Subscribe to Updates
Get the latest creative news from FooBar about art, design and business.
- ಪಾವಗಡ | ಮನೆಯ ಬೀಗ ಒಡೆದು, ನಗದು, ಚಿನ್ನಾಭರಣ ಕಳವು
- ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಅಪಹರಿಸಿದ್ದ ಆರೋಪಿಯ ಬಂಧನ
- ಕೂಲಿ ಕೊಡದೇ ಗಾರ್ಮೆಂಟ್ಸ್ ಮಾಲಿಕ ಪರಾರಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
- ಸರಗೂರು | ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ
- ಕಸಬಾ ವಿಎಸ್ ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ.ರಮೇಶ್ ಅವಿರೋಧ ಆಯ್ಕೆ
- ಕರ್ತವ್ಯ ಲೋಪ: ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ, ಕಾಡುಪ್ರಾಣಿಗಳ ಹಾವಳಿ ತಡೆಗೆ ಡಿಎಸ್ ಎಸ್ ಒತ್ತಾಯ
- ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ: ಶಾಸಕ ಅನಿಲ್ ಚಿಕ್ಕಮಾದು
- ವಿದ್ಯಾರ್ಥಿಗಳಿಗೆ ಶಿಕ್ಷಕರು ಹೃದಯವಂತಿಕೆಯಿಂದ ಶಿಕ್ಷಣ ನೀಡಬೇಕು: ಬಿ.ಅಬ್ದುಲ್ ರಹಮಾನ್
Author: admin
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ದೀಪಾವಳಿ ಉಡುಗೋರೆಯಾಗಿ ಆಯ್ದ ಪತ್ರಕರ್ತರಿಗೆ ಸಿಹಿ ತಿಂಡಿ ಜೊತೆಗೆ ಹಣವನ್ನು ಇಟ್ಟು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಟ್ವಿಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್,ಮುಖ್ಯಮಂತ್ರಿ ಕಚೇರಿ ನೀಡಿದ 2.5 ಲಕ್ಷ ರೂ. ಲಂಚವನ್ನು ವಾಪಸ್ ಮಾಡುವ ಮೂಲಕ ಪತ್ರಿಕಾಧರ್ಮವನ್ನು ಎತ್ತಿ ಹಿಡಿದಿದ್ದಾರೆ ಎಂಬುದು ತಿಳಿದುಬಂದಿದೆ. ಕರ್ನಾಟಕದ ಪತ್ರಕರ್ತರು ಪತ್ರಿಕಾಧರ್ಮದ ಪಾವಿತ್ರ್ಯತೆಗೆ ದಕ್ಕೆ ತರುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಪತ್ರಕರ್ತರಿಗೆ ಲಂಚ ನೀಡಿದ್ದೇಕೆ ಎಂಬುದನ್ನು ಮುಖ್ಯಮಂತ್ರಿ ಉತ್ತರಿಸಬೇಕು ಎಂದು ಒತ್ತಾಯಿಸಿದೆ. ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಿದ ವರದಿಯ ಬಗ್ಗೆ ತನಿಖೆಯಾಗಬೇಕು. ಆ ಹಣ ಯಾರದ್ದು.. ಸರ್ಕಾರದ್ದೇ…ಬಿಜೆಪಿ ಪಕ್ಷದ್ದೇ..ಮುಖ್ಯಮಂತ್ರಿಗಳದ್ದೇ..40% ಕಮಿಷನ್ ಆ ಹಣದ ಮೂಲವೇ.. ಪಡೆದ ಲಂಚವು ಕೊಡುವ ಲಂಚವಾಗಿ ಮಾರ್ಪಟ್ಟಿದೆಯೇ.. ಸಿಎಂ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಕಚೇರಿಯಲ್ಲಿ ನಡೆದದ್ದಕ್ಕೆ ನೀವೇ ಉತ್ತರದಾಯಿ, ತನಿಖೆಯಾಗಬೇಕಲ್ಲವೇ.. ಎಂದು ಟ್ವೀಟ್ ಮೂಲಕ ಕರ್ನಾಟಕ ಕಾಂಗ್ರೆಸ್ ಆಗ್ರಹಿಸಿದೆ. ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಹಬ್ಬದ…
ಬೆಂಗಳೂರು: ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಆದರೂ, ಇಂದಿಗೂ ನಮ್ಮ ನಡುವೆ ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ತಮ್ಮ ಸರಳತೆ ಮತ್ತು ಮಾನವೀಯ ಗುಣಗಳಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಅಪ್ಪು ಮನೆ ಮಾಡಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳು ರಾಜನನ್ನು ನೆನೆಯುತ್ತಿದ್ದಾರೆ. ಇಂದು ಕಂಠೀರವ ಸ್ಟುಡಿಯೋ ಬಳಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ರ ನೇತೃತ್ವದಲ್ಲಿ ಬಂದೋಬಸ್ತ್ ನೀಡಲಾಗಿದ್ದು. ನಿನ್ನೆ ರಾತ್ರಿಯಿಂದಲು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಂಠೀರವ ಸ್ಟುಡಿಯೋ ಮುಂಭಾಗದಿಂದಲು ಸಹ ಪೊಲೀಸರು ಸರ್ಪಗಾವಲಿನಲ್ಲಿದ್ದು, ಬ್ಯಾರಿಕೇಡ್ಗಳನ್ನು ಅಳವಡಿಸಿರುವ ಮುಖಾಂತರವಾಗಿ ಜನರು ಬರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು, ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವನ್ನು ಪೊಲೀಸರು ವಹಿಸಿದ್ದಾರೆ. ಇನ್ನು ಪುನೀತ್ ರನ್ನು ನೋಡಲು ಬರುವ ಅಭಿಮಾನಿಗಳಿಗೆ…
ಬಳ್ಳಾರಿ: ಹೆಂಡತಿ ಶೀಲ ಶಂಕಿಸಿ ಆಕೆಯನ್ನ ಬರ್ಬರವಾಗಿ ಹತ್ಯೆಗೈದು ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೇಖಾ (30) ಕೊಲೆಯಾದ ಮಹಿಳೆ. ಕುಮಾರಸ್ವಾಮಿ (35) ಆತ್ಮಹತ್ಯೆಗೆ ಶರಣಾದ ಪತಿ. 12 ವರ್ಷದ ಹಿಂದೆ ರೇಖಾಳನ್ನ ಮದುವೆಯಾಗಿದ್ದ ಕುಮಾರಸ್ವಾಮಿಗೆ 5 ಜನ ಮಕ್ಕಳಿದ್ದಾರೆ. ಹಾಗಿದ್ದರೂ ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡು ಕುಮಾರಸ್ವಾಮಿ, ಜಿಗೇನಹಳ್ಳಿ ಗ್ರಾಮದ ಜಮೀನಿಗೆ ಪತ್ನಿಯನ್ನು ಕರೆದುಕೊಂಡು ಹೋಗಿ ಕುಡುಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕೂಡ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚೋರನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಯೋಧನ ಪತ್ನಿ ಮತ್ತು ಚಿಕ್ಕಮ್ಮಗೆ ಕಣ್ಣಿಗೆ ಖಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳುಗಳು ಗೋಕಾಕ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಧ ಅಶೋಕ ಮೂಲಿಮನಿ ಗ್ವಾಲಿಯರ್ ನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮೇಶ್ವರ ಗ್ರಾಮದಲ್ಲಿ ಯೊಧನ ಮನೆ ಇದ್ದು, ಇದನ್ನು ಬಾಡಿಗೆಗೆ ಕೊಟ್ಟು ಪತ್ನಿ ಸಂಗೀತಾ ಮೂಲಿಮನಿ ಮತ್ತು ಅವರ ಚಿಕ್ಕಮ್ಮ ಮಲ್ಲವ್ವ ಯೋಧನೊಂದಿಗೆ ಗ್ವಾಲಿಯರ್ ನಲ್ಲಿ ವಾಸವಿದ್ದರು. ಮುಂದಿನ ವರ್ಷ ಅಶೋಕ ಮೂಲಿಮನಿ ಸ್ವಯಂ ನಿವೃತ್ತಿ ಹೊಂದಲಿದ್ದಾರೆ. ಈ ಸಂಬಂಧ ಗ್ರಾಮಕ್ಕೆ ನಾಲ್ಕು ದಿನಗಳ ಹಿಂದೆ ಸಂಗೀತಾ ಮತ್ತು ಮಲ್ಲವ್ವ ಮರಳಿದ್ದಾರೆ. ಬಾಡಿಗೆಗೆ ವಾಸವಿದ್ದವರಿಗೆ ಮನೆ ಬಿಡುವಂತೆ ಹೇಳಿದ್ದಾರೆ. ಇದಕ್ಕೆ ಸಂತೋಷ ಮಾಳಿ, ಈರಯ್ಯ ಮಠದ, ರೂಪಾ, ಸತ್ಯವ್ವಾ, ಭಾರತಿ ಮಾಳಿ ಎಂಬುವರು ಯೋಧನ ಪತ್ನಿ ಮತ್ತು ಚಿಕ್ಕಮ್ಮರಿಗೆ ಕಣ್ಣಿಗೆ ಖಾರದ ಪುಡಿ ಎರಚಿ, ಮನೆಯಲ್ಲಿಟ್ಟಿದ್ದ ಸಾಮಗ್ರಿಗಳನ್ನ ರಸ್ತೆಗೆ ಎಸೆದು…
ಕೊರಟಗೆರೆ: ತಾಲ್ಲೂಕು ಕಚೇರಿ ಹತ್ತಿರದ ಎಸ್ ಬಿಐ ಬ್ಯಾಂಕ್ ಪಕ್ಕದಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಅನಿಲ್ ಕುಮಾರ್ ನಿರ್ಮಿಸಿರುವ ನೂತನ ಕಟ್ಟಡವನ್ನು ಸಂಸದ ಜಿ.ಎಸ್ ಬಸವರಾಜು ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಿಜೆಪಿ ಪಕ್ಷದ ಕಾರ್ಯಕರ್ತರು ಕ್ಷೇತ್ರ ಅಭಿವೃದ್ಧಿಗೆ ಸಂಬಂಧಪಟ್ಟಂತಹ ವಿಷಯವನ್ನು ಚರ್ಚಿಸಲು ಸೂಕ್ತ ಕಟ್ಟಡವಿರಲಿಲ್ಲ, ನಿಜಕ್ಕೂ ಇಂದು ಸುದಿನ ಎಂದೇ ಹೇಳಬಹುದ. ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ ಅನಿಲ್ ಕುಮಾರ್ ಮತ್ತು ಕಾರ್ಯಕರ್ತರು ಸೇರಿ ನೂತನ ಕಟ್ಟದ ನಿರ್ಮಿಸಿರುವುದು ನಿಜಕ್ಕೂ ಸಂತಸದ ವಿಷಯ ಎಲ್ಲರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಅನಿಲ್‌ಕುಮಾರ್ ಮಾತನಾಡಿ, ಕೊರಟಗೆರೆ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಸರ್ಕಾರದ ಪ್ರತಿಯೊಂದು ಸೌಲಭ್ಯವು ಜನರಿಗೆ ನೇರವಾಗಿ ಸಿಗುವಂತೆ ಮಾಡುವ ದೃಷ್ಟಿಯಿಂದ ಪಕ್ಷದ ಕಾರ್ಯಕರ್ತರೊಂದಿಗೆ ನೂತನ ಕಟ್ಟಡವನ್ನ ನಿರ್ಮಿಸಿದೆ ಎಂದು ಹೇಳಿದರು. ಈ ವೇಳೆ ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಪವನ್…
ಚಿತ್ರದುರ್ಗ: ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣಾರ್ಥ ಅಂಗವಾಗಿ ಅಕ್ಟೋಬರ್ 29 ರಿಂದ ನಾಲ್ಕು ದಿನಗಳವರೆಗೆ ಜೆಜೆ ಹಟ್ಟಿ ಬಳಗದ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಈ ತಂಡದಲ್ಲಿ ಸುಮಾರು 20 ತಂಡಗಳು ಭಾಗವಹಿಸಲಿದ್ದು, ಎಲ್ಲ ತಂಡದ ಆಟಗಾರರಿಗೆ ಪುನೀತ್ ರಾಜಕುಮಾರ್ ಭಾವಚಿತ್ರ ಇರುವ ಟೀ ಶರ್ಟ್ ಅನ್ನು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿ.ಎಸ್.