Subscribe to Updates
Get the latest creative news from FooBar about art, design and business.
- ಚಿರತೆಗಳ ಕಾದಾಟ: ಎರಡು ವರ್ಷದ ಗಂಡು ಚಿರತೆ ಸಾವು
- ತುಮಕೂರು| ಪತ್ರಕರ್ತರ ಸಂಘದ ಚುನಾವಣೆ: ಕೊರಟಗೆರೆಯ ಮೂವರು ಪತ್ರಕರ್ತರ ಆಯ್ಕೆ
- ಸರಗೂರು: ಕಾಡಾನೆ ದಾಳಿಯಿಂದ ಲಕ್ಷಾಂತರ ರೂ. ಬೆಳೆ ನಾಶ: ರೈತರಿಂದ ಆಕ್ರೋಶ
- ಬೀದರ್ | 96,510 ರೈತರ ಖಾತೆಗೆ ₹69 ಕೋಟಿ ಬೆಳೆ ಪರಿಹಾರದ ಹಣ ಜಮೆ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
- ನಂದಿಹಳ್ಳಿ ಮಲ್ಲಸಂದ್ರ ಬೈಪಾಸ್ ರಸ್ತೆಗೆ ವಿರೋಧ: ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳು ವಾಪಸ್
- ಕುಣಿಗಲ್ | ನರೇಗಾ ಯೋಜನೆ ಬಿಲ್ ಪಾವತಿಗೆ ಒತ್ತಾಯಿಸಿ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ
- ಅಂತರ್ಜಲ ಹೆಚ್ಚಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ: ಶಾಸಕ ಟಿ.ಬಿ.ಜಯಚಂದ್ರ
- ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ಕಾನೂನಾತ್ಮಕವಾಗಿರಬೇಕು: ಶಾಸಕ ಸಿ.ಬಿ.ಸುರೇಶ್ ಬಾಬು
Author: admin
ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಕಚೇರಿಯ 10ನೇ ಮಹಡಿಯಿಂದ ಅಧಿಕಾರಿಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದೆ. ಲೋಧಿ ಕಾಲೋನಿಯ ರಾ ಕಚೇರಿಯ ಕಟ್ಟಡದಿಂದ ಹಾರಿ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿ ಖಿನ್ನತೆಯಿಂದ ನರಳುತ್ತಿದ್ದರು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ತನಿಖೆ ಆರಂಭಗೊಂಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ತನ್ನ ಸಿಬ್ಬಂದಿಗೆ ಅಪಘಾತ ವಿಮಾ ಯೋಜನೆ ಸೌಲಭ್ಯಯನ್ನು 1 ಕೋಟಿ ರೂ.ಗೆ ಏರಿಸಿದೆ. ಕೆಎಸ್ಆರ್ಟಿಸಿ ಸಿಬ್ಬಂದಿಗೆ 50 ಲಕ್ಷ ರೂ ವಿಮೆ ನೀಡಲಾಗುತ್ತಿತ್ತು. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ರವರಿಂದ ಮಾಡಿಕೊಂಡ ಒಡಂಬಡಿಕೆಯ 50 ಲಕ್ಷ ರೂ. ಸೇರಿ ಒಟ್ಟು ರೂ.1 ಕೋಟಿ ಅಪಘಾತ ವಿಮೆ ನೀಡುವುದಾಗಿ ಕೆಎಸ್ಆರ್ಟಿಸಿ ಘೋಷಿಸಿದೆ. ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ರೂ. 50 ಲಕ್ಷಗಳ ಪರಿಹಾರ ನೀಡುವ ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತಂದಿರುತ್ತದೆ. ಸೋಮವಾರ ನಿಗಮವು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ರವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಂತೆ ಸಿಬ್ಬಂದಿಗಳಿಗೆ…
ಹೃದಯಾಘಾತದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಕೃಷ್ಣ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಹೃದಯ ಸ್ತಂಭನದ ನಂತರ ಅವರಿಗೆ ನುರಿತ ವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದ್ದರು. ಮಂಗಳವಾರ ಬೆಳಗ್ಗೆ ನಟ ಇಹಲೋಕ ತ್ಯಜಿಸಿದ್ದಾರೆ. ಶ್ರೀ ಕೃಷ್ಣಅವರು 350 ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದರು. 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು ನಗರ ಟ್ರಾಫಿಕ್ ನಿರ್ವಹಣೆ ವೈಫಲ್ಯವನ್ನು ನಿವಾರಿಸಲು ರಾಜ್ಯ ಸರ್ಕಾರವು ಟ್ರಾಫಿಕ್ ನಿರ್ವಹಣೆಗಾಗಿ ನಗರ ಪೊಲೀಸ್ ವಿಭಾಗದಲ್ಲಿ ವಿಶೇಷ ಕಮಿಷನರ್ ಹುದ್ದೆ ಸೃಷ್ಟಿಸಿ ಮೊದಲ ಅಧಿಕಾರಿಯಾಗಿ ಎಡಿಜಿಪಿ ಎಂ.ಎ.ಸಲೀಂ ಅವರನ್ನು ನೇಮಕಗೊಳಿಸಿದೆ. ನಗರ ಪೊಲೀಸ್ ಕಮಿಷನರ್ ಅಧೀನದಲ್ಲಿ ಡಿಐಜಿ ದರ್ಜೆಯ ಐಪಿಎಸ್ ಅಧಿಕಾರಿ ಟ್ರಾಫಿಕ್ ವಿಭಾಗದ ಹೊಣೆ ಹೊತ್ತುಕೊಂಡಿದ್ದರು. ಈವರೆಗೆ ಈ ಹುದ್ದೆ ನಿರ್ವಹಿಸುತ್ತಿದ್ದ ಜಂಟಿ ಪೊಲೀಸ್ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಅವರನ್ನು ಇದೀಗ ಸಿಐಡಿಯ ಡಿಐಜಿ ಆಗಿ ವರ್ಗಾಯಿಸಲಾಗಿದೆ.ಟ್ರಾಫಿಕ್ ವಿಭಾಗದ ವಿಶೇಷ ಕಮಿಷನರ್ ಆಗಿರುವ ಎಂ.ಎ.ಸಲೀಂ ಅವರು ಈ ಹಿಂದೆ ಸಂಚಾರ ವಿಭಾಗದ ಜಂಟಿ ಕಮಿಷನರ್ ಆಗಿ ಕೆಲಸ ಮಾಡಿದ್ದರು. 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ: 11 ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಎಂ.ಅಬ್ದುಲ್‌ಸಲೀಂ (ವಿಶೇಷ ಕಮಿಷನರ್, ಸಂಚಾರ ವಿಭಾಗ, ಬೆಂಗಳೂರು ನಗರ), ಉಮೇಶ್‌ಕುಮಾರ್(ಹೆಚ್ಚುವರಿ ಪೊಲೀಸ್‌ಮಹಾನಿರ್ದೇಶಕ ಆಡಳಿತ ವಿಭಾಗ), ದೇವಜ್ಯೋತಿ ರೇ (ಐಜಿಪಿ, ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗ), ರಮಣ ಗುಪ್ತ (ಜಂಟಿ…
ಕಲಬುರಗಿ : ಒಂದೇ ವರ್ಷದಲ್ಲಿ 8000 ಶಾಲಾ ಕೊಠಡಿ ನಿರ್ಮಾಣ ಹಾಗೂ 4000 ಹೊಸ ಅಂಗನವಾಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಲಬುರಗಿ ತಾಲೂಕಿನ ಮಡಿಹಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿವೇಕ ಶಾಲಾ ಕೊಠಡಿಗಳ ಯೋಜನೆಯ ಶಂಕುಪನೆ ಸ್ಥಾಪನೆ ನೆರವೇರಿಸಿ ಮಾತನಾಡಿದರು.ಈ ವರ್ಷ ರಾಜ್ಯದಲ್ಲಿ 4,000 ಹೊಸ ಅಂಗನವಾಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ತಲಾ 15 ಲಕ್ಷ ರೂ.ನಂತೆ ಅನುದಾನ ನೀಡಲಾಗಿದ್ದು, ಈ ಯೋಜನೆಯಲ್ಲಿ 1500 ಅಂಗನವಾಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. ಒಟ್ಟು 8,000 ಸಾವಿರ ಶಾಲಾ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಾಣ ವಾಗಲಿದ್ದು, ಸುಮಾರು ಆರು ಸಾವಿರ ಕೊಠಡಿಗಳನ್ನು ಕರ್ನಾಟಕದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಕಾರ್ಯವನ್ನು ಮೂರು ವರ್ಷ ನಿರಂತರವಾಗಿ ಮಾಡಿದರೆ, ಕರ್ನಾಟಕದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಕೊಠಡಿಗಳ ಮೂಲಸೌಕರ್ಯದ ಕೊರತೆ ನೀಗಲಿದೆ. ಅದರ ಜೊತೆಗೆ ಮುಂದಿನ ಆಗಸ್ಟ್ 15 ರೊಳಗೆ…
ಸ್ಪೇನ್ : ಮೂರು ದಶಕಗಳಿಂದ ಯಾರೂ ವಾಸಿಸದ ಸ್ಪೇನ್ ದೇಶದ ಸಂಪೂರ್ಣ ಗ್ರಾಮವೊಂದನ್ನು 2 ಕೋಟಿ ರೂಪಾಯಿಗಳಿಗೆ ಮಾರಾಟಕ್ಕೆ ಇಡಲಾಗಿದೆ. ಪೋರ್ಚುಗಲ್ ನ ಗಡಿಯಲ್ಲಿರುವ ಸ್ಪೇನ್ ನ ಸಾಲ್ಟೊ ಡಿ ಕ್ಯಾಸ್ಟ್ರೊ ಎಂಬ ಹಳ್ಳಿಯು ಸುಮಾರು ರೂ. 2 ಕೋಟಿ 16 ಲಕ್ಷ ಮಾರಾಟಕ್ಕಿದೆ ಎಂದು ಸ್ಪಾನಿಷ್ ಪ್ರಾಪರ್ಟಿ ರಿಟೇಲ್ ವೆಬ್ ಸೈಟ್ ಐಡಿಯಲಿಸ್ಟಾದಲ್ಲಿ ಪಟ್ಟಿ ಮಾಡಲಾಗಿದೆ. 44 ಮನೆಗಳು, ಹೋಟೆಲ್, ಚರ್ಚ್, ಶಾಲೆ, ಪುರಸಭೆಯ ಈಜುಕೊಳ ಮತ್ತು ಬ್ಯಾರಕ್ ಗಳ ಕಟ್ಟಡವನ್ನು ಹೊಂದಿರುವ ಗ್ರಾಮವು ಪ್ರವಾಸಿ ತಾಣವಾಗಿ ಹೊರಹೊಮ್ಮುವ ನಿರೀಕ್ಷೆಯಿತ್ತು. ಆದರೆ ಯೂರೋಜೋನ್ ಬಿಕ್ಕಟ್ಟಿನಿಂದಾಗಿ ಇದು ಕಾರ್ಯರೂಪಕ್ಕೆ ಬರಲಿಲ್ಲ. ಮಾರಾಟಕ್ಕಿರುವ ಗ್ರಾಮವು ಮ್ಯಾಡ್ರಿಡ್ ನಿಂದ ಕೆಲವು ಗಂಟೆಗಳ ಪ್ರಯಾಣದ ದೂರದಲ್ಲಿದೆ. ರಿಟೇಲ್ ಆಸ್ತಿ ವೆಬ್‌ಸೈಟ್‌ನಲ್ಲಿ ಈಗ ಹೊಸದಾಗಿ ಹರಾಜು ಜಾಹೀರಾತು ಪ್ರಕಟಿಸಲಾಗಿದೆ. ಈಗ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ ಮತ್ತು ರಷ್ಯಾದ ಸುಮಾರು 300ಕ್ಕೂ ಹೂಡಿಕೆದಾರರು ಗ್ರಾಮದ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ವರದಿಗಳ ಪ್ರಕಾರ, 1950 ರ ದಶಕದಿಂದ ವಿದ್ಯುತ್ ಉತ್ಪಾದನಾ…
ಬೆಂಗಳೂರು: ಹಾಲು ಮತ್ತು ಮೊಸರಿನ ದರವನ್ನು 3ರೂಗೆ ಏರಿಕೆ ಮಾಡಿದ್ದ ಕೆಎಂಎಫ್ ನ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ಹಿಡಿದಿದ್ದಾರೆ. ಬೆಲೆ ಏರಿಕೆ ಬಗ್ಗೆ ನವೆಂಬರ್ 20ರಂದು ನಡೆಯುವ ಸಭೆ ಬಳಿಕ ನಿರ್ಧಾರ ಮಾಡಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ನಿನ್ನೆ ಕೆಎಂಎಫ್ ಹಾಲಿನ ಮತ್ತು ಮೊಸರಿನ ದರವನ್ನು 3 ರೂ. ಗೆ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಇದಾದ ಬಳಿಕ ಕಲಬುರಗಿಯ ಸೇಡಂನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಲಿನ ದರ ಏರಿಕೆ ಇಲ್ಲ, ನವೆಂಬರ್ 20ರ ನಂತರ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತುರುವೇಕೆರೆ: ಶಾಲಾ ಮಕ್ಕಳ ಶೌಚಾಲಯದ ಗುಂಡಿ ಕುಸಿದು ಬಿದ್ದು ವರ್ಷಗಳು ಕಳೆದರೂ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟವರು ಈ ಕಡೆಗೆ ಗಮನ ಹರಿಸದೇ ನಿರ್ಲಕ್ಷಿಸಿದ್ದು ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳು ಬಳಸುತ್ತಿರುವ ಶೌಚಾಲಯದ ಗುಂಡಿ ವರ್ಷಗಳ ಹಿಂದೆ ಕುಸಿದು ಬಿದ್ದಿದೆ. ಆದರೆ ಈವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ, ಪಟ್ಟಣ ಪಂಚಾಯತಿ ಅಧಿಕಾರಿಗಳಾಗಲಿ, ಶಾಲಾ ಶಿಕ್ಷಕ ಸಿಬ್ಬಂದಿಯಾಗಲಿ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೇ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಶಾಲೆಯ ಮುಂಭಾಗದಲ್ಲಿ ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ ಎಂಬ ಬರಹ ಕಾಣುತ್ತದೆ. ಆದರೆ, ದೇಗುಲದಂತೆ ಕಾಣಬೇಕಿದ್ದ ಶಾಲೆಯನ್ನು ಶಿಕ್ಷಕ ವರ್ಗ, ಸಿಬ್ಬಂದಿ ವರ್ಗ ಇಷ್ಟೊಂದು ನಿರ್ಲಕ್ಷಿಸಿದ್ದಾದರೂ ಯಾಕೆ ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ. ಶೌಚಾಲಯದ ಗುಂಡಿ ಕುಸಿದು ತೆರೆದುಕೊಂಡ ಸ್ಥಿತಿಯಲ್ಲಿದೆ. ಈ ಗುಂಡಿಗೆ ಯಾರಾದ್ರೂ ಮಕ್ಕಳು…
ಕಾರ್ತಿಕ ಸೋಮವಾರ ಹಿನ್ನಲೆ ಹುಟ್ಟೂರು ಹರದನಹಳ್ಳಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭೇಟಿ ನೀಡಿದ್ದಾರೆ. ಮನೆ ದೇವರಾದ ದೇವೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಮಹಾ ರುದ್ರಾಭಿಷೇಕ ಪೂಜೆಯಲ್ಲಿ ಗೌಡರ ಕುಟುಂಬ ಸದಸ್ಯರಾದ ಪತ್ನಿ ಚನ್ನಮ್ಮ, ಮಗ ಹೆಚ್.ಡಿ ರೇವಣ್ಣ, ಸೊಸೆ ಭವಾನಿ ರೇವಣ್ಣ ಭಾಗಿಯಾಗಿದ್ದರು. ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿರೋ ದೇವೇಶ್ವರ ದೇವಾಲಯಕ್ಕೆ ಕಳೆದ ಒಂದು ವರ್ಷದಿಂದ ಇದೇ ಮೊದಲ ಬಾರಿಗೆ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕಬ್ಬು ಬೆಳೆಗೆ ಬೆಲೆ ನಿಗದಿ ಪಡಿಸಲು ಆಗ್ರಹಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿಯಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ವಿಧಾನಸಭೆಯಲ್ಲೂ ಪ್ರಸ್ತಾಪ ಮಾಡಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಸಿದ್ದರಾಮಯ್ಯ ರೈತರಿಗೆ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಈ ಹಿಂದೆ ಹಲವು ಬಾರಿ ಕಬ್ಬು ಸೇರಿದಂತೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಹಾಗೂ ರೈತರ ನಾನಾ ಬೇಡಿಕೆ ಈಡೇರಿಸುವಂತೆ, ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಅನೇಕ ವಿವರಗಳನ್ನು ಆಗಾಗ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದರು. ಕಬ್ಬು ಮತ್ತೆ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರು ಕಳೆದ ಒಂದು ವಾರದಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಪ್ರತಿಭಟನಾನಿರತ ರೈತರ ಭೇಟಿ ವೇಳೆ ಮಾಜಿ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ, ಆತ್ಮಾನಂದ ಮತ್ತಿತರರು ಸಿದ್ದರಾಮಯ್ಯ…