರೆ, ಪೊಲೀಸರು ಬರುವಷ್ಟರದಲ್ಲಿ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ತಿಳಿದುಬಂದಿದೆ. ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಪಬ್ ಗಳಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದರು. ಪಬ್ ನಲ್ಲಿ ಡಾನ್ಸ್ ಮಾಡುವುದನ್ನು ನೋಡಲು ಹೊರಗಡೆ ದೊಡ್ಡ ಜನಸಂದಣಿ ನಿಂತಿದ್ದು, ಈ ವೇಳೆ ಜನ ಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಕೋರಮಂಗಲದಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆಂದು ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತುರುವೇಕೆರೆ: ಹಾಸನದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ದಿ ಇಂಡಿಯನ್ ಡಾಡ್ಜ್ ಬಾಲ್ ಫೆಡರೇಷನ್ ಕರ್ನಾಟಕ, ಫೆಡರೇಷನ್ ಮತ್ತು ಹಾಸನ ಜಿಲ್ಲಾ ಡಾಡ್ಜ್ವಾಲ್ ಅಸೋಸಿಯೇಷನ್ ಇವರುಗಳ ಸಹಯೋಗದೊಂದಿಗೆ ಡಿ. 27ರಿಂದ 29ರವರೆಗೆ ನಡೆದ ರಾಷ್ಟ್ರಮಟ್ಟದ ಡಾಡ್ಜ್ವಾಲ್ ಪಂದ್ಯಾವಳಿಯಲ್ಲಿ ಎಸ್ ಬಿ ಜಿ ವಿದ್ಯಾಲಯ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಪಂದ್ಯಾವಳಿಯಲ್ಲಿ ಬಾಲಕ ಮತ್ತು ಬಾಲಕಿಯರು ಪ್ರಥಮ ಸ್ಥಾನವನ್ನು ಮತ್ತು ಸಬ್ ಜೂನಿಯರ್ ಬಾಲಕರ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ತಂಡದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಎಸ್ ಬಿ ಜಿ ವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜುಗಳ ಕಾಲೇಜಿನ ವಿದ್ಯಾರ್ಥಿಗಳಾದ ಮಾನಸ ಜಿ., ವೇದಾವತಿ, ಕುಮುದಾ, ವಿನಯ್,  ಆರ್.ಪ್ರಮೋದ್,  ಕೇಶವ್ ಈ ಕ್ರೀಡಾಪಟುಗಳು ರಾಜ್ಯಕ್ಕೆ ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿ  ಶಿಕ್ಷಣ ಟ್ರಸ್ಟಿಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಮತ್ತು ತುರುವೇಕೆರೆ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ. ಇದರ ಮುಖ್ಯ ತರಬೇತುದಾರರಾದ ಉದಯ್ ಕುಮಾರ್ ಸಿ.ಪಿ. ಹಾಗೂ ಮಕ್ಕಳಿಗೂ ಆದಿಚುಂಚನಗಿರಿ ಶಿಕ್ಷಣ ಆಡಳಿತ…

Read More

ತುರುವೇಕೆರೆ : ಪಟ್ಟಣದ ಗುರುಭವನದ ಆವರಣದಲ್ಲಿ ಜನವರಿ 2ರ ಸೋಮವಾರ ಆದಿ ಜಾಂಬವ ಸಮ್ಮೇಳನ ಮತ್ತು ಎಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಈ ಸಮ್ಮೇಳನಕ್ಕೆ ಆಗಮಿಸುವಂತೆ ಆದಿ ಜಾಂಬವ ಸಮಾಜದ ಅಧ್ಯಕ್ಷರು ಆದ ವಿ ಟಿ ವೆಂಕಟರಾಮಯ್ಯನವರು (ವಿಠಲ ದೇವರಹಳ್ಳಿ,) ಮಾಧ್ಯಮದ ಮೂಲಕ ಮನವಿ ಮಾಡಿದರು. ಜೊತೆಗೆ ಈ ಸಮಾವೇಶಕ್ಕೆ ಕೇಂದ್ರದ ಮಂತ್ರಿಗಳು, ರಾಜ್ಯದ ಮಂತ್ರಿಗಳು, ಹೋರಾಟಗಾರರು, ಸಾಹಿತಿಗಳು, ಸ್ವಾಮೀಜಿಗಳು, ಆಗಮಿಸಲಿದ್ದು, ಸಮ್ಮೇಳನದ ಉದ್ದೇಶ, ಒಳ ಮೀಸಲಾತಿಯ ಎ ಜೆ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಒತ್ತಾಯಿಸುವುದರ ಮೂಲಕ ಈ ಸಮಾವೇಶ ಮಾಡಲು ತೀರ್ಮಾನಿಸಿದೆ ಎಂದರು. ಜೊತೆಗೆ ಈ ಸಮಾವೇಶದಲ್ಲಿ 10 ರಿಂದ 15 ಸಾವಿರ ಈ ಸಮಾಜದ ಬಂಧುಗಳು ಸೇರುವ ನಿರೀಕ್ಷೆಯಿದ್ದು, ಇವರುಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಇನ್ನು ಈ ಸಮ್ಮೇಳನದಲ್ಲಿ ಈ ಸಮಾಜದ ಎಸ್, ಎಸ್, ಎಲ್, ಸಿ, & ಪಿ ,ಯು, ಸಿ, ವಿದ್ಯಾರ್ಥಿಗಳಿಗೆ ಮತ್ತು…

