Author: admin

ಡಾ.ರಾಜ್‌ಕುಮಾರ್ ಕುಟುಂಬದ ಕುಡಿ, ನಟ ವಿನಯ್ ರಾಜ್‌ಕುಮಾರ್ ಅಭಿನಯದ ’10’ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಈ ಬಗ್ಗೆ ಪುಷ್ಕರ್ ಫಿಲ್ಮ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಡಿಸೆಂಬರ್ 16ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಛಾಯಾಗ್ರಾಹಕ ಕರ್ಮ್ ಚಾನ್ಹಾ ಅವರೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ವೃತ್ತಿಪರ ಬಾಕ್ಸರ್ ಪಾತ್ರವನ್ನು ವಿನಯ್ ನಿರ್ವಹಿಸಿದ್ದಾರೆ. ಈ ಪಾತ್ರಕ್ಕಾಗಿ ಒಂದೂವರೆ ಗಂಟೆ ಬಾಕ್ಸಿಂಗ್ ತರಬೇತಿ ಪಡೆದಿದ್ದೆ ಎಂದು ವಿನಯ್ ಹೇಳಿದ್ದಾರೆ. ಕಟ್ಟುನಿಟ್ಟಿನ ಆಹಾರ ಕ್ರಮವನ್ನೂ ಅನುಸರಿಸಿದ್ದೇನೆ. ಇದೆಲ್ಲವೂ ನನ್ನನ್ನು ಪರಿವರ್ತಿಸಲು ಸಹಾಯ ಮಾಡಿತು ಎಂದು ಹೇಳಿದ್ದರು. ಅನುಷಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

1931: ಭಾರತೀಯ ಆಧ್ಯಾತ್ಮಿಕ ಗುರು ಓಶೋ ಜನನ 1935: ಭಾರತದ 13ನೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜನನ 1994: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಕವಿ ಕುವೆಂಪು ನಿಧನ ಅಂತರರಾಷ್ಟ್ರೀಯ ಪರ್ವತ ದಿನ * 2004: ಕರ್ನಾಟಕ ಸಂಗೀತಗಾರ್ತಿ ಮತ್ತು ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮಿ ನಿಧನ – UNICEF ಸಂಸ್ಥಾಪನಾ ದಿನ, ಅಂತರಾಷ್ಟ್ರೀಯ ಪರ್ವತ ದಿನ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಗು ಹುಟ್ಟುವ ಮೊದಲೇ ದತ್ತು ಸ್ವೀಕಾರಕ್ಕೆ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಹಿಂದೂ ದಂಪತಿ ಮಗುವನ್ನು ಮುಂದೆ ಸಾಕಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮುಸ್ಲಿಂ ದಂಪತಿಗೆ ದತ್ತು ನೀಡಲು ಒಪ್ಪಂದ ಮಾಡಿಕೊಂಡ ಉಡುಪಿ ಪ್ರಕರಣ ವಿಚಾರಣೆ ವೇಳೆ ‘ಗರ್ಭದಲ್ಲಿರುವ ಮಗುವಿಗೆ ತನ್ನದೇ ಬದುಕು-ಹಕ್ಕು ಇದ್ದು, ಅದು ಜನ್ಮ ತಾಳುವ ಮೊದಲೇ ದತ್ತು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಜತೆಗೆ ಮುಸ್ಲಿಂ ಧರ್ಮ ಕಾನೂನಿನಲ್ಲಿ ದತ್ತು ಸ್ವೀಕಾರಕ್ಕೆ ಮಾನ್ಯತೆಯಿಲ್ಲ’ ಎಂದು ಪೀಠ ತಿಳಿಸಿದೆ. ಪೋಷಕರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪ್ರಧಾನಿ ನರೇಂದ್ರ ಮೋದಿ ಇಂದು ಮಹಾರಾಷ್ಟ್ರ, ಗೋವಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಹಾರಾಷ್ಟ್ರದಲ್ಲಿ ಸುಮಾರು 75,000 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ-ಉದ್ಘಾಟನೆ ನೆರವೇರಿಸಲಿದ್ದಾರೆ. ಶಿರಡಿ ಸಂಪರ್ಕಿಸುವ ಬಹುನಿರೀಕ್ಷಿತ 701 ಕಿಮೀ. ನಾಗುರ-ಮುಂಬಯಿ ಎಕ್ಸ್‌ಪ್ರೆಸ್‌ ಉದ್ಘಾಟಿಸುತ್ತಾರೆ. ನಾಗುರ ಮೆಟ್ರೋ ಮೊದಲ ಹಂತ, ನಾಗುರ-ಬಿಲಾಸ್‌ಪುರ ವಂದೇ ಭಾರತ್, ನಾಗುರ ಏಮ್ಸ್‌ಗೆ ಚಾಲನೆ ನೀಡುತ್ತಾರೆ. ಜತೆಗೆ ಗೋವಾದ 2ನೇ ಏರ್‌ಪೋರ್ಟ್ ಮೊಪದಲ್ಲಿ ಉದ್ಘಾಟಿಸಲಿದ್ದಾರೆ. ಉಭಯ ರಾಜ್ಯಗಳಲ್ಲಿ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಗೋವಾದ ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ಏರ್‌ಪೋರ್ಟ್‌ ಅನ್ನು ಉನ್ನತ ದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿ ನಿರ್ಮಿಸಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.

Read More

ಹಿರಿಯ ನಟ ಶರತ್ ಕುಮಾರ್ ತೀವ್ರ ಅಸ್ವಸ್ಥ ಜನಪ್ರಿಯ ನಟ ಶರತ್ ಕುಮಾರ್, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತಿಸಾರದಿಂದ ನಿರ್ಜಲೀಕರಣಕ್ಕೆ ಒಳಗಾಗಿದ್ದ ಅವರು ತೀವ್ರ ಅಸ್ವಸ್ಥರಾಗಿದ್ದಾರೆ. ಹೀಗಾಗಿ, ಪ್ರಸ್ತುತ ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿ ರಾಧಿಕಾ ಮತ್ತು ಮಗಳು ವರಲಕ್ಷ್ಮಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅವರು ಕನ್ನಡದ ಸಾರಥಿ, ಮೈನಾ, ಸಂತೆಯಲ್ಲಿ ನಿಂತ ಕಬೀರ, ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ, ಸೀತಾರಾಮ ಕಲ್ಯಾಣ ಚಿತ್ರಗಳಲ್ಲಿ ನಟಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ಪುಣೆಯ ಕಾರ್ಯಕ್ರಮಕ್ಕೆ ತೆರಳುವ ವೇಳೆ ತೆರಳುತ್ತಿರುವಾಗ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ‌ಪಾಟೀಲ ಮುಖಕ್ಕೆ ವ್ಯಕ್ತಿಯೊಬ್ಬರು ಮಸಿ ಎರಚಿದ ಘಟನೆ ನಿನ್ನೆ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪುಣೆ ಮಹಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಮಹಾತ್ಮಾ ಪುಲೆ, ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಚಂದ್ರಕಾಂತ ಪಾಟೀಲ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಸಂಬಂಧ ಉದ್ಧವ್ ಠಾಕ್ರೆ ಅವರ ಶಿವಸೇನೆ ಗುಂಪು ಕೂಡ ಕಾರ್ಯಕ್ರಮದ ಸ್ಥಳದ ಬಳಿ ಪ್ರತಿಭಟನೆ ನಡೆಸಿ ಚಂದ್ರಕಾಂತ್ ಪಾಟೀಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ಪ್ರತಿಭಟನೆಯಲ್ಲಿದ್ದ ಯುವಕನೋರ್ವ ಪಕ್ಕದಲ್ಲೇ ಬೆಂಗಾವಲು ಸಿಬ್ಬಂದಿಯಿದ್ದರೂ ಚಂದ್ರಕಾಂತ ಪಾಟೀಲರ ಮುಖಕ್ಕೆ ಮಸಿ ಎರಚಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದ ಪೊಲೀಸರು ಯುವಕ ಹಾಗೂ ಪ್ರತಿಭಟನೆಯಲ್ಲಿದ್ದು ಕೃತ್ಯದಲ್ಲಿ ಜೊತೆಗಿದ್ದ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ : ಬಡಜನರ ತುರ್ತು ಸೇವೆಗಾಗಿ ಸರಕಾರ ನೀಡಿರುವ ತುರ್ತುವಾಹನದ ನಿರ್ವಹಣೆ ವಿಫಲವಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುವಾಹನದ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಬಡಜನರ ಆರೋಗ್ಯಕ್ಕೆ ತಕ್ಷಣ ರಕ್ಷಣೆ ನೀಡಬೇಕಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಆಗ್ರಹಿಸಿದ್ದಾರೆ. ಶನಿವಾರ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿರತೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಯೋವೃದ್ದ ರೈತ ಮತ್ತು ಇಬ್ಬರು ಮಕ್ಕಳ ಆರೋಗ್ಯ ವಿಚಾರಿಸಿದ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಂತರ ಚರ್ಚಿಸಿ ಮಾತನಾಡಿದರು. ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ತುರ್ತುವಾಹನ, ತೋವಿನಕೆರೆ ಮತ್ತು ಕೋಳಾಲದಲ್ಲಿ ತಲಾ ಒಂದು ತುರ್ತುವಾಹನದ ಸೌಲಭ್ಯವಿದೆ. ತುರ್ತುವಾಹನ ಲಭ್ಯವಿದ್ದರೂ ಸಹ ಅಧಿಕಾರಿಗಳ ನಿರ್ವಹಣೆ ವಿಫಲತೆಯಿಂದ ಬಡಜನರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುಸೇವೆಯ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯ ಮಾಡಿದರು. ಅಪಘಾತ ಆದಾಗ ತುರ್ತುವಾಹನ ಬರೋದಿಲ್ಲ. ಗರ್ಭೀಣಿಯರ ಹೆರಿಗೆ ವೇಳೆಯು ಸಹಾಯಕ್ಕೆ ತುರ್ತಾಗಿ…

Read More

ಮೈಸೂರು: ನಾವು ಮನೆಯಲ್ಲಿ ಕೂತರು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸುತ್ತೇವೆ. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ಮನೆಗೆ ಹೋಗುವ ಕಾರ್ಯಕ್ರಮ ಇದೆ. ಆ ಕಾರಣದಿಂದ ಅವರು ಮನೆಯಲ್ಲೇ ಕೂತಿರುತ್ತಾರೆ ಎಂದು ವ್ಯಂಗ್ಯವಾಡಿದರು. ಇನ್ನು, ಪಕ್ಷ ಸಂಘಟನೆಯ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯುತ್ತಿದೆ. ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಹಾಗೂ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಆಂಟೋನಿ ಬೇಗೂರು ಭೂಮಿ ಮೇಲೆದ್ದು ಗದರಿಸಿತು ಕಡಿದಾದ ಬೆಟ್ಟ ಮೇಲ್ಭಾಗವು ಸಾಕಷ್ಟು ಉದ್ದವಾಗಿದೆ ಎಲ್ಲೆಲ್ಲೂ ಹಸಿರು ಹೊದಿಕೆ ರಕ್ಷಣಾತ್ಮಕ ಗೋಡೆ ಸ್ವರ್ಗದ ರಥದಂತೆ…! ಬಿಳಿ ಮೋಡವನ್ನು ನುಡಿಸುತ್ತಿದೆ ಕಾನಮಠದ ಧಾಂತೇಕಂ ಪರಿಕಲ್ಪನೆ ಮೋಡಗಳು ಎಲ್ಲೆಡೆ ಇವೆ ಪರ್ವತದ ಬದಿಯಲ್ಲಿ ಸುರಿಯುವ ಮಳೆ ಅವರೋಹಣ ಪರ್ವತ ತೇವ ಹಿಮವನ್ನು ಸ್ಫಟಿಕೀಕರಿಸಿ ಪ್ರಯೋಜನವನ್ನು ಹುಡುಕುವ ಅವಧಿಯಲ್ಲಿ ನದಿ ನೀರಿನಲ್ಲಿ ಹಣ್ಣಾಗುತ್ತವೆ ಬೇಸಿಗೆ ಲಾಭದಾಯಕವಾಗಿದೆ ಈ ಪರ್ವತಗಳು ಶೇಖರಣಾ ಉಗ್ರಾಣವಲ್ಲವೇ? ಪರ್ವತವು ನೀಡಿದ ಚಿಲುಮೆ ನೀರು ಮತ್ತು ಉಪ್ಪುನೀರು ಮನುಕುಲದ ದೊಡ್ಡ ಭರವಸೆ ಪರ್ವತದ ಸೌಂದರ್ಯವನ್ನು ಆಸ್ವಾದಿಸಿದ ವ್ಯಕ್ತಿ ಇಲ್ಲಿ ಮಹಲು ಸಹ ಸ್ಥಾಪಿಸಲಾಗಿದೆ ಸಂತೋಷದ ಸ್ವಭಾವವೂ ಸತ್ತುಹೋಯಿತು ಒತ್ತಡದಿಂದ ಅವಳ ಉಸಿರು ಮುರಿದುಹೋಯಿತು ಹೆಚ್ಚುವರಿ ಶಾಖದಿಂದಾಗಿ ಒಟ್ಟು ಸಂಪನ್ಮೂಲಗಳು ವ್ಯರ್ಥವಾಗುತ್ತವೆ ಸಮುದ್ರಕ್ಕಾಗಿ ಕಾಯಿರಿ ಎದ್ದೇಳು ಮನುಷ್ಯ! ಪೂರ್ವ ಪಶ್ಚಿಮ ಘಟ್ಟಗಳು ಕೈ ಜೋಡಿಸಿ ಪೂಜಿಸು! ನೀಲಗಿರಿಯ ಭೂಮಿಯನ್ನು ರಕ್ಷಿಸುವುದು — ಇನ್ನು ಮುಂದೆ ಸ್ವಾರ್ಥ ಬಿಡು ಜಗತ್ತನ್ನು ಉಳಿಸಿ ನಿಮ್ಮ ಪೀಳಿಗೆಯನ್ನು ಹಿಂದಕ್ಕೆ ತೆಗೆದುಕೊಳ್ಳಿ..!…