ಅನಿತ್ ಕುಮಾರ್ ಹಾಗೂ ನಗರಸಭೆ ಸದಸ್ಯರಾದ ಸೈಯದ್ ನಸ್ರುಲ್ಲಾ ಹಾಗೂ ಜೈಲುದ್ದೀನ್ ತಂಡದ ಆಟಗಾರರಾದ ಸ್ವಾಮಿ, ರಂಗಸ್ವಾಮಿ, ಮಲ್ಲಿಕಾರ್ಜುನ್, ರೋಹಿತ್ ಶಶಿ, ಸುಪ್ರೀತ್ ನೆಲ್ಸನ್ ಮಂಡೇಲಾ, ಹೊಯ್ಸಳ ಮತ್ತು ಎಲ್ಲ ತಂಡದ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ: ಮುರುಳಿಧರನ್ ಆರ್., ಚಿತ್ರದುರ್ಗ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಹಿರಿಯೂರು: ಪುನೀತ್ ರಾಜ್ ಕುಮಾರ್ ಅವರ ಸಾಕ್ಷ್ಯ ಚಿತ್ರ ಗಂಧದ ಗುಡಿ ಚಿತ್ರ ನಂಜುಡೇಶ್ವರ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ. ಆದರೆ ಕಾಂತಾರ ಚಿತ್ರ ಕೂಡ ಇದೇ ಸಂದರ್ಭದಲ್ಲಿ ಇದೇ ಟಾಕಿಸ್ ನಲ್ಲಿ ಪ್ರದರ್ಶನವಾಗುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ದಿನದಲ್ಲಿ ಒಟ್ಟು ನಾಲ್ಕು ಶೋಗಳು ಪ್ರದರ್ಶನವಾಗುತ್ತಿವೆ. ಈ ಪೈಕಿ ಎರಡು ಶೋ ಕಾಂತಾರ ಚಿತ್ರ ಪ್ರದರ್ಶನಗೊಳ್ಳಲಿದ್ದು, 2 ಶೋ ಗಂಧದ ಗುಡಿ ಚಿತ್ರ ಪ್ರದರ್ಶನಗೊಳಿಸಲು ಟಾಕಿಸ್ ಮಾಲಕರು ನಿರ್ಧರಿಸಿದ್ದಾರೆ. ಆದರೆ, ಇದರ ವಿರುದ್ಧ ಜಯ ಕರ್ನಾಟಕ ರಕ್ಷಣಾ ಸೇನೆ, ಹಾಗೂ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಥಿಯೇಟರ್ ಮಾಲೀಕರ ಒಂದು ಕುತಂತ್ರದಿಂದ ಅಪ್ಪು ಕೊನೆಯ ಚಿತ್ರಕ್ಕೆ ಸಮಸ್ಯೆಯಾಗಿದೆ. ನಂಜುಂಡೇಶ್ವರ ಚಿತ್ರಮಂದಿರದಲ್ಲಿ ಕಾಂತಾರ ಚಲನ ಚಿತ್ರವು ಈಗ ನಡೆಯುತ್ತಿದ್ದು ಎರಡು ಶೋ ಕಾಂತಾರ ಹಾಗೂ ಎರಡು ಶೋ ಗಂಧದ ಗುಡಿ ಸಿನಿಮಾ ನಡೆಸುವುದಾಗಿ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಬೇರೆ ಯಾವುದಾದರೂ ಚಿತ್ರಮಂದಿರಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಚಲನಚಿತ್ರ ಕೊಟ್ಟು…
ರಾಜ್ಯದಲ್ಲಿ ಸರ್ಕಾರವೇ ಇಲ್ಲ. 34 ಸಚಿವರಲ್ಲಿ 26 ಸಚಿವರಿದ್ದಾರೆ. ಬೊಮ್ಮಾಯಿಯವರೇ 8 ಖಾತೆಗಳನ್ನು ಇಟ್ಟುಕೊಂಡಿದ್ದು, ಯಾವುದಕ್ಕೂ ಸರಿಯಾಗಿ ನ್ಯಾಯ ಒಗದಿಸುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು. ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ಸಚಿವಾಲಯಗಳು ಖಾಲಿ ಇವೆ. ಬೊಮ್ಮಾಯಿ ಸಿಎಂ ಆದ ಮೇಲೆ 12 ಖಾತೆಗಳು ಅವರ ಬಳಿಯೇ ಇವೆ. 37 ಇಲಾಖೆಗಳನ್ನು ಸಿಎಂ ಸೇರಿ 5 ಮಂದಿ ಸಚಿವರು ಮಾತ್ರ ನಿರ್ವಹಿಸುತ್ತಿದ್ದಾರೆ. ಯಾವ ಇಲಾಖೆಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದು ಕರ್ನಾಟಕದ ದುರಂತ ಎಂದು ಕಿಡಿ ಕಾರಿದರು. ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಬೆಂಗಳೂರಿನಲ್ಲಿ 2ಸಾವಿರ ಕಿ.ಮೀ ರಸ್ತೆಯಿದೆ. ಇದರಲ್ಲಿ ೩೩ ಸಾವಿರ ಗುಂಡಿಗಳಿವೆ, ೧೦ ಸಾವಿರ ಮುಚ್ಚಿದ್ದೇವೆ. ಇದಕ್ಕೆ ೮೦೦ ಕೋಟಿ ಖರ್ಚಾಗಿದೆ ಎಂದು ತಿಳಿಸಿದೆ. ಹೊಸ ರಸ್ತೆ ನಿರ್ಮಿಸಲು ೧.೨ ಕೋಟಿ ವೆಚ್ಚವಾದರೆ ಗುಂಡಿ ಮುಚ್ಚಲು ೧.೫ ಕೋಟಿ ಖರ್ಚು ಮಾಡಿದ್ದಾರೆ. ಮೈಸೂರಿನಲ್ಲಿ ೧೪೦೦ ಕಿ.ಮೀ ರಸ್ತೆಯಿದ್ದು, ೫೦೦೦ ಸಾವಿರ ಗುಂಡಿಗಳಿವೆ. ೧೫೦…
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ ಕೆ ವಿ ರಾಜೆಂದ್ರ ಅಧಿಕಾರ ಸ್ವೀಕರಿಸಿದರು.ಡಾ ಬಗಾದಿ ಗೌತಮ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಅವರನ್ನು ವರ್ಗಾವಣೆ ಮಾಡಿತ್ತು. ಇಂದು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಜೇಂದ್ರ ಅವರನ್ನು ನಿರ್ಗಮಿತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ವಾಗತಿಸಿದರು. ಬಳಿಕ ಹೂಗುಚ್ಛ ನೀಡಿ ಅಧಿಕಾರ ಹಸ್ತಾಂತರಿಸಿದರು. ನೂತನ ಜಿಲ್ಲಾಧಿಕಾರಿಯಾಗಿ ಕಡತಗಳಿಗೆ ಸಹಿ ಹಾಕಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಕೆ.ವಿ ರಾಜೇಂದ್ರ, ಸರ್ಕಾರ ನನ್ನ ಸಾಮರ್ಥ್ಯ ನೋಡಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಎಂದರೆ ಸಾರ್ವಜನಿಕರಿಗೆ ಸದಾ ತೆರೆದಿರಬೇಕು. ಅಂತಹ ಆಡಳಿತ ನೀಡಲು ಇಷ್ಟಪಡುತ್ತೇನೆ. ಸರ್ಕಾರದ ಯೋಜನೆಗಳಿಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯದೇ, ತಾಲೂಕು ಮಟ್ಟದಲ್ಲೇ ಸಮಸ್ಯೆ ಬಗೆಹರಿಸುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಈ ವೇಳೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಮುಡಾ ಆಯುಕ್ತ ದಿನೇಶ್ ಕುಮಾರ್…
ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿರುವ ಎಸ್‌ಬಿ ಆರ್ ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಎಚ್.ಆರ್. ತಿಮ್ಮೇಗೌಡ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ (ಜಾನಪದ ಲೋಕ) ಮೈಸೂರು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಮೂರು ದಶಕಗಳಿಂದ ಮಹಾಜನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸಂಘಟಕರಾಗಿ, ಮೈಸೂರು ವಿಶ್ವ ವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ‘ಒಳದನಿ’, ಕೊಳಲದನಿ’, `ಸಂವೇದನೆ , `ಭಾರತೀಯ ಕಾವ್ಯಮೀಮಾಂಸೆ-ಸಮೀಕ್ಷೆ ಒಂದು ಅವಲೋಕನ, `ಸಂಕ್ಷಿಪ್ತ ಶಬ್ದಮಣಿದರ್ಪಣ’, `ಕನ್ನಡ ಸಾಹಿತ್ಯದಲ್ಲಿ ಪ್ರಗತಿಶೀಲರ ಸಣ್ಣಕತೆಗಳು ಹಾಗೂ ಇನ್ನಿತರ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದಾರೆ. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ’, ‘ಉತ್ತಮ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ, ‘ಪರಿಸರಮಿತ್ರ ಪ್ರಶಸ್ತಿ’ ಮತ್ತು ‘ಆದರ್ಶ ಗುರು ಪ್ರಶಸ್ತಿ’ಗಳು ಲಭಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy