Author: admin

ರೌಡಿ ಶೀಟರ್ ಸೈಲೆಂಟ್ ಸುನೀಲ್  ಗೆ ಪಕ್ಷದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಘೋಷಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಸೋಮವಾರ ಪ್ರಕಟಣೆ ಹೊರಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸೈಲಂಟ್ ಸುನೀಲ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಅಥವಾ ಯಾವುದೇ ಸ್ಥಾನ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಪಿಸಿ ಮೋಹನ್ ಮುಂತಾದ ಮುಖಂಡರ ಸಮ್ಮುಖದಲ್ಲಿ ಸೈಲೆಂಟ್ ಸುನೀಲ್  ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಪಕ್ಷದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ವರದಿ ಆಗಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರೌಡಿಶೀಟರ್ ಆಗಿದ್ದ ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಈ ಕುರಿತು ಕೆ.ಆರ್ ಪೇಟೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸೈಲೆಂಟ್ ಸುನೀಲನ ಕಾರ್ಯಕ್ರಮದಲ್ಲಿ ಇಬ್ಬರು ಸಂಸದರು ಓರ್ವ ಶಾಸಕರು ಭಾಗಿಯಾಗಿದ್ದಾರೆ. ಸೈಲೆಂಟ್ ಸುನೀಲ ಸರ್ಚ್ ವಾರೆಂಟ್ ನಲ್ಲಿದ್ದಾನೆ . ಏನು ಹೇಳಿದ್ರು ಹಿಂದಿನ ಸರ್ಕಾರದಲ್ಲಿ ಆಗಿಲ್ವಾ ಅಂತಾರೆ. ಅದೊಂದು ರೀತಿ ಬಿಜೆಪಿಗೆ ಅಂಟುರೋಗವಾಗಿದೆ ಎಂದು ವಾಗ್ದಾಳಿ ನಡೆಸಿದರು. ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ನೀವು ಅನೈತಿಕವಾಗಿ ಬಂದಿದ್ದೀರಿ. ನಮ್ಮನ್ನು ಬಿಡಿ ಮೊದಲು ನೀವು ಏನು ಮಾಡಿದ್ದಿರಿ ಹೇಳಿ ರೌಡಿಶೀಟರ್ ಜೊತೆ ಸಂಸದರು ವೇದಿಕೆ ಹಂಚಿಕೊಳ್ಳುವುದು ಸರಿನಾ…? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು. ಹೆಸರು ನೋಡು ಫೈಟರ್ ರವಿ ಅಂತೆ. ಆರ್ ಎಸ್ ಎಸ್, ಬಿಜೆಪಿಯವರು ಬರೀ ಇಂತಹದ್ದೆ ಕೆಲಸ ಮಾಡೋದು. ಸಿಸಿಬಿ ಪೊಲೀಸರು ಸುನೀಲನನ್ನ ಹುಡುಕುತ್ತಿದ್ದಾರೆ. ಆತನನ್ನ ಬಿಜೆಪಿಗೆ ಸೇರ್ಪಡೆ ಮಾಡಿದ್ರೆ ಅತನನ್ನ ಹಿಡಿಯಲು ಸಾಧ್ಯವೇ..? ಎಂದು…

Read More

ಇತಿಹಾಸದ ಪ್ರಸಿದ್ದ ದೇವಸ್ಥಾನ ಎಂದೇ ಖ್ಯಾತಿ ಪಡೆದ ಕೊಪ್ಪಳದಲ್ಲಿರುವ ಅಂಜನಾದ್ರಿ ಹುನುಮನ ದೇವಸ್ಥಾನಕ್ಕೆ ಕಳೆದೆರಡು ತಿಂಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ವಿದೇಶೀ ಹಣ ಹರಿದು ಬಂದಿದೆ. ಅಮೇರಿಕಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ವಿದೇಶಿ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ವಿದೇಶಿ ಪ್ರಜೆಗಳಿಂದಲು ಹನುಮನ ಹುಂಡಿಗೆ ದೇಣಿಗೆ ಬರುತ್ತಿದೆ. ಗಂಗಾವತಿ ಗ್ರೇಡ್ 2 ತಹಶಿಲ್ದಾರ ವಿ.ಹೆಚ್ ಹೊರಪೇಟೆ ನೇತೃತ್ವದಲ್ಲಿ ಹುನುಮನ ಹುಂಡಿ ಏಣಿಕೆ ಆರಂಭವಾಗಿದೆ. ಕೇವಲ ಒಂದೂವರೆ ತಿಂಗಳಲ್ಲಿ 22,7508 ಲಕ್ಷ ಹಣ ಜಮೆಯಾಗಿದ್ದು, ಅಮೇರಿಕಾ ಡಾಲರ್,ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ನಾಣ್ಯ,ನೋಟುಗಳು ಪತ್ತೆಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವಿಶ್ವದ ಆನ್‌ಲೈನ್, ಇ-ವಾಣಿಜ್ಯ ದೈತ್ಯ ಸಂಸ್ಥೆ ಅಮೇಜಾನ್ ಜಗತ್ತಿನಾದ್ಯಂತ ತನ್ನ ಖರ್ಚುವೆಚ್ಚಗಳನ್ನು ಕಡಿಮೆಗೊಳಿಸುವ ಚಟುವಟಿಕೆಯನ್ನು ಆರಂಭಿಸಿದ್ದು, ಇದರ ಭಾಗವಾಗಿ ಹಲವು ವಿಭಾಗಗಳನ್ನು ಮುಚ್ಚಲು ಆರಂಭಿಸಿದೆ. ಸೋಮವಾರ ಅಮೇಜಾನ್ ಸಂಸ್ಥೆ ಭಾರತದಲ್ಲಿ ತನ್ನ ಸಗಟು ವಿತರಣಾ ವಹಿವಾಟನ್ನು ನಿಲ್ಲಿಸಿರುವುದಾಗಿ ಘೋಷಿಸಿತು. ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಗಳ ಕೆಲವು ಭಾಗಗಳಲ್ಲಿರುವ ಸಂಸ್ಥೆಯ ಇ-ವಾಣಿಜ್ಯ ವೆಬ್‌ಸೈಟ್ ಅನ್ನು ನಿಲ್ಲಿಸಿರುವುದಾಗಿ ತಿಳಿಸಿದೆ. ಈ ಹಿಂದೆ ಕಂಪನಿಯು ಭಾರತದಲ್ಲಿ ಆಹಾರ ವಿತರಣೆ ಹಾಗೂ ‘ಅಕಾಡೆಮಿ’ ಎಂಬ ಹೆಸರಿದ್ದ ಆನ್‌ ಲೈನ್ ಕಲಿಕಾ ವೇದಿಕೆಗಳನ್ನು ಸ್ಥಗಿತಗೊಳಿಸಿತ್ತು. “ನಾವು ಈ ನಿರ್ಧಾರಗಳನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ನಮ್ಮ ಹಾಲಿ ಗ್ರಾಹಕರು ಹಾಗೂ ಪಾಲುದಾರರ ಕಡೆಗೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಈ ವಿಭಾಗಗಳನ್ನು ಹಂತಗಳಲ್ಲಿ ನಿಲ್ಲಿಸುತ್ತಿದ್ದೇವೆ,” ಎಂದು ಕಂಪನಿಯ ವಕ್ತಾರರು ತಮ್ಮ ಒಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೇಜಾನ್ ದೇಶದಾದ್ಯಂತ ಸ್ಥಳೀಯ ಕಿರಾಣಾ ಮಳಿಗೆಗಳು, ಔಷಧಾಲಯಗಳು ಹಾಗೂ ಡಿಪಾರ್ಟ್ಮೆಂಟ್ ಮಳಿಗೆಗಳನ್ನು ಸಶಕ್ತವನ್ನಾಗಿಸಲು ವಿತರಣಾ ಸೇವೆಯನ್ನು ಆರಂಭಿಸಿತ್ತು. ಕಳೆದ ವಾರ ಅಮೇಜಾನ್ ಭಾರತದಲ್ಲಿ ತನ್ನ ಆಹಾರ…

Read More

ರಾಜ್ಯದಲ್ಲಿ ಜೆಡಿಎಸ್ ಅಲೆ ಸೃಷ್ಠಿಯಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಜೆಡಿಎಸ್ ಗೆ ಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಜೆಡಿಎಸ್ ಅಲೆ ಸೃಷ್ಠಿಯಾಗಿದೆ. ಹೆಚ್.ಡಿ ಕುಮಾರಸ್ವಾಮಿ ಸುಮ್ಮನೆ ಘೋಷಣೆ ಮಾಡ್ತಾನೆ ಅಂತಾರೆ. ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಅಂತಾ ಟೀಕೆ ಮಾಡುತ್ತಾರೆ. ಜೆಡಿಎಸ್ ಗೆ ಹಳ್ಳಿಗಳಲ್ಲಿ ಜನರ ಬೆಂಬಲ ವ್ಯಕ್ತಾಗಿದೆ. ಗೊಂದಲ ಸರಿಪಡಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು. ಜನರ ರಕ್ತಹೀರುವವರು ಎಂದಿದ್ದ ಸಚಿವ ಅಶ್ವಥ್ ನಾರಾಯಣ್ ಗೆ ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ, ಯಾರ ಬಗ್ಗೆ ಹೇಳಿದ್ದಾರೆ ಅಂತಾ ಗೊತ್ತಿಲ್ಲ. ನಮಗೆ ಅವರಷ್ಟು ತಿಳುವಳಿಕೆ ಇಲ್ಲ. ರಕ್ತ ಪಿಪಾಸುಗಳು ಅಂತಾ ಹೇಳಿದ್ದಾರೆ. ನಿನ್ನೆ ಬಿಜೆಪಿಯವರು ಯಾರನ್ನೋ ಸೇರಿಸಿಕೊಂಢ್ರಲ್ಲ ಅವರ ಇತಿಹಾಸ ತೆಗೆದು ನೋಡಿದ್ರೆ ಗೊತ್ತಾಗುತ್ತೆ ಯಾರು ರಕ್ತ ಹೀರುತ್ತಾ ಇದ್ದರು ಅಂತಾ ಎಂದು ಟಾಂಗ್ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣಾ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಅಭಿಷೇಕ್ ಮತ್ತು ಮಾರುತಿಗೌಡ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಕಾರ್ಡ್ ಹಂಚಿಕೆ ಏರಿಯಾ ಮ್ಯಾಪಿಂಗ್ ಮಾಡುತ್ತಿದ್ದರು. ಶಿವಾಜಿನಗರ, ಚಿಕ್ಕಪೇಟೆ ಪ್ರದೇಶದಲ್ಲಿ ಮ್ಯಾಪಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳು ರವಿಕುಮಾರ್ ಹೇಳುತ್ತಿದ್ದ ಕೆಲಸ ಮಾಡುತ್ತಿದ್ದರು. ಚಿಲುಮೆ ಸಂಸ್ಥೆಯಿಂದ ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಈವರೆಗೆ 14 ಆರೋಪಿಗಳನ್ನ ಬಂಧಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗೂಗಲ್ ಕ್ರೋಮ್‌ವೆಬ್ ಬ್ರೌಸರ್‌ನಲ್ಲಿ ಭದ್ರತಾ ಲೋಪ ಕಂಡುಬಂದಿದ್ದು, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳುವಂತೆ ಸಂಸ್ಥೆಯ ಸೈಬರ್ ಭದ್ರತೆ ಮತ್ತು ಸೆಕ್ಯುರಿಟಿ ವಿಭಾಗದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಗೂಗಲ್ ಕ್ರೋಮ್ ಬಳಕೆದಾರರಿಗಾಗಿ ನೂತನ ಅಪ್‌ಡೇಟ್ ಒಂದನ್ನು ಬಿಡುಗಡೆ ಮಾಡಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು, ಅಪ್‌ಡೇಟ್ ಮಾಡಿಕೊಳ್ಳಿ ಎಂದು ಕಂಪೆನಿ ತಿಳಿಸಿದೆ. ಲಿನಕ್ಸ್ ಮತ್ತು ವಿಂಡೋಸ್ ಬಳಕೆದಾರರಿಗೆ 107.0.5304.121/.122 ಹೊಸ ಅಪ್‌ಡೇಟ್ ಲಭ್ಯವಿದ್ದು, ಬಳಕೆದಾರರು ಮೆನುವಿಗೆ ಹೋಗಿ ಅಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮೂಲಕ ಎಬೌಟ್ ಕ್ರೋಮ್ ಎಂದಿರುವುದನ್ನು ಕ್ಲಿಕ್ ಮಾಡಬೇಕು. ಬಳಿಕ ಗೂಗಲ್ ಕ್ರೋಮ್ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಿ. ಹೊಸ ಅಪ್‌ಡೇಟ್ ಬಳಕೆ ಮಾಡುವುದರಿಂದ ಹ್ಯಾಕಿಂಗ್ ಸಾಧ್ಯತೆಯನ್ನು ತಪ್ಪಿಸಬಹುದು. ಕ್ರೋಮ್ ಮೂಲಕ ವೈರಸ್, ಮಾಲ್ವೇರ್ ನಿಮ್ಮ ಕಂಪ್ಯೂಟರ್ ಪ್ರವೇಶಿಸುವುದನ್ನು ತಡೆಯಬಹುದು ಎಂದು ಸೈಬರ್ ಭದ್ರತೆ ಮತ್ತು ಸೆಕ್ಯುರಿಟಿ ವಿಭಾಗದ ತಜ್ಞರು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ದೇಶದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 6 ರಿಂದ 12 ನೇ ತರಗತಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ನಿರ್ದೇಶನಗಳನ್ನು ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ. ಮಧ್ಯಪ್ರದೇಶದ ವೈದ್ಯೆ, ಸಾಮಾಜಿಕ ಕಾರ್ಯಕರ್ತೆ ಜಯಾ ಠಾಕೂರ್ ಅವರ ಮನವಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು, ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಶುಚೀಕರಣ ಮತ್ತು ನೈರ್ಮಲ್ಯದ ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಹಾಯವನ್ನು ಕೋರಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಎರಡನೇ ವಿವಾಹಕ್ಕೆ ನಿರಾಕರಿಸಿದ್ದಕ್ಕೆ ಮಾಜಿ ಪ್ರೇಯಸಿಗೆ ಆಟೋ ಚಾಲಕ ಚಾಕು ಇರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಇಂದಿರಾನಗರ ನಿವಾಸಿ ಅಮುದಾ ಚೂರಿ ಇರಿತದಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ನವಾಝ್ ಚೂರಿ ಇರಿದು ಪರಾರಿಯಾಗಿದ್ದಾನೆ. ಕೆಲ ವರ್ಷಗಳ ಹಿಂದೆ ಅಮುದಾ ಹಾಗೂ ನಯಾಝ್ ಪ್ರೀತಿಸುತ್ತಿದ್ದರು. ಈ ನಡುವೆ ನವಾಝ್ ಬೇರೆ ಮದುವೆಯಾಗಿತ್ತು. ಅಮುದಾ ಏಳುಮಲೈ ಎಂಬಾತನ ಜೊತೆ ಮದುವೆಯಾಗಿದ್ದರು. ಇತ್ತೀಚೆಗೆ ಮಾಜಿ ಪ್ರೇಮಿಗಳು ಪರಸ್ಪರ ಸಂಪರ್ಕಕ್ಕೆ ಬಂದಿದ್ದು, ನಿನ್ನ ಗಂಡ ಸರಿ ಇಲ್ಲ. ಹಾಗಾಗಿ ಎರಡನೇ ಮದುವೆ ಆಗುವಂತೆ ನವಾಝ್ ಒತ್ತಡ ಹೇರಿದ್ದಾನೆ. ಆದರೆ ಇದಕ್ಕೆ ಅಮುದಾ ನಿರಾಕರಿಸಿದ್ದರಿಂದ ಈ ಕೃತ್ಯ ಎಸಗಿದ್ದಾನೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಪ್ರೇಯಸಿ ಶ್ರದ್ಧಾ ವಾಕರ್ ಳ ಹತ್ಯೆ ಮಾಡಿದ ಅಫ್ತಾಬ್ ಪೂನೂವಾಲಾನನ್ನು ಫೋರೊನ್ಸಿಕ್ ಲ್ಯಾಬ್ ಗೆ ಕರೆದೊಯ್ಯುವಾಗ ಗುಂಪೊಂದು ವಾಹನದ ಮೇಲೆ ದಾಳಿ ಮಾಡಿದ್ದು, ನಮ್ಮ ವಶಕ್ಕೆ ನೀಡಿದರೆ 70 ತುಂಡುಗಳಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದೆ. ಸೋಮವಾರ ಸಂಜೆ ಸುಮಾರು 15 ಮಂದಿಯ ಗುಂಪು ಮಾರಕಾಸ್ತ್ರಗಳಿಂದ ವಾಹನದ ಮೇಲೆ ದಾಳಿ ಮಾಡಿದೆ. ಖಡ್ಗವನ್ನು ಹಿಡಿದಿದ್ದ ಗುಂಪು ವಾಹನವನ್ನು ಹಿಂಬಾಲಿಸಿಕೊಂಡು ಬಂದು ಈ ಕೃತ್ಯ ಎಸಗಿದೆ. ನಮ್ಮ ಸೋದರಿಯನ್ನು ಆಫ್ತಾಬ್ 35 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿದ್ದಾನೆ. ನಮ್ಮ ವಶಕ್ಕೆ ನೀಡಿದರೆ ಆತನನ್ನು 70 ತುಂಡುಗಳಾಗಿ ಕತ್ತರಿಸುತ್ತೇವೆ ಎಂದು ಉದ್ರಿಕ್ತ ಗುಂಪು ಆಕ್ರೋಶ ವ್ಯಕ್ತಪಡಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More