Subscribe to Updates
Get the latest creative news from FooBar about art, design and business.
- ಹಲವಾರು ಭಾಷೆಗಳಿಗೆ ನಮ್ಮ ಕನ್ನಡ ತಾಯಿ: ವೈ.ಡಿ.ರಾಜಣ್ಣ
- ಏಕತಾ ನಡಿಗೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ!
- ಹೊಸದಾಗಿ 30 ಕೊಳವೆ ಬಾವಿ ಕೊರೆಸಲು ಜಿ.ಪಂ. ಸಿಇಒ ಜಿ.ಪ್ರಭು ಅನುಮೋದನೆ
- ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ
- ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸದಿದ್ದರೆ ಹೋರಾಟ: ಭಾರತೀಯ ಕಿಸಾನ್ ಸಂಘ
- ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ: ಪತ್ತೆಯಾಗದ ಹುಲಿಯ ಗುರುತು!
- ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಿಧನ
- ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!
Author: admin
ಬಿಜೆಪಿ ವಿಧಾನ ಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಸದ್ಯದಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅವರು ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಪುತ್ರ ಪೂರ್ವಜ್ ವಿಶ್ವನಾಥ್ ಈಗಾಗಲೇ ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವುದರಿಂದ ಸದ್ಯದಲ್ಲೇ ವಿಶ್ವನಾಥ್ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಶ್ವನಾಥ್ ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷ ಸೇರಿ ರಾಜ್ಯಾಧ್ಯಕ್ಷರೂ ಆಗಿದ್ದರು. ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆಪರೇಷನ್ ಕಮಲದ ವೇಳೆ ಬಿಜೆಪಿಗೆ ಹಾರಿದ್ದ ಅವರು ಉಪ ಚುನಾವಣೆಯಲ್ಲಿ ಸೋತಿದ್ದರು. ಪರಿಷತ್ ಸದಸ್ಯರಾಗಿದ್ದ ಅವರಿಗೆ ಬಿಜೆಪಿ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಿಲ್ಲ ಎಂಬ ಅಸಮಾಧಾನವಿದೆ. ಪಠ್ಯ ಪರಿಷ್ಕರಣೆ ವಿಚಾರ, ಹಿಜಾಬ್ ವಿಚಾರ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿಗೆ ವಿರುದ್ಧವಾದ ಹೇಳಿಕೆ ನೀಡುತ್ತಿದ್ದ ವಿಶ್ವನಾಥ್ ಇತ್ತೀಚೆಗೆ ಬಿಜೆಪಿ ಜತೆ ಅಂತರ ಕಾಯ್ದುಕೊಂಡಿದ್ದರು. ವಿಶ್ವನಾಥ್ ಪುತ್ರ ಪೂರ್ವಜ್ ನಂಜನಗೂಡು ತಾಲೂಕು ತಗಡೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ…
ಮಹಾರಾಷ್ಟ್ರದ ಸಚಿವರಿಗೆ, ಸಂಸದರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಓರ್ವ ಸಂಸದರ ಪ್ರವಾಸ ಪಟ್ಟಿ ಬಂದಿದೆ. ಈ ಮುಂಚೆ ಡಿಸೆಂಬರ್ 3ಕ್ಕೆ ಬರುವುದಾಗಿ ಹೇಳಿದ್ದರು. ಇದೀಗ ಡಿಸೆಂಬರ್ 6ಕ್ಕೆ ಬರುವುದಾಗಿ ಹೇಳಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಅವರಾಗೇ ಪ್ರವಾಸ ರದ್ದು ಪಡಿಸುವ ನಿರೀಕ್ಷೆ ಇದೆ. ಇಲ್ಲವಾದರೆ ನಾವೇ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು. ಸಚಿವರು ಮತ್ತು ಸಂಸದರ ಭೇಟಿ ಸಂಬಂಧ ಈ ಹಿಂದೆ ಹೇಗೆ ಆದೇಶ ಹೊರಡಿಸಿ ತಡೆಯಲಾಗಿತ್ತೋ ಅದೇ ರೀತಿ ಬೆಳಗಾವಿ ನಿಷೇಧ ಆದೇಶ ಹೊರಡಿಸಲಾಗುವುದು. ಐಪಿಸಿ ಸೆಕ್ಷನ್ 143 ಪ್ರಕಾರ ಪ್ರತಿಬಂಧಕ ಕಾಯ್ದೆ ಹೊರಡಿಸುತ್ತೇವೆ. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಕರ್ನಾಟಕದ ಸಿಎಸ್ ಸಂದೇಶ ಕಳುಹಿಸಿದ್ದಾರೆ. ಬೆಳಗಾವಿಯ ಎಲ್ಲ ಗಡಿಭಾಗದಲ್ಲಿಯೂ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ ಎಂದು…
ಬೆಂಗಳೂರು; ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಅಂಕ ಗಳಿಸಿದ ಒಟ್ಟು 7 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು. ಘಟಿಕೋತ್ಸವದಲ್ಲಿ ಪದವಿ ವಿಭಾಗದ 222 ಮತ್ತು ಸ್ನಾತಕೋತ್ತರ ವಿಭಾಗದ 52 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 274 ವಿದ್ಯಾರ್ಥಿಗಳು ಪದವಿ, ಪ್ರಮಾಣ ಪತ್ರ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕರಾದ ಪ್ರೊ. ಪಿ. ಬಲರಾಮ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ವಿಜ್ಞಾನ ಪ್ರತಿಯೊಬ್ಬರ ಜೀವನದಲ್ಲೂ ಬಹು ಮುಖ್ಯ. ನೀವೆಲ್ಲಾ ಕೋವಿಡ್ ಕಾಲದ ಪದವೀಧರರು. ಆ ಸಮಯದಲ್ಲಿ ವಿಜ್ಞಾನ ಲೋಕದಲ್ಲಿ ಅನೇಕ ಸಂಶೋಧನೆಗಳನ್ನು ಕಂಡಿದ್ದೀರಿ. ಈ ಪ್ರಕೃತಿಯಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರಿಗೂ ವಿಜ್ಞಾನದ ಮಹತ್ವ ತಿಳಿದಿರಬೇಕು” ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿ ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ಬದುಕಿಗೂ ಅನಿವಾರ್ಯ ಮತ್ತು ಡಾ. ಎಚ್. ನರಸಿಂಹಯ್ಯನವರ ಕನಸೂ ಹೌದು” ಎಂದರು. ಪ್ರಥಮ ಅಂಕ ಪಡೆದ ಪದವಿ ವಿದ್ಯಾರ್ಥಿಗಳಾದ ಪ್ರಿಯಾಂಕ…