Read More

ಸಾಮಾಜಿಕ ಕಾರ್ಯ ಕರ್ತ ಮಾಧವ ರಾವ್ ಬಾಗಲ್( 1895-1986) ಅವರು ದಿ 9/12/1950 ರಲ್ಲಿ ಕೊಲ್ಹಾಪುರದಲ್ಲಿ ಪ್ರಪ್ರಥಮವಾಗಿ ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ್ದರು.ಇದು ಡಾ.ಬಿ ಆರ್ ಅಂಬೇಡ್ಕರ್ ಅವರ ಜೀವಂತದ ಅವಧಿಯಲ್ಲೇ ನಡೆದದ್ದು.ಬಾಬಾಸಾಹೇಬರು ಈ ಮೂರ್ತಿಯ ದರ್ಶನ ಕೂಡಾ ಮಾಡಿದ್ದರು. ಮಹಾರಾಷ್ಟದ ಕೊಲ್ಹಾಪುರನಗರದಲ್ಲಿರುವ ಹಿಂದೂ ಚೌಕ್ ನಲ್ಲಿ ಈ ಮೂರ್ತಿ ಒಂದು ಐತಿಹಾಸಿಕ ಮೂರ್ತಿಯಾಗಿದೆ.ಇದು ವಿಶ್ವದ ಮೊಟ್ಟ ಮೊದಲ ಪ್ರತಿಮೆಯಾಗಿದೆ.1950 ಬಾಬಾಸಾಹೇಬರ ಮೂರ್ತಿಯನ್ನು ಅನಾವರಣ ಮಾಡಲಾಗಿತ್ತು.ಮಾಧವರಾವ್ ಬಾಗಲ್ ಅವರು ಸಮಿತಿಯ ಅಧ್ಯಕ್ಷರಾಗಿದ್ದರು.ಬಾಬಾಸಾಹೇಬರು ಬದುಕಿರುವಾಗಲೇ ಈ ಮೂರ್ತಿ ನಿರ್ಮಾಣ ಮಾಡಲಾಗಿದ್ದು ಇದನ್ನು ಬಾಳ್ ಚೌಹಾಣ ಅನ್ನುವವರು ತಯಾರಿಸಿದ್ದರು. ಅದೇ ರೀತಿಯಲ್ಲಿ ನಮ್ಮ ಮೂಲನಿವಾಸಿ ಅಂಬೇಡ್ಕರ್ ಸಂಘದವತಿಯಿಂದ 2ನೇ ಮೂರ್ತಿಯಾಗಿದ್ದು ಇದು 11/12/22ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ತಾವೆಲ್ಲರೂ ಬಂದು ಭಾಗವಹಿಸಿ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಈ ಕಾರ್ಯಕ್ರಮನ ಯಶಸ್ವಿಗೊಳ್ಳಿಸೋಣ… ಜೈ ಭೀಮ್ ಜೈ ಮೂಲನಿವಾಸಿ ಅಂಬೇಡ್ಕರ್ ಸಂಘ… ಇಂತೀ ನಿಮ್ಮ ಪಿ ಲೋಕೇಶ್ ನಮ್ಮತುಮಕೂರು.ಕಾಂನ…

Read More