Subscribe to Updates
Get the latest creative news from FooBar about art, design and business.
- ಚಿರತೆಗಳ ಕಾದಾಟ: ಎರಡು ವರ್ಷದ ಗಂಡು ಚಿರತೆ ಸಾವು
- ತುಮಕೂರು| ಪತ್ರಕರ್ತರ ಸಂಘದ ಚುನಾವಣೆ: ಕೊರಟಗೆರೆಯ ಮೂವರು ಪತ್ರಕರ್ತರ ಆಯ್ಕೆ
- ಸರಗೂರು: ಕಾಡಾನೆ ದಾಳಿಯಿಂದ ಲಕ್ಷಾಂತರ ರೂ. ಬೆಳೆ ನಾಶ: ರೈತರಿಂದ ಆಕ್ರೋಶ
- ಬೀದರ್ | 96,510 ರೈತರ ಖಾತೆಗೆ ₹69 ಕೋಟಿ ಬೆಳೆ ಪರಿಹಾರದ ಹಣ ಜಮೆ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
- ನಂದಿಹಳ್ಳಿ ಮಲ್ಲಸಂದ್ರ ಬೈಪಾಸ್ ರಸ್ತೆಗೆ ವಿರೋಧ: ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳು ವಾಪಸ್
- ಕುಣಿಗಲ್ | ನರೇಗಾ ಯೋಜನೆ ಬಿಲ್ ಪಾವತಿಗೆ ಒತ್ತಾಯಿಸಿ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ
- ಅಂತರ್ಜಲ ಹೆಚ್ಚಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ: ಶಾಸಕ ಟಿ.ಬಿ.ಜಯಚಂದ್ರ
- ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ಕಾನೂನಾತ್ಮಕವಾಗಿರಬೇಕು: ಶಾಸಕ ಸಿ.ಬಿ.ಸುರೇಶ್ ಬಾಬು
Author: admin
ನವದೆಹಲಿ: ಡಿಸೆಂಬರ್ 7ರಿಂದ ಡಿಸೆಂಬರ್ 29 ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. 2022ರ ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 7ರಿಂದ ಪ್ರಾರಂಭವಾಗಿ ಡಿಸೆಂಬರ್ 29 ರವರೆಗೆ ನಡೆಯಲಿದೆ. ಒಟ್ಟು 23 ದಿನಗಳ ಅವಧಿಯಲ್ಲಿ 17 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ವಿಷಯಗಳು ಮತ್ತು ರಚನಾತ್ಮಕ ಚರ್ಚೆಗಾಗಿ ಎದುರು ನೋಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ. ರಾಜ್ಯಸಭೆಯ ಅಧ್ಯಕ್ಷರಾಗಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಅಧಿವೇಶನ ಇದಾಗಿದೆ. ಮುಂಬರುವ ಅಧಿವೇಶನದಲ್ಲಿ ಅಂಗೀಕರಿಸಬೇಕಾದ ಮಸೂದೆಗಳ ಪಟ್ಟಿಯನ್ನು ಸರ್ಕಾರ ಸಿದ್ಧ ಪಡಿಸುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ : ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಮಕ್ಕಳು ಹಾಗೂ ತಾಯಿ ಶವ ಪತ್ತೆಯಾಗಿದೆ. ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೊರ ವಲಯದಲ್ಲಿರುವ ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಮಕ್ಕಳು ಹಾಗೂ ತಾಯಿ ಶವ ಪತ್ತೆಯಾಗಿದೆ. ತನುಜಾ ಪರಸಪ್ಪ ಗೋಡಿ(32), ಸುದೀಪ್(4), ರಾಧಿಕಾ(3) ಶವವಾಗಿ ಸಿಕ್ಕರು. ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ನಿವಾಸಿ ತನುಜಾ ಮಕ್ಕಳನ್ನ ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಸವದತ್ತಿ ತಾಲೂಕು ಆಸ್ಪತ್ರೆಗೆ ಶವಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಬೆಂಗಳೂರು: ಸರ್ಕಾರಿ ನೌಕರಿಗೆ 7ನೇ ವೇತನ ಆಯೋಗ ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದನೆ ನೀಡಿದ್ದಾರೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರನ್ನೊಳಗೊಂಡ 7ನೇ ವೇತನ ಆಯೋಗ ರಚನೆಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಆಯೋಗದಲ್ಲಿ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ. ರಾಮಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ. ವನಹಳ್ಳಿ ಹಾಗೂ ರಾಜ್ಯ ಮೂಲ ಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ 7 ನೇ ವೇತನ ಆಯೋಗ ರಚನೆಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಬೆಂಗಳೂರು: ನಗರದ ನ್ಯೂ ಹೊರೈಜನ್ ಕಾಲೇಜಿನ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದಾರೆ. ಇಂಜಿನಿಯರಿಂಗ್ ಮೊದಲ ವರ್ಷದ ಆರ್ಯನ್, ದಿನಕರ್, ರಿಯಾ ಪಾಕ್ ಪರ ಘೋಷಣೆ ಕೂಗಿದ್ದಾರೆ. ಈ ವೇಳೆ ಇತರೆ ವಿದ್ಯಾರ್ಥಿಗಳು ಮೂವರನ್ನು ಥಳಿಸಲು ಮುಂದಾಗಿದ್ದಾರೆ. ಕೂಡಲೇ ವಿದ್ಯಾರ್ಥಿಗಳು ಉಳಿದ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ಮಾರತ್‌ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಾಷೆ ಮಾಡಲು ಹೀಗೆ ಮಾಡಿದ್ದೇವೆ ಎಂದಿದ್ದಾರೆ. ಆದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದಾರೆ. ಇನ್ನು ಕಾಲೇಜು ಆಡಳಿತ ಮಂಡಳಿ ಮೂವರನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಸಮಾಜ ಪಾರ್ಟಿ(BSP)ಯ ಜಿಲ್ಲಾಧ್ಯಕ್ಷರಾದ ದಾಸಪ್ಪ ಎಡಪದವು ಅವರು ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಜಾನೆ ವೇಳೆಗೆ ಎದೆನೋವಿನಿಂದ ಅಸ್ವಸ್ಥರಾದ ದಾಸಪ್ಪ ಅವರನ್ನು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ದಾಸಪ್ಪ ಎಡಪದವು ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಚಳುವಳಿಯ ಪ್ರಭಾವಿ ನಾಯಕರಾಗಿದ್ದು, ಜಿಲ್ಲೆಯ ದಲಿತ ಪರ ಹೋರಾಟ, ಸಂಘಟನೆಗಳ ಪೋಷಕರೂ ಆಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಸುಮಾರು ಒಂದು ದಶಕದ ಹಿಂದೆ ಬರೋಬ್ಬರಿ ಅಂದಾಜು ರೂ.