ಆಂಟೋನಿ ಬೇಗೂರು ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಮತ್ತು ಭಾರತೀಯ ಸಂವಿಧಾನದ ಪಿತಾಮಹ. ಮಹಾತ್ಮಾ ಗಾಂಧಿಯವರ ನಂತರ, ಅವರು ಸ್ವತಂತ್ರ ಭಾರತದ ಶ್ರೇಷ್ಠ ನಾಯಕ ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ಮಧುಮೇಹದಿಂದ ಬಳಲುತ್ತಿದ್ದ ಅಂಬೇಡ್ಕರರು 1955ರಲ್ಲಿ ಹದಗೆಡಲಾರಂಭಿಸಿದರು. ದೀನದಲಿತರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಾಬಾಸಾಹೇಬ್ ಡಾ.ಪಿ.ಆರ್.ಅಂಬೇಡ್ಕರ್ ಅವರು 1956ರ ಡಿಸೆಂಬರ್ 6ರಂದು ದೆಹಲಿಯ ತಮ್ಮ ಮನೆಯಲ್ಲಿ ಮಲಗಿದ್ದಾಗ ಇಹಲೋಕ ತ್ಯಜಿಸಿದರು. ಬೌದ್ಧಧರ್ಮದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರಿಂದ, ಅವರ ದೇಹವನ್ನು ಬೌದ್ಧ ವಿಧಿಗಳ ಪ್ರಕಾರ “ದಾದರ್ ಚೌಪತಿ” ಸಮುದ್ರತೀರದಲ್ಲಿ ದಹಿಸಲಾಯಿತು. ಮರಣೋತ್ತರವಾಗಿ, ಅವರಿಗೆ 1990 ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಅಂಬೇಡ್ಕರ್ ಬಹುಮುಖಿ ಅರ್ಥಶಾಸ್ತ್ರಜ್ಞರು, ಪ್ರಾಧ್ಯಾಪಕರು, ಕಾರ್ಮಿಕ ಸಚಿವರು, ವಕೀಲರು, ಷೇರು ಮಾರುಕಟ್ಟೆ ವ್ಯಾಪಾರ ಸಲಹೆಗಾರರಾಗಿದ್ದರು. ಆದರೆ ಇಂದಿಗೂ ಅವರನ್ನು ದಲಿತ ನಾಯಕನ ಸಂಕುಚಿತ ವಲಯದಲ್ಲಿಯೇ ಕಾಣಲಾಗುತ್ತಿದೆ. ಅಂಬೇಡ್ಕರ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲದವರೂ ಇದನ್ನು ದೃಢವಾಗಿ ನಂಬುತ್ತಾರೆ. ಅಂಬೇಡ್ಕರ್ ಅವರನ್ನು ಸಮಸ್ಯಾತ್ಮಕ ಮತ್ತು ವಿವಾದಾತ್ಮಕ ದೃಷ್ಟಿಕೋನದಿಂದ…
ಆಂಟೋನಿ ಬೇಗೂರು ಡಿಸೆಂಬರ್ 05 ರಂದು ಆಚರಿಸಲಾಗುತ್ತದೆ. ಭೂಮಿಯ ಮೇಲಿನ ಮಣ್ಣಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಜನಸಂಖ್ಯೆಯ ವಿಸ್ತರಣೆಯಿಂದಾಗಿ ಬೆಳೆಯುತ್ತಿರುವ ಸಮಸ್ಯೆಯನ್ನು ಎತ್ತಿ ಹಿಡಿಯಲು ಪ್ರತಿ ವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕ ಮಣ್ಣು ಪ್ರತಿದಿನ ಜನಸಂಖ್ಯೆಯ ವಿಸ್ತರಣೆಯಿಂದಾಗಿ ಬೆಳೆಯುತ್ತಿರುವ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಆದ್ದರಿಂದ, ಮಣ್ಣಿನ ಸವಕಳಿಯನ್ನು ಕಡಿಮೆ ಮಾಡಲು, ಫಲವತ್ತತೆಯನ್ನು ಕಾಪಾಡಿಕೊಳ್ಳಲು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಹೆಜ್ಜೆ ಇಡುವುದು ಅವಶ್ಯಕ. ಮಣ್ಣು ವಿವಿಧ ಪ್ರಮಾಣದಲ್ಲಿ ಖನಿಜಗಳು, ಸಾವಯವ ಪದಾರ್ಥಗಳು ಮತ್ತು ಗಾಳಿಯಿಂದ ಕೂಡಿದೆ. ಇದು ಸಸ್ಯದ ಬೆಳವಣಿಗೆಗೆ ಮಾಧ್ಯಮವನ್ನು