Read More

ಕೊರಟಗೆರೆ : ಸರ್ಕಾರಿ ಜಾಗಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟರೆ ಅದು ಮುಂದಿನ ದಿನಗಳಲ್ಲಿ ಪ್ರಯೋಜನಕಾರಿಯಾಗುತ್ತದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಕೊರಟಗೆರೆ ಪಟ್ಟಣದ ತಾಲೂಕು ಕಛೇರಿಯಲ್ಲಿ 9 ನೇ ಬಗರ್ ಹುಕ್ಕುಂ ಸಭೆ ನಡೆಸಿ ಮಾತನಾಡಿ, ಇಂದು ನಡೆದ ಸಭೆಯಲ್ಲಿ ಮೂರು ತಾಲ್ಲೂಕಿನ ತಹಶೀಲ್ದಾರರು, ಅವರ ಅಧಿಕಾರಿ ಸಿಬ್ಬಂದಿಗಳು,ಅರಣ್ಯ ಇಲಾಖಾ ಅಧಿಕಾರಿಗಳು, ಬಗರ್ ಹುಕ್ಕುಂ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದು, ತುಮಕೂರು ತಾಲ್ಲೂಕಿನ 39 ಅರ್ಜಿ, ಮಧುಗಿರಿ ತಾಲ್ಲೂಕಿನ 13, ಕೊರಟಗೆರೆ ತಾಲ್ಲೂಕಿನ 114 ಅರ್ಜಿಗಳನ್ನು ಕುಲಾಂಕುಶವಾಗಿ ಚರ್ಚೆ ನಡೆಸಿ ತಿರ್ಮಾನ ತೆಗೆದುಕೊಂಡು ವಿಲೇವಾರಿ ಮಾಡಲಾಗಿದೆ. ಕೆಲವು ಅರ್ಜಿಗಳು ಹಿಂದಿನ ಸಭೆಯಲ್ಲಿ ತಿರಸ್ಕಾರ ಹಾಗಿದ್ದು ಆ ಅರ್ಜಿಗಳು ಉಪವಿಭಾಗಾಧಿಕಾರಿಗಳಿಗೆ ಮರು ಅರ್ಜಿ ಸಲ್ಲಿಸಿದ್ದು, ಅಂತಹವುಗಳನ್ನು ಪರಿಶೀಲನೆ ಮಾಡಿ ವಿಲೇವಾರಿ ಮಾಡಲು ಚರ್ಚೆ ಮಾಡಿ ಸೂಕ್ತ ಆದೇಶ ನೀಡಲು ತಹಶೀಲ್ದಾರರುಗಳಿಗೆ ತಿಳಿಸಲಾಗಿದೆ ಎಂದರು. ಈ ಸಭೆಯಲ್ಲಿ ಹಲವು ಅರ್ಜಿಗಳ ಪರಿಶೀಲನೆ ಮಾಡಿ ಅದರಲ್ಲಿ ಅನುಭವವಿಲ್ಲದ, ಸರ್ಕಾರ ಅದೇಶಕ್ಕಿಂತ ಹೆಚ್ಚು ಮಂಜೂರಿ ಜಮೀನನ್ನು ಹೊಂದಿರುವವರು, ಹೆಚ್ಚು…

