Subscribe to Updates
Get the latest creative news from FooBar about art, design and business.
- ಹಲವಾರು ಭಾಷೆಗಳಿಗೆ ನಮ್ಮ ಕನ್ನಡ ತಾಯಿ: ವೈ.ಡಿ.ರಾಜಣ್ಣ
- ಏಕತಾ ನಡಿಗೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ!
- ಹೊಸದಾಗಿ 30 ಕೊಳವೆ ಬಾವಿ ಕೊರೆಸಲು ಜಿ.ಪಂ. ಸಿಇಒ ಜಿ.ಪ್ರಭು ಅನುಮೋದನೆ
- ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ
- ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸದಿದ್ದರೆ ಹೋರಾಟ: ಭಾರತೀಯ ಕಿಸಾನ್ ಸಂಘ
- ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ: ಪತ್ತೆಯಾಗದ ಹುಲಿಯ ಗುರುತು!
- ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಿಧನ
- ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!
Author: admin
ನವದೆಹಲಿ : ರಾಜ್ಯದ ಬೆಟ್ಟ ಕುರುಬ ಸಮುದಾಯಕ್ಕೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕರ್ನಾಟಕದ ವಾಸವಿರುವ ಬೆಟ್ಟ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಪರಿಷ್ಕೃತ ಎಸ್ಟಿ ಪಟ್ಟಿಯನ್ನು ಲೋಕಸಭೆಯಲ್ಲಿ ಕೇಂದ್ರ ಸರಕಾರ ಮಂಡಿಸಿದೆ. ಅನುಸೂಚಿತ ಬುಡಕಟ್ಟುಗಳು ಆದೇಶ, 1950 ರಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳ ಮೂಲಕ ತಮಿಳುನಾಡು, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಛತ್ತೀಸ್ ಗಢದ ನಾಲ್ಕು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಮಾರ್ಪಡಿಸುವ ನಾಲ್ಕು ಮಸೂದೆಗಳನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದೆ. ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಕೆಳಮನೆಯಲ್ಲಿ ದಿನದ ಕಲಾಪದ ಮೊದಲಾರ್ಧದಲ್ಲಿ ಈ ಮಸೂದೆಗಳನ್ನು ಮಂಡಿಸಿದ್ದಾರೆ. ಇದರಲ್ಲಿ ಈಗಾಗಲೇ ಎಸ್ಟಿ ಪಟ್ಟಿಯಲ್ಲಿರುವ ಕರ್ನಾಟಕದ ಕಾಡು ಕುರುಬರೇ ಬೆಟ್ಟ ಕುರುಬರು ಎಂಬುದನ್ನು ಸೇರಿಸಲಾಗಿದೆ. ಹೀಗಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಸೂದೆ ಅಂಗೀಕಾರವಾದ ಬಳಿಕ ಕಾಯ್ದೆಯಾಗಿ ಬದಲಾಗಲಿದೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಕೊರಟಗೆರೆ: ಕಲ್ಪತರು ನಾಡಿಗೆ ಅಕ್ಷರ ಜ್ಞಾನ ನೀಡಿದ ಶ್ರೀಮಠ ನಮ್ಮ ಹೆಮ್ಮೆಯ ಸಿದ್ದಗಂಗಾ ಕ್ಷೇತ್ರ.. ಟೀ ಅಂಗಡಿಯಲ್ಲಿ ಚಹಾ ಮಾಡುತ್ತಿದ್ದ ಸಾಮಾನ್ಯ ಮನುಷ್ಯ ಇಂದು ದೇಶದ ಪ್ರಧಾನಿ.. ನಮ್ಮ ಮಕ್ಕಳು ಸರಕಾರಿ ಕೆಲಸ ಪಡೆಯದಿದ್ರು ಪರವಾಗಿಲ್ಲ—ಭಾರತ ದೇಶವನ್ನು ಪೂಜಿಸುವ ಉತ್ತಮ ಪ್ರಜೆಯಾದ್ರೇ ಸಾಕು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ತಿಳಿಸಿದರು. ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ನರಸಾಪುರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮತ್ತು ಸಿ.ಎನ್.ದುರ್ಗ ಹೋಬಳಿಯ ನೇಗಲಾಲದ ಇಂದಿರಾ ಗಾಂಧಿ ವಸತಿಶಾಲೆಯ ನೂತನ ಕಟ್ಟಡದ ಉದ್ಘಾಟನೆ ನೇರವೇರಿಸಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಪವಾಡ ಪುರುಷ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಕೋಟಿಗಟ್ಟಲೆ ಸುರಿದು ಸರಕಾರ ಹೈಟೆಕ್ ಶಾಲೆ ನಿರ್ಮಾಣ ಮಾಡಿದೆ. ವಿಶ್ವಕ್ಕೆ ಮಾನವ ಸಂಪನ್ಮೂಲ ನೀಡುವ ದೇಶ ನಮ್ಮದು. ಶೈಕ್ಷಣಿಕ ಅಭಿವೃದ್ದಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ವಿಶೇಷ ಆದ್ಯತೆ ನೀಡಿದೆ. ನಮ್ಮೂರಲ್ಲೆ ವ್ಯವಸಾಯಕ್ಕೆ ಜನರೇ ಸಿಗುತ್ತಿಲ್ಲ. ತಂತ್ರಜ್ಞಾನ ಹೆಚ್ಚಾಗಿದೆ ಆದರೇ ಶ್ರಮ ಇಲ್ಲದಿದ್ದರೇ ಆಗೋದಿಲ್ಲ ಎಂದು ಹೇಳಿದರು. ಕೊರಟಗೆರೆ ಶಾಸಕ…
ತುರುವೇಕೆರೆ: ಪಟ್ಟಣದಲ್ಲಿ ತಾಲೂಕು ಕಚೇರಿ ಮುಂಭಾಗ ಕೊಬ್ಬರಿಗೆ ಇಪ್ಪತ್ತು ಸಾವಿರ ನಿಗದಿ ಬೆಲೆಗೆ ಒತ್ತಾಯಿಸಿ ತೆಂಗು ಮತ್ತು ಬೆಳೆಗಾರರ ಸಂಘದ ಅಧ್ಯಕ್ಷರಾದ ಎನ್.ಆರ್.ಜಯರಾಮ್ ಗ್ರೇಡ್ 2 ತಹಶೀಲ್ದಾರ್ ಗೆ ಮನವಿ ಪತ್ರ ನೀಡಿದರು. ಈ ವೇಳೆ ಮಾತನಾಡಿದ ಜಯರಾಮ್, ಕೊಬ್ಬರಿ ಬೆಲೆ ಜನವರಿ ತಿಂಗಳಲ್ಲಿ ಕ್ವಿಂಟಾಲ್ ಗೆ 18ರಿಂದ 19 ಸಾವಿರದ ಆಸು ಪಾಸಿನಲ್ಲಿತ್ತು. ನಂತರದ ತಿಂಗಳುಗಳಲ್ಲಿ ಹಂತ ಹಂತವಾಗಿ ಇಳಿದು 11 ಸಾವಿರಕ್ಕೆ ಬಂದು ನಿಂತಿದೆ. ತೆಂಗಿನ ಮರಗಳಲ್ಲಿ ಹೊಂಬಾಳೆ ಹೊಡೆದು ಎಳೆನೀರು, ತೆಂಗಿನಕಾಯಿ ಕಿತ್ತು ಕೊಬ್ಬರಿ ಮಾಡುವ ಒಟ್ಟಿಗೆ ಎರಡು ವರ್ಷ ಕಾಲಾವಕಾಶ ಬೇಕಾಗುತ್ತದೆ.ಈ ಕಾರಣಕ್ಕಾಗಿ ರೈತರಿಗೆ ವರ್ಷಕ್ಕೆ 13 ರಿಂದ 14,000 ಖರ್ಚನ್ನು ಮಾಡುತ್ತಾರೆ ಇದರಿಂದ ಲಾಭಕ್ಕಿಂತ ಅಸಲು ಹೆಚ್ಚಾಗುತ್ತದೆ ಎಂದರು. ಸರ್ಕಾರ ಕೂಡಲೇ ರೈತ ಬೆಳೆದ ಕೊಬ್ಬರಿಯ ಖರೀದಿಯನ್ನು ನಪೆಡ್ ಮೂಲಕ ಖರೀದಿಸಿ, ಪ್ರತಿ ಕ್ವಿಂಟಾಲ್ ಗೆ 20,000 ನಿಗದಿತ ಬೆಲೆಯನ್ನು ನೀಡಬೇಕು. ಇಲ್ಲದಿದ್ದಲ್ಲಿ ತಾಲೂಕಿನ ಎಲ್ಲಾ ರೈತ ಸಂಘಟನೆಗಳ ಹಾಗೂ ವಿವಿಧ ರಾಜಕೀಯ ಪಕ್ಷಗಳ…
ಮ್ಯಾಂಡಸ್ ಚಂಡಮಾರುತದಿಂದಾಗಿ ಚಳಿ ಹೆಚ್ಚಾಗಿದ್ದು, ಇದರಿಂದ ಮಕ್ಕಳಲ್ಲಿ ಜ್ವರ, ಉಸಿರಾಟ ಸಮಸ್ಯೆ, ವೈರಲ್ ಬ್ರಾಂಕೋ ನ್ಯೂಮೋನಿಯಾ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ದಿಢೀರ್ ಏರಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ನಿರಂತರ ಜ್ವರ, ಕೆಮ್ಮು, ನೆಗಡಿ, ಪ್ರಜ್ಞೆ ಕಳೆದುಕೊಳ್ಳುವುದು ಸೇರಿದಂತೆ ಮಕ್ಕಳು ಆಹಾರವನ್ನು ಸರಿಯಾಗಿ ಸೇವನೆ ಮಾಡದೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ 40% ಹೆಚ್ಚಿದೆ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅಪಾಯ ಖಂಡಿತ. ಸಾಧ್ಯವಾದಷ್ಟು ಬಿಸಿ ನೀರು ಕುಡಿಯೋದಕ್ಕೆ ಕೊಡಿ, ಮಳೆಯಲಿ ನೆನೆಯಲು ಬಿಡಬೇಡಿ, ಕೋಲ್ಡ್ ಅಥವಾ ತಣ್ಣನೆಯ ಪದಾರ್ಥ ಕೊಡಬೇಡಿ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತುರುವೇಕೆರೆ: ತಾಲೂಕಿಗೆ ಇದೇ ತಿಂಗಳು 12ನೇ ತಾರೀಕಿನಂದು ಜಾತ್ಯತೀತ ಜನತಾದಳದ ಪಂಚ ರತ್ನ ರಥಯಾತ್ರೆ ಆಗಮಿಸಲಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇನ್ನು ಅನೇಕ ಮುಖಂಡರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈಗಾಗಲೇ ತುಮಕೂರು ಜಿಲ್ಲೆಗೆ ಈ ರಥಯಾತ್ರೆ ಆಗಮಿಸಿ, ಗುಬ್ಬಿ, ಶಿರಾ, ಮಧುಗಿರಿ, ಪಾವಗಡದಲ್ಲಿ ಯಾತ್ರೆ ಮುಗಿದಿದ್ದು, 12ರಂದು ತುರುವೇಕೆರೆ ತಾಲೂಕಿನ, ಗ್ರಾಮಗಳಿಗೆ ಆಗಮಿಸಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಹಾಗೂ ವ್ಯವಸ್ಥಿತ ಶಿಕ್ಷಣವನ್ನು ಉಚಿತವಾಗಿ ನೀಡುವುದು, ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣ, ರೈತರಿಗೆ ಆಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿ ಅಳವಡಿಕೆ, ಸರಿಯಾದ ಬೆಳೆ ಶೇಖರಣ ವ್ಯವಸ್ಥೆ, ಲಾಭದಾಯಕವಾದ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಯುವಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ, ವಸತಿ ಇಲ್ಲದವರಿಗೆ ಸರಕಾರದಿಂದಲೇ ವಸತಿ ಕಟ್ಟಿಸಿ ಕೊಡುವ ಯೋಜನೆ ಹಾಗೂ ಸ್ತ್ರೀಶಕ್ತಿ ಸಂಘದ ಎಲ್ಲಾ ಸಾಲವನ್ನು…
ಕೊರಟಗೆರೆ: ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿ ಅವರ ಮೇಲೆ ಪೊಲೀಸರ ದೌರ್ಜನ್ಯವನ್ನ ಖಂಡಿಸಿ ಕೊರಟಗೆರೆ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತ್ತು ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜು ತಿಳಿಸಿದರು. ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯಾದ ಅವರಣದ ಮುಂಭಾಗದಲ್ಲಿ ತಾಲ್ಲೂಕು ವಕೀಲರ ಸಂಘದ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಡಿ.3ರಂದು ಮಂಗಳೂರಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ಯುವ ವಕೀಲ ಕುಲದೀಪ್ ಶಟ್ಟಿ ಅವರ ಮೇಲೆ ಅಮಾನುಷವಾಗಿ ವರ್ತನೆ ಮಾಡಿ, ವಕೀಲರ ವೃತ್ತಿ ಭಾಂದವರಿಗೆ ಅವಮಾನ ಮಾಡಿದ್ದಾರೆ. ಅವರ ತಾಯಿ ಕಾಡಿಬೇಡಿ ಕೈಮುಗಿದುಕೊಂಡರೂ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ವಕೀಲ ಎಂದರೂ ಸಹ ನೀನು ನ್ಯಾಯಲಯದಲ್ಲಿ ವಾದ ಮಾಡು ಎಂದು ಪೊಲೀಸರು ದೌರ್ಜನ್ಯ ಮಾಡಿದ್ದಾರೆ. ಈ ಕೂಡಲೇ ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಬೇಕು ಎಂದು ಒತ್ತಾಯ ಮಾಡಿದರು. ಹಿರಿಯ ವಕೀಲ ಟಿ.ಕೃಷ್ಣಮೂರ್ತಿ ಮಾತನಾಡಿ, ಮಂಗಳೂರಿನಲ್ಲಿ ಯುವ ವಕೀಲ ಕುಲದೀಪ್ ಶಟ್ಟಿ ಅವರನ್ನ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಏಕಾಏಕಿ ಅವರ ಮನೆಗೆ ನುಗ್ಗಿ…
ಮಂಡ್ಯದಲ್ಲಿ ಅಯ್ಯಪ್ಪ ಭಕ್ತರೊಬ್ಬರು ವಿಶೇಷವಾಗಿ ಶಬರಿಮಲೆ ಯಾತ್ರೆ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಅವರು ಪ್ರತಿ ವರ್ಷ ತುಮಕೂರಿನ ಮಧುಗಿರಿಯವರೆಗೆ ಪಾದಯಾತ್ರೆ ಮಾಡುತ್ತ ಬಂದಿದ್ದಾರೆ. ಈ ಬಾರಿ ನಟ ದಿ. ಪುನೀತ್ ರಾಜ್ಕುಮಾರ್ ಚಿತ್ರವುಳ್ಳ ಬಾವುಟ ಹಿಡಿದು ಶಬರಿಮಲೆಯತ್ತ ಪ್ರಯಾಣ ಬೆಳೆಸಿದ್ದಾರೆ. ಗಂಗಾಧರ್ ಬೆಳೆ ನಷ್ಟದಿಂದ ಕಂಗಾಲಾಗಿ ಅಯ್ಯಪ್ಪನಿಗೆ ಹರಕೆಯನ್ನ ಹೊತ್ತುಕೊಂಡಿದ್ದರು. ಶಬರಿಮಲೆಗೆ ಪಾದಯಾತ್ರೆ ಮಾಡಿದ ಬಳಿಕ ಎಲ್ಲವೂ ಶುಭವೇ ಆಗಿತ್ತು. ಕಳೆದ ಬಾರಿ ಶಬರಿಮಲೆಗೆ ಹೋಗುವಾಗ ಪುನೀತ್ ರಾಜ್ ಕುಮಾರ್ ಮೃತಪಟ್ಟಿದ್ದರು. ಅಯ್ಯಪ್ಪನ ದರ್ಶನದ ಬಳಿಕ ನೇರವಾಗಿ ಅಪ್ಪು ಸಮಾಧಿಗೆ ಗಂಗಾಧರ್ ಭೇಟಿ ಕೊಟ್ಟಿದ್ದರು. ಈ ಹಿನ್ನಲೆ ಪ್ರತಿ ವರ್ಷ ಹರಕೆ ತೀರಿಸುವ ಸಲುವಾಗಿ ಹಾಗೂ ಅಪ್ಪುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಪಾದಯಾತ್ರೆ ಮಾಡುತ್ತಿದ್ದಾರೆ. ಮಧುಗಿರಿಯಿಂದ ಶಬರಿಮಲೆಗೆ ಕಾಲ್ನಡಿಗೆಯ ಮೂಲಕವೇ ಪಾದ ಯಾತ್ರೆ ಮಾಡುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
18ರಿಂದ 25 ವರ್ಷದವರಿಗೆ ಉಚಿತವಾಗಿ ಕಾಂಡೋಮ್ ಒದಗಿಸಲು ಫ್ರಾನ್ಸ್ ಸರ್ಕಾರ ನಿರ್ಧರಿಸಿದೆ. ಫಾರ್ಮಸಿಗಳು 18ರಿಂದ 25 ವರ್ಷ ವಯಸ್ಸಿನವರಿಗೆ ಫ್ರೀಯಾಗಿ ಕಾಂಡೋಮ್ ನೀಡುತ್ತವೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಘೋಷಿಸಿದ್ದಾರೆ. ಔಷಧಾಲಯಗಳಲ್ಲಿ ಜನವರಿ 1ರಿಂದ 18ರಿಂದ 25 ವರ್ಷದವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಮ್ಯಾಕ್ರನ್ ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಲೈಂಗಿಕವಾಗಿ ಹರಡುವ ರೋಗಗಳ (ಎಸ್‌ಟಿಡಿ) ಹರಡುವಿಕೆ ಕಡಿಮೆ ಮಾಡುವ ಪ್ರಯತ್ನದಲ್ಲಿ ಫ್ರಾನ್ಸ್‌ನ ಯುವಜನರು ಕಾಂಡೋಮ್‌ಗಳನ್ನು ಉಚಿತವಾಗಿ ಪಡೆಯಬಹುದು. ಫ್ರೆಂಚ್ ಆರೋಗ್ಯ ಅಧಿಕಾರಿಗಳ ಪ್ರಕಾರ, ದೇಶದಲ್ಲಿ 2020 ಮತ್ತು 2021ರಲ್ಲಿ ಅನಗತ್ಯ ಗರ್ಭಧಾರಣೆ ದರವು ಶೇಕಡಾ 30ರಷ್ಟು ಏರಿಕೆಯಾಗಿದೆ. ಹೀಗಾಗಿ ಫ್ರೆಂಚ್ ಸರ್ಕಾರವು 25 ವರ್ಷದೊಳಗಿನ ಎಲ್ಲಾ ಮಹಿಳೆಯರಿಗೆ ಉಚಿತ ಜನನ ನಿಯಂತ್ರಣವನ್ನು ನೀಡಲು ಪ್ರಾರಂಭಿಸಿತು. ಆರ್ಥಿಕ ತೊಂದರೆಗಳಿಂದಾಗಿ ಯುವತಿಯರು ಗರ್ಭನಿರೋಧಕವನ್ನು ತ್ಯಜಿಸುವುದನ್ನು ತಡೆಯಲು 18 ವರ್ಷದೊಳಗಿನವರಿಗೆ ಉದ್ದೇಶಿಸಿರುವ ಕಾರ್ಯಕ್ರಮವನ್ನು ವಿಸ್ತರಿಸಿದೆ. ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಮತ್ತು ಕೋವಿಡ್ ಲಸಿಕೆಯ ಬೂಸ್ಟರ್…
ಮಂಡ್ಯದಲ್ಲಿ ಅಯ್ಯಪ್ಪ ಭಕ್ತರೊಬ್ಬರು ವಿಶೇಷವಾಗಿ ಶಬರಿಮಲೆ ಯಾತ್ರೆ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಅವರು ಪ್ರತಿ ವರ್ಷ ತುಮಕೂರಿನ ಮಧುಗಿರಿಯವರೆಗೆ ಪಾದಯಾತ್ರೆ ಮಾಡುತ್ತ ಬಂದಿದ್ದಾರೆ. ಈ ಬಾರಿ ನಟ ದಿ. ಪುನೀತ್ ರಾಜ್ಕುಮಾರ್ ಚಿತ್ರವುಳ್ಳ ಬಾವುಟ ಹಿಡಿದು ಶಬರಿಮಲೆಯತ್ತ ಪ್ರಯಾಣ ಬೆಳೆಸಿದ್ದಾರೆ. ಗಂಗಾಧರ್ ಬೆಳೆ ನಷ್ಟದಿಂದ ಕಂಗಾಲಾಗಿ ಅಯ್ಯಪ್ಪನಿಗೆ ಹರಕೆಯನ್ನ ಹೊತ್ತುಕೊಂಡಿದ್ದರು. ಶಬರಿಮಲೆಗೆ ಪಾದಯಾತ್ರೆ ಮಾಡಿದ ಬಳಿಕ ಎಲ್ಲವೂ ಶುಭವೇ ಆಗಿತ್ತು. ಕಳೆದ ಬಾರಿ ಶಬರಿಮಲೆಗೆ ಹೋಗುವಾಗ ಪುನೀತ್ ರಾಜ್ ಕುಮಾರ್ ಮೃತಪಟ್ಟಿದ್ದರು. ಅಯ್ಯಪ್ಪನ ದರ್ಶನದ ಬಳಿಕ ನೇರವಾಗಿ ಅಪ್ಪು ಸಮಾಧಿಗೆ ಗಂಗಾಧರ್ ಭೇಟಿ ಕೊಟ್ಟಿದ್ದರು. ಈ ಹಿನ್ನಲೆ ಪ್ರತಿ ವರ್ಷ ಹರಕೆ ತೀರಿಸುವ ಸಲುವಾಗಿ ಹಾಗೂ ಅಪ್ಪುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಪಾದಯಾತ್ರೆ ಮಾಡುತ್ತಿದ್ದಾರೆ. ಮಧುಗಿರಿಯಿಂದ ಶಬರಿಮಲೆಗೆ ಕಾಲ್ನಡಿಗೆಯ ಮೂಲಕವೇ ಪಾದ ಯಾತ್ರೆ ಮಾಡುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಚು ಕಾಯಿಸಿದ್ದರಿಂದ ಪೋರ್ಚುಗಲ್ ತಂಡದ ಕೋಚ್ ವಿರುದ್ಧ ಅಸಮಾಧಾನ ಹೊರಹಾಕಿರುವ ವಿಶ್ವದ ಅಗ್ರಮಾನ್ಯ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಟೂರ್ನಿಯಿಂದ ಹೊರಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಸ್ವಿಜರ್ ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಕಣಕ್ಕಿಳಿಸದೇ ಬೆಂಚಿನಲ್ಲಿ ಕೂರಿಸಿದ್ದರು. ಇದೀಗ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಅಲ್ಪ ಸಮಯ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕೋಚ್ ನಡೆಯಿಂದ ಬೇಸರಗೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಆಡಲು ಅವಕಾಶ ನೀಡದೇ ಇದ್ದರೆ ವಿಶ್ವಕಪ್ ನಿಂದ ಹೊರನಡೆಯುವುದಾಗಿ 37 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಎಚ್ಚರಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಪೋರ್ಚುಗಲ್ ಫುಟ್ಬಾಲ್ ಸಂಸ್ಥೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಬೆದರಿಕೆ ಹಾಕಿಲ್ಲ. ವಿಶ್ವಕಪ್ ನಲ್ಲಿ ತಂಡದ ಜೊತೆ ಅವರು ಇರಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…