ಒದಗಿಸುತ್ತದೆ, ಅನೇಕ ಕೀಟಗಳು ಮತ್ತು ಇತರ ಜೀವಿಗಳಿಗೆ ಆವಾಸಸ್ಥಾನವನ್ನು ಒದಗಿಸುತ್ತದೆ. ಇದು ಮೇಲ್ಮೈ ನೀರು ಮತ್ತು ವಾತಾವರಣದ ಅನಿಲಗಳ ನಿರ್ವಹಣೆಗಾಗಿ ಶೋಧನೆ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ನಾಲ್ಕು ಅಗತ್ಯಗಳಲ್ಲಿ ಆಹಾರ, ಬಟ್ಟೆ, ವಸತಿ ಮತ್ತು ಔಷಧ ಸೇರಿವೆ. ಇದು ಮೇಲ್ಮೈ ನೀರು ಮತ್ತು ವಾತಾವರಣದ ಅನಿಲಗಳ ನಿರ್ವಹಣೆಗಾಗಿ ಶೋಧನೆ…
ಬೀಗ ಹಾಕಿದ ಒಂಟಿ ಮನೆಗಳನ್ನು ಗುರುತಿಸಿ ದೋಚುತ್ತಿದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.ಮೈಸೂರು ಮೂಲದ ರಮ್ಯಾ ಹಾಗೂ ಬೆಂಗಳೂರು ಉತ್ತರಹಳ್ಳಿ ಮೂಲದ ನಾಗರಾಜ್ ಬಂಧಿತ ಆರೋಪಿಗಳು. ರಮ್ಯಾ ಹಾಗೂ ನಾಗರಾಜ್ ಪರಸ್ಪರ ಪರಿಚಯ ಆದ ನಂತರ ಇನ್‍ಸ್ಟಾಗ್ರಾಮ್ ಮೂಲಕ ಚಾಟ್ ಮಾಡಿಕೊಂಡು ಮತ್ತಷ್ಟು ಸ್ನೇಹ ಬೆಳೆಸಿಕೊಂಡಿದ್ದರು. ಸ್ನೇಹ ಪ್ರೀತಿಗೆ ತಿರುಗಿದ ಬಳಿಕ ಮದುವೆಯಾಗಿದ್ದರು. ಮದುವೆಯ ಬಳಿಕ ಜೀವನ ನಡೆಸಲು ನಾಗರಾಜ್ ಮತ್ತು ರಮ್ಯ ಕಳ್ಳತನ ಮಾಡಲು ಶುರು ಮಾಡಿದ್ದರು. ಇಬ್ಬರು ಪ್ರಮುಖ ರಸ್ತೆಗಳಲ್ಲಿ ತಿರುಗಿ ವಸತಿ ಸ್ಥಳಗಳಲ್ಲಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡ್ತಿದ್ರು. ನಾಗರಾಜ್ ಕಳ್ಳತನ ಮಾಡಲು ಮನೆ ಒಳಗೆ ಹೋಗಿದ್ರೆ ರಮ್ಯ ಬಾಗಿಲಲ್ಲಿ ನಿಂತು ಕಾವಲು ನಿಂತಿರುತ್ತಿದ್ದಳು. ಯಾರಾದರೂ ಬಂದರೆ ನಾಗರಾಜ್‍ಗೆ ಸಿಗ್ನಲ್ ಕೊಟ್ಟು ಪರಾರಿ ಆಗುತ್ತಿದ್ದರು. ಕದ್ದ ಚಿನ್ನವನ್ನು ರಮ್ಯ ಅಡಮಾನ ಇಟ್ಟು ಹಣ ಪಡೆಯುತ್ತಿದ್ದರು. ಹೀಗೆ ಜೀವನ ನಡೆಸುತ್ತಿದ್ದ ಚಾಲಾಕಿ ಜೋಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದೆ. ಒಂಟಿ ಮನೆಗಳ ಕಳ್ಳತನದ ಬಳಿಕ ಜ್ಞಾನಭಾರತಿ…
ಕಿರುತೆರೆಯ ತಾರಾ ಜೋಡಿಯಾದ ಚಂದನ್ ಕುಮಾರ್ ಮತ್ತು ಕವಿತಾ ಬೆಂಗಳೂರಿನಲ್ಲಿ ತಮ್ಮ ಹೊಸ ಹೋಟೆಲ್‌ಗೆ ಚಾಲನೆ ನೀಡಿದ್ದಾರೆ. ಸೀರಿಯಲ್, ಸಿನಿಮಾ ಅಂತಾ ಬ್ಯುಸಿಯಾಗಿರುವ ಚಂದನ್ ಮತ್ತು ಕವಿತಾ ದಂಪತಿ ಇದೀಗ ಹೋಟೆಲ್ ಉದ್ಯಮದತ್ತ ಮುಖ ಮಾಡಿದ್ದು, ಮೈಸೂರು ರಸ್ತೆಯಲ್ಲಿ ಮಂಡಿಪೇಟೆ ಪಲಾವ್ ಎಂಬ ಹೊಸ ಹೋಟೆಲ್ ಆರಂಭಿಸಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಬೆಂಗಳೂರು ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಚಂದನ್ ಕುಮಾರ್ ನಟನೆಯ ಜೊತೆ ಹೋಟೆಲ್ ಉದ್ಯಮದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬಿರಿಯಾನಿ ಹೋಟೆಲ್‍ನಲ್ಲಿ ಸ್ಯಾಂಡಲ್‍ವುಡ್ ನಟರಿಂದ ತೊಡಗಿ ರಾಜಕೀಯ ಮುಖಂಡರೂ ಬಿರಿಯಾನಿ ಸವಿದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಈಗ ಮೈಸೂರು ರೋಡ್‍ನಲ್ಲಿ ಮಡಿಪೇಟೆ ಪಲಾವ್ ಎಂಬ ಹೋಟೆಲ್ ತೆರೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಚಂದನ್ ಅವರ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನವಾಗಿತ್ತು. ಈಗ ಮತ್ತಷ್ಟು ಭದ್ರತೆ ಒದಗಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ಸಾಫ್ಟ್‌ವೇರ್ ಎಂಜಿನಿಯರ್ ವೊಬ್ಬರನ್ನು ಅಪಹರಿಸಿ ₹ 8 ಲಕ್ಷ ಹಾಗೂ ಚಿನ್ನಾಭರಣ ಕಿತ್ತುಕೊಂಡಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊರಮಾವು ಪಿಎನ್‌ಟಿ ಬಡಾವಣೆಯ ತರುಣ್ ಗಣೇಶ್, ಗೋವಿಂದಪುರ ಜಾನಕಿರಾಮ ಬಡಾವಣೆಯ ವಿಘ್ನೇಶ್, ಹಳೇ ಬೈಯಪ್ಪನಹಳ್ಳಿಯ ಜೆ. ಚರೀಶ್ ಹಾಗೂ ಸುಬ್ಬಣ್ಣಪಾಳ್ಯದ ಮಣಿಕಂಠ ಬಂಧಿತರು. ಇವರಿಂದ ಕಾರು, ಮೊಬೈಲ್ ಹಾಗೂ ಚಾಕು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹೂಡಿ ನಿವಾಸಿ ಎಂಜಿನಿಯರ್ ರಾಹುಲ್ ನ. 26ರಂದು ಕಾರಿನಲ್ಲಿ ಕಲ್ಯಾಣನಗರಕ್ಕೆ ಹೋಗಿ ಅಲ್ಲಿಯೇ ಕಾರು ನಿಲ್ಲಿಸಿ ಪಬ್‌ಗೆ ತೆರಳಲು ಆಟೊದಲ್ಲಿ ಬ್ರಿಗೇಡ್ ರಸ್ತೆಗೆ ಹೋಗಿದ್ದರು. ಬ್ರಿಗೇಡ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಕೆಲವು ಯುವತಿಯರ ಫೋಟೊ ತೋರಿಸಿದ್ದ ವ್ಯಕ್ತಿ ಅವರನ್ನು ಪರಿಚಯ ಮಾಡಿಸುವುದಾಗಿ ಹೇಳಿದ್ದ. ತಮಗೆ ಯಾವ ಯುವತಿಯೂ ಬೇಡವೆಂದು ಹೇಳಿದ್ದ ರಾಹುಲ್ ಅಲ್ಲಿಂದ ಆಟೊದಲ್ಲಿ ಪುನಃ ಕಲ್ಯಾಣ ನಗರದತ್ತ ಹೊರಟಿದ್ದರು. ಬ್ರಿಗೇಡ್ ರಸ್ತೆಯಿಂದಲೇ ರಾಹುಲ್ ಅವರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು ಮಾರ್ಗಮಧ್ಯೆ ಅಡ್ಡಗಟ್ಟಿ ರಾಹುಲ್ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು…
ಮುಂಬೈನ ಕುರ್ಲಾದಲ್ಲಿ ಇತ್ತೀಚೆಗೆ ಭೀಕರ ಗ್ಯಾಂಗ್ ರೇಪ್ ಪ್ರಕರಣ ನಡೆದಿರುವುದು ವರದಿಯಾಗಿದೆ. 42 ವರ್ಷದ ಮಹಿಳೆಯ ಮೇಲೆ ಆಕೆಯ ನಿವಾಸದಲ್ಲಿ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಮಹಿಳೆಯ ಅಂಗಾಂಗಕ್ಕೆ ಸಿಗರೇಟ್‌ನಿಂದ ಸುಟ್ಟು, ಹಲ್ಲೆ ಮಾಡಿದ್ದಾರೆ. ಹರಿತವಾದ ಆಯುಧದಿಂದ ಆಕೆಯ ಮೈ ಕೈ ಗಾಯಗೊಳಿಸಿ ಖಾಸಗಿ ಅಂಗಕ್ಕೆ ಸಿಗರೇಟ್‌ನಿಂದ ಸುಟ್ಟಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅರೋಪಿಗಳು ಹಾಗೂ ಸಂತ್ರಸ್ತೆ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದೂ ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳು ಒಬ್ಬರಾದ ಮೇಲೊಬ್ಬರು ಅಸ್ವಾಭಾವಿಕ ಲೈಂಗಿಕ ಕೃತ್ಯ ನಡೆಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ. ಮಹಿಳೆಯ ಖಾಸಗಿ ಅಂಗಕ್ಕೆ ಸಿಗರೇಟ್‌ನಿಂದ ಸುಟ್ಟಿದ್ದು, ಎದೆ ಹಾಗೂ ಎರಡೂ ಕೈಗಳಿಗೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ. ಆರೋಪಿಯೊಬ್ಬ ಘಟನೆಯ ವೀಡಿಯೊ ರೆಕಾರ್ಡ್ ಮಾಡಿದ್ದು, ಪೊಲೀಸರಿಗೆ ದೂರು ನೀಡದರೆ ವೀಡಿಯೊ ಹರಿಬಿಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದೂ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಎನ್‌ಜಿಒ ಒಂದಕ್ಕೆ ಮಹಿಳೆ ಕಷ್ಟಗಳನ್ನು ಹೇಳಿಕೊಂಡಿದ್ದು, ಪೊಲೀಸರಿಗೆ ವಿಷಯ ತಿಳಿದ ಬಳಿಕ ಎಫ್‌ಐಆರ್…
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಸ್ ತಾಲೂಕಿನ ಅಕ್ಲುಜ್ ಎಂಬ ಗ್ರಾಮದಲ್ಲಿ ಶುಕ್ರವಾರ ಅವಳಿ ಸಹೋದರಿಯರು ಗುರು ಹಿರಿಯರು ಹಾಗೂ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ. ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಮದುವೆಯ ಕಾನೂನುಬದ್ಧತೆ ಮತ್ತು ನೈತಿಕತೆಯನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಮುಂಬೈನಲ್ಲಿ ಟೆಕ್ಕಿಗಳಾಗಿದ್ದಾರೆ. ಚಿಕ್ಕಂದಿನಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ಇತ್ತೀಚೆಗಷ್ಟೇ ತಂದೆ ನಿಧನರಾಗಿದ್ದರಿಂದ ತಾಯಿ ಜೊತೆ ವಾಸವಾಗಿದ್ದರು. ತಾಯಿಗೂ ಅನಾರೋಗ್ಯ ಕಾಡುತ್ತಿದ್ದು, ಮುಂದೆ ಒಬ್ಬರು ಮದುವೆ ಆದರೆ ಮತ್ತೊಬ್ಬಾಕೆಗೆ ಆಗಲಿಲ್ಲ ಅಂದರೆ ಹೇಗೆ ಬಿಟ್ಟು ಇರುವುದು ಎಂದು ಸಹೋದರಿಯರು ಅತುಲ್ ಎಂಬಾತನನ್ನು ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅತುಲ್ ಮೊದಲಿನಿಂದಲೂ ಅವಳಿ ಸಹೋದರಿಯರ ಕುಟುಂಬಕ್ಕೆ ಪರಿಚಿತನಾಗಿದ್ದ. ಯುವತಿಯರ ತಾಯಿಗೆ ಅನಾರೋಗ್ಯ ಕಾಡಲು ಆರಂಭಿಸಿದಾಗ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಅತುಲ್ ಅವಳಿ ಸಹೋದರಿಯರ ಜೊತೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದ…