Author: admin

ಮಾರ್ಗಶಿರ ಮಾಸ ಯಾವುದೇ ಪುಣ್ಯ ಮಾಸಗಳಲ್ಲಿ ಶಿವ ಮತ್ತು ವಿಷ್ಣುವಿನ ಆರಾಧನೆಯನ್ನು ಭಕ್ತಿಯಿಂದ ಮಾಡಿದರೆ ಸಕಲ ಪಾಪಗಳು ಪರಿಹಾರ ಆಗುವುದರೊಂದಿಗೆ ಸಾಕಷ್ಟು ಪುಣ್ಯವನ್ನು ಸಂಪಾದಿಸಬಹುದು. ಜೇಷ್ಟಾದೇವಿ ಒಂದು ದಿನ ಶ್ರೀ ಹರಿಯು ಅಳುತ್ತಿರುವ ಜೇಷ್ಟಾ ದೇವಿಯನ್ನು ಸಮಾಧಾನಪಡಿಸಿ, ಜೇಷ್ಟಾ ನೋಡು ಈ ಅರಳಿ ಮರದಲ್ಲಿ ನನ್ನ ಸನ್ನಿಧಿ ಇರುತ್ತದೆ. ಆದ್ದರಿಂದ ನೀನು ಈ ವೃಕ್ಷದ ಮೂಲದಲ್ಲಿ ನೆಲೆಸು. ನಿನ್ನನ್ನು ಪ್ರತಿ ವರ್ಷ ಯಾರು ಪೂಜಿಸುತ್ತಾರೋ, ಅವರಿಗೆ ಲಕ್ಷ್ಮಿ ಒಲಿಯುತ್ತಾಳೆ ಎಂದನು. ಹೀಗೆ ಶನಿವಾರ ಅರಳೀವೃಕ್ಷವನ್ನು ಯಾರು ಶ್ರದ್ಧಾ ಭಕ್ತಿಗಳಿಂದ ಪೂಜಿಸಿ ಪ್ರದಕ್ಷಿಣಾ ಹಾಕುತ್ತಾರೋ ಲಕ್ಷ್ಮಿ ಕಟಾಕ್ಷವಾಗುತ್ತದೆ ಎಂಬುದು ಭಗವಂತನ ಮಾತು. ಇಂಥ ಪುಣ್ಯಪ್ರದವಾದ ಕಥೆಗಳನ್ನು ಯಾರು ಹೇಳಿ ಕೇಳುತ್ತಾರೋ ಅವರು ಸಕಲ ಪಾಪಗಳನ್ನು ಕಳೆದುಕೊಂಡು ವಿಷ್ಣು ಸಾಯುವ್ಯ ಪದವಿಯನ್ನು ಪಡೆಯುವರು ಎಂಬುದು ಮಹಾಮಹಿಮರ ಅಭಿಪ್ರಾಯವಾಗಿದೆ. ಅಶ್ವತ್ಥಮರ ಅಶ್ವತ್ಥಮರದಲ್ಲಿ ಭಗವಂತನು ಹಯಗ್ರೀಯ ರೂಪದಿಂದ ವಿಶೇಷವಾಗಿ ಅಭಿವ್ಯಕ್ತನಾಗಿ ಈ ಮರವು ಉಳಿದೆಲ್ಲಾ ಮರಗಳಿಗಿಂತ ಹೆಚ್ಚು ಯೋಗ್ಯವೆಂದು ತೋರಿಸುತ್ತಾನೆ. ಜನಮನ್ನಣೆಗಳಿಸಿರುವ 22 ವರ್ಷಗಳಿಂದ ಸುದೀರ್ಘ ಅನುಭವ…

Read More

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಶಾಂತಿಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಥಳಿಸಿ ಕೈ ಮುರಿದಿರುವ ಘಟನೆ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ಅಮೃತ್ ಕೈಗೆ ಗಂಭೀರ ಗಾಯವಾಗಿದೆ. ಅಮೃತ್​ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಆಟವಾಡುತ್ತಿದ್ದ ಕಾರಣಕ್ಕೆ ಶಿಕ್ಷಕ ಸಿದ್ದರಾಜು ಸ್ಟೀಲ್ ಸ್ಕೇಲ್​​ನಿಂದ ಹೊಡೆದಿದ್ದಾನೆ. ಇದರಿಂದ ಅಮೃತ್​ ಕೈ ಕಟ್​ ಆಗಿದೆ. ಇದನ್ನು ಕಂಡ ಶಿಕ್ಷಕ ಸಿದ್ದರಾಜು, ಆತನ ಪೋಷಕರಿಗೆ ಕಟರ್​ನಿಂದ ಅಮೃತ್‌ ಕೈಕಟ್ ಮಾಡಿಕೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ತಾಲೂಕು ಶಿಕ್ಷಣಾಧಿಕಾರಿ ಉದಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪ್ರತಿದಿನ ಕುಡಿದು ಬಂದು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ಮಗನನ್ನೇ ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿಪೊಲೀಸ್ ಠಾಣೆ ವ್ಯಾಪ್ತಿ ದೇವಾಲಪುರದಲ್ಲಿ ಮುನಿಸ್ವಾಮಿ ಎಂಬವರು ಕಿರುಕುಳ ನೀಡುತ್ತಿದ್ದ ಮಗ ತ್ಯಾಗರಾಜ ಎಂಬವನನ್ನು ಕೊಲೆ ಮಾಡಿದ್ದಾರೆ. ತ್ಯಾಗರಾಜುಪ್ರತಿ ದಿನ ಕುಡಿದು ಬಂದು ತಂದೆ ಮುನಿಸ್ವಾಮಿ ಮತ್ತು ತಾಯಿ ಜತೆಗೆ ಜಗಳ ತೆಗೆಯುತ್ತಿದ್ದ. ಕುಡಿಯಲು ದುಡ್ಡು ಕೊಡದಿದ್ದರೆ ಹಲ್ಲೆ ಮಾಡುತ್ತಿದ್ದ. ಕೂಲಿ ಮಾಡಿ ಜೀವನ‌ ಸಾಗಿಸುತ್ತಿದ್ದ ಮುನಿಸ್ವಾಮಿ ದಂಪತಿ ಮಗನ‌ ಕಿರುಕುಳದಿಂದ ಬೇಸತ್ತು, ಮಗಳ ಮನೆ ಸೇರಿಕೊಂಡಿದ್ದರು. ಅಲ್ಲಿಗೂ ಬಂದು ತಂದೆ ಮೇಲೆಯೇ ಹಣಕ್ಕಾಗಿ ಹಲ್ಲೆಗೆ ಮುಂದಾಗಿದ್ದ. ಮಗನ ಕಿರುಕುಳದಿಂದ ಬೇಸರಗೊಂಡಿದ್ದ ತಂದೆ ಜಿಮ್ ನಲ್ಲಿ ಬಳಸುವ ಡಂಬಲ್ ನಿಂದ ತಲೆಗೆ ಚಚ್ಚಿ ಕೊಲೆ ಮಾಡಿದ್ದಾರೆ. ನಂತರ ಅನುಗೊಂಡನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿದ ಅಡಿಶನಲ್ ಎಸ್ಪಿ ಪುರುಷೋತ್ತಮ ಪರೀಶೀಲನೆ ನಡೆಸಿದ್ದಾರೆ. ಅನುಗೊಂಡನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಸುರಂಗ ಕೊರೆದ ದುಷ್ಕರ್ಮಿಗಳು ರೈಲ್ವೆ ಯಾರ್ಡ್ ಗೆ ದುರಸ್ತಿಗೆ ಬರುತ್ತಿದ್ದ ರೈಲ್ವೆ ಇಂಜಿನ್ ಬಿಡಿಭಾಗ ಕದ್ದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬೆಗಸುರಯ್ ಜಿಲ್ಲೆಯ ರೈಲ್ವೆ ಯಾರ್ಡ್ ಗೆ ಸುರಂಗ ಕೊರೆದ ದುಷ್ಕರ್ಮಿಗಳು ಒಂದೊಂದೇ ಬಿಡಿ ಭಾಗಗಳಂತೆ ಇಡೀ ಡೀಸೆಲ್ ಇಂಜಿನ್ ಅನ್ನು ದೋಚಿದ್ದಾರೆ. ರೈಲ್ವೆ ಯಾರ್ಡ್ ಗೆ ಸುರಂಗ ಕೊರೆದ ದುಷ್ಕರ್ಮಿಗಳು ದುರಸ್ಥಿಗೆ ಬರುತ್ತಿದ್ದ ರೈಲ್ವೆ ಇಂಜಿನ್ ನ ಬಿಡಿಭಾಗಗಳನ್ನು ಹಂತ ಹಂತವಾಗಿ ಇಡೀ ರೈಲನ್ನು ದೋಚಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗರ್ಹಾರ ಯಾರ್ಡ್ ನಲ್ಲಿ ಡೀಸೆಲ್ ಇಂಜಿನ್ ಅನ್ನು ಕದಿಯಲಾಗಿದೆ ಎಂದು ಬರನುಯಿ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಅಧಿಕಾರಿಗಳು ದೂರು ನೀಡಿದ್ದಾರೆ. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮುಜಾಫರ್ ಪುರ್ ಜಿಲ್ಲೆಯಿ ಪ್ರಭಾತ್ ನಗರದ ಸ್ಕ್ರ್ಯಾಪ್ ಗೋಡಾನ್ ನಲ್ಲಿ ರೈಲಿನ 13 ಬೋಗಿಗಳ ಬಿಡಿಭಾಗಗಳು ವಶಕ್ಕೆ ಪಡೆಯಲಾಗಿದೆ. ರೈಲಿಗೆ ಗಟ್ಟಿಯಾದ ಕಬ್ಬಿಣ ವಸ್ತುಗಳಿಂದ ತಯಾರಿಸಿದ ರೈಲಿನ ಇಂಜಿನ್ ಬಿಡಿಭಾಗಗಳು, ಚಕ್ರಗಳು ವಶಪಡಿಸಿಕೊಳ್ಳಗಿದೆ. ಈ ಗ್ಯಾಂಗ್ ರೈಲ್ವೆ…

Read More

ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ)ಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರ ಶಾರೀಕ್ ಈಗಾಗಲೇ ಪೊಲೀಸರ ವಶದಲ್ಲಿದ್ದು, ತನಿಖೆಯಲ್ಲಿ ದೇವಸ್ಥಾನ, ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆಸುವುದು ಸೇರಿದಂತೆ ಹಲವಾರು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತನಿಖೆಯನ್ನು ಎನ್ ಐಗೆ ಹಸ್ತಾಂತರಿಸಿದೆ. ಒಂದು ವೇಳೆ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗದೇ ಇದ್ದಿದ್ರೆ ಮಂಗಳೂರಿನ ಪ್ರಸಿದ್ಧ ದೇಗುಲಗಳು, ಬಸ್ ನಿಲ್ದಾಣ ಹಾಗೂ ಆರ್​​ಎಸ್​ಎಸ್​ ಕಚೇರಿ ಶಾರೀಕ್​ನ ಟಾರ್ಗೆಟ್ ಆಗಿತ್ತು ಎನ್ನುವ ಆಘಾತಕಾರಿ ಅಂಶಗಳು ಪೊಲೀಸ್ ತನಿಖೆ ವೇಳೆ ಹೊರಬಂದಿವೆ. ಉಗ್ರ ಶಾರೀಕ್ ವಿರುದ್ಧ UAPA ಕಾಯ್ದೆ ಅನ್ವಯ ಕೇಸ್​ ದಾಖಲು ಮಾಡಲಾಗಿದ್ದು, ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ NIAಗೆ ಕೇಸ್ ವರ್ಗಾವಣೆ ಮಾಡಲಾಗಿದ್ದು, ಇಂದು NIA ಅಧಿಕಾರಿಗಳು ಶಾರೀಕ್ ನ ತೀವ್ರ ವಿಚಾರಣೆ ಒಳಪಡಿಸಿದ್ದಾರೆ. ಮಂಗಳೂರಿನಲ್ಲಿ ಎನ್ ಐಎ ಘಟಕ ಸ್ಥಾಪನೆ? ಕಂಕನಾಡಿಯಲ್ಲಿ ಇತ್ತೀಚೆಗೆ…

Read More

ಹುಬ್ಬಳ್ಳಿ : ಬೈಕ್ ಸವಾರನಿಗೆ ಬರೋಬ್ಬರಿ 17, 500 ರೂಪಾಯಿ ದಂಡ ಬಿದ್ದಿದ್ದು, ದಂಡಕ್ಕೆ ಬೆಚ್ಚಿದ ಸವಾರ, ಬೈಕ್​ನನ್ನು ಸಂಚಾರಿ ಪೊಲೀಸರಿಗೆ ಒಪ್ಪಿಸಿ ಹೋದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 23 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಬೈಕ್‌ ಸವಾರನಿಗೆ 17,500 ಸಾವಿರ ದಂಡ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಉತ್ತರ ಸಂಚಾರ ಠಾಣೆ ಪೊಲೀಸರಿಂದ ಬೈಕ್ ಸವಾರನಿಗೆ ದಂಡ ಕಟ್ಟುವಂತೆ ಸೂಚಿಸಲಾಗಿದೆ. ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸಿ, ಭಾರಿ ದಂಡ ಹಾಕಿಸಿಕೊಂಡ ವ್ಯಕ್ತಿಯನ್ನು ಹುಬ್ಬಳ್ಳಿಯ ಮಹ್ಮದ್‌ ರಫೀಕ್‌ ಗುಡಗೇರಿ ಎಂದು ಗುರುತಿಸಲಾಗಿದೆ. ಹಣ ಈಗಲೇ ಪಾವತಿಸಲು ಸಾಧ್ಯವಿಲ್ಲ ಎಂದು ಬೈಕ್‌ ಚಾವಿ ಕೊಟ್ಟು ರಫೀಕ್ ಹೊರಟು ಹೋಗಿದ್ದಾನೆ. ಸದ್ಯ ರಫೀಕ್ ಬೈಕ್ ನ್ನು ಸಂಚಾರಿ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ಖಾತಾ ವರ್ಗಾವಣೆಗೆ 5 ಲಕ್ಷ ರೂ. ಹಣ ಬೇಡಿಕೆಯಿಟ್ಟಿದ್ದ ತಹಶಿಲ್ದಾರರ ಹಾಗೂ ಕಚೇರಿ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ತಡರಾತ್ರಿ ನಡೆದಿದೆ. ಜಿಲ್ಲೆಯ ಚನ್ನಮ್ಮ ಕಿತ್ತೂರು ತಹಶಿಲ್ದಾರ್ ಸೋಮಲಿಂಗಪ್ಪ ಹಾಲಗಿ ಹಾಗೂ ನೌಕರ ಪ್ರಸನ್ನ ಜಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ದೂರುದಾರ ರಾಜೇಂದ್ರ ಇನಾಂದಾರ ಅವರ ತಂದೆ ಹೆಸರಿನಲ್ಲಿದ್ದ 10 ಎಕರೆ ಭೂಮಿಯನ್ನು ರಾಜೇಂದ್ರ ಹೆಸರಿಗೆ ವರ್ಗಾಯಿಸಲು 5 ಲಕ್ಷ ರೂ ಹಣದ ಬೇಡಿಕೆಯಿಟ್ಟದ್ದರು. ಮೊದಲ ಹಂತದಲ್ಲಿ ಎರಡು ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ,‌ ಲಂಚದ ಹಣ ಅಧಿಕಾರಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆಯ ಪರೀಕ್ಷೆಯಲ್ಲಿ ನಡೆದಿದ್ದಂತ ಅಕ್ರಮ ಸಂಬಂಧ, ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ್ ನ ಶಹರ ಠಾಣೆಯ ಪೊಲೀಸರು, ಮೂಡಲಗಿ ತಾಲೂಕಿನ ರಾಜಾಪುರ ನಿವಾಸಿಯಾಗಿರುವಂತ ಬಾಳೇಶ್ ಕಟ್ಟಿಕಾರ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಬಾಳೇಶ್ ಕಟ್ಟಿಕಾರ್ ಅವರು ಆಗಸ್ಟ್ 7, 2022ರಂದು ನಡೆದಿದ್ದಂತ ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆಯ ಪರೀಕ್ಷೆಯಲ್ಲಿ ಅಕ್ರಮಕ್ಕಾಗಿ ಎಲೆಕ್ಟ್ರಾನಿಕ್ ಡಿವೈಸರ್ ಸಪ್ಲೈ ಮಾಡಿದ್ದ ಎಂಬುದಾಗಿ ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕಲಬುರಗಿ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕೆ ಸೇರಿದ ಬಸ್​ಗಳಿಗೆ ಮಸಿ ಬಳಿಯಲಾಗಿತ್ತು. ಇದನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮಹಾರಾಷ್ಟ್ರ ಬಸ್​ಗಳಿಗೆ ಕಪ್ಪು ಮಸಿ ಬಳಿದು ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರಗಿಯಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಬಸ್​ ತಡೆದು ಮಸಿ ಬಳಿದಿದ್ದಾರೆ. ಬಸ್ ಮುಂಭಾಗದ ಗ್ಲಾಸ್​ಗೆ ಬಿತ್ತಿ ಪತ್ರ ಅಂಟಿಸಿ ಪ್ರತಿಭಟಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಧ್ವನಿ ಹಾಗೂ ಫೋಟೊವನ್ನು ಅವರ ಅನುಮತಿ ಇಲ್ಲದೇ ಯಾರೂ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ತಮ್ಮ ವ್ಯಕ್ತಿತ್ವದ ಹಕ್ಕು ಕಾಪಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಅಮಿತಾಭ್ ಬಚ್ಚನ್ ಹೈಕೋರ್ಟ್ ಮೊರೆ ಹೋಗಿದ್ದರು. ಅಮಿತಾಭ್ ಅವರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಶುಕ್ರವಾರ ನೀಡಿದ ಮಧ್ಯಂತರ ಆದೇಶದಲ್ಲಿ ಅನುಮತಿ ಇಲ್ಲದೇ ಅವರ ಫೋಟೊ, ಧ್ವನಿ ಬಳಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ. ಖ್ಯಾತ ವ್ಯಕ್ತಿಯ ವ್ಯಕ್ತಿತ್ವವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಅದು ಕೂಡ ಆ ವ್ಯಕ್ತಿ ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರ ಫೋಟೊ ಹಾಗೂ ಧ್ವನಿ ಬಳಸುವುದು ಕಾನೂನು ಉಲ್ಲಂಘನೆ ಎಂದು ಹೇಳಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More