Subscribe to Updates
Get the latest creative news from FooBar about art, design and business.
- ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!
- ಹುಲಿಕುಂಟೆ ಗ್ರಾ.ಪಂ. ಅಧ್ಯಕ್ಷರಾಗಿ ಅಮೃತ ಮಂಜುನಾಥ್ ಅವಿರೋಧ ಆಯ್ಕೆ
- ಚಿರತೆಗಳ ಕಾದಾಟ: ಎರಡು ವರ್ಷದ ಗಂಡು ಚಿರತೆ ಸಾವು
- ತುಮಕೂರು| ಪತ್ರಕರ್ತರ ಸಂಘದ ಚುನಾವಣೆ: ಕೊರಟಗೆರೆಯ ಮೂವರು ಪತ್ರಕರ್ತರ ಆಯ್ಕೆ
- ಸರಗೂರು: ಕಾಡಾನೆ ದಾಳಿಯಿಂದ ಲಕ್ಷಾಂತರ ರೂ. ಬೆಳೆ ನಾಶ: ರೈತರಿಂದ ಆಕ್ರೋಶ
- ಬೀದರ್ | 96,510 ರೈತರ ಖಾತೆಗೆ ₹69 ಕೋಟಿ ಬೆಳೆ ಪರಿಹಾರದ ಹಣ ಜಮೆ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
- ನಂದಿಹಳ್ಳಿ ಮಲ್ಲಸಂದ್ರ ಬೈಪಾಸ್ ರಸ್ತೆಗೆ ವಿರೋಧ: ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳು ವಾಪಸ್
- ಕುಣಿಗಲ್ | ನರೇಗಾ ಯೋಜನೆ ಬಿಲ್ ಪಾವತಿಗೆ ಒತ್ತಾಯಿಸಿ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ
Author: admin
ಸೇವಾ ನ್ಯೂನತೆ ಎಸಗಿದ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಇರುವ ಮಾರ್ಕೆಟ್ ಬ್ರಾಂಚ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಶೋಕ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೆ ದಂಡ ವಿಧಿಸಿ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ. ಮೈಸೂರಿನ ವಿಶ್ವೇಶ್ವರ ನಗರ ಎರಡನೇ ಹಂತದ ಸಿಐಟಿಬಿ ಕಾಲೋನಿಯ ಮಲ್ಲಿಗೆ ರಸ್ತೆಯ ನಿವಾಸಿ ರಾಮೋಜಿ ರಾವ್ ಅವರ ಮಗನಾದ ‘ಮಾಜಿ ಯೋಧ’ ಕೃಷ್ಣೋಜಿ ರಾವ್ ಅವರು ಮನೆಯನ್ನು ಖರೀದಿ ಮಾಡಲು ಮತ್ತು ಆ ಮನೆಯನ್ನು ನವೀಕರಣ ಮಾಡುವ ಸಲುವಾಗಿ 2003 ಹಾಗೂ 2013 ರ ಸಮಯದಲ್ಲಿ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಾರ್ಕೆಟ್ ಬ್ರಾಂಚ್ ಹಾಗೂ ಅಶೋಕ ರಸ್ತೆಯ ಬ್ರಾಂಚ್ ನಲ್ಲಿ ರೂ.3,55,000/- ಹಾಗೂ ರೂ.6,40,000/- ಗಳನ್ನು ಸಾಲವಾಗಿ ಪಡೆದಿದ್ದರು. ಸಾಲ ಮಂಜೂರು ಮಾಡುವ ಸಮಯದಲ್ಲಿ ಕೃಷ್ಣೋಜಿ ರಾವ್ ತಮ್ಮ ಮನೆಯ ಹಕ್ಕು ಪತ್ರ, ಕ್ರಯಪತ್ರ ಹಾಗೂ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಬ್ಯಾಂಕಿಗೆ ಭದ್ರತೆಯಾಗಿ…
ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಇನ್ನು ಮುಂದೆ ಮೊಬೈಲ್ ಪೋನ್ ಬಳಕೆಯನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಆದೇಶಿಸಿದೆ. ತಮಿಳುನಾಡಿನ ತೂತಿಕೊರಿನ್ ಜಿಲ್ಲೆಯ ತಿರುಚೆಂದೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದೊಳಗೆ ಮೊಬೈಲ್ ನಿಷೇಧಿಸುವಂತೆ ನಿರ್ದೇಶನ ಕೋರಿ ಎಂ. ಸೀತಾರಾಮನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಈ ಆದೇಶ ನೀಡಿದೆ. ಭಕ್ತರು ಮೊಬೈಲ್ನಲ್ಲಿ ದೇವರ ವಿಗ್ರಹಗಳು ಮತ್ತು ಪೂಜೆಗಳ ಪೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ಬೇಸರ ವ್ಯಕ್ತಪಡಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್. ಮಹದೇವನ್ ಮತ್ತು ಜೆ. ಸತ್ಯನಾರಾಯಣ ಪ್ರಸಾದ್, ಭಕ್ತರ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸುವುದರ ಜೊತೆಗೆ ದೇವಾಲಯದ ಪಾವಿತ್ರ್ಯ ಕಾಪಾಡಲು ಅಧಿಕಾರಿಗಳು ದೇವಾಲಯದ ಆವರಣದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಗುರುವಾಯೂರ್‌ನಲ್ಲಿರುವ ಶ್ರೀ ಕೃಷ್ಣ ದೇವಾಲಯ, ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯಗಳಲ್ಲಿ ಮೊಬೈಲ್ ನಿಷೇಧ ಜಾರಿಯಲ್ಲಿದೆ. ತಿರುಚೆಂದೂರಿನ ದೇವಾಲಯದ ಅಧಿಕಾರಿಗಳು ಈಗಾಗಲೇ ದೇವಾಲಯದ ಆವರಣದೊಳಗೆ ಮೊಬೈಲ್ ನಿಷೇಧ,…
ಪಶ್ಚಿಮ ದೆಹಲಿಯ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹಜೀವನ ನಡೆಸುತ್ತಿದ್ದ ಜೋಡಿಯ ಮಧ್ಯೆ ವಿರಸವುಂಟಾಗಿ 35 ವರ್ಷದ ಮಹಿಳೆಯನ್ನು ಗೆಳೆಯ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರೇಖಾರಾಣಿ ಮೃತ ಮಹಿಳೆ. ಇರಿತದ ಗಾಯಗಳೊಂದಿಗೆ ಆಕೆಯ ಶವ ಗಣೇಶ ನಗರದ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.ಕೊಲೆ ಆರೋಪದ ಮೇಲೆ ಆಕೆಯ ಗೆಳೆಯ ಮನ್ ಪ್ರೀತ್ ಸಿಂಗ್(45) ಎಂಬಾತನನ್ನು ಪೊಲೀಸರು ಪಂಜಾಬ್ ನಲ್ಲಿ ಬಂಧಿಸಿದ್ದಾರೆ. ರೇಖಾರಾಣಿ ಮಗಳೊಂದಿಗೆ ವಾಸವಿದ್ದರು. 2015ರಲ್ಲಿ ಸಿಂಗ್ ಪರಿಚಿತನಾಗಿದ್ದ. ಒಟ್ಟಿಗೆ ವಾಸವಿದ್ದರು. ಇತ್ತೀಚೆಗೆ ಸಂಬಂಧ ವಿರಸಕ್ಕೆ ತಿರುಗಿ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯ ಪುತ್ರಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಇಬ್ಬರು ಯುವಕರು ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ಹೊಸಪೇಟೆ ಸಮೀಪ ನಡೆದಿದೆ. ಸಿಂಧನೂರು ನಿವಾಸಿಯಾಗಿರುವ ವಿದ್ಯಾರ್ಥಿನಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನ.25ರಂದು ತಾಯಿಯ ತವರೂರಾದ ಹೊಸ ಪೇಟೆಗೆ ಹೋಗಿದ್ದಳು. ನ.27 ರಂದು ಹೊಸಪೇಟೆಯಿಂದ ಸಿಂಧನೂರಿಗೆ ವಾಪಸ್ ಬರುವಾಗ ಪರಿಚಿತ ಸಚಿನ್ ಎಂಬ ಯುವಕ ಕರೆ ಮಾಡಿ ಆಕೆಯನ್ನು ವಾಪಸ್ ಹೊಸಪೇಟೆಗೆ ಕರೆಸಿಕೊಂಡಿದ್ದಾನೆ. ಸಚಿನ್ ಮತ್ತು ಆತನ ಗೆಳೆಯ ಇಬ್ಬರೂ ಸೇರಿ ವಿದ್ಯಾರ್ಥಿನಿಯನ್ನು ಅಪಹರಿಸಿ ಅಂಜನಾದ್ರಿ ಬೆಟ್ಟ ಹಾಗೂ ಗಂಗಾವತಿಯತ್ತ ಹೋಗಿ ಮದ್ಯ ಖರೀದಿಸಿ ಗಂಗಾವತಿಯಿಂದ ಹೊಸಪೇಟೆಗೆ ಹೋಗುವ ವೇಳೆ ಕಾರಿನಲ್ಲೆ ಸಚಿನ್ ಆಕೆಗೆ ಬಲವಂತದಿಂದ ಮದ್ಯ ಕುಡಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿಯ ತಾಯಿ ದೂರು ನೀಡಿದ್ದಾರೆ. ಪಿಎಸ್ ಐ ಸೌಮ್ಯ ಅವರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕಾಗಿ ತನಿಖೆ ಕೈಗೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಆಂಟೋನಿ ಬೇಗೂರು ಡಿಸೆಂಬರ್ 3 ರಂದು ಅಂಗವೈಕಲ್ಯ ಹೊಂದಿರುವ ಜನರ ಅಂತರರಾಷ್ಟ್ರೀಯ ದಿನವು 1992 ರಿಂದ ಯುನೈಟೆಡ್ ನೇಷನ್ಸ್‌ನಿಂದ ಉತ್ತೇಜಿಸಲ್ಪಟ್ಟ ಅಂತರರಾಷ್ಟ್ರೀಯ ಆಚರಣೆಯಾಗಿದೆ. ವಿಕಲಾಂಗ ವ್ಯಕ್ತಿಗಳು, “ವಿಶ್ವದ ಅತಿ ದೊಡ್ಡ ಅಲ್ಪಸಂಖ್ಯಾತರು”, ಸಾಮಾನ್ಯವಾಗಿ ಕಳಪೆ ಆರೋಗ್ಯ, ಕಡಿಮೆ ಶಿಕ್ಷಣ ಸಾಧನೆಗಳು, ಕಡಿಮೆ ಆರ್ಥಿಕ ಅವಕಾಶಗಳು ಮತ್ತು ವಿಕಲಾಂಗರಿಗಿಂತ ಹೆಚ್ಚಿನ ಬಡತನವನ್ನು ಹೊಂದಿರುತ್ತಾರೆ.ದೈನಂದಿನ ಜೀವನದಲ್ಲಿ ಅವರು ಎದುರಿಸುತ್ತಿರುವ ಅನೇಕ ಅಡೆತಡೆಗಳು. ಈ ಅಡೆತಡೆಗಳು ಭೌತಿಕ ಪರಿಸರಕ್ಕೆ ಸಂಬಂಧಿಸಿದಂತಹವುಗಳನ್ನು ಒಳಗೊಂಡಂತೆ ವಿವಿಧ ರೂಪಗಳನ್ನು ತೆಗೆದುಕೊಳ್ಳಬಹುದು, ಅಥವಾ ಶಾಸನ ಅಥವಾ ನೀತಿಯಿಂದ ಅಥವಾ ಸಾಮಾಜಿಕ ವರ್ತನೆಗಳು ಅಥವಾ ತಾರತಮ್ಯದಿಂದ ಉಂಟಾಗುತ್ತದೆ. ಕಡೆಗಣಿಸುವಿಕೆ, ತಾರತಮ್ಯ, ದುರ್ಬಲತೆ ಮತ್ತು ಶೋಷಣೆಯು ಅನೇಕ ಜನರಿಗೆ ಪ್ರತಿದಿನದ ಅಂಶಗಳಾಗಿದ್ದರೆ, ದಿನನಿತ್ಯದ ಆರೋಗ್ಯ ರಕ್ಷಣೆ ಮತ್ತು ಪುನರ್ವಸತಿ ಸೇವೆಗಳಿಗೆ ಕಡಿಮೆ ಪ್ರವೇಶ, ಹೆಚ್ಚು ಸ್ಪಷ್ಟವಾದ ಸಾಮಾಜಿಕ ಪ್ರತ್ಯೇಕತೆ, ಕಳಪೆ ರೀತಿಯಲ್ಲಿ ಸಾರ್ವಜನಿಕ ಆರೋಗ್ಯ ಸಂದೇಶ ಕಳುಹಿಸುವಿಕೆ, ಅಸಮರ್ಪಕವಾಗಿ ನಿರ್ಮಿಸಲಾದ ಕಳಪೆ ಫಲಿತಾಂಶಗಳ ಅಪಾಯವನ್ನು ಹೆಚ್ಚಿಸಲಾಗಿದೆ. ದೈಹಿಕ ದುರ್ಬಲತೆ ಸಂವೇದನಾ ದುರ್ಬಲತೆ, ಅರಿವಿನ ದುರ್ಬಲತೆ,…
ಬೆಂಗಳೂರು : ಗ್ರಾಮೀಣ ಪ್ರದೇಶಗಳಲ್ಲಿ ಮನೆಬಾಗಿಲಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ಮುಖ್ಯಮಂತ್ರಿ ಆರೋಗ್ಯ ವಾಹಿನಿ ಯೋಜನೆಗೆ ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ನೆಗಡಿ, ಕೆಮ್ಮು, ಜ್ವರದಂತಹ ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಗಂಭೀರ ಕಾಯಿಲೆಗಳಿಗೂ ವೈದ್ಯಕೀಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ಜನವರಿ 1 ರಿಂದ ರಾಜ್ಯದಲ್ಲಿ ಮೊದಲ ಹಂತವಾಗಿ ಬೀದರ್, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಆರೋಗ್ಯ ವಾಹಿನಿ ಯೋಜನೆ ಜಾರಿಗೆ ತರಲಿದೆ. ಮುಖ್ಯಮಂತ್ರಿ ಆರೋಗ್ಯ ವಾಹಿನಿ ಯೋಜನೆಗಾಗಿ ಬಜೆಟ್ ನಲ್ಲಿ 11 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಯೋಜನೆಯಡಿ ಅಗತ್ಯ ವೈದ್ಯಕೀಯ ಉಪಕರಣಗಳೊಂದಿಗೆ ವೈದ್ಯರು, ಶುಶ್ರೂಷಕರು ಹಾಗೂ ವೈದ್ಯಕೀಯ ಸಿಬ್ಬಂದಿ ಸಂಚಾರಿ ಕ್ಲಿನಿಕ್ ಗಳ ಮೂಲಕ ಜನರ ಮನೆ ಬಾಗಿಲಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ಚಳಿಗಾಲದಲ್ಲಿ ದೇಹದಲ್ಲಿ ಶಾಖವನ್ನು ಉತ್ಪಾದಿಸುವ ಮಸಾಲೆಗಳನ್ನು ಸೇವಿಸುವ ಅಗತ್ಯವಿದೆ, ಅಂಥ ಮಸಾಲೆ ಪದಾರ್ಥಗಳಲ್ಲಿ ಬೆಳ್ಳುಳ್ಳಿಯೂ ಒಂದು. ಚಳಿಗಾಲದಲ್ಲಿ ನೆಗಡಿ, ಜ್ವರ ಮತ್ತು ಸೋಂಖುಗಳು ಕಾಡುವುದು ಸಾಮಾನ್ಯ. ಇವನ್ನೆಲ್ಲ ಎದುರಿಸಲು ರೋಗನಿರೋಧಕ ಶಕ್ತಿ ಅವಶ್ಯ. ಋತುಮಾನಕ್ಕೆ ಅನುಸಾರ ಆಹಾರ ತೆಗೆದುಕೊಳ್ಳಬೇಕು. ಚಳಿಗಾಲದಲ್ಲಿ ಊಟದಲ್ಲಿ ಕಾಳು ಸೊಪ್ಪು-ತರಕಾರಿಗಳು ಮತ್ತು ಆರೋಗ್ಯಕರ ಮಸಾಲೆ ಇರಬೇಕು. ಬೆಳ್ಳುಳ್ಳಿ ವ್ಯಾಪಕವಾಗಿ ಬಳಕೆಯಾಗುವ ಮಸಾಲೆ ಪದಾರ್ಥ. ಇದರಲ್ಲಿ ವಿಟಮಿನ್‌ಗಳು, ಖನಿಜಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಹೇರಳವಾಗಿವೆ. ಬೆಳ್ಳುಳ್ಳಿ ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ. ಸೈನಸೈಟಿಸ್, ಶೀತ ಮತ್ತು ಜ್ವರದ ವಿರುದ್ಧ ಹೋರಾಡಲು ಬಿಸಿ ಸಾರು ಮತ್ತು ಸೂಪ್‌ಗಳಿಗೆ ಬೆಳ್ಳುಳ್ಳಿ ಸೇರಿಸಿದರೆ ಶಮನ ಕಾಣುವುದು. ಬೆಳ್ಳುಳ್ಳಿ ಸೇವನೆ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ದೇಹವನ್ನು ನಿರ್ವಿಷಗೊಳಿಸಲು ಮತ್ತು ಚಯಾಪಚಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಉಸಿರಾಟ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಬೆಳ್ಳುಳ್ಲೀ ಉತ್ತಮ. ಇದು ಚಳಿಗಾಲದಲ್ಲಿ ಜ್ವರ ಮತ್ತು ನೋಯುತ್ತಿರುವ ಗಂಟಲಿನ ಸಮಸ್ಯೆಯನ್ನು ಬಗೆಹರಿಸುತ್ತದೆ. ಚಳಿಗಾಲದಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ. ಹೃದಯ ಸಂಬಂಧಿ…
ಬಳ್ಳಾರಿ : ಹುಚ್ಚುನಾಯಿ ಕಡಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ. 3 ವರ್ಷದ ಸುರಕ್ಷಿತಾ ಹಾಗೂ 7 ವರ್ಷದ ಶಾಂತಕುಮಾರ್ ಮೃತಪಟ್ಟಿದ್ದಾರೆ. ಮಕ್ಕಳು ಆಟವಾಡುತ್ತಿದ್ದಾಗ ದಾಳಿ ಮಾಡಿದ್ದ ಹುಚ್ಚುನಾಯಿ, ಸುರಕ್ಷಿತಾಳ ಮುಖಕ್ಕೆ ಹಾಗೂ ಶಾಂತಕುಮಾರ್ ಕೈಗೆ ಕಚ್ಚಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಸುರಕ್ಷಿತಾ ನವೆಂಬರ್ 21ರಂದು ಮೃತಪಟ್ಟಿದ್ದಳು. ಶಾಂತಕುಮಾರ್ ನವಂಬರ್ 22ರಂದು ಮೃತಪಟ್ಟಿದ್ದಾನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬಿಡದಿಯ ಮಂಜುನಾಥ್ ಎಂಬವರ ಮೊಬೈಲ್‌ಗೆ 15 ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ ಪಾವತಿ ಮಾಡಿ ಎಂದು ಲಿಂಕ್ ಕಳಿಸಿ 7 ಲಕ್ಷ ಹಣವನ್ನು ವಂಚಿಸಿದ್ದಾರೆ. ಬಿಡದಿ ಪಟ್ಟಣದ ರಾಘವೇಂದ್ರ ಲೇಔಟ್ ನಿವಾಸಿ ಮಂಜುನಾಥ್ ಮೊಬೈಲ್‌ಗೆ ಒಂದು ಎಸ್ಎಂಎಸ್ ಬಂದಿತ್ತು. ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ನಿಮ್ಮ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಆದ್ದರಿಂದ 15 ರೂ.ಗಳನ್ನ ಪಾವತಿ ಮಾಡಿ ಎಂದು ಒಂದು ಲಿಂಕ್ ಬಂದಿತ್ತು. ಮಂಜುನಾಥ್ ಲಿಂಕ್ ಓಪನ್ ಮಾಡಿ ತಮ್ಮ ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಕಾರ್ಡ್ ನಂಬರ್, ಪಾನ್ ನಂಬರ್ ನಮೂದಿಸಿ ಸಬ್‌ಮಿಟ್ ಮಾಡಿದ್ದಾರೆ. ತಕ್ಷಣ ಅವರ ಖಾತೆಯ 15 ರೂಪಾಯಿ ಕಡಿತವಾಗಿತ್ತು. ಇದಾದ ನಂತರ ಅವರ ಇ- ಮೇಲ್ ಗೆ ನಿಮ್ಮ ಖಾತೆಗೆ 24 ಲಕ್ಷ ಜಮೆಯಾಗಿರುವುದಾಗಿ ಮೇಲ್ ಬಂದಿದೆ. ಇದ್ದಕ್ಕಿದ್ದಂತೆ ಖಾತೆಗೆ ಹಣ ಜಮೆಯಾಗಿದ್ದನ್ನು ಕಂಡು ಮಂಜುನಾಥ್ ಗಾಬರಿಗೊಂಡಿದ್ದಾರೆ. ಇದಾದ ಕೆಲ ಸಮಯದಲ್ಲೆ. ಮೇಲ್‌ಗೆ ಬಂದ ಮೆಸೇಜ್ ಓಪನ್ ಮಾಡಿದಾಗ 7 ಲಕ್ಷ ಖಾತೆಯಿಂದ ವರ್ಗಾವಣೆ…
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ಬಸಮ್ಮ ಹಾಗೂ ಪ್ರಿಯಕರ ನಾಡಗೌಡ ಕೊಲೆಯಾದವರು. ಮಲ್ಲಣ್ಣ ಕೊಲೆ ಆರೋಪಿ.ಬಸಮ್ಮ ಮತ್ತು ಪ್ರಿಯಕರ ನಾಡಗೌಡ ಹಳ್ಳದ ಮನೆ ನಡುವೆ ಅನೈತಿಕ ಸಂಬಂಧ ಇತ್ತು. ಅವರಿಬ್ಬರೂಹತ್ತಿ ಹೊಲದಲ್ಲಿ ಏಕಾಂತದಲ್ಲಿದ್ದಾಗ ಮಲ್ಲಣ್ಣನ ಕಣ್ಣಿಗೆ ಬಿದ್ದಿದ್ದಾರೆ. ಇಬ್ಬರನ್ನು ಕಂಡ ಮಲ್ಲಣ್ಣ ಕಲ್ಲು ಎತ್ತಿ ಹಾಕಿದ್ದಾನೆ. ಬಳಿಕ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಾಡಗೌಡನ ಜಮೀನಿನಲ್ಲೇ ಕೃತ್ಯ ನಡೆದಿದ್ದು, ಸ್ಥಳಕ್ಕೆ ಕೆಂಭಾವಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಕೊಲೆ ಆರೋಪಿ ಮಲ್ಲಣ್ಣನನ್ನು ಬಂಧಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy