Author: admin

ನಿನ್ನೆ ಮದುವೆ ಆಗ್ತೇನೆ, ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡು ಬಾ ಎಂದು ಕಾಡ್ತಿದ್ದ ಯುವತಿ ಕಾಟಕ್ಕೆ ಬೇಸತ್ತು ಯುವಕ ಮನೆ ಬಿಟ್ಟು ತೆರಳಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದಲ್ಲಿ ನಡೆದಿದೆ. ಹೆಣ್ಣು ನೋಡೊಕೆ ಹೋದಾಗ ಹುಡುಗ ಇಷ್ಟವಿಲ್ಲ ಎಂದು ಮರೆಪ್ಪನನ್ನು ಯುವತಿ ತಿರಸ್ಕರಿಸಿದ್ಲು. ಬಳಿಕ ಯುವತಿ ಮತ್ತೊಂದು ಹುಡುಗಿಯನ್ನ ನೋಡಿ ಎಂಗೆಜ್ಮೆಂಟ್ ಆದ ಹುಡುಗನಿಗೆ ಕಾಟ ಕೊಡಲು ಶುರು ಮಾಡಿದ್ದಾಳೆ. ನಿನ್ನೇ ಮದುವೆ ಆಗ್ತೇನೆ, ನಿನ್ನ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡು ಬಾ ಎಂದು ಯುವತಿ ನಿರಂತರವಾಗಿ ಕಾಡಲು ಶುರು ಮಾಡಿದ್ದಾಳೆ. ಯುವತಿಯ ಕಾಟಕ್ಕೆ ಬೇಸತ್ತು ಮರೆಪ್ಪ ಮನೆ ಬಿಟ್ಟೇ ಹೋಗಿದ್ದಾನೆ. ಯವತಿಯ ಕಾಟಕ್ಕೆ ಬೇಸತ್ತ ಯುವಕ ನವೆಂಬರ್ 13 ರಂದು ಮನೆ ಬಿಟ್ಟು ತೆರಳಿದ್ದಾನೆ. ಐದು ಪುಟಗಳ ಪತ್ರ ಬರೆದು, ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾನೆ. ಇತ್ತ ವೃದ್ಧ ತಂದೆ ತಾಯಿ ಬಿಟ್ಟು ಹೋದ ಮಗನಿಗಾಗಿ ಕಣ್ಣಿರು ಹಾಕುತ್ತಾ ಕಾಯುತ್ತಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

Read More

ಮಹಿಪಾಲುಪರ್ ಮೇಲ್ಸುತುವೆ ಬಿಎಂಡಬ್ಲ್ಯೂ ಐಷಾರಾಮಿ ಕಾರು ಡಿಕ್ಕಿ ಹೊಡೆದ ಪರಿಣಾಮ ಗುರುವಾಂವ್ ನಿವಾಸಿ ಸುಭೇಂದು ಚಟರ್ಜಿ (50) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಟಯರ್ ಸ್ಫೋಟಗೊಂಡ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಕಾರು ಡಿಕ್ಕಿ ಹೊಡೆದಿದ್ದರಿಂದ ಗಾಯಗೊಂಡಿದ್ದ ಸೈಕ್ಲಿಸ್ಟ್ ಅನ್ನು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಗುರ್ ಗಾಂವ್ ನಿಂದ ದೆಹಲಿಯ ದೌಲಾ ಕೌನ್ ಗೆ ಸೈಕಲ್ ನಲ್ಲಿ ಸುಭೇಂದು ಚಟರ್ಜಿ ಹೊರಟಿದ್ದರು. ಡಿಕ್ಕಿ ಹೊಡೆದ ಕಾರು ಚಾಲಕ ಯಾರು ಎಂಬುದು ತಿಳಿದು ಬಂದಿಲ್ಲ. ಆದರೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬಿಜೆಪಿ ಸಂಸದರಿಗೆ ಸೇರಿದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 9 ವರ್ಷದ ಬಾಲಕ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಸಂಭವಿಸಿದೆ. ಬಿಜೆಪಿ ಸಂಸದ ಹರೀಶ್ ದ್ವಿವೇದಿ ಸೇರಿದ ಕಾರು ಡಿಕ್ಕಿ ಹೊಡೆದ ಪರಿಣಾಮ 2ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ರಾಜ್ಬರ್ (9) ಮೃತಪಟ್ಟ ದುರ್ದೈವಿ. ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಹರ್ದಿಯಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅತೀವ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಕಾರು ಡಿಕ್ಕಿ ಹೊಡೆದರೂ ಬಾಲಕನಿಗೆ ರಕ್ಷಿಸದೇ ಕಾರು ಸಮೇತ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚೀನಾದ ಹಲವು ನಗರಗಳಲ್ಲಿ ಕೊರೋನ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರ ಮತ್ತೆ ಲಾಕ್​ಡೌಗೆ ಮುಂದಾಗಿದೆ. ಭಾನುವಾರ ಒಂದೇ ದಿನ 40,000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲಿನ ಸರ್ಕಾರವು ಘೋಷಿಸುತ್ತಿರುವ ಲಾಕ್​ಡೌನ್ ಆದೇಶಗಳು ಜನರನ್ನು ಸಿಟ್ಟಿಗೆಬ್ಬಿಸಿದೆ. ಜನಾಕ್ರೋಶವು ಆಡಳಿತಕ್ಕೆತಲೆನೋವಾಗಿ ಪರಿಣಮಿಸಿದೆ. ಚೀನಾದ ಷಿನ್​ಜಿಯಾಂಗ್ ಪ್ರಾಂತ್ಯದ ರಾಜಧಾನಿ ಉರುಂಖಿ ನಗರದಲ್ಲಿ ಇತ್ತೀಚೆಗಷ್ಟೇ ಸಂಭವಿಸಿದ ಬೆಂಕಿ ಅನಾಹುತದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಲಾಕ್​ಡೌನ್ ನಿರ್ಬಂಧಗಳಿಂದ ತೊಂದರೆಯಾಯಿತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಜಿಂಗ್ ನಗರದ ನದಿ ದಂಡೆಯ ಮೇಲೆ ಜನ ಹಲವು ಗಂಟೆಗಳವರೆಗೆ ಪ್ರತಿಭಟನೆ ನಡೆಸಿದರು. ಲಾಕ್​ಡೌನ್ ಹೆಸರಿನಲ್ಲಿ ಹಲವು ಅಪಾರ್ಟ್​ಮೆಂಟ್ ಹಾಗೂ ಕಟ್ಟಡ ಸಮುಚ್ಚಯಗಳಿಗೂ ಬೀಗಮುದ್ರೆ ಹಾಕಲಾಗಿದೆ. ಈ ಕಟ್ಟಡಗಳ ಕಾಂಪೌಂಡ್​ ಒಳಗೆ ಜನರು ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಆಡಳಿತಾರೂಢ ಚೀನಾ ಕಮ್ಯುನಿಸ್ಟ್‌ಪಕ್ಷ (ಸಿಪಿಸಿ) ಮತ್ತು ಅಧ್ಯಕ್ಷ ಷಿ ಜಿನ್‌ಪಿಂಗ್‌ವಿರುದ್ಧ ಘೋಷಣೆ ಕೇಳಿ ಬರುತ್ತಿದೆ. ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಕೈಜೋಡಿಸಿದ್ದಾರೆ. ಶಾಂಘೈನಲ್ಲಿ ನಡೆದ ಲಾಕ್​ಡೌನ್ ವಿರೋಧಿ ಪ್ರತಿಭಟನೆಯಲ್ಲಿ ಸರ್ಕಾರದ…

Read More

ಶೀತ ನೆಗಡಿ, ಜ್ವರದಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ವೈದ್ಯರು ಆ್ಯಂಟಿಬಯೋಟಿಕ್‌ ಬರೆದು ಕೊಡುವುದನ್ನು ನಿಲ್ಲಿಸಬೇಕು. ಇದರಿಂದ ತಕ್ಷಣಕ್ಕೆ ಆರೋಗ್ಯ ಸಮಸ್ಯೆ ಸುಧಾರಿಸಿದರೂ ದೀರ್ಘಾವಧಿಯಲ್ಲಿ ಆಗುವ ಪರಿಣಾಮ ಸಂಕಷ್ಟ ತಂದೊಡ್ಡುವುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿದ್ದು, ಆ್ಯಂಟಿಬಯೋಟಿಕ್‌ ಬಳಕೆಯಲ್ಲಿ ತೋರಬೇಕಾದ ವಿವೇಚನೆ ಕುರಿತು ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ರಾಸಾಯನಿಕ ಮಿಶ್ರಿತ ಆಹಾರದ ಮೂಲಕವೂ ಯಥೇಚ್ಚವಾಗಿ ಆ್ಯಂಟಿಬಯೋಟಿಕ್ಸ್‌ ಜನರ ದೇಹ ಸೇರುತ್ತಿದೆ. ರೋಗಾಣುಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಈ ಪ್ರತಿಜೀವಕಗಳನ್ನು ಮನಸೋ ಇಚ್ಛೆ ಬಳಸಿದರೆ ವ್ಯರ್ಥ. ತುಂಬ ಬಿಕ್ಕಟ್ಟಿನ ಸಂದರ್ಭ, ತುರ್ತು ಇದ್ದಾಗ ಮಾತ್ರವೇ ಅದರ ಹಿತಮಿತ ಬಳಕೆ ಮಾಡುವುದು ಸೂಕ್ತ. ಅದಕ್ಕಾಗಿಯೇ ಐಸಿಎಂಆರ್‌ ಅದರ ಬಳಕೆಯ ನಿರ್ದಿಷ್ಟ ಸ್ವರೂಪ ಹೇಗಿರಬೇಕು ಎನ್ನುವುದನ್ನು ಹೇಳಿದೆ. ಚರ್ಮ ಹಾಗೂ ಸಾಫ್ಟ್‌ ಟಿಶ್ಶೂ ಸಮಸ್ಯೆ ಇದ್ದಾಗ ಐದು ದಿನದ ಆ್ಯಂಟಿಬಯೋಟಿಕ್‌ ಕೋರ್ಸ್‌ ಸಾಕಾಗುತ್ತದೆ. ಒಂದು ವೇಳೆ ರೋಗ ನಿರೋಧಕ ಶಕ್ತಿ ಹೀರುವ ನ್ಯೂಮೋನಿಯಾ ಅಥವಾ ಆಸ್ಪತ್ರೆಯಲ್ಲಿ ಅಂಟುವ ನ್ಯೂಮೋನಿಯಾ ಇದ್ದಾಗ ಎಂಟು ದಿನದ…

Read More

ತೆಲಂಗಾಣದ ವಾರಂಗಲ್‌ನಲ್ಲಿ ಚಾಕ್ಲೇಟ್ ತಿನ್ನುವಾಗ ಉಸಿರುಗಟ್ಟಿ 9 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಬಾಲಕನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಚಾಕ್ಲೇಟ್ ತಿನ್ನುತ್ತಿದ್ದಾಗ ಗಂಟಲಿನಲ್ಲಿ ಸಿಕ್ಕಿಕೊಂಡಿದೆ. ಬಳಿಕ ಆತನನ್ನು ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಆತ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಾಲಕ ನಗರದ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, 2ನೇ ತರಗತಿಯಲ್ಲಿ ಓದುತ್ತಿದ್ದ. ತಂದೆ ಆಸ್ಟ್ರೇಲಿಯಾದಿಂದ ಚಾಕ್ಲೇಟ್ ತಂದಿದ್ದು, ಅದನ್ನು ಶಾಲೆಗೆ ಒಯ್ದಿದ್ದ. ಶಾಲೆಯಲ್ಲಿ ಚಾಕ್ಲೇಟ್ ಅನ್ನು ತಿನ್ನುತ್ತಿದ್ದ ವೇಳೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಬಾಲಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಶಾಲೆಯ ಆಡಳಿತ ಮಂಡಳಿ ಬಾಲಕನ ಪೋಷಕರಿಗೆ ಮಾಹಿತಿ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಾಯಿ ಮತ್ತು ಮಗ ಸೇರಿ ತಂದೆಯನ್ನು ಕೊಂದು ಶವವನ್ನು ಕತ್ತರಿಸಿ ಫ್ರಿಡ್ಜ್ ​ನಲ್ಲಿಟ್ಟು ಇಬ್ಬರೂ ಬೇರೆ ಬೇರೆ ದಿನಗಳಲ್ಲಿ ಬಂದು ಮಧ್ಯರಾತ್ರಿಯಲ್ಲಿ ಮೃತದೇಹದ ಭಾಗಗಳನ್ನು ಚಾಂದ್ ಚಿತ್ರಮಂದಿರದ ಮುಂಭಾಗದ ಮೈದಾನದಲ್ಲಿ ಎಸೆದಿರುವ ಭಯಾನಕ ಪ್ರಕರಣವೊಂದು ಬಯಲಾಗಿದೆ. ಪೂರ್ವ ದೆಹಲಿಯಲ್ಲಿ ವ್ಯಕ್ತಿಯ ಕತ್ತರಿಸಿದ ದೇಹದ ಭಾಗಗಳನ್ನು ಪೊಲೀಸರು ಪತ್ತೆ ಹಚ್ಚಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರಾಂಚ್ ತನಿಖೆ ನಡೆಸಿ ಆರೋಪಿಗಳಾದ ದೆಹಲಿಯ ಪಾಂಡವನಗರದ ಮಹಿಳೆ ಮತ್ತು ಆಕೆಯ ಮಗನನ್ನು ಅಪರಾಧ ವಿಭಾಗ ಬಂಧಿಸಿದೆ. ತಂದೆಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿತ್ತು ಎಂದು ತನಿಖೆಯ ವರದಿ ತಿಳಿಸಿದೆ. ಅದಕ್ಕಾಗಿಯೇ ಮಗ ತಾಯಿಯೊಂದಿಗೆ ಸೇರಿ ಈ ಕೃತ್ಯವನ್ನು ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಹೆಸರು ಪೂನಂ ಮತ್ತು ಮಗನ ಹೆಸರು ದೀಪಕ್. ಮೃತರ ಹೆಸರು ಅಂಜನ್ ದಾಸ್ ಎಂದು ತಿಳಿದು ಬಂದಿದೆ. ತಾಯಿ ಮತ್ತು ಮಗ ಇಬ್ಬರೂ ಅಂಜನ್ ದಾಸ್‌ಗೆ ಅಮಲು ಮಾತ್ರೆಗಳನ್ನು ತಿನ್ನಿಸಿ ಕೊಂದಿದ್ದಾರೆ. ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದರು. ಯಾರಿಗೂ ಅನುಮಾನ…

Read More

ತುಮಕೂರು;ಕ್ಷುಲ್ಲಕ ಕಾರಣಕ್ಕೆ ಕಾರು ಅಡ್ಡಗಟ್ಟಿ ವ್ಯಕ್ತಿಗೆ ಬೈಕ್ ಸವಾರರಿಬ್ಬರು ಚಾಕುವಿನಿಂದ ಇರಿದಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಬೈರೇನಹಳ್ಳಿಯಲ್ಲಿ ನಡೆದಿದೆ. ನೆನ್ನೆ ಸಂಜೆ ಈ ಘಟನೆ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ಹೇಮಂತ್ ಎಂಬುವವರೇ ಚಾಕು ಇರಿತಕ್ಕೊಳಗಾಗಿರುವವರು. ಬೆಂಗಳೂರು ಮೂಲದ ಯುವಕ ಹೇಮಂತ್ ಕಾರಿನಲ್ಲಿ ತೆರಳುಯತ್ತಿದ್ದ ವೇಳೆ ಹಾರನ್ ಮಾಡಿದ್ದಾರೆ. ಹಾರನ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಬೈಕ್ ಸವಾರರಿಬ್ಬರು ಏಕಾಏಕಿ ಕಾರು ಅಡ್ಡಗಟ್ಟಿ ಹೇಮಂತ್ ಗೆ 4 ರಿಂದ 5 ಬಾರಿ ಚಾಕುವಿನಿಂದ ಇರಿದಿದ್ದು ಯುವಕ ಹೇಮಂತ್ ಸ್ಥಿತಿ ಗಂಭೀರವಾಗಿದೆ. ಹೇಮಂತ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕೊರಟಗೆರೆ ಠಾಣಾ ಪೊಲೀಸರು ಬಲೆ ಬೀಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬಾಗಲಕೋಟೆ: ಜಿಲ್ಲೆಯ ಕುಮಾರೇಶ್ವರ್ ಆಸ್ಪತ್ರೆ ವೈದ್ಯರು ವ್ಯಕ್ತಿ ಹೊಟ್ಟೆಯಲ್ಲಿದ್ದ 187 ನಾಣ್ಯಗಳನ್ನು ಹೊರತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 187 ನಾಣ್ಯಗಳನ್ನು ಎಂಡೋಸ್ಕೋಪಿ ಮೂಲಕ ಹೊರತೆಗೆದಿದ್ದಾರೆ. ವೈದ್ಯರ ಶಸ್ತ್ರಚಿಕಿತ್ಸೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ದ್ಯಾ‌ಮಪ್ಪ ಹರಿಜನ ಎಂಬ 58 ವರ್ಷದ ವೃದ್ಧ ನಾಣ್ಯ ನುಂಗಿದ್ದರು. ಸದ್ಯ ಕುಮಾರೇಶ್ವರ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ 5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1ರ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ಹೊರ ತೆಗೆದಿದ್ದಾರೆ. ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ವೃದ್ದ ದಾಖಲಾಗಿದ್ದರು. ಎಕ್ಸರೇಯಲ್ಲಿ ನಾಣ್ಯಗಳು ಪತ್ತೆಯಾಗಿದ್ದವು. ವ್ಯಕ್ತಿ ಜೀವ ಅಪಾಯದಲ್ಲಿರುವುದನ್ನು ಅರಿತ ವೈದ್ಯರು ಎಂಡೋಸ್ಕೋಪಿ ಮಾಡಿ ನಾಣ್ಯಗಳನ್ನು ಹೊರತೆಗೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಂಗಳೂರು : ಗಡಿ ವಿವಾದದ ಸಂಬಂಧ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳ ಪುಂಡಾಟ ಮುಂದುವರೆದಿದ್ದು, ಮುಂಬೈನ ಮಾಹಿಮ್ ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪೋಸ್ಟರ್‌ಗೆ ಕಪ್ಪು ಮಸಿ ಬಳಿಯಲಾಗಿದೆ. ಕರ್ನಾಟಕದ ಪ್ರವಾಸೋದ್ಯಮದ ಜಾಹೀರಾತು ಇದ್ದ ಪೋಸ್ಟರ್‌ನಲ್ಲಿನ ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಆನಂದ್ ಸಿಂಗ್ ಅವರ ಚಿತ್ರಕ್ಕೆ ಕಪ್ಪು ಬಣ್ಣ ಬಳಿಯಲಾಗಿದೆ. ಇತ್ತ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಿನ್ನೆ ಸಂಜೆ ಮಹತ್ವದ ಸಭೆ ನಡೆದಿದ್ದು, ರಾಜ್ಯದ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್​ ನೇಮಕವಾದ ಬಳಿಕ ಮೊದಲ ಸಭೆ ಮಾಡಿದ್ದೇವೆ. ಗಡಿ ವಿವಾದದ ಬಗ್ಗೆ ಇಲ್ಲಿಯವರೆಗೆ ನಡೆದಿರುವುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಸುಪ್ರೀಂ ಕೋರ್ಟ್​ನಲ್ಲಿ ಯಾವ ರೀತಿ ವಾದ ಮಾಡಬೇಕು ಎಂದು ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More