Author: admin

ಹಿರಿಯ ಪತ್ರಕರ್ತರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಎನ್ ಡಿಟಿವಿಯ ನಿರ್ದೇಶಕ ಸ‍್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಎನ್ನಲಾದ ಗೌತಮ್ ಆದಾನಿ ಎನ್ ಡಿಟಿವಿಯ ನಿರ್ದೇಶಕ ಮಂಡಳಿಯಾದ ಆರ್ ಆರ್ ಆರ್ ಆರ್ ಹೋಲ್ಡಿಂಗ್ ಪ್ರವೇಟ್ ಲಿಮಿಟೆಡ್ ನಲ್ಲಿ ಪಾಲುದಾರರಾಗಿ ನವೆಂಬರ್ 29ರಿಂದ ಅಧಿಕಾರ ಹಿಡಿದ ಬೆನ್ನಲ್ಲೇ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜೀನಾಮೆ ನೀಡುವ ಮೂಲಕ ಕಂಪನಿಯಿಂದ ಹೊರಬಂದಿದ್ದಾರೆ. ಇದೇ ವೇಳೆ ಸುಭಿತಾ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ, ಸೇಂಥಿಲ್ ಸಿನ್ಹಾ ಮತ್ತು ಚೆಂಗಲ್ ವಾರ್ಯನ್ ಅವರನ್ನು ಎನ್ ಡಿಟಿವಿಯ ನಿರ್ದೇಶಕರನ್ನಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಉತ್ತರ ಪ್ರದೇಶ ಫಿರೋಜಾಬಾದ್ ಜಿಲ್ಲೆ ಪಾಧಮ್ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ 6 ಜನ ಮೃತಪಟ್ಟಿದ್ದಾರೆ. ಮೃತರಲ್ಲಿ ನಾಲ್ವರು ಮಕ್ಕಳು, ಇಬ್ಬರು ಯುವಕರು. ಕಟ್ಟಡದಲ್ಲಿ ವಿದ್ಯುತ್​ ಶಾರ್ಟ್​ಸರ್ಕ್ಯೂಟ್​​ನಿಂದ ಅಗ್ನಿ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫಿರೋಜಾಬಾದ್ ಜಿಲ್ಲೆಯ ಜಸ್ರಾನಾದ ಪದಮ್ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿರುವ ಅಂಗಡಿ ಮತ್ತು ಅದರ ಮೇಲಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಂದೇ ಕುಟುಂಬದ ಆರು ಮಂದಿ ಬಲಿಯಾಗಿದ್ದಾರೆ. 18 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿವೆ ಎಂದು ಎಸ್ಪಿ ಆಶಿಶ್ ತಿವಾರಿ ಹೇಳಿದ್ದಾರೆ. ಘಟನೆಯಲ್ಲಿ ಮೂವರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತೀವ್ರ ಕುಡಿತದ ಚಟ ಹೊಂದಿದ್ದ ವ್ಯಕ್ತಿಗೆ ಮಗಳ ಮದುವೆಯಂದು ಕುಡಿಯಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಲಕ್ನೋದ ಮೋಹನ್‌ಲಾಲ್‌ ಗಂಜ್‌ ಪ್ರದೇಶದಲ್ಲಿ ನಡೆದಿದೆ ಮಗಳ ಮದುವೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಂಜೆ ದಿಬ್ಬಣ ಬರಲಿದೆ ಎನ್ನುವ ಸಮಯದಲ್ಲಿ ವಧುವಿನ ತಂದೆ 55 ವರ್ಷದ ಸುನೀಲ್‌ ದ್ವಿವೇದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುನೀಲ್‌ ದ್ವಿವೇದಿ ಸ್ಥಳೀಯ ಮೋಹನ್‌ಲಾಲ್‌ ಗಂಜ್‌ ಪ್ರದೇಶದ ತಿಕ್ರಾ ಗ್ರಾಮದ ನಿವಾಸಿ. ಕಂಠಪೂರ್ತಿ ಕುಡಿದುಕೊಂಡೇ ಇರುತ್ತಿದ್ದರು.