Author: admin

ಮೈಸೂರು: ಕಾಡಾನೆ ದಾಳಿಗೆ ದಸರಾ ಆನೆ ಗೋಪಾಲಸ್ವಾಮಿ ಮೃತಪಟ್ಟಿದ್ದು, ಮೇಯಲು ಬಿಟ್ಟದ್ದ ವೇಳೆ ಕೊಳುವಿಗೆ ಬಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲಸ್ವಾಮಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. 39 ವರ್ಷದ ಗೋಪಾಲಸ್ವಾಮಿ ಆನೆ,  14 ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. ನೇರಳಕುಪ್ಪೆ ಬಿ ಹಾಡಿ ಕ್ಯಾಂಪಿನಲ್ಲಿದ್ದ ವೇಳೆ ಈ ಘಟನೆ ನಡೆದಿದೆ.  ಪುಂಡಾಟ ನಡೆಸುತ್ತಿದ್ದ ಅಯ್ಯಪ್ಪ ಎಂಬ ಕಾಡಾನೆ ದಾಳಿಗೆ ಗೋಪಾಲಸ್ವಾಮಿ ಬಲಿಯಾಗಿದೆ. ಅಯ್ಯಪ್ಪ ಆನೆಗೆ ಕಾಲರ್ ಅಳವಡಿಸಲಾಗಿತ್ತು. ದಾಳಿಯಲ್ಲಿ ಗೋಪಾಲಸ್ವಾಮಿ ಕಾಲು, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ನಾಲ್ಕು ವೈದ್ಯರ ತಂಡದಿಂದ ಚಿಕಿತ್ಸೆ ಕೊಡಲಾಗಿತ್ತು. ಆದರೆ,  ಚಿಕಿತ್ಸೆ ಫಲಿಸದೆ ಮಧ್ಯಾಹ್ನ 1 ಗಂಟೆಯಲ್ಲಿ ಆನೆ ಸಾವನ್ನಪ್ಪಿದೆ. ಡಿಸಿಎಫ್ ಹರ್ಷಕುಮಾರ್ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ. ಶಾಂತ ಸ್ವಾಭಾವದ ಗೋಪಾಲಸ್ವಾಮಿ ಆನೆ. ಈ ಬಾರಿಯ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು. ಕಳೆದ ವರ್ಷ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಉದ್ಘಾಟನೆ ವೇಳೆ ಜನದಟ್ಟಣೆ, ಪಟಾಕಿ ಶಬ್ದದಿಂದ…

Read More

ಗುಜರಾತ್ ವಿಧಾನಸಭಾ ಚುನಾವಣೆ ದಿನಗಣನೆ ನಡೆದಿರುವ ಬೆನ್ನಲ್ಲೇ 27 ವರ್ಷದಿಂದ ಆಡಳಿತದಲ್ಲಿರುವ ಬಿಜೆಪಿಯಲ್ಲಿ ಬಂಡಾಯ ಸ್ಫೋಟಗೊಂಡಿದ್ದು, ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದ 12 ಮಂದಿಯನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಬಂಡಾಯ ಘೋಷಿಸಿದವರಲ್ಲಿ 6 ಬಾರಿಯ ಶಾಸಕ ಹಾಗೂ ಇಬ್ಬರು ಮಾಜಿ ಶಾಸಕರು ಸೇರಿದ್ದಾರೆ. ಇವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿದ್ದು, ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಗುಜರಾತ್ ನಲ್ಲಿ ಬಿಜೆಪಿಯಲ್ಲಿ ಬಂಡಾಯ ಘೋಷಿಸಿ ಚುನಾವಣೆಗೆ ಸ್ಪರ್ಧಿಸುತ್ತಿರುವವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಇವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಡಿಸೆಂಬರ್ 1ರಂದು ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ 7 ಮಂದಿ ಬಂಡಾಯ ಘೋಷಿಸಿದ್ದರು. ಇದೀಗ 12 ಮಂದಿ ಬಂಡಾಯ ಘೋಷಿಸಿದ್ದಾರೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಪ್ರತಿ ಮೂರು ಕ್ಷೇತ್ರಕ್ಕೆ ಒಬ್ಬರಂತೆ ಬಿಜೆಪಿಯಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇದೀಗ ಗುಜರಾತ್ ನಲ್ಲೂ ಬಂಡಾಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಡ್ರಗ್ಸ್ ದಾಸನಾಗಿದ್ದ ಯುವಕನೊಬ್ಬ ಪುನಶ್ಚೇತನ ಶಿಬಿರದಿಂದ ಮರಳಿದ ಬೆನ್ನಲ್ಲೇ ಹೆತ್ತವರನ್ನೂ ಬಿಡದೇ ತನ್ನ ಮನೆಯ ನಾಲ್ವರನ್ನು ಭೀಕರವಾಗಿ ಹತ್ಯೆಗೈದ ಘಟನೆ ದೆಹಲಿಯಲ್ಲಿ ನಡೆದಿದೆ. ಕೇಶವ್ (25) ಎಂಬಾತ ಫಾಮ್ ಹೌಸ್ ನ ಮನೆಯಲ್ಲಿ ತಂದೆ ದಿನೇಶ್ (50), ತಾಯಿ ದರ್ಶನ, ಸೋದರಿ ಊರ್ವಶಿ (18) ಮತ್ತು ಅಜ್ಜಿ ದೀವಾನಾ ದೇವಿ (75) ಹತ್ಯೆಗೈದಿದ್ದಾನೆ. ತಂದೆ-ತಾಯಿಯ ಶವ ಬಾತ್ ರೂಮ್ ನಲ್ಲಿ ಅಜ್ಜಿ ಮತ್ತು ಸೋದರಿಯ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದ್ದು, ಇಡೀ ಮನೆ ರಕ್ತದ ಕಲೆಗಳಿಂದ ತುಂಬಿದ್ದು, ಭಯಾನಕ ದೃಶ್ಯವಾಗಿತ್ತು. ಮಾರಕಾಸ್ತ್ರದಿಂದ ಎಲ್ಲರ ಕುತ್ತಿಗೆ ಸೀಳಿ ನಂತರ ಮನ ಬಂದಂತೆ ಇರಿದು ಕುಟುಂಬದ ಸದಸ್ಯರನ್ನೇ ಕೇಶವ್ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಮೀಪದಲ್ಲೇ ಇದ್ದ ಸಂಬಂಧಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ದೀಪಾವಳಿಯಲ್ಲಿ ಉದ್ಯೋಗ ಕಳೆದುಕೊಂಡಿದ್ದ ಕೇಶವ್, ಡ್ರಗ್ಸ್ ದಾಸನಾಗಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಪುನಶ್ಚೇತನ ಶಿಬಿರಕ್ಕೆ ಹೆತ್ತವರು ದಾಖಲಿಸಿದ್ದರು. ಆದರೆ ಅಲ್ಲಿಂದ ಬಂದ ಕೂಡಲೇ ಮನೆಯವರನ್ನೇ ಬಲಿಪಡೆದಿದ್ದಾನೆ.…

Read More

ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಸಮರ್ಥ ಹಾಗೂ ದಕ್ಷರು ಬರಬೇಕಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಚುನಾವಣಾ ಆಯೋಗದ ಮೇಲೆ ಮಹತ್ವದ ಹೊಣೆಯನ್ನು ಸಂವಿಧಾನ ನೀಡಿದೆ. ಇದನ್ನು ಕಾಪಾಡಲು ಚುನಾವಣಾ ಆಯೋಗಕ್ಕೆ ಸಮರ್ಥ ಹಾಗೂ ದಕ್ಷ ವ್ಯಕ್ತಿಯನ್ನು ನೇಮಿಸಬೇಕಿದೆ ಎಂದರು. ದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ಎಚ್ಚರಿಕೆ ಗಂಟೆ ಬಾರಿಸುತ್ತಿದೆ. ಆದ್ದರಿಂದ 1990-1996ರ ನಡುವೆ ಚುನಾವಣಾ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂಡ ಟಿಎನ್ ಶೇಷನ್ ಮಾದರಿಯ ವ್ಯಕ್ತಿ ನೇಮಕ ಮಾಡುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದಲ್ಲಿ ನ್ಯಾಯಮೂರ್ತಿ ಅಜಯ್ ರಸ್ತೋಗಿ, ನ್ಯಾಯಮೂರ್ತಿ ಅನಿರುದ್ಧ ಬೋಸ್, ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಸಿಟಿ ರವಿಕುಮಾರ್ ಅವರನ್ನೊಳಗೊಂಡ ಐವರು ಸದಸ್ಯರ ಸಂವಿಧಾನ ಪೀಠ ಬುಧವಾರ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಹಲವಾರು ಮಂದಿ ಬಂದು ಹೋಗಿದ್ದಾರೆ. ಆದರೆ ಟಿಎನ್ ಶೇಷನ್ ಅವರಂತಹವರು ಒಂದು ಬಾರಿ ಮಾತ್ರ ಬರುತ್ತಾರೆ. ಅವರನ್ನು ಉದಾಹರಣೆಯಾಗಿ ಕೊಡುತ್ತಿಲ್ಲ. ಆದರೆ…

Read More

ಮಕ್ಕಳ ಬಿಸಿಯೂಟದಲ್ಲಿ ಅಪಾರ ಪ್ರಮಾಣದ ಹುಳುಗಳು ಪತ್ತೆಯಾಗಿದ್ದು, ಆಹಾರವನ್ನು ಚೆಲ್ಲಿ ಶಾಲಾ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮವು ಬಹಳ ವರ್ಷಗಳಿಂದ ಚಾಲ್ತಿಯಲ್ಲಿದ್ದು, ಮಕ್ಕಳಿಗೆ ಉತ್ತಮ ಆಹಾರ ಒದಗಿಸುವುದು ಸರ್ಕಾರ ಹಾಗೂ ಶಾಲಾ ಆಡಳಿತದ ಕರ್ತವ್ಯವಾಗಿದೆ. ಆದರೆ ಶಾಲಾ ಸಿಬ್ಬಂದಿಯ ಬೇಜಾವಾಬ್ದಾರಿಯಿಂದ ಬಿಸಿಯೂಟದಲ್ಲಿ ಹುಳು ಪತ್ತೆಯಾಗಿದೆ. ಅಡುಗೆ ಸಹಾಯಕರು ಬಿಸಿಯೂಟ ಮಾಡುವ ಮುನ್ನ ಅಕ್ಕಿ ಕ್ಲಿನ್ ಮಾಡದೇ ಅಡುಗೆ ತಯಾರಿಸಿದ್ದು, ಕೇವಲ ಅಕ್ಕಿ ಅಷ್ಟೇ ಅಲ್ಲ, ತೊಗರಿ ಬೇಳೆಯಲ್ಲಿ ಹುಳುಗಳು ಪತ್ತೆಯಾಗಿವೆ. ಹುಳು ತುಂಬಿದ ಅನ್ನವನ್ನ ವಿದ್ಯಾರ್ಥಿಗಳು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹಳ ದಿನಗಳಿಂದ ಶೇಖರಿಸಿಟ್ಟಿದ್ದ ಅಕ್ಕಿಯಿಂದ ಬಿಸಿಯೂಟ ತಯಾರು ಮಾಡಿರುವುದಕ್ಕೆ ಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳ ವಿರುದ್ಧ ಪೋಷಕರು ಕ್ರೋಧಗೊಂಡರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಭೂಒತ್ತುವರಿದಾರರ ವಿರುದ್ಧದ ದಾಳಿಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ಸುಮಾರು 30 ಕೋಟಿ ರೂಪಾಯಿ ಮೌಲ್ಯದ 22 ಗುಂಟೆ ಜಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಜೆಪಿ ನಗರ 9 ನೇ ಹಂತದ 1 ನೇ ಬ್ಲಾಕ್ ನಲ್ಲಿನ ಆಲಹಳ್ಳಿ ಸರ್ವೆ ಸಂಖ್ಯೆ 4/1 ರಲ್ಲಿ 22 ಗುಂಟೆ ಜಾಗ ಬಿಡಿಎಗೆ ಸೇರಿದ್ದಾಗಿತ್ತು. ಆದರೆ, ಕೆಲವು ಅತಿಕ್ರಮಣದಾರರು ಸದರಿ ಜಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ತಾತ್ಕಾಲಿಕ್ ಶೆಡ್ ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಇತ್ತೀಚೆಗೆ ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಅವರು ಸದರಿ ಜಾಗ ಸೇರಿದಂತೆ ಇನ್ನಿತರೆ ಒತ್ತುವರಿ ಮತ್ತು ಬಿಡಿಎ ಜಾಗವನ್ನು ಕಬ್ಜ ಮಾಡಿಕೊಂಡಿರುವ ಪ್ರದೇಶಗಳಿಗೆ ಭೇಟಿ ನೀಡಿ, ಕೂಡಲೇ ಇಂತಹ ಜಾಗಗಳನ್ನು ಮರುವಶಕ್ಕೆ ಪಡೆದುಕೊಳ್ಳಬೇಕೆಂದು ಬಿಡಿಎ ಅಧಿಕಾರಿಗಳು ಮತ್ತು ಎಂಜಿನಿಯರ್ ಗಳಿಗೆ ಸೂಚನೆ ನೀಡಿದ್ದರು. ಅದರನ್ವಯ ಮಂಗಳವಾರ ಬಿಡಿಎ ಆಯುಕ್ತರ ಆದೇಶ ಪಡೆದ ಬಿಡಿಎ ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ ಮತ್ತು ಪೊಲೀಸ್ ಅಧಿಕಾರಿಗಳಾದ ರವಿಕುಮಾರ್, ಶ್ರೀನಿವಾಸ್…

Read More

ಬೆಂಗಳೂರು; ಪೊಲೀಸರ ಮೇಲೆಯೇ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ನೆಲಮಂಗಲದ ದಾನೋಜಿಪಾಳ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ನೆಲಮಂಗಲದ ದರೋಡೆಕೋರ ಯೋಗಾನಂದ ಅಲಿಯಾಸ್ ನೈಟ್​ಶಿಫ್ಟ್​ ಯೋಗಿ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರು ಮಾಡುವ ವೇಳೆ ಆರೋಪಿಯ ಯೋಗಾನಂದ ಪೊಲೀಸರ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಲು ಮುಂದಾಗಿದ್ಧ. ಈ ವೇಳೆ ಯೋಗಾನಂದ ಕಾಲಿಗೆ ಪೊಲೀಸರು ಗುಂಡು ಹಾರಿಸಿದರು ಈ ಸಮಯದಲ್ಲಿ ಕಾನ್ಸ್‌ ಟೆಬಲ್ ಹನುಮಂತ ಹಿಪ್ಪರಗಿ ಅವರ ಕೈಗಳಿಗೆ ಗಾಯವಾಗಿದೆ. ನೆಲಮಂಗಲ ಟೌನ್ ಪೊಲೀಸ್ ಇನ್ಸ್ ಪೆಕ್ಟರ್ ಶಶಿಧರ್‌ ರಿಂದ ಗುಂಡು ಹಾರಿಸಿ ಬಂಧಿಸಿದರು. ಆರೋಪಿಯ ಮೇಲೆ 18 ಪ್ರಕರಣಗಳಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ತಾರಕಕ್ಕೇರಿದೆ. ಸ್ವಾತಂತ್ರ್ಯ ನಂತರ ಶುರುವಾದ ಬೆಳಗಾವಿ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆ ವಿಪಕ್ಷನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದು ಸುಪ್ರೀಂ ಕೋರ್ಟ್ ವಿಚಾರಣೆಯ ಬಳಿಕ ಶೀಘ್ರ ಸಭೆ ನಿಗದಿಗೆ ಚಿಂತಿಸಿದ್ದಾರೆ. ಬೊಮ್ಮಾಯಿ ವಿಧಾನಸಭೆಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಪರಿಷತ್ ವಿಪಕ್ಷನಾಯಕ ಹರಿಪ್ರಸಾದ್‌ಗೆ ಬರೆದ ಪತ್ರದಲ್ಲಿ ಸರ್ಕಾರ ತೆಗೆದುಕೊಂಡ‌ ನಿಲುವು, ವಕೀಲರ ತಂಡ ರಚನೆ ಹಾಗೂ ಕೈಗೊಂಡ ಕ್ರಮ ಕುರಿತು ಪತ್ರದ ಮೂಲಕ ಲಿಖಿತ ಮಾಹಿತಿ ನೀಡಿದ್ದಾರೆ. ಸತತ 18 ವರ್ಷಗಳ ಬಳಿಕ ಮತ್ತೆ ಕಾನೂನು ಸಮರ ಶುರುವಾಗಿದೆ. 1956ರಿಂದಲೂ ಮಹಾರಾಷ್ಟ್ರ ಸರ್ಕಾರ ನಾಡದ್ರೋಹಿ ಎಂಇಎಸ್​ಗೆ ಪ್ರಚೋದನೆ ನೀಡುತ್ತಲೇ ಬಂದಿದೆ. ಬೆಳಗಾವಿ ಸೇರಿ ಕರ್ನಾಟಕದ 4 ಜಿಲ್ಲೆಯ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ಅಂತಿಮ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಕರ್ನಾಟಕ…

Read More

ಬೆಂಗಳೂರು : ಇನ್ಮುಂದೆ 9 ಮತ್ತು 10ನೇ ತರಗತಿಗಳನ್ನು ಪ್ರಾಥಮಿಕ ಶಿಕ್ಷಣದ ಭಾಗ ಎಂದು ಕರೆಯಲಾಗುತ್ತದೆ.ಈ ತರಗತಿಗಳು ಇನ್ನು ಮುಂದೆ ಪ್ರೌಢಶಿಕ್ಷಣದ ತರಗತಿಗಳಲ್ಲ. ಪ್ರಾಥಮಿಕ ಶಿಕ್ಷಣದ ಭಾಗವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಜ್ಞಾಪನಾ ಪತ್ರ ಹೊರಡಿಸಿದೆ. ಈಗಾಗಲೇ ಒಂದರಿಂದ ರಿಂದ 8 ಅಥವಾ 6 ರಿಂದ 8 ನೇ ತರಗತಿಗಳು ನಡೆಯುತ್ತಿರುವ ಶಾಲಾ ಆವರಣದಲ್ಲಿ 9 ಮತ್ತು 10ನೇ ತರಗತಿಯನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ಪ್ರಾಥಮಿಕ ಶಿಕ್ಷಣದ ಎಂದೇ ಪರಿಗಣಿಸಲಾಗುತ್ತದೆ. ಅದರ ಅನ್ವಯವೇ ನೋಂದಣಿ ನಿಯಮಗಳನ್ನು ಅನುಸರಿಸಲಾಗುತ್ತದೆ. ಪ್ರಾಥಮಿಕ ಶಾಲೆಗಳಿರುವಲ್ಲಿಯೇ 9 ಮತ್ತು10 ನೇ ತರಗತಿಗಳನ್ನು ನಡೆಸುವುದಿದ್ದರೇ ಈ ತರಗತಿಗಳನ್ನು ಹೊಸ ಶಾಲೆ ಎಂದು ಪರಿಗಣಿಸಬಾರದು ಎಂದು ಇಲಾಖೆಯು ಸ್ಪಷ್ಟವಾಗಿ ಸೂಚಿಸಿದ್ದು, ಒಂದು ವೇಳೆ ಬೇರೆ ಆವರಣದಲ್ಲಿ 9 ಮತ್ತು 10 ನೇ ತರಗತಿಗಳನ್ನು ಪ್ರತ್ಯೇಕವಾಗಿ ಆರಂಭಿಸಿದ್ದಲ್ಲಿ ಮಾತ್ರ ಅಂತಹ ಶಾಲೆಯನ್ನು ಪ್ರೌಢ ಶಾಲೆಯೆಂದು ಪರಿಗಣಿಸಬೇಕು ಎಂದು ತಿಳಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದ್ದು ಈ ಮಧ್ಯೆ ಮತ್ತೆ 3 ತಿಂಗಳು ಕಾಲಾವಕಾಶ ಕೇಳಿದೆ. ಈ ಸಂಬಂಧ ಹೈಕೋರ್ಟ್ ಗೆ ನಗರಾಭಿವೃದ್ಧಿ ಇಲಾಖೆ ಅರ್ಜಿ ಸಲ್ಲಿಸಿದ್ದು ಬಿಬಿಎಂಪಿ ಚುನಾವಣೆ ನಡೆಸಲು 3 ತಿಂಗಳು ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ. ನ್ಯಾ. ಭಕ್ತವತ್ಸಲ ಸಮಿತಿಯಿಂದ ಮಾಹಿತಿ ಕೇಳಲಾಗಿದೆ. ಹಿಂದುಳಿದ ವರ್ಗಕ್ಕೆ ಮೀಸಲಾತಿ ಸಂಬಂಧ, ರಾಜಕೀಯ ಹಿಂದುಳಿದಿರುವಿಕೆ ಬಗ್ಗೆಯೋ ಮಾಹಿತಿ ಕೇಳಲಾಗಿದೆ . ಮಾಹಿತಿ ನೀಡಲು ಭಕ್ತ ವತ್ಸಲ ಸಮಿತಿ ಕಾಲಾವಕಾಶ ಕೇಳಿದೆ. ಹೀಗಾಗಿ 3 ತಿಂಗಳು ಸಮಯ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮನವಿ ಮಾಡಿದೆ ಎನ್ನಲಾಗಿದೆ. ನವೆಂಬರ್ 30ರೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಲು ಹೈಕೋರ್ಟ್ ಆದೇಶಿಸಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More