Author: admin

ಆಂಟೋನಿ ಬೇಗೂರು 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆಯು ಪ್ರಮುಖ ಪಾತ್ರ ವಹಿಸಿತು ಮತ್ತು ಆಪರೇಷನ್ ಟ್ರೈಡೆಂಟ್ ಅನ್ನು ಪ್ರಾರಂಭಿಸಿತು. ಈ ದಾಳಿಯ ನೆನಪಿಗಾಗಿ, ಪ್ರತಿ ವರ್ಷ ಡಿಸೆಂಬರ್ 4 ರಂದು ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. ನೌಕಾಪಡೆಯ ದಿನದ ಇತಿಹಾಸ, ಅದರ ಮಹತ್ವ ಮತ್ತು ಅದನ್ನು ಹೇಗೆ ಆಚರಿಸಲಾಗುತ್ತದೆ. ಭಾರತೀಯ ನೌಕಾಪಡೆಯ ಪಾತ್ರ ಮತ್ತು ಸಾಧನೆಗಳನ್ನು ಗುರುತಿಸಲು ಡಿಸೆಂಬರ್ 4 ಅನ್ನು ಆಚರಿಸಲಾಗುತ್ತದೆ. ಈ ದಿನವು 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಟ್ರೈಡೆಂಟ್ ಅನ್ನು ಪ್ರಾರಂಭಿಸುವುದನ್ನು ಸ್ಮರಿಸುತ್ತದೆ ಮತ್ತು ಭಾರತೀಯ ನೌಕಾಪಡೆಯ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುತ್ತದೆ. ಭಾರತೀಯ ನೌಕಾಪಡೆಯು ಸಮತೋಲಿತ ಮೂರು ಆಯಾಮದ ಶಕ್ತಿಯಾಗಿದ್ದು ಅದು ಸಮುದ್ರದ ಮೇಲೆ ಮತ್ತು ಕೆಳಗೆ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಸಮರ್ಥವಾಗಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಪರಿಸ್ಥಿತಿಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ನೌಕಾಪಡೆಯ ದಿನದ 2020 ರ ಥೀಮ್…

Read More

ಹಿಂದೂಗಳು ಮುಸ್ಲಿಮರಂತೆ ಸಣ್ಣ ವಯಸ್ಸಿನಲ್ಲೇ ಮದುವೆಯಾಗಬೇಕು. ಆಗ ಹಿಂದೂಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ. ಮುಸ್ಲಿಂ ಪುರುಷರು 20ರಿಂದ 22 ವರ್ಷಕ್ಕೆ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು 18ಕ್ಕೆ ಮದುವೆಯಾಗುತ್ತಾರೆ. ಆದರೆ ಹಿಂದೂಗಳು ಮದುವೆಗೆ ಮೊದಲು ಒಬ್ಬರು, ಎರಡು ಅಥವಾ ಮೂರು ಅಕ್ರಮ ಪತ್ನಿಯರನ್ನು ಇಟ್ಟುಕೊಳ್ಳುತ್ತಾರೆ. ಮಕ್ಕಳಿಗೆ ಜನ್ಮ ನೀಡುವುದಿಲ್ಲ. ಆ ಮಹಿಳೆಯರೊಂದಿಗೆ ಎಂಜಾಯ್ ಮಾಡಿ ಆಮೇಲೆ ಬೇರೆ ಮದುವೆಯಾಗುತ್ತಾರೆ. ಇದರಿಂದ ಅವರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ ಎನ್ನುವ ಮೂಲಕ ಎಐಯುಡಿಎಫ್ ಮುಖ್ಯಸ್ಥ ವಿವಾದ ಸೃಷ್ಟಿಸಿದ್ದಾರೆ. ಹಿಂದೂಗಳು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಭಾರತ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಹೇಳಿಕೆಗಳ ಬಗ್ಗೆ ಮಾತನಾಡಿದ ಎಐಯುಡಿಎಫ್ ಮುಖ್ಯಸ್ಥ ಅಜ್ಮಲ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 40 ವರ್ಷದ ನಂತರ ಹಿಂದೂಗಳು ಪೋಷಕರ ಒತ್ತಡಕ್ಕೆ ಮದುವೆಯಾಗುತ್ತಾರೆ. ಅವರು ಮಕ್ಕಳನ್ನು ಪಡೆಯುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಹೇಗೆ ನಿರೀಕ್ಷಿಸಬಹುದು? ಇದೇ ಕಾರಣದಿಂದ…

Read More

ಬೆಂಗಳೂರಿನ ಜನರಿಗೆ ಚಿರತೆ ಭಯ ಇನ್ನು ಕಡಿಮೆಯಾಗಿಲ್ಲ, 2 ದಿನವಾದರೂ ಪ್ರತ್ಯಕ್ಷವಾಗದ ಚಿರತೆಗಳು ಸಿಲಿಕಾನ್ ಸಿಟಿ ಜನರ ನಿದ್ದೆಗೆಡಿಸಿವೆ. ಅರಣ್ಯಾಧಿಕಾರಿಗಳು ಬೋನು ಹಾಕಿ 2 ದಿನದಿಂದ ಹೊಂಚು ಹಾಕಿ ಕಾದು ಕುಳಿತಿದ್ದರೂ ಚಿರತೆಗಳು ಮಾತ್ರ ಸೆರೆಯಾಗಿಲ್ಲ. ಚಿರತೆಗಳು ಪ್ರತ್ಯಕ್ಷವಾಗದ ಕಾರಣ ತುರಹಳ್ಳಿ ಸುತ್ತಮುತ್ತಲ ಜನತೆಗೆ ಆತಂಕ ಹೆಚ್ಚಾಗಿದೆ. ಕೂಂಬಿಂಗ್​ನಲ್ಲಿ ಚಿರತೆ ಹೆಜ್ಜೆ ಗುರುತಷ್ಟೇ ಪತ್ತೆಯಾಗಿದ್ದು, ಚಿರತೆಗಳಿಗಾಗಿ 2 ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ತಲಾಶ್ ನಡೆಸುತ್ತಿದ್ದಾರೆ. ಚಿರತೆ ಭಯದಿಂದ ತುರಹಳ್ಳಿ ಸುತ್ತಮುತ್ತಲಿನ ಜನರಿಗೆ ವಾಕಿಂಗೂ ಇಲ್ಲ, ಶಾಪಿಂಗೂ ಇಲ್ಲ ಎಂಬಂತಾಗಿದೆ. ರಾತ್ರಿ ಹೊತ್ತು ಒಬ್ಬೊಬ್ಬರೆ ಓಡಾಡಲು ಹೆದರುತ್ತಿದ್ದ ಜನ ಈಗ ಚಿರತೆ ಕಾಟದಿಂದ ಬೆಳಿಗ್ಗೆಯೂ ಕೂಡ ಹೆದರುತ್ತಿದ್ದಾರೆ. ಈ ಕಾರಣದಿಂದ ದ್ವಿಚಕ್ರ ವಾಹನ ಸಂಚಾರವೂ ಕೂಡ ವಿರಳವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಬೂತ್ ಅಧ್ಯಕ್ಷ ರಾಜ್‌ಕುಮಾರ್ ಮನ್ನಾ ಅವರ ಮನೆಯಲ್ಲಿ ಬಾಂಬ್ ಸ್ಫೋಟಗೊಂಡು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಒಬ್ಬರನ್ನು ಸ್ಥಳೀಯ ತೃಣಮೂಲ ಮತಗಟ್ಟೆ ಅಧ್ಯಕ್ಷ ರಾಜ್‌ಕುಮಾರ್ ಮನ್ನಾ ಎಂದು ಗುರುತಿಸಲಾಗಿದೆ. ಕಚ್ಚಾ ಬಾಂಬ್ ತಯಾರಿಕೆ ವೇಳೆ ಸ್ಫೋಟ ಸಂಭವಿಸಿದೆ ಎಂದು ಬಿಜೆಪಿ ಆರೋಪಿಸಿದೆ. ನವೆಂಬರ್ 6ರಂದು ಪಶ್ಚಿಮ ಬಂಗಾಳದ ದೇಗಂಗಾದಲ್ಲಿ ಟಿಎಂಸಿ ನಾಯಕನ ಮನೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಬಾಂಬ್ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದರು. ಕೆಲವು ಕಾರ್ಮಿಕರು ಸ್ಥಳೀಯ ಟಿಎಂಸಿ ನಾಯಕರ ನಿರ್ಮಾಣ ಹಂತದ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ಬಾಂಬ್‌ಗಳನ್ನು ಮನೆಯ ಮೆಟ್ಟಿಲುಗಳ ಕೆಳಗೆ ಇಡಲಾಗಿತ್ತು. ಕಾರ್ಮಿಕರು ಬಾಂಬ್‌ಗಳನ್ನು ಸ್ಪರ್ಶಿಸಿದ ತಕ್ಷಣ ಭಾರೀ ಶಬ್ದದೊಂದಿಗೆ ಸ್ಫೋಟವಾಗಿದೆ ಎನ್ನಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸ್ಕ್ಯಾನಿಂಗ್ ವರದಿ ತಪ್ಪು ಕೊಟ್ಟು ಮಗುವಿನ ಬುದ್ಧಿಮಾಂದ್ಯತೆಗೆ ಕಾರಣವಾದ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ 15 ಲಕ್ಷ ರೂ. ದಂಡ ವಿಧಿಸಿದೆ. ಮದ್ದೂರಿನ ಡಿ2 ಡಯಾಗ್ನೋಸ್ಟಿಕ್ ಸೆಂಟರ್‌ಗೆ ವೇದಿಕೆ 15 ಲಕ್ಷ ರೂ. ದಂಡ ಹಾಕಿ ಆದೇಶ ಹೊರಡಿಸಿದೆ. ಗೊರವನಹಳ್ಳಿ ಗ್ರಾಮದ ಸಿಂಧೂಶ್ರೀ ಗರ್ಭಿಣಿಯಾಗಿದ್ದಾಗ 20ನೇ ವಾರದ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸುವಂತೆ ವೈದ್ಯರು ಹೇಳಿದ್ದರು. ಡಿ2 ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಪರೀಕ್ಷೆ ಮಾಡಿಸಿದ್ದರು. ಭ್ರೂಣದ ಅಸಹಜ ಬೆಳವಣಿಗೆ ಪತ್ತೆ ಹಚ್ಚದೆ ತಪ್ಪು ಸ್ಕ್ಯಾನಿಂಗ್ ವರದಿಯನ್ನು ವೈದ್ಯರು ನೀಡಿದ್ದರು. ಇತ್ತ ಸ್ಕ್ಯಾನಿಂಗ್ ವರದಿ ಆಧರಿಸಿ ಸಿಂಧೂಶ್ರೀಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು. ಮಂಡ್ಯ ಮಿಮ್ಸ್‌ನಲ್ಲಿ ಸಿಂಧೂ ಶ್ರೀಗೆ ಹೆರಿಗೆಯಾಗಿತ್ತು. ಅಸಹಜವಾಗಿ ಬೆಳವಣಿಗೆಯಾಗಿದ್ದ ಮಗು ಕಂಡು ಪೋಷಕರು ಕಂಗಲಾಗಿದ್ದರು. ಗರ್ಭಿಣಿಯಾದ 20ನೇ ವಾರ ಮಗುವಿನ ಹೃದಯದ ಬಡಿತ, ಕಿಡ್ನಿ, ಮೆದುಳಿನ ಬೆಳವಣಿಗೆ ಬಗ್ಗೆ ಸ್ಕ್ಯಾನಿಂಗ್‍ನಲ್ಲಿ ಪತ್ತೆ ಹಚ್ಚಲಾಗುತ್ತೆ. ಆ ವೇಳೆ ಮಗುವಿನ ಅಸಹಜ ಬೆಳವಣಿಗೆ ಕಂಡು ಬಂದರೆ…

Read More

ಬೆಳಗಾವಿ : ಮಡದಿಯ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಲ್ಲಿ ಚೂರಿಯಿಂದ ಇರಿದು ಅಣ್ಣನನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಅಕ್ಬರ್ ಶೇಖ್ ಮೃತ ದುರ್ದೈವಿ. ಅಜ್ಮದ್ ಶೇಖ್ ಕೊಲೆ ಆರೋಪಿ. ತನ್ನ ಹೆಂಡತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಲ್ಲಿ ಅಕ್ಬರ್ ಶೇಖ್ನನ್ನು ಸಹೋದರ ಅಜ್ಮದ್ ಶೇಖ್ ಕೊಲೆ ಮಾಡಿದ್ದಾನೆ. ಗ್ರಾಮದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಮೊದಲಿಗೆ ಹಿಂಬಾಲಿಸಿಕೊಂಡು ಹೋಗಿರುವ ಅಜ್ಮದ್ ಶೇಖ್, ಅಪಘಾತ ಮಾಡಿ ಬೈಕ್ ನಲ್ಲಿ ತೆರಳುತ್ತಿದ್ದ ಅಣ್ಣ ಅಕ್ಬರ್ ಶೇಖ್ನನ್ನು ಕೆಳಗೆ ಬೀಳಿಸಿದ್ದಾನೆ. ಬಳಿಕ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿ ಅಜ್ಮದ್ ಶೇಖ್ ಚಿಕ್ಕೋಡಿ ಪೊಲೀಸರಿಗೆ ಶರಣಾಗಿದ್ದಾನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಕಾಂತಾರ ಚಿತ್ರದ ‘ವರಾಹ ರೂಪಂ’ಹಾಡು ಯೂಟ್ಯೂಬ್​​ನಲ್ಲಿ ಪ್ರತ್ಯಕ್ಷವಾಗಿದೆ. ಈ ಹಾಡಿಗೆ ಕೃತಿಚೌರ್ಯದ ಆರೋಪ ಮಾಡಲಾಗಿತ್ತು. ಬಳಿಕ ಹಾಡನ್ನು ಪ್ರಸಾರ ಮಾಡದಂತೆ ಕೇರಳದ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿತ್ತು. ಹಾಗಾಗಿ ಯೂಟ್ಯೂಬ್, ಮ್ಯೂಸಿಕ್ ಆ್ಯಪ್​ಗಳಾದ ಸಾವನ್ ಮೊದಲಾದ ಪ್ಲಾಟ್​ಫಾರ್ಮ್​ಗಳಿಂದ ಈ ಹಾಡನ್ನು ಡಿಲಿಟ್‌ ಮಾಡಲಾಗಿತ್ತು. ವರಾಹ ರೂಪಂ ಹಾಡು ಕಾನೂನು ಹೋರಾಟದಲ್ಲಿ ಕಾಂತಾರ ಚಿತ್ರಕ್ಕೆ ಗೆಲುವು ಸಿಕ್ಕಿದೆ. ವರಾಹ ರೂಪಂ ಹಾಡಿನ ಕುರಿತು ಕೇರಳದ ಕೋರ್ಟ್​ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಆ ಹಾಡು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್​, ಓಟಿಟಿ ಸೇರಿದಂತೆ ಎಲ್ಲೆಡೆ ಲಭ್ಯವಿದೆ. ಇದಕ್ಕೂ ಮುನ್ನ ’ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್​ಫಾರ್ಮ್​ಗಳಲ್ಲಿ ಒಪ್ಪಿಗೆ ಇಲ್ಲದೆ ಬಳಸಬಾರದು ಎಂದು ಕೇರಳದ ಕೋರ್ಟ್​ ಆದೇಶ ಹೊರಡಿಸಿತ್ತು. ಚಿತ್ರತಂಡವು ‘ವರಾಹ ರೂಪಂ’ ಹಾಡನ್ನು ಚಿತ್ರಮಂದಿರ, ಯೂಟ್ಯೂಬ್​ನ ಹೊಂಬಾಳೆ ಫಿಲಂಸ್​ನ ಚಾನಲ್​, ಮ್ಯೂಸಿಕ್ ಆ್ಯಪ್​ಗಳಾದ ಸಾವನ್ ಮುಂತಾದ ಕಡೆಗಳಿಂದ ಡಿಲಿಟ್‌​ ಮಾಡಿತ್ತು. ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯಡಿ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು,…

Read More

ರಾಜ್ಯದ 10 ಜಿಲ್ಲೆಗಳಲ್ಲಿ ಸರ್ಕಾರ ಮುಸ್ಲಿಮರಿಗಾಗಿ ಸರ್ಕಾರ ಪ್ರತ್ಯೇಕ ಕಾಲೇಜು ನಿರ್ಮಾಣ ಮಾಡಲು ಮುಂದಾಗಿದೆ ಎಂದು ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಪ್ರಮೋದ್ ಮುತಾಲಿಕ್ ಸೇರಿದಂತೆ ಹಿಂದೂ ಪರ ಸಂಘಟನೆಗಳು ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಆ ಬಗ್ಗೆ ಚರ್ಚೆಯೇ ನಡೆದಿಲ್ಲ, ಅಂಥ ವಿಚಾರ ಸರ್ಕಾರದ ಮುಂದಿಲ್ಲ ಎಂದಿದ್ದರು. ಸಚಿವೆ ಶಶಿಕಲ್ಲಾ ಜೊಲ್ಲೆ ಇದು ಸತ್ಯಕ್ಕೆ ದೂರವಾದ ಮಾತು ಎಂದು ಟ್ವೀಟ್​ ಮಾಡಿದ್ದರು. ಇದೀಗ ಹಿಂದೂ ಮುಖಂಡರೊಬ್ಬರು ಮುಸ್ಲಿಂ ಕಾಲೇಜು ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿರುವ ಆದೇಶದ ಪ್ರತಿಯನ್ನು ಬಿಡುಗಡೆ ಮಾಡಿ ಸಿಎಂ ಬೊಮ್ಮಾಯಿಯನ್ನು ಉತ್ತರಿಸಿ ಎಂದು ಹೇಳಿದ್ದಾರೆ. ಹಿಂದೂ ಪರ ಹೋರಾಟಗಾರ ಮೋಹನ ಗೌಡ ಸರ್ಕಾರದ ಆದೇಶ ಪ್ರತಿ ಟ್ವೀಟ್​ ಮಾಡಿ ಸರ್ಕಾರ ಜುಲೈ ತಿಂಗಳಿನಲ್ಲಿ 10 ಪ್ರತ್ಯೇಕ ಮುಸಲ್ಮಾನ್ ಕಾಲೇಜು ಸ್ಥಾಪನೆ ಮಾಡಲು ಆದೇಶ ನೀಡಿ, ಅದಕ್ಕೆ ಹಣ ಸಹ ಮಂಜೂರು ಮಾಡಲು ಮಾಡಲು ಆದೇಶ ನೀಡಿ, ಈಗ ಸರಕಾರದ ಮುಂದೆ…

Read More

ವೆಸ್ಟ್ ಇಂಡೀಸ್ ಮೂಲದ ಆಲ್ ರೌಂಡರ್ ಡ್ವೈನ್ ಬ್ರಾವೊ ಐಪಿಎಲ್ ಗೆ ವಿದಾಯ ಘೋಷಿಸಿದ್ದಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ತಂಡದಲ್ಲಿ ಮುಂದುವರಿಯಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಳೆದ ವರ್ಷ ಬೌಲಿಂಗ್ ಕೋಚ್ ಆಗಿದ್ದ ಎಲ್. ಬಾಲಾಜಿ ವೈಯಕ್ತಿಕ ಕಾರಣಗಳಿಗಾಗಿ ಈ ವರ್ಷ ಬಿಡುವು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ವೈನ್ ಬ್ರಾವೊ ಈ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗಿದೆ. ನನ್ನ ಆಡುವ ದಿನಗಳು ಸಂಪೂರ್ಣವಾಗಿ ಮುಗಿಯಿತು ಎಂದು ನನಗೆ ಅನಿಸುತ್ತಿದೆ. ಆದ್ದರಿಂದ ಹೊಸ ಪ್ರಯಾಣವನ್ನು ಆರಂಭಿಸಲು ಉತ್ಸುಕನಾಗಿದ್ದೇನೆ ಎಂದು ಡ್ವೈನ್ ಬ್ರಾವೊ ಹೇಳಿದ್ದಾರೆ. ನಾನು ಐಪಿಎಲ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ಬರೆಯುತ್ತೇನೆ ಎಂದು ಊಹಿಸಿರಲಿಲ್ಲ. ಇನ್ನು ಮುಂದೆ ಮೈದಾನದಲ್ಲಿ ಮಿಡಾಫ್ ಅಥವಾ ಮಿಡಾನ್ ನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಅಂಗವಿಕಲರ ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಶಕ್ತೀಕರಣ ನಿರ್ದೇಶನಾಲಯದಿಂದ ಆಯೋಜಿಸಿದ್ದ ವಿಶ್ವಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಅಂಗವಿಕಲರ ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ ಜಾರಿಗೆ ತರಲಿದ್ದು, 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ. ಅಂಗವಿಕಲರು ಯಶಸ್ವಿಯಾಗಿ ಬದುಕು ನಡೆಸಲು ಸರಕಾರ ನಿರ್ಮಿಸುವ ಮನೆಗಳಲ್ಲಿ ಶೇ. 3ರಷ್ಟು ಮೀಸಲಾತಿ ನೀಡಲಾಗುವುದು. ಬುದ್ಧಿಮಾಂದ್ಯ ಮಕ್ಕಳಿಗೆ ವರ್ಕ್‌ ಶಾಪ್‌ ಸ್ಥಾಪಿಸಲು ಸರಕಾರ ಬದ್ಧವಾಗಿದೆ. ಜತೆಗೆ ಅಂಗ ವಿಕಲರಿಗೆ ಮಾ. 31ರೊಳಗೆ ಎರಡು ಸಾವಿರ ವಿದ್ಯುತ್ಛಕ್ತಿಚಾಲಿತ ಟ್ರೈಸಿಕಲ್‌ ನೀಡಲಾಗುತ್ತದೆ. ಅದಕ್ಕಾಗಿ ಈಗಾಗಲೇ 15 ಕೋಟಿ ರೂ. ನೀಡ ಲಾಗಿದ್ದುಎಂದು ಬೊಮ್ಮಾಯಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More