ಮಗಳ ಮದುವೆ ಭಾನುವಾರ ನಿಶ್ಚಯವಾಗಿತ್ತು. ಶನಿವಾರ ಸಂಜೆ ಕೂಡ ಸುನಿಲ್‌ ಕುಡಿತದ ಅಮಲಿನಲ್ಲಿ ಮನೆಗೆ ಬಂದಿದ್ದರು. ಇದನ್ನು ನೋಡಿದ ಕುಟುಂಬಸ್ಥರು ಮಗಳ ಮದುವೆಗೆ ಅಡ್ಡಿಪಡಿಸಬೇಡಿ ಎಂದು ಹೇಳಿದ್ದಾರೆ. ಸಂಬಂಧಿಕರು ಭಾನುವಾರ ಮದ್ಯ ಸೇವನೆ ಮಾಡಬೇಡಿ ಎಂದು ಹೇಳಿದ್ದರು. ಭಾನುವಾರ ಮುಂಜಾನೆ ಮದುವೆಯ ತಯಾರಿ ಆರಂಭ ಮಾಡಿದ್ದರು. ಎಲ್ಲಿಯೂ ಸುನೀಲ್‌ ಸುಳಿವು ಇದ್ದಿರಲಿಲ್ಲ. ಅವರಿಗಾಗಿ ಮನೆಯಲ್ಲಿ ಶೋಧ ಕಾರ್ಯ ಮಾಡಿದ್ದಾರೆ. ಈ ವೇಳೆ ಮನೆಯ ಹಿಂಬದಿಯಲ್ಲಿ ದನದ ಕೊಟ್ಟಿಗೆಯಲ್ಲಿ…

Read More

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಟೀಕಿಸಿದರು. ಪ್ರಧಾನಿ ಮೊದಿ ರಾವಣ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಹಿರಿಯರಾದ ಖರ್ಗೆ ಈ ರೀತಿ ಮಾತನಾಡಬಾರದು. ಪ್ರಧಾನಿ ಮೋದಿಯನ್ನ ಪ್ರಪಂಚವೇ ಮೆಚ್ಚಿದೆ. ಎಐಸಿಸಿ ಅಧ್ಯಕ್ಷ ಖರ್ಗೆ ರಬ್ಬರ್ ಸ್ಟಾಂಪ್ ಆಗಿದ್ದಾರೆ ಎಂದರು. ಬಿಜೆಪಿ ರೌಡಿಗಳ ಪಕ್ಷ ಎಂಬ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ರೌಡಿಗಳ ಪಕ್ಷ, ಬಿಜೆಪಿ ಸುಸಂಸ್ಕೃತ ಪಕ್ಷವಾಗಿದೆ. ಕಾಂಗ್ರೆಸ್ ರೌಡಿಗಳ ಪಕ್ಷ ಎಂದು ತಿರಸ್ಕರಿಸಿದ್ದಾರೆ. ಡಿಕೆ ಶಿವಕುಮಾರ್ ಯಾವಾಗ ಜೈಲಿಗೆ ಹೋಗ್ತಾರೋ ಗೊತ್ತಿಲ್ಲ ಅಂತವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಇದೆ. ನಲಪಾಡ್ ಜೈಲಿಗೆ ಹೋಗಿ ಬದವನು. ಅವನಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಸೋಲದೇವನಹಳ್ಳಿಯಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಪತ್ನಿಯೇ ಪ್ರಿಯಕರನ ಜೊತೆ ಸೇರಿಕೊಂಡು ಗಂಡನ ಕೊಲೆ ಮಾಡಿರುವ ಘಟನೆ ನಡೆದಿದೆ. ದಾಸೇಗೌಡ (48) ಕೊಲೆಯಾದ ವ್ಯಕ್ತಿ. ನಾಪತ್ತೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಸಿನಿಮಾ ರೀತಿಯಲ್ಲಿ ನಡೆದ ಈ ಕೊಲೆ ರಹಸ್ಯ ಬಯಲಾಗಿದೆ. ದಾಸೇಗೌಡ ನಾಪತ್ತೆಯಾಗಿದ್ದ ಬಗ್ಗೆ ಸೋಲದೇವನಹಳ್ಳಿಯಲ್ಲಿ ಪತ್ನಿ ದೂರು ದಾಖಲಿಸಿದ್ದಳು. ರಾಮನಗರ ಗ್ರಾ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಸೇಗೌಡನ ಮೃತದೇಹ ಪತ್ತೆಯಾಗಿದ್ದು, ದಾಸೇಗೌಡನ ಪತ್ನಿ ಸೇರಿ ಇಬ್ಬರನ್ನು ವಿಚಾರಣೆ ನಡೆಸಿದಾಗ ನಿಜ ಹೊರ ಬಂದಿದೆ. ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಒಂ ಮೃತದೇಹವನ್ನು ಸೋಲದೇವನಹಳ್ಳಿ ಫಾರ್ಮ್ ಹೌಸ್‌ನಿಂದ ಕಾರಿನಲ್ಲಿ ಸಾಗಟ ಮಾಡಿದ್ದು, ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮೋರಿಯಲ್ಲಿ ಎಸೆದಿದ್ದಾರೆ. ಕೊಲೆ ಮಾಡಲು ಬಳಸಿದ್ದ ಹಗ್ಗವನ್ನು ಬೇರೆಡೆ ಎಸೆದಿದ್ದು, ಸಾಕ್ಷ್ಯ ಸಿಗದಂತೆ ಒಂದೊಂದು ಕಡೆ ವಸ್ತುಗಳು ಎಸೆದಿದ್ದಾರೆ. 35 ವರ್ಷದ ಜಯ 16 ವರ್ಷದ ಹಿಂದೆ ದಾಸೇಗೌಡನನ್ನ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರು. ಗಂಡ ಹೆಂಡತಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಗಂಡ…

Read More

ಕೆಎಸ್ಸಾರ್ಟಿಸಿಯು ಹೊಸದಾಗಿ ಆರಂಭಿಸಲಿರುವ ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಬ್ರಾಂಡ್ ಹೆಸರು ಟ್ಯಾಗ್‌ಲೈನ್ ಹಾಗೂ ಗ್ರಾಫಿಕ್ಸ್‌ ಆಹ್ವಾನಿಸಿದೆ. ಪ್ರತಿ ಮಾದರಿಯ ವಾಹನಗಳಿಗೆ ಉತ್ತಮ ಬ್ರಾಂಡ್ ಹೆಸರನ್ನು ಸೂಚಿಸುವ ವಿಜೇತರಿಗೆ ₹10,000 ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ ತಲಾ ₹ 25,000 ಬಹುಮಾನ ನೀಡಲಾಗುವುದು. ಹೆಸರನ್ನು ಸೂಚಿಸಲು ಡಿಸೆಂಬರ್ 5 ಕೊನೆ ದಿನ ಎಂದು ನಿಗಮದ ಪ್ರಕಟಣೆ ತಿಳಿಸಿದೆ. ಬ್ರ್ಯಾಂಡ್ ಐಡಿಯಾಗಳನ್ನು cpro @ksrtc.org ಇ–ಮೇಲ್ ಗೆ ಅಥವಾ ನಿಗಮದ ಫೇಸ್‌ಬುಕ್/ಟ್ವಿಟರ್ ಖಾತೆಗೆ ಸಲ್ಲಿಸಬಹುದು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಡರಾತ್ರಿ ಊಟ ನೀಡಲು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರ ಸೇರಿದಂತೆ ಯುವಕರ ಗುಂಪೊಂದು ಮಹಿಳೆಯರು ಸೇರಿದಂತೆ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ನ.20ರಂದು ರಾತ್ರಿ 11.30ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ನಗರದ ಬಳಿಯ ವಿಲೇಜ್ ರೆಸ್ಟೋರೆಂಟ್​ನಲ್ಲಿ ಯುವಕರ ಗುಂಪು ಗೂಂಡಾಗಿರಿ ನಡೆಸಿ, ಮಹಿಳಾ ಸಿಬ್ಬಂದಿ ಮೇಲೂ ಹಲ್ಲೆ ಮಾಡಲಾಗಿದೆ. ಈ ವೀಡಿಯೋ ಇದೀಗ ವೈರಲ್ ಆಗಿದೆ. ರೆಸ್ಟೋರೆಂಟ್‌ನ ಮಹಿಳಾ ಸಿಬ್ಬಂದಿಯ ಕಾಲರ್ ಹಿಡಿದು ಎಳೆದಾಡಿ ಊಟ ಕೊಟ್ಟರೆ ಸರಿ, ಇಲ್ದಿದ್ರೆ ಒದೆ ತಿಂತೀಯಾ ಅಂತ‌ ಬೆಂಗಳೂರು ನಗರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರಾಮಚಂದ್ರಪ್ಪನ ಮಗ ಧನುಶ್ ಕೆಸಿ ದಾಂಧಲೆ ಮಾಡಿದ್ದಾನೆ. ನಾನ್ ಹೇಳಿದಂಗೆ ಕೇಳ್ಬೇಕು ‌ಇಲ್ದಿದ್ರೆ ಈ ರೆಸ್ಟೋರೆಂಟ್ ಇರಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಬರ್ತ್​ಡೇ ಪಾರ್ಟಿ ಮಾಡಿದ ನಂತರ ರಾತ್ರಿ 11:30ಕ್ಕೆ ವಿಲೇಜ್ ರೆಸ್ಟೋರೆಂಟ್​​ಗೆ ಬಂದಿದ್ದ…

Read More

ಪುರುಷರ ಐಪಿಎಲ್ ಯಶಸ್ಸಿನ ಹಿನ್ನೆಲೆಯಲ್ಲಿ ಭಾರೀ ಬೇಡಿಕೆ ಇದ್ದ ಮಹಿಳಾ ಐಪಿಎಲ್ ಗೆ ಬಿಸಿಸಿಐ ಪ್ರಕ್ರಿಯೆ ಆರಂಭಿಸಿದ್ದು, 5 ಫ್ರಾಂಚೈಸಿಗಳ ಖರೀದಿಗೆ 400 ಕೋಟಿ ರೂ. ಮೂಲಧನ ನಿಗದಿಪಡಿಸಿದೆ. 2023 ಮಹಿಳಾ ಐಪಿಎಲ್ ಟೂರ್ನಿ ಪಾದರ್ಪಣೆ ಮಾಡಲಿದ್ದು, ಪುರುಷರ ಐಪಿಎಲ್ ಯಶಸ್ಸಿನ ಹಿನ್ನೆಲೆಯಲ್ಲಿ ಮಹಿಳಾ ಐಪಿಎಲ್ ನಲ್ಲೂ ದೊಡ್ಡ ಮೊತ್ತದ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. 5 ಫ್ರಾಂಚೈಸಿಗಳ ಟೆಂಡರ್ ಆಹ್ವಾನಿಸಲು ಬಿಸಿಸಿಐ ಸಿದ್ಧತೆ ನಡೆಸಿದ್ದು, ಮೂಲಧನ 400 ಕೋಟಿ ರೂ.ನಿಗದಿಪಡಿಸಿದೆ. ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಕೂಡ ಅನುಮೋದನೆ ನೀಡಿದೆ ಎನ್ನಲಾಗಿದೆ. ಚೊಚ್ಚಲ ಮಹಿಳಾ ಐಪಿಎಲ್ ನಲ್ಲಿ ಲೀಗ್ ಹಂತದಲ್ಲಿ 20 ಪಂದ್ಯಗಳು ನಡೆಯಲಿದ್ದು, ಪ್ರತಿ ತಂಡಗಳು ಎರಡು ಬಾರಿ ಮುಖಾಮುಖಿ ಆಗಲಿವೆ. ಅಗ್ರ 2 ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಲಿದ್ದರೆ, ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಎಲಿಮಿನೇಟರ್ ಸುತ್ತು ಇರಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಅಮೆರಿಕದ ಸೆನೆಟ್‌ನಲ್ಲಿ ಮಂಗಳವಾರ ಸಲಿಂಗ ವಿವಾಹದ ಫೆಡರಲ್ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ. 2015ರಲ್ಲೇ ಸಲಿಂಗ ವಿವಾಹವನ್ನು ಅಮೆರಿಕದಲ್ಲಿ ಕಾನೂನುಬದ್ಧಗೊಳಿಸಲಾಗಿದ್ದು, ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಮಸೂದೆ ಜಾರಿ ಮಾಡಲಾಗಿದೆ. ಇಂದು ಒಂದು ದೊಡ್ಡ ಸಮಾನತೆಯ ಎಡೆಗೆ ಮಹತ್ವದ ಹೆಜ್ಜೆ ಇಡಲಾಗಿದೆಎಂದು ಸೆನೆಟ್ ನಾಯಕ ಚುಕ್ ಶೂಮರ್ ಹೇಳಿದ್ದಾರೆ.ಈ ಮಸೂದೆ ಅಂಗೀಕರಿಸುವ ಮೂಲಕ ಅಮೆರಿಕದ ಎಲ್ಲ ನಾಗರಿಕರ ಧ್ವನಿಯನ್ನು ಆಲಿಸಬೇಕು ಎಂಬ ಸಂದೇಶ ನೀಡಿದೆ. ನೀವು ಯಾರೇ ಆಗಿರಲಿ, ಯಾರನ್ನೇ ಪ್ರೀತಿಸುತ್ತಿರಲಿ, ಕಾನೂನಿನ ಅಡಿಯಲ್ಲಿ ನೀವು ಘನತೆ ಮತ್ತು ಸಮಾನತೆಗೆ ಅರ್ಹರು ಎಂದು ಹೇಳಿದ್ದಾರೆ. ಮಸೂದೆಯ ಪರ 61 ಮತಗಳು ಮತ್ತು ವಿರುದ್ಧವಾಗಿ 36 ಮತಗಳು ಬಿದ್ದಿದ್ದವು. ಡೆಮಾಕ್ರಟಿಕ್‌ನ 49 ಮತ್ತು ರಿಪಬ್ಲಿಕ್ ಪಕ್ಷದ 12 ಮಂದಿ ಮಸೂದೆ ಪರ ಮತ ಹಾಕಿದ್ದರು. ಡೆಮಾಕ್ರಟಿಕ್ ಪಕ್ಷದ ಒಬ್ಬರು ಮತ್ತು ರಿಪಬ್ಲಿಕ್ ಪಕ್ಷದ ಇಬ್ಬರು ಸಭೆಗೆ ಹಾಜರಾಗಿರಲಿಲ್ಲ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರತಿ ಕಾಲೇಜಿಗೆ 2.50 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಮುಂದಿನ ತಿಂಗಳು ಮುಸ್ಲಿಂ ವಿದ್ಯಾರ್ಥಿನಿಯರ ಕಾಲೇಜು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದು, ಕಾಲೇಜು ನಿರ್ಮಾಣದ ಉದ್ಘಾಟನೆಗೆ ಮುಖ್ಯಮಂತ್ರಿಗೆ ಆಹ್ವಾನ ನೀಡಲಾಗಿದೆ. ವಕ್ಫ್ ಬೋರ್ಡ್‌ಗೆ ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಈ ವೆಚ್ಚವನ್ನು ಭರಿಸಲು ನಿರ್ಧಾರ ಮಾಡಲಾಗಿದ್ದು ತರಗತಿಯಲ್ಲಿ ಹಿಜಾಬ್‌ ಧರಿಸದಂತೆ ಸರ್ಕಾರ ಆದೇಶ ಹೊರಡಿಸಿದ‌ ಕಾರಣ. ಬಹುತೇಕ ಮುಸ್ಲಿಂ ಸಂಘ, ಸಂಸ್ಥೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು. ಇದೀಗ ಚುನಾವಣೆಯ ಪರ್ವ ಕಾಲದಲ್ಲಿ ಸರ್ಕಾರವೇ ಮುತುವರ್ಜಿ ವಹಿಸಿ ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ರಾಜ್ಯದ ದಕ್ಷಿಣ‌ಕನ್ನಡ‌ಜಿಲ್ಲೆಯ ಅಡ್ಯಾರ್ ಕಣ್ಣೂರಿನಲ್ಲಿ, ಉಡುಪಿ,‌ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕರ್ನಾಟಕ ಸೇರಿದಂತೆ ರಾಜ್ಯದ ಹತ್ತು ಕಡೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಸ್ಥಾಪನೆ ಮಾಡಿಕೊಡಲು ಮುಂದಾಗಿದೆ ಎಂದು ವಕ್ಫ್ ಬೋರ್ಡ್​ ಅಧ್ಯಕ್ಷ ಶಫಿ ಸಾ ಅದಿ ಹೇಳಿದ್ದಾರೆ. ಉಡುಪಿಯ ಸರ್ಕಾರಿ ಶಾಲೆಯಲ್ಲಿ ಹಿಜಾಬ್​ ಧರಿಸಿಕೊಂಡು ಬರುತ್ತಿದ್ದ ಹೆಣ್ಣು ಮಕ್ಕಳಿಂದ ಶುರುವಾದ…

Read More