Author: admin

ನಮ್ಮ ಸಂಸತ್ತಿನಲ್ಲಿ ಟೀ ಬಗ್ಗೆ ಚರ್ಚೆ ನಡೆದಿದ್ದು ಗೊತ್ತೇ? ಅಸ್ಸಾಂನ ಬಿಜೆಪಿ ಸಂಸದೆ ಪವಿತ್ರಾ ಮಾರ್ಗರೆಥಾ ಅವರು ಸಂಸತ್ತಿನ ಅಧಿವೇಶನದಲ್ಲಿ ಚಹಾವನ್ನು ರಾಷ್ಟ್ರೀಯ ಪಾನೀಯವೆಂದು ಘೋಷಿಸಲು ಕೇಂದ್ರ ಸರ್ಕಾರವನ್ನು ಕೇಳಿದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್‌ನಿಂದ ಈಶಾನ್ಯದವರೆಗೆ, ಪ್ರತಿ ಮನೆಯ ಅಡುಗೆಮನೆಯಲ್ಲಿ ಚಹಾ ಲಭ್ಯವಿದೆ. ದೇಶಾದ್ಯಂತ ಜನರು ಚಹಾದೊಂದಿಗೆ ತಮ್ಮ ದೈನಂದಿನ ದಿನಚರಿಯನ್ನು ಪ್ರಾರಂಭಿಸುತ್ತಾರೆ. ಹೀಗಾಗಿ ಚಹಾವನ್ನು ರಾಷ್ಟ್ರೀಯ ಪಾನೀಯ ಎಂದು ಘೋಷಿಸಬೇಕು,” ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನ್ಯೂಜಿಲೆಂಡ್ ಸರ್ಕಾರವು ತನ್ನ ನಾಗರಿಕರಲ್ಲಿ ಧೂಮಪಾನವನ್ನು ಕಡಿಮೆ ಮಾಡಲು 2025 ರ ವೇಳೆಗೆ ನ್ಯೂಜಿಲೆಂಡ್ ಅನ್ನು ಧೂಮಪಾನ ಮುಕ್ತ ದೇಶವನ್ನಾಗಿ ಮಾಡಲು ಯೋಜಿಸಿದೆ. ಅದರಂತೆ, ಯುವಕರು ಸಿಗರೇಟ್ ಕೊಳ್ಳುವುದನ್ನು ಮತ್ತು ಸಿಗರೇಟ್ ಸೇದುವುದನ್ನು ಜೀವನ ಪರ್ಯಂತ ನಿಷೇಧಿಸಿ ನ್ಯೂಜಿಲೆಂಡ್ ಸರ್ಕಾರ ಕ್ರಮದ ಆದೇಶ ಹೊರಡಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನವದೆಹಲಿ : ಗಡಿ ವಿವಾದ ಸಂಬಂಧ ಇಂದು ದೆಹಲಿಯಲ್ಲಿ ಗೃಹ ಸಚಿವ ಅಮಿತಾ ಶಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಸಂಜೆ 7 ಗಂಟೆಗೆ ಸಭೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಸಂಜೆ 4 ಗಂಟೆಗೆ ದೆಹಲಿಗೆ ತೆರಳಲಿದ್ದಾರೆ. ಅಲ್ಲಿಂದ ನೇರವಾಗಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಭಯ ರಾಜ್ಯಗಳ ನಡುವಿನ ಗಡಿಯಲ್ಲಿನ ವಾಸ್ತವ ಪರಿಸ್ಥಿತಿ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಗಡಿ ವಿವಾದ ಸಂಬಂಧ ನಾವು ನಮ್ಮ ನಿಲುವಿನ ಬಗ್ಗೆ ತಿಳಿಸುತ್ತೇವೆ. ಗಡಿ ಪ್ರಕರಣ ಕುರಿತು ಸುಪ್ರೀಂಕೋರ್ಟ್ ನಲ್ಲಿರುವ ವರದಿ, ಗಡಿ ವಿಚಾರದ ಕುರಿತಾದ ಕಾನೂನು ನಿಯಮಗಳ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಬೆಂಗಳೂರು : ಮಕ್ಕಳ ಕಲಿಕಾ ಕೊರತೆ ನೀಗಿಸಲು 2022-23 ನೇ ಸಾಲಿನಿಂದ 5 ಮತ್ತು 8 ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲು ರಾಜ್ಯದ ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪಬ್ಲಿಕ್ ಪರೀಕ್ಷೆಯ ಮಾದರಿಯಲ್ಲೇ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ರಾಜ್ಯದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿ ಗಳನ್ನು ಪಾಸ್ ಮಾಡಲಾಗುತ್ತಿತ್ತು. ಹೀಗಾಗಿ ಕಲಿಕೆ ಆಸಕ್ತಿ ಕಡಿಮೆಯಾಗಿದೆ. ಕೊರೊನಾದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ವಿವಿಧ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಎದುರಿಸುವುದು ವಿದ್ಯಾರ್ಥಿಗಳಿಗೆ ಕಷ್ಟವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪಬ್ಲಿಕ್ ಪರೀಕ್ಷೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ನು 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳ…

Read More

ಬೆಂಗಳೂರು : ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಪಿಎಂ ಪೋಷಣ್ ಯೋಜನೆಯಡಿ ಮಕ್ಕಳಿಗೆ ವಿಶೇಷ ಭೋಜನ ಮತ್ತು ಶಾಲೆಗಾಗಿ ನಾವು ನೀವು ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಿಕ್ಷಣ ಇಲಾಖೆಯು ಹಬ್ಬ ಹರಿದಿನಗಳಲ್ಲಿ ಹಬ್ಬದೂಟ ನೀಡಲು ಸೂಚನೆ ನೀಡಿದ್ದು, ಈ ಕಾರ್ಯಕ್ರಮದಡಿ ದಾನಿಗಳು, ಟ್ರಸ್ಟ್, ಸಂಘ, ಸಂಸ್ಥೆಗಳು, ಎಸ್ ಡಿಎಂಸಿಗಳು, ಸಾರ್ವಜನಿಕರು ಸೇರಿದಂತೆ ಸಮುದಾಯದವರು ತಮ್ಮದೇ ಆರ್ಥಿಕ ಅಥವಾ ಆಹಾರ ಸಹಕಾರ, ನೆರವಿನೊಂದಿಗೆ ಮಕ್ಕಳ ಸಂಪೂರ್ಣ ವಿಶೇಷ ಭೋಜನ ವ್ಯವಸ್ಥೆ ಅಥವಾ ಬಿಸಿಯೂಟಕ್ಕೆ ಪೂರಕವಾಗಿ ಪೌಷ್ಠಿಕ ಆಹಾರ ನೀಡಲು ಮುಂದಾಗಿದೆ. ಶಾಲೆಗಳಲ್ಲಿ ವಿಶೇಷವಾಗಿ ಊರಿನ ಹಬ್ಬ, ಜಾತ್ರೆ, ತೇರು, ರಾಷ್ಟ್ರೀಯ ಹಬ್ಬಗಳು, ಜನ್ಮದಿನ, ಜಯಂತಿ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಸ್ಥಳೀಯವಾಗಿ ಸಮುದಾಯದಿಂದ ಸಾಮೂಹಿಕವಾಗಿ ಆಚರಿಸುವ ವಿಶೇಷ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಭೋಜನ, ವಿಶೇಷ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಬೆಂಗಳೂರು : 2014-15 ನೇ ಸಾಲಿನ ಶಿಕ್ಷಕರ ನೇಮಕಾತಿ ಹಗರಣ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೆ ನಾಲ್ವರು ಶಿಕ್ಷಕರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 64 ಕ್ಕೆ ಏರಿಕೆಯಾಗಿದೆ. ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ, ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ ಮತ್ತೆ ನಾಲ್ವರು ಶಿಕ್ಷಕರನ್ನು ಬಂಧಿಸಿದೆ. ವಿಜಯಪುರ ಜಿಲ್ಲೆಯ ಕಪನಿಂಬರಗಿ ಜಿಎಚ್‌ಎಸ್ ಶಾಲೆಯ ಪ್ರತಾಪ್ ಸಿಂಗ್, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ವಿಜಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ. ಯೋಗೇಶ್ವರಪ್ಪ, ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸೋಮನಗೌಡ ಪಾಟೀಲ್ ಬಂಧಿತರಾಗಿದ್ದಾರೆ. ಸದ್ಯ ಬಂಧಿತರನ್ನು ವಿಚಾರಣೆ ನಡೆಸಲಾಗಿದ್ದು, ಬಳಿಕ ನ್ಯಾಯಾಲಯದ ಮುಂದೆ ಆರೋಪಿ ಶಿಕ್ಷಕರನ್ನು ಹಾಜರುಪಡಿಸಿರುವ ಕೋರ್ಟ್ ಆದೇಶದ ಮೇರೆಗೆ ಸಿಐಡಿ ಅಧಿಕಾರಿಗಳು ಬಂಧಿತ ಶಿಕ್ಷಕರನ್ನು ಜೈಲಿಗೆ ಹಾಕಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವಿಜಯಪುರ: ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಕಾಲುವೆಗೆ ಹಾರಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ. ಏತ ನೀರಾವರಿ ಕಾಲುವೆಗೆ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ತಾಯಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ರೇಣುಕಾ ಅಮೀನಪ್ಪ ಕೋನಿನ್(26) ಹಾಗೂ ಮಕ್ಕಳಾದಂತ ಯಲ್ಲವ್ವ(2) ಅಮೃತಾ(1) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಅಗ್ನಿಶಾಮಕ ಸಿಬ್ಬಂದಿಗಳು ಶವಗಳ ಪತ್ತೆಕಾರ್ಯ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ಗಡಿ ವಿವಾದದ ಮಧ್ಯೆಯೇ ಎನ್‌ಸಿಪಿ ಶಾಸಕ ರೋಹಿತ್​ ಪವಾರ್ ​ಕದ್ದುಮುಚ್ಚಿ ರಾತ್ರೋರಾತ್ರಿ ಬೆಳಗಾವಿಗೆ ಭೇಟಿ ನೀಡಿ ವಾಪಾಸ್ ಆಗಿದ್ದಾರೆ.ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ರೋಹಿತ್ ಪವಾರ್ ಬೆಳಗಾವಿ ಭೇಟಿ ನೀಡಿದ್ದಾರೆ ಎನ್ನಲಾಗ್ತಿದೆ. ಗಡಿ ಉಸ್ತುವಾರಿ ಸಚಿವರ ಬೆಳಗಾವಿ ಭೇಟಿ ರದ್ದು ಖಂಡಿಸಿ ಮಹಾ ವಿಕಾಸ ಅಘಾಡಿ ಪ್ರತಿಭಟನೆ ನಡೆಸಿತ್ತು. ಇದಾದ ಬಳಿಕ ರೋಹಿತ್​ ಪವಾರ್​ ಅವರಿಗೆ ಬೆಳಗಾವಿಗೆ ಬರುವಂತೆ ಮನವಿ ಮಾಡಿದ್ದು ರಾತ್ರೋರಾತ್ರಿ ರೋಹಿತ್ ಪವಾರ್ ಬೆಳಗಾವಿಗೆ ಭೇಟಿ ನೀಡಿ ವಾಪಾಸ್ ಆಗಿದ್ದಾರೆ. ರೋಹಿತ್​ ಪವಾರ್​ ಪುಣೆ ಜಿಲ್ಲೆಯ ಕರ್ಜತ್-ಜಮ್ಕೆಡ್ ವಿಧಾನಸಭೆ ಕ್ಷೇತ್ರದ ಎನ್​ಸಿಪಿ ಶಾಸಕರಾಗಿದ್ದಾರೆ. ರೋಹಿತ್​ ಪವಾರ್ ನಿನ್ನೆ ರಾತ್ರಿ ಕೊಲ್ಲಾಪುರ- ಕುಗನೊಳ್ಳಿ ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದರು ಎಂದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ ಬೆಳಗಾವಿ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿರುವ ಎಂಇಎಸ್ ಬೆಳಗಾವಿ ನಗರ ಅಧ್ಯಕ್ಷ ದೀಪಕ್ ದಳವಿ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ. ಗಡಿ ಹೋರಾಟದಲ್ಲಿ…

Read More

ದಲಿತ ಸಿಎಂ ಬಳಿಕ ಕಾಂಗ್ರೆಸ್ ನಲ್ಲೀಗ ಮಹಿಳಾ ಸಿಎಂ ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಕೂಗು ಎದ್ದಿತ್ತು. ಇದೀಗ ಈ ಬಳಿಕ ಮಹಿಳಾ ಮುಖ್ಯಮಂತ್ರಿ ಕೂಗು ಎದ್ದಿದೆ. ಈ ಬಗ್ಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ವಿಷಯವನ್ನು ಎತ್ತಿದ್ದಾರೆ. ಮಹಿಳಾ ಮುಖ್ಯಮಂತ್ರಿ ಬರಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಅದಕ್ಕೆ ತಕ್ಕ ವಾತಾವರಣ ನಿರ್ಮಾಣವಾಗಬೇಕಿದೆ. ನಾವು ಅರ್ಧದಷ್ಟು ಜನಸಂಖ್ಯೆ ಇದ್ದೇವೆ. ಯಾಕೆ ಕೊಡಬಾರದು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಮಾತ್ರ ದಲಿತ ಸಿಎಂ ಸಾಧ್ಯ. ಬಿಜೆಪಿ ದಲಿತರನ್ನು ಒಡೆದು ಆಳುವ ನೀತಿ ಅನುರಸಿರುತ್ತಿದೆ. ಅಂಬೇಡ್ಕರ್ ಬಗ್ಗೆ ಮಾತನಾಡುವುದಕ್ಕೆ ಯೋಗ್ಯತೆ ಇರಲಿಲ್ಲ ಎಂದು ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮುಂಬೈ:  20 ಭಾರತೀಯ ನಕ್ಷತ್ರ ಆಮೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಮೀರಾರೋಡ್‌ ಪಶ್ಚಿಮ ಉಪನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ನದೀಮ್‌ ಶುಜಾವುದ್ದೀನ್‌ ಶೇಖ್ (33) ಬಂಧಿತ ಆರೋಪಿಯಾಗಿದ್ದಾನೆ. ಕಳ್ಳಸಾಗಣೆ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬೊರಿವಲಿಯ ಗಣಪತ್‌ ಪಾಟೀಲ್‌ ನಗರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದು, 20 ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಆಮೆಗಳ ಒಟ್ಟು ಮೊತ್ತ ಸುಮಾರು 3.5 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ ಎಂದು ಎಂಎಚ್ ಬಿ ಪೊಲೀಸ್‌ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More