Subscribe to Updates
Get the latest creative news from FooBar about art, design and business.
- ಚಿರತೆಗಳ ಕಾದಾಟ: ಎರಡು ವರ್ಷದ ಗಂಡು ಚಿರತೆ ಸಾವು
- ತುಮಕೂರು| ಪತ್ರಕರ್ತರ ಸಂಘದ ಚುನಾವಣೆ: ಕೊರಟಗೆರೆಯ ಮೂವರು ಪತ್ರಕರ್ತರ ಆಯ್ಕೆ
- ಸರಗೂರು: ಕಾಡಾನೆ ದಾಳಿಯಿಂದ ಲಕ್ಷಾಂತರ ರೂ. ಬೆಳೆ ನಾಶ: ರೈತರಿಂದ ಆಕ್ರೋಶ
- ಬೀದರ್ | 96,510 ರೈತರ ಖಾತೆಗೆ ₹69 ಕೋಟಿ ಬೆಳೆ ಪರಿಹಾರದ ಹಣ ಜಮೆ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
- ನಂದಿಹಳ್ಳಿ ಮಲ್ಲಸಂದ್ರ ಬೈಪಾಸ್ ರಸ್ತೆಗೆ ವಿರೋಧ: ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳು ವಾಪಸ್
- ಕುಣಿಗಲ್ | ನರೇಗಾ ಯೋಜನೆ ಬಿಲ್ ಪಾವತಿಗೆ ಒತ್ತಾಯಿಸಿ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ
- ಅಂತರ್ಜಲ ಹೆಚ್ಚಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ: ಶಾಸಕ ಟಿ.ಬಿ.ಜಯಚಂದ್ರ
- ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ಕಾನೂನಾತ್ಮಕವಾಗಿರಬೇಕು: ಶಾಸಕ ಸಿ.ಬಿ.ಸುರೇಶ್ ಬಾಬು
Author: admin
ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಈ ಪ್ರೀತಿಯ ಪರಾಕಾಷ್ಠೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತನ್ನ ಪ್ರಿಯತಮನ ಫೋನ್ ಅನ್ನು ಬೇರೆ ಹುಡುಗಿ ರಿಸೀವ್ ಮಾಡಿದಳೆಂಬ ಕಾರಣಕ್ಕೆ ಪ್ರೇಯಸಿ ಆತನ ಮನೆಗೆ ಬೆಂಕಿ ಹಚ್ಚಿ ಸುಟ್ಟು ಬಿಟ್ಟಿದ್ದಾಳೆ. ಪ್ರಿಯತಮನ ಮನೆಗೆ ಬೆಂಕಿ ಹಚ್ಚಿದ ಸೆನೈಡಾ ಮೇರಿ ಸೋಟೋ ಎಂಬ ಹುಡುಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಗೆ ಬೆಂಕಿ ಹಚ್ಚುವುದಕ್ಕೂ ಮೊದಲು ಗೆಳೆಯನ ಮನೆಯಲ್ಲಿ ಹಲವು ವಸ್ತುಗಳನ್ನು ಮೇರಿ ಸೋಟೋ ಕದ್ದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ತಾನು ಕರೆ ಮಾಡಿದಾಗ ಬಾಯ್‌ಫ್ರೆಂಡ್ ಫೋನ್ ಅನ್ನು ಬೇರೆ ಹುಡುಗಿ ಸ್ವೀಕರಿಸಿದ್ದಾಳೆ ಎಂದು ಮೇರಿ ಆತನ ಜೊತೆ ಜಗಳವಾಡಿದ ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾಳೆ. ಫೋನ್ ರಿಸೀವ್ ಮಾಡಿದಾಕೆ ಹುಡುಗನ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ. ಮೇರಿ ಲಿವಿಂಗ್ ರೂಮ್‌ನಲ್ಲಿದ್ದ ಮಂಚಕ್ಕೆ ಬೆಂಕಿ ಹಚ್ಚಿದ್ದಾಳೆ. ಅದು ಬಳಿಕ ಇಡೀ ಮನೆಯನ್ನು ಆವರಿಸಿಕೊಂಡಿದೆ. ಮನೆಗೆ ಬೆಂಕಿ ಹಚ್ಚಿರುವುದನ್ನು ವೀಡಿಯೊ ಮಾಡಿದ್ದು, ಅದರಲ್ಲಿ ಮೇರಿ ಬೆಂಕಿ ಹಚ್ಚುತ್ತಿರುವುದು ರೆಕಾರ್ಡ್ ಆಗಿದೆ. ಈ ಕೃತ್ಯದಿಂದ…
ಹಿಂದೂ ದೇವಾಲಯಗಳಿಗೆ ಬರುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಅಭಿಯಾನ ಆರಂಭಿಸಿದ್ದು, ಶಿರಸಿ ನಗರದ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದೆ. ಮನರಂಜನೆಗಾಗಿ ಬರುವ ಬಹುತೇಕ ಪ್ರವಾಸಿಗರು ದೇವಸ್ಥಾನಗಳಿಗೂ ಅದೇ ರೀತಿ ಬರುತ್ತಾರೆ. ಆಡಳಿತ ಮಂಡಳಿಯವರು ಈ ಬಗ್ಗೆ ಜಾಗೃತಿ ಮೂಡಿಸಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ ಮಾಡಬೇಕು ಎಂದು ಸಮಿತಿ ಆಗ್ರಹಿಸಿದೆ. ಪಾಶ್ಚಿಮಾತ್ಯ ಶೈಲಿಯ ಉಡುಪು ಧರಿಸುವುದರಿಂದ, ಕೂದಲು ಬಿಚ್ಚಿಟ್ಟುಕೊಳ್ಳುವುದರಿಂದ ದೇಗುಲದಲ್ಲಿ ಕೆಟ್ಟ ಶಕ್ತಿಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ವಿದೇಶಿ ಸಂಸ್ಕೃತಿಯ ಉಡುಪುಗಳಿಂದ ದೇವಸ್ಥಾನದ ಸಾತ್ವಿಕತೆಗೆ ಭಂಗ ಉಂಟಾಗುವುದು ಎಂದು ಸಮಿತಿ ಹೇಳಿದೆ. ದೇವಸ್ಥಾನ ಆಡಳಿತ ಮಂಡಳಿಯವರು ಮನವಿ ಸ್ವೀಕರಿಸಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದೆ. ಮಂಡಳಿಯ ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿ ಸುಧೀರ ಹಂದ್ರಾಳ ಹಾಜರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಳೆಯಿಂದ ಕೂಡಿರುವ ಈ ಚಳಿಗಾಲದಲ್ಲಿ ಎಷ್ಟೆಲ್ಲ ಎಚ್ಚರಿಕೆ ವಹಿಸಿದರೂ ಶೀತ, ನೆಗಡಿ, ಜ್ವರ ಸೇರಿದಂತೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ದೂರವಿರುವುದು ಪ್ರಯಾಸಕರ. ಹೀಗಿರುವಾಗ ಒಮ್ಮೆ ಲಿಂಬೆ ಶುಂಠಿ ರಸಂ ಸೇವಿಸಿ ನೋಡಿ. ನಾವು ಶೀತ ಸಂಬಂಧಿ ಸೋಂಕು, ವೈರಾಣುಗಳನ್ನು ಬರದಂತೆ ತಡೆಯುವ ಹಾಗೂ ಬಂದರೂ ಸುಲಭವಾಗಿ ಅದನ್ನು ಮಣಿಸುವುದಕ್ಕೆ ಅಗತ್ಯವಿರುವಂತೆ ದೇಹವನ್ನು ಸಿದ್ಧವಿರಿಸಿಕೊಂಡರೆ ಉತ್ತಮ. ಸಾಮಾನ್ಯವಾಗಿ ಈ ವಾತಾವರಣದಲ್ಲಿ ಎಲ್ಲರೂ ಬಿಸಿ ಬಿಸಿ ಆಹಾರ, ಪೇಯಗಳನ್ನೇ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಬಿಸಿ ಅನ್ನ, ರಸಂ ಈ ಚಳಿ ಹಾಗೂ ಶೀತದ ಮಧ್ಯೆ ವಿಶೇಷ ತೃಪ್ತಿ ಮತ್ತು ರುಚಿ ನೀಡುತ್ತದೆ. ಈ ಶೀತ ಹವಾಮಾನದಲ್ಲಿ ದೇಹವನ್ನು ಬೆಚ್ಚಗಿಡಲು ಲಿಂಬೆ ಮತ್ತು ಶುಂಠಿ ಮಿಶ್ರಿತ ರಸಂ ಬಹಳ ಸಹಕಾರಿ, ಇದು ಸವಿಯುವುದಕ್ಕೂ , ಊಟ ಮಾಡುವುದಕ್ಕೂ ಬಹುಅಚ್ಚುಮೆಚ್ಚಾಗುತ್ತದೆ. ಹುಳಿ, ಸಿಹಿ ಮತ್ತು ಖಾರದ ಮಿಶ್ರಣದ ರಸಂ ಜೊತೆ ಅನ್ನದ ರುಚಿಗೆ ಸಾಟಿಯೇ ಇಲ್ಲ. ಬಿಸಿ ಬಿಸಿ ಕಷಾಯದಂತೆಯೂ ಸೇವಿಸುತ್ತಾ ಎಂಜಾಯ್ ಮಾಡಬಹುದು. ಗಂಟಲ ಕೆರತ ಅಥವಾ…
ಸೂಪರ್ ಟ್ರಾನ್ಸ್‌ಪೋರ್ಟರ್ ಏರ್‌ಬಸ್ ಬೆಲುಗಾ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಸಿಎಸ್‌ಎಂಐಎ) ಬಂದಿಳಿದಾಗ ಸಿಬ್ಬಂದಿ ಮತ್ತು ಪ್ರಯಾಣಿಕರು ಅಚ್ಚರಿಗೊಂಡು ಇದೇನು ತಿಮಿಂಗಿಲ ಆಕಾರದ ವಿಮಾನ ಎಂದು ಹುಬ್ಬೇರಿಸಿದ್ದಾರೆ. ಒಟ್ಟಾರೆ ಈ ವಿಮಾನ ಈ ವಿಮಾನ ಎಲ್ಲರನ್ನೂ ಸೆಳೆಯುವಂತೆ ಮಾಡಿದೆ.ಈ ಏರ್‌ಬಸ್ ಬೆಲುಗಾ ಏರ್ ಕಾರ್ಗೋವನ್ನು ಸಾಗಣೆಗೆ ಬಳಕೆಯಾಗಿದೆ. ಈ ವಿಮಾನಗಳು 1990ರ ದಶಕದ ಮಧ್ಯಭಾಗದಿಂದ ಕಂಪನಿಯ ಸ್ವಂತ ಕೈಗಾರಿಕಾ ಏರ್‌ಲಿಫ್ಟ್ ಅಗತ್ಯಗಳಿಗಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಕ್ರಮೇಣ ಆರು ಹೊಸ ಬೆಲುಗಾಎಕ್ಸ್‌ಎಲ್ ಆವೃತ್ತಿಗಳ ಫ್ಲೀಟ್‌ನಿಂದ ಬದಲಾವಣೆಗೊಂಡಿದೆ ಎಂದು ಅದಕ್ಕೆ ಸಂಬಂಧಿಸಿದ ವೆಬ್ ಸೈಟ್ ಮಾಹಿತಿ ಒಳಗೊಂಡಿದೆ. ಸಿಎಸ್‌ಎಂಎ ಟ್ವಿಟರ್ ಪೇಜ್ ನಲ್ಲಿ ಈ ಬೃಹತ್ ವಿಮಾನದ ಕೆಲವು ಫೋಟೋ ಪೋಸ್ಟ್ ಮಾಡಿ, ಇದು ಎಲ್ಲರಿಗೂ ವಿಸ್ಮಯ ಎಂದು ಟ್ವೀಟ್ ಮಾಡಿದೆ. ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ಮುಂಬೈ ಏರ್‌ಪೋರ್ಟ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ನಮ್ಮೆಲ್ಲರನ್ನು ಬೆರಗುಗೊಳಿಸಿದೆ ಎಂದು ಟ್ವೀಟ್ನಲ್ಲಿ ಹೇಳಿದೆ. ಬೆಲುಗಾ ವಿಮಾನದ ಮೂಗು ತಿಮಿಂಗಿಲದ ಆಕಾರದಲ್ಲಿದೆ, ಇದು…
ಕೆಲವರಿಗೆ ಯಾವಾಗಲೂ ಏನೇ ತಿಂದರೂ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆ, ಮತ್ತೆ ಕೆಲವರಿಗೆ ಚಳಿಗಾಲದಲ್ಲಿ ಜೀರ್ಣಕ್ರಿಯೆಯಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳುವುದೂ ಇದೆ. ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಒಮ್ಮೆ ಜೀರ್ಣಕ್ರಿಯೆ ಸಮಸ್ಯೆ ಶುರುವಾದರೆ ಸರಿಯಾಗಲು ಹಲವು ದಿನಗಳೇ ಬೇಕು. ಆಗ ಆಹಾರದ ಆಯ್ಕೆಯಲ್ಲಿ ಎಚ್ಚರಿಕೆ ಅಗತ್ಯ. ಮತ್ತಷ್ಟು ಹೊಟ್ಟೆಯ ಸಮಸ್ಯೆಗೆ ಕಾರಣಾಗುವ ಆಹಾರಗಳನ್ನು ಸೇವನೆ ಗಂಭೀರ ಕಾಯಿಲೆಗೆ ದಾರಿ ಮಾಡಿಕೊಡಬಹುದು. ನಿಮ್ಮ ಜೀರ್ಣಕ್ರಿಯೆ ಸುಲಲಿತವಾಗಿ ಇರಿಸಿಕೊಳ್ಳಲು ಆಹಾರದಲ್ಲಿ ಕೆಲವೊಂದು ಸಲಹೆಗಳನ್ನು ಅನುಸರಿಸಿದರೆ ಒಳ್ಳೆಯದು. ಆಹಾರ ತಯಾರಿಸುವಾಗ ಚಿಟಿಕೆ ಅರಿಶಿನ ಬಳಕೆ ಕಡ್ಡಾಯವಿರಲಿ. ಇದರಲ್ಲಿ ಉರಿಯೂತವನ್ನು ನಿವಾರಿಸುವ ಗುಣವಿದೆ. ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಅರಿಶಿನ ಹೊಟ್ಟೆಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಚಿಯಾ ಬೀಜಗಳು ಅಥವಾ ಕಾಮಕಸ್ತೂರಿ ಕರುಳಿನ ಉರಿಯೂತವನ್ನು ನಿವಾರಿಸಿ ಚಯಾಪಚಯ ಕ್ರಿಯೆ ಸುಗಮಗೊಳಿಸುತ್ತದೆ. ಆಹಾರ ಜೀರ್ಣವಾಗಿ ಮಲವಿಸರ್ಜನೆ ಆಗುವಂತೆ ಮಾಡುವ ಮೂಲಕ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಹಣ್ಣುಗಳ ಸಲಾಡ್ ಜೊತೆ ನೆನೆಸಿದ ಚಿಯಾ ಬೀಜಗಳನ್ನು ತಿನ್ನುವುದು ಉತ್ತಮ. ಹೇರಳವಾದ ಫೈಬರ್…
ಶಹಾಪುರ ಹಾಗೂ ಸುರಪುರ ವಿಭಾಗದ ಅಬಕಾರಿ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ 4 ಕಡೆ ದಾಳಿ ನಡೆಸಿ ಗಾಂಜಾ ಬೆಳೆದಿದ್ದ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ. ವಿವಿಧ ಕಡೆ ಗಾಂಜಾ ಬೆಳೆದ ಜಮೀನುಗಳ ಮೇಲೆ ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಉಳ್ಳೇಸುಗುರದಲ್ಲಿ 3 ಕಡೆ, ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಒಂದು ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ 3 ಕೆಜಿ ಒಣ ಗಾಂಜಾ, 3 ಕೆಜಿ ಹಸಿ ಗಾಂಜಾ ಜಪ್ತಿ ಮಾಡಿ ಇಬ್ಬರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಟಾಟಾ ಕನ್ ಸ್ಯೂಮರ್ ರಮೇಶ್ ಚೌಹಾಣ್ ಅವರ ಬಿಸ್ಲೇರಿ ಇಂಟರ್ ನ್ಯಾಷನಲ್ ಕಂಪನಿಯನ್ನು ರೂ. 7 ಸಾವಿರ ಕೋಟಿಗೆ ವಶಪಡಿಸಿಕೊಳ್ಳಲಿದೆ ಎಂದು ‘ದಿ ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಚೌಹಾಣ್ ಅವರು ಕಳೆದ ಸ್ವಲ್ಪ ಸಮಯದಿಂದ ಅನಾರೋಗ್ಯಪೀಡಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಬಿಸ್ಲೇರಿ ಕಂಪನಿಯ ಈಗಿನ ಆಡಳಿತ ಇನ್ನೂ ಎರಡು ವರ್ಷಗಳ ಕಾಲ ಅದೇ ರೀತಿ ಮುಂದುವರೆಯಲಿದೆ. ಅವರ ಮಗಳಾದ ಜಯಂತಿ ಅವರಿಗೆ ಇವರ ವ್ಯಾಪಾರವನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಅಷ್ಟು ಆಸಕ್ತಿ ಇಲ್ಲದಿರುವ ಕಾರಣ, ಅವರಿಗೆ ಬಿಸ್ಲೇರಿ ಕಂಪನಿಯನ್ನು ಮುಂದಿನ ಹಂತಕ್ಕೆ ವಿಸ್ತರಿಸಲು ಸೂಕ್ತ ವಾರಸುದಾರರ ಕೊರತೆ ಇರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಭಾರತದ ಅತೀ ದೊಡ್ಡ ಪ್ಯಾಕೇಜ್ಡ್ ನೀರಿನ ಕಂಪನಿಯ ಮಾಲೀಕರಾಗಿರುವ ರಮೇಶ್ ಚೌಹಾಣ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿರುವಂತೆ ಟಾಟಾ ಸಮೂಹ, “ತಮ್ಮ ಸಂಸ್ಥೆಯು ತಮ್ಮ ವ್ಯಾಪಾರವನ್ನು ತಮಗಿಂತ ಉತ್ತಮವಾಗಿ ಕಾಪಾಡಿಕೊಳ್ಳುತ್ತದೆ,” ಎಂದು ನಂಬಿದ್ದಾರಂತೆ. “ನನಗೆ ಟಾಟಾ ಕಂಪನಿಯವರು ಮೌಲ್ಯಗಳು ಬಹಳ ಇಷ್ಟವಾಗುತ್ತದೆ. ಹಾಗಾಗಿ, ನಾನು ನನ್ನ ಕಂಪನಿಯನ್ನು…
ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಸಂಬಂಧ ಚುನಾವಣಾ ಕಾಂಗ್ರೆಸ್ ಪಕ್ಷದಿಂದ ಅಕ್ರಮ ಸಂಬಂಧ ತನಿಖೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕರ್ನಾಟ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ, ಒಂದೇ ಕಾರಿನಲ್ಲಿ ಕಾಂಗ್ರೆಸ್ ನಾಯಕರು ತೆರಳಿ ದೂರು ನೀಡಿದ್ದಾರೆ. ರಣದೀಪ್ ಸುರ್ಜೇವಾಲರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಕ್ತಾರ ಪ್ರಿಯಾಂಕ್ ಖರ್ಗೆ, ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ತೆರಳಿ ದೂರು ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಪಕ್ಷ ಸಲ್ಲಿಸಿರುವಂತ ದೂರಿನಲ್ಲಿ ಬೆಂಗಳೂರಿನ ಮತದಾರರ ಪಟ್ಟಿಯ ಪರಿಷ್ಕರಣೆ ಅಕ್ರಮದಲ್ಲಿ ರಾಜ್ಯ ಸರ್ಕಾರವೇ ನೇರವಾಗಿ ಭಾಗಿಯಾಗಿದೆ. ಅಕ್ರಮ ಎಸಗಿದಂತ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಗದಗ : ಅಮಾವಾಸ್ಯೆ ಪೂಜೆಯ ಹಿನ್ನೆಲೆಯಲ್ಲಿ ಕಾರು ತೊಳೆಯಲೆಂದು ಕಾಲುವೆ ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ. ಅರುಣ್ ಪಡೆಸೂರ (25) ಹಾಗೂ ಹನುಮಂತ ಮಜ್ಜಿಗೆ (30) ನಾಪತ್ತೆಯಾದ ಯುವಕರು. ಅವರು ಮಲಪ್ರಭಾ ನದಿಯ ಕಾಲುವೆಗೆ ಕಾರು ಸ್ವಚ್ಛಗೊಳಿಸಲು ತೆರಳಿದ್ದರು. ಇಬ್ಬರೂ ಯುವಕರು ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಾರು ತೊಳೆಯಲು ನೀರು ತರಲೆಂದು ಇಳಿದ ವೇಳೆ ಒಬ್ಬಾತ ಜಾರಿ ಬಿದ್ದು, ಇನ್ನೊಬ್ಬ ಆತನ ರಕ್ಷಣೆಗೆ ಹೋಗಿರುವ ಸಾಧ್ಯತೆ ಇದೆ. ಯುವಕರ ಪತ್ತೆಗಾಗಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರುನಾಡ ವಿಜಯ ಸೇನೆ ಸಂಘಟನೆಯ ತಾಲೂಕು ಘಟಕದ ತಾಲೂಕು ಅಧ್ಯಕ್ಷರಾದ ಎಚ್.ಎಸ್.ಸುರೇಶ್ ರವರ ನೇತೃತ್ವ ಅದ್ದೂರಿ ಕನ್ನಡ ರಾಜ್ಯೋತ್ಸವದ ಆಚರಣೆಗೆ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ನವೆಂಬರ್ 28ರಂದು ನಡೆಯುವ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಸಂಘಟನೆಯ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕಾರ್ಯಕ್ರಮದ ಜವಾಬ್ದಾರಿಗಳನ್ನು ಹಂಚಲಾಯಿತು. ಸಮಾರಂಭದಲ್ಲಿ ವೈದ್ಯರು.ಹಾಗೂ ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳನ್ನು ಸನ್ಮಾನಿಸುವುದು, ಉಚಿತ ಆರೋಗ್ಯ ಮೇಳ, ಆರ್ಕೆಸ್ಟ್ರಾ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೇರಿದಂತೆ ವಿವಿಧ ರೂಪುರೇಷೆಗಳನ್ನು ತಾಲೂಕು ಅಧ್ಯಕ್ಷ ಹೆಚ್.ಎಸ್. ಸುರೇಶ್ ನೇತೃತ್ವದಲ್ಲಿ ರೂಪಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ತಾಲೂಕು ಸಂಘಟನೆಯ ಅಧ್ಯಕ್ಷರು.ಹಾಗೂ ಪದಾಧಿಕಾರಿಗಳು ಹಾಜರಿದ್ದರು. ವರದಿ: ಸುರೇಶ್ ಬಾಬು, ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz