Author: admin

ಗದಗ: ರಟ್ಟಿನ ಡಬ್ಬದಲ್ಲಿ 3 ದಿನಗಳ ಹಸುಳೆ ಪತ್ತೆಯಾದ ಅಮಾನವೀಯ ಘಟನೆ ನಗರದ ಎಪಿಎಂಸಿ ಆವರಣದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಗದಗ ಎಪಿಎಂಸಿ ಆವರಣದ ನಿರ್ಜನ ಪ್ರದೇಶದಲ್ಲಿ ಬೇವಿನ ಸೊಪ್ಪು, ಕೊಂಬೆಗಳನ್ನು ಸೇರಿಸಿ ಅದರ ಅಡಿಯಲ್ಲಿ ರಟ್ಟಿನ ಡಬ್ಬವೊಂದರಲ್ಲಿ ಮಗುವನ್ನು ಮುಚ್ಚಿಡಲಾಗಿತ್ತು. ಮಗು ಅಳುವುದು ಕೇಳಿಸಿಕೊಂಡ ಆಕಾಶ್‌ ಎಂಬ ಯುವಕ ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿದರು. ಬಡಾವಣೆಯ ಪೊಲೀಸ್ ಕಾನಸ್ಟೇಬಲ್ ​ಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಮಗುವಿನ ಪೋಷಕರನ್ನು ಪತ್ತೆ ಮಾಡಲು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಸುಗೂಸನ್ನು ರಟ್ಟಿನ ಡಬ್ಬಿಯಲ್ಲಿ ಎಸೆದು‌ ಹೋದ ಪಾಪಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಹೆಚ್.ಡಿ.ಕೋಟೆ: ಚಿನ್ನಪ್ಪರ ಪಾಳ್ಯ ಗ್ರಾಮದ ಕಮಲ ನಿವಾಸ ಹೆಲ್ತ್ ಸೆಂಟರ್ ನಲ್ಲಿ,  ನಯನ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು, ಲಯನ್ಸ್ ಸಂಸ್ಥೆ ಹೆಚ್.ಡಿ.ಕೋಟೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ, ಸಾರ್ವಜನಿಕ ಆಸ್ಪತ್ರೆ ಹೆಚ್. ಡಿ.ಕೋಟೆ  ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.  ಈ ಕಾರ್ಯಕ್ರಮವನ್ನು  ಸಂತ ವನ ಚಿನ್ನಪ್ಪರ ದೇವಾಲಯದ ಫಾದರ್ ಜಾಯ್ , ಲಯನ್ ಸಂಸ್ಥೆ ಅಧ್ಯಕ್ಷರಾದ ಈರೇಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ಸೋಮಣ್ಣ, ನಯನ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಪ್ರದೀಪ್  ಪ್ರಭು ಗಿಡಕ್ಕೆ ನೀರು ಹಾಕುವುದರ ಮೂಲಕ  ಉದ್ಘಾಟಿಸಿದ್ದರು ಈ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ  ಮಾತನಾಡಿ, ಇಂದು  ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿರುವುದು, ಜನರಿಗೆ ತುಂಬಾ ಅನುಕೂಲಕರವಾಗಿದೆ,  ಈ ಶಿಬಿರದಲ್ಲಿ ಉಚಿತ ಬಿಪಿ, ಶುಗರ್ ತಪಾಸಣೆ, ವೈದ್ಯರ ಸಲಹೆ ಮೇರೆಗೆ ಉಚಿತ ಇ.ಸಿ.ಜಿ. ತಪಾಸಣೆ, ಕೀಲು ಮತ್ತು ಮೂಳೆ ರೋಗ ತಪಾಸಣೆ ,ಮಕ್ಕಳ ಆರೋಗ್ಯತಪಾಸಣೆ,ಮಾಡುತ್ತಾರೆ.…

Read More

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ರೂವಾರಿ ಮೈಸೂರಿನಲ್ಲಿ ನೆಲೆಸಿದ್ದ ವಿಚಾರವನ್ನು ಮೈಸೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಮೈಸೂರಿನಲ್ಲಿ ಭದ್ರತೆ ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಸಮಾಜ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಬಿಗಿ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಮೈಸೂರು ನಗರ ಪ್ರವೇಶಿಸುವ 9 ಸ್ಥಳಗಳಲ್ಲಿ ವಾಹನಗಳ ನಿರಂತರ ತಪಾಸಣೆ ನಡೆಸಲಾಗುತ್ತಿದೆ. ನಗರದೊಳಗೂ 20 ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಲ್ಲಿ ನಿರಂತರ ತಪಾಸಣೆಯನ್ನು ಪೊಲೀಸರ ತಂಡ ನಡೆಸಲಿದೆ. ರಾತ್ರಿ 11ರ ಬಳಿಕ ಯಾರು ಕೂಡ ಅನಗತ್ಯವಾಗಿ ಓಡಾಡಬಾರದು. ಅನಗತ್ಯವಾಗಿ ಓಡಾಡುವವರನ್ನು ಪೊಲೀಸರು ಕರೆದು ತಪಾಸಣೆ ಮಾಡುತ್ತಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ವ್ಯಾಪಾರಸ್ಥರು ಕೂಡ ಅನಗತ್ಯವಾಗಿ ರಾತ್ರಿ 11 ಗಂಟೆ ಬಳಿಕ ವಹಿವಾಟು ನಡೆಸಬೇಡಿ. ಹಳೇ ರೌಡಿಶೀಟರ್ ಗಳ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಅಗತ್ಯ ಬಿದ್ದರೆ ಸಮಾಜ ಘಾತುಕ ವ್ಯಕ್ತಿಗಳನ್ನು ಗಡಿಪಾರು ಮಾಡುತ್ತೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಹೇಳಿದ್ದಾರೆ. ಮೈಸೂರಿಗೆ ಕೆಲಸ ಹುಡುಕಿಕೊಂಡು…

Read More

ದಾವಣಗೆರೆ : ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವನ್ನಪ್ಪಿದ್ದ ರೀತಿಯಲ್ಲೇ ಬೆಳಗಾವಿಯ ಎಎಸ್ ಐ ಪುತ್ರ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಬಳಿ ಇರುವ ಮಹೇಶ್ವರಿ ಹಳ್ಳದಲ್ಲಿ ಕಾರು ಬಿದ್ದು ಬೆಳಗಾವಿ ಎಎಸ್ ಐ ಪುತ್ರ ಪ್ರಕಾಶ್ ಅರಳಿಕಟ್ಟೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗಕ್ಕೆ ತನ್ನ ಸ್ನೇಹಿತರನ್ನು ಬಿಟ್ಟು ವಾಪಸ್ ಬರುವಾಗ ಮಧ್ಯರಾತ್ರಿ ಒಂದು ಗಂಟೆಗೆ ಕಾರು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಉಡುಪಿ: ಮೂತ್ರಶಾಸ್ತ್ರಜ್ಞರ ತಂಡವು ಅತಿದೊಡ್ಡ ಮೂತ್ರಕೋಶದ ಕಲ್ಲನ್ನು ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಯ ವೈದ್ಯರು ತೆಗೆದಿದ್ದಾರೆ. ಇಲ್ಲಿಯವರೆಗೆ ಮಹಿಳಾ ರೋಗಿಯಲ್ಲಿ ವರದಿಯಾಗಿರುವ ಅತಿ ದೊಡ್ಡ ಮೂತ್ರಕೋಶದ ಕಲ್ಲು ಎಂದು ಮಾಹಿತಿ ಬಹಿರಂಗವಾಗಿದೆ. 60 ವರ್ಷ ವಯಸ್ಸಿನ ಮಹಿಳೆ ಕಳೆದ ಆರು ವರ್ಷಗಳಿಂದ ಉರಿ ಮೂತ್ರ ದೂರುಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಕಸ್ತೂರಿ ಬಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ರೋಗಿಗೆ ಸಿಟಿ ಸ್ಕ್ಯಾನ್ ಮಾಡಿದಾಗ ಮೂತ್ರಕೋಶದಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ. 11.5 x 7.5 ಸೆಂಮೀ ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಡಾ ಅಂಶುಮನ್, ಡಾ ಕಾಶಿ ವಿಶ್ವನಾಥ್, ಡಾ‌ ನಿಶಾ, ಡಾ ವಿವೇಕ್ ಪೈ ಮತ್ತು ಡಾ ಕೃಷ್ಣ ಅವರ ತಂಡವು ತೆರೆದ ಸಿಸ್ಟೊಲಿಥೊಟಮಿ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲನ್ನ ಹೊರ ತೆಗೆದಿದ್ದಾರೆ. ಆರೋಗ್ಯವಂತ ವಯಸ್ಕ ಮಹಿಳೆಯಲ್ಲಿ ಇಂತಹ ದೈತ್ಯ ಮೂತ್ರಕೋಶದ ಕಲ್ಲು ಪತ್ತೆಯಾಗಿದ್ದು, ನಮ್ಮ ಜ್ಞಾನದ ಪ್ರಕಾರ ಇದು ವಿಶ್ವದಲ್ಲೇ ಮೊದಲು. ಇಲ್ಲಿಯವರೆಗೆ ಅತಿದೊಡ್ಡ ಮೂತ್ರಕೋಶದ…

Read More

ನಾಳೆ ದಕ್ಷಿಣ ಕಾಶಿ ನಂಜನಗೂಡಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.ನಂಜನಗೂಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಎಂ ನಾಳೆ ನೀಡಲಿದ್ದಾರೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಅಭಿವೃದ್ಧಿ ಕಾಮಗಾರಿ ಮತ್ತು ಹೆಡಿಯಾಲ ಏತ ನೀರಾವರಿ, ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ನಂಜನಗೂಡು ನಂಜುಂಡೇಶ್ವರ ದೇವಾಲಯ ಬಳಿ ನಿರ್ಮಿಸಿರುವ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಬಿ.ಹರ್ಷವರ್ಧನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಥಳೀಯ ಶಾಸಕ ಹರ್ಷವರ್ಧನ್ ಅಭಿವೃದ್ಧಿ ಕಾಮಗಾರಿಗಳನ್ನ ಕೈಗೆತ್ತಿಕೊಂಡಿದ್ದಾರೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬಾಣಂತಿ ಡಿಸ್ಚಾರ್ಜ್ ಮಾಡಲು 6 ಸಾವಿರ ರೂ. ಲಂಚ ಕೇಳಿದ್ದ ಮಹಿಳಾ ವೈದ್ಯರನ್ನ ರಾಮನಗರ ಡಿಎಚ್ ಒ ಡಾ. ಕಾಂತರಾಜು ಅಮಾನತು ಮಾಡಿ ಆದೇಶಿಸಿದ್ದಾರೆ. ಬಿಡದಿ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಶಶಿಕಲಾ, ಡಾ.ಐಶ್ವರ್ಯ ಅಮಾನತುಗೊಂಡವರು. ಬಾಣಂತಿ ರೂಪ ಅವರ ಬಳಿ ಡಿಸ್ಚಾರ್ಜ್ ಮಾಡಲು ವೈದ್ಯೆ ಶಶಿಕಲಾ ಅವರು 6 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ತಕ್ಷಣ ಎಚ್ಚೆತ್ತ ರಾಮನಗರ ಡಿಎಚ್ ಒ ಡಾ. ಕಾಂತರಾಜು ಅವರು , ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಶಿಕಲಾ, ಡಾ.ಐಶ್ವರ್ಯರನ್ನ ಅಮಾನತು ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಇದು ಬಹಳ ವಿಷಾದದ ಸಂಗತಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೀವೆ. ಭ್ರಷ್ಟಾಚಾರ ಎಲ್ಲಾ ಕ್ಷೇತ್ರದಲ್ಲೂ ಇದೆ. ಅದನ್ನ ತೊಡೆದು ಹಾಕಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ವಿವಾದಿತ ಗುಂಬಾಜ್ ಮಾದರಿಯ ಬಸ್ ನಿಲ್ದಾಣ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಸಂಸದ ಪ್ರತಾಪ್ ಸಿಂಹ ಮೇಲುಗೈ ಸಾಧಿಸಿದ್ದಾರೆ. ಅಕ್ಕಪಕ್ಕ ಎರಡು ಚಿಕ್ಕ ಗೋಪುರ ಮಧ್ಯೆ ಒಂದು ದೊಡ್ಡ ಗೋಪುರ ಇದ್ದರೆ ಅದು ಮುಸ್ಲಿಂ ಮಾದರಿ ಕಟ್ಟಡ. ಅದನ್ನ ತೆರವು ಮಾಡೇ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಇದೀಗ ಅದನ್ನುತೆರವು ಮಾಡಲಾಗಿದೆ. ಈ ಕುರಿತು್ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ, ಕೊಟ್ಟ ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ಅದನ್ನ ತೆರವು ಮಾಡುತ್ತೇನೆ ಎಂದಿದ್ದೆ, ಅದರಂತೆ ಈಗ ತೆರವುವಾಗಿದೆ. ಕಾಲಾವಕಾಶ ಕೇಳಿ ಮಾತಿನಂತೆ ಜಿಲ್ಲಾಧಿಕಾರಿ ನಡೆದುಕೊಂಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜೀ ಗೂ ಧನ್ಯವಾದಗಳು ಎಂದು ಫೇಸ್ ಬುಕ್ ಮುಖಪುಟದಲ್ಲಿ ಸಂಸದ ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ.ಇನ್ನೊಂದು ಕಡೆ ಅನವಶ್ಯಕವಾಗಿ ಧರ್ಮ ಲೇಪನ ಮಾಡಿದ್ದು ನನಗೆ ನೋವಾಗಿದೆ ಎಂದು ಶಾಸಕ ರಾಮದಾಸ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ. ಇದು ವಿವಾದಿತ ಬಸ್ ನಿಲ್ದಾಣ ವಿಚಾರದಲ್ಲಿ ಶಾಸಕ ರಾಮದಾಸ್…

Read More

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಗಡಿ ವಿವಾದ ಮುಗಿದರೂ ಮಹಾರಾಷ್ಟ್ರ ರಾಜಕೀಯವಾಗಿ ಡೈವರ್ಟ್ ಮಾಡಲು ಯತ್ನಿಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಕಿಡಿಕಾರಿದರು. ಈ ಕುರಿತು ಇಂದು ಮಾತನಾಡಿದ ಮಾಜಿ ಸಚಿವ ಎಂ.ಬಿ ಪಾಟೀಲ್, ಗಡಿವಿವಾದ ವಿಚಾರವನ್ನ ಮಹಾರಾಷ್ಟ್ರ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇವರು ಖ್ಯಾತೆ ತೆಗೆದರೇ ಸೊಲ್ಲಾಪುರ ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟೆ ಸೇರಿ ಬಹಳ ಪ್ರದೇಶಗಳು ನಮಗೆ ಬರುತ್ತವೆ. ಇದೀಗ ಜತ್ ಭಾಗದ ಜನ ಕರ್ನಾಟಕಕ್ಕೆ ಸೇರುತೇವೆ ಎಂದು ಹೇಳುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ತಮ್ಮಲ್ಲಿರುವ ಪ್ರದೇಶ ಅಭಿವೃದ್ದಿ ಮಾಡಿಲ್ಲ. ಜತ್ ಭಾಗದಲ್ಲಿ ಕುಡಿಯುವ ನೀರು ಪೂರೈಸಿಲ್ಲ, ಜತ್ ಭಾಗದ ಜನ ಕರ್ನಾಟಕ್ಕೆ ಸೇರ್ಪಡೆ ಬಹಳ ಸೂಕ್ಷ್ಮವಾದದ್ದು . ಇದನ್ನ ಸರ್ವ ಪಕ್ಷ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy…

Read More

ಅಕ್ರಮವಾಗಿ ಜಿಂಕೆ ಬೇಟೆಯಾಡಿದ್ದ ಇಬ್ಬರನ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಮೇಡಿಕುಪ್ಪೆ ಅರಣ್ಯ ಇಲಾಖೆ ಸಿಬ್ಬಂದಿಗಳ ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮ ನಾಡ ಬಂದೂಕಿನ ಸಮೇತ ಜಿಂಕೆಯ ಮೃತದೇಹದ ಜೊತೆಗೆ ಇಬ್ಬರು ಆರೋಪಿಗಳನ್ನ ವಶಕ್ಕೆಪಡೆದಿದ್ದಾರೆ. ಮೇಟಿಕುಪ್ಪೆ ಅಭಿಷೇಕ್ ಮತ್ತು ಕಲ್ಲಹಟ್ಟಿ ನೆಹರು ನಾಯಕ್ ಬಂಧಿತ ಆರೋಪಿಗಳು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಂಡು‌ ಅರೋಪಿಗಳು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಿಂಬಾಲಿಸಿ ಇಬ್ಬರನ್ನು ವಶಕ್ಕೆ ಪಡೆದರು. ಬಂಧಿತರ ವಿರುದ್ದ ವನ್ಯಜೀವಿ ಕಾಯ್ದೆ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡ ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy…

Read More