Read More

ಪೋರ್ಚುಗಲ್‌ನ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಅರೇಬಿಯಾದ ಪ್ರೊ ಲೀಗ್ ಕ್ಲಬ್ ಅಲ್-ನಾಸ್ರ್ ಎಫ್‌ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕ್ರಿಸ್ಟಿಯಾನೊ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ಕ್ಲಬ್ ಸ್ವತಃ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಇತಿಹಾಸ ಹುಟ್ಟಿದೆ. ಕ್ರಿಸ್ಟಿಯಾನೊ ರೊನಾಲ್ಡೊ ಅವರ ಆಗಮನವು ಖಂಡಿತವಾಗಿಯೂ ಕ್ಲಬ್‌ಗೆ ಮಾತ್ರವಲ್ಲದೆ ಸೌದಿ ಲೀಗ್, ದೇಶ, ಮುಂಬರುವ ಪೀಳಿಗೆಗಳು ಮತ್ತು ಎಲ್ಲಾ ಯುವಕರು ಅತ್ಯುತ್ತಮವಾಗಿರಲು ಸ್ಫೂರ್ತಿ ನೀಡುತ್ತದೆ ಎಂದು ಅಲ್ ನಾಸರ್ ಕ್ಲಬ್ ಟ್ವೀಟ್ ಮಾಡಿದೆ. ಹೊಸ ಫುಟ್ಬಾಲ್ ಲೀಗ್‌ಗಾಗಿ ಎದುರು ನೋಡುತ್ತಿದ್ದೇನೆ ಎಂದು ರೊನಾಲ್ಡೊ ಪ್ರತಿಕ್ರಿಯಿಸಿದ್ದಾರೆ. ಇತಿಹಾಸ ಹುಟ್ಟಿದೆ. ಕ್ರಿಸ್ಟಿಯಾನೊ ರೊನಾಲ್ಡೊ ಅವರ ಆಗಮನವು ಕ್ಲಬ್‌ಗೆ ಮಾತ್ರವಲ್ಲ, ಸೌದಿ ಲೀಗ್, ದೇಶ, ಮುಂಬರುವ ಪೀಳಿಗೆಗಳು ಮತ್ತು ಎಲ್ಲಾ ಯುವಕರು ಉತ್ತಮ ಫಲಿತಾಂಶಗಳನ್ನು ಸಾಧಿಸಲು ಅವರು ಅತ್ಯುತ್ತಮವಾಗಿರಲು ಸ್ಫೂರ್ತಿ ನೀಡುವುದು ಖಚಿತ. ಹೊಸ ಮನೆಗೆ ಕ್ರಿಸ್ಟಿಯಾನೊಗೆ ಸ್ವಾಗತ…” – ಕ್ಲಬ್ ಟ್ವೀಟ್ ಮಾಡಿದೆ. ಯುರೋಪಿಯನ್ ಫುಟ್‌ಬಾಲ್‌ನಲ್ಲಿ ನಾನು ಮಾಡಬೇಕಾದ ಎಲ್ಲವನ್ನೂ ನಾನು ಸಾಧಿಸಿದೆ. ಏಷ್ಯಾದಲ್ಲಿ ನನ್ನ…

Read More

ವಯನಾಡು ವಾಕೇರಿಯಲ್ಲಿ ಜನವಸತಿ ಪ್ರದೇಶದಲ್ಲಿ ಭಯ ಹುಟ್ಟಿಸಿದ ಹುಲಿ ಸತ್ತು ಬಿದ್ದಿದೆ. ಹುಲಿಯ ಮೃತದೇಹವನ್ನು ಸುಲ್ತಾನ್ ಬತ್ತೇರಿಯಲ್ಲಿರುವ ತಪಾಸಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಗುರುವಾರ ಗಾಂಧಿ ನಗರದಲ್ಲಿ ಹುಲಿ ಸತ್ತು ಬಿದ್ದಿತ್ತು. ಆರು ವರ್ಷದ ಹುಲಿ ಸಾವನ್ನಪ್ಪಿದೆ. ಗಾಯದಿಂದ ಸೋಂಕು ಸಾವಿಗೆ ಕಾರಣವಾಗಿರಬಹುದು ಎಂಬುದು ಪ್ರಾಥಮಿಕ ತೀರ್ಮಾನ. ವಾಕೇರಿ ಗಾಂಧಿನಗರದ ಜನರು ಮೂರು ದಿನಗಳಿಂದ ಹುಲಿ ಭೀತಿಯಲ್ಲಿದ್ದರು. ಗುರುವಾರ ಬೆಳಗ್ಗೆ ರಸ್ತೆಬದಿಯಲ್ಲಿ ಪತ್ತೆಯಾದ ಹುಲಿಯ ಬಲಗಾಲಿಗೆ ಗಂಭೀರ ಗಾಯವಾಗಿದೆ. ಅರಣ್ಯ ಸಿಬ್ಬಂದಿ ಹುಲಿಯನ್ನು ಕಾಡಿಗೆ ಓಡಿಸಲು ಯತ್ನಿಸಿದರಾದರೂ ವಿಫಲವಾಯಿತು. ಆ ಬಳಿಕ ಅರಣ್ಯ ಇಲಾಖೆಯ ಡ್ರಗ್ಸ್ ದಂಧೆ ಸ್ಥಾಪನೆಯ ಕ್ರಮವೂ ವಿಫಲವಾಗಿತ್ತು. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ನಾರಾಯಣಪುರಂ ಎಸ್ಟೇಟ್ ನಲ್ಲಿ ಹುಲಿ ಶವವಾಗಿ ಪತ್ತೆಯಾಗಿದೆ. ಕಾಡಿನಲ್ಲಿ ಕಾಡುಪ್ರಾಣಿಗಳ ನಡುವಿನ ದಾಳಿಯಲ್ಲಿ ಹುಲಿ ಗಾಯಗೊಂಡಿರಬಹುದು ಎಂಬುದು ಪ್ರಾಥಮಿಕ ತೀರ್ಮಾನ. ಮೃತದೇಹವನ್ನು ಬತ್ತೇರಿ ಕುಪ್ಪಾಡಿಯ ಅರಣ್ಯ ಇಲಾಖೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮುಖ್ಯ ಪಶುವೈದ್ಯಾಧಿಕಾರಿ ಡಾ.ಅರುಣ್ ಝಕಾರಿಯಾ ನೇತೃತ್ವದ ತಜ್ಞರ ತಂಡ ಮರಣೋತ್ತರ ಪರೀಕ್ಷೆ ನಡೆಸಿ…

Read More

ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯು ಮಾಲಿನ್ಯ ಹೆಚ್ಚಾಗಿದೆ. ಶುಕ್ರವಾರದ ವಾಯು ಗುಣಮಟ್ಟ ಸೂಚ್ಯಂಕ 288 ಎಂದು ದಾಖಲಾಗಿದೆ. ಇದರೊಂದಿಗೆ ರಾಜಧಾನಿ ಪ್ರದೇಶದಲ್ಲಿ ಅನಾವಶ್ಯಕ ನಿರ್ಮಾಣ ಮತ್ತು ನೆಲಸಮವನ್ನು ನಿಲ್ಲಿಸುವಂತೆ ಕೇಂದ್ರ ವಾಯು ಗುಣಮಟ್ಟ ಮಂಡಳಿ ಆದೇಶಿಸಿದೆ. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ‘ತೀವ್ರ’ ವರ್ಗಕ್ಕೆ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆದೇಶದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಆದಾಗ್ಯೂ, ಗಾಳಿಯ ಗುಣಮಟ್ಟ ಇನ್ನಷ್ಟು ಹದಗೆಟ್ಟರೆ, ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಚಳಿಗಾಲದಲ್ಲಿ ಇದು ಬಹಳ ಮುಖ್ಯ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಆದರೆ ಈಗಾಗಲೇ ಚೆನ್ನಾಗಿ ಕುದಿಸಿದ ನೀರನ್ನು ತಣ್ಣಗಾಗಿಸಿ ಮತ್ತೆ ಕುದಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗೆ ಮಾಡುವುದರಿಂದ, ನೀರಿನಲ್ಲಿನ ಪ್ರಯೋಜನಕಾರಿ ನೈಟ್ರೇಟ್‌ಗಳು ಕ್ಯಾನ್ಸರ್, ಲ್ಯುಕೇಮಿಯಾ ಮತ್ತು ಲಿಂಫೋಮಾದಂತಹ ಕಾಯಿಲೆಗಳನ್ನು ಉಂಟುಮಾಡುವ ಹಾನಿಕಾರಕ ವಿಷಗಳಾಗಿ ಬದಲಾಗುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನೀರನ್ನು ಬಿಸಿ ಮಾಡಿದ ತಕ್ಷಣ ಕುಡಿಯಲು ಸೂಚಿಸಲಾಗುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More