೪೫೦ ಕೋಟಿ ವೆಚ್ಚದಲ್ಲಿ ಅಂದಿನ ಸರ್ಕಾರದ ವತಿಯಿಂದ ನಿರ್ಮಾಣ ಮಾಡಿದಂತಹ ಬೆಳಗಾವಿಯ ಸುವರ್ಣ ವಿಧಾನ ಸೌಧ ಸರ್ಕಾರದ ಬೊಕ್ಕಸದ ಪಾಲಿಗೆ ಒಂದು ಬಿಳಿ ಆನೆ ಆದಂತಾಗಿದೆ. ಏಕೆಂದರೆ ಅಂದಿನಿಂದ ಈವರೆಗೆ ಬಂದು ಹೋಗಿರುವಂತಹ ವಿವಿಧ ಸರ್ಕಾರಗಳು ಸಚಿವಾಲಯ ಮಟ್ಟದ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸುವಲ್ಲಿ ವಿಫಲವಾಗಿವೆ. ರಾಜಕಾರಣಿಗಳ ಆರೋಪವೇನೆಂದರೆ ಇದೊಂದು ಕೇವಲ ಗೋಡೌನ್ ರೀತಿಯಿರುವ ಕಟ್ಟವಾಗಿದ್ದು, ಸಚಿವಾಲಯ ಮಟ್ಟದ ಕಚೇರಿಗಳನ್ನು ಸ್ಥಾಪಿಸುವ ಯಾವುದೇ ಸೂಕ್ತ ಸೌಲಭ್ಯಗಳಿಲ್ಲವಂತೆ. ಜೊತೆಗೆ, ಹಿರಿಯ ಅಧಿಕಾರಿಗಳು ಬೆಳಗಾವಿಗೆ ಸ್ಥಳಂತಾರವಾಗಲು ನಿರಾಕರಿಸುತ್ತಿರುವರಂತೆ. ಅದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಅಧಿಕಾರಿಗಳ ಆರೋಪವೇನೆಂದರೆ, ರಾಜಕಾರಣಿಗಳಿಗೆ ಅಧಿಕಾರಿಗಳು ಬೆಂಗಳೂರಿನಲ್ಲೇ ಇರಬೇಕು ಎನ್ನುವುದು ಮತ್ತು ವಿವಿಧ ಸಚಿವಾಲಯಗಳ ಮಟ್ಟದ ಕಚೇರಿಗಳನ್ನು ಅಲ್ಲಿಗೆ ಸ್ಥಳಂತಾರಿಸುವಲ್ಲಿ ಇರುವ ರಾಜಕೀಯ ಇಚ್ಛಾಶಕ್ತಿಯ ಕೊರತೆಗಳೇ ಸುವರ್ಣ ವಿಧಾನ ಸೌಧದ ಸಂಪೂರ್ಣ ಬಳಕೆಗೆ ಎದುರಾಗಿರುವ ಮುಖ್ಯ ಕಾರಣಗಳಂತೆ. ರಾಜ್ಯ ಸರ್ಕಾರ ಸುವರ್ಣ ವಿಧಾನ ಸೌಧದ ನಿರ್ವಹಣೆಗಾಗಿಯೇ ವಾರ್ಷಿಕ ಬರೋಬ್ಬರಿ ರೂ.೫ ಕೋಟಿ ವೆಚ್ಚ ಮಾಡುತ್ತಿದೆ.…
ನಾಪತ್ತೆಯಾಗಿದ್ದ ಟ್ರಾನ್ಸ್‌ಪೋರ್ಟ್ ಉದ್ಯಮಿ ಬಾಲಸುಬ್ರಮಣ್ಯನ್ ಮೃತದೇಹ ಬೆಂಗಳೂರಿನ ಜೆ.ಪಿ ನಗರ 6ನೇ ಹಂತದ ಸಮೀಪ ಪತ್ತೆಯಾಗಿತ್ತು. ಪುಟ್ಟೇನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು ಸಿಡಿಆರ್ ಪರಿಶೀಲಿಸಿ ಬಾಲಸುಬ್ರಮಣ್ಯನ್ ದೂರವಾಣಿ ಕರೆಗಳನ್ನು ವಿವರ ನೋಡಿದಾಗ ಮಹಿಳೆಯೊಬ್ಬಳ ಜೊತೆ ನಿರಂತರ ಸಂಪರ್ಕದಲ್ಲಿರುವ ವಿಚಾರ ತಿಳಿದುಬಂದಿದೆ. ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಕೊನೆಯ ಲೊಕೇಷನ್ ತೋರಿಸುತ್ತಿದೆ. ಹೀಗಾಗಿ ಬಾಲಸುಬ್ರಮಣ್ಯನ್ ಸಂಪರ್ಕದಲ್ಲಿದ್ದ ಆ ಮಹಿಳೆ ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣ್ಯನ್ ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದರು. ನವೆಂಬರ್ 17ರಂದು ಬಾಲ ಸುಬ್ರಮಣಿಯನ್ ಮೃತ ದೇಹ ಪತ್ತೆಯಾಗಿದ್ದು,ಹಲವು ಅನುಮಾನಗಳು ಮೂಡಿತ್ತು. ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್ಗೆ ಕರೆದುಕೊಂಡು ಹೋಗಿದ್ದ ಬಾಲ ಸುಬ್ರಮಣಿಯನ್, ಸಂಜೆ 04-55ಕ್ಕೆ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸವಿದೆ ಎಂದು ತಿಳಿಸಿದ್ದರು. ಅನಂತರ ಕರೆ ಮಾಡಿದರೆ ಅವರ ನಂಬರ್ ಸ್ವಿಚ್ಡ್ ಆಫ್ ಬಂದಿದೆ. ಮಗ ತಕ್ಷಣವೇ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ತೆರಳಿ…
ನವದೆಹಲಿ : ರಾಜೀವ್ ಗಾಂಧಿ ಹಂತಕರ ಆರು ಜನರ ಬಿಡುಗಡೆ ಮಾಡುವಂತೆ ನವೆಂಬರ್ 11ರಂದು ಹೊರಡಿಸಿದ್ದ ಆದೇಶವನ್ನ ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳಿಗೆ ವಿನಾಯಿತಿ ನೀಡುವ ನವೆಂಬರ್ 11ರ ಆದೇಶವನ್ನ ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಈ ಪ್ರಕರಣವನ್ನ ವಾದಿಸಲು ತನಗೆ ಅವಕಾಶ ಸಿಗಲಿಲ್ಲ ಮತ್ತು ಸುಪ್ರೀಂ ಕೋರ್ಟ್ ಆದೇಶವು ಕಾನೂನಾತ್ಮಕವಾಗಿ ದೋಷಪೂರಿತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಇತ್ತಿಚಿಗೆ ಆರು ಜನ ರಾಜೀವ್ ಗಾಂಧಿ ಹಂತಕರು ಜೈಲಿನಿಂದ ಬಿಡುಗಡೆಯಾಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಮುಂಬೈ : ಬಾಳಾಸಾಹೇಬ್ ಅವರು ಏಕೈಕ ಹಿಂದೂ ಹೃದಯ ಸಾಮ್ರಾಟ್ ಎಂದು ಹೇಳಿದ್ದು, ಪಕ್ಷದ ಸಂಸ್ಥಾಪಕರಿಗೆ ಭಾರತ ರತ್ನ ನೀಡುವಂತೆ ಶಿವಸೇನೆ ಸಂಸದ ಸಂಜಯ್ ರಾವತ್ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ನಿಜವಾಗಿಯೂ ಹಿಂದುತ್ವದ ಬಗ್ಗೆ ಗೌರವವಿದ್ದರೆ, ವೀರ್ ಸಾವರ್ಕರ್ ಜೊತೆಗೆ ಬಾಳಾಸಾಹೇಬ್ ಠಾಕ್ರೆಯವರಿಗೂ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಬೇಕು. ಅವರು ಅದನ್ನು ಏಕೆ ಘೋಷಿಸುತ್ತಿಲ್ಲ.. ಕಳೆದ ಹದಿನೈದು ವರ್ಷಗಳಿಂದ ನಾವು ಈ ಬೇಡಿಕೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ವಾಸ್ತವವಾಗಿ, ಭಾರತ ರತ್ನ ಪ್ರಶಸ್ತಿಯಿಂದ ವೀರ್ ಸಾವರ್ಕರ್ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಸ್ಥಾನಮಾನವು ಹೆಚ್ಚಾಗುವುದಿಲ್ಲ. ಆದರೆ ಅಂತಹ ಮಹಾನ್ ನಾಯಕರಿಗೆ ನೀಡಿದ ನಂತರ ಪ್ರಶಸ್ತಿಯ ಮಹತ್ವವು ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಕೆಲವು ಜನರ ರಾಜಕೀಯ ಲಾಭಕ್ಕಾಗಿ ಹಲವು ರಾಜ್ಯ ನಾಯಕರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ. ವೀರ್ ಸಾವರ್ಕರ್ ಬಗ್ಗೆ ನಕಲಿ ಪ್ರೀತಿ ಮತ್ತು ಗೌರವವನ್ನು ಪ್ರದರ್ಶಿಸುವುದನ್ನು ನಿಲ್ಲಿಸಿ, ಸಾಧ್ಯವಾದಷ್ಟು…
ಶಿರಸಿ: ಅತಿಕ್ರಮಣವಾಗಿರುವ ಮನೆ ಖಾಲಿ ಮಾಡಿಸಲು ಹೋದ ಸಂದರ್ಭದಲ್ಲಿ ಅರಣ್ಯ ಅಧಿಕಾರಿಯ ಕೈ ಬೆರಳು ಕತ್ತರಿಸಿದ ಘಟನೆ ಸಿದ್ದಾಪುರದ ಗವಿನಗುಡ್ಡದಲ್ಲಿ ನಡೆದಿದೆ. ವಿ ಟಿ ನಾಯ್ಕ ಗಾಯಗೊಂಡ ಅರಣ್ಯ ಇಲಾಖೆ ಅಧಿಕಾರಿ. ಮಹಾಬಲೇಶ್ವರ ಚಂದು ಮರಾಠಿ ಹಲ್ಲೆ ನಡೆಸಿದ ಆರೋಪಿ. ಇವರು ಹೊಸದಾಗಿ ನಿರ್ಮಾಣ ಮಾಡಿಕೊಂಡಿದ್ದ ಮನೆಯನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರು. ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಈ ವೇಳೆ ಅರಣ್ಯ ಅಧಿಕಾರಿಯ ಕೈ ಬೆರಳನ್ನು ಮಹಾಬಲೇಶ್ವರ ಕತ್ತರಿಸಿದ್ದಾನೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz