Author: admin

ಆಂಟೋನಿ ಬೇಗೂರು ಗುಲಾಮಗಿರಿ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನವು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಘೋಷಿಸಲ್ಪಟ್ಟ ದಿನವಾಗಿದೆ ಮತ್ತು ಪ್ರತಿ ವರ್ಷ ಡಿಸೆಂಬರ್ 2 ರಂದು ಆಚರಿಸಲಾಗುತ್ತದೆ[1]. ಈ ದಿನವನ್ನು ಮೊದಲ ಬಾರಿಗೆ 1986 ರಲ್ಲಿ ಆಚರಿಸಲಾಯಿತು. ಗುಲಾಮಗಿರಿ ನಿಂತಿಲ್ಲ. ಇದು ನಡೆಯುತ್ತಲೇ ಇದೆ ಮತ್ತು ಸಮಾಜದಲ್ಲಿ ದುರ್ಬಲರಾಗಿರುವವರಿಗೆ ಬೆದರಿಕೆ ಹಾಕತ್ತಲೇ ಇದೆ. ಮನುಷ್ಯರನ್ನು ಪ್ರಾಣಿಗಳಂತೆ ಮಾರುವುದು ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರ ಮೇಲೆ ಶೋಷಣೆ ಮಾಡುವುದನ್ನು ನಿಗ್ರಹಿಸುವ ದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಯಿತು. ಗುಲಾಮಗಿರಿಯ ರೂಪಗಳು: ಮನುಷ್ಯರ ಸಾಗಾಣಿಕೆ :ಬಲವಂತವಾಗಿ ವೇಶ್ಯಾವಾಟಿಕೆ, ಕಾರ್ಮಿಕ, ಅಪರಾಧ, ಮದುವೆ ಅಥವಾ ಅಂಗಾಂಗ ತೆಗೆಯುವಿಕೆ ಮುಂತಾದ ಉದ್ದೇಶಗಳಿಗಾಗಿ ಜನರನ್ನು ಶೋಷಿಸಿ ಹಿಂಸಾಚಾರ, ಬೆದರಿಕೆ ಅಥವಾ ದಬ್ಬಾಳಿಕೆ ನಡೆಸುವುದು. ಮಕ್ಕಳ ಗುಲಾಮಗಿರಿ :ಮಗುವನ್ನು ಬೇರೊಬ್ಬರ ಲಾಭಕ್ಕಾಗಿ ಬಳಸಿಕೊಳ್ಳುವುದು. ಇದರಲ್ಲಿ ಮಕ್ಕಳ ಕಳ್ಳಸಾಗಣೆ, ಬಾಲ ಸೈನಿಕರು, ಬಾಲ್ಯವಿವಾಹ ಮತ್ತು ಮಕ್ಕಳ ದೇಶೀಯ ಗುಲಾಮಗಿರಿ ಸೇರಿವೆ. ನಾನು ಗುಲಾಮನಾಗುವುದಿಲ್ಲ, ಆದ್ದರಿಂದ ನಾನು ಯಜಮಾನನಾಗುವುದಿಲ್ಲ. ಇದು ನನ್ನ ಪ್ರಜಾಪ್ರಭುತ್ವದ ಕಲ್ಪನೆಯನ್ನು ವ್ಯಕ್ತಪಡಿಸುತ್ತದೆ. ಈ…

Read More

ಯಾದಗಿರಿ ತಾಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ತಂದೆಯೊಬ್ಬ ಕುಡಿದ ಮತ್ತಿನಲ್ಲಿ ತನ್ನ 9 ತಿಂಗಳ ಮಗುವನ್ನು ಕೊಂದಿದ್ದಾನೆ. ಮದ್ಯ ಕುಡಿಯುತ್ತಿದ್ದಾಗ ಮಗಳು ಅಳುತ್ತಿದ್ದಕ್ಕೆ ಸಿಟ್ಟಿಗೆದ್ದು ಮಗಳ ಕುತ್ತಿಗೆಯಲ್ಲಿದ್ದ ದಾರ ಹಿಡಿದು ಮೇಲೆತ್ತಿದ್ದಾನೆ. ಹೀಗಾಗಿ ಉಸಿರುಗಟ್ಟಿ ಮಗು ಅಸು ನೀಗಿದೆ. ಮಗುವಿನ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾಗ ಈ ಕೃತ್ಯ ಎಸಗಿದ್ದಾನೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪ ರಾಮುವನ್ನು ಪೊಲೀಸರು ಬಂಧಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚರಿಸುತ್ತಿರುವ ಸೆಮಿ ಸ್ಪೀಡ್ ವಂದೇ ಭಾರತ್ ರೈಲು ಮತ್ತೆ ಜಾನುವಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ಸಂಭವಿಸಿದೆ. ಉದ್ಘಾಟನೆಗೊಂಡ ನಂತರ ವರದಿಯಾಗುತ್ತಿರುವ ನಾಲ್ಕನೇ ಪ್ರಕರಣ ಇದಾಗಿದೆ. ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ ಎರಡು ತಿಂಗಳಲ್ಲಿ ಇದು ನಾಲ್ಕನೇ ಪ್ರಕರಣವಾಗಿದ್ದು, ಅಪಘಾತದಲ್ಲಿ ರೈಲಿನ ಮುಂಭಾಗದಲ್ಲಿ ಸ್ವಲ್ಪಭಾಗ ಹಾನಿಯಾಗಿದೆ. ಅಪಘಾತ ಸಂಭವಿಸಿದ ಕೆಲವು ನಿಮಿಷಗಳ ನಂತರ ರೈಲು ಮತ್ತೆ ಸಂಚಾರ ಆರಂಭಿಸಿದೆ. ಉದ್ವಾಡಾ ಮತ್ತು ವಾಪಿ ನಡುವಿನ ಕ್ರಾಸಿಂಗ್ ಗೇಟ್ 87ರ ಬಳಿ ಗುರುವಾರ ಸಂಜೆ 6.23ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ರೈಲಿನ ಮುಂಭಾಗ ಸ್ವಲ್ಪ ನಜ್ಜುಗುಜ್ಜಾಗಿದ್ದು, ರಾತ್ರಿ ಸರಿಪಡಿಸಲಾಗುವುದು. 635ರ ಸುಮಾರಿಗೆ ಮತ್ತೆ ರೈಲು ಸಂಚಾರ ಆರಂಭಿಸಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಫೇಸ್‌ ಬುಕ್‌ ಗೆಳತಿಯ ಒಡನಾಟದಿಂದ ವಿಜಯಪುರ ಜಿಲ್ಲೆಯ ಯುವಕ 40 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡಿದ್ದ ಪ್ರಕರಣದಲ್ಲಿ ಹಾಸನದ ಮಹಿಳೆಯನ್ನು ವಿಜಯಪುರ ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ. ಹಾಸನದ ಮಂಜುಳಾ ಬಂಧಿತ ಆರೋಪಿ. ಈ ವಂಚನೆಯ ಹಿಂದೆ ಆಕೆಯ ಗಂಡನ ಕೈವಾಡವಿದೆ ಎಂಬುದು ಬಯಲಾಗಿದೆ. ವಿಜಯಪುರ ಸಿಂದಗಿ ಪಟ್ಟಣದ ಪರಮೇಶ್ವರ್ ಹಿಪ್ಪರಗಿ ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದು, 30 ಸಾವಿರ ಸಂಬಳ ಬರುತ್ತಿತ್ತು. ಫೇಸ್‌ಬುಕ್‌ ಮೂಲಕ ಫ್ರೆಂಡ್‌ಶಿಪ್‌ ರಿಕ್ವೆಸ್ಟ್‌ ಕಳುಹಿಸಿ ಪರಿಚಯ ಮಾಡಿಕೊಂಡ ಹಾಸನ ಮೂಲದ ಮಂಜುಳಾ ಪ್ರೀತಿಯ ನಾಟಕವಾಡಿದ್ದಳು. ಐಎಎಸ್‌ ಓದುತ್ತಿರುವುದಾಗಿ ಹೇಳಿದ್ದಳು. ಅವಳ ಓದಿಗಾಗಿ ತಾನು ಕೂಡಿಟ್ಟಿದ್ದ 5 ಲಕ್ಷ ರೂ., ಒಂದು ಪ್ಲಾಟ್ ಸೇರಿ ಎಲ್ಲವನ್ನು ಮಾರಿ ಹಣ ಕಳುಹಿಸಿದ್ದನು. ಹಣಕ್ಕಾಗಿ ಪೀಡಿಸುವುದು ಹೆಚ್ಚಾದಾಗ ಆನ್ಲೈನ್ ವಂಚನೆಗೆ ಒಳಗಾಗಿದ್ದೇನೆ ಎಂದು ವಿಜಯಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ. ಸಾಮಾಜಿಕ ಜಾಲತಾಣದ ಜಾಡು ಹಾಗೂ ಪೋಲನ್‌ ನಂಬರ್ ಟ್ರೇಸ್‌ ಮಾಡಿಕೊಂಡು ಹೋದ ಪೊಲೀಸರು ಎರಡು ವಾರದಲ್ಲಿ ಹಾಸನದ…

Read More

ಬನ್ನೇರುಘಟ್ಟ ಬಳಿಯ ತುರಹಳ್ಳಿ ಅರಣ್ಯದಿಂದ ನಾಲ್ಕು ಚಿರತೆಗಳು ರಾಜಧಾನಿ ಬೆಂಗಳೂರಿನ ಹಲವೆಡೆ ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ತುರಹಳ್ಳಿ ಅರಣ್ಯದಿಂದ ನಾಲ್ಕು ಚಿರತೆಗಳು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಓಡಾಡುತ್ತಿದ್ದು, ಅರಣ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಬೋನ್ ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಂಗೇರಿ, ಕುಂಬಳಗೂಡು, ಉತ್ತರಹಳ್ಳಿ ಹಾಗೂ ದೇವನಹಳ್ಳಿ ಬಳಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಸಿಸಿಟಿವಿಗಳಲ್ಲಿ ಚಿರತೆ ಓಡಾಡುತ್ತಿರುವುದು ಕಂಡು ಬಂದಿದೆ. ಕೆಂಗೇರಿ ಬಳಿಯ ಜಿಂಕೆಯನ್ನು ಚಿರತೆ ಬೇಟೆಯಾಡಿದ್ದು, ಸ್ಥಳೀಯರು ಸತ್ತಿರುವ ಜಿಂಕೆಯನ್ನು ಪ್ರದರ್ಶಿಸಿದ್ದಾರೆ. ಕೆಂಗೇರಿಯ ಬಿಡಿಎ ಬಡಾವಣೆಗಳ ಬಳಿ ಚಿರತೆ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿದೆ. ಇದೇ ವೇಳೆ ದೇವನಹಳ್ಳಿಯ ಕಾರ್ಖಾನೆಯೊಂದರ ಬಳಿ ಪತ್ತೆಯಾಗಿದ್ದರೆ, ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು 5 ಸಿಬ್ಬಂದಿಯ ತಂಡವನ್ನು ರಚಿಸಿದ್ದು, ನಾಯಿ ಮರಿಯನ್ನು ಕಟ್ಟಿಹಾಕಿ ಚಿರತೆಗಳನ್ನು ಬೋನಿಗೆ ಕೆಡವಲು ಕಾರ್ಯಾಚರಣೆ ಆರಂಭವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ಜಲ ನೀತಿ ಅನ್ವಯ ನಗರ ವ್ಯಾಪ್ತಿಯಲ್ಲಿ ಎಲ್ಲ ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ ಪಡೆಯಲು ನಿಯಮಗಳಲ್ಲಿ ಸರಳೀಕರಣ ಮಾಡಿ ಸುತ್ತೋಲೆ ಹೊರಡಿಸಿದೆ. ಕುಡಿಯುವ ನೀರಿನ ನಳ ಸಂಪರ್ಕ ಪಡೆಯಲು ಸೂಕ್ತ ದಾಖಲೆಗಳು ಇಲ್ಲದಿದ್ದರೆ ಆಧಾರ್ ಕಾರ್ಡ್ ಮತ್ತು ನಷ್ಟ ಭರ್ತಿ ಮುಚ್ಚಳಿಕೆ ಪಡೆದು ನಳ ಸಂಪರ್ಕ ಕಲ್ಪಿಸುವಂತೆ ಸೂಚಿಸಲಾಗಿದೆ. ಎಲ್ಲ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಕೈಗಟಕುವ ದರದಲ್ಲಿ ಕೊಳವೆ ಸಂಪರ್ಕದ ಮೂಲಕ ಒದಗಿಸುವುದ ಸರ್ಕಾರದ ಉದ್ದೇಶವಾಗಿದೆ. ಮನೆಗಳಿಗೆ ಕುಡಿಯುವ ನೀರು ಸಂಪರ್ಕ ಪಡೆಯಲು ನಷ್ಟ ಭರ್ತಿ ಮುಚ್ಚಳಿಕೆಯನ್ನು ನಿಗದಿತ ನಮೂನೆಗಳಲ್ಲಿ 50 ರೂ. ಸ್ಟಾಂಪ್ ಪೇಪರ್ ನಲ್ಲಿ ವಿಳಾಸದೊಂದಿಗೆ ಅರ್ಜಿ ಸಲ್ಲಿಸಬೇಕು. ಮಾಲೀಕತ್ವ ಇಲ್ಲದವರು ಯಾವುದೇ ನಷ್ಟ ಉಂಟಾದರೆ ಅರ್ಜಿದಾರರೇ ಆ ನಷ್ಟವನ್ನು ಭರ್ತಿ ಮಾಡುತ್ತೇವೆಂದು ಮುಚ್ಚಳಿಕೆ ನೀಡಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಹುಕ್ಕೇರಿ : ಬೆನ್ನು ನೋವು, ಸೊಂಟ ನೋವಿನಿಂದ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಶಿರಗಾಂವ ಗ್ರಾಮದಲ್ಲಿ ನಡೆದಿದೆ. ಈರಪ್ಪ ರಾಯಪ್ಪ ಚೌಗಲಾ (41) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಇವರು ಸ್ಥಳೀಯ ಅವರಗೋಳ ಗ್ರಾಮದ ಖಾಸಗಿ ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈರಪ್ಪ ಚೌಗಲಾ  ಬಹಳ ದಿನಗಳಿಂದ ಬೆನ್ನು ನೋವು, ಸೊಂಟ ನೋವಿನಿಂದ  ಬಳಲುತ್ತಿದ್ದರು. ಇದರಿಂದ ಬೇಸತ್ತು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಈರಪ್ಪನಿಗೆ ಎರಡು ಹೆಣ್ಣು ಮಕ್ಕಳು ಒಂದು ಗಂಡು ಮಗು ಇದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.  ಘಟನೆ ಸಂಬಂಧ ಹುಕ್ಕೇರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಅರಣ್ಯಾಧಿಕಾರಿಗಳು ಗಾಳಿಯಲ್ಲಿ ಫೈರಿಂಗ್ ಮಾಡಿ ಎಚ್ಚರಿಕೆ ನೀಡಿದರೆ ಗಂಧಚೋರರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರದ ಎಚ್.ಎನ್ ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಬುಧವಾರ ಸಂಜೆ ನಾಗಮಂಗಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಾಸನ ಮೂಲದ ಗಂಧದ ಮರ ಕಳ್ಳರಾದ ಗೋವಿಂದಪ್ಪ ಹಾಗೂ ಆತನ ಮಕ್ಕಳಾದ ಶಂಕರ್ ಮತ್ತು ಕುಮಾರ್ ಗಂಧದ ಮರ ಕಡಿಯಲು ಬಂದಿದ್ದಾರೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಮರಗಳ್ಳರನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಸಾಕಯ್ಯ ಅವರ ಮೇಲೆ ಮರಗಳ್ಳರು ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳು ಮತ್ತೊಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗೋವಿಂದಪ್ಪನಿಗೆ ಗುಂಡಿನ ಚೂರುಗಳು ತಗುಲಿ ಗಾಯಗಳಾಗಿವೆ. ಮತ್ತಿಬ್ಬರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗಾಯಾಳುಗಳಾದ ಅರಣ್ಯ…

Read More

ಧಾರವಾಡ: ಜಿಲ್ಲೆಯ ನೀರಲಕಟ್ಟಿ ಗ್ರಾಮದ ನಿವಾಸಿ ಮಹಿಳೆಯೊಬ್ಬರು 1 ವರ್ಷ 6 ತಿಂಗಳ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಜಿಲ್ಲೆಯ ನೀರಲಕಟ್ಟಿ ಗ್ರಾಮದಲ್ಲಿ ನಡೆದಿದೆ. ನೀರಲಕಟ್ಟಿ ಗ್ರಾಮದ ನಿವಾಸಿಯಾದ ರುಕ್ಮಾವ್ವಾ ದುರ್ಗಪ್ಪ ಭಜಂತ್ರಿ ಇವರ ಮಗಳಾದ ಸ್ವಾತಿ ಅಶೋಕ ಭಜಂತ್ರಿ ನಾಪತ್ತೆಯಾದವರು ಎಂದು ಗುರುತಿಸಲಾಗಿದೆ. ನವೆಂಬರ್ 25 ರಂದು ರಾತ್ರಿ 2:30 ಗಂಟೆಗೆ ಮನೆಯಿಂದ ಇವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಸ್ವಾತಿ ಭಜಂತ್ರಿ(26) ಎತ್ತರ 4.5, ಸದೃಡ ಮೈ ಕಟ್ಟು, ಸಾದಾಗೆಂಪು ಮೈ ಬಣ್ಣ, ಕಪ್ಪು ಕೂದಲು ಹೊಂದಿದ್ದಾರೆ. ನಾಪತ್ತೆಯಾದ ವೇಳೆ ಬಿಳಿ ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಹಾಗೂ ಕೊರಮಾ ಭಾಷೆ ಮಾತನಾಡುತ್ತಾಳೆ. 1 ವರ್ಷ 6 ತಿಂಗಳ ಮಗು ಅರುಣ್, ಸಾದಾಗೆಂಪು ಮೈ ಬಣ್ಣ, ಕಪ್ಪು ಕೂದಲು, ಮಗು ಕೆಂಪು ಅಂಗಿ ಕಪ್ಪು ಶಾರ್ಟ ಪ್ಯಾಂಟ್ ಧರಿಸಿದ್ದಾನೆ ಇವರ ಬಗ್ಗೆ ಸುಳಿವು ಸಿಕ್ಕಲ್ಲಿ, ಕುಲಗೋಡ ಠಾಣೆ ದೂರವಾಣ ಸಂಖ್ಯೆ 08334-222233 ಅಥವಾ ಇ-ಮೇಲ್ ಐಡಿ kulgodgm@ksp.gov.in ಗೆ ಸಂಪರ್ಕಿಸಬಹುದು ಎಂದು ಕುಲಗೋಡ…

Read More

ಬೆಳಗಾವಿ : ನಗರದ ಗೋಗಟೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಬಾವುಟವನ್ನು ಪ್ರದರ್ಶನ ಮಾಡಿದ್ದಕ್ಕೆ ಇತರೆ ಕೆಲ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವುದು ಹಾಗೂ ದೂರು ದಾಖಲಿಸಲು ಹೋದಾಗ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕರವೇ ನಾರಾಯಣ ಗೌಡ ಬಣದಿಂದ ಪ್ರತಿಭಟನೆ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಾಥ್ ನೀಡಿದ್ದು, ಹೆದ್ದಾರಿ ತಡೆ ನಡೆಸಿದೆ. ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಹಲ್ಲೆ ಮಾಡಿದ ಸಹಪಾಠಿಗಳ ವಿರುದ್ಧ ಹಾಗೂ ಠಾಣೆಯಲ್ಲಿ ದರ್ಪ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಬೆಳಗಾವಿ-ಗೋವಾ ರಾಜ್ಯ ಹೆದ್ದಾರಿ ತಡೆದು ಕರವೇ ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಾಥ ನೀಡಿದೆ. ಬೆಳಗಾವಿಯ ಆರ್‌ಪಿಡಿ ವೃತ್ತದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ಕಾರಣಕ್ಕೆ ಗೋವಾ-ಬೆಳಗಾವಿ ಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಪ್ರಥಮ, ದ್ವಿತೀಯ ವರ್ಷದ…

Read More